Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು : ಖಾದ್ರಿ ಶಾಮಣ್ಣ ಸ್ಮಾರಕ ಟ್ರಸ್ಟ್ ವತಿಯಿಂದ ಕೊಡಮಾಡುವ ‘ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ’ಗೆ ಹಿರಿಯ ಪತ್ರಕರ್ತ, ಮೈಸೂರಿನ ಡಾ. ಕೂಡ್ಲಿ ಗುರುರಾಜ ಭಾಜನರಾಗಿದ್ದಾರೆ. ಪ್ರಶಸ್ತಿಯು ರೂ.15,000/- ನಗದು ಹಾಗೂ ಫಲಕವನ್ನು ಒಳಗೊಂಡಿದ್ದು, ಜೂನ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಟ್ರಸ್ಟ್ ಪರವಾಗಿ ಹಿರಿಯ ಪತ್ರಕರ್ತ ಎಚ್.ಆರ್ೂ. ಶ್ರೀಶ ತಿಳಿಸಿದ್ದಾರೆ. ಮೂಲತಃ ಮೈಸೂರಿನವರಾದ ಕೂಡ್ಲಿ ಗುರುರಾಜ, ಕಳೆದ 38 ವರ್ಷಗಳಿಂದ ಕನ್ನಡ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಪಿ.ಎಚ್.ಡಿ. ಪಡೆದು ಅಧ್ಯಾಪಕರಾಗಿಯೂ ಕೆಲಸ ಮಾಡುತ್ತಿದ್ದಾರೆ. ಪತ್ರಕರ್ತರಾಗಿ ಮೈಸೂರಿನ ಆರತಿ ಪತ್ರಿಕೆಯಿಂದ ವೃತ್ತಿ ಆರಂಭಿಸಿ, ಮೈಸೂರು ಮಿತ್ರ, ಆಂದೋಲನ, ಸಂಯುಕ್ತ ಕರ್ನಾಟಕ, ಕನ್ನಡಪ್ರಭ, ವಿಜಯ ಕರ್ನಾಟಕ, ಟೈಮ್ಸ್ ಆಫ್ ಇಂಡಿಯಾ (ಕನ್ನಡ ಆವೃತ್ತಿ), ವಿಜಯ ನೆಕ್ಸ್ಟ್, ಉದಯವಾಣಿ ಪತ್ರಿಕೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಹುಬ್ಬಳ್ಳಿ, ಬೆಂಗಳೂರಿನಲ್ಲಿ ವರದಿಗಾರರಾಗಿ ಕೆಲಸ ಮಾಡಿ, ಈಗ ಮೈಸೂರಿನಲ್ಲಿ ಜನಮಿತ್ರ ಪತ್ರಿಕೆ ವಿಶೇಷ ವರದಿಗಾರರಾಗಿದ್ದಾರೆ. ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಕೃತಿಗಳನ್ನು ರಚಿಸಿದ್ದಾರೆ.
ಮಂಗಳೂರು : ಯಕ್ಷ ಪಕ್ಷದ “ಸರಯೂ ಸಪ್ತಾಹ” ಹಾಗೂ ಸರಯೂ ಇಪ್ಪತ್ತೈದರ ಪ್ರಯುಕ್ತ “ಯಕ್ಷ ರಜತ” ಎಂಬ ಸ್ಮರಣ ಸಂಚಿಕೆಯ ಲೋಕಾರ್ಪಣಾ ಸಮಾರಂಭವು ದಿನಾಂಕ 26 ಮೇ 2025ರಂದು ಮಂಗಳೂರಿನ ಕದ್ರಿ ದೇವಸ್ಥಾನದ ಆವರಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಎಸ್. ಪ್ರದೀಪ ಕುಮಾರ್ ಕಲ್ಕೂರ ಮಾತನಾಡಿ “ಯಕ್ಷಗಾನವು ಇಂದು ಹಲವು ಆಯಾಮಗಳಿಂದ ತನ್ನನ್ನು ತಾನು ತೆರೆದುಕೊಂಡು ಬೆಳೆಯುತ್ತಿದೆ. ಯಾವುದೇ ಭಾಷೆಗಳಲ್ಲಿ ಯಕ್ಷಗಾನವನ್ನು ಪ್ರದರ್ಶಿಸಿದರೂ ಅದು ತನ್ನ ಮೂಲ ಸೊಗಡನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ಹಸ್ತಾಂತರಿಸಲ್ಪಡುತ್ತದೆ. ಸರಯೂ ತಂಡದಂತಹ ತಂಡಗಳು ಚಿಣ್ಣರನ್ನು ಈ ಕ್ಷೇತ್ರದಲ್ಲಿ ಕುಣಿಸಿ – ದಣಿಸಿ ಕಲಾವಿದರನ್ನಾಗಿಸುತ್ತಾರೆ. ಇಪ್ಪತ್ತೈದು ವರ್ಷಗಳಿಂದ ಸರಯೂ ಬೆಳೆದದ್ದನ್ನು ಯಕ್ಷ ಪ್ರಪಂಚ ಕಂಡಿದೆ. ಹರ್ಷ ತಂದಿದೆ. ಹೀಗೆಯೇ ಬೆಳೆಯುತ್ತಾ ಇರಲಿ” ಎಂದು ಆಶಿಸಿದರು. ಸರಯೂ ಇಪ್ಪತ್ತೈದರ ಪ್ರಯುಕ್ತ “ಯಕ್ಷ ರಜತ” ಎಂಬ ಸ್ಮರಣ ಸಂಚಿಕೆಯನ್ನು ಕರ್ಮಯೋಗಿ, ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಲೋಕಾರ್ಪಣೆಗೊಳಿಸಿದರು. ಸಮಾರಂಭದಲ್ಲಿ ಖ್ಯಾತ ಯಕ್ಷಗಾನ ಸ್ತ್ರೀ ಪಾತ್ರಧಾರಿ, ಪಾವಂಜೆ…
ಮಂಗಳೂರು : ಸೋಮೇಶ್ವರ ಕೊಲ್ಯದಲ್ಲಿರುವ ನಾಟ್ಯನಿಕೇತನ (ರಿ.) ಅರ್ಪಿಸುವ ‘ಕರ್ನಾಟಕ ರಾಜ್ಯೋತ್ಸವ’, ‘ಶಾಂತಲಾ ನಾಟ್ಯ’ ಪ್ರಶಸ್ತಿ’ ಪುರಸ್ಕೃತ ನೃತ್ಯ ಗುರು ನಾಟ್ಯಾಚಾರ್ಯ ಶ್ರೀ ಉಳ್ಳಾಲ ಮೋಹನ್ ಕುಮಾರ್ ಇವರ 90ನೇ ವರ್ಷಾಚರಣೆಯ ಪ್ರಯುಕ್ತ ನೃತ್ಯಶ್ರೀ ಸರಣಿ-ಮಾಲಿಕೆ 16 ‘ನಾಟ್ಯ ಮೋಹನ ನವತ್ಯುತ್ಸಹ’ ಕಾರ್ಯಕ್ರಮವನ್ನು ದಿನಾಂಕ 28 ಮೇ 2025ರಂದು ಸಂಜೆ 5-30 ಗಂಟೆಗೆ ಕೊಲ್ಯದ ನಾಟ್ಯನಿಕೇತನ ನೃತ್ಯಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಕಲಾತಿಲಕ ನಾಟ್ಯಾಚಾರ್ಯ ಶ್ರೀ ಉಳ್ಳಾಲ್ ಮೋಹನ್ ಕುಮಾರ್ ಇವರಿಂದ ದೇವತಾ ದೀಪ ಪ್ರಜ್ವಲನೆಯೊಂದಿಗೆ ಪ್ರಾರಂಭವಾಗುವ ಈ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಡಾ. ನವೀನ್ ಎನ್. ಕೋಣಾಜೆ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಂಗಳೂರಿನ ನಾಟ್ಯ ವಿದುಷಿ ವಾಸವಿ ಕುಂಬ್ಳೆಕಾರ್ ಇವರು ನೃತ್ಯ ಪ್ರಸ್ತುತಿ ನೀಡಲಿದ್ದಾರೆ.
ಮೂಡುಬಿದಿರೆ : ತೆಂಕುತಿಟ್ಟು ಯಕ್ಷಗಾನ ರಂಗದಲ್ಲಿ 42 ವರ್ಷಗಳ ಸೇವಾನುಭವದೊಂದಿಗೆ ಇದೀಗ ಅರುವತ್ತರ ಸಂಭ್ರಮದಲ್ಲಿರುವ ಸುಬ್ರಾಯ ಹೊಳ್ಳ ಇವರನ್ನು ಅಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಪಾವಂಜೆ ಮೇಳದ ಬಯಲಾಟದ ರಂಗಸ್ಥಳದಲ್ಲಿ ದಿನಾಂಕ 24 ಮೇ 2025 ಶನಿವಾರ ನಡೆದ ಯಕ್ಷಧ್ರುವ ಪಟ್ಲ ಫೌಂಡೇಶನ್ ಮೂಡುಬಿದಿರೆ ಘಟಕದ 9ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಮ್ಮಾನಿಸಲಾಯಿತು. ಪಟ್ಲ ಫೌಂಡೇಶನ್ ಕೇಂದ್ರೀಯ ಸಮಿತಿ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ ಶೆಟ್ಟಿ, ಮೂಡುಬಿದಿರೆ ಘಟಕದ ಗೌರವಾಧ್ಯಕ್ಷ ಕೆ. ಶ್ರೀಪತಿ ಭಟ್, ಅಧ್ಯಕ್ಷ ದಿವಾಕರ ಶೆಟ್ಟಿ ಖಂಡಿಗ ಬೆಳುವಾಯಿ, ಉಪಾಧ್ಯಕ್ಷ ಸುಬ್ರಹ್ಮಣ್ಯ ಭಟ್, ಕೇಂದ್ರೀಯ ಸಮಿತಿ ಟ್ರಸ್ಟಿ ಪ್ರೇಮನಾಥ ಮಾರ್ಲ, ಗಣ್ಯರಾದ ಉದ್ಯಮಿ ತಿಮ್ಮಯ್ಯ ಶೆಟ್ಟಿ, ಜಗದೀಶ ಅಧಿಕಾರಿ, ಸುದರ್ಶನ ಎಂ. ಇವರು ಸುಬ್ರಾಯ ಹೊಳ್ಳ ಇವರನ್ನು ಶಾಲು, ಹಾರ, ಪೇಟ, ಫಲವಸ್ತು, ಸಮ್ಮಾನ ಪತ್ರ, ಸ್ಮರಣಿಕೆ ಹಾಗೂ ಗೌರವ ಧನ ಸಹಿತ ಸಮ್ಮಾನಿಸಿದರು. ಸಮ್ಮಾನಿತರನ್ನು ಶಾಂತರಾಮ ಕುಡ್ವ ಇವರು ಪರಿಚಯಿಸಿ ಅಭಿನಂದಿಸಿ “ಪುತ್ತೂರು, ಕಟೀಲು, ಕದ್ರಿ, ಬಪ್ಪನಾಡು, ಎಡನೀರು,…
ಬೆಂಗಳೂರು : ‘ಮಂಟಪ’ ತಂಡ ಇದರ ವತಿಯಿಂದ ‘ವಚನಗಳ ಸಂಯೋಜನೆ’ ಕಾರ್ಯಕ್ರಮವನ್ನು ದಿನಾಂಕ 28 ಮೇ 2025ರಂದು ಸಂಜೆ 6-00 ಗಂಟೆಗೆ ಆರ್.ವಿ. ದಂತ ವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಜಯನಗರದ ಶೈಕ್ಷಣಿಕ ಸಾಧನೆ ಮೆರೆದ ಯುವ ಸಾಧಕರನ್ನು ಗೌರವಿಸುವ ಒಂದು ವಿಶೇಷ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಬಸವಣ್ಣ, ಅಕ್ಕ ಮಹಾದೇವಿ ಮತ್ತು ಅಲ್ಲಮ ಪ್ರಭುಗಳ ಗಹನ ಕಾವ್ಯ ಪ್ರಸ್ತುತಿ ನಡೆಯಲಿದ್ದು, ಎಂ.ಡಿ. ಪಲ್ಲವಿ ಇವರ ಗಾಯನಕ್ಕೆ ಎಸ್.ಆರ್. ರಾಮಕೃಷ್ಣ ಹಾರ್ಮೋನಿಯಂನಲ್ಲಿ, ರೋಹಿತ್ ಪಿ.ಎಸ್. ಡ್ರಮ್ಮರ್, ಕೃಷ್ಣ ಕುಮಾರ್ ಜೆಂಬೇ, ಕ್ಯಾಲೆಬ್ ಅಲೆಕ್ಸಾಂಡರ್ ಬೇಯ್ಸ್ ಗಿಟಾರ್ ಮತ್ತು ಅಕ್ಷತಾ ಕೃಷ್ಣನ್ ಎಲೆಕ್ಟ್ರಿಕ್ ಪಿಯಾನೋದಲ್ಲಿ ಸಾಥ್ ನೀಡಲಿದ್ದಾರೆ.
ಉಡುಪಿ : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್, ಮಣಿಪಾಲ ನೀಡುವ ಕಡೆಂಗೋಡ್ಲು ಕಾವ್ಯ ಪ್ರಶಸ್ತಿಗೆ ಧಾರವಾಡದ ಲೇಖಕಿ ಡಾ. ಪ್ರಜ್ಞಾ ಮತ್ತಿಹಳ್ಳಿ ಇವರ ‘ಬೆಳದಿಂಗಳ ಸೋನೆಮಳೆ’ ಕವನಸಂಕಲನ ಆಯ್ಕೆಯಾಗಿದೆ. ಈ ಪ್ರಶಸ್ತಿಯು ರೂಪಾಯಿ 10,000 ನಗದು ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭವು ಆಗಸ್ಟ್ ತಿಂಗಳಲ್ಲಿ ನಡೆಯಲಿದೆ. ಡಾ. ಪ್ರಜ್ಞಾ ಮತ್ತಿಹಳ್ಳಿ ಮೂಲತ: ಉತ್ತರ ಕನ್ನಡ ಜಿಲ್ಲೆಯ ಶಿರಸಿಯವರು. ಎಂ.ಕಾಂ, ಎಂ.ಫಿಲ್, ಎಂ. ಬಿ. ಎ., ಪಿ. ಎಚ್. ಡಿ. ಪದವೀಧರರಾದ ಇವರು ವಾಣಿಜ್ಯ ಶಾಸ್ತ್ರ ಉಪನ್ಯಾಸಕಿಯಾಗಿ, ಪ್ರಾಧ್ಯಾಪಕಿಯಾಗಿ ಹಲವಾರು ಸರಕಾರಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರ ಅನೇಕ ಕವನ, ಕತೆ, ಕವಿತೆ, ಪ್ರಬಂಧ, ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡು ಬಹುಮಾನಗಳಿಸಿವೆ. ಕೇಂದ್ರ ಸಾಹಿತ್ಯ ಅಕಾಡೆಮಿಯು ಶಿಲ್ಲಾಂಗನಲ್ಲಿ ಏರ್ಪಡಿಸಿದ ಬರಹಗಾರರ ರಾಷ್ಟ್ರಮಟ್ಟದ ಸಮ್ಮೇಳನದಲ್ಲಿ ಕಥಾವಾಚನ, ದಸರಾ ಪ್ರಧಾನ ಕವಿಗೋಷ್ಠಿಯಲ್ಲಿ ಕವಿತೆ ವಾಚನ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರವಾಸ ಅನುದಾನ ಯೋಜನೆಯಲ್ಲಿ ಆಯ್ಕೆಯಾಗಿ…
ಕಾರ್ಕಳ : ಶಾರದಾ ಮಹಿಳಾ ಮಂಡಲದ ಅಧ್ಯಕ್ಷೆ ಸಾವಿತ್ರಿ ಮನೋಹರ ಇವರ ಹಾಗೂ ಪುತ್ರಿ ಸ್ವಾತಿ ಅಜಿತ್ ಶರ್ಮರವರ ಕೃತಿ ಬಿಡುಗಡೆ ಕಾರ್ಯಕ್ರಮವನ್ನು ದಿನಾಂಕ 19 ಮೇ 2025ರಂದು ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆ ಹಾಗೂ ಶಾರದಾ ಮಹಿಳಾ ಮಂಡಳಿ ಅನಂತಶಯನ ಇವುಗಳ ಸಹಭಾಗಿತ್ವದಲ್ಲಿ ಪೆರ್ವಾಜೆ ಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು. ನಿವೃತ್ತ ಮುಖ್ಯೋಪಾಧ್ಯಾಯಿನಿ ಸಾವಿತ್ರಿ ಮನೋಹರರವರು ತಮ್ಮ ಕೃತಿಯ ಕುರಿತು ಅನಿಸಿಕೆಗಳನ್ನು ಹಂಚಿಕೊಂಡರು. ಇವರ ‘ಮಾನನಿಧಿ ಮೌನವಾದ’ ಎಂಬ ನಾಟಕ ಕೃತಿಯನ್ನು ಲೇಖಕಿ ಡಾ. ಜಾನಕಿ ಸುಂದರೇಶ್ ಬಿಡುಗಡೆ ಮಾಡಿ ಕೃತಿಯ ಕುರಿತು ಮಾತನಾಡಿದರು. ಸ್ವಾತಿ ಅಜಿತ್ ಶರ್ಮರವರ ‘ಪಂಜರದೊಳಗಿನ ಪಕ್ಷಿ’ ಚೊಚ್ಚಲ ಕವನ ಸಂಕಲನವನ್ನು ಇವರ ಹೆತ್ತವರಾದ ನಿವೃತ್ತ ಮುಖ್ಯೋಪಾಧ್ಯಾಯರಾದ ಮನೋಹರ ರಾವ್ ಹಾಗೂ ಸಾವಿತ್ರಿ ಮನೋಹರರವರು ಲೋಕಾರ್ಪಣೆ ಮಾಡಿದರು. ಸ್ವಾತಿ ಅಜಿತ್ ಶರ್ಮ ತಮ್ಮ ಕೃತಿಯ ಕುರಿತು ಮಾತನಾಡಿದರು. ನಿವೃತ್ತ ಅಧ್ಯಾಪಕಿ ಸುಲೋಚನ ತಿಲಕ್ ‘ಪಂಜರದೊಳಗಿನ ಪಕ್ಷಿ’ ಕೃತಿಯ ಕುರಿತು ಮಾತನಾಡಿದರು. ಅಧ್ಯಕ್ಷತೆಯನ್ನು ಜಾಗೃತಿಯ ಅಧ್ಯಕ್ಷೆ ಪ್ರೊ. ಮಿತ್ರಪ್ರಭಾ ಹೆಗ್ಡೆ…
ಕುಂದಾಪುರ : ಅರೆಹೊಳೆ ಪ್ರತಿಷ್ಠಾನ, ನಂದಗೋಕುಲ ಮತ್ತು ರಂಗರಥ (ರಿ.) ಇವುಗಳ ಸಹಯೋಗದಲ್ಲಿ 45 ದಿನಗಳ ವಸತಿ ಸಹಿತಿ ‘ರಂಗ ಶಿಕ್ಷಣ’ವನ್ನು ಜುಲೈ ತಿಂಗಳ ಎರಡನೇ ವಾರದಲ್ಲಿ ಅರೆಹೊಳೆಯ ನಂದಗೋಕುಲ ರಂಗಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ನುರಿತ ನಿರ್ದೇಶಕರು ಮತ್ತು ಶಿಕ್ಷಕರಿಂದ ನಡೆಯುವ 45 ದಿನಗಳ ಸರ್ಟಿಫಿಕೇಟ್ ಕೋರ್ಸ್ ನ ಒಂದು ಬ್ಯಾಚ್ ನಲ್ಲಿ ಗರಿಷ್ಠ 14 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ. ಪ್ರವೇಶ ಪತ್ರ, ಶುಲ್ಕ ಮತ್ತಿತರ ವಿವರಗಳಿಗೆ 9632794477 ಮತ್ತು 7019290983 ಸಂಖ್ಯೆಯನ್ನು ಸಂಪರ್ಕಿಸಿರಿ.
ಬಂಟ್ವಾಳ : ಕಲ್ಲಡ್ಕ ಸಮೀಪ ಬಾಳ್ತಿಲ ಗ್ರಾಮದ ಚೆಂಡೆಯಲ್ಲಿ ಶ್ರೀ ಕಲ್ಲುರ್ಟಿ ದೈವಸ್ಥಾನ ಹಾಗೂ ಪುಳಿಂಚ ಸೇವಾ ಪ್ರತಿಷ್ಠಾನ ಜಂಟಿ ಆಶ್ರಯದಲ್ಲಿ ಪ್ರಸಿದ್ಧ ಯಕ್ಷಗಾನ ಕಲಾವಿದ ಬೆಜ್ಜದಗುತ್ತು ದಿ. ಪುಳಿಂಚ ರಾಮಯ್ಯ ಶೆಟ್ಟಿ ಅವರ ಸ್ಮರಣಾರ್ಥ ಬೊಳ್ನಾಡುಗುತ್ತು ದಿ. ಸರೋಜಿನಿ ರಾಮಯ್ಯ ಶೆಟ್ಟಿ ಪುಳಿಂಚ ವೇದಿಕೆಯಲ್ಲಿ ದಿನಾಂಕ 24 ಮೇ 2025ರಂದು ನಡೆದ ಪಂಚಮ ತ್ರೈವಾರ್ಷಿಕ ‘ಪುಳಿಂಚ ಪ್ರಶಸ್ತಿ ಪ್ರದಾನ ಹಾಗೂ ಮಂಗಳೂರು ಪುಳಿಂಚ ಚಿಟ್ಸ್ (ಒಪಿಸಿ) ಪ್ರೈ. ಲಿಮಿಟೆಡ್ ನ ದಶಮ ಸಂಭ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ಇದರ ಸಂಚಾಲಕ ಕಲ್ಲಡ್ಕ ಪ್ರಭಾಕರ ಭಟ್ ಕಾಂವ “ಭಾರತದಲ್ಲಿ ಹಿಂದೂವಾಗಿ ಹುಟ್ಟುವುದು ಪುಣ್ಯವಾಗಿದ್ದು, ಧರ್ಮ ಪ್ರಸಾರಕ್ಕೆ ಯಕ್ಷಗಾನ ಅತ್ಯಮೂಲ್ಯ ಕೊಡುಗೆ ನೀಡಿದೆ. ಯಕ್ಷಗಾನಕ್ಕೆ ಪುಳಿಂಚ ರಾಮಯ್ಯ ಶೆಟ್ಟರ ಸೇವೆ ಸ್ಮರಣೀಯವಾಗಿದ್ದು, ಆ ಪರಂಪರೆಯನ್ನು ಪುತ್ರ ಶ್ರೀಧರ ಶೆಟ್ಟಿ ಪುಳಿಂಚ ಮತ್ತವರ ಪತ್ನಿ ಮುಂದುವರಿಸುತ್ತಿರುವುದು ಶ್ಲಾಘನೀಯವಾಗಿದೆ” ಎಂದು ಅವರು ಹೇಳಿದರು. ಸಮಾರಂಭದಲ್ಲಿ ಪ್ರೊ. ಭಾಸ್ಕರ…
ಕಾರ್ಕಳ : ಕೆ. ಬಾಲಕೃಷ್ಣ ರಾವ್ ಇವರು ಬರೆದಿರುವ ‘ಪಥ’ ಕಾದಂಬರಿ ಬಿಡುಗಡೆ ಕಾರ್ಯಕ್ರಮವು ದಿನಾಂಕ 22 ಮೇ 2025ರಂದು ಕಾರ್ಕಳ ಸಾಹಿತ್ಯ ಸಂಘದಲ್ಲಿ ನಡೆಯಿತು. ಕಾದಂಬರಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಮಂಗಳೂರು ಆಕಾಶವಾಣಿಯ ವಿಶ್ರಾಂತ ನಿಲಯ ನಿರ್ದೇಶಕ ಡಾ. ವಸಂತ್ ಕುಮಾರ್ ಪೆರ್ಲ “ಕಾದಂಬರಿಯು ನಮ್ಮ ಜೀವನದ ಕನ್ನಡಿ, ಇದು ಸಮಾಜವನ್ನು ಒಂದುಗೂಡಿಸುವ ಸರಪಳಿಯ ಕೊಂಡಿ. ಇಂದು ನಾವು ಸಂಬಂಧಗಳ ಕೊಂಡಿಯನ್ನು ಕಳೆದುಕೊಂಡಿದ್ದೇವೆ. ಒಂದೇ ಮನೆಯಲ್ಲಿದ್ದರೂ ಅಪರಿಚಿತರಾಗಿ ಬದುಕುತ್ತಿದ್ದೇವೆ. ಮಕ್ಕಳು ಒಂದು ಕಡೆ, ತಂದೆ ತಾಯಿ ಇನ್ನೊಂದು ಕಡೆ. ಹೀಗೆ ಬೇರೆ ಬೇರೆ ಕಡೆ ಚದುರಿ ಹೋಗಿರುವುದರಿಂದ ಭಾವನೆಗಳಿಗೆ ಬೆಲೆ ಇಲ್ಲದಾಗಿದೆ. ಮನೆಯೊಳಗೂ ಸದಸ್ಯರು ಮಾತನಾಡಬೇಕಿದ್ರೆ ಮೊಬೈಲ್ ನಲ್ಲಿಯೇ ಮಾತನಾಡುವ ಸಮಯ ಇದಾಗಿದೆ. ಕೆ. ಬಾಲಕೃಷ್ಣ ರಾವ್ ಬರೆದ ಕಾದಂಬರಿಯು ಇಂದಿನ ಸಮಾಜಕ್ಕೆ ಎಚ್ಚರಿಕೆಯ ಕರೆಗಂಟೆ ಆಗಿದೆ. ಇವರು ಬರೆದ ‘ಪಥ’ ಕಾದಂಬರಿ ತನ್ನದೇ ಆದ ಶೈಲಿಯನ್ನು ಹೊಂದಿದ್ದು, ಈ ಕಾದಂಬರಿಯಲ್ಲಿ ಬರುವ ಪಾತ್ರಗಳು ನಮ್ಮ ಸುತ್ತ ನಡೆಯುವ ಘಟನೆಗಳನ್ನು ಪ್ರತಿಬಿಂಬಿಸುತ್ತವೆ.…