Subscribe to Updates
Get the latest creative news from FooBar about art, design and business.
Author: roovari
ಉಡುಪಿ : ಪರ್ಕಳದ ಸರಿಗಮ ಭಾರತಿ ಸಂಗೀತ ವಿದ್ಯಾಲಯ (ರಿ.) ಇದರ ಆಶ್ರಯದಲ್ಲಿ ಮೂರು ದಿನಗಳ ‘ಸಂಗೀತ ಶಿಬಿರ’ವನ್ನು ದಿನಾಂಕ 29ರಿಂದ 31 ಡಿಸೆಂಬರ್ 2025ರವರೆಗೆ ಸಂಜೆ 5-00 ಗಂಟೆಗೆ ಪರ್ಕಳದ ಸರಿಗಮ ಭಾರತಿ ಸಂಗೀತ ವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ವಿದುಷಿ ತೇಜಸ್ವಿನಿ ಎಂ.ಕೆ. ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದು, ರಾಗಾಲಾಪನೆ, ಕೃತಿ, ನೆರವಲ್ ಮತ್ತು ಕಲ್ಪನಾಸ್ವರ ಮುಂತಾದ ವಿಷಯದ ಬಗ್ಗೆ ತಿಳಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಡಾ. ಉದಯಶಂಕರ ಹೆಚ್.ಎನ್. 96633 69365 ಮತ್ತು ವಿದುಷಿ ಉಮಾಶಂಕರಿ 99641 40601 ಸಂಖ್ಯೆಯನ್ನು ಸಂಪರ್ಕಿಸಿರಿ.
ಉಡುಪಿಯ ರಾಗಧನ ಸಂಸ್ಥೆಯು ನಡೆಸುತ್ತಿರುವ ರಾಗರತ್ನಮಾಲಿಕೆ ಸರಣಿಯ 43ನೇ ಸಂಗೀತ ಕಾರ್ಯಕ್ರಮವು ದಿನಾಂಕ 16 ನವೆಂಬರ್ 2025ರಂದು ಮಣಿಪಾಲ ಡಾಟ್ನೆಟ್ ಸಭಾಂಗಣದಲ್ಲಿ ನಡೆಯಿತು. ಇಳಿಹಗಲಿನಲ್ಲಿ ಸಂಗೀತೋತ್ಸಾಹಿಗಳಾದ ಎಳೆಯರ ತಂಡ ಉದ್ಘಾಟನಾ ಪೂರ್ವ ಕಛೇರಿಯನ್ನು ನಡೆಸಿಕೊಟ್ಟಿತು. ಪ್ರದ್ಯುಮ್ನ ಭಾಗವತ್ (ಕೊಳಲು), ಪ್ರಮಥ್ ಭಾಗವತ್ (ವಯಲಿನ್) ಅಂತೆಯೇ ಪ್ರಜ್ನಾನ್ (ಮೃದಂಗ). ಮೂರು ಕಾಲಗಳಲ್ಲಿ ನುಡಿಸಲಾದ ನಾಟಕುರಂಜಿ (ಚಲಮೇಲ) ವರ್ಣದೊಂದಿಗೆ ಕಛೇರಿ ಪ್ರಾರಂಭ. ನಾಟ (ಮಹಾಗಣಪತಿಂ), ಸುಪೋಷೀಣಿ (ರಮಿಂಚುವಾರು) ಕೃತಿಗಳು ಶುದ್ಧವಾಗಿ ಮೂಡಿಬಂದವು. ಅತ್ಯಂತ ಗಾಂಭೀರ್ಯ ಮತ್ತು ತೂಕವನ್ನು ಅಪೇಕ್ಷಿಸುವ ಭೈರವಿ (ಕಾಮಾಕ್ಷಿ) ಸ್ವರಜತಿಯನ್ನು ಈ ಕಿಶೋರರು ಏಕರೂಪವಾಗಿ ನಿರ್ವಹಿಸಿದ ಪರಿ ಶ್ಲಾಘನೀಯ. ಪ್ರಧಾನ ರಾಗ ಕಾಂಭೋಜಿ (ಮರಕತವಲ್ಲೀಂ) ರಾಗ, ಸ್ವರ, ವಿಸ್ತಾರಗಳೊಂದಿಗೆ ಮೂಡಿಬಂತು. ಚಾರುಕೇಶಿಯ ನೀರೆತೋರೆಲೆದೇವರ ನಾಮದೊಂದಿಗೆ ಕಛೇರಿ ಸಂಪನ್ನಗೊಂಡಿತು. ಮೃದಂಗ ಸಹವಾದಕ ಬಾಲಕ ಪ್ರಜ್ಞಾನ್ ತನ್ನ ತನಿ ಆವರ್ತನದಲ್ಲಿ ಯಾವುದೇ ಹಿರಿಯ ಕಲಾವಿದರಂತೆ ನಡೆ, ಗತಿ, ಭೇದಗಳನ್ನು ಅನಾಯಾಸವಾಗಿ ಪ್ರಸ್ತುತ ಪಡಿಸಿ ರಸಿಕರ ಮನ ಗೆದ್ದನು. ಈ ಮೂವರು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ…
ಬೆಂಗಳೂರು : ಕರಾವಳಿಯ ಯುವ ಭರತನಾಟ್ಯ ಕಲಾವಿದರಾದ ವಿದ್ವಾನ್ ಮಂಜುನಾಥ್ ಎನ್. ಪುತ್ತೂರು ಇವರು ಬೆಂಗಳೂರಿನಲ್ಲಿ ದಿನಾಂಕ 25ರಿಂದ 27 ಡಿಸೆಂಬರ್ 2025ರವರೆಗೆ ಪ್ರತಿದಿನ 9-30 ಗಂಟೆಯಿಂದ 5-00 ಗಂಟೆ ತನಕ ಅರ್ಕ ಕಲಾ ಕುಟೀರ ನೃತ್ಯ ಸಂಸ್ಥೆಯು ನಡೆಸುತ್ತಿರುವ ತಾಳ ಪ್ರಕ್ರಿಯಾ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ. ಈ ಕಾರ್ಯಾಗಾರವು ಮೂರು ದಿನಗಳ ಕಾಲ ಬೆಂಗಳೂರಿನ ಜೆ.ಪಿ. ನಗರದಲ್ಲಿರುವ ಅರ್ಕ ಥೀಯೇಟರ್ ಮತ್ತು ಸಭಾಂಗಣದಲ್ಲಿ ಜರುಗಲಿದೆ ಎಂದು ಅರ್ಕ ಕಲಾ ಕುಟೀರದ ಗುರುಗಳಾದ ಶ್ರೀಮತಿ ಭಾನುಪ್ರಿಯ ರಾಕೇಶ್ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 8884173606 ಸಂಖ್ಯೆಯನ್ನು ಸಂಪರ್ಕಿಸಿರಿ.
ಮಂಗಳೂರು : ವಿದ್ಯಾರ್ಥಿಗಳಿಗೆ ಏಕದಿನ ಸಾಹಿತ್ಯ ಅಭಿಯಾನದ ಅಂಗವಾಗಿ ಕನ್ನಡದ ನಡಿಗೆ ಶಾಲೆಯ ಕಡೆಗೆ, ಅಡಿಯಲ್ಲಿ ದಿನಾಂಕ 17 ಡಿಸೆಂಬರ್ 2025ರಂದು ಮಧ್ಯಾಹ್ನ 2-00 ಗಂಟೆಗೆ ಮಂಗಳೂರಿನ ಜೆಪ್ಪು ಕಾಸ್ಸಿಯ ಪ್ರೌಢಶಾಲೆಯ ಸಭಾಂಗಣದಲ್ಲಿ ಶಾಲಾ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಮಕ್ಕಳ ಕವಿಗೋಷ್ಠಿಯೊಂದಿಗೆ ಕನ್ನಡ ಭವನ ದಕ್ಷಿಣ ಕನ್ನಡದ ಜಿಲ್ಲಾ ಘಟಕದ ಕಾರ್ಯಕ್ರಮವನ್ನು ನಡೆಸಲಾಯಿತು. ಶಿಕ್ಷಕಿ ಹಾಗೂ ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾಗಿರುವ ಶ್ರೀಮತಿ ರೇಖಾ ಸುದೇಶ್ ರಾವ್ ಸ್ವಾಗತಗೈದ ಈ ಸಮಾರಂಭವನ್ನು ಕಾಸಿಯಾ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶ್ರೀ ಎವರೆಸ್ಟ್ ಕ್ರಾಸ್ತ ಇವರ ಅನುಪಸ್ಥಿತಿಯಲ್ಲಿ ಹಿರಿಯ ಶಿಕ್ಷಕಿ ಆಲೀಸ್ ಕೆ.ಜೆ. ದೀಪ ಬೆಳಗಿ ಉದ್ಘಾಟನೆಗೈದರು. ಡಾ. ರವೀಂದ್ರ ಜೆಪ್ಪು ಇವರು ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದ್ದರು ಹಾಗೂ ಮಂಗಳೂರಿನ ಮಂಗಳಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಮೂಲವ್ಯಾಧಿ ತಜ್ಞ ಹಾಗೂ ಕಣಚೂರು ಆಯುರ್ವೇದ ಕಾಲೇಜಿನ ಮುಖ್ಯ ಸಲಹೆಗಾರ ಗಜಲ್ ಕವಿ ಡಾ. ಸುರೇಶ ನೆಗಳಗುಳಿ ಮುಖ್ಯ ಅತಿಥಿಯಾಗಿ ಮಕ್ಕಳ ಕವನ ವಾಚನದ ವಿಮರ್ಶೆಯೊಂದಿಗೆ…
ಮಂಗಳೂರು : ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನದ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ನೃತ್ಯೋತ್ಸವ ಕಾರ್ಯಕ್ರಮವು ದಿನಾಂಕ 21 ಡಿಸೆಂಬರ್ 2025ರಂದು ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ಅರುಣ ಐತಾಳ್ “ಶಾಲಾ ಶೈಕ್ಷಣಿಕ ಬದುಕಿನ ಜೊತೆಗೆ ಭಾರತೀಯ ಲಲಿತ ಕಲೆಯಲ್ಲಿ ಆಗ್ರಪಂಕ್ತಿಯಲಿರುವ ನೃತ್ಯ ಕಲೆಯ ಅಭ್ಯಾಸದಿಂದ ಮನಸ್ಸನ್ನು ಸುಂದರವಾಗಿ ಇಡಲು ಸಾಧ್ಯ. ಶಾಸ್ತ್ರೀಯ ಚೌಕಟ್ಟಿನಲ್ಲಿ ಈ ಕಲೆಯ ಪ್ರಚಾರ ಪ್ರಸಾರ ನಿರಂತರವಾಗಿ ಸಾಗಲಿ” ಎಂದು ಅಭಿಪ್ರಾಯಪಟ್ಟರು. ಪರಿಷತ್ ಅಧ್ಯಕ್ಷೆ ವಿದುಷಿ ರಾಜಶ್ರೀ ಉಳ್ಳಾಲ್ ಅಧ್ಯಕ್ಷತೆ ವಹಿಸಿ “ಪರಿಷತ್ ಇಂತಹ ಕಾರ್ಯಕ್ರಮವನ್ನು ಕ್ರಮವಾಗಿ ಮಂಗಳೂರು, ಉಡುಪಿ ಮತ್ತು ಪುತ್ತೂರು ಮೊದಲಾದ ಕಡೆಗಳಲ್ಲಿ ನೃತ್ಯ ಕಲಿಯುತ್ತಿರುವ ಪ್ರತಿಭೆಗಳ ಪ್ರೋತ್ಸಾಹಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮವನ್ನು ನಿರಂತರವಾಗಿ ಆಯೋಜಿಸಿಕೊಂಡು ಬರುತ್ತಿದೆ” ಎಂದರು. ನಗರದ 9 ನೃತ್ಯ ಸಂಸ್ಥೆಗಳ 60 ಮಕ್ಕಳು ಭಾಗವಹಿಸಿದ್ದರು. ನೃತ್ಯ ಪರಿಷತ್ ಸದಸ್ಯರಾದ ವಿದ್ವಾನ್ ಪ್ರವೀಣ್…
ಕೇರಳ : ಕರಾವಳಿಯ ಯುವ ಭರತನಾಟ್ಯ ಕಲಾವಿದರಾದ ವಿದ್ವಾನ್ ಮಂಜುನಾಥ್ ಎನ್. ಪುತ್ತೂರು ಇವರು ಕೇರಳದ ಪುಲ್ಪಲ್ಲಿ ಎಂಬಲ್ಲಿ ದೇವ್ ದಕ್ಷ ಕಲಾಕ್ಷೇತ್ರ ನೃತ್ಯ ಸಂಸ್ಥೆಯು ದಿನಾಂಕ 24 ಡಿಸೆಂಬರ್ 2025ರಂದು ಬೆಳಗ್ಗೆ 8-30 ಗಂಟೆಗೆ ನಡೆಸುತ್ತಿರುವ ನೃತ್ಯ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ. ಈ ಕಾರ್ಯಗಾರವು ಮಂಜುನಾಥ್ ಇವರ 100ನೇಯ ಕಾರ್ಯಾಗಾರವಾಗಿದ್ದು, ನೃತ್ಯ ಕ್ಷೇತ್ರದಲ್ಲಿ ವಿಶಿಷ್ಟವಾದ ಮೈಲುಗಲ್ಲು ಇದಾಗಿರುತ್ತದೆ ಎಂದು ದೇವ್ ದಕ್ಷ ನೃತ್ಯ ಕಲಾಕ್ಷೇತ್ರದ ಗುರುಗಳಾದ ಶ್ರೀಮತಿ ರೆಸ್ಮಿ ಶಬು ತಿಳಿಸಿರುತ್ತಾರೆ. ಜನವರಿ 3ರಂದು ನಡೆಯುವ ಪುಲ್ಪಲ್ಲಿ ಉತ್ಸವದ ದಿನ ಮಂಜುನಾಥ್ ನೃತ್ಯ ಪ್ರದರ್ಶನ ನೀಡಲಿದ್ದಾರೆ.
ಉಡುಪಿ : ಕಾಲೇಜು ವಿದ್ಯಾರ್ಥಿಗಳಲ್ಲಿ ಶಾಸ್ತ್ರೀಯ ಕಲೆಯ ಬಗೆಗಿನ ಸಂವೇದನೆಯನ್ನು ಮೂಡಿಸುವಂಥ ಕಲಾಚಟುವಟಿಕೆಗಳನ್ನು ನಿರಂತರವಾಗಿ ಪ್ರೋತ್ಸಾಹಿಸಿಕೊಂಡು ಬರುತ್ತಿರುವ ಉಡುಪಿಯ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ಈ ಬಾರಿಯ ವಾರ್ಷಿಕೋತ್ಸವದಲ್ಲಿ ಸುಮಾರು 26 ಮಂದಿ ವಿದ್ಯಾರ್ಥಿನಿಯರು ಯತಿಕವಿ ಶ್ರೀವಾದಿರಾಜ ವಿರಚಿತ ಶ್ರೀರುಗ್ಮಿಣೀಶ ವಿಜಯ ಎಂಬ ಸಂಸ್ಕೃತಕಾವ್ಯವನ್ನು ಆಧರಿಸಿದ ‘ಭಾವ ನೃತ್ಯ ನಮನ’ ಎಂಬ ನೃತ್ಯನಾಟಕವನ್ನು ದಿನಾಂಕ 22 ಡಿಸೆಂಬರ್ 2025ರಂದು ಮಧ್ಯಾಹ್ನ 2-00 ಗಂಟೆಗೆ ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ಪ್ರಸ್ತುತಪಡಿಸಲಿದ್ದಾರೆ. ಉಡುಪಿಯ ಸಮೂಹ ಕಲಾಲಾಂಛನದ ರಂಗನಿರ್ದೇಶಕರಾದ ಪ್ರೊ. ಉದ್ಯಾವರ ಮಾಧವ ಆಚಾರ್ಯರ ರಂಗಕೃತಿ ಹಾಗೂ ನಿರ್ದೇಶನದ ಈ ನೃತ್ಯನಾಟಕವನ್ನು ವಿದುಷಿ ಡಾ. ಭ್ರಮರಿ ಶಿವಪ್ರಕಾಶ್ ಸಂಯೋಜಿಸಿದ್ದು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಪ್ರಾಧ್ಯಾಪಕರುಗಳ ಪೂರ್ಣ ಬೆಂಬಲದೊಂದಿಗೆ ಪ್ರದರ್ಶನಗೊಳ್ಳಲಿದೆ. ಕಲಾಸಕ್ತರಿಗೆ ಮುಕ್ತಪ್ರವೇಶವಿದೆ.
ಪೆರ್ಡೂರು : ಶ್ರೀ ಭೈರವನಾಥೇಶ್ವರ ಸೇವಾ ಸಮಿತಿ (ರಿ) ಹತ್ತಾರು ವರ್ಷಗಳಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ದಿನಾಂಕ 28 ಡಿಸೆಂಬರ್ 2025ರ ರವಿವಾರದಂದು ದ್ವಿತೀಯ ಬಾರಿಗೆ ಉಡುಪಿ ಜಿಲ್ಲೆಯ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗಾಗಿ ಪೆರ್ಡೂರು ಸುಬ್ರಾಯ ಕಲ್ಯಾಣ ಮಂಟಪದಲ್ಲಿ ‘ಹಿರಿಯೆರೊಟ್ಟುಗೊಂಜಿ ದಿನ’ ಕಾರ್ಯಕ್ರಮ ಆಯೋಜಿಸಿದೆ. ಬದುಕಿನುದ್ದಕ್ಕೂ ತನ್ನವರಿಗಾಗಿ ದುಡಿದು ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಯೌವನವನ್ನು ಸವೆಸಿ ಬದುಕಿನ ಮುಸ್ಸಂಜೆಯಲ್ಲಿರುವ ಜೀವಗಳಿಗೆ ಪ್ರೀತಿಯ, ಮಮತೆಯ, ಸಂತೃಪ್ತಿಯ ಭಾವನೆ ಮೂಡಿಸುವುದು ಕಿರಿಯರಾದ ನಮ್ಮೆಲ್ಲರ ಕರ್ತವ್ಯ. ಅವರು ಹಾಕಿಕೊಟ್ಟ ಬದುಕಿನ ಅಡಿಪಾಯದಿಂದಾಗಿ ನಾವಿಂದು ನೆಮ್ಮದಿಯ ಗೂಡು ಕಟ್ಟಿಕೊಂಡಿದ್ದೇವೆ. ನಮ್ಮ ಬಾಲ್ಯದಲ್ಲಿ ಅವರು ತೋರಿದ ಪ್ರೀತಿ, ಕಾಳಜಿ, ಮಮಕಾರವನ್ನು ನಾವಿಂದು ಅವರಿಗೆ ಮರಳಿಸಬೇಕಾಗಿದೆ. ಎಲ್ಲ ಗೌರವಾನ್ವಿತ ಹಿರಿಯ ನಾಗರಿಕರನ್ನು ದಿನವಿಡೀ ರಂಜಿಸಿ ಅವರ ಮನಸ್ಸಂತೋಷ ಪಡಿಸಿ ತನ್ಮೂಲಕ ಹಿರಿಯರ ಸೇವೆಗೈಯುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹಾಡು, ನೃತ್ಯ, ಛದ್ಮವೇಷ, ಮೋಜಿನ ಆಟಗಳು, ಹಾಸ್ಯ, ಸ್ಕಿಟ್ ಐದು ನಿಮಿಷ (ಸಹ ಕಲಾವಿದರಾಗಿ ಮನೆಯ ಸದಸ್ಯರು…
ಧಾರವಾಡ : ಧಾರವಾಡದ ಸಂಗೀತ ಪರಿಚಾರಕ ಅನಂತ ಹರಿಹರ ಅವರು ಆರು ದಶಕಗಳ ಕಾಲ ಸಂಗೀತ-ನೃತ್ಯ-ಸಾಂಸ್ಕೃತಿಕ ಲೋಕದಲ್ಲಿ ಕಲಾವಿದರು ಹಾಗೂ ಶ್ರೋತೃವರ್ಗದ ಕೊಂಡಿಯಾದವರು. ಕಲಾವಿದರಿಗೆ ಸ್ಫೂರ್ತಿಯ ಸೆಲೆಯಾದ ಯಶಸ್ವಿ ಸಂಘಟಕ, ಸಾಂಸ್ಕೃತಿಕ ರಾಯಭಾರಿ ಎನಿಸಿಕೊಂಡವರು. ಅನಂತ ಹರಿಹರ ಅವರು ನಮ್ಮನ್ನಗಲಿ ಒಂದು ವರ್ಷ ಕಳೆದಿದೆ. ಅವರ ಸಂಸ್ಮರಣೆಯಲ್ಲಿ ಧಾರವಾಡದ ಜಿ. ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಮೂರು ದಿನಗಳ ‘ಅನಂತ ಸ್ವರ ನಮನ’ ಸಂಗೀತೋತ್ಸವವನ್ನು ಕ್ಷಮತಾ ಹುಬ್ಬಳ್ಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಭಾರತೀಯ ಜೀವನ ಬೀಮಾ ನಿಗಮ, ಸಂಗೀತಾಚಾರ್ಯ ಪಂ. ಡಿ. ವಿ. ಕಾಣೆಬುವಾ ಪ್ರತಿಷ್ಠಾನ ಪುಣೆ, ನಾನಾಸಾಹೇಬ ಅಳವಣಿ ಟ್ರಸ್ಟ್ ಪುಣೆ ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಿವೆ. ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ದಿನಾಂಕ 22ರಿಂದ 24 ಡಿಸೆಂಬರ್ 2025ರವರೆಗೆ ಪ್ರತಿದಿನ ಸಂಜೆ ಸಪ್ತಸ್ವರಗಳ ಕಲರವ ರಿಂಗಣಿಸಲಿದೆ. ದಿನಾಂಕ 22 ಡಿಸೆಂಬರ್ 2025ರಂದು ಸಂಜೆ 5-00 ಗಂಟೆಗೆ ಸಂಗೀತೋತ್ಸವದ ಉದ್ಘಾಟನಾ ಸಮಾರಂಭ ಜರುಗಲಿದೆ. ಶ್ರೀ ಅರವಿಂದ ಬೆಲ್ಲದ…
ಭರತನಾಟ್ಯದ ಪರಂಪರೆಯಂತೆ ರಂಗಪ್ರವೇಶ/ಅರಗೇಟ್ರಂ ಗುರುಕುಲ ಪದ್ದತಿಯಲ್ಲಿ ನೃತ್ಯ ಶಿಕ್ಷಣ ಪಡೆಯುತ್ತಿರುವ ಶಿಷ್ಯ/ಶಿಷ್ಯೆ ಕಡ್ಡಾಯವಾಗಿ ಮಾಡಲೇಬೇಕಾದ ಒಂದು ಧಾರ್ಮಿಕ ವಿಧಿ ಹಾಗೂ ಗುರುವಂದನೆ. ಇಂತಹ ಒಂದು ರಂಗಪ್ರವೇಶವು ಸನಾತನ ನಾಟ್ಯಾಲಯ (ರಿ.) ಮಂಗಳೂರು ಇದರ ಗುರುಗಳಾದ ವಿದುಷಿ ಶಾರದಾ ಮಣಿಶೇಖರ್ ಹಾಗೂ ವಿದುಷಿ ಶ್ರೀಲತಾ ನಾಗರಾಜ್ ರವರ ಶಿಷ್ಯೆ ವಿದುಷಿ ಅಮೃತಾ ವಾಸುದೇವ್ರವರು ಹೆತ್ತವರ ಬೆಂಬಲದೊಂದಿಗೆ, ಸಂಪ್ರದಾಯಬದ್ದವಾಗಿ ಸುಮಾರು ಎರಡು ಗಂಟೆಗಳ ಕಾಲ ನೃತ್ಯ ಪ್ರದರ್ಶಿಸಿ, ರಸಿಕರ ಮೆಚ್ಚುಗೆ ಪಡೆದರು. ಕಲಾ ಹಿನ್ನೆಲೆಯಿಂದ ಬಂದ ಅಮೃತಾ ಕಂಪ್ಯೂಟರ್ ಎಂಜಿನಿಯರ್, ಕರ್ನಾಟಕ ಸಂಗೀತ, ಸಿತಾರ್ ವಾದನ ಹಾಗೂ ನೃತ್ಯ ಕಲಿಕೆಯ ಪ್ರತಿಭಾನ್ವಿತ ನೃತ್ಯಾಂಗನೆ. ಈ ಕಾರ್ಯಕ್ರಮವು ಭರತನಾಟ್ಯ ಕಾರ್ಯಕ್ರಮದಲ್ಲಿರಲೇಬೇಕಾದ ಬಂಧಗಳನ್ನು ಒಳಗೊಂಡಿದ್ದವು. ಆರಂಭವು ಗಾಯಕ ಕಾರ್ತಿಕ ಹೆಬ್ಬಾರ್ರವರ ಸುಶ್ರಾವ್ಯವಾದ ಪುಟ್ಟ ‘ಓಂ ಪ್ರಣವಾಕಾರ’ ಶ್ಲೋಕದಿಂದ ಮೊದಲ್ಗೊಂಡು ಹೇಮಾವತಿ ರಾಗ ಆದಿತಾಳದ ಕೆ. ಮುರಲೀಧರ ಉಡುಪಿ ವಿರಚಿತ ಪುಷ್ಪಾಂಜಲಿ ಹಾಗೂ ಗಣಪತಿ ಸ್ತುತಿಯಾಗಿ ಪುರಂದರದಾಸರ ಪಿಳ್ಳಾರಿ ಗೀತೆ ‘ಶ್ರೀ ಗಣನಾಥ’ ಪದವು ಚಿಕ್ಕ ಹಾಗೂ ಚೊಕ್ಕ…