Author: roovari

ಮಂಗಳೂರು : ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಉಜಿರೆ ಇದರ ವತಿಯಿಂದ ರಜತಪರ್ವ ಸರಣಿ – ತಾಳಮದ್ದಳೆ ಸಪ್ತಾಹ’ವು ದಿನಾಂಕ 03-12-2023ರಿಂದ 09-12-2023ರವರೆಗೆ ಪ್ರತಿದಿನ ಸಂಜೆ 4.45ರಿಂದ ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ಪ್ರಾಂಗಣದಲ್ಲಿರುವ ಜಲಜಾಕ್ಷಿ ವಾಸುದೇವ ಭಟ್ ವೇದಿಕೆ (ಅನಂತ ಭಟ್ಟರ ಮನೆ)ಯಲ್ಲಿ ನಡೆಯಲಿದೆ. ದಿನಾಂಕ 03-12-2023ರಂದು ‘ಹನುಮಾರ್ಜುನ’, ದಿನಾಂಕ 04-12-2023ರಂದು ‘ವಾಮನ ಚರಿತ್ರೆ’, ದಿನಾಂಕ 05-12-2023ರಂದು ‘ಗುರುದಕ್ಷಿಣೆ’, ದಿನಾಂಕ 06-12-2023ರಂದು ‘ಶಲ್ಯ ಸಾರಥ್ಯ’, ದಿನಾಂಕ 07-12-2023ರಂದು ‘ಮಾಗಧ ವಧೆ’, ದಿನಾಂಕ 08-12-2023ರಂದು ‘ಸೀತಾಪಹಾರ’ ಮತ್ತು ದಿನಾಂಕ 09-12-2023ರಂದು ‘ಕೃಷ್ಣ ಪರಂಧಾಮ’ ಪ್ರಸಂಗದ ಯಕ್ಷಗಾನ ತಾಳಮದ್ದಳೆಗಳು ನಡೆಯಲಿದೆ.

Read More

ಮಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಸಂಘ, ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಇದರ ಸಹಯೋಗದಲ್ಲಿ ಸಾಹಿತ್ಯ ಪ್ರೇಮಿ, ಸಾಹಿತ್ಯ ಪೋಷಕ ಮತ್ತು ಶಿಕ್ಷಣ ತಜ್ಞ ಡಾ. ಬಿ. ಯಶೋವರ್ಮ ಸಂಸ್ಮರಣೆ ಯಶೋಭಿವ್ಯಕ್ತಿ ಕಾರ್ಯಕ್ರಮ ದಿನಾಂಕ 05-12-2023ರಂದು ಪೂರ್ವಾಹ್ನ 10 ಗಂಟೆಗೆ ಮಂಗಳೂರು ವಿ.ವಿ. ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ದ.ಕ. ಜಿಲ್ಲಾ ಕ.ಸಾ.ಪ.ದ ಅಧ್ಯಕ್ಷರಾದ ಡಾ. ಎಂ. ಪಿ. ಶ್ರೀನಾಥ ವಹಿಸಲಿದ್ದು, ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಇದರ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವ ಇವರು ಉದ್ಘಾಟನೆ ಮಾಡಲಿರುವರು. ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ನಿರಂಜನ ವಾನಳ್ಳಿ ಇವರು ಸಂಸ್ಮರಣ ನುಡಿ ಮತ್ತು ವಿಶೇಷೋಪನ್ಯಾಸ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಶ್ರೀ ವಿಲಾಸ್ ನಾಯಕ್ ಇವರಿಂದ ವಿಶೇಷ ಚಿತ್ರಕಲಾ ಪ್ರದರ್ಶನ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ…

Read More

ಮೈಸೂರು : ಥಿಯೇಟರ್ ತತ್ಕಾಲ್ ಮತ್ತು ಭಿನ್ನಷಡ್ಜ ಸಹಯೋಗದಲ್ಲಿ ಎರಡು ದಿನದ ಸ್ತಾನಿಸ್ಲಾವಸ್ಕಿಯ ವಾಸ್ತವವಾದಿ ಅಭಿನಯ ಕಾರ್ಯಾಗಾರವನ್ನು ದಿನಾಂಕ 02-12-2023 ಮತ್ತು 03-12-2023ರಂದು ಮೈಸೂರಿನ ಕಲಾಮಂದಿರ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಮೈಸೂರಿನ ಕಲಾಮಂದಿರ ಆವರಣದ ಶ್ರೀರಂಗ ಮತ್ತು ಕಿರುರಂಗ ಮಂದಿರಗಳಲ್ಲಿ ಈ ಕಮ್ಮಟ ನಡೆಯಲಿದ್ದು, ಕರ್ನಾಟಕದ ವಿವಿಧೆಡೆಯಿಂದ ಸುಮಾರು ಮೂವತ್ತು ಅಭ್ಯರ್ಥಿಗಳು ಭಾಗವಹಿಸುತ್ತಿದ್ದಾರೆ. ಹಿರಿಯ ರಂಗಭೂಮಿ ಶಿಕ್ಷಕ ಮತ್ತು ನಿರ್ದೇಶಕರಾದ ಶ್ರೀಯುತ ಬಿ.ಆರ್. ವೆಂಕಟರಮಣ ಐತಾಳರು ಈ ಕಮ್ಮಟದ ನಿರ್ದೇಶಕರಾಗಿದ್ದು, ಶ್ರೀಧರ ಹೆಗ್ಗೋಡು, ದಿಗ್ವಿಜಯ ಮತ್ತು ಥಿಯೇಟರ್ ತತ್ಕಾಲಿನ ಅನುಭವೀ ನಟರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುತ್ತಿದ್ದಾರೆ. ದಿನಾಂಕ 02-12-2023ರಂದು ಸಂಜೆ ಶ್ರೀರಂಗ ರಂಗಮಂದಿರದಲ್ಲಿ ಅರಿವು ರಂಗ ಅರ್ಪಿಸುವ ರಿಚರ್ಡ್ ಫೇಯ್ ಮನ್ ಬದುಕನ್ನು ಆಧರಿಸಿದ QED ನಾಟಕದ ಪ್ರದರ್ಶನವಿರುತ್ತದೆ. ದಿನಾಂಕ 03-12-2023ರಂದು ಡಿಸೆಂಬರ್ 3ರ ಬೆಳಿಗ್ಗೆ ಕಿರುರಂಗ ಮಂದಿರದಲ್ಲಿ 10ರಿಂದ 2ರವರೆಗೆ ‘ಪಾತ್ರ ಪ್ರವೇಶ’ ಪುಸ್ತಕದಲ್ಲಿ ಸ್ತಾನಿಸ್ಥಾವಸ್ಕಿ ವಿವರಿಸಿರುವ ದೈಹಿಕ ಪಾತ್ರ ಚಿತ್ರಣ, ದೇಹವನ್ನು ಅಭಿವ್ಯಕ್ತಿಪೂರ್ಣ ಮಾಡುವುದು, ಚಲನೆ ಮೃದುತ್ವ, ಹಾಡು ಮತ್ತು…

Read More

ಉತ್ತರ ಕನ್ನಡ ಜಿಲ್ಲೆಯು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆಗಳಲ್ಲಿ ಒಬ್ಬರಾದ ವಿಷ್ಣು ಗೋವಿಂದ ಭಟ್ಟರು (02-12-1923ರಿಂದ 06-04-1991) ಹೊನ್ನಾವರ ಜಿಲ್ಲೆಯ ಕಡತೋಕದಲ್ಲಿ ಜನಿಸಿದರು. ಮುಂಬೈ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಇವರು ಕೆಲವು ವರ್ಷಗಳವರೆಗೆ ಪ್ರೌಢಶಾಲೆಯ ಶಿಕ್ಷಕರಾಗಿ ದುಡಿದ ಬಳಿಕ ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆಯ ನಿರ್ದೇಶಕರಾಗಿ ಸೇವೆಯನ್ನು ಸಲ್ಲಿಸಿದರು. ಅರಣ್ಯರೋದನ, ಕಾವ್ಯವೇದನೆ, ತುಂಟನ ಪದಗಳು, ಕಿಷ್ಕಿಂಧೆ, ಆತ್ಮಗೀತೆ (ಕವನ ಸಂಕಲನಗಳು), ಪೆದ್ದಂ ಕತೆಗಳು, ದಿವಸ, ಬುರುಕಿ (ಕಥಾ ಸಂಕಲನಗಳು), ಸವಿನೆನೆಪು (ಲೇಖನಗಳು), ಸಹ್ಯಾದ್ರಿ (ಜೀವನಚರಿತ್ರೆ), ಖಾದಿ ಗ್ರಾಮೋದ್ಯೋಗ (ಅನುವಾದ) ಮುಂತಾದ ಕೃತಿಗಳನ್ನು ರಚಿಸಿದ ಇವರು ‘ಆತ್ಮಗೀತೆ’ ಕವನ ಸಂಕಲನಕ್ಕಾಗಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದುಕೊಂಡರು. ತಮ್ಮ ಇಪ್ಪತ್ತಮೂರನೇ ಹರೆಯದಲ್ಲಿ ‘ಪಲಾಯನ’ ಎಂಬ ಸಂಕಲನದ ಮೂಲಕ ಕನ್ನಡ ಕಾವ್ಯಲೋಕಕ್ಕೆ ಕಾಲಿರಿಸಿದ ಇವರು ಬೇಂದ್ರೆ, ಕುವೆಂಪು, ಪು.ತಿ.ನ., ಕೆ.ಎಸ್. ನರಸಿಂಹಸ್ವಾಮಿಯವರ ಪ್ರಭಾವಕ್ಕೆ ಒಳಗಾಗದೆ ತಮ್ಮದೇ ಹಾದಿಯಲ್ಲಿ ನಡೆದರು. ‘ಸಿದ್ಧ ಸರಕಿನ ಪಾತ್ರ ಕೈಕೊಳ್ಳಲೊಲ್ಲೆ; ಹೇಗೆ ಬೇಕೋ ಹಾಗೆ ತಿರುಗಾಡಿ ಒಂದು…

Read More

ಕಾಸರಗೋಡು : ರಂಗಚಿನ್ನಾರಿ (ರಿ) ಇದರ ಸಂಗೀತ ಘಟಕ ಸ್ವರಚಿನ್ನಾರಿಯು ತನ್ನ ಎರಡನೇ ಸರಣಿ ಕಾರ್ಯಕ್ರಮದ ಅಂಗವಾಗಿ ದಿನಾಂಕ 28-11-2023ನೇ ಮಂಗಳವಾರ ಸಂಜೆ 5 ಗಂಟೆಗೆ ಕರಂದಕ್ಕಾಡ್ ಪದ್ಮಗಿರಿ ಕಲಾ ಕುಟೀರದಲ್ಲಿ ‘ಕನಕ ಸ್ಮರಣೆ’ ಕನಕದಾಸರ ಗೀತೆಗಳ ಸಂಗೀತ ರಸಸಂಜೆ ಏರ್ಪಡಿಸಿತು. ಕಾರ್ಯಕ್ರಮವನ್ನು ಖ್ಯಾತ ವಯಲಿನಿಸ್ಟ್ ಶ್ರೀ ಪ್ರಭಾಕರ ಕುಂಜಾರು ದೀಪ ಬೆಳಗಿಸಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ತಮ್ಮ ಹೃದಯಂತರಾಳದ ಶುಭ ಹಾರೈಕೆಗಳನ್ನು ನುಡಿದರು. ಮುಖ್ಯ ಅತಿಥಿಯಾಗಿ ದಾಸಸಾಹಿತ್ಯ ಪ್ರತಿಪಾದಕ ಮಧ್ವಾಧೀಶ ವಿಠ್ಠಲದಾಸ ನಾಮಾಂಕಿತ ರಾಮಕೃಷ್ಣ ಕಾಟುಕುಕ್ಕೆ ಅವರು ಕನಕದಾಸರ ಹುಟ್ಟು, ಇತಿಹಾಸ, ಮತ್ತು ಅವರು ಬರೆದ ಸಾಹಿತ್ಯಗಳ ಹಿಂದೆ ಇದ್ದ ಅವರ ಜೀವನದ ಅನುಭವಗಳು ಮತ್ತು ಅದರ ಮೇಲಿನ ಭಕ್ತಿಯ ಬಗ್ಗೆ ಮಾತನಾಡಿದರು. ಸ್ವತಃ ಭಗವಂತನೇ ಪದಗಳಲ್ಲಿ ಕುಳಿತು ಬರೆಸಿದ ಸಾಹಿತ್ಯ ದಾಸಸಾಹಿತ್ಯ ಎಂದೂ ಅವರು ಹೇಳಿದರು. ಮತ್ತೊಬ್ಬ ಅತಿಥಿಯಾಗಿ ಹರಿದಾಸ ಸಂಕೀರ್ತನಾಕಾರ ದಯಾನಂದ ಹೊಸದುರ್ಗ ಉಪಸ್ಥಿತರಿದ್ದು, ನಿತ್ಯ ಜೀವನದಲ್ಲಿ ದಾಸರಪದಗಳ ಮೌಲ್ಯಗಳ ಮಹತ್ವ ಮತ್ತು ಅಂತಹ ದಾಸಶ್ರೇಷ್ಠರನ್ನು ಭಜಿಸುವುದು ಉತ್ತಮ…

Read More

ಕುಂದಾಪುರ: ಒಂದು ಬಣ್ಣಬಣ್ಣದ ವೇದಿಕೆಯ ಮೇಲೆ ತೆರೆದುಕೊಳ್ಳುವ ಪೌರಾಣಿಕ ಕಥನ, ಇನ್ನೊಂದು ಬದುಕಿನ ವಾಸ್ತವ. ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಭಾಗದ ಯಕ್ಷಗಾನದ ಕಲಾವಿದರಿಗೆ ಇದೇ ಬದುಕು. ತುಳುನಾಡಿನಲ್ಲಿ ‘ಪತ್ತನಾಜೆ’ (ಹಬ್ಬಗಳ ಋತುವಿನ ಕೊನೆಯದಿನ) ಬಂತೆಂದರೆ ಯಕ್ಷಗಾನ ಪ್ರದರ್ಶನಗಳಿಗೆ ತೆರೆಬೀಳುತ್ತದೆ. ಮುಂದೆ ಪ್ರದರ್ಶನಗಳು ಆರಂಭವಾಗುವುದು ನವೆಂಬರ್‌ ಅಂತ್ಯ ಅಥವಾ ಡಿಸೆಂಬರ್‌ ತಿಂಗಳಲ್ಲಿ. ನವೆಂಬರ್‌ ಅಂತ್ಯ ಅಥವಾ ಡಿಸೆಂಬರ್‌ ತಿಂಗಳಲ್ಲಿ ಯಕ್ಷಗಾನ ಪ್ರದರ್ಶನ ಆರಂಭವಾದಾಗ ನನಗೆ ಪ್ರಥಮವಾಗಿ ನೆನಪು ಆಗುವುದು ಕುಂದಾಪುರದಲ್ಲಿ ನಡೆಯುವ ಗಜೇಂದ್ರ ಆಚಾರ್ ಕೋಣಿ ಸಂಘಟನೆಯಲ್ಲಿ ನಡೆಯುವ “ಯಕ್ಷ ರಾತ್ರಿ”. ಯಕ್ಷಗಾನ ಸಂಘಟನೆ ಅಂದ ಕೂಡಲೆ ಹಲವಾರು ಜನ ಮೊದಲ‌ ಸಾಲಿನಲ್ಲಿ ಗುರುತಿಸಿಕೊಳ್ಳುತ್ತಾರೆ‌. ಹಾಗೆ ಮೊದಲ ಸಾಲಿನಲ್ಲಿ ಗುರುತಿಸಬಹುದಾದ ಹೆಸರು “ಗಜೇಂದ್ರ ಆಚಾರ್ ಕೋಣಿ”. ಪ್ರತಿ ವರ್ಷ ಕುಂದಾಪುರದಲ್ಲಿ ಪೆರ್ಡೂರು ಮೇಳಕ್ಕೆ ಮೊದಲ ಅವಕಾಶ ಕಲ್ಪಿಸಿಕೊಟ್ಟು ಮೇಳದ ಹೊಸ ಪ್ರಸಂಗದ ಪ್ರದರ್ಶನ ಹಾಗೂ ತಿರುಗಾಟಕ್ಕೆ ಒಂದು  ವೇದಿಕೆ ನಿರ್ಮಿಸಿಕೊಡುವ ಸಂಘಟಕ. ಯಕ್ಷಗಾನದ ಜೊತೆಗೆ ಸಾಧಕರನ್ನು ಗುರುತಿಸಿ ಗೌರವಿಸುವುದು,…

Read More

ಮಂಗಳೂರಿನ ಕುಡುಂಬೂರು ರವಿ ಹೊಳ್ಳ ಮತ್ತು ಪಾವನ.ಆರ್.ಹೊಳ್ಳ ಅವರ ಮುದ್ದಿನ ಮಗಳಾಗಿ 10.02.2007 ರಂದು ಅಭಿನವಿ ಹೊಳ್ಳ ಅವರ ಜನನ. ಗೋವಿಂದ ದಾಸ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ವರ್ಷದ ಕಾಮರ್ಸ್ ಶಿಕ್ಷಣವನ್ನು ಓದುತ್ತಿದ್ದರೆ. ಬಾಲ್ಯದಲ್ಲಿ ಮನೆಯ ಹಿಂದೆ ಯಕ್ಷಗಾನ ನಡೆಯುತಿತ್ತು,  ಹೀಗೆ ನಡೆದ ಯಕ್ಷಗಾನದ ಸಿಡಿ ಇವರಿಗೆ ಸಿಕ್ಕಿತು ಶಾಲೆಯಿಂದ ದಿನ ಮನೆಗೆ ಬಂದು ಯಕ್ಷಗಾನದ ಸಿಡಿಯನ್ನು ಹಾಕಿ ಯಕ್ಷಗಾನ ವೇಷಧಾರಿಗಳು ಕುಣಿಯುವ ಹಾಗೆ ಕುಣಿಯುತಿದ್ದೆ ಹಾಗೇ ಯಕ್ಷಗಾನದ ಮೇಲೆ ಒಲವು ಮಾಡಿತು ಆಗ ತಂದೆ ಹಾಗೂ ತಾಯಿ ಹತ್ತಿರ ಹೇಳಿದೆ ಆಗ ಯಕ್ಷ ಗುರು ರಾಕೇಶ್ ರೈ ಅಡ್ಕ ಅವರ ಬಳಿ ಮಾತನಾಡಿ ಯಕ್ಷಗಾನ ಕಲಿಯಲು ಪ್ರಾರಂಭಿಸಿದೆ. ಚಂದ್ರಶೇಖರ್ ಧರ್ಮಸ್ಥಳ ಹಾಗೂ ಪ್ರಶಾಂತ್ ಶೆಟ್ಟಿ ನೆಲ್ಯಾಡಿ ಅವರ ಪಾತ್ರ ಹಾಗೂ ವೇಷ ತುಂಬಾ ಇಷ್ಟ ಅವರ ಪಾತ್ರ ಹಾಗೂ ವೇಷಗಳು ನಾನು ಯಕ್ಷಗಾನ ಕಲಿಯಲು ಸ್ಪೂರ್ತಿ ಹಾಗೂ ಪ್ರೇರಣೆ. ಕುಮಾರ ವಿಜಯ, ದೇವಿ ಮಹಾತ್ಮೆ, ಶ್ರೀನಿವಾಸ ಕಲ್ಯಾಣ, ಗಿರಿಜಾ…

Read More

ಉಡುಪಿ : ತುಳು ಕೂಟ (ರಿ.) ಉಡುಪಿ ಇವರು ಕಾಲೇಜು ವಿದ್ಯಾರ್ಥಿಗಳಿಗೆ ಮೀಸಲಾಗಿರುವ “ತುಳು ಮಿನದನ” ಕಾರ್ಯಕ್ರಮವು ದಿನಾಂಕ 25-11-2023 ರಂದು ಶಿರ್ವದ ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನಲ್ಲಿ ನಡೆಯಿತು. ಮಂಗಳೂರು ವಿಶ್ವವಿದ್ಯಾನಿಲಯ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರ ಇವರ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮವನ್ನು “ತುಳುನಾಡ ಭೂಮಿ ತುಡರ್” ಪರಿಕಲ್ಪನೆಯಲ್ಲಿ ನಾಡಿನ ಖ್ಯಾತ ವಿದ್ವಾಂಸರಾದ  ಡಾ.ವೈ .ಎನ್ ಶೆಟ್ಟಿ ಉದ್ಘಾಟಿಸಿ ಮಾತನಾಡಿ “ಯುವಜನತೆಗೆ ಸರಿಯಾದ ಮಾರ್ಗದರ್ಶನ ನೀಡಿದ್ದಲ್ಲಿ ಅವರು ನಾಡಿನ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಾರೆ. ಬಹು ಭಾಷೆ ಮತ್ತು ಮಾಧ್ಯಮಗಳ ಬಳಕೆ ಯುಕ್ತವಾದದ್ದು. ಆದರೆ ಮಾತೃಭಾಷೆಯನ್ನು ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ತುಳು ಭಾಷೆಯ ಸಿರಿವಂತ ಸಂಸ್ಕೃತಿಯನ್ನು ಭಾಷಾ ಸಮಗ್ರತೆಯನ್ನು ಕಿರಿಯರಿಗೆ ಪರಿಚಯ ಮಾಡಿಸುವ ಪ್ರಯತ್ನ ತುಳುಕೂಟದಿಂದ ನಡೆಯುತ್ತಿರುವುದು ಬಹು ಶ್ಲಾಘ್ಯ ಕಾರ್ಯ.” ಎಂದು ಅಭಿಪ್ರಾಯಪಟ್ಟರು. ತುಳು ಲಿಪಿಯಲ್ಲಿ ಬರೆದು ತುಳು ಸಂಸ್ಕೃತಿಯ ರೀತಿಯಲ್ಲಿ ಸ್ವಾಗತ…

Read More

ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು, ಪುತ್ತೂರು ಇದರ ವತಿಯಿಂದ 2023-24ನೇ ಸಾಲಿನ ಪಾಕ್ಷಿಕ ತಾಳಮದ್ದಳೆಯ ಪ್ರಥಮ ಕೂಟವು ಪಾರ್ತಿಸುಬ್ಬ ವಿರಚಿತ ‘ಪುತ್ರಕಾಮೇಷ್ಟಿ’ ಎಂಬ ಆಖ್ಯಾನದೊಂದಿಗೆ ದಿನಾಂಕ 11-11-2023ರಂದು ಬೊಳುವಾರು ಶ್ರೀ ಆಂಜನೇಯ ಮಂತ್ರಾಲಯದಲ್ಲಿ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಲಕ್ಷ್ಮೀ ನಾರಾಯಣ ಭಟ್ ಬಟ್ಯಮೂಲೆ, ಆನಂದ ಸವಣೂರು ಹಾಗೂ ಚೆಂಡೆ ಮದ್ದಳೆಗಳಲ್ಲಿ ಪ್ರೊ.ದಂಬೆ ಈಶ್ವರ ಶಾಸ್ತ್ರೀ, ಮಾ.ಪರೀಕ್ಷತ್ ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ ಬಾರ್ಯ (ದಶರಥ), ದುಗ್ಗಪ್ಪ ನಡುಗಲ್ಲು (ವಸಿಷ್ಠ ಹಾಗೂ ಋಷ್ಯಶೃಂಗ), ಗುಡ್ಡಪ್ಪ ಬಲ್ಯ (ಸುಮಂತ್ರ ಹಾಗೂ ಯಜ್ಞೇಶ್ವರ), ಕಿಶೋರಿ ದುಗ್ಗಪ್ಪ ನಡುಗಲ್ಲು (ದೇವೇಂದ್ರ ಮತ್ತು ಶ್ರೀ ರಾಮ), ಹರಿಣಾಕ್ಷಿ ಜೆ. ಶೆಟ್ಟಿ (ಮಹಾವಿಷ್ಣು ಮತ್ತು ಲಕ್ಷ್ಮಣ) ಮತ್ತು ಭಾರತಿ ರೈ (ಬ್ರಹ್ಮ) ಸಹಕರಿಸಿದರು. ಸಂಘದ ನಿರ್ದೇಶಕ ಶ್ರೀ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು.

Read More

ಕೋಟ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆಯ ಸಾರಥ್ಯದಲ್ಲಿ ನಡೆಯುವ ಉಡುಪಿ ಜಿಲ್ಲಾ 16ನೇ ಸಾಹಿತ್ಯ ಸಮ್ಮೇಳನ ಅನುಸಂಧಾನ-2023 ಇದರ ಅಧ್ಯಕ್ಷರಾಗಿ ಸಾಹಿತಿ-ಸಂಶೋಧಕ ಶ್ರೀ ಬಾಬುಶಿವ ಪೂಜಾರಿ ಅವರನ್ನು ಆಯ್ಕೆ ಮಾಡಲಾಗಿದೆ. ಕೋಟದ ವಿವೇಕ ವಿದ್ಯಾಲಯದ ಆವರಣದಲ್ಲಿ ದಿನಾಂಕ 05-12-2023 ಮತ್ತು 06-12-2023ರಂದು ಉಡುಪಿ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಹೊಟೇಲ್ ಉದ್ಯಮಿ ಶ್ರೀ ಬಾಬುಶಿವ ಪೂಜಾರಿ ಅವರು ವೇದ, ಆಧುನಿಕ ಸಾಹಿತ್ಯ, ಬೌದ್ಧ, ಜೈನ, ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮ ಗ್ರಂಥಗಳನ್ನು ಆಳವಾಗಿ ಅಭ್ಯಸಿಸಿದ್ದಾರೆ. ನಾರಾಯಣ ಗುರುಗಳ ಆದರ್ಶ, ನಾರಾಯಣ ಗುರು ವಿಜಯ ದರ್ಶನ, ಅನುಸಂಧಾನ, ಹಗ್ಗಿನ ಹನಿ ಮುಂತಾದವು ಇವರ ಕೃತಿಗಳು. ಶ್ರೀಕೃಷ್ಣ ದೇವರಾಯ, ಕೋಟಿ ಚೆನ್ನಯ್ಯ, ತುಳು ಸಂಸ್ಕೃತಿ, ಕಾಂತಬಾರೆ ಬೂದಬಾರೆ, ಸಿರಿ, ನಾಗಾರಾಧನೆ, ಭೂತಾರಾಧನೆ ಮತ್ತು ತುಳುನಾಡಿನ ಗರಡಿಗಳ ಬಗ್ಗೆ ಸಂಶೋಧನಾತ್ಮಕ ಫ್ರೌಡ ಲೇಖನಗಳನ್ನು ಪ್ರಕಟಿಸಿದ್ದಾರೆ. ‘ನಾರಾಯಣ ಗುರು ವಿಜಯ ದರ್ಶನ’ವು ಆಧ್ಯಾತ್ಮ ಮತ್ತು ಸಾಮಾಜಿಕ ನೆಲೆಯಲ್ಲಿ ನೆಲದ ಸಂಕಟ ಮತ್ತು ಆಶೋತ್ತರಗಳನ್ನು ತೆರೆದಿಟ್ಟ…

Read More