Author: roovari

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ನವೀಕೃತ ಕುವೆಂಪು ಸಭಾಂಗಣದಲ್ಲಿ ದಿನಾಂಕ 31-01-2024ರಂದು 128ನೆಯ ಬೇಂದ್ರೆ ಜನ್ಮದಿನದ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ನಾಡೋಜ ಡಾ. ಮಹೇಶ ಜೋಶಿಯವರು ಬೇಂದ್ರೆಯವರಿಗೆ ಜ್ಞಾನಪೀಠ ಬಂದಾಗ ಧಾರವಾಡದಲ್ಲಿ ಅಭಿನಂದನಾ ಕಾರ್ಯಕ್ರಮ ನಡೆದಿತ್ತು. ಅದಕ್ಕೆ ಬಂದ ಜನ ಕಡಿಮೆ ಎಂದು ಯಾರೋ ವ್ಯಾಖ್ಯಾನಿಸಿದಾಗ ಬೇಂದ್ರೆ ‘ಇದು ಲಕ್ಷ ಮಂದಿ ಸೇರೊ ಕಾರ್ಯಕ್ರಮವಲ್ಲ ಲಕ್ಷ್ಯ ಕೊಟ್ಟು ಕೇಳೋ ಮಂದಿ ಇರೋ ಕಾರ್ಯಕ್ರಮ’ ಎಂದಿದ್ದರು. ಬೇಂದ್ರೆಯವರಿಗೆ ಜ್ಞಾನಪೀಠ ಬಂದಾಗ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮಕ್ಕೆ ಅವರನ್ನು ಕರೆ ತರುವ ಹೊಣೆ ತಮ್ಮದಾಗಿತ್ತು ಎಂದು ನೆನಪಿಸಿಕೊಂಡ ಅವರು ಅವತ್ತಿನ ಬೇಂದ್ರೆ ಉಪನ್ಯಾಸದ ಪ್ರತಿ ಪದವೂ ತಮ್ಮ ನೆನಪಿನಲ್ಲಿ ಉಳಿದಿದ್ದು ಅದನ್ನು ಕೇಳಿ ಕಣ್ಣೀರಿಡದ ಸಭಿಕರೇ ಇರಲಿಲ್ಲ ಎಂದು ನೆನಪು ಮಾಡಿಕೊಂಡರು. ಈ ರೀತಿಯಲ್ಲಿ ಬೇಂದ್ರೆಯವರನ್ನು ‘ಮನಸುಖರಾಯ’ ಎಂದು ಕರೆದ ನಾಡೋಜ ಮಹೇಶ ಜೋಶಿ. ಅವರು ಈ ಜಗತ್ತಿನಲ್ಲಿದ್ದರೂ ಅದನ್ನು ಮೀರಿದ್ದರು ಎಂದು ಹೇಳಿ ಬದುಕಿನಲ್ಲಿ ಮೂಲ ಪ್ರೇಮವನ್ನು ಹಿಡಿದ ಅವರನ್ನು…

Read More

ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಫೆಬ್ರವರಿ ತಿಂಗಳ ಸಾಪ್ತಾಹಿಕ ಸರಣಿ ಕಾರ್ಯಕ್ರಮವು ದಿನಾಂಕ 05-02-2024, 12-02-2024, 19-02-2024 ಮತ್ತು 26-02-2024ರಂದು ಪ್ರತೀ ಸಂಜೆ ಗಂಟೆ 6.25ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ದಿನಾಂಕ 05-02-2024ರಂದು ನಡೆಯಲಿರುವ ಸರಣಿ 31ರಲ್ಲಿ ವಿದುಷಿ ಧೀಮಹಿ ಮಟ್ಟು, ದಿನಾಂಕ 12-02-2024ರಂದು ನಡೆಯಲಿರುವ ಸರಣಿ 32ರಲ್ಲಿ ಯಶಸ್ವಿ, ದಿನಾಂಕ 19-02-2024ರಂದು ನಡೆಯಲಿರುವ ಸರಣಿ 33ರಲ್ಲಿ ಶಿವಮೊಗ್ಗದ ಕವನ ಪಿ. ಕುಮಾರ್ ಮತ್ತು ದಿನಾಂಕ 26-02-2024ರಂದು ನಡೆಯಲಿರುವ ಸರಣಿ 34ರಲ್ಲಿ ಮಂಗಳೂರಿನ ರೆಮೊನಾ ಇವೈಟ್ ಪಿರೇರ ಇವರುಗಳು ನೃತ್ಯ ಕಾರ್ಯಕ್ರಮ ನೀಡಲಿದ್ದಾರೆ.

Read More

ವಾಮಂಜೂರು : ಮಂಗಳೂರಿನ ವಾಮಂಜೂರಿನಲ್ಲಿರುವ ಶ್ರೀ ಅಮೃತೇಶ್ವರ ಯಕ್ಷಗಾನ ಪ್ರತಿಷ್ಠಾನ (ರಿ.) ಇದರ ದಶಮಾನೋತ್ಸವ ಸಂಭ್ರಮದ ಪ್ರಯುಕ್ತ ಹವ್ಯಾಸಿ ಕಲಾವಿದರಿಗೆ ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆಯು ದಿನಾಂಕ 28-04-2024ರ ಆದಿತ್ಯವಾರದಂದು ಬೆಳಿಗ್ಗೆ 8.00ರಿಂದ ಶ್ರೀ ಅಮೃತೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲು ಮೊದಲು ಸಂಪರ್ಕಿಸಿದ 8 ತಂಡಗಳಿಗೆ ಮಾತ್ರ ಅವಕಾಶವಿದ್ದು, ವಿಜೇತ ತಂಡಗಳಿಗೆ ಪ್ರಥಮ ಬಹುಮಾನ ರೂಪಾಯಿ 55,555/- ಮತ್ತು ಶಾಶ್ವತ ಫಲಕ, ದ್ವಿತೀಯ ಬಹುಮಾನ ರೂಪಾಯಿ 33,333 ಮತ್ತು ಶಾಶ್ವತ ಫಲಕ ಹಾಗೂ ತೃತೀಯ ಬಹುಮಾನ ರೂಪಾಯಿ 22,222 ಮತ್ತು ಶಾಶ್ವತ ಫಲಕ ನೀಡಿ ಗೌರವಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಧೀರಜ್ ಕೊಟ್ಟಾರಿ – 8951620909, ದೀಪಕ್ ಶೆಟ್ಟಿ- 9845318021

Read More

ವಿಜಯಪುರ : ವಿಜಯಪುರದ ಬಿ.ಎಲ್.ಡಿ.ಇ. ಸಂಸ್ಥೆಯ ಕೆ.ಸಿ.ಪಿ. ಸೈನ್ಸ್ ಹಾಗೂ ಎಸ್.ಬಿ. ಆರ್ಟ್ಸ್ ಕಾಲೇಜಿನಲ್ಲಿ ವಿಜಯಪುರದ ಜಿಲ್ಲಾ ಕರ್ನಾಟಕ ಗಮಕ ಪರಿಷತ್ ಹಾಗೂ ಬಿ.ಎಲ್.ಡಿ.ಇ. ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಕುಮಾರವ್ಯಾಸ ಜಯಂತಿ ಹಾಗೂ ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮವು ದಿನಾಂಕ 29-01-2024ರಂದು ಆಚರಿಸಲಾಯಿತು. ಸಂಸ್ಥೆಯ ಪ್ರಾಚಾರ್ಯರಾದ ಡಾ. ಆರ್.ಎಂ. ಮಿರ್ಧೆ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲಾ ಕರ್ನಾಟಕ ಗಮಕ ಪರಿಷತ್ತಿನ ಗೌರವಾಧ್ಯಕ್ಷರಾದ ಶ್ರೀ ಬಿ.ಎಂ. ಪಾಟೀಲ, ಸಾಹಿತಿ ಶ್ರೀ ಜಂಬುನಾಥ ಕಂಚ್ಯಾಣಿ, ಶ್ರೀ ಎಸ್.ಎಂ. ಜೇವರಗಿ, ಡಾ. ಪಿ.ಎಸ್. ಪಾಟೀಲ್ (ಐಕ್ಯೂಎಸಿ ನಿರ್ದೇಶಕರು), ಕಲ್ಯಾಣರಾವ್ ದೇಶಪಾಂಡೆ, ಶ್ರೀಮತಿ ಭೂದೇವಿ ಕುಲಕರ್ಣಿ ಹಾಗೂ ಶ್ರೀಮತಿ ಪುಷ್ಪಾ ಕುಲಕರ್ಣಿ ಅತಿಥಿಗಳಾಗಿ ಭಾಗವಹಿಸಿದರು. ಗಮಕ ಕಾರ್ಯಕ್ರಮವು ಕಾಲೇಜಿನ ಪ್ರಾಧ್ಯಾಪಕರಾದ ಶ್ರೀಮತಿ ಉಷಾದೇವಿ ಹಿರೇಮಠ ಇವರ ಸ್ವಾಗತ ಭಾಷಣದೊಂದಿಗೆ ಆರಂಭವಾಯಿತು. ಗಮಕಿಗಳಾದ ಶ್ರೀಮತಿ ಭೂದೇವಿ ಕುಲಕರ್ಣಿ ಹಾಗೂ ಶ್ರೀಮತಿ ಪುಷ್ಪಾ ಕುಲಕರ್ಣಿ ಇವರುಗಳು ಕರ್ನಾಟಕ ಭಾರತ ಕಥಾ ಮಂಜರಿಯ ‘ಶ್ರೀವನಿತೆಯರಸನೆ ವಿಮಲರಾಜೀವ ಪೀಠನ…

Read More

ಉಡುಪಿ : ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಕಾರದೊಂದಿಗೆ ಯಕ್ಷಗಾನ ಕೇಂದ್ರ ಇಂದ್ರಾಳಿಯ 51ನೇ ವಾರ್ಷಿಕೋತ್ಸವ ಹಾಗೂ ದಿ. ಎಂ.ಎಂ. ಹೆಗ್ಡೆ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 28-01-2024ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಹೆ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ “ಪಾರಂಪರಿಕ ಯಕ್ಷಗಾನ ಕಲೆಯನ್ನು ಪ್ರೋತ್ಸಾಹಿಸಿ ಬೆಳೆಸುವ ಹಾಗೂ ಯುವಕರಿಗೆ ಯಕ್ಷ ಶಿಕ್ಷಣ ನೀಡುವ ಉದ್ದೇಶದಿಂದ ಡಾ. ಕೆ. ಶಿವರಾಮ ಕಾರಂತ ಮತ್ತು ಕು.ಶಿ. ಹರಿದಾಸ ಭಟ್ಟರ ಆಸಕ್ತಿಯಿಂದ ಹುಟ್ಟಿಕೊಂಡ ಯಕ್ಷಗಾನ ಕೇಂದ್ರ ಇಂದು ಮಾಹೆಯ ಸರ್ವರೀತಿಯ ಪ್ರೋತ್ಸಾಹದಿಂದ ಬೆಳೆಯುತ್ತಿದೆ. ಅಲ್ಲದೆ ಯುವ ಜನತೆಗೆ ಯಕ್ಷಗಾನದಲ್ಲಿ ಆಸಕ್ತಿ ಮೂಡಿಸುವ ಮೂಲಕ ಯಕ್ಷಗಾನ ಕಲೆಯನ್ನು ಬೆಳೆಸುತ್ತಿದೆ. ಗುರುಕುಲ ಪದ್ಧತಿಯಂತೆ ಶಿಕ್ಷಣದ ಜೊತೆಗೆ ಯಕ್ಷಗಾನ ಕಲಿಸಲಾಗುತ್ತಿದೆ.” ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಯಕ್ಷಗಾನ ಮೇಳಗಳ ಯಜಮಾನ ಹಾಗೂ ಕೇಂದ್ರದ ಸಲಹಾ ಸಮಿತಿ ಅಧ್ಯಕ್ಷರಾದ ಶ್ರೀ ಪಳ್ಳಿ ಕಿಶನ್ ಹೆಗ್ಡೆ “ಜೋಡಾಟದ…

Read More

ಈ ಕಾದಂಬರಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶತಮಾನಗಳಿಂದ ಇದ್ದ ಗಾದೆ ಮಾತು ‘ವೆಂಕು ಪಣಂಬೂರ್ ಗ್ ಪೋಯಿ ಲೆಕ್ಕೊ’. ಅಂದರೆ ವೆಂಕು ಪಣಂಬೂರಿಗೆ ಹೋದ ಹಾಗೆ‌ ಜಾನಪದಲ್ಲಿರುವ ನಂಬಿಕೆಯ ಪ್ರಕಾರ ವೆಂಕು ಒಬ್ಬ ಪೆದ್ದ‌. ಪೆದ್ದ ಎಂದರೆ ತೀರಾ ಮುಗ್ಧ. ಅವನ ಮುಗ್ಧತೆಯನ್ನು ಶೋಷಿಸಿ ಅವನಿಂದ ಸಾಕಷ್ಟು ಕೆಲಸ ಮಾಡಿಸಿಕೊಂಡು ಅವನನ್ನೆ ಮಕ್ಕರ್ ಅಂದರೆ ತಮಾಷೆ ಮಾಡುವರು, ಗೇಲಿ ಮಾಡುವರು. ಅಂತಹ ಪೆದ್ದನ ದ್ಯೋತಕವಾಗಿ ಈ ವೆಂಕು. ಒಂದು ರಾತ್ರಿ ವೆಂಕುವಿನ ಯಜಮಾನ ಮತ್ತು ಯಜಮಾನತಿ ಮಾತಾಡುತ್ತ ‘ನಾಳೆ ಎಂಕುವನ್ನು ಪಣಂಬೂರಿಗೆ ಕಳಿಸಬೇಕು.’ ಎಂಬುದನ್ನು ವೆಂಕು ಕೇಳಿ ಏನು ಯಾಕೆ ಎಂಬ ಗೊತ್ತುಗುರಿಯಿಲ್ಲದೆ ವೆಂಕು ಪಣಂಬೂರಿಗೆ ಹೊರಟುಬಿಟ್ಟ‌. ಮಾರನೆಯ ದಿನ ವೆಂಕು ಮನೆಗೆ ಬಂದಾಗ ಯಜಮಾನರು ಕೇಳಿದರು: “ವೆಂಕು, ಎಲ್ಲಿಗೆ ಹೋಗಿದ್ದೆ?” “ಪಣಂಬೂರಿಗೆ‌” “ಯಾಕೆ?”. ” ನಿನ್ನೆ ರಾತ್ರಿ ನೀವು ನನ್ನನ್ನು ಪಣಂಬೂರಿಗೆ ಕಳುಹಿಸಬೇಕೆಂದು ಅಮ್ಮನೊಡನೆ ಹೇಳುವಾಗ ನಾನು ಕೇಳಿದ್ದೆ‌. ಅದಕ್ಕಾಗಿ ಹೋಗಿ ಬಂದೆ‌”. “ಸೈ ಹೋಗಿಯಾದರೂ ಏನು ಮಾಡಿಕೊಂಡು…

Read More

ಮಂಗಳೂರು : ಶ್ರೀ ದುರ್ಗಾಪರಮೇಶ್ವರಿ ಸೇವಾ ಸಂಘ, ಯುವಕ ಮಂಡಲ (ರಿ.) ದೇವಿಪುರ, ತಲಪಾಡಿ ಇದರ ಅಮೃತ ಮಹೋತ್ಸವ ಸಮಾರಂಭವು ದಿನಾಂಕ 28-01-2024ರಂದು ದೇವಿಪುರ ಬಾಕಿಮಾರು ಗದ್ದೆಯಲ್ಲಿ ನೆರವೇರಿತು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಪ್ರಧಾನ ಅರ್ಚಕ ಡಾ. ಕೆ.ಎನ್. ನರಸಿಂಹ ಅಡಿಗ ದೀಪ ಪ್ರಜ್ವಲನೆ ಮಾಡಿದರು. ದೇವಿಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಗಣೇಶ್ ಭಟ್ ಪಂಜಾಳ ತೆಂಗಿನ ಸಿರಿ ಅರಳಿಸಿ ಸಮಾರಂಭವನ್ನು ಉದ್ಘಾಟಿಸಿದರು. ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ಮೋಹನ್ ದಾಸ ರೈ ಸಾಂತ್ಯಗುತ್ತು ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಗೆ 75 ವರ್ಷ ತುಂಬಿದ ಸಲುವಾಗಿ ರಮೇಶ್ ಆಳ್ವ ದೇವಿಪುರ ಸಂಪಾದಕತ್ವದಲ್ಲಿ ಪ್ರಕಟಿಸಿದ ‘ಶ್ರೀ ದುರ್ಗಾಮೃತ’ ಸ್ಮರಣ ಸಂಚಿಕೆಯನ್ನು ಮುಂಬೈ ಹೇರಂಬ ಇಂಡಸ್ಟ್ರೀಸ್ ಆಡಳಿತ ನಿರ್ದೇಶಕ ಕೂಳೂರು ಕನ್ಯಾನ ಸದಾಶಿವ ಕೆ. ಶೆಟ್ಟಿ ಬಿಡುಗಡೆಗೊಳಿಸಿದರು. ಸಂಚಿಕೆಯ ಗೌರವ ಸಂಪಾದಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಕೃತಿಯ ಕುರಿತು ಮಾತನಾಡಿದರು. ಮಂಗಳೂರು ಲೋಕಸಭಾ ಸದಸ್ಯ ನಳಿನ್ ಕುಮಾರ್…

Read More

ಸುರತ್ಕಲ್ : ಶ್ರೀ ಶಾರದಾ ನಾಟ್ಯಾಲಯ, ಕುಳಾಯಿ – ಹೊಸಬೆಟ್ಟು ಮತ್ತು ಲಲಿತಕಲಾ ಸಂಘ, ಗೋವಿಂದ ದಾಸ ಕಾಲೇಜುಗಳ ಸಹಯೋಗದಲ್ಲಿ ಖ್ಯಾತ ಸಂಗೀತಗಾರ್ತಿ ದಿ. ಶೀಲಾ ದಿವಾಕರ್ ಅವರಿಗೆ ಅರ್ಪಿಸಿದ ‘ಗಾನ ಶಾರದೆಗೆ ನಮನ’ ಗುರುವಿಗೊಂದು ನಾಟ್ಯನಮನ ಕಾರ್ಯಕ್ರಮವು ದಿನಾಂಕ 26-01-2024ರಂದು ಗೋವಿಂದ ದಾಸ ಕಾಲೇಜಿನ ರಂಗ ಮಂದಿರದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ “ಪ್ರತಿಭಾವಂತ ಸಾಧಕರ ಸಾಧನಾ ಕಾರ್ಯದ ಸ್ಮರಣೆ ನಿರಂತರವಾಗಿ ನಡೆಯಬೇಕು. ಶೀಲಾ ದಿವಾಕರ್ ಸಂಗೀತ ಗುರುಗಳಾಗಿ, ಕಲಾವಿದೆಯಾಗಿ ಅಪಾರ ಕೊಡುಗೆ ಸಲ್ಲಿಸಿ ನಮ್ಮನ್ನಗಲಿದರೂ ಅವರು ರೂಪಿಸಿದ ಗಾನ ಪರಂಪರೆಯನ್ನು ಶಿಷ್ಯವರ್ಗ ಮುನ್ನಡೆಸುತ್ತಿದೆ ಎಂದು ನುಡಿದರು. ಅಧ್ಯಕ್ಷತೆ ವಹಿಸಿದ್ದ ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ ಪಿ. “ಸಾಂಸ್ಕೃತಿಕ ಲೋಕದಲ್ಲಿ ಅನನ್ಯ ಸಾಧನೆ ನಡೆಸಿರುವ ಗೋವಿಂದ ದಾಸ ಕಾಲೇಜಿನ ಹೆಮ್ಮೆಯ ಹಳೆವಿದ್ಯಾರ್ಥಿನಿ ಶೀಲಾ ದಿವಾಕರ್ ಕಲಾಲೋಕಕ್ಕೆ ಕೊಟ್ಟಿರುವ ಕೊಡುಗೆ ಅನನ್ಯವಾದುದು” ಎಂದರು. ನುಡಿನಮನ…

Read More

ಉಡುಪಿ : ರಂಗಭೂಮಿ ಉಡುಪಿ ಹಾಗೂ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಸಹಯೋಗದಲ್ಲಿ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ದಿನಾಂಕ 28-01-2024ರಂದು ‘ಅಂಬಾತನಯ ಮುದ್ರಾಡಿ ಸಂಸ್ಮರಣಾ ಪುಸ್ತಕ ಪ್ರಶಸ್ತಿ ಪ್ರದಾನ’ ಸಮಾರಂಭ ನಡೆಯಿತು. ಇದೇ ಸಂದರ್ಭದಲ್ಲಿ ಪ್ರಸಿದ್ಧ ಲೇಖಕ ಮೌನೇಶ್ ಬಡಿಗೇರ ಅವರ ‘ಟಪಾಲು ಮನೆ’ ನಾಟಕ ಕೃತಿಯ ಬಿಡುಗಡೆ ಹಾಗೂ ವಿಚಾರ ಸಂಕಿರಣ ನಡೆಯಿತು. ಯಕ್ಷಗಾನ ಕೇಂದ್ರ ಉಡುಪಿ ಇದರ ಸಲಹಾ ಸಮಿತಿ ಅಧ್ಯಕ್ಷ ಪಳ್ಳಿ ಕಿಶನ್ ಹೆಗ್ಡೆ ಅವರು ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿ, “ಈ ನಾಟಕದ ರಂಗ ಪ್ರಯೋಗವನ್ನು ಮಾಡಲು ರಂಗಭೂಮಿ ಚಿಂತನೆ ನಡೆಸಬೇಕು” ಎಂದರು‌. ಇಂತಹ ಅತ್ಯುತ್ತಮ ಕಾರ್ಯಕ್ರಮಗಳನ್ನು ಸಂಘಟಿಸುತ್ತಿರುವ ರಂಗಭೂಮಿ ಉಡುಪಿ ಸಂಸ್ಥೆಯನ್ನು ಶ್ಲಾಘಿಸಿದ ಅವರು, ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹಾಗೂ ಅವರ ತಂಡ ರಂಗಭೂಮಿಯ ನೈಜ ಆಶಯವನ್ನು ಸಾಕಾರಗೊಳಿಸುತ್ತಿದೆ ಎಂದು ಕೊಂಡಾಡಿದರು. ಅಗಲಿದ ವಿದ್ವಾಂಸ ಅಂಬಾತನಯ ಮುದ್ರಾಡಿ ಅವರು ರಂಗಭೂಮಿಗೆ ನೀಡಿದ ಕೊಡುಗೆಯನ್ನು ಅವರು ಪ್ರಸ್ತಾಪಿಸಿದರು. ಚಿಂತಕ…

Read More

ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 05-02-2024ರಂದು ಸಂಜೆ ಗಂಟೆ 6.25ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ದಿನದ ಸರಣಿ ಕಾರ್ಯಕ್ರಮದಲ್ಲಿ ವಿದುಷಿ ಧೀಮಹಿ ಮಟ್ಟು ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ. ಶ್ರೀಮತಿ ಭಾಗ್ಯಲಕ್ಷ್ಮಿ ಹಾಗೂ ಶ್ರೀ ಪ್ರಸಾದ್ ರಾವ್ ಮಟ್ಟು ದಂಪತಿಗಳ ಸುಪುತ್ರಿಯಾದ ವಿದುಷಿ ಕು. ಧೀಮಹಿ ನೃತ್ಯನಿಕೇತನ ಕೊಡವೂರು (ರಿ)ನ ನಿರ್ದೇಶಕರಾದ ವಿದ್ವಾನ್ ಶ್ರೀ ಸುಧೀರ್ ರಾವ್ ಕೊಡವೂರು ಮತ್ತು ವಿದುಷಿ ಶ್ರೀಮತಿ ಮಾನಸಿ ಸುಧೀರ್ ಇವರಿಂದ ಕಳೆದ ಇಪ್ಪತ್ತು ವರ್ಷಗಳಿಂದ ನೃತ್ಯಾಭ್ಯಾಸವನ್ನು ಪಡೆಯುತ್ತಿದ್ದಾಳೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಶಿಷ್ಯವೇತನ ಪಡೆದಿರುವ ಈಕೆ, ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಗಳಲ್ಲಿ ಹಲವು ಬಹುಮಾನಗಳನ್ನು ಪಡೆದಿರುತ್ತಾಳೆ. 2017ರಲ್ಲಿ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ಉತ್ತಮ…

Read More