Author: roovari

ಧಾರವಾಡ : ಧಾರವಾಡದ ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯು ನೀಡುವ 2023ನೇ ಸಾಲಿನ ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿಗೆ ಶ್ರೀಮತಿ ಕಾವ್ಯ ಕಡಮೆಯವರ ‘ತೊಟ್ಟು ಕ್ರಾಂತಿ’ ಕಥಾಸಂಕಲನದ ಹಸ್ತಪ್ರತಿಯು ಆಯ್ಕೆಯಾಗಿದೆ. ಖ್ಯಾತ ಲೇಖಕರಾದ ಡಾ. ನಾ. ದಾಮೋದರ ಶೆಟ್ಟಿ ಮತ್ತು ಡಾ. ಶ್ರೀಧರ ಬಳಗಾರ ಅವರು ತೀರ್ಪುಗಾರರಾಗಿದ್ದ ಇಬ್ಬರ ಸಮಿತಿಯು ಈ ಕಥಾಸಂಕಲನವನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಸ್ಪರ್ಧೆಗೆ ಬಂದಿದ್ದ ನಲವತ್ತಕ್ಕೂ ಹೆಚ್ಚಿನ ಹಸ್ತಪ್ರತಿಗಳ ಪೈಕಿ ಶ್ರೀ ಲಿಂಗರಾಜ ಸೊಟ್ಟಪ್ಪವರ ಇವರ ‘ಕೆಂಪು ನದಿ’, ಶ್ರೀಮತಿ ಮಧುರಾ ಕರ್ಣಂ ಅವರ ‘ಬೌದ್ಧಾವತಾರ’ ಮತ್ತು ಶ್ರೀಮತಿ ಅಕ್ಷತಾ ರಾಜ್ ಪೆರ್ಲ ಅವರ ‘ನಿನ್ನಿಕಲ್ಲು’ ಕಥಾಸಂಕಲನದ ಹಸ್ತಪ್ರತಿಗಳು ಕೊನೆಯ ಸುತ್ತನ್ನು ಪ್ರವೇಶಿಸಿದ್ದವು. ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ಪ್ರೊ. ಮಲ್ಲಿಕಾರ್ಜುನ ಹಿರೇಮಠ, ಮಹಾಪೋಷಕರಾದ ಡಾ. ಪ್ರಭಾಕರ್ ಎಚ್. ಸಿ, ಸಂಚಾಲಕರಾದ ಶ್ರೀ ವಿಕಾಸ ಹೊಸಮನಿ ಮತ್ತು ವೇದಿಕೆಯ ಸದಸ್ಯರು ಕಥಾ ಪ್ರಶಸ್ತಿ ಸ್ಪರ್ಧೆಯಲ್ಲಿ ವಿಜೇತರಾದ, ಅಂತಿಮ ಸುತ್ತು ಪ್ರವೇಶಿಸಿದ ಮತ್ತು ಭಾಗವಹಿಸಿದ ಕಥೆಗಾರರಿಗೆ…

Read More

ಕುಂದಾಪುರ : ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ 9ನೇ ವಾರ್ಷಿಕೋತ್ಸವ ಹಾಗೂ ‘ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ- 2024’ ಪ್ರದಾನ ಸಮಾರಂಭವು ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ದಿನಾಂಕ 28-01-2024ರಂದು ಜರಗಿತು. ಮಲ್ಟಿಟೆಕ್ ಅಟೋ ಪಾರ್ಟ್ಸ್ ದೊಡ್ಡಬಳ್ಳಾಪುರದ ಆಡಳಿತ ಪಾಲುದಾರ ನಾಗಭೂಷಣ ರಮೇಶ್ ಐತಾಳ್ ಉಪ್ಪಿನಕುದ್ರು ಅವರು ಅಕಾಡೆಮಿ ಕಟ್ಟಡದ ಆವರಣದಲ್ಲಿ ಸೋಲಾರ್ ದಾರಿದೀಪ ಹಾಗೂ ಏಣಿಯನ್ನು ಕೊಡುಗೆಯಾಗಿ ನೀಡಿ ಉದ್ಘಾಟಿಸಿದರು. ಮಾಹೆ ಮಣಿಪಾಲದ ಮಾಜಿ ಡೆಪ್ಯುಟಿ ರಿಜಿಸ್ಟ್ರಾರ್ ಟಿ. ರಂಗ ಪೈ ಕಾರ್ಯಕ್ರಮ ಉದ್ಘಾಟಿಸಿದರು. ಹಿರಿಯ ಯಕ್ಷಗಾನ ಚೆಂಡೆ ಕಲಾವಿದ ಯಳ್‌ಜಿತ್ ಸದಾನಂದ ಪ್ರಭು ಇವರಿಗೆ ‘ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ 2024’ನ್ನು ಪ್ರದಾನ ಮಾಡಲಾಯಿತು. ಮುಖ್ಯ ಅತಿಥಿಗಳಾಗಿ ಸ್ಮಾರಕ ಆಸ್ಪತ್ರೆ ಉಡುಪಿಯ ವೈದ್ಯಕೀಯ ಸಲಹೆಗಾರರಾದ ಡಾ. ಬಿ.ವಿ. ಬಾಳಿಗಾ, ಮನೋರೋಗ ತಜ್ಞ ಡಾ. ಪಿ.ವಿ. ಭಂಡಾರಿ, ಲೆಕ್ಕ ಪರಿಶೋಧಕ ಶಿವಾನಂದ ಪೈ ಮಂಗಳೂರು ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನ ಮದ್ದಲೆ…

Read More

ಮಂಗಳೂರು : ಸ್ವರಾನಂದ ಪ್ರತಿಷ್ಠಾನದ ‘ಹಿಂದೂಸ್ಥಾನಿ ಸಂಗೀತ ಬೈಠಕ್‌’ ಮಂಗಳೂರಿನ ಕಾರ್ ಸ್ಟ್ರೀಟ್ ಇಲ್ಲಿರುವ ಬಿ.ಇ.ಎಂ. ಹೈಸ್ಕೂಲಿನಲ್ಲಿ ದಿನಾಂಕ 27-01-2024ರಂದು ನಡೆಯಿತು. ಮಂಗಳೂರಿನ ಯುವಗಾಯಕ ಕೀರ್ತನ್ ನಾಯ್ಗ ಬಿಹಾಗ್ ಹಂಸಧ್ವನಿ ರಾಗಗಳ ಮೂಲಕ ಸಂಗೀತ ರಸಿಕರ ಪ್ರಶಂಸೆಗೆ ಪಾತ್ರರಾದರು. ಮಂಗಳೂರಿನ ಅಮಿತ್ ಕುಮಾ‌ರ್ ಬೇಂಗ್ರೆ ಅವರ ಶಿಷ್ಯರು. ಅವರಿಗೆ ಹಾರ್ಮೋನಿಯಂನಲ್ಲಿ ಪುತ್ತೂರಿನ ಕಿಶನ್ ಪ್ರಭು ಹಾಗೂ ತಬಲಾದಲ್ಲಿ ಬಾಯಾರಿನ ಆಶಯ್ ಕಲಾವಂತ್ಕರ್ ಸಾಥ್ ನೀಡಿದರು. ತಂಬೂರದಲ್ಲಿ ಸುಶಾನ್ ಸಾಲಿಯಾನ್ ಸಹಕರಿಸಿದರು. ಬಳಿಕ ಪುಣೆಯ ಪಂಡಿತ್‌ ವಿಜಯ ಕೋಪಾರ್ಕರ್ ಶಿಷ್ಯರಾದ ಮಂದಾರ್ ಗಾದ್ಗಿಲ್ ಅವರ ಗಾಯನ ಕಾರ್ಯಕ್ರಮ ನಡೆಯಿತು. ರಾಗ್ ಶ್ರೀ, ದುರ್ಗಾ, ಮಾಲ್ ಕಂಸ್, ಚಂದ್ರ ಕಂಸ್ ಹಾಗೂ ಭೈರವಿಗಳ ಬಂಧಿಶ್‌ಗಳನ್ನು ಸುಶ್ರಾವ್ಯವಾಗಿ ಹಾಡಿದರು. ದೀಪಕ್‌ ನಾಯಕ್ ಹರಿಕಂಡಿಗೆ ಹಾಗೂ ಶಶಿಕಿರಣ್ ಮಣಿಪಾಲ್ ತಬಲಾ ಹಾಗೂ ಹಾರ್ಮೋನಿಯಂನಲ್ಲಿ ಸಹಕರಿಸಿದರು. ತಂಬೂರದಲ್ಲಿ ನರಸಿಂಹ್ ಪೈ ಸಾಥ್ ನೀಡಿದರು.

Read More

ಉಳ್ಳಾಲ : ‘ಮೇಲ್ತೆನೆ’ ಸಂಘಟನೆ ಪ್ರಕಟಿಸಿದ ಕವಿ ಬಶೀರ್ ಅಹ್ಮದ್ ಕಿನ್ಯಾ ರಚಿಸಿರುವ ‘ಕವಿಯಲ್ಲ-ನಾನೊಬ್ಬ ಹಾಡುಗಾರ’ ಕವನ ಸಂಕಲನವು ತೊಕ್ಕೊಟ್ಟು ಜಂಕ್ಷನ್‌ನಲ್ಲಿರುವ ಉಳ್ಳಾಲ ಪ್ರೆಸ್‌ಕ್ಲಬ್‌ನಲ್ಲಿ ದಿನಾಂಕ 01-02-2024ರಂದು ಲೋಕಾರ್ಪಣೆಗೊಂಡಿತು. ಈ ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆಗೊಳಿಸಿದ ಅಬುಧಾಬಿಯ ಬ್ಯಾರೀಸ್ ವೆಲ್ಫೇರ್ ಫೋರಂನ ಸ್ಥಾಪಕಾಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ ಮಾತನಾಡುತ್ತಾ “ಪ್ರಸಕ್ತ ದಿನಗಳಲ್ಲಿ ಅಧಿಕ ಸಂಖ್ಯೆಯ ಬ್ಯಾರಿ ಲೇಖಕ-ಲೇಖಕಿಯರು ಸಾಹಿತ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಕನ್ನಡ ಸಾರಸ್ವತ ಲೋಕದಲ್ಲಿ ಈ ಬ್ಯಾರಿ ಬರಹಗಾರರು ಯಾಕೆ ಕಾಣಿಸುತ್ತಿಲ್ಲ, ಗುರುತಿಸಿಕೊಂಡಿಲ್ಲ? ಬ್ಯಾರಿ ಸಮುದಾಯದಲ್ಲೇ ಹುಟ್ಟಿ ಬೆಳೆದ ಸಾಹಿತಿಗಳಾದ ಬೊಳುವಾರು ಮುಹಮ್ಮದ್ ಕುಂಞಿ, ಫಕೀರ್ ಮುಹಮ್ಮದ್ ಕಟ್ಪಾಡಿ ಕನ್ನಡ ಸಾರಸ್ವತ ಲೋಕದಲ್ಲಿ ನಿರೀಕ್ಷೆಗೂ ಮೀರಿ ಸಾಧಿಸಿದ್ದಾರೆ. ಆದರೆ ಆ ಮಟ್ಟಕ್ಕೆ ಇತರ ಬ್ಯಾರಿ ಲೇಖಕ-ಲೇಖಕಿಯರು ಇನ್ನೂ ಯಾಕೆ ಬೆಳೆದಿಲ್ಲ. ಬಶೀರ್ ಅಹ್ಮದ್ ಕಿನ್ಯಾ ಸಾತ್ವಿಕ ಕವಿ. ಸಂವೇದನಾಶೀಲ ಬರಹಗಾರ. ಆದರೆ ಪ್ರೋತ್ಸಾಹದ ಕೊರತೆಯಿಂದ ಅವರ ಸಹಿತ ಹಲವಾರು ಬ್ಯಾರಿ ಬರಹಗಾರರು ಹಿಂದೆ ಬಿದ್ದಿದ್ದಾರೆ. ಅಂತಹವರನ್ನು ಪ್ರೋತ್ಸಾಹಿಸುವ ಜವಾಬ್ದಾರಿ ನಮ್ಮದಾಗಿದೆ” ಎಂದು…

Read More

ಮೂಡುಬಿದಿರೆ: ಮೂಡುಬಿದಿರೆಯ ಶಿವರಾಮ ಕಾರಂತ ಪ್ರತಿಷ್ಠಾನವು ಕೊಡಮಾಡುವ ‘ಶಿವರಾಮ ಕಾರಂತ ಪುರಸ್ಕಾರ’ಕ್ಕೆ ಕೃತಿಗಳನ್ನು ಆಹ್ವಾನಿಸಿದೆ. 2019ರಿಂದ 2023ರ ಅವಧಿಯಲ್ಲಿ ಪ್ರಕಟವಾದ ಯಾವುದೇ ಪ್ರಕಾರದ ಕೃತಿಗಳನ್ನು ಪ್ರಕಾಶಕರು ಅಥವಾ ಲೇಖಕರು ಕಳುಹಿಸಬಹುದು. ಪುರಸ್ಕಾರವು ಪ್ರಶಸ್ತಿ ಫಲಕ ಮತ್ತು ರೂಪಾಯಿ10 ಸಾವಿರ ನಗದು ಬಹುಮಾನ ಒಳಗೊಂಡಿದೆ. ಆಸಕ್ತರು ಗ್ರಂಥಗಳ ಮೂರು ಪ್ರತಿಗಳನ್ನು 07-03-2024ರ ಒಳಗಾಗಿ ಶಿವರಾಮ ಕಾರಂತ ಪ್ರತಿಷ್ಠಾನ, ಕನ್ನಡ ಭವನ, ಮೂಡುಬಿದಿರೆ, ದಕ್ಷಿಣ ಕನ್ನಡ ಜಿಲ್ಲೆ 574227 ಈ ವಿಳಾಸಕ್ಕೆ ಕಳುಹಿಸಬಹುದು.

Read More

ಸುಬ್ರಹ್ಮಣ್ಯ : ಉಡುಪಿ ಮುದ್ರಾಡಿ ನಮ ತುಳುವೆರ್ ಕಲಾ ಸಂಘಟನೆ ಮತ್ತು ಶ್ರೀ ಸುಬ್ರಹ್ಮಣ್ಯ ಮಠದ ಸಹಯೋಗದಲ್ಲಿ ನಮ ತುಳುವೆ‌ರ್ ಸಂಘಟನೆಯ ಸುವರ್ಣ ಕರ್ನಾಟಕ ಕಾರ್ಯಕ್ರಮದ ಅಂಗವಾಗಿ ಸುವರ್ಣ ಕರ್ನಾಟಕ ರಂಗ ಅಭಿಯಾನ ಮತ್ತು ನಾಟಕ ಪ್ರದರ್ಶನ ಕಾರ್ಯಕ್ರಮವು ಸುಬ್ರಹ್ಮಣ್ಯದ ಶ್ರೀ ವನದುರ್ಗಾದೇವಿ ಸಭಾಭವನದಲ್ಲಿ ದಿನಾಂಕ 27-01-2024ರಂದು ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಸುಬ್ರಹ್ಮಣ್ಯ ಮಠದ ದಿವಾನ ಸುದರ್ಶನ ಜೋಯಿಸ ಮಾತನಾಡಿ “ನಾಟಕಗಳು ನಮ್ಮ ಕಲೆಯನ್ನು ಯುವ ಪೀಳಿಗೆಗೆ ತಿಳಿಸುವ ಮಾಧ್ಯಮವಾಗಿದೆ. ಆಧುನಿಕ ಜನತೆ ನಮ್ಮ ಕಲಾ ಸಂಸ್ಕೃತಿಯತ್ತ ಹೆಚ್ಚು ಆಕರ್ಷಿತರಾಗುವುದು ಅತ್ಯವಶ್ಯಕ. ಭಾರತೀಯ ಕಲಾ ಪ್ರಕಾರಗಳು ಮನಸ್ಸಿಗೆ ಮುದ ನೀಡುವ ಶ್ರೇಷ್ಠ ಕಾರ್ಯವನ್ನು ಮಾಡುತ್ತದೆ. ಅಲ್ಲದೆ, ಬದುಕಿನಲ್ಲಿ ಶಾಂತಿ ನೆಮ್ಮದಿ ಪ್ರಗತಿಯಾಗಲು ನಮ್ಮ ಕಲೆಗಳ ಪಾತ್ರ ಅನನ್ಯವಾಗಿದೆ. ಸುಂದರ ಮನಸ್ಸುಗಳ ನಿರ್ಮಾಣದಲ್ಲಿ ನಾಟಕದ ಪಾತ್ರ ಅಮೋಘ. ನಾಟಕಗಳು ನಮ್ಮ ಪಾರಂಪರಿಕ ಕಲೆಗಳನ್ನು ಎತ್ತಿ ಹಿಡಿಯುತ್ತದೆ” ಎಂದು ಹೇಳಿದರು. ಕಲಾವಿದ ಕೆ. ಯಜ್ಞೇಶ್ ಆಚಾರ್, ನಿವೃತ್ತ ಮುಖ್ಯ ಗುರು ಶ್ರೀಕೃಷ್ಣ…

Read More

ಮಂಗಳೂರು : ವಿಪ್ರವೇದಿಕೆ ಕೋಡಿಕಲ್ ಇದರ ವತಿಯಿಂದ ಶ್ರೀ ರಾಮ ತಾರಕ ಮಂತ್ರ ಸಹಿತ ನೃತ್ಯ ಯಕ್ಷ ನಮನ ಕಾರ್ಯಕ್ರಮವು ದಿನಾಂಕ 21-01-2024ರಂದು ಕೋಡಿಕಲ್ ಬೆನಕ ಸಭಾಭವನದಲ್ಲಿ ಸಂಪನ್ನಗೊಂಡಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ವೇದಮೂರ್ತಿ ವಿಶ್ವಕುಮಾರ ಜೋಯಿಸರು ಮಾತನಾಡಿ “ಪ್ರಭು ಶ್ರೀ ರಾಮಚಂದ್ರ ಮನುಕುಲಕ್ಕೆ ಬದುಕಿನಲ್ಲಿ ಮಾನವತೆಯ ಚೌಕಟ್ಟಿನಲ್ಲಿ ಕಾಣಿಸಿಕೊಂಡು ಎಲ್ಲರಿಗೂ ಮಾದರಿಯಾಗುವಂತಹ ನೆಲದ ಮೇಲಿನ ಕಲ್ಯಾಣ ಗುಣಗಳನ್ನು ಪ್ರದರ್ಶಿಸಿದ ಆದರ್ಶ ಸ್ವರೂಪಿ. ಮನುಷ್ಯ ಜನ್ಮದ ಆದರ್ಶಗಳನ್ನು ಪಾಲಿಸಿ ಬದುಕನ್ನು ಒಂದು ಉದಾಹರಣೆಯಾಗಿ ತೋರಿಸಿಕೊಟ್ಟಿರುವ ಮಹಾನ್ ಪುರುಷ. ಪ್ರತಿಯೊಬ್ಬ ಮನುಷ್ಯನೂ ಶ್ರೀ ರಾಮಚಂದ್ರನ ಆದರ್ಶ ಗುಣಗಳನ್ನು ಪಾಲಿಸಿಕೊಂಡಾಗ ರಾಮರಾಜ್ಯ ಸಾಕಾರಗೊಳ್ಳಲು ಸಾಧ್ಯ” ಎಂದರು. ಕಾರ್ಯಕ್ರಮದಲ್ಲಿ ನ್ಯಾಯವಾದಿ ಜಯರಾಮ ಪದಕಣ್ಣಾಯ, ಕಾರ್ಯದರ್ಶಿ ದುರ್ಗಾದಾಸ್ ಕೋಡಿಕಲ್, ನಿಕಟಪೂರ್ವ ಅಧ್ಯಕ್ಷೆ ವಿದ್ಯಾ ಗಣೇಶ್ ರಾವ್, ಕೋಶಾಧಿಕಾರಿ ಕಿಶೋರ್ ಕೃಷ್ಣ ಮೊದಲಾದವರು ಉಪಸ್ಥಿತರಿದ್ದರು. ಅಧ್ಯಕ್ಷ ಶ್ರೀಧರ ಹೊಳ್ಳ ಸ್ವಾಗತಿಸಿ, ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಕೊಟ್ಟಾರದ ಭರತಾಂಜಲಿ ಸಂಸ್ಥೆಯ ನಿರ್ದೇಶಕಿ ವಿದುಷಿ ಪ್ರತಿಮಾ ಶ್ರೀಧರ್ ಶಿಷ್ಯೆಯರಿಂದ ಶ್ರೀ ರಾಮ…

Read More

ಹಾವೇರಿ : ಮಾತೋಶ್ರೀ ಗಂಗಮ್ಮ ಬೊಮ್ಮಾಯಿ ಮತ್ತು ಮಾಜಿ ಸಿಎಂ, ಶಾಸಕ ಬಸವರಾಜ ಬೊಮ್ಮಾಯಿ ಅವರ ಜನ್ಮದಿನದ ಅಂಗವಾಗಿ ಮೂಡಬಿದರಿಯ ಆಳ್ವಾಸ್ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಡಾ. ಮೋಹನ್‌ ಆಳ್ವ ಹಾಗೂ ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆಯವರಿಗೆ ದಿನಾಂಕ 28-01-2024ರಂದು ‘ಶ್ರೇಷ್ಠ ಕನ್ನಡಿಗ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಮೋಹನ್ ಆಳ್ವ “ಶಿಕ್ಷಣ ತಜ್ಞ ಪ್ರಭಾಕರ ಕೋರೆ ಅವರೊಂದಿಗೆ ನನಗೂ ಮಾತೋಶ್ರೀ ಅವರ ಹೆಸರಿನಲ್ಲಿ ಶ್ರೇಷ್ಠ ಕನ್ನಡಿಗ ಪ್ರಶಸ್ತಿ ನೀಡಿ ಗೌರವಿಸಿದ್ದು ಸಂತಸ ತಂದಿದೆ. ಮೊದಲಿನಿಂದಲೂ ಬೊಮ್ಮಾಯಿ ಕುಟುಂಬದ ಮೇಲೆ ನನಗೆ ವಿಶೇಷ ಗೌರವ ಇದೆ” ಎಂದರು. ಡಾ. ಪ್ರಭಾಕರ ಕೋರೆ ಮಾತನಾಡಿ, “ಮಾತೋಶ್ರೀ ಗಂಗಮ್ಮ ಬೊಮ್ಮಾಯಿ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಿ ಗೌರವಿಸಿದ್ದು ಅಭಿಮಾನದ ಸಂಗತಿ. ದಿ. ಎಸ್.ಆರ್. ಬೊಮ್ಮಾಯಿ ಅವರ ಮಾರ್ಗದರ್ಶನದಲ್ಲಿ ನಾನು ಬೆಳೆದು ಬಂದಿದ್ದೇನೆ. ಶಿಗ್ಗಾವಿಯಲ್ಲಿ 4 ಎಕರೆ ಜಮೀನು ಒದಗಿಸಿಕೊಟ್ಟರೆ ಅರಟಾಳ ರುದ್ರಗೌಡರ ಹೆಸರಿನಲ್ಲಿ ಶಿಕ್ಷಣ ಸಂಸ್ಥೆ ಕಟ್ಟಲು…

Read More

ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಪ್ರಕಾಶನದ ‘ಕಾವ್ಯ ಕುಂಚ’ ಕವನ ಸಂಕಲನದ ಮೂರನೇ ಭಾಗ ಇತ್ತೀಚಿಗೆ ಲೋಕಾರ್ಪಣೆ ಆಗಿದ್ದು ನಾಲ್ಕನೇ ಭಾಗದ ಮುದ್ರಣಕ್ಕೆ ಸಂಸ್ಥೆಯು ಪೂರ್ಣ ಪ್ರಮಾಣದ ಸಿದ್ಧತೆ ಮಾಡಿಕೊಂಡಿದೆ ಎಂದು ‘ಕಾವ್ಯ ಕುಂಚ ಕವನ ಸಂಕಲನ’ದ ಪ್ರಧಾನ ಸಂಪಾದಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ. ಸಾಹಿತ್ಯಾಸಕ್ತರು 15ರಿಂದ 20 ಸಾಲುಗಳ ಒಂದು ಕವನವನ್ನು ಶೀರ್ಷಿಕೆಯೊಂದಿಗೆ ಕನ್ನಡದಲ್ಲಿ ತಮ್ಮ ತಮ್ಮ ವ್ಯಾಟ್ಸಪ್‌ನಲ್ಲಿ ಟೈಪ್ ಮಾಡಿ ಕನ್ನಡದಲ್ಲಿ ತಮ್ಮ ಹೆಸರು ಪೂರ್ಣ ಪ್ರಮಾಣದ ವಿಳಾಸ ಚಿತ್ತಾಕರ್ಷಕವಾದ ಒಂದು ಭಾವಚಿತ್ರ ಹಾಗೂ ವ್ಯಾಟ್ಸಪ್ ಸಂಖ್ಯೆಯನ್ನು ಈ ಕೆಳಗಿನ ವ್ಯಾಟ್ಸಪ್ ಸಂಖ್ಯೆಗೆ ಕಳಿಸಬಹುದು. ವಿಷಯ ತಮ್ಮ ಆಯ್ಕೆ. ಕವನ ರಚಿಸಿ ಕಳಿಸುವ ದಿನಾಂಕ ವಿಸ್ತರಿಸಲಾಗಿದ್ದು, ಕೊನೆಯ ದಿನಾಂಕ 25-02-2024. ಸಂಕಲನ ಮುದ್ರಣವಾದ ನಂತರ ಪುಸ್ತಕ ಲೋಕಾರ್ಪಣೆಯ ಸಮಾರಂಭದಲ್ಲಿ ರಾಜ್ಯಮಟ್ಟದ ಕವಿಗೋಷ್ಠಿಗೆ ಅವಕಾಶವಿದ್ದು, ಭಾಗವಹಿಸಿದವರಿಗೆ ಅಭಿನಂದನಾ ಪತ್ರ, ಕನ್ನಡ ತಾಯಿ ಭುವನೇಶ್ವರಿ ಸ್ಮರಣಿಕೆ ಹಾಗೂ ಹತ್ತು ಪುಸ್ತಕಗಳನ್ನು ವಿತರಿಸಲಾಗುವುದು. ಹೆಚ್ಚಿನ ಮಾಹಿತಿಗೆ 9538732777 ಈ…

Read More

ಮಂಗಳೂರು : ಬಳ್ಕೂರು ಯಕ್ಷ ಕುಸುಮ ಪ್ರತಿಷ್ಠಾನ ಮತ್ತು ರಂಗಸ್ಥಳ (ರಿ.) ಮತ್ತು ಶ್ರೀ ಕ್ಷೇತ್ರ ಕುದ್ರೋಳಿ ಭಗವತೀ ದೇವಸ್ಥಾನ ಇವರ ಸಹಕಾರದೊಂದಿಗೆ ಬಡಗುತಿಟ್ಟಿನ ಶ್ರೀಕ್ಷೇತ್ರ ಹಟ್ಟಿಯಂಗಡಿ ಮೇಳ ಇವರಿಂದ ‘ಚಂದ್ರಹಾಸ ಶ್ರೀನಿವಾಸ ಕಲ್ಯಾಣ’ ಕಲಾಮಿತಿ ಯಕ್ಷಗಾನ ಪೌರಾಣಿಕ ಪ್ರಸಂಗದ ಪ್ರದರ್ಶನವು ದಿನಾಂಕ 11-02-2024ರಂದು ಸಂಜೆ 4.30ಕ್ಕೆ ಕೂಟಕ್ಕಳ ಸಭಾಂಗಣದಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ಸೂರಿಕುಮೇರು ಗೋವಿಂದ ಭಟ್ ಇವರಿಗೆ ‘ಬಳ್ಕೂರು ಯಕ್ಷ ಕುಸುಮ’ ಪುರಸ್ಕಾರ ಮತ್ತು ಸಾತ್ವಿಕ್ ನೆಲ್ಲಿತೀರ್ಥ ಇವರಿಗೆ ‘ಯಕ್ಷ ಕುಸುಮ’ ಯುವ ಪುರಸ್ಕಾರ ಪ್ರದಾನ ಮಾಡಲಾಗುವುದು.

Read More