Author: roovari

ಭಾರತೀಯ ಕಲೆಗಳೆಲ್ಲಾ ನಮ್ಮ ಶ್ರೇಷ್ಠ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ, ಪ್ರಸಾರ ಮಾಡುತ್ತವೆ. ಶ್ರೇಷ್ಠ ಸಂದೇಶಗಳನ್ನೂ ನೀಡುತ್ತವೆ. ಧರ್ಮಪ್ರಸಾರವನ್ನು ಮಾಡುವುದಕ್ಕೆ ಮಾಧ್ಯಮವಾಗಿವೆ. ಆದುದರಿಂದಲೇ ಅವುಗಳೆಲ್ಲಾ ನಮ್ಮ ಹೆಮ್ಮೆಯ ಸಂಕೇತ ಎಂದು ಅಭಿಮಾನದಿಂದ ಹೇಳುತ್ತೇವೆ. ಯಕ್ಷಗಾನವಂತೂ ಗಂಡುಕಲೆಯೆಂದೇ ಪ್ರಸಿದ್ಧವಾಗಿದೆ. ವೃತ್ತಿ ಕಲಾವಿದರು, ಹವ್ಯಾಸೀ ಕಲಾವಿದರ ಜೊತೆಯಲ್ಲಿ ಶಾಲಾ ವಿದ್ಯಾರ್ಥಿಗಳೂ ರಂಗವೇರಿ ಮಿಂಚುತ್ತಿದ್ದಾರೆ. ಇಂದು ಯುವ ಸಮೂಹ ಯಕ್ಷಗಾನ ಕಲಿತು ಹಿಮ್ಮೇಳ, ಮುಮ್ಮೇಳದ ಕಲಾವಿದರಾಗಿ ರಂಗವೇರುತ್ತಿದ್ದಾರೆ. ಇದು ಸಂತೋಷ ಪಡಬೇಕಾದ ವಿಚಾರ. ಹೀಗೆ ಇಂದು ಕಲಾಸೇವೆಯನ್ನು ಮಾಡುತ್ತಿರುವ ಅನೇಕ ಯುವ ಕಲಾವಿದರ ಸಾಲಿನಲ್ಲಿ ಕಲಾಸೇವೆಯನ್ನು ಮಾಡುತ್ತಿರುವ ಕಲಾವಿದರಲ್ಲಿ ಒಬ್ಬರು ಟಿ.ಎಸ್.ಶ್ರೀವತ್ಸ ಭಟ್. 13.05.2000ರಂದು ಟಿ.ಕೆ.ಶ್ರೀನಿವಾಸ್ ಹಾಗೂ ಟಿ.ಎಸ್ ಸರಳ ಇವರ ಮಗನಾಗಿ ಜನನ. ಬಿ.ಕಾಮ್ ಪದವಿಯನ್ನು ಪಡೆದು ಪ್ರಸ್ತುತ ಬೆಂಗಳೂರಿನಲ್ಲಿ ಉದ್ಯೋಗ ಜೊತೆಗೆ MBA ವ್ಯಾಸಂಗ ಮಾಡುತ್ತಿದ್ದಾರೆ. ಊರಲ್ಲಿ ಆಗ್ತಾ ಇದ್ದಂತಹ ಯಕ್ಷಗಾನಗಳನ್ನು ನೋಡಿ ಹಾಗೂ ತಂದೆಯ ಪ್ರೋತ್ಸಾಹ ಹಾಗೂ ಪ್ರೇರಣೆಯಿಂದ ಯಕ್ಷಗಾನ ಕಲಿಯಲು ಪ್ರೇರಣೆಯಾಯಿತು ಎಂದು ಹೇಳುತ್ತಾರೆ ಶ್ರೀವತ್ಸ. ತೆಂಕುತಿಟ್ಟು ಯಕ್ಷಗಾನವನ್ನು ಟಿ.ಎನ್ ಜ್ಯೋತಿ‌ ಹಾಗೂ…

Read More

ಬಂಟ್ವಾಳ : ಬಿ.ವಿ. ಕಾರಂತ ರಂಗಭೂಮಿಕಾ ಟ್ರಸ್ಟ್ (ರಿ.) ಮಂಚಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಯೋಗದಲ್ಲಿ ಬಿ.ವಿ. ಕಾರಂತ ನೆನಪಿನ ‘ಮಂಚಿ ನಾಟಕೋತ್ಸವ’ ರಂಗ ಭೂಮಿಕಾ -2023 ದಿನಾಂಕ 20-05-2023ರಿಂದ 22-05-2023ರವರೆಗೆ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರ, ಕುಕ್ಕಾಜೆ ಇಲ್ಲಿ ನಡೆಯಲಿದೆ. 20-05-2023 ಶನಿವಾರ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಬ್ಯಾಂಕ್ ನ ನಿವೃತ್ತ ಎ.ಜಿ.ಎಂ. ಶ್ರೀ ಶ್ರೀನಿವಾಸ ದೇಶಪಾಂಡೆ ಮಾಡಲಿದ್ದು, ಅರೆಹೊಳೆ ಪ್ರತಿಷ್ಠಾನದ ರಂಗ ಸಂಘಟಕರಾದ ಶ್ರೀ ಅರೆಹೊಳೆ ಸದಾಶಿವ ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಶ್ರೀ ರಾಜೇಶ್ ಮತ್ತು ಲಯನ್ಸ್ ಜಿಲ್ಲಾ ಸಂಯೋಜಕರು ಲ| ಶ್ರೀ ಮನೋರಂಜನ್ ಕರೈರವರು ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ‘ಕಲಾಭಿ ಥಿಯೇಟರ್’ ಮಂಗಳೂರು ಪ್ರಸ್ತುತಪಡಿಸುವ ‘ಮೋಗ್ಲಿ’ ಕನ್ನಡ ನಾಟಕ ಪ್ರದರ್ಶನಗೊಳ್ಳಲಿದೆ. ರುಡ್ಯಾರ್ಡ್ ಕಿಪ್ಲಿಂಗ್ ಮೂಲ ಕೃತಿ ಆಧಾರಿತ ಈ ನಾಟಕದ ರಂಗರೂಪ ಮತ್ತು ನಿರ್ದೇಶನ ಭುವನ ಮಣಿಪಾಲ…

Read More

ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸರಕಾರಿ ಪ್ರ.ದ. ಕಾಲೇಜು ಕೊಡಿಯಾಲಬೈಲು ಸುಳ್ಯ, ಆಂತರಿಕ ಗುಣಮಟ್ಟ ಭರವಸ ಕೋಶ, ಸಂಕಲ್ಪ ಕನ್ನಡ ಸಂಘ ಕನ್ನಡ ವಿಭಾಗ ಇದರ ಸಹಯೋಗದಲ್ಲಿ ಸ. ಪ್ರಥಮ ದರ್ಜೆ ಕಾಲೇಜು ಸುಳ್ಯ ಇಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆ ಹಾಗೂ ಡಾ.ಪ್ರಭಾಕರ ಶಿಶಿಲರವರ ‘ಅಮರ ಸುಳ್ಯದ ಕ್ರಾಂತಿ 1837’ ನಾಟಕ ಕೃತಿಯನ್ನು ಮೇ.5 ರಂದು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜಿನ ಪ್ರಾಂಶುಪಾಲ ಸತೀಶ್ ಕುಮಾರ್ ಕೆ. ಆರ್. ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ಕ.ಸಾ.ಪ.ಅಧ್ಯಕ್ಷ ಚಂದ್ರಶೇಖರ ಪೇರಾಲು ವಹಿಸಿದ್ದರು. ‘ಕನ್ನಡದ ಅಸ್ಮಿತ-ಕನ್ನಡ ಸಾಹಿತ್ಯ ಪರಿಷತ್ತು’ ಈ ವಿಷಯದ ಬಗ್ಗೆ ಖ್ಯಾತ ಸಾಹಿತಿ ಡಾ. ಪ್ರಭಾಕರ ಶಿಶಿಲ ಉಪನ್ಯಾಸ ನೀಡಿದರು. “ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ ಕರ್ನಾಟಕ ಸಾಹಿತ್ಯ ಪರಿಷತ್, ಕನ್ನಡ ಸಾಹಿತ್ಯ ಪರಿಷತ್ ಆಗಿ ಬದಲಾವಣೆಯಾಯಿತು. ಜಾಗತೀಕರಣ ಮತ್ತು ಕೋಮುವಾದದಿಂದಾಗಿ ಕನ್ನಡದ ಅಸ್ಮಿತೆಗೆ ತೊಂದರೆಯುಂಟಾಗಿದೆ. ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳಲ್ಲಿ ಆಡಳಿತ ಸರಕಾರಕ್ಕೆ ನಿಷ್ಠೆ…

Read More

ಬೆಂಗಳೂರು: ಸ್ಪಷ್ಟ ಥಿಯೇಟರ್ ಪ್ರಸ್ತುತಪಡಿಸುವ ಗಿರೀಶ್ ಕಾರ್ನಾಡ್ ರವರ ‘ರಾಕ್ಷಸ ತಂಗಡಿ’ ನಾಟಕ ಪ್ರದರ್ಶನವು ನಿರ್ದೇಶಕ ಗಗನ್ ಪ್ರಸಾದ್ ರವರ ನಿರ್ದೇಶನದಲ್ಲಿ ದಿನಾಂಕ 13-05-2023 ರಂದು ಬೆಂಗಳೂರಿನ ಕಲಾಗ್ರಾಮದಲ್ಲಿ ಹಾಗೂ 17-06-2023 ರಂದು ರವೀಂದ್ರ ಕಲಾ ಕ್ಷೇತ್ರ ದಲ್ಲಿ ಪ್ರದರ್ಶನಗೊಳ್ಳಲಿದೆ ರಾಕ್ಷಸ ತಂಗಡಿ 1565 ರಲ್ಲಿ ಬಹಮನಿ ಸಾಮ್ರಾಜ್ಯದ ಡೆಕ್ಕನ್ ಸುಲ್ತಾನರು ಮತ್ತು ವಿಜಯನಗರ ಸಾಮ್ರಾಜ್ಯದ ನಡುವಿನ ‘ರಾಕ್ಷಸ ತಂಗಡಿ’ ಯುದ್ಧವನ್ನು ಸೆರೆಹಿಡಿಯುತ್ತದೆ. ಇದು ಭಾರತದ ರಾಜಕೀಯ ಮತ್ತು ಸಾಂಸ್ಕೃತಿಕ ನಕ್ಷೆಯ ಮೇಲೆ ಪ್ರಭಾವ ಬೀರಿತು. ಈಗಿನ ಬಿಜಾಪುರದಲ್ಲಿ ರಕ್ಕಸಗಿ ಮತ್ತು ತಂಗಡಗಿ ಎಂಬ ಎರಡು ಪ್ರದೇಶಗಳಲ್ಲಿ ಈ ಯುದ್ಧ ಪ್ರಾರಂಭವಾಯಿತು ಎಂದು ಇತಿಹಾಸ ಹೇಳುತ್ತದೆ. ಕೃಷ್ಣಾ ನದಿಯನ್ನು ಕೆಂಪು ಬಣ್ಣಕ್ಕೆ ತಿರುಗಿಸಿ ಹಂಪಿಯ ಸ್ಮಾರಕಗಳನ್ನು ಕೆಡವಿದ ನಂತರ ಈ ಯುದ್ಧವನ್ನು ಮರುಪರಿಶೀಲಿಸಿದಾಗ, ಕೈಗೊಂಬೆ ರಾಜ ಮತ್ತು ವಿಜಯನಗರದ ಶಾಸಕ ಅಳಿಯ ರಾಮರಾಯನ ಸಹೋದರರು ಅಸಹಾಯಕರಾಗಿ ಕಾಣುತ್ತಿದ್ದರೆ – ವಿಜಯನಗರವು ದ್ವಂಸಗೊಂಡಿದ್ದನ್ನು ನೋಡಬಹುದು ಮತ್ತು ಇದು ದೊರೆಗಳ ಗಗನಕ್ಕೇರುವ ಮಹತ್ವಾಕಾಂಕ್ಷೆಯ ನಡುವೆ;…

Read More

ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಸಂಯೋಜಿಸಿ ಪ್ರಕಟಿಸಿದ “ನೂರಾರು ಕತೆಗಳು” ಕಥಾ ಸಂಕಲನದ ಕುರಿತು ಕನ್ನಡದ ಪ್ರಸಿದ್ಧ ಸಾಹಿತಿ,ವಿಮರ್ಶಕರಾದ ಡಾ.ಪಾರ್ವತಿ ಜಿ.ಐತಾಳ್ ಬರೆದ ವಿಮರ್ಶೆ ಇಲ್ಲಿದೆ… ಕೃತಿಯ ಹೆಸರು : ನೂರಾರು ಕತೆಗಳು ಸಂಪಾದಕರು : ಮರವಂತೆ ನಾಗರಾಜ ಹೆಬ್ಬಾರ್, ಪೂರ್ಣಿಮಾ ಜನಾರ್ದನ್, ರಾಜೇಶ್ ಭಟ್ ಪಣಿಯಾಡಿ ಪ್: ಎಸ್.ಎಲ್.ಎನ್. ಪಬ್ಲಿಕೇಷನ್ಸ್ ಬೆಂಗಳೂರು ಪ್ರ.ವರ್ಷ : 2022 ಪುಟಗಳು : 260 ಬೆಲೆ : ರೂ. 270 ಉಡುಪಿಯ ಪ್ರತಿಷ್ಠಿತ ಸಾಂಸ್ಕ್ರತಿಕ ಸಂಘಟನೆ ಸಂಸ್ಕೃತಿ ವಿಶ್ವ ಪ್ರತಿಷ್ಠಾನವು ಪ್ರಕಟಿಸಿ, ಇತ್ತೀಚೆಗೆ ಓದುಗರ ಕೈಸೇರಿದ ೧೧೭ ಮಿನಿ ಕಥೆಗಳ ಸಂಕಲನ ‘ನೂರಾರು ಕತೆಗಳು’. ಕೊರೋನಾ ಮಹಾಮಾರಿಯು ಮನುಷ್ಯ ಮನಸ್ಸುಗಳಿಗೆ ಮಂಕು ಬಡಿಸಿ, ಸಾವಿನ ಅಟ್ಟಹಾಸವು ಮಿತಿ ಮೀರಿ ಮನುಷ್ಯರನ್ನು ಕಂಗೆಡಿಸಿದ ಕಾಲದಲ್ಲಿ ಸಂಘಟನೆಯ ರೂವಾರಿಗಳು ಹಾಕಿಕೊಂಡ ಯೋಜನೆ ಇದು. ಹೊರಗೆಲ್ಲೂ ಸ್ವಚ್ಛಂದವಾಗಿ ಹೋಗಲಾರದೆ ಮನೆಗಳೊಳಗೆ ಬಂಧಿತರಾದ ಮಂದಿ ಒಂದಷ್ಟು ಕ್ರಿಯಾಶೀಲರಾಗಿ ಓದು ಮತ್ತು ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸುವಂತಾಗಲಿ ಎಂಬ ಸದುದ್ದೇಶದಿಂದ ಹುಟ್ಟು ಹಾಕಿದ…

Read More

ಎಡನೀರು: ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ (ರಿ.) ಎಡನೀರು’ ಸಂಸ್ಥೆಯ ನೇತೃತ್ವದಲ್ಲಿ ಎಡನೀರಿನಲ್ಲಿ ಐದು ದಿನಗಳ ಕನ್ನಡ ಸಂಸ್ಕೃತಿ ಶಿಬಿರ ಯಶಸ್ವಿಯಾಗಿ ದಿನಾಂಕ 06-05-2023 ರಂದು ಸಮಾರೋಪ ಗೊಂಡಿತು. ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರ ಅಮೃತ ಹಸ್ತದಿಂದ ಶ್ರೀಮತಿ ಅನುಪಮಾ ರಾಘವೇಂದ್ರರ ‘ಗಾಲಿ ಕುರ್ಚಿಯಲಿ ಜೀವನ ಚಕ್ರ’ ಕೃತಿ ಬಿಡುಗಡೆಯೊಂದಿಗೆ ಸಮಾರೋಪ ಸಮಾರಂಭ ನಡೆಯಿತು. ಸಾಹಿತಿ ಶ್ರೀಮತಿ ರಾಜಶ್ರೀ ರೈ ಕೃತಿ ಪರಿಚಯ ಮಾಡಿ ರಾಘವೇಂದ್ರ ಭಟ್ ಉಡುಪುಮೂಲೆ ಕಾರ್ಯಕ್ರಮ ನಿರೂಪಿಸಿದರು.ಎಪ್ಪತ್ತೈದು ಮಕ್ಕಳು ಹಾಗೂ ಅವರ ಪೋಷಕರು ಉಪಸ್ಥಿತಿ ಯಲ್ಲಿ ನಡೆದ ಈ ಕಾರ್ಯಕ್ರಮವು ಶಿಬಿರಗೀತೆಯೊಂದಿಗೆ ಸಂಪನ್ನಗೊಂಡಿತು.

Read More

ಒಂದು ಹಗಲ ‘ಬೆಳೆಸಿರಿ’ : ಲಲಿತಕಲೆಗಳ ಸಂಗಮ ಆಡಳಿತ ರೀತಿ , ಶಿಕ್ಷಣ ನೀತಿ , ಹಾಗೂ ಮತೀಯ ಒತ್ತಡಗಳು ಭಾರತೀಯ ಕಲೆಗಳನ್ನು ಹ್ರಾಸಗೊಳಿಸುತ್ತ ಬಂದಿವೆ . ಕುಣಿಯುವ ಹಾಡುವ ಸ್ವಾತಂತ್ರ್ಯ ಲಕ್ಷಾಂತರ ವರ್ಷಗಳಿಂದ ಮನರಂಜನೆಯನ್ನೂ ಆರೋಗ್ಯವನ್ನೂ ಕೊಡುತ್ತ ಬಂದಿದ್ದು ಸಹಜವಾಗಿಯೇ ಅಳವಟ್ಟಿರುವಾಗ ಅದೆಲ್ಲ ಈಗ ಅಗತ್ಯ ಇಲ್ಲವೆಂಬ ವಾದವೂ ಹೆಚ್ಚಾಗುತ್ತಿದೆ . ಸಾಮಾಜಿಕ ಜಾಲ ತಾಣಗಳ ಮೂಲಕ ಅತ್ಯುತ್ತಮಗಳನ್ನು ಆಸ್ವಾದಿಸುವುದು ವೈಯಕ್ತಿಕ . ಹಾಗೇ ಸಾರ್ವಜನಿಕದಲ್ಲಿ ಈ ಕಲೆಗಳನ್ನು ಒಪ್ಪಿ ಸ್ವೀಕರಿಸಿ ದೈಹಿಕ ಮಾನಸಿಕ ಆರೋಗ್ಯ ಸಂಪಾದಿಸುವುದು ಸಾಧ್ಯವೆ ? ಎಂಬ ಚಿಂತನೆ ಮೊನ್ನೆ ಮೇ ತಿಂಗಳ ಏಳನೇ ತಾರೀಕಿನಂದು ನಡೆದದ್ದು ಬಾಯಿಕಟ್ಟೆಯ ಅಯ್ಯಪ್ಪ ಮಂದಿರದ ವಠಾರದಲ್ಲಿ . ಜಿಲ್ಲಾ ಕನ್ನಡ ಲೇಖಕರ ಸಂಘ ಕಾಸರಗೋಡು , ತಪಸ್ಯ ಕಲಾಸಾಹಿತ್ಯ ವೇದಿಕೆ ಹಾಗೂ ಬೆಂಗಳೂರಿನ ಶಂ ಪಾ ಪ್ರತಿಷ್ಠಾನಗಳು “ಬೆಳೆಸಿರಿ” ಅಂಕಿತದಲ್ಲಿ ಈ ಕಾರ್ಯಕ್ರಮವನ್ನು ದಿನಾಂಕ 7-05-2023 ರಂದು ನಿರ್ವಹಿಸಿದುವು . ಪ್ರತಿಭಾವಂತ ಮಕ್ಕಳು ಭಾಗವಹಿಸಿದರು . ಭರತನಾಟ್ಯ ,…

Read More

ಅದು ಇಂಜಿನಿಯರುಗಳು ಆಡಿದ ನಾಟಕ. ರಾಜ್ಯದ ವಿವಿಧೆಡೆಯಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿರುವ ಇಂಜಿನಿಯರುಗಳೇ ಪ್ರದರ್ಶಿಸಿದ ನಾಟಕವದು. ರಂಗಾಸಕ್ತರು ಕಲೆಯೊಂದಿಗೆ ಜೀವಿಸುವ ಆಶಯದೊಂದಿಗೆ 2018ರಲ್ಲಿ ಕಟ್ಟಿಕೊಂಡಿದ್ದೇ ‘ಕಲಾವಿಲಾಸಿ’ ತಂಡ. ಕನ್ನಡ ಕಲಾ ರಂಗದ ಶ್ರೀಮಂತಿಕೆಗೆ ಪೂರಕವಾಗುವಂತೆ ಕನ್ನಡತನವನ್ನು ಬಿಂಬಿಸುವ ಕೆಲಸ ಮಾಡುವ ಗುರಿ ಕಲಾವಿಲಾಸಿ ತಂಡದ್ದು. ಈಗಾಗಲೇ ‘ಮಾನಸಪುತ್ರ’ ಹಾಗೂ’ ಚಿಗರಿಗಂಗಳ ಚೆಲುವೆ’ ನಾಟಕಗಳನ್ನು ಯಶಸ್ವಿಯಾಗಿ ಪ್ರದರ್ಶಿಸಿರುವ ಈ ತಂಡದ ಹೊಸ ನಾಟಕ ಚಂಪಾ (ಚಂದ್ರಶೇಖರ ಪಾಟೀಲ) ಅವರ ಮೂರು ನಾಟಕಗಳನ್ನು ಸೇರಿಸಿ ‘ಅಸಂಗತಗಳು’ ಎಂಬ ಶೀರ್ಷಿಕೆಯೊಂದಿಗೆ ರಂಗಕ್ಕೆ ತಂದಿದ್ದು ಗಮನಾರ್ಹ. ಜೊತೆಗೆ ಚಂಪಾ ಅವರ ಅಸಂಗತ ನಾಟಕಗಳನ್ನು ಮತ್ತೆ ಪ್ರದರ್ಶಿಸಿದ್ದು ಅಭಿನಂದನೀಯ (ಈ ನಾಟಕ ಬೆಂಗಳೂರಿನ ಹನುಮಂತನಗರದ ಕೆ.ಎಚ್‌. ಕಲಾಸೌಧದಲ್ಲಿ ಎಪ್ರಿಲ್ 23ರಂದು ಪ್ರದರ್ಶನ ಕಂಡಿತು). 1967-680 ಚಂಪಾ ಅವರು ರಚಿಸಿದ ಈ ನಾಟಕಗಳ ಕುರಿತು ಅವರು ಹೇಳಿದ್ದು ಹೀಗೆ- “ಯಾವುದೋ ಒಂದು ಸಾಹಿತ್ಯದ ಪ್ರಕಾರ ಎಂದೂ ‘ಮುಗಿದುಹೋದ ಅಧ್ಯಾಯ’ ಆಗುವುದಿಲ್ಲ. ನವೋದಯ, ನವ್ಯ, ಪ್ರಗತಿಶೀಲ, ಅಸಂಗತ, ಬಂಡಾಯ ಇವುಗಳೆಲ್ಲವೂ ಮತ್ತೆ…

Read More

ತುಮಕೂರು : ತುಮಕೂರು ತಾಲ್ಲೂಕಿನ ಮೆಳೇಹಳ್ಳಿಯ ಡಮರುಗ ರಂಗ ಸಂಪನ್ಮೂಲ ಕೇಂದ್ರವು ಆಯೋಜಿಸಿದ್ದ 18ನೇ ವರ್ಷದ ಚಿಣ್ಣರ ಬಣ್ಣದ ಶಿಬಿರದ ಸಮಾರೋಪ ಸಮಾರಂಭವು ದಿನಾಂಕ 06-05-2023ನೇ ಶನಿವಾರ ವಿ. ರಾಮಮೂರ್ತಿ ರಂಗಸ್ಥಳದಲ್ಲಿ ನೆರವೇರಿತು. ಅತಿಥಿಯಾಗಿ ಭಾಗವಹಿಸಿದ ಜಿ.ಎಂ.ಹೆಚ್.ಪಿ.ಎಸ್. ಕೋರಾ ಇದರ ಮುಖ್ಯ ಶಿಕ್ಷಕರಾದ ಶ್ರೀ ಮಧುಸೂಧನ್ ರಾವ್ ಮಾತನಾಡುತ್ತಾ “ಶಾಲೆಯಲ್ಲಿ ಒಂದು ವರ್ಷ ಪೂರ್ತಿ ಮಾಡಲಾಗದ ಕಾರ್ಯವನ್ನು ಒಂದು ತಿಂಗಳ ಶಿಬಿರ ಮಾಡಿ ಬಿಡುತ್ತದೆ. ಇದು ಉತ್ಪ್ರೇಕ್ಷೆಯಲ್ಲ. ನನ್ನ ಶಾಲೆಯ ಮಕ್ಕಳು ಶಿಬಿರದಲ್ಲಿದ್ದಾರೆ ಅವರ ಬದಲಾವಣೆಯನ್ನು ಕಂಡು ನಾನು ಹೇಳುತ್ತಿದ್ದೇನೆ. ಮಕ್ಕಳು ಬಹುಮುಖಿಯಾಗಿ ವಿಕಾಸಗೊಳ್ಳಲು ಇಂತಹ ಶಿಬಿರಗಳು ಬೇಕು” ಎಂದು ಅಭಿಪ್ರಾಯಪಟ್ಟರು. ಸಮಾರಂಭದಲ್ಲಿ ಸಾಹಿತಿಗಳಾದ ಪ್ರಕಾಶ್ ನಾಡಿಗ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧಕ್ಷರಾದ ಸಿದ್ದರಾಮಯ್ಯ, ನಿವೃತ್ತ ಪ್ರಾಂಶುಪಾಲರಾದ ಕುಮಾರಸ್ವಾಮಿ ಹಾಗೂ ತುಮಕೂರಿನ ಉಪನಿರ್ದೇಶಕ ಕಚೇರಿಯ ಡಿ.ವೈ.ಎಸ್.ಪಿ. ರಂಗಧಾಮಯ್ಯ ಉಪಸ್ಥಿತರಿದ್ದರು. ನಂತರ ಸುಮಾರು ಐವತ್ತು ಮಕ್ಕಳು ಮೆಳೇಹಳ್ಳಿ ದೇವರಾಜ್ ನಿರ್ದೇಶನದಲ್ಲಿ ಕುವೆಂಪುರವರ ‘ನನ್ನ ಗೋಪಾಲ’ ನಾಟಕ ಪ್ರಯೋಗಿಸಿದರು. ಕಾಡಿನ ಸೌಂದರ್ಯ, ಪ್ರಾಣಿ-ಪಕ್ಷಿಗಳ…

Read More

ಬೆಂಗಳೂರು: ಸ್ಪಿನಿಂಗ್ ಟ್ರೀ ಥಿಯೇಟರ್ ಕಂಪನಿ ಪ್ರಸ್ತುತ ಪಡಿಸುವ ಶಕೀಲ್ ಅಹ್ಮದ ನಿರ್ದೇಶನದ ‘ಅನಾಮಿಕನ ಸಾವು’ ನಾಟಕದ ಪ್ರದರ್ಶನವು ಇದೇ ಬರುವ ದಿನಾಂಕ 11-05-2023ರಂದು ಬೆಂಗಳೂರು ಇಂಟರ್ನ್ಯಾಷನಲ್ ಸೆಂಟರ್ ನಲ್ಲಿ ನಡೆಯಲಿದೆ. ನಾಟಕದ ಆಶಯ ಒಂದು ಕಾಗದ, ಒಂದು ಗುರುತಿನ ಚೀಟಿ, ನಮ್ಮ ಇರುವಿಕೆಯನ್ನೇ ನಿರ್ಧರಿಸುವಂತಾದರೆ? ನಮ್ಮ ಅಸ್ತಿತ್ವವನ್ನೇ ಅಲುಗಾಡಿಸುವಂತಾದರೆ? ಹಾಗಾಗಿದ್ದಲ್ಲಿ, ನಾವು ಹುಟ್ಟಿದ್ದು-ಬೆಳೆದದ್ದು-ಬದುಕಿದ್ದು ಸುಳ್ಳೆ? ನಮ್ಮ ನರಗಳಲ್ಲಿ ಹರಿಯುವ ರಕ್ತ ಸುಳ್ಳೆ? ನಮ್ಮ ಸಾಕಿಸಲುಹಿದ ಈ ನೆಲ ಸುಳ್ಳೆ? ಹೀಗೆಯೇ, ಹುಟ್ಟಿದ ನೆಲದಿಂದಲೇ ನೆಲೆ ಕಳೆದುಕೊಳ್ಳಬೇಕಾಗಿ ಬಂದಾಗ, ತನ್ನ ಅಸ್ತಿತ್ವಕ್ಕಾಗಿ ಒದ್ದಾಡುವವನ ಕಥೆ ಇದು. ತಮ್ಮ ಹೆಸರು ಮತ್ತು ಬದುಕೆಂಬ ಎರಡು ದಂಡೆಯ ನಡುವಿರುವ ಅಸ್ತಿತ್ವವೆಂಬ ತೂಗುಯ್ಯಾಲೆಯಲ್ಲಿ ತಮ್ಮನ್ನು ತಾವು ಹುಡುಕುತ್ತಿರುವವರ, ನೆಲೆ ಕಾಣಬಯಸುವವರ ಕಥೆ ಅಥೊಲ್ ಫುಗಾರ್ಡ ದಕ್ಷಿಣ ಆಫ್ರಿಕಾದ ನಟ ಮತ್ತು ನಿರ್ದೇಶಕರಾದ ಅಥೊಲ್ ಫುಗಾರ್ಡ ಅವರು ತಮ್ಮದೇ ಆದ ವಿಶಿಷ್ಟ ನಾಟಕೀಯ ಅಭಿವ್ಯಕ್ತಿಯಿಂದಾಗಿ ಪ್ರಪಂಚದಾದ್ಯಂತ ಹೆಸರುವಾಸಿಯಾದ ನಾಟಕಕಾರರೂ ಹೌದು. ರಂಗಭೂಮಿಯನ್ನು ಪ್ರತಿರೋಧದ ಮಾಧ್ಯಮವಾಗಿ ಬಳಸಿಕೊಂಡ ಫುಗಾರ್ಡ…

Read More