Author: roovari

ಮೂಡುಬಿದಿರೆ: ಇಲ್ಲಿನ ಹೋಲಿ ರೋಸರಿ ಪ್ರೌಢಶಾಲೆಯ ಕನ್ನಡ ಅಧ್ಯಾಪಕ ಡಾ. ರಾಮಕೃಷ್ಣ ಶಿರೂರು ಇವರು ‘ಸ್ವಾಮಿ ವಿವೇಕಾನಂದ ರಾಷ್ಟ್ರ ಪ್ರಶಸ್ತಿ- 2025’ಕ್ಕೆ ಆಯ್ಕೆಯಾಗಿದ್ದಾರೆ ಎಂದು ಸ್ನೇಹಜೀವಿ ಫೌಂಡೇಶನ್ ಮಹಾರಾಷ್ಟ್ರ ಮತ್ತು ಅಕ್ಷರ ದೀಪ ಫೌಂಡೇಶನ್ ಕರ್ನಾಟಕ ಇದರ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಕನ್ಯಾಳ ತಿಳಿಸಿದ್ದಾರೆ.ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 12 ಜನವರಿ 2025ರಂದು ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಇದರ ಸಭಾ ಭವನದಲ್ಲಿ ನಡೆಯಲಿದೆ. ಎಂ. ಎ. ಬಿ. ಎಡ್. ಪದವೀಧರರಾದ ಡಾ. ರಾಮಕೃಷ್ಣ ಶಿರೂರು ಹಿಂದಿ ಭಾಷೆಯಲ್ಲಿ ರಾಜಭಾಷ ವಿದ್ವಾನ್ ಪದವಿಯನ್ನು ಪಡೆದಿರುತ್ತಾರೆ. ಇವರು ಮೂಲತಃ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಮೇಲ್ಪಂಕ್ತಿಯ ಶಾನುಭೋಗರ ಮನೆತನಕ್ಕೆ ಸೇರಿದ ಭವಾನಿ ಶಂಕರ ಶಾನುಭೋಗ ಮತ್ತು ಸರೋಜಿನಿ ಶಾನುಭೋಗ ಅವರ ಪುತ್ರ. 1994ರಲ್ಲಿ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಶ್ರೀಮಂಗಲ ಪದವಿ ಪೂರ್ವ ಕಾಲೇಜಿನಲ್ಲಿ ಒಂದು ವರ್ಷ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿ, 1995ರಿಂದ ಮೂಡುಬಿದಿರೆಯ ಹೋಲಿ ರೋಸರಿ ಪ್ರೌಢಶಾಲೆಯಲ್ಲಿ…

Read More

ಮಂಗಳೂರು : ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಯುವ ಗಾಯಕ ಇಶಾನ್ ಫೆರ್ನಾಂಡಿಸ್ ಇವರ ‘ಟ್ರಾನ್ಸೆಂಡಿಗ್ ಬೌಂಡರೀಸ್ – 3’ ಸಂಗೀತ ಕಾರ್ಯಕ್ರಮ ದಿನಾಂಕ 22 ಡಿಸೆಂಬರ್ 2024ರಂದು ಮಂಗಳೂರಿನ ಶಕ್ತಿನಗರದಲ್ಲಿರುವ ಕಲಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಬಂಬಾರ, ಅರೇಬಿಕ್, ಸ್ವೀಡಿಶ್, ಇಟಾಲಿಯನ್, ಪೋರ್ಚುಗೀಸ್, ಕೊಂಕಣಿ, ಸ್ಪಾನಿಷ್, ಹಿಂದೂಸ್ತಾನಿ, ಇಂಗ್ಲೀಷ್, ಕಜಕ್, ತುಳು ಹಾಗೂ ಅರ್ಮೇನಿಯನ್ ಹೀಗೆ 12 ಭಾಷೆಗಳ ಸುಮಧುರ ಹಾಡುಗಳನ್ನು ಹಾಡಿ ಮನರಂಜಿಸಿದರು. ಪ್ರತಿ ಹಾಡುಗಳ ಮಧ್ಯೆ ದೇಶ-ಭಾಷೆಗಳ ಸಂಸ್ಕೃತಿ ಹಾಗೂ ಹಾಡುಗಳು ಒಳಗೊಂಡ ಭಾವಗಳ ಬಗ್ಗೆ ವಿವರಿಸಿ, ಕೇಳುಗರಿಗೆ ಹಾಡುಗಳನ್ನು ಅರ್ಥೈಸಲು ಅನುವು ಮಾಡಿ ಕೊಟ್ಟರು. ಹಾಡುಗಾರನಿಗೆ ಬಾಸ್ ಗಿಟಾರಿನಲ್ಲಿ ಜೆರೊಮ್ ಕುವೆಲ್ಲೊ, ಕೀ ಬೋರ್ಡ್ ನಲ್ಲಿ ಸಂಜಯ್ ರೊಡ್ರಿಗಸ್, ಡ್ರಮ್ಸ್ ನಲ್ಲಿ ಸಂಜೀತ್ ರೊಡ್ರಿಗಸ್, ಲೀಡ್ ಗಿಟಾರ್ ನಲ್ಲಿ ಜೊಸ್ವಿನ್ ಡಿಕುನ್ಹಾ ಹಾಗೂ ಪಕ್ಕ ವಾದ್ಯದಲ್ಲಿ ಜೀವನ್ ಸಿದ್ದಿ ಇವರುಗಳು ಸಹಕರಿಸಿದರು. ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೇರಿಯೊ ಪ್ರಸ್ತಾವನೆಗೈದು, ಅಧ್ಯಕ್ಷ ಲುವಿ ಜೆ. ಪಿಂಟೊ ಕಲಾವಿದರನ್ನು ಗೌರವಿಸಿದರು.…

Read More

ಪುತ್ತೂರು : ಶ್ರೀ ದೇವಿ ನೃತ್ಯಾರಾಧನಾ ಕಲಾ ಕೇಂದ್ರ (ರಿ.) ಪುತ್ತೂರು ಇವರು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದರ ಸಹಯೋಗದಲ್ಲಿ ಆಯೋಜಿಸುವ ‘ನೃತ್ಯ ಧಾರಾ’ ಮತ್ತು ‘ಕಲಾನಯನ’ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 29 ಡಿಸೆಂಬರ್ 2024ನೇ ಆದಿತ್ಯವಾರ ಸಂಜೆ ಘಂಟೆ 4.00ರಿಂದ ಬಿ. ಸಿ. ರೋಡು ಇಲ್ಲಿನ ಸ್ಪರ್ಶ ಕಲಾಮಂದಿರದಲ್ಲಿ ನಡೆಯಲಿದೆ. ಸನಾತನ ನಾಟ್ಯಾಲಯ ಮಂಗಳೂರು ಇದರ ನಿರ್ದೇಶಕರಾದ ಶ್ರೀ ಚಂದ್ರಶೇಖರ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ‘ಡಾಯಿಜೀ ವರ್ಲ್ಡ್’ ಟಿವಿ ಮಂಗಳೂರು ಇದರ ಸಂಸ್ಥಾಪಕರಾದ ಶ್ರೀ ವಾಲ್ಟರ್ ನಂದಳಿಕೆ ಹಾಗೂ ಬಂಟ್ವಾಳದ ಯುವ ಉದ್ಯಮಿಗಳಾದ ಶ್ರೀ ಅವಿನಾಶ್ ಕಾಮತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವಇವರಿಗೆ  (ಮರಣೋತ್ತರ) ಕಲಾನಯನ ಪ್ರಶಸ್ತಿ ಮತ್ತು ‘ದೇವ್ ಪ್ರೊ ಸೌಂಡ್ಸ್’ ಮಂಗಳೂರು ಇದರ ಖ್ಯಾತ ಧ್ವನಿ ಮತ್ತು ಬೆಳಕು ಸಂಯೋಜಕರಾದ ಶ್ರೀಮತಿ ಮತ್ತು ಶ್ರೀ ಮೋಹನ್ ದಂಪತಿಗಳನ್ನು ಸನ್ಮಾನಿಸಲಾಗುವುದು.

Read More

ತೆಕ್ಕಟ್ಟೆ : ಯಶಸ್ವೀ ಕಲಾವೃಂದ (ರಿ.) ಕೊಮೆ ತೆಕ್ಕಟ್ಟೆ ಇದರ 25ರ ಸಂಭ್ರಮದ ಯಾನದ ಪ್ರಯುಕ್ತ ‘ನಾಟಕಾಷ್ಟಕ’ ಎಂಟು ರಂಗಭೂಮಿ ನಾಟಕಗಳ ಪ್ರದರ್ಶನವನ್ನು ದಿನಾಂಕ 26 ಡಿಸೆಂಬರ್ 2024ರಿಂದ 02 ಜನವರಿ 2025ರವರೆಗೆ ಪ್ರತಿದಿನ ಸಂಜೆ 6-00 ಗಂಟೆಗೆ ತೆಕ್ಕಟ್ಟೆ ಹಯಗ್ರೀವದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 26 ಡಿಸೆಂಬರ್ 2024ರಂದು ನೀನಾಸಂ ತಿರುಗಾಟ ‘ಮಾಲತಿ ಮಾಧವ’, ದಿನಾಂಕ 27 ಡಿಸೆಂಬರ್ 2024ರಂದು ನೀನಾಸಂ ತಿರುಗಾಟ ‘ಅಂಕದ ಪರದೆ’, ದಿನಾಂಕ 28 ಡಿಸೆಂಬರ್ 2024ರಂದು ಮೈಸೂರಿನ ನಟನ ತಂಡದವರಿಂದ ‘ಕಣಿವೆಯ ಹಾಡು’, ದಿನಾಂಕ 29 ಡಿಸೆಂಬರ್ 2024ರಂದು ಮಂಗಳೂರಿನ ಕಲಾಭಿ ಚಿಲ್ಡ್ರನ್ ಥಿಯೇಟರ್ (ರಿ.) ತಂಡದಿಂದ ‘ಮೊಗ್ಲಿ’, ದಿನಾಂಕ 30 ಡಿಸೆಂಬರ್ 2024ರಂದು ಕೋಟದ ಸುವಿಕಾ ಸಾಂಸ್ಕೃತಿಕ ಸಂಘಟನೆಯ ಕಾವ್ಯ ಹಂದೆ ಎಚ್. ಅಭಿನಯದ ಏಕವ್ಯಕ್ತಿ ರಂಗ ಪ್ರಯೋಗ ‘ಹಕ್ಕಿ ಮತ್ತು ಅವಳು’, ದಿನಾಂಕ 31 ಡಿಸೆಂಬರ್ 2024ರಂದು ಬ್ರಹ್ಮಾವರ ಬೈಕಾಡಿಯ ಮಂದಾರ (ರಿ.) ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆಯವರಿಂದ ‘ಪಂಚ (ಮುಖವಾಡ) ತಂತ್ರ’,…

Read More

ಕಾಸರಗೋಡು : ಸಂಶೋಧಕ ಶಿಕ್ಷಕ, ಸಂಘಟಕ, ಜನಾನುರಾಗಿ ಕನ್ನಡ ಕಟ್ಟಾಳು, ಶ್ರೀ ಶ್ರೀಶೈಲ ಮಲ್ಲಿಕಾರ್ಜುನ ಮನಗುತ್ತಿ ಇವರನ್ನು ಕೇರಳ ರಾಜ್ಯ ಕಾಸರಗೋಡು ಕನ್ನಡ ಭವನದ ಬೆಳಗಾವಿ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಕನ್ನಡ ಭವನದ “ರಜತ ಸಂಭ್ರಮ” ವರ್ಷವಾದ 2025ರಲ್ಲಿ ಕರ್ನಾಟಕ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಕನ್ನಡ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸದುದ್ದೇಶದಿಂದ ಎಲ್ಲಾ ಜಿಲ್ಲೆಗಳಲ್ಲಿ ಘಟಕವನ್ನು ಸ್ಥಾಪಿಸಲಾಗುತ್ತಿದೆ. ಕಾಸರಗೋಡು ಕನ್ನಡ ಭವನದ ಕರ್ನಾಟಕ ರಾಜ್ಯ ಸಂಚಾಲಕರಾದ ಶ್ರೀ ಸಿದ್ರಾಮು ನಿಲಜಗಿ ನಾಮ ನಿರ್ದೇಶನ ಮಾಡಿದರು. ಇನ್ನೊರ್ವ ರಾಜ್ಯ ಸಂಚಾಲಕರಾದ ಡಾ. ಟಿ. ತ್ಯಾಗರಾಜ್ ಮೈಸೂರು ಹಾಗೂ ನಿರ್ದೇಶಕ ಸಿ. ವೈ. ಮೆಣಸಿನಕಾಯಿ ಅನುಮೋದಿಸಿದರು. ಸರ್ವಾನುಮತಿಯೊಂದಿಗೆ ಆಯ್ಕೆಯಾದ ಶ್ರೀ ಶ್ರೀಶೈಲ ಮಲ್ಲಿಕಾರ್ಜುನ ಮನಗುತ್ತಿ ಇವರು ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ಕನ್ನಡ ಭವನ ಪ್ರಕಾಶನ, ಕನ್ನಡ ಭವನ ಸಾರ್ವಜನಿಕ ವಾಚನಾಲಯ, ಕರ್ನಾಟಕದಿಂದ ಕಾಸರಗೋಡು ಪ್ರದೇಶಕ್ಕೆ ಆಗಮಿಸುವ ಸಾಹಿತ್ಯ ಸಾಂಸ್ಕೃತಿಕ ರಾಯಬಾರಿಗಳಿಗೆ ಕನ್ನಡ ಭವನದ “ಉಚಿತ ವಸತಿ ಸೌಕರ್ಯ” ಹಾಗೂ ರಜತ ಸಂಭ್ರಮ…

Read More

ಕಾಸರಗೋಡು : ಡಾ. ಎಂ.ಜಿ.ಆರ್. ಅರಸ್ ಇವರು ಸಂಸ್ಥಾಪಕ, ಪ್ರಧಾನ ಸಂಚಾಲಕರಾಗಿರುವ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಮೈಸೂರು ಇದರ ಕೇರಳ ಗಡಿನಾಡ ಘಟಕವಾದ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ 2001ರಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕನ್ನಡ ಗ್ರಾಮ ಕಾಸರಗೋಡು ಇದರ ಅಧ್ಯಕ್ಷರಾದ ಶಿವರಾಮ ಕಾಸರಗೋಡು ಇವರ ಅಧ್ಯಕ್ಷತೆಯಲ್ಲಿ ಗಡಿನಾಡು ಕಾಸರಗೋಡಿನಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ಈಗಾಗಲೇ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನವನ್ನು ಆರು ಬಾರಿ ಕಾಸರಗೋಡು ಜಿಲ್ಲೆಯಾದ್ಯಂತ ಏರ್ಪಡಿಸಲಾಗಿದೆ. ಕಾಸರಗೋಡು ಕನ್ನಡ ಗ್ರಾಮದಲ್ಲಿ ದಿನಾಂಕ 27 ಮಾರ್ಚ್ 2025ರ ಗುರುವಾರದಂದು ಕಾಸರಗೋಡು ಜಿಲ್ಲಾ ಏಳನೇ ‘ಚುಟುಕು ಸಾಹಿತ್ಯ ಸಮ್ಮೇಳನ’ವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ವಿಶ್ವ ರಂಗಭೂಮಿ ದಿನಾಚರಣೆಯ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದಲ್ಲಿ ವಿ.ಕೆ.ಎಂ. ಕಲಾವಿದರು (ರಿ.) ಬೆಂಗಳೂರು ಇದರ ನೇತೃತ್ವದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಕನ್ನಡ ಗ್ರಾಮ ಕಾಸರಗೋಡು ಇದರ ಸಹಕಾರದಲ್ಲಿ ಕಾಸರಗೋಡು-ಬೆಂಗಳೂರು…

Read More

ಮಡಿಕೇರಿ : ಕೂಡವ ಮಕ್ಕಡ ಕೂಟದ 106ನೇ ಮತ್ತು ನಟ, ನಿರ್ದೇಶಕ, ನಿರ್ಮಾಪಕ, ಸಾಹಿತಿ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ರಚಿತ 11ನೇ ಪುಸ್ತಕ “ಗಮ್ಯ” ಇದರ ಲೋಕರ್ಪಣಾ ಸಮಾರಂಭವು ದಿನಾಂಕ 23 ಡಿಸೆಂಬರ್ 2024ರಂದು ಮಡಿಕೇರಿಯ ಪತ್ರಿಕಾ ಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪುಸ್ತಕವನ್ನು ಲೋಕಾರ್ಪಣೆಗೊಳಿಸಿದ ವಿಧಾನ ಪರಿಷತ್ ಮಾಜಿ ಸದಸ್ಯ ಮಂಡೇಪಂಡ ಸುನಿಲ್ ಸುಬ್ರಮಣಿ ಮಾತನಾಡಿ “ಸಮಾಜದ ಸುಧಾರಣೆಯಲ್ಲಿ ಪುಸ್ತಕಗಳು ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಪುಸ್ತಕಗಳು ಸಾಮಾಜಿಕ ಕಾಳಜಿಯೊಂದಿಗೆ ಉತ್ತಮ ಸಂದೇಶವನ್ನು ನೀಡಬೇಕು, ಲೋಕಾರ್ಪಣೆಗೊಳ್ಳುವ ಪುಸ್ತಕಗಳಿಗೆ ಹೆಚ್ಚಿನ ಪ್ರಚಾರ ನೀಡುವ ಮೂಲಕ ಓದುಗರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬೇಕು. ಅರ್ಜಿ ಹಾಕಿ ಯಾವುದೇ ಜಾತಿಯಲ್ಲಿ ಹುಟ್ಟಲು ಸಾಧ್ಯವಿಲ್ಲ, ಹುಟ್ಟಿದ ಮೇಲೆ ಜಾತಿಯ ಬಗ್ಗೆ ಸ್ವಾಭಿಮಾನ ಮತ್ತು ಅಭಿಮಾನವಿರಬೇಕು. ಹುಟ್ಟಿದ ಮಣ್ಣಿನ ಮೇಲೆ ಪ್ರೀತಿ ಇರಬೇಕು. ಕೊಡವರಾಗಿ ಹುಟ್ಟಿರುವ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಕೊಡಗಿನ ನೆಲ, ಜಲ ಹಾಗೂ ಸಂಸ್ಕೃತಿಯನ್ನು ಹೆಚ್ಚು ಪ್ರೀತಿಸುತ್ತಾರೆ. ಇವರ ಸಿನಿಮಾಗಳಲ್ಲಿ ಇದನ್ನು ಕಾಣಬಹುದಾಗಿದೆ. ಸಿನಿಮಾ ಕ್ಷೇತ್ರದೊಂದಿಗೆ ಸಾಹಿತ್ಯ ಕ್ಷೇತ್ರಕ್ಕೂ…

Read More

ಪ್ರತಿಯೊಬ್ಬ ವ್ಯಕ್ತಿಯ ಒಳಗೂ ಅದಮ್ಯವಾದ ಶಕ್ತಿಯನ್ನು ಅಡಗಿಸಿ ಪರಮಾತ್ಮ ಈ ಜಗತ್ತಿಗೆ ಕಳುಹಿಸುತ್ತಾನಂತೆ. ಆದರೆ ತನ್ನೊಳಗೆ ಅಡಗಿರುವ ಆ ಶಕ್ತಿಯ ಅರಿವನ್ನು ಮಾನವನು ತಿಳಿಯಬೇಕಾದರೆ ಬಹಳಷ್ಟು ಶ್ರಮವನ್ನು ಪಡಬೇಕಾಗುತ್ತದೆ. ಕೆಲವರು ಅದನ್ನು ಅರಿತುಕೊಂಡು ಬಹಳ ಶ್ರಮದಿಂದ ಅದನ್ನು ಹೊರಗೆ ತರುತ್ತಾರೆ. ಆದರೆ ಅಂತಹವರು ಈ ಸಮಾಜದಲ್ಲಿ ಕೇವಲ ಬೆರಳೆಣಿಕೆಯಷ್ಟು ಮಾತ್ರ. ಅಂತಹವರಲ್ಲಿ ಒಬ್ಬರು ಈ ತುಳುನಾಡು ಕಂಡ ಅದ್ಭುತ ಪ್ರತಿಭಾವಂತ ಲಯನ್ ಎಂಜೆಎಫ್ ಕದ್ರಿ ನವನೀತ ಶೆಟ್ಟಿ. ತೌಳವ ನೆಲದ ಪೂರ್ಣ ಸತ್ವವನ್ನು ಮೈಗೂಡಿಸಿಕೊಂಡು ಬೆಳೆದು ಬಂದ ಶ್ರೀಯುತರು ಸರ್ವ ಕ್ಷೇತ್ರಗಳಲ್ಲೂ ತಮ್ಮ ಛಾಪನ್ನು ಮೂಡಿಸಿದ್ದಾರೆ. ಅವರೋರ್ವ ಮಹಾ ಮೇಧಾವಿ, ಪ್ರತಿಭೆಗಳ ಮಹಾ ಸಂಗಮ, ಉತ್ತಮ ನಿರೂಪಕ, ಸಮಾಜ ಸೇವಕ, ಸಂಘಟಕ, ತುಳು ಕನ್ನಡ ಸಾಹಿತಿ, ಕವಿ, ನಾಟಕಕಾರ, ಪ್ರಯೋಗಶೀಲ ನಿರ್ದೇಶಕ, ರಂಗನಟ, ಹವ್ಯಾಸಿ ಯಕ್ಷಗಾನ ಅರ್ಥಧಾರಿ, ಪ್ರಸಂಗಕರ್ತೃ, ಧಾರ್ಮಿಕ-ಸಾಂಸ್ಕೃತಿಕ-ಸಾಮಾಜಿಕ ಸಂಘಟಕ, ವೈವಿಧ್ಯಮಯ ಕ್ಷೇತ್ರಗಳ ನಿರೂಪಕ, ಟಿ.ವಿ. ಮಾಧ್ಯಮ ನಿರೂಪಕ, ರಾಷ್ಟ್ರೀಯ ಚಿಂತಕ ಹೀಗೇ ಮುಗಿಯಲಾರದ ಪಟ್ಟಿಯ ಮಹಾ ವ್ಯಕ್ತಿ! ಎಂತಹವರನ್ನೂ…

Read More

ವಿಶಿಷ್ಟ ಕಲೆಯಾದ ಜಾದೂವಿಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಜನರ ಮನದಲ್ಲಿ ರಾರಾಜಿಸುತ್ತಿರುವ ಪ್ರಸಿದ್ಧ ಜಾದೂಗಾರ ಶ್ರೀಯುತ ಕುದ್ರೋಳಿ ಗಣೇಶ್. ಈಗಾಗಲೇ ಶಾಸಕರನ್ನು ಮಾಯಮಾಡಿ, ತುಳುನಾಡು ಭೂತಕೋಲ ಜಾದೂ ಹಾಗೂ ತಮ್ಮ ಕ್ಲೋಸ್ಅಪ್ ಮ್ಯಾಜಿಕ್ ಮತ್ತು ಇಲ್ಯುಷನ್ ಗಳಿಂದ ಹೆಸರುವಾಸಿಯಾಗಿರುವ ಗಣೇಶ್ ಅವರು ಇದೀಗ ಮ್ಯಾಜಿಕ್ ಲೋಕದ ಇನ್ನೊಂದು ಮಜಲನ್ನು ಜಗತ್ತಿಗೆ ಪರಿಚಯಿಸುವ ಮೂಲಕ ವೀಕ್ಷಕರನ್ನು ಮಂತ್ರಮುಗ್ಧಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಾದೂಗಾರ ಕುದ್ರೋಳಿ ಗಣೇಶ್ ಇವರ ‘ಮೈಂಡ್ ಮಿಸ್ಟರಿ’ ಮೆಂಟಲಿಸಮ್ ಕಲಾಧಾರಿತ ನವೀನ ಪ್ರಯೋಗದ ಮೂರು ಪ್ರದರ್ಶನಗಳು ಡಿಸೆಂಬರ್ 21 ಹಾಗೂ 22 ರಂದು ಯಕ್ಷ ಕಲಾರಂಗದ ಐ. ವೈ. ಸಿ.ಸಭಾಂಗಣ, ಉಡುಪಿಯಲ್ಲಿ ಜರಗಿತು. ಸಮಾಜದ ಪ್ರಮುಖರಾದ ಪ್ರಮೋದ್ ಮಧ್ವರಾಜ್, ರಘುಪತಿ ಭಟ್, ಲಾಲಾಜಿ ಮೆಂಡನ್ ಹಾಗೂ ಉದ್ಯಮಿಗಳು, ವೈದ್ಯರು, ಇಂಜಿನಿಯರ್ ಗಳು, ಕಲಾಸಕ್ತರ ಸಮ್ಮುಖದಲ್ಲಿ ನಡೆದ ಈ ಚೊಚ್ಚಲ ಕಾರ್ಯಕ್ರಮ ಎಲ್ಲರನ್ನು ನಿಬ್ಬೆರುಗಾಗಿಸಿದ್ದು ‘ಮೈಂಡ್ ಮಿಸ್ಟರಿ’ಯ ಯಶಸ್ಸಿಗೆ ಸಾಕ್ಷಿಯಾಗಿದೆ. ‘ಮೈಂಡ್ ಮಿಸ್ಟರಿ – ಸುಪ್ತ ಮನಸ್ಸಿನ ಅನಾವರಣ’ – ಈ ವಿಶೇಷ…

Read More

ಕಾಸರಗೋಡು : ಸಂಘಟಕ ಕಲಾವಿದ, ಕನ್ನಡ ಮುಂದಾಳು ಶ್ರೀ ರವಿ ತೀರಣ್ಣನವರ್ ಇವರನ್ನು ಕೇರಳ ರಾಜ್ಯದ ಕಾಸರಗೋಡು ಕನ್ನಡ ಭವನದ ಹಾವೇರಿ ಜಿಲ್ಲಾಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ. ಕೇರಳ ರಾಜ್ಯದ ಕಾಸರಗೋಡು ಕನ್ನಡ ಭವನದ ರಜತ ಸಂಭ್ರಮ ವರ್ಷವಾದ 2025ರಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕನ್ನಡ ಪರ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಸದುದ್ದೇಶದಿಂದ ಎಲ್ಲಾ ಜಿಲ್ಲೆಗಳಲ್ಲಿ ಘಟಕಗಳನ್ನು ಸ್ಥಾಪಿಸಲಾಗುತ್ತದೆ. ಕಾಸರಗೋಡು ಕನ್ನಡ ಭವನದ ಕರ್ನಾಟಕ ರಾಜ್ಯ ಸಂಚಾಲಕರಾದ ಡಾ. ಟಿ. ತ್ಯಾಗರಾಜ್ ಮೈಸೂರು ನಾಮನಿರ್ದೇಶನ ಮಾಡಿದರು. ಕನ್ನಡ ಭವನ ನಿರ್ದೇಶಕರಾದ ಡಾ. ಕೊಲಚಪ್ಪೆ ಗೋವಿಂದ ಭಟ್ ಅನುಮೋದಿಸಿದರು. ಸರ್ವಾನುಮತಿಯೊಂದಿಗೆ ಆಯ್ಕೆಯಾದ ಶ್ರೀ ರವಿ ತಿರುಕಣ್ಣನವರ ಇವರು ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ಕನ್ನಡ ಭವನ ಪ್ರಕಾಶನ, ಕನ್ನಡ ಭವನ ಸಾರ್ವಜನಿಕ ವಾಚನಾಲಯ ಕಾಸರಗೋಡು ಪ್ರದೇಶಕ್ಕೆ ಕರ್ನಾಟಕದಿಂದ ಆಗಮಿಸುವ, ಸಾಹಿತ್ಯ, ಸಾಂಸ್ಕೃತಿಕ ರಾಯಬಾರಿಗಳಿಗೆ ‘ಉಚಿತ ವಸತಿ ಸೌಕರ್ಯ” ಹಾಗೂ ಕನ್ನಡ ಭವನ ರಜತ ಸಂಭ್ರಮ ವಿಶೇಷ ಕಾರ್ಯಕ್ರಮ ಸಂಘಟನೆ, “ಮನೆಗೊಂದು ಗ್ರಂಥಾಲಯ -…

Read More