Author: roovari

ಮಂಗಳೂರು : ತನ್ನ ಮೂರೂವರೆ ವರ್ಷ ವಯಸ್ಸಿನಿಂದಲೇ ತಂದೆಯ ಪ್ರೇರಣೆಯಿಂದ ತಬಲಾದತ್ತ ಆಕರ್ಷಿತಳಾದವಳು ಆದ್ಯಾ ಯು. ಉಡುಪಿಯ ಖ್ಯಾತ ತಬಲಾ ವಾದಕರಾದ ಎನ್. ಮಾಧವ ಆಚಾರ್ಯ ಇವರ ಪ್ರೋತ್ಸಾಹದೊಂದಿಗೆ ತಬಲಾ ಶಿಕ್ಷಣವನ್ನು ಪ್ರಾರಂಭಿಸಿದ ಆದ್ಯಾ, 2024-25ನೇ ಸಾಲಿನ ಕರ್ನಾಟಕ ಸರಕಾರದ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಹಾಗೂ ಕಲಾ ವಿಶ್ವ ವಿದ್ಯಾಲಯ ಮೈಸೂರು ಇವರು ನಡೆಸಿದ ಹಿಂದೂಸ್ತಾನಿ ತಾಳವಾದ್ಯ, ತಬಲಾ ಜ್ಯೂನಿಯರ್ ವಿಭಾಗದ ಪರೀಕ್ಷೆಯಲ್ಲಿ ಶೇ.91 ಅಂಕಗಳನ್ನು ಪಡೆದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ಪ್ರಸ್ತುತ ತಬಲಾದಲ್ಲಿ ಸೀನಿಯರ್ ಗ್ರೇಡ್ ಪಾಠಗಳನ್ನು ಅಭ್ಯಾಸ ಮಾಡುತ್ತಿರುವ ಇವರು ಮಂಗಳೂರಿನ ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲಿನ 6ನೇ ತರಗತಿಯ ವಿದ್ಯಾರ್ಥಿನಿ ಹಾಗೂ ಎಂ.ಆರ್.ಪಿ.ಎಲ್.ನ ಡೆಲ್ಲಿ ಪಬ್ಲಿಕ್ ಸ್ಕೂಲ್ ಇಲ್ಲಿನ ಹಳೆ ವಿದ್ಯಾರ್ಥಿನಿಯಾಗಿರುತ್ತಾರೆ. ತಬಲಾ ಶಿಕ್ಷಣದ ಜೊತೆಗೆ ‘ಥಂಡರ್ ಕಿಡ್ಸ್’ ಎಂಬ ವಾದ್ಯಗೋಷ್ಠಿ ತಂಡದಲ್ಲಿ ಖಾಯಂ ತಬಲಾ ಸದಸ್ಯರಾಗಿ ಜಿಲ್ಲೆಯ ಹಲವೆಡೆ ಕಾರ್ಯಕ್ರಮಗಳನ್ನು ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುವ ಇವರು ‘ರಾಗ…

Read More

ಬೆಂಗಳೂರು : ಶ್ರೀ ಅಖಿಲ ಹವ್ಯಕ ಮಹಾಸಭಾ (ರಿ.) ಸಂಸ್ಥೆಯ ಆಶ್ರಯದಲ್ಲಿ ಬೆಂಗಳೂರಿನ ಅರಮನೆ ಮೈದಾನಿನಲ್ಲಿ ದಿನಾಂಕ 27 ಡಿಸೆಂಬರ್ 2024ರಿಂದ 29 ಡಿಸೆಂಬರ್ 2024ರಂದು ಜರಗಿದ ‘ತೃತೀಯ ವಿಶ್ವ ಹವ್ಯಕ ಸಮ್ಮೇಳನ’ದ ಉದ್ಘಾಟನಾ ಸಮಾರಂಭದಲ್ಲಿ ‘ಹವಿ-ಸವಿ ಕೋಶ’ ಎಂಬ ಪ್ರಪ್ರಥಮ ಬೃಹತ್ ಹವ್ಯಕ-ಕನ್ನಡ ನಿಘಂಟನ್ನು ರಚಿಸಿದ ಕಾಸರಗೋಡಿನ ಹಿರಿಯ ಸಾಹಿತಿ, ಶಿಕ್ಷಣ ತಜ್ಞ ಶ್ರೀ ವಿ.ಬಿ. ಕುಳಮರ್ವ ಕುಂಬ್ಳೆ ಇವರನ್ನು ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರಗಳ ಸಾಧನೆಗಾಗಿ ‘ಹವ್ಯಕ ಸಾಧಕ ರತ್ನ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಯಿತು.

Read More

ಮೈಸೂರು : ನಟನ ರಂಗಶಾಲೆ ಇದರ ವತಿಯಿಂದ ಹೊಸ ವರ್ಷದ ಮೊದಲ ಕಾರ್ಯಕ್ರಮವಾಗಿ ಪ್ರಖ್ಯಾತ ವಾಗ್ಮಿಗಳಾದ ಶ್ರೀ ಲಕ್ಷ್ಮೀಶ ತೋಳ್ಪಾಡಿಯವರಿಂದ ‘ನಟನೆಯ ಅಧ್ಯಾತ್ಮ’ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ದಿನಾಂಕ 05 ಜನವರಿ 2025ರಂದು ಭಾನುವಾರ ಬೆಳಗ್ಗೆ 11-00 ಗಂಟೆಗೆ ಮೈಸೂರಿನ ರಾಮಕೃಷ್ಣ ನಗರದ ನಟನ ರಂಗಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಸಂಜೆ ಎಂದಿನಂತೆ ವಾರಾಂತ್ಯದ ನಾಟಕ ಇದೆ. ನಟ ಸುಂದರ್, ಪಿ.ಡಿ. ಸತೀಶ ಮುಂತಾದ ಘಟಾನುಗಟಿಗಳು ರಂಗದ ಮೇಲೆ ಬರುತ್ತಾರೆ. ನಟ, ನಿರ್ದೇಶಕ, ನಾಟಕಕಾರ ಸಂಘಟಕ ಎಲ್ಲವೂ ಆಗಿರುವ ರಾಜೇಂದ್ರ ಕಾರಂತರೂ ರಂಗದ ಮೇಲೆ ಇರುತ್ತಾರೆ. ರಂಗ ವಿದ್ಯಾರ್ಥಿಗಳಿಗೆ, ಕಲಾವಿದರಿಗೆ ಮತ್ತು ಆಸಕ್ತರಿಗೆ ಮುಕ್ತ ಪ್ರವೇಶವಿದ್ದು, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ 7259537777, 9480468327 ಮತ್ತು 9845595505. ಶ್ರೀ ಲಕ್ಷ್ಮೀಶ ತೋಳ್ಳಾಡಿ : ಕುಮಾರಧಾರೆ ನದಿಯ ಪಕ್ಕದ ಶಾಂತಿಗೋಡಿನಲ್ಲಿ ನಮ್ಮ ಬಿಂಬವನ್ನು ಪ್ರತಿಬಿಂಬಿಸುವ ಆ ನದಿಯ ಹಾಗೆ ಅನುಭಾವದಲ್ಲಿ ತನ್ನ ಬದುಕನ್ನು ಬಿಂಬಿಸಿಕೊಂಡು ಅದರ ಆನನ್ಯತೆಯಲ್ಲಿ ಸಾರ್ಥಕ್ಯವನ್ನು ಕಂಡುಕೊಂಡ ಲಕ್ಷ್ಮೀಶ ತೋಳ್ತಾಡಿಯವರು ಹುಟ್ಟಿದ್ದು 1947ರಲ್ಲಿ,…

Read More

ಸಿದ್ದಾಪುರ : ಯಕ್ಷಶಿಕ್ಷಣ ಟ್ರಸ್ಟ್ (ರಿ.) ಉಡುಪಿ, ಯಕ್ಷಗಾನ ಕಲಾರಂಗ (ರಿ.) ಉಡುಪಿ, ಯಕ್ಷ ನುಡಿಸಿರಿ ಬಳಗ (ರಿ.) ಸಿದ್ದಾಪುರ ಮತ್ತು ಯಕ್ಷ ಗುರುಕುಲ ಬೈಂದೂರು ಇವರ ಸಹಭಾಗಿತ್ವದಲ್ಲಿ ವಿಧಾನಸಭಾ ಕ್ಷೇತ್ರದ ನಾಲ್ಕು ಪ್ರೌಢಶಾಲೆಗಳ ‘ಕಿಶೋರ ಯಕ್ಷ ಸಂಭ್ರಮ -2024’ವನ್ನು ದಿನಾಂಕ 28 ಡಿಸೆಂಬರ್ 2024ರಂದು ಸಿದ್ದಾಪುರದ ಸರಕಾರಿ ಪ್ರೌಢಶಾಲೆಯ ಮುಂಭಾಗದಲ್ಲಿ ಕಮಲಶಿಲೆ ದೇವಳದ ಆಡಳಿತ ಮುಕ್ತೇಸರರಾದ ಸಚ್ಚಿದಾನಂದ ಚಾತ್ರಾ ಉದ್ಘಾಟಿಸಿದರು. ಬೈಂದೂರು ಶಾಸಕರಾದ ಗುರುರಾಜ ಗಂಟಿಹೊಳೆ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಪ್ರದರ್ಶನ ಸಮಿತಿಯ ಕಾರ್ಯಾಧ್ಯಕ್ಷರಾದ ಡಾ. ಜಗದೀಶ್ ಶೆಟ್ಟಿ, ಕಾರ್ಯದರ್ಶಿ ಗೋಪಾಲ್ ಕಾಂಚನ್, ಶ್ರೀಕಾಂತ್ ನಾಯಕ್, ಚಂದ್ರ ಕುಲಾಲ್, ಸುನೀಲ್ ಹೊಲಾಡು, ಮಧುಸೂಧನ ಕಾಮತ್, ಕೆ. ಬೋಜ ಶೆಟ್ಟಿ, ರಾಜೇಂದ್ರ ಬೆಚ್ಚಳ್ಳಿ, ಶೀಲತಾ ಶೆಟ್ಟಿ, ಗಣೇಶ್ ಶೇಟ್, ನರಸಿಂಹ ಕುಲಾಲ್ ಭಾಗವಹಿಸಿದರು. ಭಾಗವತರಾದ ಜನ್ಸಾಲೆ ರಾಘವೇಂದ್ರ ಆಚಾರ್ಯ ಶುಭಾಶಂಸನೆಗೈದರು. ಯಕ್ಷಶಿಕ್ಷಣ ಟ್ರಸ್ಟಿನ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಗೈದರು. ಕೋಶಾಧಿಕಾರಿ ಎಚ್.ಎನ್. ಶೃಂಗೇಶ್ವರ್ ಮತ್ತು ಗಣೇಶ್ ಬ್ರಹ್ಮಾವರ…

Read More

ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.) ಮತ್ತು ನಾಗರಿಕ ಸಲಹಾ ಸಮಿತಿ (ರಿ.) ಸುರತ್ಕಲ್ ಈ ಸಂಸ್ಥೆಗಳು ಜಂಟಿಯಾಗಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಪ್ರಸ್ತುತ ಪಡಿಸುವ ‘ಉದಯರಾಗ – 58’ನೇ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯು ಸುರತ್ಕಲ್ಲಿನ ಫ್ಲೈ ಓವರಿನ ತಳಭಾಗದಲ್ಲಿ ಎಂ.ಸಿ.ಎಫ್. ನಾಗರಿಕ ಸಲಹಾ ಸಮಿತಿ ಸಾಂಸ್ಕೃತಿಕ ವೇದಿಕೆಯಲ್ಲಿ ದಿನಾಂಕ 05 ಜನವರಿ 2025ರಂದು ಬೆಳಗ್ಗೆ 6-00 ಗಂಟೆಗೆ ನಡೆಯಲಿದೆ. ಮಂಗಳೂರಿನ ಆರೋಹಣಂ ಸ್ಕೂಲ್ ಆಫ್ ಮ್ಯೂಜಿಕ್ ಇದರ ವಿದ್ವಾನ್ ಅನೀಶ್ ವಿ. ಭಟ್ ಇವರ ಶಿಷ್ಯಂದಿರಾದ ಶ್ರೀವರದಾ ಪಟ್ಟಾಜೆ, ಸುಮನಾ ಕೆ., ಚಿನ್ಮಯಿ ವಿ. ಭಟ್, ಹವ್ಯಶ್ರೀ ಕೆ.ಟಿ. ಮತ್ತು ರಕ್ಷಾ ಎ.ಆರ್. ಇವರುಗಳ ಹಾಡುಗಾರಿಕೆಗೆ ಶ್ರೀಮತಿ ಸುನಂದಾ ಪಿ.ಎಸ್. ವಯಲಿನ್ ಮತ್ತು ಶ್ರೀ ಅವಿನಾಶ್ ಬಿ. ಮೃದಂಗದಲ್ಲಿ ಸಾಥ್ ನೀಡಲಿದ್ದಾರೆ. ಮಣಿ ಕೃಷ್ಣಸ್ವಾಮಿ ಆಕಾಡೆಮಿಯ ಕಾರ್ಯದರ್ಶಿಯಾದ ಪಿ. ನಿತ್ಯಾನಂದ ರಾವ್ ಹಾಗೂ ಸುರತ್ಕಲ್ ನಾಗರಿಕ ಸಲಹಾ ಸಮಿತಿ ಅಧ್ಯಕ್ಷರಾದ ಡಾ.…

Read More

ಗಂಜಿಮಠ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಹಾಗೂ ಪ್ರಾದೇಶಿಕ ಘಟಕಗಳ ಸಹಯೋಗದೊಂದಿಗೆ ಯಕ್ಷಧ್ರುವ – ಯಕ್ಷಶಿಕ್ಷಣ ವಿದ್ಯಾರ್ಥಿಗಳಿಂದ ಯಕ್ಷಗಾನ ಕಾರ್ಯಕ್ರಮವನ್ನು ದಿನಾಂಕ 08 ಜನವರಿ 2025ರಂದು ಪೂರ್ವಾಹ್ನ 9-00 ಗಂಟೆಗೆ ಗಂಜಿಮಠದ ಒಡ್ಡೂರು ಫಾರ್ಮ್ಸ್ ಇಲ್ಲಿ ಹಮ್ಮಿಕೊಳ್ಳಲಾಗಿದೆ. ಕೀರ್ತಿಶೇಷ ಮಿಜಾರುಗುತ್ತು ಆನಂದ ಆಳ್ವ ವೇದಿಕೆಯಲ್ಲಿ ಪೂರ್ವಾಹ್ನ 8-40 ಗಂಟೆಗೆ ಚೌಕಿ ಪೂಜೆ ನಡೆಯಲಿದ್ದು, ಬಳಿಕ ಶಾಸಕರಾದ ಶ್ರೀ ರಾಜೇಶ್ ನಾಯ್ಕ್ ಯು. ಇವರಿಂದ ಈ ಸಮಾರಂಭ ಉದ್ಘಾಟನೆಗೊಳ್ಳಲಿದೆ. ಸಭಾ ಕಾರ್ಯಕ್ರಮದ ಬಳಿಕ ಪೊಳಲಿಯ ರಾಜರಾಜೇಶ್ವರಿ ಪ್ರೌಢ ಶಾಲೆಯ ಮಕ್ಕಳಿಂದ ‘ಗಿರಿಜಾ ಕಲ್ಯಾಣ’, ಮಂಚಿ ಕೊಳ್ನಾಡು ಸರಕಾರಿ ಪ್ರೌಢ ಶಾಲೆಯ ಮಕ್ಕಳಿಂದ ‘ಶಶಿಪ್ರಭಾ ಪರಿಣಯ’, ಮಣಿನಾಲ್ಕೂರು ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ‘ಸುದರ್ಶನ ವಿಜಯ’, ಮಧ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ‘ಪುಣ್ಯಕೋಟಿ’, ಫರಂಗಿಪೇಟೆ ಶ್ರೀರಾಮ ಪ್ರೌಢ ಶಾಲೆಯ ಮಕ್ಕಳಿಂದ ‘ಹನುಮೋದ್ಭವ’, ಕಲ್ಲಡ್ಕ ಶ್ರೀರಾಮ ಪ್ರೌಢ ಶಾಲೆ ಮಕ್ಕಳಿಂದ ‘ನರಕಾಸುರ ಮೋಕ್ಷ’, ಮುಲ್ಲಕಾಡು ಸರಕಾರಿ ಪ್ರೌಢ…

Read More

ತುಮಕೂರು: ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘ ಕೊಡಮಾಡುವ 2024ನೇ ಸಾಲಿನ ‘ಸಿದ್ಧಗಂಗಾ ಶ್ರೀ’ ಪ್ರಶಸ್ತಿಗೆ ಹಿರಿಯ ವಿದ್ವಾಂಸ ಗೊ. ರು. ಚನ್ನಬಸಪ್ಪ ಆಯ್ಕೆ ಆಗಿದ್ದಾರೆ. ಪ್ರಶಸ್ತಿಯು ರೂಪಾಯಿ ಒಂದು ಲಕ್ಷ ನಗದು, ಅಭಿನಂದನಾ ಪತ್ರ ಹಾಗೂ ಸ್ಮರಣಿಕೆ ಒಳಗೊಂಡಿದ್ದು, ಸಿದ್ಧಗಂಗಾ ಮಠದಲ್ಲಿ 21 ಜನವರಿ 2025ರಂದು ನಡೆಯುವ ಶಿವಕುಮಾರ ಸ್ವಾಮೀಜಿಯವರ 6ನೇ ವರ್ಷದ ಪುಣ್ಯಸ್ಮರಣೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಕವಿ, ವಿದ್ವಾಂಸ, ಬರಹಗಾರ ಹಾಗೂ ಕನ್ನಡ ಜಾನಪದ ತಜ್ಞರಾದ ಗೊಂಡೇದಹಳ್ಳಿ ರುದ್ರಪ್ಪ ಚನ್ನಬಸಪ್ಪ ಇವರು ರುದ್ರಪ್ಪ ಮತ್ತು ಅಕ್ಕಮ್ಮ ದಂಪತಿಯ ಪುತ್ರರಾಗಿ 1930ರಲ್ಲಿ ಚಿಕ್ಕಮಗಳೂರಿನ ಗೊಂಡೇದಹಳ್ಳಿಯಲ್ಲಿ ಜನಿಸಿದರು. ಮಂಡ್ಯದ ನಿಡಗಟ್ಟದ ಶಾಲೆಯೊಂದರಲ್ಲಿ ಇಂಗ್ಲೀಷ್ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಇವರು ಸರ್ಕಾರಿ ವಲಯದಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಕನ್ನಡ ಜಾನಪದ ಮತ್ತು ವಚನ ಸಾಹಿತ್ಯದ ಮೇಲೆ ವಿಶೇಷ ಆಸಕ್ತಿ ಹೊಂದಿದ್ದ ಇವರು ‘ಸಾಕ್ಷಿಕಲ್ಲು’, ‘ಹೊನ್ನ ಬಿಟ್ಟೆವು ಹೊಲಕೆಲ್ಲ’,’ಕರ್ನಾಟಕ ಪ್ರಗತಿಪಥ’, ‘ಚೆಲುವಾಂಬಿಕೆ’, ‘ಕುಣಾಲ’, ‘ಬಾಗೂರು ನಾಗಮ್ಮ…

Read More

ಬೆಂಗಳೂರು : ಲೇಖಕಿ ಡಾ. ಎಲ್.ಜಿ. ಸುಮಿತ್ರಾ ಇವರು ದಿನಾಂಕ 01 ಜನವರಿ 2025 ರಂದು ನಿಧನರಾದರು. ಇವರಿಗೆ 90 ವರ್ಷ ವಯಸ್ಸಾಗಿತ್ತು. ಕನ್ನಡದ ಹಿರಿಯ ವಿದ್ವಾಂಸರಾದ ಡಿ. ಎಲ್. ಗುಂಡಪ್ಪ ಹಾಗೂ ಶಾರದಮ್ಮ ದಂಪತಿಯ ಪುತ್ರಿಯಾಗಿ 14 ಮಾರ್ಚ್‌ 1934 ರಂದು ಬೆಂಗಳೂರಿನಲ್ಲಿ ಜನಿಸಿದರು. ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸಿರುವ ಇವರು ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡವರು. ‘ಕಾವ್ಯಕಾವೇರಿ’, ‘ಸ್ಪರ್ಶರೇಖೆ’, ‘ಕರ್ನಾಟಕ ವೃತ್ತಿಗಾಯಕರು’ ಹಾಗೂ ‘ಭಾರತದ ಸಂಗೀತ ವಾದ್ಯಗಳು’ ಇವರ ಪ್ರಮುಖ ಕೃತಿಗಳು. ರೇಡಿಯೋ ಮಾಧ್ಯಮದಲ್ಲಿ ಉನ್ನತ ಜವಾಬ್ದಾರಿ ನಿರ್ವಹಿಸಿದ್ದ ಇವರು ಹೊಸದಿಲ್ಲಿಯಲ್ಲಿ ವಾರ್ತಾ ಮತ್ತು ಸಂಗೀತ ವಿಭಾಗದ ನಿರ್ದೇಶಕಿಯಾಗಿ, ಎನ್. ಸಿ. ಇ. ಆರ್. ಟಿ. ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ, ಆಕಾಶವಾಣಿಯ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಇವರ ಸಾಹಿತ್ಯ ಕೃಷಿಗೆ ಜಾನಪದ ಲೋಕ ಹಾಗೂ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ‘ಜಾನಪದ ತಜ್ಞೆ’ ಪ್ರಶಸ್ತಿ, ಎಂಟನೆಯ ಸಂಗೀತ ಸಮ್ಮೇಳನ ಪ್ರಶಸ್ತಿ ಹಾಗೂ ಹಲವಾರು ಪ್ರಶಸ್ತಿ ಮತ್ತು ಸನ್ಮಾನಗಳು ಸಂದಿವೆ.

Read More

ಪುತ್ತೂರು : ಸಂಪ್ಯ ಉದಯಗಿರಿಯಲ್ಲಿ ಶ್ರೀ ವಿಷ್ಣುಮೂರ್ತಿ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ಸ್ಯಮಂತಕ ಮಣಿ’ ಎಂಬ ತಾಳಮದ್ದಳೆ ದಿನಾಂಕ 31 ಡಿಸೆಂಬರ್ 2025ರಂದು ಜರಗಿತು. ಹಿಮ್ಮೇಳದಲ್ಲಿ ಭಾಗವತರಾಗಿ ಆನಂದ ಸವಣೂರು ಹಾಗೂ ಚೆಂಡೆ, ಮದ್ದಲೆಗಳಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಅಚ್ಯುತ ಪಾಂಗಣ್ಣಾಯ ಸಹಕರಿಸಿದರು. ಮುಮ್ಮೇಳದಲ್ಲಿ ಜಯಂತಿ ಹೆಬ್ಬಾರ್ (ಶ್ರೀಕೃಷ್ಣ), ಪ್ರೇಮಲತಾ ರಾವ್ (ನಾರದ), ಕಿಶೋರಿ ದುಗ್ಗಪ್ಪ ನಡುಗಲ್ಲು (ಜಾಂಬವ), ಹರಿಣಾಕ್ಷಿ ಜೆ. ಶೆಟ್ಟಿ (ಬಲರಾಮ) ಸಹಕರಿಸಿದರು. ರಾಧಾಕೃಷ್ಣ ಬೋರ್ಕರ್ ಸ್ವಾಗತಿಸಿ, ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ವಂದಿಸಿ, ರಂಗನಾಥ್ ರಾವ್ ಸಹಕರಿಸಿದರು. ಕಲಾವಿದರಿಗೆ ದೇವಾಲಯದ ಅರ್ಚಕ ಪ್ರೀತಂ ಪುತ್ತೂರಾಯ ಶ್ರೀ ದೇವರ ಪ್ರಸಾದವನ್ನಿತ್ತು ಗೌರವಿಸಿದರು. ನಂತರ ಧಾರ್ಮಿಕ ವೇದಿಕೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಅವರನ್ನು ಅರೆಮಾದನ ಹಳ್ಳಿ ಜಗದ್ಗುರು ಪೀಠದ ಶ್ರೀ…

Read More

ಮಂಗಳೂರು : ಮೂಲ್ಕಿ ತಾಲೂಕು ಎರಡನೆಯ ಸಾಹಿತ್ಯ ಸಮ್ಮೇಳನ 08 ಫೆಬ್ರವರಿ 2025ರ ಶನಿವಾರದಂದು ಕಿನ್ನಿಗೋಳಿಯ ಐಕಳದ ಪೋಂಪೈ ಕಾಲೇಜಿನಲ್ಲಿ ನಡೆಯಲಿದ್ದು ಈ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಖ್ಯಾತ ಸಾಹಿತಿ ಶ್ರೀಧರ ಡಿ. ಎಸ್. ಆಯ್ಕೆಯಾಗಿದ್ದಾರೆ ಎಂದು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಾ. ಎಂ. ಪಿ. ಶ್ರೀನಾಥ್ ತಿಳಿಸಿದ್ದಾರೆ. ಶ್ರೀಧರ ಡಿ. ಎಸ್. : ಯಕ್ಷಗಾನ ಅರ್ಥಧಾರಿ, ಪ್ರಸಂಗ ಕರ್ತೃ, ಯಕ್ಷಗಾನ ವಿಮರ್ಶಕ, ಕಥೆಗಾರ, ಕವಿ, ಕಾದಂಬರಿಕಾರರಾದ ಶ್ರೀಧರ ಡಿ. ಎಸ್. ಮೂರು ದಶಕಗಳ ಕಾಲ ಕಿನ್ನಿಗೋಳಿಯ ಪೋಂಪೈ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಕಿನ್ನಿಗೋಳಿಯಲ್ಲಿ ಸಮಾನ ಆಸಕ್ತ ಗೆಳೆಯರೊಂದಿಗೆ ಸೇರಿ ತಾಳಮದ್ದಲೆಗಾಗಿ ‘ಯಕ್ಷಲಹರಿ’ ಎಂಬ ಸಂಸ್ಥೆಯನ್ನು ರೂಪಿಸಿ ನಿರಂತರ ಯಕ್ಷಗಾನ ಸೇವೆ ಗೈಯುತ್ತಿದ್ದಾರೆ. ಶಿವಮೊಗ್ಗದಲ್ಲಿ ನಡೆದ 11ನೇ ಅಖಿಲ ಭಾರತ ಯಕ್ಷಗಾನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಇವರು 40ಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ. ಇವರ ಬಿಡಿ ಪದ್ಯಗಳನ್ನೂ ಪರಿಗಣಿಸಿದರೆ ಐದು ಸಾವಿರಕ್ಕೂ ಹೆಚ್ಚಿನ ಯಕ್ಷಗಾನ…

Read More