Subscribe to Updates
Get the latest creative news from FooBar about art, design and business.
Author: roovari
ಬೈಂದೂರು : ಯಕ್ಷಶಿಕ್ಷಣ ಟ್ರಸ್ಟ್ (ರಿ.) ಉಡುಪಿ ಮತ್ತು ಯಕ್ಷ ಗುರುಕುಲ ಬೈಂದೂರು ಇವರ ಸಹಭಾಗಿತ್ವದಲ್ಲಿ ಬೈಂದೂರಿನಲ್ಲಿ ನಾಲ್ಕು ಪ್ರೌಢಶಾಲೆಗಳ ‘ಕಿಶೋರ ಯಕ್ಷಗಾನ ಸಂಭ್ರಮ’ವು ದಿನಾಂಕ 30 ಡಿಸೆಂಬರ್ 2024ರಂದು ಉದ್ಘಾಟನೆಗೊಂಡಿತು. ಕ್ಷೇತ್ರದ ಶಾಸಕರಾದ ಗುರುರಾಜ ಗಂಟಿಹೊಳೆ ಇವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಹಿರಿಯ ಯಕ್ಷಗಾನ ಕಲಾವಿದರಾದ ಸಂಜೀವ ಗಾಣಿಗರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಅಭ್ಯಾಗತರಾಗಿ ಉದ್ಯಮಿಗಳಾದ ದಯಾನಂದ ಬಾಸ್ ಬೈಲ್, ದೀನಪಾಲ ಶೆಟ್ಟಿ, ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಭಾಸ್ಕರ್ ದೇವಾಡಿಗ, ಸುರೇಶ ಬಚವಾಡಿ, ಯಕ್ಷಗಾನ ಕಲಾರಂಗದ ನಾರಾಯಣ ಎಂ. ಹೆಗಡೆ, ಹೆಚ್.ಎನ್. ಶೃಂಗೇಶ್ವರ, ಗಣೇಶ್ ಬ್ರಹ್ಮಾವರ ಭಾಗವಹಿಸಿದ್ದರು. ಬೈಂದೂರಿನ ಯಕ್ಷಗುರುಕುಲದ ಸಂಚಾಲಕರಾದ ಸುನೀಲ್ ಹೊಲಾಡು ಸ್ವಾಗತಿಸಿದ ಕಾರ್ಯಕ್ರಮವನ್ನು ಶಿಕ್ಷಕರಾದ ಸುಧಾಕರ್ ಪಿ. ನಿರ್ವಹಿಸಿದರು. ಯಕ್ಷಶಿಕ್ಷಣ ಟ್ರಸ್ಟಿನ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳನ್ನಾಡಿ ಶಾಸಕರನ್ನು ಅಭಿನಂದಿಸಿದರು. ಬಳಿಕ ಸರಕಾರಿ ಪ್ರೌಢಶಾಲೆ, ಕಂಬದಕೋಣೆ ಇಲ್ಲಿನ ವಿದ್ಯಾರ್ಥಿಗಳಿಂದ, ಹೆಮ್ಮಾಡಿ ಪ್ರಭಾಕರ್ ಆಚಾರ್ಯ ನಿರ್ದೇಶನದಲ್ಲಿ ‘ದ್ರೌಪದಿ ಪ್ರತಾಪ’ ಮತ್ತು ಸರ್ಕಾರಿ ಪ್ರೌಢಶಾಲೆ ಉಪ್ಪುಂದ ಇಲ್ಲಿನ ವಿದ್ಯಾರ್ಥಿಗಳಿಂದ…
ಹೆಸರಾಂತ ಕಾದಂಬರಿಗಳನ್ನು ಹಾಗೂ ಕಥಾ ಸಂಕಲನಗಳನ್ನು ಬರೆದು ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ಕಾದಂಬರಿಗಳ ಸುಪ್ರಸಿದ್ಧ ಲೇಖಕಿ ಶ್ರೀಮತಿ ಎಂ.ಕೆ. ಇಂದಿರಾ. ಅವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ದಿನಾಂಕ 05.01.1917ರಂದು ಜನಿಸಿದರು. ಇವರ ತಂದೆ ತರೀಕೆರೆ ಸೂರ್ಯನಾರಾಯಣರಾವ್ ಹಾಗೂ ತಾಯಿ ಬನಶಂಕರಮ್ಮ. ಆಗಿನ ಕಾಲದ ಜೀವನ ವಿಧಾನದ ಪ್ರಕಾರ ಎಂ. ಕೆ. ಇಂದಿರಾ ಅವರಿಗೆ 12ನೇ ವಯಸ್ಸಿನಲ್ಲಿ ಶ್ರೀಯುತ ಕೃಷ್ಣರಾವ್ ರೊಂದಿಗೆ ಬಾಲ್ಯ ವಿವಾಹ ನಡೆಯುತ್ತದೆ. ಈ ಕಾರಣದಿಂದಲೇ ಅವರು ಕೇವಲ ಆರನೆಯ ತರಗತಿ ತನಕ ವಿದ್ಯಾಭ್ಯಾಸವನ್ನು ಪಡೆಯುತ್ತಾರೆ. ಸಾಹಿತ್ಯ ಲೋಕಕ್ಕೆ ಶ್ರೇಷ್ಠ ಕೃತಿಗಳನ್ನು ನೀಡಿದ ಮಹಾನ್ ಲೇಖಕಿಯಾದ ಶ್ರೀಮತಿ ಎಂ. ಕೆ. ಇಂದಿರಾ ಇವರಿಗೆ ಸಾಹಿತ್ಯ ರಚನೆಯ ಕಾರ್ಯದಲ್ಲಿ ಅವರ ಶೈಕ್ಷಣಿಕ ವ್ಯವಸ್ಥೆ ಯಾವುದೇ ರೀತಿಯ ಕೊರತೆಯನ್ನು ತಂದೊಡ್ಡಲಿಲ್ಲವೆಂಬುದು ನಿರ್ವಿವಾದ. ಮುಖ್ಯವಾಗಿ ಅವರು ಬಾಳಿ ಬದುಕಿದ ಕುಟುಂಬದಲ್ಲಿ ಹೆಚ್ಚಿನವರು ಕಲೆ, ಸಾಹಿತ್ಯ, ಸಾಂಸ್ಕೃತಿಕ ಬದುಕಿನಲ್ಲಿ ಉನ್ನತ ಸ್ಥಾನವನ್ನು ಪಡೆದಿದ್ದರು. ಇವರ ತಾಯಿ ಬನಶಂಕರಮ್ಮ ಹಾರ್ಮೋನಿಯಂ, ಗಮಕ ಹಾಡುಗಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು.…
ಉಡುಪಿ : ಭಾವನಾ ಫೌಂಡೇಶನ್ ಹಾವಂಜೆ ಹಾಗೂ ಭಾಸಗ್ಯಾಲರಿ ಮತ್ತು ಸ್ಟುಡಿಯೋ ಆಯೋಜಿಸುತ್ತಿರುವ ದೇಶೀಯ ಜನಪದ ಕಲೆಗಳ ಸರಣಿಯ ಹದಿನೈದನೆಯ ಕಾರ್ಯಕ್ರಮದಲ್ಲಿ ‘ಚನ್ನಪಟ್ಟಣದ ಗೊಂಬೆ’ ತಯಾರಿಕೆಯ ಕಾರ್ಯಾಗಾರದ ಉದ್ಘಾಟನೆಯು ದಿನಾಂಕ 04 ಜನವರಿ 2025ರಂದು ಬಡಗುಪೇಟೆಯಲ್ಲಿ ನಡೆಯಿತು. ಈ ಕಾರ್ಯಾಗಾರದ ಉದ್ಘಾಟನೆಯನ್ನು ನೆರವೇರಿಸಿದ ಮಣಿಪಾಲ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಆಂಡ್ ಪ್ಲಾನಿಂಗ್‌ನ ಅಸೋಶಿಯೇಟ್ ಪ್ರೊಫೆಸರ್ ಆರ್ಕಿಟೆಕ್ಟ್ ತ್ರಿವಿಕ್ರಮ್ ಭಟ್ ಇವರು ಮಾತನಾಡಿ “ಭಾರತೀಯ ಕಲೆಗಳು ಬಹು ಶ್ರೇಷ್ಠವಾದುದು. ಅವುಗಳಲ್ಲೂ ಉಪಯೋಗೀ ಕಲೆಗಳು ದಿನನಿತ್ಯದ ಬದುಕಿನಲ್ಲಿ ಹಾಸುಹೊಕ್ಕಾಗಿ ನಮ್ಮ ಸೌಂದರ್ಯಪ್ರಜ್ಞೆಯನ್ನು ಬಿಂಬಿಸುವಂತವುಗಳು. ಈ ತೆರನಾದ ಚನ್ನಪಟ್ಟಣದಂತಹ ವಿಶೇಷ ಕಲೆ ಪ್ಲಾಸ್ಟಿಕ್ ಆಟಿಕೆಗಳಿಗೆ ಇಂದಿಗೆ ಸಡ್ಡು ಹೊಡೆದು ನಿಂತಿರುವುದು ಮತ್ತು ಈ ಕಾರ್ಯಾಗಾರವು ಉಡುಪಿಯಲ್ಲಿ ಆಯೋಜನೆಗೊಳ್ಳುತ್ತಿರುವುದು ಬಹು ಸಂತಸದ ಸಂಗತಿ” ಎಂಬುದಾಗಿ ಅಭಿಪ್ರಾಯವಿತ್ತರು. ಗೊಂಬೆ ತಯಾರಿಕಾ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾದ ಸುಕನ್ಯಾ ನೀಲಸಂದ್ರ ಹಾಗೂ ಸುಂದ್ರಕಲಾರವರು ಈ ಕಾರ್ಯಾಗಾರದಲ್ಲಿ ಕಲಿಸಿಕೊಡುತ್ತಿರುವ ಆಟಿಕೆಗಳ ಉಪಯುಕ್ತತೆ ಹಾಗೂ ತಾಂತ್ರಿಕತೆಯನ್ನು ವಿವರಿಸಿದರು. ಟಿಪ್ಪು ಸುಲ್ತಾನನ ಕಾಲದಲ್ಲಿ ಪರ್ಶಿಯನ್ ಆಟಿಕೆಗಳ…
ಉಡುಪಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕದಿಂದ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಮನೆಯೇ ಗ್ರಂಥಾಲಯ ಯೋಜನೆಯಡಿ 130ನೇ ಗ್ರಂಥಾಲಯದ ಉದ್ಘಾಟನಾ ಸಮಾರಂಭವು ದಿನಾಂಕ 03 ಜನವರಿ 2025ರಂದು ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಿಕ್ಷಣ ತಜ್ಞ ಡಾ. ಮಹಾಬಲೇಶ್ವರ ರಾವ್ “ಜನರಲ್ಲಿ ಓದುವ ಹವ್ಯಾಸ ವೃದ್ಧಿ, ಜ್ಞಾನ ಗಳಿಕೆ, ವಿದ್ಯಾವಂತರಾಗಲು ಪೂರಕವಾಗಿ ಗ್ರಂಥಾಲಯ ಆಂದೋಲನ ನಡೆದಿಲ್ಲ. ಬಸ್, ರೈಲು, ವಿಮಾನ ನಿಲ್ದಾಣ, ಆಸ್ಪತ್ರೆ ಸಹಿತ ಸಾರ್ವಜನಿಕ ಸ್ಥಳದಲ್ಲಿ ಜನರಿಗೆ ವಿರಾಮ ಸಿಕ್ಕಾಗ ಓದಲು ಪುಸ್ತಕ ಭಂಡಾರ/ಗ್ರಂಥಾಲಯ ನಿರ್ಮಾಣವನ್ನು ಅಗತ್ಯ ಸೇವೆಯಾಗಿ ಪರಿಗಣಿಸಬೇಕು. ಆಧುನಿಕ ಡಿಜಿಟಲ್ ಮಾಧ್ಯಮ ಬಂದ ಮೇಲೆ ಪುಸ್ತಕ ಓದು ಕಡಿಮೆಯಾಗಿದೆ. ಪದವಿ ಪೂರ್ವ ಕಾಲೇಜಿನ ತನಕದ ವೇಳಾಪಟ್ಟಿಯಲ್ಲಿ ಗ್ರಂಥಾಲಯದ ಅವಧಿಯೇ ಇಲ್ಲ. ಗ್ರಂಥಾಲಯಗಳು ದುರ್ಬಲವಾಗಿವೆ. ಈ ನಿಟ್ಟಿನಲ್ಲಿ ಶಾಲೆಗೊಂದು ಗ್ರಂಥಾಲಯ ಅಭಿಯಾನ ಆಗಬೇಕು” ಎಂದು ಹೇಳಿದರು. ಜಪಾನಿನ ಮಿಯಾಜಾಕಿ ವಿವಿಯ ಪ್ರೊಫೆಸರ್ ಡಾ. ಹರೀಶ್ ಕುಮಾರ್ ಮಧ್ಯಸ್ಥ…
ಧಾರವಾಡ : 2025ನೆಯ ಸಾಲಿನಲ್ಲಿ ಸಾಹಿತ್ಯ ಗಂಗಾ ಧಾರವಾಡ ಸಂಸ್ಥೆಯ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಇನ್ನಷ್ಟು ಅರ್ಥಪೂರ್ಣ ಮತ್ತು ವಿಸ್ತಾರಗೊಳ್ಳಲಿವೆ. ಸಾಹಿತ್ಯ ಗಂಗಾ ಸಂಸ್ಥೆಯು ‘ಸಾಹಿತ್ಯ ಗಂಗಾ ಕಥಾಮಾಲೆ’ ಯೋಜನೆಯ ಮೂಲಕ ಹಲವು ಉದಯೋನ್ಮುಖ ಪ್ರತಿಭೆಗಳನ್ನು ಗುರುತಿಸುವ ಮತ್ತು ಅವರಿಗೊಂದು ವೇದಿಕೆ ಒದಗಿಸುವ ಕೆಲಸ ಮಾಡಲಿದೆ. ಸಾಹಿತ್ಯಿಕ ರಾಜಕೀಯದಿಂದ ದೂರವಿರುವ, ಪ್ರಕಟಣೆಯ ಸೌಲಭ್ಯ ಕಠಿಣವಾದ ಪ್ರತಿಭಾನ್ವಿತ ಬರಹಗಾರರ ಪುಸ್ತಕ ಪ್ರಕಟಣೆಗೆ ನೆರವು ನೀಡಲಾಗುವುದು. ಕೃತಿ ಪ್ರಕಟಣೆಗೆ ಧನ ಸಹಾಯ ನೀಡಲಾಗುವುದಿಲ್ಲ. ಕೆಲವು ಉತ್ಸಾಹಿ ಪ್ರಕಾಶಕರ ನೆರವಿನೊಂದಿಗೆ ಪ್ರಕಟಿಸಲಾಗುವುದು. ಕೇವಲ ಸ್ವತಂತ್ರ ಮತ್ತು ಅಪ್ರಕಟಿತ ಕಥಾಸಂಕಲನ ಹಾಗೂ ಕಾದಂಬರಿಗಳನ್ನು ಮಾತ್ರ ಪ್ರಕಟಿಸಲಾಗುವುದು. ಜಾತಿ, ಲಿಂಗ, ವಯೋಮಿತಿ, ಪ್ರದೇಶ ಸೇರಿದಂತೆ ಯಾವುದೇ ರೀತಿಯ ಕೃತಕ ಮಾನದಂಡಗಳಿರುವುದಿಲ್ಲ. ಕೃತಿಯ ಗುಣಮಟ್ಟವೊಂದೇ ಆಯ್ಕೆಯ ಏಕೈಕ ಮಾನದಂಡ. ಆಸಕ್ತ ಲೇಖಕ/ಲೇಖಕಿಯರು ತಮ್ಮ ಸಂಕ್ಷಿಪ್ತ ಪರಿಚಯ, ಪೂರ್ಣ ವಿಳಾಸ ಮತ್ತು ಇತ್ತೀಚಿನ ಭಾವಚಿತ್ರದೊಂದಿಗೆ ಪ್ರಕಟಿಸಬೇಕೆಂದಿರುವ ಕೃತಿಯ ಆಯ್ದ ಭಾಗಗಳ ಸಾಫ್ಟ್ ಕಾಪಿಯನ್ನು ನಮಗೆ ವಾಟ್ಸಪ್ ಅಥವಾ ಈಮೇಲ್ ಮೂಲಕ…
ಉಡುಪಿ : ರಂಗಭೂಮಿ ಉಡುಪಿ ವತಿಯಿಂದ ಶಾಲಾ ಮಕ್ಕಳಿಗೆ ರಂಗ ಶಿಕ್ಷಣ ಅಭಿಯಾನದ ಅಂಗವಾಗಿ ಹಮ್ಮಿಕೊಂಡ ರಂಗಶಿಕ್ಷಣ ಮಕ್ಕಳ ನಾಟಕೋತ್ಸವದ ಸಮಾರೋಪ ಸಮಾರಂಭ ದಿನಾಂಕ 02 ಜನವರಿ 2024ರಂದು ಎಂ. ಜಿ. ಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಖ್ಯಾತ ರಂಗ ಕರ್ಮಿ ಡಾ. ಜೀವನರಾಮ್ ಸುಳ್ಯ ಮಾತನಾಡಿ ನಾಟಕ, ಯಕ್ಷಗಾನ, ನೃತ್ಯ ಮೊದಲಾದ ಕಲಾ ಕೌಶಲಗಳನ್ನು ಮಕ್ಕಳಿಗೆ ಕಲಿಸಿದರೆ ಅವರ ಶೈಕ್ಷಣಿಕ ಪ್ರಗತಿಗೆ ತೊಡಕಾಗುತ್ತದೆ ಎಂದು ಆತಂಕ ಪಡುವ ಅಗತ್ಯವಿಲ್ಲ. ರಂಗ ಶಿಕ್ಷಣ ಮಕ್ಕಳ ಪ್ರಗತಿಗೆ ಪೂರಕವಾಗಲಿದೆ ಎಂಬುದನ್ನು ಹೆತ್ತವರು ಅರಿತುಕೊಳ್ಳಬೇಕು. ಶಾಲಾ ಕಾಲೇಜುಗಳ ವಾರ್ಷಿಕೋತ್ಸದಲ್ಲಿ ಸಾಮಾನ್ಯವಾಗಿ ನಡೆಯುತ್ತಿದ್ದ ನಾಟಕಗಳು ಇಂದು ನಾನಾ ಕಾರಣಗಳಿಂದಾಗಿ ಬಹುತೇಕ ನಿಂತೇ ಹೋಗಿವೆ. ಇದು ಮಕ್ಕಳಿಗಾದ ನಷ್ಟ. ರಂಗ ಚಟುವಟಿಕೆ ಎಂಬುದು ಒಡೆಯುವ ಕಾರ್ಯ ಅಲ್ಲ, ಬದಲಿಗೆ ಅದು ಕಟ್ಟುವ ಕಾರ್ಯ. ಜಾತಿ, ಮತ, ವರ್ಗ, ಬೇಧ ಎಲ್ಲಾ ಮರೆತು ಒಂದಾಗುವುದು ರಂಗಭೂಮಿಯಲ್ಲಿ ಮಾತ್ರ. ಸರಕಾರ ಇಂತಹ ಉತ್ತಮ…
ಮಂಗಳೂರು : ಏಮ್ ಫಾರ್ ಸೇವಾ ಸಂಸ್ಥೆ ಚಾರಿಟಿ ಕಾರ್ಯಕ್ರಮಗಳಿಗೆ ಪೂರಕವಾಗಿ ದಿನಾಂಕ 12 ಜನವರಿ 2025ರಂದು ಸಂಜೆ 6-00 ಗಂಟೆಗೆ ಕುದ್ಮುಲ್ ರಂಗ ರಾವ್ ಪುರಭವನದಲ್ಲಿ ಸಂಗೀತ ಭಾರತಿ ಪ್ರತಿಷ್ಠಾನದ ಸಹಯೋಗದೊಂದಿಗೆ ಮ್ಯೂಸಿಕಲ್ ಸೆಲೆಬ್ರೇಷನ್ ಆಫ್ ರಾಮ ಎಂಬ ಪರಿಕಲ್ಪನೆಯೊಂದಿಗೆ ‘ರಾಮಂ ಭಜೇ’ ಸಂಗೀತ ಕಾರ್ಯಕ್ರಮ ಆಯೋಜಿಸಿದೆ. ದೇಶದ ಹೆಸರಾಂತ ಯುವ ಕಲಾವಿದೆ ಸೂರ್ಯಗಾಯತ್ರಿ ಇವರ ಹಾಡುಗಾರಿಕೆ ಇರಲಿದೆ. ಏಮ್ ಫಾರ್ ಸೇವಾ ಸಂಸ್ಥೆ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮೊದಲಬಾರಿಗೆ ಮಂಗಳೂರಿನಲ್ಲಿ ಸಂಗೀತಾಸಕ್ತರಿಗೆ ಹೊಸ ರೀತಿಯ ಸಂಗೀತಾನುಭವ ನೀಡಬೇಕು ಎಂಬ ಉದ್ದೇಶದಿಂದ ದೇಶ-ವಿದೇಶಗಳ ಪ್ರತಿಷ್ಠಿತ ವೇದಿಕೆಗಳಲ್ಲಿ ಸುಶ್ರಾವ್ಯ ಸಂಗೀತದಿಂದ ಹೆಸರುವಾಸಿಯಾಗಿರುವ ಸೂರ್ಯಗಾಯತ್ರಿಯವರ ಕಾರ್ಯಕ್ರಮ ಆಯೋಜಿಸಿದೆ. ಸೂರ್ಯಗಾಯತ್ರಿ ವಿವಿಧ ಹಾಡುಗಳ ಮೂಲಕ ರಾಮಾರಾಧನೆ ಮಾಡಲಿದ್ದು, ಸಂಗೀತ ಕ್ಷೇತ್ರದ ದಿಗ್ಗಜರೆನಿಸಿಕೊಂಡ ವಿದ್ವಾನ್ ಸುಂದರ ರಾಜನ್ ವೀಣೆ, ವಿದ್ವಾನ್ ಆದರ್ಶ ಅಜಯ್ ಕುಮಾರ್ ವಯೋಲಿನ್, ವಿ.ಪಿ.ವಿ. ಅನಿಲ್ ಕುಮಾರ್ ಮೃದಂಗ, ಪಂಡಿತ್ ಪ್ರಶಾಂತ್ ಶಂಕರ್ ತಬಲ, ಶೈಲೇಶ್ ಮಾರರ್ ತಾಳವಾದ್ಯದಲ್ಲಿ ಸಹಕರಿಸಲಿದ್ದಾರೆ. ಗ್ರಾಮೀಣ…
ಕುಂದಾಪುರ : ಧಾರ್ಮಿಕ, ಶೈಕ್ಷಣಿಕ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಲೋಕದ ಹರಿಕಾರ, ಅಜಾತಶತ್ರು ತೊಂಬತ್ತರ ದಾರ್ಶನಿಕ ಬಸ್ರೂರು ಅಪ್ಪಣ್ಣ ಹೆಗ್ಡೆಯವರನ್ನು ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಐರೋಡಿ ಇವರು ಬಸ್ರೂರಿನ ಹೆಗ್ಡೆಯವರ ಸ್ವಗೃಹದಲ್ಲಿ ದಿನಾಂಕ 23 ಡಿಸೆಂಬರ್ 2024ರಂದು ಸನ್ಮಾನಿಸಿದರು. ಕಲಾಕೇಂದ್ರದ ಅಧ್ಯಕ್ಷರಾದ ಆನಂದ ಕುಂದರ್ ಇವರ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್ ಸ್ವಾಗತಿಸಿದರು. ಯಕ್ಷಗಾನದ ಕೇದಿಗೆ ಮಂದಲೆ ತೊಡಿಸಿ, ಮಣಿಸರದೊಂದಿಗೆ ತೊಂಬತ್ತರ ಸುಂದರಾಂಗ ಹೆಗ್ಡೆಯವರನ್ನು ಶೃಂಗರಿಸಿ ಅಭಿನಂದಿಸಲಾಯಿತು. ಶ್ರೀಹೆಗ್ಡೆಯವರು ಮಾತನಾಡುತ್ತಾ “ಯಕ್ಷಗಾನ ಸಮಾಜವನ್ನು ಸಂಸ್ಕಾರವಂತರನ್ನಾಗಿ ರೂಪಿಸುತ್ತದೆ. ಧರ್ಮವಂತರನ್ನಾಗಿ ಬಾಳುವಲ್ಲಿ ಸಹಕರಿಸುತ್ತದೆ. ಪುರಾಣ ಮುಂತಾದ ಅನೇಕ ವಿಚಾರಗಳನ್ನು ತಿಳಿಸುತ್ತಾ ಜನರನ್ನು ವಿದ್ಯಾವಂತರನ್ನಾಗಿಸುತ್ತದೆ. ಇಂತಹ ಕಲೆಯನ್ನು ಉಳಿಸಿ ಬೆಳಸುವ ಬಗ್ಗೆ ಪರಿಶ್ರಮಿಸುತ್ತಿರುವ ಯಕ್ಷಗಾನ ಕಲಾಕೇಂದ್ರಕ್ಕೆ ಶುಭ ಹಾರೈಕೆಗಳು” ಎಂದು ಹೇಳಿದರು. ಅಧ್ಯಕ್ಷರಾದ ಆನಂದ ಕುಂದರ್ ಇವರು ಅಪ್ಪಣ್ಣ ಹೆಗ್ಡೆಯುವರಿಗೆ ತೊಂಬತ್ತರ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದರು. ಭಾಗವತರಾದ ರಾಘವೇಂದ್ರ ಮಯ್ಯ ಮತ್ತು ಗಣೇಶ ಆಚಾರ್ಯರು ವಿಷ್ಣುಮೂರ್ತಿ ಬೇಳೂರರು ರಚಿಸಿದ ಅಪ್ಪಣ್ಣ ಹೆಗ್ಡೆಯುವರ…
ಕಾಸರಗೋಡು : ಶ್ರೀಮಾನ್ ಕೃಷ್ಣಮೂರ್ತಿ ಕುಲಕರ್ಣಿ ಹುಬ್ಬಳ್ಳಿ ಸಾರತ್ಯದ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಇದೀಗ ಕೇರಳ ರಾಜ್ಯದಲ್ಲಿ ತನ್ನ ಕಾರ್ಯಕ್ಷೇತ್ರವನ್ನು ವಿಸ್ತಾರಗೊಳಿಸುವ ಸದುದ್ದೇಶದಿಂದ ಕಾರ್ಯ ಪ್ರವೃತವಾಗಿದೆ. ಕಾಸರಗೋಡು ಕನ್ನಡ ಭವನದ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಇವರನ್ನು ಕೇರಳ ರಾಜ್ಯ ಸಂಚಾಲಕರನ್ನಾಗಿ ನಿಯಮಿಸಿ ಆದೇಶ ನೀಡಿದ ಹಿನ್ನೆಲೆಯಲ್ಲಿ, ಕಾಸರಗೋಡು ಜಿಲ್ಲೆಯಲ್ಲಿ ಚುಟುಕು ಕವಿಗಳ ಜನಪ್ರಿಯ ಕವಿ, ಸಂಘಟಕ, ಸಂಪನ್ಮೂಲ ವ್ಯಕ್ತಿಯಾದ ಶ್ರೀ ವೆಂಕಟ್ ಭಟ್ ಎಡನೀರು ಇವರನ್ನು ಕಾಸರಗೋಡು ಜಿಲ್ಲಾ ವ್ಯಾಪ್ತಿಗೆ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಇವರು ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ರಾಜ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದರು. ಅನೇಕ ಚುಟುಕು ಕೃತಿಗಳನ್ನು ಹೊರತಂದಿದ್ದು, ನೂರಾರು ಕವಿಗೋಷ್ಠಿ, ಕವಿತಾ ರಚನಾ ಕಾರ್ಯಗಾರಗಳನ್ನು ಸಂಘಟಿಸಿದ್ದಾರೆ. ಇವರ ಪ್ರಕಟಿತ ಚುಟುಕು ಕೃತಿಗಳು, ಖರ್ಜುರ, ನೂರೊಂದು ಕವಿತೆಗಳು, ತಿಳಿಸಾರು, ಪೆಟ್ಟಿಗೆ ಭೂತ, 302 ಎಳ್ಳುಂಡೆ. ವೆಂಕಟ್ ಎಡನೀರು ಇವರನ್ನು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಇದರ ಕಾಸರಗೋಡು ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ…
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಮುಖ ಕಾರ್ಯ ಚಟುವಟಿಕೆಗಳಲ್ಲಿ ಪುಸ್ತಕ ಪ್ರಕಟಣೆ ಬಹಳ ಮುಖ್ಯವಾದದ್ದು. ಇದುವರೆಗೂ 1,800ಕ್ಕೂ ಹೆಚ್ಚು ಪುಸ್ತಕಗಳನ್ನು ಪರಿಷತ್ತು ಪ್ರಕಟಿಸಿದ್ದು, ಅದು ಒಂದು ರೀತಿಯಲ್ಲಿ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯನ್ನೇ ಬಿಂಬಿಸುತ್ತದೆ ಎಂದರೆ ತಪ್ಪಾಗಲಾರದು. ಪರಿಷತ್ತು ಪ್ರಕಟಿಸುವ ಪುಸ್ತಕಗಳು ಎಂದರೆ ಹೂರಣ ಮತ್ತು ಮುದ್ರಣಗಳೆರಡರೆಲ್ಲಿಯೂ ಶ್ರೇಷ್ಠ ಗುಣಮಟ್ಟವನ್ನು ಹೊಂದಿರುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿಯವರು ತಿಳಿಸಿದ್ದು, ಕನ್ನಡಿಗರಿಗೆ ಈ ಕೃತಿಗಳನ್ನು ತಲುಪಿಸುವ ಉದ್ದೇಶದಿಂದ ವರ್ಷದಲ್ಲಿ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ, ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆ ಮತ್ತು ಕನ್ನಡ ರಾಜ್ಯೋತ್ಸವಗಳ ಸಂದರ್ಭದಲ್ಲಿ ನಾಲ್ಕು ತಿಂಗಳುಗಳ ಕಾಲ ವಿಶೇಷ ರಿಯಾಯತಿ ಮಾರಾಟವನ್ನು ಕನ್ನಡ ಸಾಹಿತ್ಯ ಪರಿಷತ್ತು ಅದಮ್ಯ ಪುಸ್ತಕ ಪ್ರೇಮಿ ಗಳಗನಾಥರ ಹೆಸರಿನ ತನ್ನ ‘ಪುಸ್ತಕ ಮಳಿಗೆ’ಯಲ್ಲಿ ಏರ್ಪಡಿಸುತ್ತದೆ. ಅದರಂತೆ 76ನೆಯ ಗಣರಾಜ್ಯೋತ್ಸವದ ಸಂದರ್ಭದಲ್ಲಿ 2025ರ ಜನವರಿ ತಿಂಗಳಿಡೀ ‘ವಿಶೇಷ ರಿಯಾಯತಿ ಮಾರಾಟ’ವನ್ನು ನಡೆಸಲಿದ್ದು ಶೇ.10ರಿಂದ ಶೇ 75ರವರೆಗೆ ವಿಶೇಷ ರಿಯಾಯಿತಿಯನ್ನು ಪರಿಷತ್ತಿನ…