Subscribe to Updates
Get the latest creative news from FooBar about art, design and business.
Author: roovari
ಪುತ್ತೂರು : ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯ ಇಲ್ಲಿನ ಸಂಶೋಧನಾ ಕೇಂದ್ರ ಹಾಗೂ ಐಕ್ಯೂಎಸಿ ಮತ್ತು ಶಿವರಾಮ ಕಾರಂತ ಅಧ್ಯಯನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಶಿವರಾಮ ಕಾರಂತರ ಕುರಿತು ವಿಶೇಷ ಉಪನ್ಯಾಸ ಕಾರ್ಯಗಾರವು ದಿನಾಂಕ 15 ಅಕ್ಟೋಬರ್ 2025ರಂದು ಸುವರ್ಣ ಮಹೋತ್ಸವ ಸಭಾಭವನದಲ್ಲಿ ನಡೆಯಿತು. ಈ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಕನ್ನಡ ವಿಶ್ರಾಂತ ಪ್ರಾಧ್ಯಾಪಕ ಡಾ. ನರಸಿಂಹಮೂರ್ತಿ ಆರ್. “ಇಪ್ಪತ್ತನೇ ಶತಮಾನದಲ್ಲಿ, ಜಗತ್ತು ಕಂಡ ಅತ್ಯಂತ ಶ್ರೇಷ್ಠ ವ್ಯಕ್ತಿ ಪಟ್ಟಿ ಮಾಡಿದರೆ ಶಿವರಾಮ ಕಾರಂತರು ಅಗ್ರಗಣ್ಯರು. ಒಬ್ಬ ವ್ಯಕ್ತಿ ಮನಸ್ಸು ಮಾಡಿದರೆ ಏನನ್ನೆಲ್ಲಾ ಸಾಧಿಸಬಹುದು ಎಂಬುದಕ್ಕೆ ಮಾದರಿ ಶಿವರಾಮ ಕಾರಂತರು. ನಾಲ್ಕು ಗೋಡೆಯ ಮಧ್ಯೆ ಮಕ್ಕಳನ್ನು ಬೆಳೆಸುವ ಬದಲು ಮಕ್ಕಳು ಪರಿಸರದೊಂದಿಗೆ ಬೆರೆಯುವುದರ ಮೂಲಕ ಪರಿಸರದ ಒಂದು ಭಾಗವಾಗಬೇಕು ಎಂಬ ಕಾರಣದಿಂದ ಶಿಕ್ಷಣದಲ್ಲಿ ಹೊಸ ಆಲೋಚನೆಗಳನ್ನು ತಂದರು. ಕಾರಂತರ ಪುಸ್ತಕಗಳನ್ನು ಓದುದರ ಮೂಲಕ ವಿದ್ಯಾರ್ಥಿಗಳು ತಮ್ಮ ಬದುಕನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಬಹುದು” ಎಂದು ಹೇಳಿದರು.…
ಮಂಗಳೂರು : ಯಕ್ಷ ಅಭಿಮಾನಿ ಬಳಗ ಟ್ರಸ್ಟ್ ಸುರತ್ಕಲ್ ಇದರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ಸಹಯೋಗದಲ್ಲಿ ಟ್ರಸ್ಟಿನ ದಶಕ ಸಂಭ್ರಮ ಕಾರ್ಯಕ್ರಮ ಅಂಗವಾಗಿ ‘ಶುಭಂ ಕರೋತಿ ಕಲ್ಯಾಣಂ’ ಯಕ್ಷಗಾನ ಕಾರ್ಯಕ್ರಮ ಹಾಗೂ ಸಾಧಕರಿಗೆ ಸಮ್ಮಾನವು ದಿನಾಂಕ 04 ಅಕ್ಟೋಬರ್ 2025ರಂದು ಸುರತ್ಕಲ್ನ ವಿದ್ಯಾದಾಯಿನಿ ವಜ್ರಮಹೋತ್ಸವ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಹಿರಿಯ ಭಾಗವತರಾದ ಕುರಿಯ ಗಣಪತಿ ಶಾಸ್ತ್ರಿ, ಹಿರಿಯ ಮದ್ದಳೆಗಾರರಾದ ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿ, ಹಿರಿಯ ವೇಷಧಾರಿ ರಮೇಶ್ ಭಟ್ ಬಾಯಾರು, ಹಿರಿಯ ಪ್ರಸಂಗ ಕರ್ತರಾದ ಮಾಧವ ಭಂಡಾರಿ ಕುಳಾಯಿ, ನೇಪತ್ಯ ಕಲಾವಿದರಾದ ಮನೋಜ್ ಕುಮಾರ್ ಕಿನ್ನಿಗೋಳಿ ಇವರನ್ನು ಸಮ್ಮಾನಿಸಲಾಯಿತು. ಕಾರ್ಯಕ್ರಮದ ಸಂಘಟನೆಗೆ ನೆರವು ನೀಡಿದ ಗಣ್ಯರನ್ನು ಇದೇ ಸಂದರ್ಭ ಸಮ್ಮಾನಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ “ಕಳೆದ ಹತ್ತು ವರ್ಷಗಳಿಂದ ಯಕ್ಷ ಅಭಿಮಾನಿ ಬಳಗವು ಟ್ರಸ್ಟ್ ಮೂಲಕ ಯಕ್ಷಗಾನ ಸೇವೆಯನ್ನು ಮಾಡುತ್ತಿರುವುದು ಶ್ಲಾಘನೀಯ” ಎಂದರು.…
ಬೆಂಗಳೂರು : ರವೀಂದ್ರ ಕಲಾಕ್ಷೇತ್ರದಲ್ಲಿ ದಿನಾಂಕ 15 ಅಕ್ಟೋಬರ್ 2025ರಂದು ಕನ್ನಡಪರ ಚಿಂತಕ, ಹೋರಾಟಗಾರ ಸಾಮಾಜಿಕ, ಸಾಂಸ್ಕೃತಿಕ ಸಂಘಟಕ ಪಾಲನೇತ್ರ ಇವರಿಗೆ ಅಭಿನಂದನೆ ಮತ್ತು ‘ಕನ್ನಡ ಜಂಗಮ’ ಗ್ರಂಥ ಲೋಕಾರ್ಪಣಾ ಸಮಾರಂಭ ನಡೆಯಿತು. ಸಿದ್ದಗಂಗಾ ಮಠದ ಶ್ರೀ ಶ್ರೀ ಶ್ರೀ ಸಿದ್ದಲಿಂಗಾಸ್ವಾಮಿಗಳು, ದೇಗುಲಮಠದ ಡಾ.ಚನ್ನಬಸವ ಸ್ವಾಮೀಜಿಗಳು, ಪವಾಡ ಶ್ರೀ ಬಸವಣ್ಣ ದೇವರಮಠದ ಶ್ರೀ ಸಿದ್ದಲಿಂಗ ಸ್ವಾಮಿಗಳು, ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ. ರೇವಣ್ಣ ಮತ್ತು ವಿ.ಸೋಮಣ್ಣ ಪ್ರತಿಷ್ಠಾನದ ಅಧ್ಯಕ್ಷರಾದ ಶೈಲಜ ಸೋಮಣ್ಣ, ನಿವೃತ್ತ ಐ.ಎ.ಎಸ್. ಅಧಿಕಾರಿ ಸಿ. ಸೋಮಶೇಖರ್, ಕನ್ನಡ ಪರ ಹೋರಾಟಗಾರ ಡಾ. ಬೈರಮಂಗಲ ರಾಮೇಗೌಡ, ಕನ್ನಡಪರ ಚಿಂತಕ, ಹೋರಾಟಗಾರ ಪಾಲನೇತ್ರ, ಗುರುನಾಥ ಹೊಳ್ಳ, ಅಭಿನಂದನಾ ಸಮಿತಿ ಅಧ್ಯಕ್ಷ ಶಿವರಾಮೇಗೌಡ ಇವರುಗಳು ಈ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು. ಸಿದ್ದಗಂಗಾ ಮಠದ ಶ್ರೀ ಶ್ರೀ ಶ್ರೀ ಸಿದ್ದಲಿಂಗಾ ಸ್ವಾಮಿಗಳು ಮಾತನಾಡಿ “ಕನ್ನಡದ ಅಭಿಮಾನಿಗಳು ಗಟ್ಟಿಯಾಗಿ…
ಹಾಸನ : ಮಾಣಿಕ್ಯ ಪ್ರಕಾಶನ (ರಿ.) ಹಾಸನ ಸಂಸ್ಥೆಯು ಸಾಹಿತ್ಯದ ವಿವಿಧ ಪ್ರಕಾರಗಳ ಕೃತಿಗಳಿಗೆ ಪ್ರತಿವರ್ಷ ಕೊಡಮಾಡುವ ದತ್ತಿ ಪ್ರಶಸ್ತಿಗಳಿಗೆ 2024ರಲ್ಲಿ ಮೊದಲ ಮುದ್ರಣವಾಗಿ ಪ್ರಕಟಗೊಂಡ ಸ್ವತಂತ್ರ ಕೃತಿಗಳನ್ನು ಆಹ್ವಾನಿಸಲಾಗಿತ್ತು. ರಾಜ್ಯ ಹಾಗೂ ಹೊರ ರಾಜ್ಯಗಳಿಂದ ನೂರಾರು ಕವಿ-ಸಾಹಿತಿಗಳು ಕೃತಿಗಳನ್ನು ಕಳಿಸಿಕೊಟ್ಟಿದ್ದರು. ಹಿರಿಯ ಸಾಹಿತಿಗಳ ಸಮಿತಿಯನ್ನು ರಚಿಸಿ ಅರ್ಹ ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ದಿನಾಂಕ 02 ನವೆಂಬರ್ 2025ರ ಭಾನುವಾರ ನಗರದ ಸಂಸ್ಕೃತ ಭವನದಲ್ಲಿ ಪ್ರಕಾಶನವು ಹಮ್ಮಿಕೊಳ್ಳುವ ದಶಮಾನೋತ್ಸವ ಕಾರ್ಯಕ್ರಮದಲ್ಲಿ ದತ್ತಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಪ್ರಕಾಶಕಿ ದೀಪಾ ಉಪ್ಪಾರ್ ತಿಳಿಸಿದ್ದಾರೆ. ಹಿರಿಯ ಸಾಹಿತಿ ಡಾ. ರಂಜಾನ್ ದರ್ಗಾ, ಎನ್. ಶೈಲಜಾ ಹಾಸನ, ಕೊಟ್ರೇಶ್ ಎಸ್. ಉಪ್ಪಾರ್, ಟಿ. ಸತೀಶ್ ಜವರೇಗೌಡ, ಪ್ರಭಾವತಿ ಶೆಡ್ತಿ, ರೇಷ್ಮಾ ಕಂದಕೂರು, ಡಾ. ಅಮರೇಶ ಪಾಟೀಲ, ಡಾ. ವಿಶ್ವೇಶ್ವರ ಎನ್. ಮೇಟಿ, ಡಾ. ಎಚ್.ಕೆ. ಹಸೀನಾ, ಲತಾಮಣಿ ಎಂ.ಕೆ. ತುರುವೇಕೆರೆ, ಪದ್ಮಾವತಿ ವೆಂಕಟೇಶ್, ನೀಲಾವತಿ ಸಿ.ಎನ್., ಎಚ್.ಎಸ್. ಬಸವರಾಜ್, ನಾಗರಾಜ್ ದೊಡ್ಡಮನಿ, ವಾಸು ಸಮುದ್ರವಳ್ಳಿ,…
ಮಡಿಕೇರಿ : ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಕೊಡಗು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೈ ಭಾರತ್, ಜಿಲ್ಲಾ ಯುವ ಒಕ್ಕೂಟ ಮಡಿಕೇರಿ, ವಿರಾಜಪೇಟೆ ಹಾಗೂ ಸೋಮವಾರಪೇಟೆ ತಾಲೂಕು ಯುವ ಒಕ್ಕೂಟ ಮತ್ತು ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ಆಯೋಜಿತ ‘ಜಿಲ್ಲಾ ಮಟ್ಟದ ಯುವ ಜನೋತ್ಸವ’ವು ದಿನಾಂಕ 16 ಅಕ್ಟೋಬರ್ 2025ರಂದು ಕಾಲೇಜು ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿ.ಟಿ. ವಿಸ್ಮಯಿ ಮಾತನಾಡಿ “ಅಭಿವೃದ್ಧಿ ಹೊಂದುತ್ತಿರುವ ದೇಶವಾದ ಭಾರತದಲ್ಲಿಂದು, ಅತ್ಯಂತ ಸಂಪದ್ಭರಿತವಾದ ಜಾನಪದ ಕಲಾ ಸಂಸ್ಕೃತಿಯತ್ತ ಯುವ ಪೀಳಿಗೆಯ ಆಸಕ್ತಿ ಕ್ಷೀಣಿಸುತ್ತಿರುವುದು ಕಂಡು ಬರುತ್ತಿದೆ. ಇಂದಿನ ಯುವ ಶಕ್ತಿ ಪ್ರಸ್ತುತ ತಂತ್ರಜ್ಞಾನ ಕ್ಷೇತ್ರದತ್ತ ಹೆಚ್ಚಿನ ಅಸಕ್ತಿಯನ್ನು ತೋರಿ ಅದರತ್ತ ಮಾರುಹೋಗುತ್ತಿದೆ. ಮೊದಲು ನಾವು ನಾಡಿನೆಲ್ಲೆಡೆ ಇರುವ ವೈವಿಧ್ಯಮಯವಾದ ಜಾನಪದ ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಆಸಕ್ತರಾಗಬೇಕು. ಇಂದಿನ ಯುವ ಸಮೂಹ ತಮ್ಮ ಬದುಕಿಗೆ ಒಳಿತಾಗುವಂತಹ ವಿದ್ಯಾಭ್ಯಾಸ…
ಬೆಂಗಳೂರು : ಕಲಾ ಗಂಗೋತ್ರಿ ಇವರ ವತಿಯಿಂದ ‘ರಂಗಹಬ್ಬ’ ದೀಪಾವಳಿ ಧಮಾಕ ಮೂರು ನಾಟಕಗಳ ಪ್ರದರ್ಶನವನ್ನು ದಿನಾಂಕ 17, 18 ಮತ್ತು 19 ಅಕ್ಟೋಬರ್ 2025ರಂದು ಬೆಂಗಳೂರಿನ ಎನ್. ಆರ್. ಕಾಲೋನಿಯ ಸಿ. ಅಶ್ವಥ್ ಕಲಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 17 ಅಕ್ಟೋಬರ್ 2025ರಂದು ಸಂಜೆ 7-00 ಗಂಟೆಗೆ ಸಿದ್ಧಾರ್ಥ್ ಭಟ್ ಇವರ ನಿರ್ದೇಶನದಲ್ಲಿ ‘ಸೂಜಿ ಮಲ್ಲಿಗೆ’, ದಿನಾಂಕ 18 ಅಕ್ಟೋಬರ್ 2025ರಂದು ಸಂಜೆ 7-00 ಗಂಟೆಗೆ ಡಾ. ಬಿ.ವಿ. ರಾಜಾರಾಂ ಇವರ ನಿರ್ದೇಶನದಲ್ಲಿ ‘ಮನೆ ಮನೆ ಕಥೆ’, ದಿನಾಂಕ 19 ಅಕ್ಟೋಬರ್ 2025ರಂದು ಸಂಜೆ 6-30 ಗಂಟೆಗೆ ಡಾ. ಎಸ್.ಎಲ್. ಭೈರಪ್ಪ ಸ್ಮರಣೆಯಲ್ಲಿ ಡಾ. ಬಿ.ವಿ. ರಾಜಾರಾಂ ಇವರ ನಿರ್ದೇಶನದಲ್ಲಿ ‘ಮಂದ್ರ’ ನಾಟಕ ಪ್ರದರ್ಶನಗೊಳ್ಳಲಿದೆ.
ವಿದುಷಿ ರಂಜನಿ ಹೆಬ್ಬಾರ್ ಅವರನ್ನು ನೆನಪಿಸಿಕೊಳ್ಳುತ್ತಾ ಒಂದು ರಾಗವನ್ನು ಪಾರಂಪರಿಕ ಪದ್ಧತಿಯಂತೆ ಕ್ರಮಬದ್ಧವಾಗಿ ಬೆಳೆಸಿಕೊಂಡು ಹೋಗಬೇಕೆನ್ನುವ ಸಂಗೀತಜ್ಞರು ಒಂದೆಡೆ, ಅದೇ ರಾಗಸೌಧವನ್ನು ಪ್ರವೇಶಿಸಲು ಹತ್ತಾರು ಪಾರ್ಶ್ವಗಳಿಂದ, ಹೊಸ ಹೊಸ ಕಿಂಡಿಗಳು ತೆರೆದುಕೊಳ್ಳುತ್ತಿರುವುದನ್ನು ಗುರುತಿಸಿ ಸಂತೋಷಪಡುವ ಶ್ರೋತೃಗಳು ಇನ್ನೊಂದೆಡೆ. ಈ ಎರಡನೆಯ ವರ್ಗದ ರಸಿಕರನ್ನು ತಮ್ಮ ನಿರೂಪಣಾ ವೈಖರಿಯಿಂದ ಸೆರೆಹಿಡಿದ ಕಲಾವಿದರು ಮೈಸೂರಿನ ವಿದ್ವಾನ್ ಜಿ.ಕೆ. ಮನಮೋಹನ್ ಕೃಷ್ಣ. ಶ್ರೇಷ್ಠ ಗಾಯಕಿಯಾಗಿದ್ದ ರಂಜನಿ ಹೆಬ್ಬಾರ್ ಇವರ ಸ್ಮರಣಾರ್ಥ ದಿನಾಂಕ 28 ಸೆಪ್ಟೆಂಬರ್ 2025ರಂದು ಉಡುಪಿಯ ನೂತನ ರವೀಂದ್ರ ಮಂಟಪದಲ್ಲಿ ‘ರಾಗರತ್ನಮಾಲಿಕೆ -41’ ಸರಣಿಯಲ್ಲಿ ಮನಮೋಹನ ಕೃಷ್ಣ ಇವರ ಕಚೇರಿಯು ರಾಗ ಧನ ಸಂಸ್ಥೆಯ ಆಶ್ರಯದಲ್ಲಿ ನಡೆಯಿತು. ನಗುಮುಖದ, ಅಂತೆಯೇ ಮೃದುಶಾರಿರದ ಗಾಯಕರು; ಸಾಂಪ್ರದಾಯಿಕತೆಗಿಂತ ತುಸು ಭಿನ್ನವೆನಿಸುವ, ಪಾಂಡಿತ್ಯಪೂರ್ಣ ಹಾಗೂ ವಿನೂತನವಾದ ವಿಯ ಗಾಯನ ಶೈಲಿ ! ಸಂಪೂರ್ಣ ರಾಗವಿರಲಿ – ಅತ್ಯಂತ ತ್ವರಿತಗತಿಯ ‘ಅ’ ಕಾರಗಳು ಮತ್ತು ಅಲ್ಲಲ್ಲಿ ಗೃಹಬೇಧಗಳ ಸಂಹಿತ ಅನಾಯಾಸವಾಗಿ ಹಾಡಬಲ್ಲ -ಅದೇ ಸಮಯದಲ್ಲಿ ಶ್ರುತಿ ಹಾಗೂ ಸ್ವರಸ್ಥಾನಗಳ ನಿಖರತೆಯನ್ನು…
ಮಂಗಳೂರು : ರಾಮಕೃಷ್ಣ ಮಿಷನ್ ಮಂಗಳೂರು ಸಂಸ್ಥೆಯ ಅಮೃತ ವರ್ಷ 75 ವರ್ಷಗಳ ಸಂಭ್ರಮಾಚರಣೆ ಅಂಗವಾಗಿ ‘ಐಟಿಸಿ ಮಿನಿ ಸಂಗೀತ್ ಸಮ್ಮೇಳನ್’ ಸಮಾರಂಭವನ್ನು ದಿನಾಂಕ 19 ಅಕ್ಟೋಬರ್ 2025ರಂದು ಸಂಜೆ 3-30 ಗಂಟೆಗೆ ಮಂಗಳೂರಿನ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ಚಿರಂತನ ಚಾರಿಟೇಬಲ್ ಟ್ರಸ್ಟ್ ಸುರತ್ಕಲ್, ಐಟಿಸಿ ಸಂಗೀತ್ ರಿಸರ್ಚ್ ಅಕಾಡೆಮಿ ಮತ್ತು ಸಪ್ತಕ ಬೆಂಗಳೂರು ಇವುಗಳ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದೆ. ಪಂಡಿತ್ ಉಲ್ಹಾಸ್ ಕಶಾಲ್ಕರ್ ಇವರ ಹಾಡುಗಾರಿಕೆ, ಶ್ರೀ ಪರಮಾನಂದ ರಾಯ್ ಇವರ ಕೊಳಲು ವಾದನ, ಪಂಡಿತ್ ಸುರೇಶ್ ತಲ್ವಾಲ್ಕರ್ ಇವರ ತಬಲಾ, ಅಭಿಷೇಕ್ ಬೋರ್ಕರ್ ಇವರ ಸರೋದ್, ಶ್ರೀ ಗುರುಪ್ರಸಾದ್ ಹೆಗ್ಡೆ ಇವರ ಹಾರ್ಮೋನಿಯಂ ಮತ್ತು ಯಶವಂತ್ ವೈಷ್ಣವ್ ಇವರ ತಬಲಾ ವಾದನ ಪ್ರಸ್ತುತಗೊಳ್ಳಲಿದೆ.
ಬೆಂಗಳೂರು : ಚಿಣ್ಣರಲೋಕ ಟ್ರಸ್ಟ್(ರಿ.) ಬೆಂಗಳೂರು, ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ (ರಿ.) ಕಮತಗಿ, ಶ್ರೀ ಆನಂದ ಲಿಂಗೇಶ್ವರ ಟ್ರಸ್ಟ್ (ರಿ.) ಬೆಂಗಳೂರು, ಭಾರತೀಯ ಸ್ತ್ರೀ ಶಕ್ತಿ ಸಂಘಟನಾ ಟ್ರಸ್ಟ್(ರಿ.) ಬೆಂಗಳೂರು ಜಂಟಿಯಾಗಿ ಆಯೋಜಿಸುವ ಕಲೆ,ಸಾಹಿತ್ಯ ಹಾಗೂ ಸಾಂಸ್ಕೃತಿಕ ಉತ್ಸವ” ಕಾರ್ಯಕ್ರಮವು ದಿನಾಂಕ 18 ಅಕ್ಟೋಬರ್ 2025ರ ಶನಿವಾರ ಬೆಳಗ್ಗೆ ಘಂಟೆ 10:00ಕ್ಕೆ ಬೆಂಗಳೂರು ಹೆಬ್ಬಾಳದಲ್ಲಿರುವ ಶ್ರೀ ಆನಂದಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ ಕನ್ನಡ ಕುವರ ರಂಗ ನಿರ್ದೇಶಕ ಹಾಗೂ ರಂಗಭೂಮಿ ಕಲಾವಿದರಾದ ಬೆಂಗಳೂರಿನ ಶ್ರೀ ಎಂ. ಅಶೋಕ್ ಕುಮಾರ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಹೆಬ್ಬಾಳ ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ಶ್ರೀ ಸಿ. ಮುನಿಕೃಷ್ಣ ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕವಿಗೋಷ್ಠಿ, ಉಪನ್ಯಾಸ, ಪುಸ್ತಕ ಬಿಡುಗಡೆ, ಕಲಾ ಪ್ರದರ್ಶನ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.
ಮಂಗಳೂರು: ತುಲುವೆರೆ ಟ್ರಸ್ಟ್ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ‘ತುಡರ ಪರ್ಬ’ ಕವಿಗೋಷ್ಠಿ ಕಾರ್ಯಕ್ರಮವು ದಿನಾಂಕ 19 ಅಕ್ಟೋಬರ್ 2025ರಂದು ಬೆಳಗ್ಗೆ ಘಂಟೆ 9.30ಕ್ಕೆ ಕೆನರಾ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಯುವವಾಹಿನಿ ಕೇಂದ ಸಮಿತಿ ಮಾಜಿ ಅಧ್ಯಕ್ಷ ರಾಜೇಶ್ ಬಿ. ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಸುರತ್ಕಲ್ ಗೋವಿಂದದಾಸ ಕಾಲೇಜು ಉಪನ್ಯಾಸಕಿ ಅಕ್ಷತಾ ವಿ. ‘ತುಡರ ಪರ್ಬ’ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಬಳಿಕ ನಡೆಯಲಿರುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕೆನರಾ ಕಾಲೇಜು ಇಲ್ಲಿನ ಉಪನ್ಯಾಸಕರಾದ ರಘು ಇಡ್ಡಿದು ವಹಿಸಲಿದ್ದು, ಇದೇ ಸಂದರ್ಭದಲ್ಲಿ ಟ್ರಸ್ಟ್ ಸದಸ್ಯತ್ವ ಅಭಿಯಾನ ನಡೆಯಲಿದೆ ಎಂದು ತುಲುವೆರೆ ಕಲ ಟ್ರಸ್ಟ್ ಅಧ್ಯಕ್ಷೆ ಗೀತಾ ಲಕ್ಷ್ಮೀಶ್ ತಿಳಿಸಿದ್ದಾರೆ.