Author: roovari

ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಸಭಾಂಗಣದಲ್ಲಿ 21 ಮತ್ತು22 ಫೆಬ್ರವರಿ 2025ರಂದು ನಡೆಯುವ 27ನೇ ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹಿರಿಯ ಸಾಹಿತಿ ಡಾ. ಪ್ರಭಾಕರ ಶಿಶಿಲ ಇವರನ್ನು ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ. ಪಿ. ಶ್ರೀನಾಥ್ ತಿಳಿಸಿದ್ದಾರೆ. ಡಾ. ಪ್ರಭಾಕರ ಶಿಶಿಲ : ಸುಳ್ಯ ತಾಲೂಕಿನ ಕೂತುಕುಂಜ ಕಜೆಯಲ್ಲಿ ಹುಟ್ಟಿ ಬೆಳ್ತಂಗಡಿ ತಾಲೂಕಿನ ಶಿಶಿಲದಲ್ಲಿ ಬೆಳೆದು, ಸುಳ್ಯದಲ್ಲಿ ನೆಲೆಸಿರುವ ಡಾ. ಪ್ರಭಾಕರ ಶಿಶಿಲರು ಕನ್ನಡದ ಶ್ರೇಷ್ಠ ಸಾಹಿತಿ. ಕನ್ನಡದಲ್ಲಿ 10 ಕಾದಂಬರಿ, 8 ಕಥಾ ಸಂಕಲನ, 5 ಪ್ರವಾಸ ಕಥನ ಸೇರಿ ಒಟ್ಟು 54 ಸೃಜನಶೀಲ ಕೃತಿಗಳು, 165 ಅರ್ಥಶಾಸ್ತ್ರ ವಿಚಾರ ಸಾಹಿತ್ಯ ಕೃತಿಗಳು ಹಾಗೂ ಆಂಗ್ಲ ಭಾಷೆಯಲ್ಲಿ 10 ಅರ್ಥಶಾಸ್ತ್ರ ಕೃತಿಗಳನ್ನು ರಚಸಿದ್ದಾರೆ. ವಿವಿಧ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ಇವರ ಸುಮಾರು 250ಕ್ಕೂ ಅಧಿಕ ಲೇಖನಗಳು ಪ್ರಕಟವಾಗಿವೆ. ಅನೇಕ ಲಾವಣಿ ಮತ್ತು ಗೀಗೀ ಪದ…

Read More

ಮಂಗಳೂರು : ಭಾರತ್ ಫೌಂಡೇಶನ್ ವತಿಯಿಂದ ಮಂಗಳೂರು ಸಾಹಿತ್ಯೋತ್ಸವದ 7ನೇ ಆವೃತ್ತಿ ನಗರದ ಡಾ. ಟಿ.ಎಂ.ಎ.ಪೈ ಇಂಟರ್‌ನ್ಯಾಷನಲ್ ಕನ್ವೆನ್ಶನ್ ಸೆಂಟರ್‌ನಲ್ಲಿ ದಿನಾಂಕ 11 ಜನವರಿ 2025 ಮತ್ತು 12 ಜನವರಿ 2025ರಂದು ಆಯೋಜನೆಗೊಂಡಿದೆ. ಮುಖ್ಯ ಅತಿಥಿ ಶತಾವಧಾನಿ ಡಾ. ಆರ್. ಗಣೇಶ್ ಮತ್ತು ನಾಡಿನ ಖ್ಯಾತ ಸಾಹಿತಿ ಡಾ. ಎಸ್.ಎಲ್. ಭೈರಪ್ಪ ಇವರಿಂದ ಮಂಗಳೂರು ಲಿಟ್ ಫೆಸ್ಟ್ ಉದ್ಘಾಟನೆಗೊಳ್ಳಲಿದೆ ಎಂದು ಭಾರತ್ ಫೌಂಡೇಶನ್ ಟ್ರಸ್ಟಿ ಸುನೀಲ್ ಕುಲಕರ್ಣಿ ತಿಳಿಸಿರುತ್ತಾರೆ. ಈ ಬಾರಿಯ ಸಾಹಿತ್ಯೋತ್ಸವದಲ್ಲಿ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ, ಗುಪ್ತಚರ ಇಲಾಖೆಯ ಮಾಜಿ ಮುಖ್ಯಸ್ಥ ವಿಕ್ರಮ್ ಸೂದ್, ಭಾರತದ ಮಾಜಿ ರಾಜತಾಂತ್ರಿಕ ಮತ್ತು ಲೇಖಕ ದಿಲೀಪ್ ಸಿನ್ಹಾ, ಮಾಜಿ ಪೊಲೀಸ್ ಅಧಿಕಾರಿ ಹಾಗೂ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ, ಶತಾವಧಾನಿ ಡಾ. ಆರ್. ಗಣೇಶ್, ಇತಿಹಾಸಕಾರ ಮತ್ತು ಲೇಖಕ ಡಾ. ವಿಕ್ರಮ್ ಸಂಪತ್, ಜೆ.ಎನ್‌.ಯು. ಉಪ ಕುಲಪತಿ ಡಾ. ಶಾಂತಿಶ್ರೀ ದುಲಿಪುಡಿ ಪಂಡಿತ್, ಸ್ವಾಮಿ ಮಹಾಮೇಧಾನಂದ ಮಿಥಿಕ್…

Read More

ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸಾಪ್ತಾಹಿಕ ನೃತ್ಯಸರಣಿ ಕಾರ್ಯಕ್ರಮವು ದಿನಾಂಕ 13 ಜನವರಿ 2025ರಂದು ಸಂಜೆ ಗಂಟೆ 6-25ಕ್ಕೆ ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ದಿನದ ಸರಣಿ ಕಾರ್ಯಕ್ರಮದಲ್ಲಿ ಕುಂದಾಪುರದ ಕುಮಾರಿ ಗಾರ್ಗಿದೇವಿ ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ. ಕುಮಾರಿ ಗಾರ್ಗಿದೇವಿ ಶ್ರೀಮತಿ ಪ್ರವಿತಾ ಅಶೋಕ್ ಹಾಗೂ ಶ್ರೀ ಅಶೋಕ್ ಕುಮಾರ್ ಇವರ ಸುಪುತ್ರಿ. ತನ್ನ ಆರನೇ ವಯಸ್ಸಿಗೆ ತಾಯಿ ಹಾಗೂ ಗುರು ವಿದುಷಿ ಪ್ರವಿತಾ ಅಶೋಕ್ ಇವರ ಬಳಿ ತನ್ನ ನೃತ್ಯಭ್ಯಾಸವನ್ನು ಪ್ರಾರಂಭಿಸಿದ್ದು, ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸುವ ಭರತನಾಟ್ಯ ಜೂನಿಯರ್ ವಿಭಾಗದಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು ಪ್ರಸ್ತುತ ಸೀನಿಯರ್ ಪರೀಕ್ಷೆಯ ತಯಾರಿಯಲ್ಲಿರುತ್ತಾಳೆ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಜೂನಿಯರ್ ಮುಗಿಸಿದ್ದು, ಪ್ರಸ್ತುತ ಶ್ರೀಮತಿ ಉಷಾ ರಾಮಕೃಷ್ಣ ಇವರ ಬಳಿ ಸೀನಿಯರ್ ಅಭ್ಯಾಸ ಮಾಡುತ್ತಿದ್ದಾಳೆ.…

Read More

ಮಡಿಕೇರಿ. ಕನ್ನಡ ಸಾಹಿತ್ಯ ಪರಿಷತ್ತು ಶಿವಮೊಗ್ಗ ಜಿಲ್ಲೆ ಮತ್ತು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಆಶ್ರಯದಲ್ಲಿ ಕಳೆದ 19 ವರ್ಷಗಳಿಂದ ರಾಜ್ಯ ಮಟ್ಟದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುತ್ತಾ ಬಂದಿದೆ. ಈ ಬಾರಿ 20ನೇ ರಾಜ್ಯಮಟ್ಟದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನವು 16 ಜನವರಿ 2025ರಂದು ಮಂಡ್ಯ ಜಿಲ್ಲೆಯ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಸಭಾಂಗಣದಲ್ಲಿ ನಡೆಯಲಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸಾಹಿತ್ಯ ಚಟುವಟಿಕೆಯಲ್ಲಿ ತೊಡಗಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇಲ್ಲಿ ಭಾಗವಹಿಸಲು ಅವಕಾಶವಿದ್ದು, ಕಥೆ, ಕವನ ಹಾಗೂ ಕಾದಂಬರಿ ಪ್ರಕಟಗೊಳಿಸಿರುವ 17 ವಯಸ್ಸಿನ ಒಳಗಿನ ವಿದ್ಯಾರ್ಥಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಬಹುದಾಗಿದೆ. ಪುಸ್ತಕಗಳ ಪ್ರಕಟಣೆ ಅಥವಾ ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆದಿರುವ ವಿದ್ಯಾರ್ಥಿಗಳು ಕೂಡ ಭಾಗವಹಿಸಬಹುದಾಗಿದೆ. ಭಾಗವಹಿಸುವವರಿಗೆ ಊಟ, ತಿಂಡಿ, ವಸತಿ ವ್ಯವಸ್ಥೆ ಮಾಡಲಾಗುವುದು. ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ. ಪಿ. ಕೇಶವ ಕಾಮತ್ ತಿಳಿಸಿದ್ದಾರೆ. ಆಸಕ್ತ ವಿದ್ಯಾರ್ಥಿಗಳು ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಓದುವ…

Read More

ಬಂಟ್ವಾಳ : ಮಂಗಳೂರು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಹಾಗೂ ಟ್ರಸ್ಟಿನ ಪ್ರಾದೇಶಿಕ ಘಟಕಗಳ ಸಹಯೋಗದೊಂದಿಗೆ ಶಾಸಕರಾದ ರಾಜೇಶ್ ನ್ಯಾಕ್ ಉಳಿಪ್ಪಾಡಿಗುತ್ತು ಹಾಗೂ ಡಾ. ವೈ.ಭರತ್ ಶೆಟ್ಟಿಯವರ ನೇತೃತ್ವದಲ್ಲಿ ದಿನಾಂಕ 08 ಜನವರಿ 2025ರಂದು ಗಂಜಿಮಠ ಒದ್ದೂರು ಫಾರ್ಮ್ಸ್ ನಲ್ಲಿ ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನ-2024-25 ಯಕ್ಷಧ್ರುವ-ಯಕ್ಷಶಿಕ್ಷಣ ವಿದ್ಯಾರ್ಥಿಗಳಿಂದ ಯಕ್ಷಗಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಒಟ್ಟು 20 ಶಾಲೆಗಳ ವಿದ್ಯಾರ್ಥಿಗಳು ಪ್ರದರ್ಶನ ನೀಡಿದರು. ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನವನ್ನು ಶಾಸಕರಾದ ರಾಜೇಶ್ ನ್ಯಾಕ್ ಉಳಿಪ್ಪಾಡಿಗುತ್ತು ಹಾಗೂ ಡಾ. ವೈ. ಭರತ್ ಶೆಟ್ಟಿ ಉದ್ಘಾಟಿಸಿದರು. ಫೌಂಡೇಶನ್ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಟ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾ‌ರ್, ಸಲಹಾ ಸಮಿತಿ ಸದಸ್ಯ ಸರಪಾಡಿ ಅಶೋಕ ಶೆಟ್ಟಿ, ಬಂಟ್ವಾಳ ಘಟಕದ ಅಧ್ಯಕ್ಷ ಚಂದ್ರಹಾಸ ಡಿ. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಬಿ. ದೇವದಾಸ್ ಶೆಟ್ಟಿ ಮೊದಲಾದವರಿದ್ದರು. ಗಂಜಿಮಠ ಒಡ್ಡೂರು ಫಾರ್ಮ್ಸ್ ನಲ್ಲಿ ಯಕ್ಷಲೋಕವೇ ಸೃಷ್ಟಿಯಾಗಿದ್ದು, ಒಂದೇ ಸೂರಿನಡಿ ಪ್ರತ್ಯೇಕ ಎರಡು ರಂಗಸ್ಥಳಗಳಲ್ಲಿ ಬರೋಬ್ಬರಿ ಒಂದು ಸಾವಿರದಷ್ಟು ವಿದ್ಯಾರ್ಥಿಗಳು ಬಣ್ಣ…

Read More

ಕುಂದಾಪುರ : ತ್ರಿವರ್ಣ ಕಲಾ ತರಗತಿ ಕುಂದಾಪುರ ಮತ್ತು ಮಣಿಪಾಲ ಇದರ ವತಿಯಿಂದ ದಿನಾಂಕ 12 ಜನವರಿ 2025ರ ಆದಿತ್ಯವಾರ ಬೆಳಿಗ್ಗೆ 10-00 ಗಂಟೆಗೆ ಕುಂದಾಪುರದ ತ್ರಿವರ್ಣ ಕಲಾ ಗ್ಯಾಲರಿಯಲ್ಲಿ ‘ಪರಂಪರಾ’ ಕಲಾಕೃತಿಗಳ ಕಲಾ ಪ್ರದರ್ಶನವನ್ನು ಕುಂದೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀ ವಾಸುದೇವ ಯಡಿಯಾಳರವರು ಉದ್ಘಾಟಿಸಲಿದ್ದಾರೆ. ಅತಿಥಿ ಅಭ್ಯಾಗತರಾಗಿ ಉಡುಪಿಯ ಚಿತ್ರಕಲಾ ಮಂದಿರ ಕಲಾ ವಿದ್ಯಾಲಯದ ನಿರ್ದೇಶಕರಾದ ಡಾ. ಯು. ಸಿ. ನಿರಂಜನ್, ಕುಂದಾಪುರದ ನಿವೃತ್ತ ಪ್ರಾಂಶುಪಾಲರಾದ ಡಾ. ಜಿ.ಹೆಚ್. ಪ್ರಭಾಕರ್ ಶೆಟ್ಟಿ ಮತ್ತು ಶ್ರೀ ವೆಂಕಟರಮಣ ಪಿ.ಯು. ಕಾಲೇಜಿನ ಸಂಸ್ಕೃತ ಉಪನ್ಯಾಸಕಿ ಶ್ರೀಮತಿ ಮಮತಾ ರೈ ಉಪಸ್ಥಿತರಿರುವರು. ಕುಂದಾಪುರ ಮತ್ತು ಮಣಿಪಾಲ ತ್ರಿವರ್ಣ ಕಲಾ ತರಗತಿಯ ಡಾ. ಜಿ.ಎಸ್.ಕೆ. ಭಟ್, ವಿಧು ಶಂಕರ್ ಬಾಬು, ಡಾ. ಸುಮೀತ್ ಕೌರ್, ರೇವತಿ ಡಿ., ಲತಾ ಭಾಸ್ಕರ್, ಮೀತಾ ಪೈ, ಅಶ್ವಿನ್ ಶೆಟ್ಟಿ, ಅರುಣಾ ನಾಯರ್ ಟಿ., ಸುಷ್ಮಾ ಪೂಜಾರಿ, ಸಂತೋಷ್ ಎಂ. ಭಟ್, ಯಶಾ ಭಟ್, ಪ್ರಸಾದ್ ಆರ್.…

Read More

ಸರಸ ಸಜ್ಜನಿಕೆಯ ‘ಹಾಸ್ಯಪ್ರಿಯ’ರೆಂದು ಕನ್ನಡ ಸಾರಸ್ವತ ಲೋಕದಲ್ಲಿ ಚಿರಪರಿಚಿತರಾದವರು ಡಾ. ಎಂ.ಎಸ್. ಸುಂಕಾಪುರ. ಗ್ರಾಮೀಣ ಬದುಕು, ಸಾಹಿತ್ಯ, ಸಂಸ್ಕೃತಿಗಳಿಂದ ಪ್ರಭಾವಿತರಾದ ಇವರು ವಂಶಪಾರಂಪರ್ಯವಾಗಿ ಜಾನಪದ ಸೊಗಡನ್ನು ಪಡೆದುಕೊಂಡವರು. ಮರಿ ಬಸಪ್ಪ ಸಣ ಬಸಪ್ಪ ಸುಂಕಾಪುರ 10 ಜನವರಿ 1921ರಂದು ಗದಗ ಜಿಲ್ಲೆಯ ಮುಳಗುಂದದಲ್ಲಿ ಜನಿಸಿದರು. ಅವರು ತಮ್ಮ ನಗೆಲಹರಿಯಿಂದ, ಮಾತಿನ ಚುರುಕಿನಿಂದ, ನಟರಾಗಿ, ನಾಟಕಕಾರರಾಗಿ, ಹರಟೆಮಲ್ಲರಾಗಿ ಮೆರೆದಿದ್ದರು. ಬೆಳಗಾವಿ ಹಾಗೂ ಬಾಗಲಕೋಟೆಯ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ನಂತರ ಕರ್ನಾಟಕ ವಿಶ್ವವಿದ್ಯಾಲಯ ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿದ್ದರು. ‘ಶೋಭಮೂಲ’ ಎಂಬುದು ಇವರು ಸ್ಥಾಪಿಸಿದ ಪ್ರಕಾಶನ ಸಂಸ್ಥೆ. ಹಾಸ್ಯ ಸಾಹಿತಿಯಾದ ಎಂ.ಎಸ್. ಸುಂಕಾಪುರ ಅವರು ‘ಕನ್ನಡ ಸಾಹಿತ್ಯದಲ್ಲಿ ಹಾಸ್ಯ’ ಎಂಬ ಸಂಶೋಧನಾ ಪ್ರೌಢ ಪ್ರಬಂಧವನ್ನು ರಚಿಸಿ, ಅದಕ್ಕಾಗಿ ಡಾಕ್ಟರೇಟ್ ಪದವಿಯನ್ನು ಪಡೆದರು. ‘ನಗೆ-ಹೊಗೆ’, ‘ಗಪ್-ಚಿಪ್’, ‘ತಲೆ ಹರಟೆಗಳು’, ‘ನಗೆಗಾರ ನಯಸೇನ’, ‘ಜೀವನದಲ್ಲಿ ಹಾಸ್ಯ’ ಅವರ ಕೃತಿಗಳು, ರೇಡಿಯೋ ನಾಟಕಗಳು ಹಾಗೂ ನಮ್ಮ ನಾಟಕಗಳು ಅವರ ದೃಶ್ಯಕಾವ್ಯಗಳು. ಇವರು ಸಂಪಾದಿಸಿರುವ ಗ್ರಂಥಗಳು ‘ಜೀವನ ಜೋಕಾಲಿ’, ‘ಗಿರಿಜಾ ಕಲ್ಯಾಣ’, ‘ಶಬರಶಂಕರ…

Read More

ಬೆಂಗಳೂರು: ಬಿ. ಎಂ. ಶ್ರೀ. ಪ್ರತಿಷ್ಠಾನ ನೀಡುವ ‘ಶ್ರೀಸಾಹಿತ್ಯ ಪ್ರಶಸ್ತಿ’ಗೆ ಲೇಖಕಿ ಹಾಗೂ ಚಿಂತಕಿಯಾದ ಪ್ರೊ. ವೀಣಾ ಶಾಂತೇಶ್ವರ ಅವರು ಆಯ್ಕೆಯಾಗಿದ್ದಾರೆ. ಕಮಲಿನ ಶಾ. ಬಾಲುರಾವ್‌ ಅವರು ಸ್ಥಾಪಿಸಿರುವ ದತ್ತಿಯಿಂದ ಬಿ. ಎಂ. ಶ್ರೀ. ಪ್ರತಿಷ್ಠಾನ ಪ್ರತಿ ವರ್ಷ ಈ ‘ಶ್ರೀ ಸಾಹಿತ್ಯ’ ಪ್ರಶಸ್ತಿ ನೀಡುತ್ತಿದ್ದು, ನಾಡೋಜ ಡಾ. ಹಂಪ.ನಾಗರಾಜಯ್ಯ, ಲೇಖಕಿ ರೂಪ ಹಾಸನ, ಪ್ರೊ. ಸೋಮಣ್ಣ ಅವರನ್ನೊಳಗೊಂಡ ಆಯ್ಕೆ ಸಮಿತಿಯು ಸರ್ವಾನುಮತದಿಂದ ಇವರನ್ನು ಆಯ್ಕೆ ಮಾಡಿದೆ. ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು, ಸ್ಮರಣಿಕೆ ಮತ್ತು ಅಭಿನಂದನಾ ಪತ್ರವನ್ನೊಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವು 25 ಜನವರಿ 2025ರ ಶನಿವಾರದಂದು ಬೆಂಗಳೂರಿನ ಬಿ. ಎಂ. ಶ್ರೀ ಪ್ರತಿಷ್ಠಾನದ ಎಂ. ವಿ. ಸೀತಾರಾಮಯ್ಯ ಸಭಾಂಗಣದಲ್ಲಿ ನಡೆಯಲಿದೆ. ಎಂದು ಬಿ. ಎಂ. ಶ್ರೀ. ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಡಾ. ಶಾಂತರಾಜು ತಿಳಿಸಿದ್ದಾರೆ. ಪ್ರೊ. ವೀಣಾ ಶಾಂತೇಶ್ವರ: ಧಾರವಾಡದಲ್ಲಿ ಹುಟ್ಟಿದ ಪ್ರೊ. ವೀಣಾ ಶಾಂತೇಶ್ವರ ಕನ್ನಡದ ಪ್ರಮುಖ ಲೇಖಕಿಯರಲ್ಲೊಬ್ಬರು. ಕನ್ನಡ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಸ್ನಾತಕೋತ್ತರ…

Read More

ಕಮತಗಿ : ಕಮತಗಿ ಪಟ್ಟಣದ ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘದ ವತಿಯಿಂದ ಸಂಘದ ಅಧ್ಯಕ್ಷ ರಮೇಶ ಕಮತಗಿ ಅವರ ಗೆಳೆಯ ದಿ. ಶ್ರೀಧರ ಕುಲಕರ್ಣಿ ಅವರ ಸ್ಮರಣಾರ್ಥ ‘ಮೇಘಮೈತ್ರಿ ಗ್ರಂಥಾಲಯ’ದ ಉದ್ಘಾಟನಾ ಸಮಾರಂಭವು ದಿನಾಂಕ 05 ಜನವರಿ 2025 ರಂದು ಕಮತಗಿಯ ಹಿರೇಮಠದಲ್ಲಿ ನಡೆಯಿತು. ಸಮಾರಂಭದಲ್ಲಿ ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ ಶ್ರೀ 1008 ಜಗದ್ಗುರು ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದರು ಶ್ರೀ ಉಜ್ಜಯಿನಿ ಮಹಾಪೀಠ ಇವರು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ರಮೇಶ ಕಮತಗಿ ಮಾತನಾಡಿ “ಗೆಳೆಯ ದಿ. ಶ್ರೀಧರ ಕುಲಕರ್ಣಿ ಅವರ ಸ್ಮರಣಾರ್ಥ ‘ಮೇಘಮೈತ್ರಿ ಗ್ರಂಥಾಲಯ’ ಮಾಡಿದ್ದು ಗೆಳೆಯನ ಹೆಸರು ಅಮರವಾಗಲಿ ಹಾಗೂ ಅವನ ಹೆಸರಲ್ಲಿ ಒಂದಿಷ್ಟು ಜನರಿಗೆ ಜ್ಞಾನಾರ್ಜನೆಯಾಗಲಿ ಎಂಬ ಇಚ್ಛೆಯಿಂದ ನನ್ನ ಬಯಕೆ ಈಡೇರಿತು. ಎಲ್ಲರ ಸಹಾಯ ಸಹಕಾರದಿಂದ ಈ ಕೆಲಸವಾಗಿದೆ ಆದ್ದರಿಂದ ಎಲ್ಲರಿಗೂ ಪ್ರೀತಿಯ ಧನ್ಯವಾದಗಳು” ಎಂದರು. ಈ ಸಂಧರ್ಭದಲ್ಲಿ ಹಿರೇಮಠದ ಷ. ಬ್ರ. ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು,…

Read More

ಮಂಗಳೂರು: ‘ಮಂಗಳೂರು ಲಿಟ್ ಫೆಸ್ಟ್‌’ನ ಈ ವರ್ಷದ ಪ್ರಶಸ್ತಿಗೆ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಸಾಮರ್ಥ್ಯ ಅಭಿವೃದ್ಧಿ ಆಯೋಗದ ಸದಸ್ಯ ಹಾಗೂ ‘ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್’ ಇದರ ಸಂಸ್ಥಾಪಕ ಅಧ್ಯಕ್ಷರಾದ ಡಾ. ಆರ್. ಬಾಲಸುಬ್ರಹ್ಮಣ್ಯಂ ಅವರನ್ನು ಆಯ್ಕೆ ಮಾಡಲಾಗಿದೆ. ಮಂಗಳೂರು ಲಿಟ್ ಫೆಸ್ಟ್ (ಸಾಹಿತ್ಯ ಹಬ್ಬ) 11 ಮತ್ತು 12 ಜನವರಿ 2025ರಂದು ನಡೆಯಲಿದ್ದು, ಜನವರಿ 12ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಭಾರತ ಫೌಂಡೇಷನ್‌ ಇದರ ಸುನಿಲ ಕುಲಕರ್ಣಿ ಹಾಗೂ ಶ್ರೀರಾಜ ಗುಡಿ ತಿಳಿಸಿದರು. ಸಾಹಿತ್ಯ ಹಬ್ಬವನ್ನು ಎಸ್.ಎಲ್.ಭೈರಪ್ಪ ಉದ್ಘಾಟಿಸಲಿದ್ದು, ಇದರಲ್ಲಿ 34 ಗೋಷ್ಠಿಗಳಲ್ಲಿ 72 ಪರಿಣತರು ವಿಷಯ ಮಂಡಿಸಲಿದ್ದಾರೆ. 6 ಇಂಗ್ಲಿಷ್ ಹಾಗೂ 8 ಕನ್ನಡ ಪುಸ್ತಕಗಳು ಲೋಕಾರ್ಪಣೆಗೊಳ್ಳಲಿವೆ. ಅಂಧರಿಗಾಗಿ ಒಂದು ಗೋಷ್ಠಿ ಏರ್ಪಡಿಸಲಾಗಿದ್ದು, ಒಂದು ಗೋಷ್ಠಿಯನ್ನು ಸಂಪೂರ್ಣವಾಗಿ ಸಂಸ್ಕೃತದಲ್ಲಿ ನಡೆಸಲಾಗುವುದು. ಸಾಹಿತ್ಯ ಹಬ್ಬದಲ್ಲಿ ಪಾಲ್ಗೊಳ್ಳುವವರು ತಮ್ಮ ಹೆಸರನ್ನಾದರೂ ತುಳುವಿನಲ್ಲಿ ಬರೆಯುವಂತಾಗಬೇಕು ಎಂಬ ಆಶಯದೊಂದಿಗೆ ತುಳು ಲಿಪಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದರು.

Read More