Subscribe to Updates
Get the latest creative news from FooBar about art, design and business.
Author: roovari
ಕಾಸರಗೋಡು : ಬೆಂಗಳೂರಿನ ಶಂಪಾ ಪ್ರತಿಷ್ಠಾನ (ರಿ.) ಇದರ ವತಿಯಿಂದ ಪ್ರೊ. ಪಿ.ಎನ್. ಮೂಡಿತ್ತಾಯ ಇವರನ್ನು ಕುರಿತು ಡಾ. ಪ್ರಮೀಳಾ ಮಾಧವ್ ರಚಿಸಿದ ‘ಸದ್ದಿಲ್ಲದ ಸಾಧಕ’ ಕೃತಿ ಸಮರ್ಪಣೆ ಮತ್ತು ಅಭಿನಂದನಾ ಸಮಾರಂಭವು ದಿನಾಂಕ 26-01-2024ರಂದು ಬೆಳಿಗ್ಗೆ 10 ಗಂಟೆಗೆ ಬಾಯಿಕಟ್ಟೆ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ನಡೆಯಲಿದೆ. ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಪಿ. ಶ್ರೀಕೃಷ್ಣ ಭಟ್ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದು, ಕ.ಸಾ.ಪ. ಕಾಸರಗೋಡು ಗಡಿನಾಡ ಘಟಕದ ಅಧ್ಯಕ್ಷರಾದ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಾಧ್ಯಾಪಕರಾದ ಡಾ. ಟಿ.ಎ.ಎನ್. ಖಂಡಿಗೆ ಕೃತಿ ಲೋಕಾರ್ಪಣೆ ಮಾಡಿ ಕೃತಿಯ ಕುರಿತು ಮಾತನಾಡಲಿದ್ದಾರೆ. ಪ್ರೊ. ಮೂಡಿತ್ತಾಯರ ಸಾಹಿತ್ಯ ಕೃತಿಗಳಲ್ಲಿ ಹಾಸ್ಯ ಸಾಹಿತ್ಯದ ಕುರಿತು ಕಲಾವಿದರಾದ ಶ್ರೀ ಬಾಲ ಮಧುರಕಾನನ, ಅನುವಾದದ ಬಗ್ಗೆ ಪ್ರಾಧ್ಯಾಪಕರಾದ ಡಾ. ಸವಿತಾ ಬೇವಿಂಜೆ, ಕಾವ್ಯದ ಬಗ್ಗೆ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಮೀನಾಕ್ಷಿ ರಾಮಚಂದ್ರ, ಸಂಶೋಧನೆ ಕುರಿತು ಶಿಕ್ಷಕರಾದ ಡಾ. ಸುಭಾಷ್ ಪಟ್ಟಾಜೆ ಮತ್ತು ಮಲಯಾಳ ಕೃತಿಗಳ…
ಬೊಳ್ಳಜಿರ ಬಿ. ಅಯ್ಯಪ್ಪ ಇವರು ಹುದಿಕೇರಿಯ ಬೊಳ್ಳಜಿರ ಬೋಪಯ್ಯ ಯಶೋದಾ ದಂಪತಿಗಳ ಪುತ್ರ. ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಬಿ.ಕಾಂ. ಪದವಿ ಪಡೆದಿದ್ದಾರೆ. ಇದೀಗ ಅದೇ ಕಾಲೇಜಿನಲ್ಲಿ ಕೊಡವ ಎಂ.ಎ. ವ್ಯಾಸಂಗ ಮಾಡುತ್ತಿದ್ದಾರೆ. ವೃತ್ತಿಯಿಂದ ಪತ್ರಕರ್ತರಾಗಿರುವ ಇವರು ಪ್ರವೃತ್ತಿಯಿಂದ ಓದು ಮತ್ತು ಬರಹದ ಜೊತೆಗೆ ಸಾಹಿತ್ಯದ ಸೇವೆ ಮತ್ತು ಸಮಾಜ ಸೇವೆಯನ್ನು ಹವ್ಯಾಸವನ್ನಾಗಿಸಿಕೊಂಡಿದ್ದಾರೆ. ಇವರ ಸಂಪಾದಕೀಯದಲ್ಲಿ ‘ಚಂಗೀರ’ (ಸಂಶೋಧನಾ ಕೃತಿ), ‘ಒತ್ತಜೋಡಿ’ (ಅಭಿನಂದನಾ ಗ್ರಂಥ) ಹಾಗೂ ಆಟ್‌ಪಾಟ್ ಪಡಿಪು (ಮಕ್ಕಳ ಕಲಿಕೆಗೆ ಒತ್ತುಕೊಡುವ ವಿಷಯಗಳ ಸಂಗ್ರಹ ಪುಸ್ತಕ) ಎಂಬ ಒಟ್ಟು ಮೂರು ಕೃತಿಗಳನ್ನು ಲೋಕಾರ್ಪಣೆ ಮಾಡಿದ್ದಾರೆ. ಕಳೆದ ಏಳು ವರ್ಷಗಳಿಂದ ಆಟ್ ಪಾಟ್ ಪಡಿಪು ಕಾರ್ಯಕ್ರಮ ಚಾಲನೆಯಲ್ಲಿದ್ದು ಸರಿ ಸುಮಾರು 4000 ಕೃತಿಗಳನ್ನು ಉಚಿತವಾಗಿ ಮಕ್ಕಳಿಗೆ ಮತ್ತು ಆಸಕ್ತರಿಗೆ ಹಂಚಿರುತ್ತಾರೆ. 2013ನೇ ಇಸವಿಯಿಂದ ಕೊಡವ ಮಕ್ಕಡ ಕೂಟ ಸಂಘಟನೆಯ ಸ್ಥಾಪಕ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಕೊಡವ, ಕನ್ನಡ ಎಂಬ ಭೇದ ಭಾವ ಇಲ್ಲದೆಯೇ ಸಾಹಿತ್ಯದ ಹಾಗೂ ಕೊಡಗಿಗೆ…
ಡಾ. ಗಜಾನನ ಶರ್ಮ 2019ರಲ್ಲಿ ಬರೆದ ‘ಪುನರ್ವಸು’ 544ಪುಟಗಳ ಬೃಹತ್ ಕಾದಂಬರಿ. ಜೋಗದ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ ವಿದ್ಯುತ್ ಶಕ್ತಿಯನ್ನು ಉತ್ಪಾದಿಸುವ ವಿಷಯವೇ ಕಥಾವಸ್ತು. ಮೈಸೂರಿನ ಕೃಷ್ಣರಾಜ ಒಡೆಯರ್, ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯರವರ ಕಾಲಘಟ್ಟದ ಬಹುದೊಡ್ಡ ಯೋಜನೆಯನ್ನು ಅನುಷ್ಠಾನಕ್ಕೆ ತಂದ ಭಗೀರಥ ಯತ್ನದ ಬಗೆಗೆ ಅತಿಸೂಕ್ಷ್ಮ ಆಗುಹೋಗುಗಳನ್ನು ಅವಲೋಕಿಸಿ ಅದ್ಭುತವಾಗಿ ಹೆಣೆದ ಲೇಖನ. ಶರಾವತಿ ಡ್ಯಾಮಿನೊಂದಿಗೆ ಕಟ್ಟಿದ ಅತ್ಯುತ್ತಮ ಕೊಡುಗೆಯನ್ನು ಕನ್ನಡ ಸಾಹಿತ್ಯಕ್ಕೆ ಕಟ್ಟಿಕೊಟ್ಟಿದ್ದಾರೆ ಲೇಖಕರು. ಇಂದು ನಾವು ಕಾಣುವ ಜೋಗ ಫಾಲ್, ಶರಾವತಿ ನದಿಯ ಸುತ್ತಮುತ್ತಲಿನ ಪರಿಸರ ಹಿಂದೊಮ್ಮೆ ಹೇಗೆ ಭಿನ್ನವಾಗಿತ್ತು ಅನ್ನುವುದನ್ನು ತೋರಿಸಿದ್ದಾರೆ. ಪ್ರಕೃತಿಯ ರಮ್ಯ ರಮಣೀಯ ಪರಿಸರ, ಆಧುನಿಕತೆ ಅವಶ್ಯಕತೆಗಳಿಗೆ ಒಳಪಟ್ಟು ಹೇಗೆ ಬದಲಾಗಿದೆ ಅನ್ನುವುದನ್ನು ಅಲ್ಲಿಯ ಸುತ್ತುಮುತ್ತಲಿನ ಹಳ್ಳಿಗಳಲ್ಲಿ ಆದ ಅನಿವಾರ್ಯ ಬದಲಾವಣೆ, ಜನರ ಬದುಕು ಅದಕ್ಕೆ ಹೊಂದಿಕೊಳ್ಳಲು ಮಾಡಿದ ಪ್ರಯತ್ನ ಓದಿದಾಗ ಸಂಕಟವಾಗುತ್ತದೆ. ಭೋರ್ಗರೆಯುವ ನದಿಗಳಿಗೆ ತಡೆ ನಿರ್ಮಸಿ, ನೀರು ಸಂಗ್ರಹಿಸಿ ವಿದ್ಯುತ್ ಶಕ್ತಿ ಉತ್ಪಾದಿಸುವ ಬ್ರಹತ್ ಕಾರ್ಯಕ್ಕೆ ಬೇಕಾದ ಯೋಜನೆ, ಯಂತ್ರ,…
ಶಿವಮೊಗ್ಗ : ಶಿವಮೊಗ್ಗ ಜಿಲ್ಲಾ 18ನೆಯ ಕನ್ನಡ ಸಾಹಿತ್ಯ ಸಮ್ಮೇಳನವು ದಿನಾಂಕ 01-02-2024ರ ಗುರುವಾರ ಮತ್ತು 02-02-2024ರ ಶುಕ್ರವಾರದಂದು ನಡೆಯಲಿದ್ದು, ಈ ಸಮ್ಮೇಳನದಲ್ಲಿ ನಾಡಿನ ಹಿರಿಯ ಸಾಹಿತಿಗಳಲ್ಲಿ ಒಬ್ಬರಾದ ಡಾ. ಪದ್ಮಪ್ರಸಾದ್ ಅವರು ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ. ಮಂಜುನಾಥ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಡಾ. ಪದ್ಮಪ್ರಸಾದ್ ಅವರ ಹೆಸರನ್ನು ಆಯ್ಕೆ ಮಾಡಲಾಯಿತು. ಜೈನ ಸಾಹಿತ್ಯ, ಜಾನಪದ, ಸೃಜನಶೀಲ ಸಾಹಿತ್ಯಕ್ಕೆ ಪದ್ಮ ಪ್ರಸಾದ್ ಅವರು ಅಪಾರ ಕೊಡುಗೆ ನೀಡಿದ್ದಾರೆ. ಸಭೆಯಲ್ಲಿ ವಿವಿಧ ತಾಲೂಕುಗಳ ಪ್ರತಿಭೆಗಳಿಗೆ ಸಮ್ಮೇಳನದಲ್ಲಿ ಅವಕಾಶ ನೀಡುವ ಕುರಿತು ಹಾಗೂ ಪ್ರತಿನಿಧಿಗಳ ನೋಂದಣಿ, ಗೋಷ್ಠಿಗಳ ರೂಪುರೇಷೆ ಕುರಿತು ಚರ್ಚಿಸಲಾಯಿತು. ಪ್ರತಿನಿಧಿಗಳಾಗಿ ಭಾಗವಹಿಸುವ ಎಲ್ಲರಿಗೂ ಓ.ಓ.ಡಿ. ಸೌಲಭ್ಯ ದೊರೆಯಲಿದೆ.
ಉಜಿರೆ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸೆಕೆಂಡರಿ ಶಾಲೆಯಲ್ಲಿ ಕುಮಾರವ್ಯಾಸ ಜಯಂತಿ ಕಾರ್ಯಕ್ರಮವು ದಿನಾಂಕ 13.01.2024ರಂದು ನಡೆಯಿತು. ಮುಖ್ಯೋಪಾಧ್ಯಾಯರಾದ ಶ್ರೀ ಸುರೇಶ್ ಕೆ. ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕುಮಾರವ್ಯಾಸ ಭಾರತದ ಕರ್ಣ ಭೇದನದ ಗಮಕ ವಾಚನ ವ್ಯಾಖ್ಯಾನ ನಡೆಯಿತು. ಕುಮಾರಿ ನಂದನ ಮಾಲೆಂಕಿ ವಾಚನ ಮಾಡಿದರೆ, ದಕ್ಷಿಣ ಕನ್ನಡ ಜಿಲ್ಲಾ ಗಮಕ ಕಲಾ ಪರಿಷತ್ ಅಧ್ಯಕ್ಷ ಪ್ರೊಫೆಸರ್ ಮಧೂರು ಮೋಹನ ಕಲ್ಲೂರಾಯ ವ್ಯಾಖ್ಯಾನವನ್ನು ಮಾಡಿದರು.
ಹೊಸಕೋಟೆ : ಹೊಸಕೋಟೆ ನಿಂಬೆಕಾಯಿಪುರದ ‘ಜನಪದರು ಸಾಂಸ್ಕೃತಿಕ ವೇದಿಕೆ’ಯ ತಿಂಗಳ ಎರಡನೇ ಶನಿವಾರದ ನಾಟಕ ಸರಣಿ ‘ರಂಗ ಮಾಲೆ’ ಇದರ 68ನೇ ಕಾರ್ಯಕ್ರಮವು ದಿನಾಂಕ 13-01-2024ರಂದು ನಡೆಯಿತು. ನಾಟಕ ಸರಣಿಯ ಈ ಕಾರ್ಯಕ್ರಮದಲ್ಲಿ ರಷ್ಯನ್ ಲೆeಖಕರಾದ ವಿ. ಯಝೋವ್ ಮತ್ತು ಚುಕ್ರೈ ರಚಿಸಿ, ಸುರೇಶ ಸಂಕೃತಿ ಕನ್ನಡಕ್ಕೆ ಅನುವಾದಿಸಿ, ನಿರ್ದೇಶಕ ಎಂ. ಸುರೇಶ್ ನಿರ್ದೇಶಿಸಿದ ‘ಯೋಧಾಂತರ್ಯ’ ನಾಟಕವನ್ನು ಹೊಸಕೋಟೆಯ ಜನಪದರು ಸಾಂಸ್ಕೃತಿಕ ವೇದಿಕೆಯ ಸದಸ್ಯರು ಪ್ರಸ್ತುತಪಡಿಸಿದರು. ನಾಟಕ ಪ್ರದರ್ಶನ ಉದ್ಘಾಟಿಸಿದ ವೇದಿಕೆಯ ಅಧ್ಯಕ್ಷ ಕೆ.ವಿ. ವೆಂಕಟರಮಣಪ್ಪ @ ಪಾಪಣ್ಣ ಕಾಟಂನಲ್ಲೂರು ಮಾತನಾಡಿ “ಇಂದು ಜಗತ್ತಿನ ಯುದ್ಧ ಮಾನವ ಕುಲದ ನಾಶದ ಮುನ್ನುಡಿ. ಶಾಂತಿ, ನೆಮ್ಮದಿ ಮತ್ತು ಬದುಕು ಕಲಕಿದ ಜಾಗತಿಕ ಯುದ್ಧಗಳ ಕಾಲದ ಮನಸ್ಥಿತಿಯ ಈ ನಾಟಕ ಎಂದಿಗೂ ಪ್ರಸ್ತುತ.” ಎಂದರು. ನಾಟಕ ಅನುವಾದಕ ಸುರೇಶ್ ಸಂಕೃತಿ ಹಾಗೂ ನಿರ್ದೇಶಕ ಎಂ. ಸುರೇಶ ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಪದಾಧಿಕಾರಿಗಳಾದ ಜಗದೀಶ ಕೆಂಗನಾಳ, ಸಿದ್ದೇಶ್ವರ ನನಸು ಮನೆ, ಚಲಪತಿ, ಅಗ್ರಹಾರ ಮುನಿರಾಜು…
ಶ್ರೀರಾಜ್ ವಕ್ವಾಡಿ ಇವರು ಈಗಾಗಲೇ ಮೂರು ಕವನ ಸಂಕಲನ ಹಾಗೂ ಒಂದು ಕಥಾಸಂಕಲನವನ್ನು ಪ್ರಕಟಿಸಿದ್ದಾರೆ. ವೃತ್ತಿಯಿಂದ ಜರ್ನಲಿಸ್ಟ್ ಆಗಿರುವ ಇವರು ಪ್ರಸಕ್ತ ರಾಜಕೀಯದ ಕುರಿತು ಅಂಕಣಗಳನ್ನೂ ಬರೆಯುತ್ತಾರೆ. ‘ಅತ್ತ ನಕ್ಷತ್ರ’ ಇವರು ಇತ್ತೀಚೆಗೆ ಬಿಡುಗಡೆಯಾದ ಕಿರು ಕಾದಂಬರಿ. ಗದ್ಯಕ್ಕೂ ಮನಮುಟ್ಟುವ ಕಾವ್ಯಾತ್ಮಕ ಭಾಷೆಯನ್ನು ರೂಢಿಸಿಕೊಂಡದ್ದು ಇವರು ವಿಶಿಷ್ಟ ಶೈಲಿ. ಹೊಸ ಕಥೆಯೇನೂ ಇಲ್ಲಿಲ್ಲ. ಲಾಗಾಯ್ತಿನಿಂದ ಸಾಹಿತಿಗಳ ಮೂಲಕ ಚರ್ವಿತ ಚರ್ವಣಗೊಂಡ ಅದೇ ಹಳೆಯ ಪ್ರೀತಿ-ಪ್ರೇಮದ ಕಥೆ. ಪ್ರಸ್ತುತ ಆಧುನಿಕ ಸಂದರ್ಭಕ್ಕೆ ತಕ್ಕಂತೆ ಪ್ರೀತಿ ಪ್ರೇಮಗಳಿಗೆ ಇಂದಿನ ಯುವತಿಯರು ಯಾವ ರೀತಿ ಸ್ಪಂದಿಸುತ್ತಾರೆ ಅನ್ನುವುದನ್ನು ಬೇರೆ ಬೇರೆ ಸಂಬಂಧಗಳ ಚಿತ್ರಣದ ಮೂಲಕ ಶ್ರೀರಾಜ್ ಕಟ್ಟಿ ಕೊಡುತ್ತಾರೆ. ಕೃತಿಯ ಫೋಕಸ್ ಇರುವುದು ಅಭಿಜ್ಞಾ ಮತ್ತು ಸಾಕ್ಷಿಯರ ಮೇಲೆ. ಉಳಿದೆಲ್ಲರೂ ಅವರು ಸುತ್ತ ತಿರುಗುವ ಪಾತ್ರಗಳು. ಯಾವುದೇ ಫಲಾಪೇಕ್ಷೆಯಿಲ್ಲದೆ ಪ್ರೀತಿಗೋಸ್ಕರ ಪ್ರೀತಿ ಮಾಡುವ ಅಭಿಜ್ಞಾ-ಸಾಕ್ಷಿಯರ ಭವಿಷ್ಯದ ಕನಸುಗಳನ್ನು ಅಂತರ್ಜಾತಿ ಎಂಬ ಭೂತ ಹೊಸಕಿ ಹಾಕುತ್ತಿದೆ. ಹಿರಿಯರನ್ನು ಎದುರಿಸುವ ಶಕ್ತಿಯಿಲ್ಲದೆ ಸಾಕ್ಷಿ ಅವರು ಹುಡುಕಿದ ವ್ಯಕ್ತಿಯನ್ನು ತನ್ನ…
ಮಂಗಳೂರು : ಸಾರ್ವಜನಕ ಗ್ರಂಥಾಲಯ ಇಲಾಖೆಯ ಗ್ರಂಥಾಲಯಗಳಿಗೆ ಏಕಗವಾಕ್ಷಿ ಯೋಜನೆಯಡಿ 2023ನೇ ಸಾಲಿನಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟಗೊಂಡ ಕನ್ನಡ, ಇಂಗ್ಲೀಷ್ ಹಾಗೂ ಇತರ ಭಾರತೀಯ ಭಾಷೆಗಳ ಪುಸ್ತಕಗಳ ಆಯ್ಕೆಗೆ ಲೇಖಕರು, ಲೇಖಕ- ಪ್ರಕಾಶಕರು, ಪ್ರಕಾಶಕರು ಮತ್ತು ಪ್ರಕಟಣಾ ಸಂಸ್ಥೆಗಳಿಂದ ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿಯನ್ನು ಜಿಲ್ಲಾ ನಗರ ಕೇಂದ್ರ ಗ್ರಂಥಾಲಯ, ಮಂಗಳೂರು ಕಚೇರಿಯಿಂದ ಪಡೆದು ನಿರ್ದೇಶಕರು, ಸಾರ್ವಜನಿಕ ಗ್ರಂಥಾಲಯ ಇಲಾಖೆ, ವಿಶ್ವೇಶ್ವರಯ್ಯ ಮುಖ್ಯ ಗೋಪುರ, 4ನೇ ಮಹಡಿ, ಡಾ. ಅಂಬೇಡ್ಕರ್ ರಸ್ತೆ, ಬೆಂಗಳೂರು-560001 ಇಲ್ಲಿಗೆ ದಿನಾಂಕ 05-02-2024ರ ಒಳಗೆ ಸಲ್ಲಿಸಬೇಕು ಎಂದು ಮುಖ್ಯ ಗ್ರಂಥಾಲಯಾಧಿಕಾರಿ ತಿಳಿಸಿದ್ದಾರೆ.
ಬೆಂಗಳೂರು : ‘ಸಂಜಲಿ ಸೆಂಟರ್ ಫಾರ್ ಒಡಿಸ್ಸಿ ಡ್ಯಾನ್ಸ್’ ಖ್ಯಾತ ನೃತ್ಯಶಾಲೆಯ ಅಂತರರಾಷ್ಟ್ರೀಯ ಒಡಿಸ್ಸಿ ನೃತ್ಯಕಲಾವಿದೆ ಹಾಗೂ ನೃತ್ಯಾಚಾರ್ಯ ಶರ್ಮಿಳಾ ಮುಖರ್ಜಿಯವರ ನುರಿತ ಗರಡಿಯಲ್ಲಿ ದಶಕದ ಕಾಲ ನೃತ್ಯಶಿಕ್ಷಣ ಪಡೆದ ಉದಯೋನ್ಮುಖ ನೃತ್ಯ ಕಲಾವಿದೆಯರಾದ ಶ್ರೇಯಾನ್ಷಿ ದಾಸ್ ಮತ್ತು ಜಾನ್ವಿ ಮುದುಳಿ ಪ್ರತಿಭಾವಂತ ಶಿಷ್ಯರು. ನಾಡಿನಾದ್ಯಂತ ವಿವಿಧ ನೃತ್ಯೋತ್ಸವಗಳಲ್ಲಿ ನರ್ತಿಸಿರುವ ಉಭಯ ಕಲಾವಿದೆಯರು, ಅನೇಕ ನೃತ್ಯ ಕಾರ್ಯಾಗಾರಗಳಲ್ಲಿ ಪಾಲ್ಗೊಂಡು, ಸಂಜಲಿ ನೃತ್ಯಶಾಲೆ ಆಯೋಜಿಸಿದ ಎಲ್ಲಾ ನೃತ್ಯರೂಪಕಗಳಲ್ಲಿ ಭಾಗವಹಿಸಿ ಮೆಚ್ಚುಗೆ ಪಡೆದವರು. ಇಬ್ಬರೂ ಚಂದೀಘಡದ ಪ್ರಾಚೀನ್ ಕಲಾಕೇಂದ್ರದ ‘ಸಂಗೀತ್ ಭೂಷಣ್ ಫೈನಲ್’ ನೃತ್ಯಪರೀಕ್ಷೆಯನ್ನು ಸಂಪೂರ್ಣಗೊಳಿಸಿದ್ದಾರೆ. ಈ ಇಬ್ಬರು ಕಲಾವಿದೆಯರು ತಮ್ಮ ಒಡಿಸ್ಸಿ ‘ರಂಗಪ್ರವೇಶ’ವನ್ನು ದಿನಾಂಕ 19-01-2024ರ ಶುಕ್ರವಾರದಂದು ನೆರವೇರಿಸಿಕೊಂಡರು. ಶ್ರೀಮತಿ ಸಂಗೀತ ದಾಸ್ ಮತ್ತು ಶ್ರೀ ಸಂಜಯ್ ದಾಸ್ ಪುತ್ರಿಯಾದ ಕು. ಶ್ರೇಯಾನ್ಷಿ ದಾಸ್ ತನ್ನ 6 ನೆಯ ಎಳವೆಯಿಂದಲೇ ನೃತ್ಯಾಸಕ್ತಿ ಹೊಂದಿದ್ದು, ಗುರು ಶರ್ಮಿಳಾ ಮುಖರ್ಜಿ ಅವರಲ್ಲಿ ಕಳೆದ 11 ವರ್ಷಗಳಿಂದ ಒಡಿಸ್ಸಿ ನೃತ್ಯವನ್ನು ಕಲಿಯುತ್ತಿದ್ದಾರೆ. ಜೊತೆಗೆ ಇವರು, ಕಥಕ್…
ಮಂಗಳೂರು : ಜನವರಿ 19, 20 ಮತ್ತು 21ರಂದು ಮೂರು ದಿನಗಳ ಕಾಲ ಮಂಗಳೂರಿನ ಟಿ. ಎಂ. ಎ. ಪೈ ಇಂಟರ್‌ನ್ಯಾಷನಲ್ ಕನ್ವೆನ್ನನ್ ಸೆಂಟರ್‌ನಲ್ಲಿ ನಡೆಯಲಿರುವ ಮಂಗಳೂರು ಲಿಟ್ ಫೆಸ್ಟ್‌ನ ಆರನೇ ಆವೃತ್ತಿಯು ದಿನಾಂಕ 19-01-2024ರ ಸಂಜೆ 6.00 ಗಂಟೆಗೆ ಅದ್ಧೂರಿಯಾಗಿ ಶುಭಾರಂಭಗೊಂಡಿತು. ಪಲ್ಲಕ್ಕಿ ಮೆರವಣಿಗೆಯೊಂದಿಗೆ ಪ್ರಾರಂಭಗೊಂಡ 6ನೇ ವರ್ಷದ ‘ಮಂಗಳೂರು ಲಿಟ್ ಫೆಸ್ಟ್’ಅನ್ನು ಚಿಂತಕ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಲಕ್ಷ್ಮೀಶ ತೋಳ್ಪಾಡಿ ಉದ್ಘಾಟಿಸಿ ಮಾತನಾಡಿ “ಸಾಹಿತ್ಯವೆಂದರೆ ಸ್ವಾಧ್ಯಾಯ, ಸಾಹಿತ್ಯದಲ್ಲಿ ಸಾಮಾನ್ಯವಾಗಿ ಬಳಸುವ ಪದ ಸೃಜನಶೀಲತೆ, ಸೃಜನಶೀಲತೆಯ ಹುಟ್ಟು ಇರುವುದು. ಆದರ್ಶ ಮತ್ತು ನೋವನ್ನು ಆಲಿಸುವ ಸಂವೇದನಾಶೀಲತೆಯ ಸಮ್ಮಿಲನದಲ್ಲಿ, ನಮ್ಮನ್ನು ಆಳುತ್ತಿರುವುದು ಯಾವುದೇ ಸರ್ಕಾರವಲ್ಲ, ಬದಲಾಗಿ ಭಾಷೆ. ಇದೇ ಶಾಂತಿಯನ್ನೂ ಕಟ್ಟುತ್ತದೆ.” ಎಂದರು. ವೇದಿಕೆಯಲ್ಲಿ ‘ಮಿಥಿಕ್ ಸೊಸೈಟಿ’ ಬೆಂಗಳೂರು ಇದರ ಗೌರವ ಕಾರ್ಯದರ್ಶಿಗಳಾದ ಎಸ್. ರವಿ ಮಾತನಾಡಿ “ಭಾರತದ ಪರಂಪರೆಯ ಗೌರವವನ್ನು ಎತ್ತಿ ಹಿಡಿಯುತ್ತಾ, ಈ ‘ಲಿಟ್ ಫೆಸ್ಟ್’ ಸಾಹಿತ್ಯ, ಕಲೆ, ಸಂಸ್ಕೃತಿಯ ಕುರಿತ ವಿಶೇಷ ಅರಿವು…