Author: roovari

ಮಂಗಳೂರು : ಶ್ರೀ ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘದ ವತಿಯಿಂದ ಇತ್ತೀಚೆಗೆ ನಿಧನರಾದ ನಾಗೇಶ ಪ್ರಭುಗಳ ಶೃದ್ಧಾಂಜಲಿ ಕಾರ್ಯಕ್ರಮ ಮೌರಿಷ್ಕ ಪಾರ್ಕ್ ನಲ್ಲಿ ದಿನಾಂಕ 21-02-2024ರಂದು ನಡೆಯಿತು. ಶ್ರೀ ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘವನ್ನು 30 ವರ್ಷಗಳ ಕಾಲ ಮುನ್ನಡೆಸಿದ ಬಗ್ಗೆ ಸಂಘದ ಪ್ರಧಾನ ಕಾರ್ಯದರ್ಶಿ ಸಂಜಯ ಕುಮಾರ್ ವಿವರ ನೀಡಿದರು. ಯಾವುದೇ ಕಷ್ಟಗಳು ಎದುರಾದರೂ ಅವನ್ನೆಲ್ಲ ನಿವಾರಿಸಿಕೊಂಡು ಯಕ್ಷಗಾನ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸುತ್ತಾ ನುಡಿ ನಮನ ಸಲ್ಲಿಸಿದರು. ಬಿ.ಸಿ. ರೋಡಿನಲ್ಲಿ ನಾಗೇಶ ಪ್ರಭುಗಳೇ ಸ್ಥಾಪಿಸಿದ್ದ ಶ್ರೀ ರಾಮ ಯಕ್ಷಗಾನ ಸಂಘದ ಸಂಜೀವ ಶೆಟ್ಟಿಯವರು ಮಾತನಾಡಿ ಪ್ರಭುಗಳು ಭಾಗವತರಾಗಿ, ಮದ್ದಳೆವಾದಕರಾಗಿ, ಅರ್ಥಧಾರಿಯಾಗಿ ಸಲ್ಲಿಸಿದ ಸೇವೆಯನ್ನು ನೆನಪಿಸಿ ಅವರ ಆತ್ಮಕ್ಕೆ ಶಾಂತಿಯನ್ನು ಕೋರಿದರು. ಇಸ್ಕಾನ್ ಕಾರ್ಯದರ್ಶಿ ಸನಂದನ ದಾಸ ಪ್ರಭುಗಳು ನಾಗೇಶ ಪ್ರಭುಗಳ ಅಪಾರವಾದ ಪುರಾಣ ಜ್ಞಾನದ ಬಗ್ಗೆ ಹೇಳಿ, ಧಾರ್ಮಿಕತೆಯನ್ನು ಮೈಗೂಡಿಸಿಕೊಂಡಿದ್ದ ಕಾರಣ ನಾಗೇಶರಿಗೆ ಶ್ರೀ ಕೃಷ್ಣ ಸದ್ಗತಿಯನ್ನು ನೀಡಲಿ ಎಂದು ಹಾರೈಸಿದರು. ದೇರಾಜೆ ಸೀತಾರಾಮಯ್ಯರ ಒಡನಾಡಿಯಾಗಿದ್ದ, ಯಕ್ಷಗಾನ…

Read More

ಮಂಗಳೂರು : ಅಸ್ತಿತ್ವ (ರಿ.) ಮಂಗಳೂರು ಹಾಗೂ ರಂಗ ಅಧ್ಯಯನ ಕೇಂದ್ರ, ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ) ಇದರ ರಂಗ ತಿರುಗಾಟ ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ನಡೆಯಲಿದೆ. ಸುಮಾರು 8 ನಾಟಕಗಳ 40ಕ್ಕೂ ಹೆಚ್ಚು ಪ್ರದರ್ಶನಗಳು ಈ ಎರಡು ತಿಂಗಳುಗಳಲ್ಲಿ ನಡೆಯಲಿದೆ. ಅಸ್ತಿತ್ವ ತಂಡ ಕಳೆದ ಎಂಟು ವರ್ಷಗಳಿಂದ ‘ಸುವಾರ್ತೆ ಭೊಂವ್ಡಿ’ ಎಂಬ ಶೀರ್ಷಿಕೆಯಲ್ಲಿ ನಾಟಕಗಳನ್ನು ಪ್ರದರ್ಶನ ನೀಡುತ್ತಾ ಬಂದಿದೆ. ಈವರೆಗೆ ಸುಮಾರು 12 ನಾಟಕಗಳ 250ಕ್ಕೂ ಹೆಚ್ಚು ಪ್ರದರ್ಶನಗಳನ್ನು ದೇಶ ವಿದೇಶದಲ್ಲಿ ಪ್ರದರ್ಶನ ಕಂಡಿವೆ. ಈ ವರ್ಷದ ತಿರುಗಾಟಕ್ಕೆ ಸಂತ ಅಲೋಶಿಯಸ್ ಕಾಲೇಜಿನ ರಂಗತಂಡದ ಸಹಭಾಗಿತ್ವ ಕೂಡ ಇದ್ದು, ಡಿಪ್ಲೋಮಾ ವಿಧ್ಯಾರ್ಥಿಗಳ ನಾಟಕ ‘ದಾದ್ಲ್ಯಾಂ ಮಧೆಂ ತುಂ ಸದೆಂವ್’ ಎಂಬ ನಾಟಕವೂ ಈ ತಿರುಗಾಟದಲ್ಲಿ ಪ್ರದರ್ಶನಗೊಳ್ಳುತ್ತಲಿದೆ. ಅಸ್ತಿತ್ವ ತಂಡದ ಮುಖ್ಯಸ್ಥರಾದ ವಂದನೀಯ ಡಾಕ್ಟರ್ ಆಲ್ವಿನ್ ಸೆರಾವೊರವರು ಬಹುತೇಕ ನಾಟಕಗಳನ್ನು ರಚಿಸಿದ್ದು, ರಂಗ ಅಧ್ಯಯನ ಕೇಂದ್ರದ ನಿರ್ದೇಶಕರಾದ ಕ್ರಿಸ್ಟಿ ಈ ತಿರುಗಾಟದ ಸಂಯೋಜಕರಾಗಿದ್ದಾರೆ. ಈ ತಿರುಗಾಟಕ್ಕೆ ಕನ್ನಡ…

Read More

ಗಾಯನ ಸಮಾಜದ ವೇದಿಕೆಯ ಮೇಲೆ ಅಂದು ಮಧುಮಿತ ರವೀಂದ್ರ ವೀರಾಂಜನೇಯನ ಪ್ರತಿರೂಪವಾಗಿ, ಕೆಚ್ಚೆದೆಯ ಕಲಿ ಆತ್ಮವಿಶ್ವಾಸದಿಂದ ಸಮುದ್ರಲಂಘನ ಮಾಡಿ ಸೀತಾಮಾತೆಯನ್ನು ದರ್ಶಿಸಿ, ರಾವಣನ ಸಮ್ಮುಖ ತನ್ನ ಬಾಲವನ್ನು ಸುತ್ತಿ ಸಿಂಬಿ ಹೆಣೆದು ತನ್ನದೇ ಆದ ಸಿಂಹಾಸನ ನಿರ್ಮಿಸಿಕೊಂಡು ಎದೆಯುಬ್ಬಿಸಿ, ಅವನಿಗೆ ಸರಿಮಿಗಿಲಾಗಿ ಕುಳಿತು, ರಾವಣನ ಹತ್ತುತಲೆಗಳನ್ನು ನೋಡಿ ಲೇವಡಿಮಾಡಿ, ತನ್ನ ಬಾಲಕ್ಕೆ ಹಚ್ಚಿದ ಬೆಂಕಿಯಿಂದ ಇಡೀ ಲಂಕೆಯನ್ನು ಸುಟ್ಟು, ಚೈತನ್ಯಪೂರ್ಣವಾದ ತನ್ನ ವ್ಯಕ್ತಿತ್ವವನ್ನು ಸಾಬೀತುಪಡಿಸಿದ.  ಶ್ರೀರಾಮನ ಭಕ್ತಿ ತಾದಾತ್ಮ್ಯತೆಯಿಂದ ಮೈಮರೆತು ಕುಣಿದು, ಮಂಡಿ ಅಡವುಗಳಿಂದ ರಂಗಾಕ್ರಮಣದಲ್ಲಿ ವಿಜ್ರುಂಭಿಸಿದ ವೀರಹನುಮನ ಯೋಗದ ಭಂಗಿಗಳಿಂದ ರೋಮಾಂಚಗೊಳಿಸಿ, ಲೀಲಾಜಾಲವಾಗಿ ಅಷ್ಟೇ ಸುಮನೋಹರವಾಗಿ ನರ್ತಿಸಿದ ಮಧುಮಿತಳ ನುರಿತ ನಾಟ್ಯಾಭಿನಯ ಕಲಾರಸಿಕರಲ್ಲಿ ವಿಸ್ಮಯವನ್ನುಂಟು ಮಾಡಿತು. ಕಣ್ಮನ ಸೆಳೆದ ಪ್ರಸ್ತುತಿ ಅವಳ ರಂಗಪ್ರವೇಶದ ಮೊದಲಹೆಜ್ಜೆಗಳು ಅನಿಸಲೇ ಇಲ್ಲ. ಕಿರುತೆರೆ ಅಭಿನೇತ್ರಿ ಹಾಗೂ ನೃತ್ಯಾಚಾರ್ಯ ವಿ. ನಮಿತಾ ದೇಸಾಯಿ ಅವರ ಮನೋಹರ ನೃತ್ಯ ಸಂಯೋಜನೆಯಲ್ಲಿ ರೂಪುಗೊಂಡ ಕೃತಿಗಳನ್ನು ಅಂಗಶುದ್ಧವಾಗಿ ಯಾವ ಅರೆಕೊರೆಯಿಲ್ಲದೆ, ಮಿಂಚಿನ ಸಂಚಾರದ ನೃತ್ತ-ಮನೋಹರ ‘ಕರಣ’ಗಳಿಂದ ಸಾಕ್ಷಾತ್ಕರಿಸಿ ಮಿಂಚಿದ್ದಳು. ನಗುಮೊಗ…

Read More

ಹೈದರಾಬಾದ್ : ಭಾರತ ಸರ್ಕಾರದ ಮಾನ್ಯತೆ ಪಡೆದಿರುವ ತೆಲಂಗಾಣದ ಕ್ರಾಫ್ಟ್ ಕೌನ್ಸಿಲ್ ಸಂಸ್ಥೆಯು ಕೊಡ ಮಾಡುವ ‘ಶ್ರೀಮತಿ ಪಿಂಗಳೆ ಕಮಲಾರೆಡ್ಡಿ ಎಕ್ಸಲೆನ್ಸ್ ಇನ್ ಕ್ರಾಫ್ಟ’ ರಾಷ್ಟ್ರೀಯ ಪುರಸ್ಕಾರವು ಕೊಂಕಣ ತೀರ ಪ್ರದೇಶದ ಕಾವಿ ಕಲೆಯ ಉಳಿವು ಮತ್ತು ಬೆಳೆಸುವಿಕೆಗೆ ಸುಮಾರು 20 ವರ್ಷಗಳಿಂದಲೂ ಸತತವಾಗಿ ಶ್ರಮಿಸುತ್ತಿರುವ ಡಾ. ಜನಾರ್ದನ ಹಾವಂಜೆಯವರಿಗೆ ದಿನಾಂಕ 22-02-2024ರಂದು ಲಭಿಸಿದೆ. ಮಾಜಿ ಚಯರ್ಮೆನ್ ಉಷಾ ಸರ್ವರಾಯಲು, ಚಯರ್ಮೆನ್ ಅನುರಾಧಾ ಬಿಷನೊಯಿ, ಪಿಂಗಳೆ ನೀಲ ರೆಡ್ಡಿ ಹಾಗೂ ಕ್ರಾಫ್ಟ್ ಕೌನ್ಸಿಲ್ ನ ಅರ್ಜುನ್ ನಾರ್ಣೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮಂಗಳೂರಿನ ಶ್ರೀನಿವಾಸ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಹಾಗೂ ಮಣಿಪಾಲದ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಮತ್ತು ಸೈನ್ಸ್ ಇಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ (ವಿಸಿಟಿಂಗ್) ಹಾವಂಜೆಯವರು ಇಂದಿಗೆ ಅಳಿದು ಹೋಗುತ್ತಿರುವ ಈ ದೇಶಿಯ ಕಾವಿ ಕಲೆಯ ಉಳಿವಿಗಾಗಿ ಜಾಗತಿಕ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾವಿ ಕಲೆಯ ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಿಸುವ ಕಾರ್ಯವನ್ನು ನಡೆಸುತ್ತಾ ಹಲವಾರು ಕಾರ್ಯಾಗಾರಗಳು, ಶಿಬಿರಗಳು, ಕಲಾ ಪ್ರದರ್ಶನಗಳು…

Read More

ಮಂಗಳೂರು : ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ ಹಾಗೂ ಸನ್ಮಾನ ಕಾರ್ಯಕ್ರಮವು ದಿನಾಂಕ 21-02-2024ರ ಬುಧವಾರದಂದು ಮಂಗಳೂರಿನ ಉರ್ವದಲ್ಲಿರುವ ಪ್ರೆಸ್ ಕ್ಲಬ್ ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅಂತರಾಷ್ಟ್ರೀಯ ಖ್ಯಾತಿಯ ಜಾದೂಗಾರ ಕುದ್ರೋಳಿ ಗಣೇಶ್  “ಮನರಂಜನೆ ಜತೆಗೆ ವಿಸ್ಮಯ ಮೂಡಿಸುವ ಜಾದೂ ಕೂಡಾ ಸಾಂಸ್ಕೃತಿಕ ಕಲೆಯಾಗಿದೆ. ಕೇಂದ್ರದ ನಾಟಕ ಅಕಾಡೆಮಿ ಪಟ್ಟಿಯಲ್ಲಿ ಜಾದೂವಿಗೆ ಸ್ಥಾನ ನೀಡಿದ್ದು, ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪಟ್ಟಿಯಲ್ಲಿಯೂ ಜಾದೂ ಸೇರ್ಪಡೆಯಾಗಬೇಕು. ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ವಹಿಸಬೇಕು. ಸಂಗೀತ, ನೃತ್ಯ, ಯಕ್ಷಗಾನದಂತೆ ಜಾದೂ ಕೂಡಾ ಸಾಂಸ್ಕೃತಿಕ ಕಲೆಯಾಗಿದೆ. ನಶಿಸಿ ಹೋಗುತ್ತಿರುವ ಈ ಕಲೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ನೀನಾಸಂ, ರಂಗಾಯಣ ಮಾದರಿಯ ತರಬೇತಿ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಇತರ ಕಲೆಗಳಂತೆ ಜಾದೂವನ್ನು ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಒಟ್ಟಾಗಿ ಕಲಿಸಲು ಸಾಧ್ಯವಿಲ್ಲ. ಜಾದೂ ಕಲಿಯುವ ವಿದ್ಯಾರ್ಥಿಯಲ್ಲಿ ಮೆದುಳು ಮತ್ತು ಕೈಚಳಕದ ಜತೆಗೆ ಸಮರ್ಪಣಾ ಮನೋಭಾವ ಅಗತ್ಯ. ಜಾದೂ ಕಲೆ ಸಿದ್ಧಿಸಿಕೊಳ್ಳಬೇಕೆಂದರೆ ಕನಿಷ್ಠ ಆರೇಳು…

Read More

ಮಂಗಳೂರು : ಕೊಂಕಣಿ ಲೇಖಕ್ ಸಂಘ ಕರ್ನಾಟಕ ಇವರ 2024ನೇ ಸಾಲಿನ ‘ಕೊಂಕಣಿ ಲೇಖಕ್  ಸಂಘ್’ ಪ್ರಶಸ್ತಿಯನ್ನು ಕೊಂಕಣಿ ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಡಾ. ಜೆರಿ ನಿಡ್ಡೋಡಿಯವರಿಗೆ ದಿನಾಂಕ 17-02-2024 ರಂದು ಮಂಗಳೂರಿನ ಸಂದೇಶ ಪ್ರತಿಷ್ಠಾನದಲ್ಲಿ ನಡೆದ ಸಮಾರಂಭದಲ್ಲಿ ನೀಡಲಾಯಿತು. ಪ್ರಶಸ್ತಿಯು ಸ್ಮರಣಿಕೆ, ಸಮ್ಮಾನಪತ್ರ ಹಾಗೂ 25 ಸಾವಿರ ರೂಪಾಯಿ ನಗದನ್ನು ಒಳಗೊಂಡಿದೆ. ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಮಂಗಳೂರು ಧರ್ಮಪ್ರಾಂತದ ಸೆಮಿನರಿಯ ರೆಕ್ಟರ್ ವಂ. ಡಾ.  ರೊನಾಲ್ಡ್‌ ಸೆರಾವೊ “ಪ್ರತಿಯೊಂದು ಸಮುದಾಯಕ್ಕೆ ಅವರದ್ದೇ ಆದ ಸಂಸ್ಕೃತಿ ಇರುವಂತೆ ಕೊಂಕಣಿ ಭಾಷಿಕರಿಗೂ ಒಂದು ಸಂಸ್ಕೃತಿ ಇದೆ. ಇದು ತಲೆತಲಾಂತರದಿಂದ ಬಂದಿದ್ದು ಪರಿವರ್ತನಾಶೀಲವಾಗಿದೆ. ಬದಲಾವಣೆ ಪ್ರಕೃತಿ ನಿಯಮ. ಹಾಗಿರುವಾಗ ಸಮಾಜದೊಡಗಿನ ಮಧುರ ಬಾಂಧವ್ಯಕ್ಕಾಗಿ ಸಮಾನತೆಯನ್ನು ಗುರುತಿಸಿ ಕೊಳ್ಳುವುದು ಅಗತ್ಯ. ಬದಲಾವಣೆಯ ಬಿರುಗಾಳಿಯಲ್ಲಿ ನಮ್ಮ ಸಂಸ್ಕೃತಿ ಹಾಗೂ ಸಂಪ್ರದಾಯದ ಉತ್ತಮ ಅಂಶಗಳನ್ನು ಉಳಿಸಿಕೊಂಡು, ಭಾಷೆ ನಾಡು ನುಡಿಯ ಸಂಸ್ಕೃತಿಯ ಬೇರುಗಳೊಂದಿಗೆ ಉಳಿಯುವುದು ನಮ್ಮ ಜವಾಬ್ದಾರಿ. ಸಾಹಿತಿಗಳು ಇದಕ್ಕೆ ಮಹತ್ತರ ಕೊಡುಗೆ ನೀಡುತ್ತಾರೆ.…

Read More

ಮಂಗಳೂರು : ಸಂಗೀತ ಪರಿಷತ್ ಮಂಗಳೂರು ಇದರ ತ್ರಿಂಶತಿ ಸಂಭ್ರಮದ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಭಾರತೀಯ ವಿದ್ಯಾ ಭವನ ಮಂಗಳೂರು ಇವರ ಸಹಯೋಗದೊಂದಿಗೆ ದಿನಾಂಕ 24-02-2024ರಂದು ಕೊಡಿಯಾಲ್‌ ಬೈಲ್‌ನ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ‘ಕರ್ನಾಟಕ ಸಂಗೀತ ಕಛೇರಿ’ಯನ್ನು ಹಮ್ಮಿಕೊಳ್ಳಲಾಗಿದೆ. ಸಂಜೆ 4 ಗಂಟೆಗೆ ಉಡುಪಿಯ ಮಾಸ್ಟರ್ ಪ್ರಣವ ಅಡಿಗ ಇವರ ಕೊಳಲು ವಾದನಕ್ಕೆ ಮಂಗಳೂರಿನ ಶ್ರೀ ಗೌತಮ್ ಭಟ್ ಪಿ.ಜಿ. ವಯೋಲಿನ್ ಮತ್ತು ಕಟೀಲಿನ ಶ್ರೀ ಶೈಲೇಶ್ ರಾವ್ ಇವರು ಮೃದಂಗ ಸಾಥ್ ನೀಡಲಿದ್ದಾರೆ. ಸಂಜೆ ಗಂಟೆ 5ರಿಂದ ಮೂಝಿಕುಳಂ ಶ್ರೀ ವಿವೇಕ್ ಇವರ ಹಾಡುಗಾರಿಕೆಗೆ ಬೆಂಗಳೂರಿನ ಶ್ರೀ ಕೇಶವ ಮೋಹನ್ ಕುಮಾರ್ ವಯೋಲಿನ್, ಮಂಗಳೂರಿನ ಶ್ರೀ ಸುನಾದಕೃಷ್ಣ ಅಮೈ ಮೃದಂಗ ಹಾಗೂ ಪುತ್ತೂರಿನ ಶ್ರೀ ಬಾಲಕೃಷ್ಣ ಹೊಸಮನೆ ಮೋರ್ಸಿಂಗ್ ನಲ್ಲಿ ಸಹಕರಿಸಲಿದ್ದಾರೆ.

Read More

ಮಂಗಳೂರು : ಮಣಿ ಕೃಷ್ಣಸ್ವಾಮಿ ಅಕಾಡೆಮಿಯು ಆಚರಿಸಿಕೊಂಡು ಬರುತ್ತಿರುವ ‘ರಾಗ ಸುಧಾ ರಸ ಸಂಗೀತೋತ್ಸವ’ವು ಮಂಗಳೂರಿನ ಪುರಭವನದಲ್ಲಿ ದಿನಾಂಕ 15-02-2024ರಿಂದ 17-02-2024ರವರೆಗೆ ನಡೆಯಿತು. ದಿನಾಂಕ 17-02-2024ರಂದು ಕರ್ನಾಟಕ ಸಂಗೀತ ಕಲಾವಿದೆ ಶ್ರುತಿ ಎಸ್. ಭಟ್ ಇವರಿಗೆ ಈ ಬಾರಿಯ ‘ಯುವ ಕಲಾಮಣಿ’ ಪ್ರಶಸ್ತಿ ನೀಡಲಾಯಿತು. ಶೋಭಿತ ಭಟ್ ಮತ್ತು ಆಶ್ವೀಜಾ ಉಡುಪ (ಸ್ವರಾಂಜಲಿ ಸಹೋದರಿಯರು) ಅವರಿಗೆ ಚೆನ್ನೈಯ ಮಣಿ ಕೃಷ್ಣಸ್ವಾಮಿ ಫೌಂಡೇಶನ್ ಕೊಡಮಾಡುವ ಮಣಿ ಮತ್ತು ಎಂ.ಕೆ. ವಾರ್ಷಿಕ ಪ್ರಶಸ್ತಿ’, ನಾದಸ್ವರ ವಾದಕ ವಿದ್ವಾನ್ ಲಿಂಗಪ್ಪ ಎಸ್. ಅವರಿಗೆ ‘ಎ ಈಶ್ವರಯ್ಯ ಸ್ಮರಣಾರ್ಥ ಪ್ರಶಸ್ತಿ’, ಚೆನ್ನೈಯ ಮಧುರಧ್ವನಿ ಸಂಸ್ಥೆಯ ಸ್ಥಾಪಕರು ಆರ್.ಕೆ. ರಾಮಕೃಷ್ಣನ್ ಅವರಿಗೆ ‘ಲಲಿತಕಲಾ ಪೋಷಕ ಮಣಿ ಪ್ರಶಸ್ತಿ’ ನೀಡಲಾಯಿತು. ಹಿರಿಯ ಮೃದಂಗ ಗುರು ವಿದ್ವಾನ್ ಕುಕ್ಕಿಲ ಶಂಕರ್ ಭಟ್ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಇದೇ ಸಂದರ್ಭ ಯುವ ಕಲಾಸಂಘಟಕ ವಿಶ್ವಾಸ್ ಕೃಷ್ಣ ಅವರನ್ನು ಅಭಿನಂದಿಸಲಾಯಿತು. ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಗೌರವಾಧ್ಯಕ್ಷರಾದ ಡಾ. ಹರಿಕೃಷ್ಣ ಪುನರೂರು, ಅಧ್ಯಕ್ಷರಾದ ಕ್ಯಾ.…

Read More

“ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ” ಎನ್ನುವ ಕುವೆಂಪುರವರ ಸಾರ್ವಕಾಲಿಕ ಸಂದೇಶವನ್ನು ಆತ್ಮೀಯ ರಂಗಮಿತ್ರ ರಾತ್ರಿ 11 ಗಂಟೆಗೆ ವಾಟ್ಸಾಪಲ್ಲಿ ಕಳುಹಿಸಿದ್ದ. ರಾತ್ರಿ ಕಳೆದು ಇನ್ನೂ ಬೆಳಿಗ್ಗೆ ಆಗಿತ್ತಷ್ಟೇ ಈ ಜನ್ಮಕ್ಕಾಗುವಷ್ಟು ಕ್ರಿಯಾಶೀಲ ಕೆಲಸ ಮಾಡಿ ಯಾವ ಟೀಕೆಗೂ ಒಳಗಾಗದೇ ಬದುಕಿದ ಗೆಳೆಯ ಜಗದೀಶ್ ಕೆಂಗನಾಳ ದಿನಾಂಕ 18-02-2024ರಂದು ಜಗಕ್ಕೇ ವಿದಾಯ ಹೇಳಿ ಮರಳಿ ಬಾರದೂರಿಗೆ ಹೊರಟೇ ಹೋದ. “ಏಳೋ ಜಗದೀಶಾ ಎದ್ದೇಳೋ. ಇನ್ನೂ ನೀನು ಮಾಡಬೇಕಾದ ರಂಗಕಾರ್ಯ ಬೇಕಾದಷ್ಟಿದೆ, ಎದ್ದೇಳೋ” ಎಂದು ಶವಾಗಾರದ ಕಟ್ಟೆಯ ಮೇಲೆ ಅಂಗಾತ ಮಲಗಿದ್ದ ಆತನ ನಿಶ್ಚಲ ದೇಹವನ್ನು ಹಿಡಿದು ಅಲ್ಲಾಡಿಸಿ ಗೋಳಾಡಿದೆ. ಮನದಲ್ಲಿ ಗೆಳೆಯನ ಅಗಲಿಕೆಯ ಸಂಕಟ. ಆತ ಏಳುವ ಸ್ಥಿತಿಯಲ್ಲಿರಲಿಲ್ಲ ಎಂಬುದೂ ದಿಟ. ಅದು ಗೊತ್ತಿದ್ದೂ ಎದ್ದರೂ ಏಳಬಹುದೇನೋ ಎನ್ನುವ ಭ್ರಮೆ. ನಂಬುವುದೋ ಬಿಡುವುದೋ ಗೊತ್ತಿಲ್ಲ. ನನ್ನ ಕಣ್ಣಲ್ಲಿ ನೀರು ತೊಟ್ಟಿಕ್ಕಿದ್ದೇನೋ ಸಹಜ. ಆತನ ಕಣ್ಣಲ್ಲಿ ಕಣ್ಣಿಟ್ಟು ನೋಡಿದೆ, ಜಡವಾಗಿ ಮಲಗಿದವನ ಕಣ್ಣಲ್ಲೂ ನೀರಿನ ಪಸೆ. ಹೃದಯದ ಬಡಿತ ನಿಂತರೇನಾಯ್ತು ಮೆದುಳು ಇನ್ನೂ ಜೀವಂತವಾಗಿರುತ್ತದಂತೆ.…

Read More

ಉಳ್ಳಾಲ : ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ (ರಿ.) ಆಯೋಜಿಸುವ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವವು ದಿನಾಂಕ 24-02-2024ರಂದು ಉಳ್ಳಾಲದ ಮಹಾತ್ಮ ಗಾಂಧಿ ರಂಗಮಂದಿರದಲ್ಲಿ ನಡೆಯಲಿದೆ. ಕರ್ನಾಟಕ ಸರಕಾರದ ಶಾಸಕರು ಹಾಗೂ ಸಭಾಪತಿಗಳಾದ ಶ್ರೀ ಯು.ಟಿ. ಖಾದರ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮಂಗಳೂರಿನ ವೀರರಾಣಿ ಅಬ್ಬಕ್ಕ ಜೈನ ಮಹಿಳಾ ಸಂಘದ ಕಾರ್ಯದರ್ಶಿ ಹಾಗೂ ಮೂಡಬಿದಿರೆ ಚೌಟರ ಅರಮನೆಯ ಡಾ. ಅಕ್ಷತಾ ಆದರ್ಶ್ ಜೈನ್ ಉತ್ಸವವನ್ನು ಉದ್ಘಾಟಿಸಲಿದ್ದು, ಖ್ಯಾತ ಚಲನಚಿತ್ರ ಹಾಗೂ ರಂಗಭೂಮಿ ಕಲಾವಿದೆಯಾದ ಶ್ರೀಮತಿ ಸರೋಜಿನಿ ಎಸ್. ಶೆಟ್ಟಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಾಗೂ ಉಳ್ಳಾಲ ನಗರಸಭೆಯ ಪೌರಾಯುಕ್ತರಾದ ಶ್ರೀಮತಿ ವಾಣಿ ವಿ. ಆಳ್ವ ಸಾಹಿತ್ಯ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕರ್ನಾಟಕ ವಿಧಾನಪರಿಷತ್ ಸದಸ್ಯರು ಹಾಗೂ ಭರವಸೆ ಸಮಿತಿಯ ಅಧ್ಯಕ್ಷರಾದ ಶ್ರೀ ಬಿ.ಯಂ. ಫಾರೂಕ್ ಆಶಯ ನುಡಿಗಳನ್ನಾಡಲಿದ್ದು, ಕನ್ನಡ ಸಾಹಿತ್ಯ ಪರಿಷತ್ತು ದ. ಕ. ಜಿಲ್ಲೆ ಇದರ ಮಾಜಿ ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ ಶುಭಾಶಂಸನೆಗೈಯಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ…

Read More