Subscribe to Updates
Get the latest creative news from FooBar about art, design and business.
Author: roovari
ಉಡುಪಿ : ಭಾವನಾ ಪೌಂಡೇಶನ್(ರಿ.) ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಗ್ರಾಮೀಣ ಭಾಗದಲ್ಲಿ ಸಂಯೋಜಿಸಿದ ಬಾಲ ಲೀಲಾ ಚಿಣ್ಣರ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವು ದಿನಾಂಕ 13 ಏಪ್ರಿಲ್ 2025ರಂದು ಹಾವಂಜೆಯ ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಚಿತ್ರಕಲಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಉಡುಪಿ ವಿಶ್ವನಾಥ ಶೆಣೈ ಪ್ರಾಯೋಜಿತ “ವಿಶ್ವ ಕಲಾ ಸಿಂಧು” ಪುರಸ್ಕಾರವನ್ನು ಆರ್ಟಿಸ್ಟ್ ಫೋರಂ ಇದರ ಅಧ್ಯಕ್ಷರಾದ ರಮೇಶ್ ರಾವ್ ಇವರಿಗೆ ನೀಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶ್ರೀಯುತರು “ಚಿತ್ರಕಲೆ ಮಕ್ಕಳ ಮನಸ್ಸನ್ನು ಹದಗೊಳಿಸಲು ಬಹು ಮುಖ್ಯವಾದ ಕಲಾಪ್ರಕಾರ ಅಂತೆಯೇ ಚಿಣ್ಣರು ಸೃಜನಶೀಲರಾಗಿರಬೇಕಾದುದೂ ಮುಖ್ಯ. ಗ್ರಾಮೀಣ ಭಾಗದಲ್ಲಿ ಈ ತೆರನಾದ ಚಟುವಟಿಕೆಗಳು ಇಂದಿಗೆ ಅತ್ಯವಶ್ಯಕ” ಎಂಬುದಾಗಿ ಅಭಿಪ್ರಾಯಪಟ್ಟರು. ಭಾವನಾ ಪುರಸ್ಕಾರವನ್ನು ಸ್ವೀಕರಿಸಿದ ಹಿರಿಯ ಪತ್ರಕರ್ತರಾದ ನಾಗರಾಜ್ ವರ್ಕಾಡಿ ಮಾತನಾಡಿ “ಈ ಪುರಸ್ಕಾರವು ನಮ್ಮ ಕಾರ್ಯ ಕ್ಷೇತ್ರದ ಜವಾಬ್ದಾರಿಯನ್ನು ಹೆಚ್ಚಿಸುವ ಒಂದು ಎಚ್ಚರಿಕೆ. ಅಂತೆಯೇ ಇನ್ನಷ್ಟು ರಂಗಭೂಮಿ ವಲಯದಲ್ಲಿ ಕಾರ್ಯವನ್ನು ಮಾಡಲು ಪ್ರೇರಣೆ”…
ಉಡುಪಿ : ಹಿರಿಯ ಸಾಹಿತಿ ಕು. ಗೋ. (ಗೋಪಾಲಕೃಷ್ಣ ಭಟ್) ಇವರ ‘ಕು. ಗೋ. ಸಮಗ್ರ ಸಾಹಿತ್ಯ’ ಕೃತಿಯ ಲೋಕಾರ್ಪಣಾ ಸಮಾರಂಭವು ದಿನಾಂಕ 13 ಏಪ್ರಿಲ್ 2025ರ ಭಾನುವಾರದಂದು ಉಡುಪಿಯ ಇಂದ್ರಾಳಿಯಲ್ಲಿರುವ ಅವರ ನಿವಾಸ ‘ವಾಗ್ದೇವಿ’ಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಸಾಹಿತಿ ವಿ. ಗಣೇಶ ಮಾತನಾಡಿ “ಬರೆದ ಪುಸ್ತಕವನ್ನು ಕೊಂಡು ಓದುವುದೇ ಓದುಗರು ಲೇಖಕನಿಗೆ ನೀಡುವ ಕೊಡುಗೆಯಾಗಿದೆ. ಬರೆದಿದ್ದನ್ನು ಜನರು ಓದಿದಾಗ ಲೇಖಕನೂ ಸಂತೋಷಗೊಳ್ಳುತ್ತಾನೆ. ಹೆಸರು, ಪ್ರೀತಿ, ವಿಶ್ವಾಸ, ಸಾಹಿತ್ಯಾಭಿಮಾನಕ್ಕೆ ಕು. ಗೋ. ಹೆಸರುವಾಸಿ ಆಗಿದ್ದಾರೆ. ಸಾಹಿತ್ಯ ಇರುವವರೆಗೆ ಅವರು ಹಾಗೂ ಅವರ ಹಾಸ್ಯಪ್ರಜ್ಞೆ ಅಜರಾಮರ” ಎಂದು ಬಣ್ಣಿಸಿದರು. ಸಾಹಿತಿ ಡಾ. ಪಾದೇಕಲ್ಲು ವಿಷ್ಣು ಭಟ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕು. ಗೋ. ಇವರ ಮೊಮ್ಮಕ್ಕಳಾದ ಸಂತೃಪ್ತ ಹೆರ್ಗ, ಪ್ರತೀಕ್ಷಾ ಬಿ. ಹಾಗೂ ವಿಶ್ಲೇಶ ಭಟ್ ಇವರುಗಳು ಪುಸ್ತಕ ಲೋಕಾರ್ಪಣೆಗೊಳಿಸಿದರು. ಪುಸ್ತಕ ಪ್ರಕಾಶಕರಾದ ವಿ. ಎಸ್. ನಾಗಮಣಿ, ಸಾಹಿತಿ ಅಂಬ್ರಯ್ಯ ಮಠ ಉಪಸ್ಥಿತರಿದ್ದರು. ಉಡುಪಿ ತಾಲೂಕು ಕ.…
ತೆಕ್ಕಟ್ಟೆ : ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ ಸಂಸ್ಥೆಯು ತನ್ನ ಬೆಳ್ಳಿಹಬ್ಬದ ಅಂಗವಾಗಿ ಆಯೋಜಿಸಿದ ‘ಶ್ವೇತಯಾನ’ ಕಾರ್ಯಕ್ರಮದ 125ನೆಯ ಕಾರ್ಯಕ್ರಮವಾಗಿ ‘ಶ್ವೇತಯಾನ’ದ ಸಮಾರೋಪ ಸಮಾರಂಭ ‘ಮಧ್ಯಮಾವತಿ’ಯು ದಿನಾಂಕ 19 ಏಪ್ರಿಲ್ 2025ರಂದು ಸಂಜೆ ಘಂಟೆ 6.00ಕ್ಕೆ ತೆಕ್ಕಟ್ಟೆಯ ಕುವೆಂಪು ಶಾಲೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಮಾನಸಿ ಸುಧೀರ್ ನೇತೃತ್ವದ ನೃತ್ಯ ನಿಕೇತನ ಕೊಡವೂರು ತಂಡದಿಂದ ನೃತ್ಯೋಪಾಸನೆ ನಡೆಯಲಿದೆ.
ಧಾರವಾಡ : ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆ ಧಾರವಾಡದ 2024ನೇ ಸಾಲಿನ ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 20 ಏಪ್ರಿಲ್ 2025ನೇ ಭಾನುವಾರ ಬೆಳಗ್ಗೆ ಘಂಟೆ 10.00ಕ್ಕೆ ಧಾರವಾಡದ ಆರ್. ಎನ್. ಶೆಟ್ಟಿ ಕ್ರೀಡಾಂಗಣದ ಬಳಿ ಇರುವ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯಲಿದೆ. ಖ್ಯಾತ ಕಥೆಗಾರರು ಮತ್ತು ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆ ಧಾರವಾಡ ಇದರ ಅಧ್ಯಕ್ಷರಾದ ಪ್ರೊ. ಮಲ್ಲಿಕಾರ್ಜುನ ಹಿರೇಮಠ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಶ್ರೀ ಪ್ರಕಾಶ ಪುಟ್ಟಪ್ಪ ಇವರ ‘ಗಾಂಧಿ ಜೋಡಿನ ಮಳಿಗೆ’ ಕಥಾ ಸಂಕಲನಕ್ಕೆ ಮತ್ತು ಶ್ರೀ ಮಂಜುನಾಥ ಕುಣಿಗಲ್ ಇವರ ‘ದೂರ ದೇಶದ ದೇವರು’ ಕಥಾ ಸಂಕಲನಕ್ಕೆ ಧಾರವಾಡದ ಖ್ಯಾತ ಸಂಸ್ಕೃತ ವಿದ್ವಾಂಸರು ಮತ್ತು ಚಿಂತಕರಾದ ಡಾ. ಶ್ರೀರಾಮ ಭಟ್ಟ ಇವರು ‘ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿ 2024’ ಪ್ರದಾನ ಮಾಡಲಿದ್ದಾರೆ. ಧಾರವಾಡದ ಖ್ಯಾತ ಕಥೆಗಾರರಾದ ಪ್ರೊ. ರಾಘವೇಂದ್ರ ಪಾಟೀಲ ಇವರು ಪ್ರಶಸ್ತಿ ಪುರಸ್ಕೃತ ಕಥಾ ಸಂಕಲನಗಳನ್ನು ಲೋಕಾರ್ಪಣೆಗೊಳಿಸಲಿದ್ದಾರೆ.…
ಬಳ್ಳಾರಿ : ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿಯ 2023-24ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಮತ್ತು ವಿಶೇಷ ಮಹಾಸಭೆ 27 ಏಪ್ರಿಲ್ 2025ರ ಭಾನುವಾರ ಬೆಳಿಗ್ಗೆ 11.00 ಗಂಟೆಗೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ನಂದಿಹಳ್ಳಿಯಲ್ಲಿರುವ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಭಾಂಗಣದಲ್ಲಿ ನಡೆಯಲಿದೆ. ಸಭೆಯ ಅಧ್ಯಕ್ಷತೆಯನ್ನು ರಾಜ್ಯಾಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿ ವಹಿಸಲಿದ್ದು, ಪರಿಷತ್ತಿನ ಜಿಲ್ಲಾ ತಾಲೂಕು ಹಾಗೂ ಹೋಬಳಿ ಪದಾಧಿಕಾರಿಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರುಗಳು ಸಭೆಯಲ್ಲಿ ಪಾಲ್ಗೊಂಡು ವಾರ್ಷಿಕ ಮಹಾಸಭೆಯನ್ನು ಯಶಸ್ವಿಗೊಳಿಸಬೇಕಾಗಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ. ಪಿ. ಕೇಶವ ಕಾಮತ್ ವಿನಂತಿಸಿದ್ದಾರೆ.
ಕೋಟ : ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಮತ್ತು ಕೋಟದ ಸಾಲಿಗ್ರಾಮ ಮಕ್ಕಳ ಮೇಳವು ‘ಸುವರ್ಣ ಪರ್ವ’ದ ಸರಣಿ ಕಾರ್ಯಕ್ರಮವಾಗಿ ಎರಡು ದಿವಸಗಳ ಆಹ್ವಾನಿತ ತಂಡಗಳ ‘ಯಕ್ಷ ತ್ರಿವಳಿ’ ಯಕ್ಷೋತ್ಸವವು ದಿನಾಂಕ 17 ಎಪ್ರಿಲ್ 2025ರ ಗುರುವಾರ ಮತ್ತು 18 ಏಪ್ರಿಲ್ 2025ರ ಶುಕ್ರವಾರದಂದು ಕೋಟ ಮೂರ್ಕೈಯ ಹಂದೆ ಮಹಾ ವಿಷ್ಣು ವಿನಾಯಕ ದೇವಸ್ಥಾನದಲ್ಲಿ ನಡೆಯಲಿದೆ. ಮೊದಲ ದಿನ ಸಂಜೆ 5.30ಕ್ಕೆ ಅಕಾಡೆಮಿಯ ಅಧ್ಯಕ್ಷರಾದ ತಲ್ಲೂರು ಶಿವರಾಮ ಶೆಟ್ಟಿಯವರ ಸಭಾ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮದಲ್ಲಿ ಕುಂದಾಪುರದ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಕಿರಣ ಕುಮಾರ ಕೊಡ್ಗಿ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಸಮಾರಂಭದಲ್ಲಿ ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ, ಉದ್ಯಮಿ ಮೊಳಹಳ್ಳಿ ದಿನೇಶ್ ಹೆಗ್ಡೆ, ಗೀತಾನಂದ ಫೌಂಡೇಶನ್ ಇದರ ಪ್ರವರ್ತಕರಾದ ಆನಂದ ಸಿ. ಕುಂದರ್, ಉಡುಪಿ ಯಕ್ಷಗಾನ ಕಲಾರಂಗದ ಮುರಳಿ ಕಡೆಕಾರ್, ಕೋಟತಟ್ಟು ಪಂಚಾಯತ್ ಇದರ ಅಧ್ಯಕ್ಷರಾದ ಸತೀಶ್ ಬಾರಿಕೆರೆ, ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕ ನಿರ್ದೇಶಕ ಎಚ್. ಶ್ರೀಧರ ಹಂದೆ, ಅಧ್ಯಕ್ಷರಾದ ಬಲರಾಮ…
ಮೈಸೂರು : ಮಂಡ್ಯ ರಮೇಶ್ ನೇತೃತ್ವದ ‘ನಟನ ಮೈಸೂರು’ ಆಯೋಜಿಸುವ ‘ರಜಾ ಮಜಾ’ ಮಕ್ಕಳ ಬೇಸಿಗೆ ಶಿಬಿರವು ದಿನಾಂಕ 11 ಏಪ್ರಿಲ್ 2025ರಂದು ಮೈಸೂರಿನ ದಟ್ಟಗಳ್ಳಿಯ ಸುಪ್ರೀಮ್ ಪಬ್ಲಿಕ್ ಶಾಲೆಯಲ್ಲಿ ಉದ್ಘಾಟನೆಗೊಂಡಿತು. ನಟನದ 24ನೇ ವರ್ಷದ ಈ ಕಾರ್ಯಕ್ರಮವು ಮಕ್ಕಳು, ಪೋಷಕರು, ಅತಿಥಿಗಳ ಮುಂದೆ ಸಂಭ್ರಮದಿಂದ ಅನಾವರಣಗೊಂಡಿತು. ಅಲ್ಲಿ ವೃತ್ತಿ ರಂಗಭೂಮಿಯ ಹಿರಿಯ ಕಲಾವಿದರಿದ್ದರು, ಈ ತುತ್ತ ತುದಿಗೆ ಆಧುನಿಕ ರಂಗಭೂಮಿಯ ಡಿಪ್ಲೋಮಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿದ್ದರು, ಜನಪ್ರಿಯ ಹಿರಿಯ ಸಿನಿಮ ಕ್ರಿಯಾಶೀಲ ನಿರ್ದೇಶಕರಿದ್ದರು, ನಟನ ಯಾನದಿಂದ ಹೊರಟು ಹೋಟೆಲ್ ಉದ್ಯಮದಲ್ಲಿ ಮೇರು ಸಾಧಿಸಿದ ಮಾಲೀಕರಿದ್ದರು, ಶಿಕ್ಷಣ ತಜ್ಞರಿದ್ದರು. ಕಲಾವಿದ ಮನಸ್ಸಿನ ಪೋಷಕರು ಮಕ್ಕಳು ತುಂಬಿ ತುಳುಕಿದರು. ಪ್ರತಿಯೊಬ್ಬರೂ ಅವರ ಅನುಭವಗಳನ್ನು ಮಕ್ಕಳಿಗಾಗಿ ಹಂಚಿಕೊಳ್ಳುತ್ತಿದ್ದಾಗ ವಿಚಾರ, ವಿನೋದ, ಭಾವುಕತೆ ಮಕ್ಕಳ ಮನಸ್ಸಿನಲ್ಲಿ ಕನಸುಗಳಾಗಿ ಅರಳಿಕೊಳ್ಳುತ್ತಿದ್ದುದನ್ನು ತೀರಾ ಸಮೀಪದಲ್ಲಿ ಕಂಡೆ. ಮುಂದಿನ 26 ದಿನಗಳ ಶಿಬಿರದಲ್ಲಿ ಆ ಮಕ್ಕಳ ಅರ್ಥಪೂರ್ಣ ಕಲಿಕಾ ಸಂಭ್ರಮದ ನಾಂದಿಯಾಗಿ ಇಡೀ ಕಾರ್ಯಕ್ರಮ ಚೇತೋಹಾರಿಯಾಗಿತ್ತು ! ಹೊರಡುವ ಮುನ್ನ ಹಿರಿಯ…
ಬೆಂಗಳೂರು : ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ದಿನಾಂಕ 10 ಏಪ್ರಿಲ್ 2025ರಂದು ನಡೆದ ನಾಡಿನ ಸಾಹಿತಿಗಳು ಮತ್ತು ಸಾಂಸ್ಕೃತಿಕ ಪರಿಚಾರಕರಾದ ಡಾ. ರಾಮಲಿಂಗೇಶ್ವರಾ ಸಿಸಿರಾ ಇವರ ಬದುಕು-ಬರಹದ ಕುರಿತು ನಡೆದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ 2025ರ ಸಾಲಿನ ‘ಡಾ. ಸಿಸಿರಾ ಯುವ ಸಾಹಿತ್ಯ ಸಾಂಸ್ಕೃತಿಕ ಪ್ರಶಸ್ತಿ’ಯನ್ನು ನಾಡೋಜ ಪ್ರೊ. ಹಂಪನಾ, ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಹಾಗೂ ನಾಡೋಜ ಡಾ. ವೂಡೇ ಪಿ. ಕೃಷ್ಣ, ಖ್ಯಾತ ವಿಮರ್ಶಕರಾದ ಡಾ. ಬೈರಮಂಗಲ ರಾಮೇಗೌಡರು, ಹಿರಿಯ ಸಾಹಿತಿಗಳಾದ ಕೆ.ಎಂ. ರೇವಣ್ಣ, ಉಪನ್ಯಾಸಕರಾದ ಡಾ. ವಾದಿರಾಜ್, ಕವಯತ್ರಿ ಶ್ರೀಮತಿ ಶಾಂತಿ ವಾಸು ಹಾಗೂ ಡಾ. ರಾಮಲಿಂಗೇಶ್ವರಾ ಸಿಸಿರಾ ಇವರುಗಳು ಎಮ್. ರಮೇಶ ಕಮತಗಿ ಇವರಿಗೆ ಅವರ ಎಂಟು ವರ್ಷದ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಮುಖ ಪ್ರಶಸ್ತಿಗಳಲ್ಲೊಂದಾದ ‘ಕನ್ನಡ ಚಳವಳಿ ವೀರ ಸೇನಾನಿ ಮ. ರಾಮಮೂರ್ತಿ ದತ್ತಿ ಪ್ರಶಸ್ತಿ’ಗೆ ಮೈಸೂರಿನ ಕನ್ನಡ ಹೋರಾಟಗಾರ ಸ.ರ. ಸುದರ್ಶನ್ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ತಿಳಿಸಿದ್ದಾರೆ. ರಾಜ್ಯಾದ್ಯಂತ ಕನ್ನಡ ಚಳುವಳಿಗೆ ಶಕ್ತಿಯನ್ನು, ಹೋರಾಟದ ಸ್ಪೂರ್ತಿಯನ್ನು ತುಂಬಿದಂತಹ ಮ. ರಾಮಮೂರ್ತಿಯವರ ಹೆಸರಿನಲ್ಲಿ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ದತ್ತಿಯನ್ನು ಸ್ಥಾಪಿಸಿದ್ದು, ಕನ್ನಡ ನಾಡು, ನುಡಿ, ನೆಲ, ಜಲ, ಸಂಸ್ಕೃತಿಗಳ ರಕ್ಷಣೆಗೆ ಹಾಗೂ ಪ್ರಗತಿಗೆ ಶ್ರಮಿಸಿ ಎಲೆ ಮರೆಯ ಕಾಯಿಗಳಂತಿರುವ ಕನ್ನಡ ಕಾರ್ಯಕರ್ತರಿಗೆ ಈ ಗೌರವ ಸಲ್ಲಬೇಕೆಂದು ಆಶಿಸಿದ್ದಾರೆ. 2025ನೆಯ ಸಾಲಿಗೆ ಈ ಪುರಸ್ಕಾರಕ್ಕೆ ಪಾತ್ರರಾಗಿರುವ ಮೈಸೂರಿನ ಸ.ರ.ಸುದರ್ಶನ ಗೋಕಾಕ್ ಚಳುವಳಿಯ ಆರಂಭದಿಂದಲೂ ಕನ್ನಡ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡವರು, ಕನ್ನಡವನ್ನು ಶಿಕ್ಷಣ ಮಾಧ್ಯಮವಾಗಿಸಲು, ಕನ್ನಡಕ್ಕೆ ದೊರೆತ ಶಾಸ್ತ್ರೀಯ ಸ್ಥಾನಮಾನದ ಸದ್ಭಳಕೆ ಕುರಿತು ಹೀಗೆ ನಿರಂತರವಾಗಿ ಕನ್ನಡಪರ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆಡಳಿತ…
ಬೆಂಗಳೂರು : ವಿಜಯನಗರ ಬಿಂಬ (ರಿ.) ರಂಗ ಶಿಕ್ಷಣ ಕೇಂದ್ರ, ಮಕ್ಕಳ ವಿಭಾಗ ಅರ್ಪಿಸುವ ‘ಚಿಣ್ಣರ ಚಿತ್ತಾರ 2025’ದ ಪುಟಾಣಿಗಳಿಂದ ಎರಡು ಚೊಟಾಣಿ ನಾಟಕಗಳು, ಶಿಶುಗೀತೆಗಳ ಗಾಯನ ಮತ್ತು ಕಲಾಪ್ರದರ್ಶನವನ್ನು ದಿನಾಂಕ 14 ಏಪ್ರಿಲ್ 2025ರಂದು ಸಂಜೆ ಗಂಟೆ 5-3ಕ್ಕೆ ಹಂಪಿನಗರ ಚಿತ್ರಕೂಟ ಮಾಂಟೆಸ್ಸರಿಯಲ್ಲಿ ಆಯೋಜಿಸಲಾಗಿದೆ. ಮಕ್ಕಳ ಸಾಹಿತಿ ಶ್ರೀಮತಿ ಪ್ರೇಮಾ ಶಿವಾನಂದ್ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಡಾ. ಎಸ್.ವಿ. ಕಶ್ಯಪ್ ಇವರು ರಚಿಸಿರುವ ಡಾ. ಸುಷ್ಮಾ ಎಸ್.ವಿ. ಇವರ ನಿರ್ದೇಶನದಲ್ಲಿ ‘ಚಿರತೆ ಚರಿತೆ’ ಮತ್ತು ಡಾ. ಬೃಂದಾ ಇವರ ರಚನೆ ಮತ್ತು ನಿರ್ದೇಶನದಲ್ಲಿ ‘ಸಂಖ್ಯಾ ನಗರಿ’ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ.