Author: roovari

ಮೈಸೂರು : ಪೂರ್ಣಚಂದ್ರ ತೇಜಸ್ವಿಯವರ ಕಥೆಯಾಧರಿಸಿದ ‘ಕೃಷ್ಣೇಗೌಡರ ಆನೆ’ ನಾಟಕವು ಶ್ರೀ ಮಂಡ್ಯ ರಮೇಶರವರು ನಿರ್ದೇಶಿಸಿದ್ದು, ನಾಟಕದ ರಂಗರೂಪ ಶ್ರೀ ಶಶಿಕಾಂತ ಯಡಹಳ್ಳಿ ಹಾಗೂ ವಿನ್ಯಾಸ ನಟನ ರಂಗಶಾಲೆಯ ಪ್ರಾಂಶುಪಾಲರಾದ ಶ್ರೀ ಮೇಘ ಸಮೀರ ಅವರದ್ದು. ಈಗಾಗಲೇ ಮೈಸೂರು, ನೋಯಿಡಾ, ದೆಹಲಿಯಲ್ಲಿ ಯಶಸ್ವಿ ಪ್ರದರ್ಶನಗಳನ್ನು ಕಂಡಿದೆ. ದಿನಾಂಕ 19-11-2023ರಂದು ಮೈಸೂರಿನ ನಟನಾ ರಂಗಮಂದಿರದಲ್ಲಿ, 21-11-2023ರಂದು ಮೈಸೂರಿನ ರಮಾಗೋವಿಂದ ರಂಗಮಂದಿರದಲ್ಲಿ, ದಿನಾಂಕ 25-11-2023ರಂದು ಹುಬ್ಬಳ್ಳಿಯ ವಿದ್ಯಾನಗರ ಮತ್ತು ದಿನಾಂಕ 07-12-2023ರಂದು ವಿಜಯಪುರದಲ್ಲಿ ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ಮಂಡ್ಯರಮೇಶ್ ಅವರ ನಟನ ರಂಗಶಾಲೆಯು ಕಳೆದ ಅನೇಕ ವರ್ಷಗಳಿಂದ ಕಲಾಮಾಧ್ಯಮದಲ್ಲಿ ಕ್ರಿಯಾಶೀಲವಾಗಿದ್ದು, ರಂಗಭೂಮಿಯಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದೆ. ರಂಗಭೂಮಿಯ ಅಧ್ಯಯನ, ಪ್ರಾತ್ಯಕ್ಷಿಕೆ, ಪ್ರಯೋಗ ಹಾಗೂ ಪ್ರದರ್ಶನಗಳ ಮೂಲಕ ಶ್ರೇಷ್ಠತೆಯನ್ನು ಸಾಧಿಸುವುದರತ್ತ ನಟನ ಸತತವಾಗಿ ಪ್ರಯತ್ನ ನಡೆಸುತ್ತಾ ಬಂದಿದ್ದು ಶ್ಲಾಘನೀಯ. ಮೈಸೂರಿನಲ್ಲಿ ನೆಲೆಗೊಂಡಿದ್ದರೂ ಭಾರತದಾದ್ಯಂತ ರಂಗಯಾತ್ರೆಗಳನ್ನು ಹಾಗೂ ರಂಗ ತರಬೇತಿ ಶಿಬಿರಗಳನ್ನು ನಡೆಸುವುದರ ಮೂಲಕ ತನ್ನ ವ್ಯಾಪ್ತಿಯನ್ನು ಇದು ವಿಸ್ತರಿಸಿಕೊಂಡಿದೆ. ನಟನ ರಂಗಶಾಲೆಯು ತನ್ನ ಚಟುವಟಿಕೆಯ…

Read More

ಎಡನೀರು : ದೇರಾಜೆ ಸೀತಾರಾಮಯ್ಯ ಸಂಸ್ಮರಣ ಸಮಿತಿಯ ನೇತೃತ್ವದಲ್ಲಿ ಸಿದ್ಧಗೊಂಡ ‘ದೇರಾಜೆ ಸೀತಾರಾಮಯ್ಯ ನೆನಪು ನೂರೆಂಟು’ ಎಂಬ ಸಂಸ್ಮರಣಾ ಗ್ರಂಥ ಮತ್ತು ಮರು ಮುದ್ರಣಗೊಂಡ ದೇರಾಜೆ ಅಭಿನಂಧನಾ ಗ್ರಂಥ ‘ರಸಋಷಿ’ ಯ ಲೋಕಾರ್ಪಣೆಯು ದಿನಾಂಕ 14-10-2023ರ ಮಂಗಳವಾರದಂದು ಶ್ರೀ ಮಠದಲ್ಲಿ ಸಂಪನ್ನಗೊಂಡಿತು. ಕಾಸರಗೋಡಿನ ಎಡನೀರು ಮಠದ ಆಶ್ರಯದಲ್ಲಿ ಮತ್ತು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಟಾನದ ಸಂಯೋಜನೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಎಡನೀರು ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಅನುಗ್ರಹ ಸಂದೇಶ ನೀಡುತ್ತಾ  “ದೇರಾಜೆ ಸೀತಾರಾಮಯ್ಯನವರು ಓರ್ವ ಅಪರೂಪದ ಕಲಾವಿದ. ಭಾವನಾತ್ಮಕ ಮತ್ತು ಮಾನವೀಯ ನೆಲೆಗಟ್ಟಿನಲ್ಲಿ ಯಾವುದೇ ಪಾತ್ರಕ್ಕೂ ಅರ್ಥ ಮಾತಾಡುವ ಸಾಮರ್ಥ್ಯ ಹೊಂದಿದ್ದ ಶ್ರೇಷ್ಠ ಸಾಹಿತಿ ಮತ್ತು ಕಲಾವಿದ. 1971ರಲ್ಲಿಯೇ ಸಾರ್ವಜನಿಕವಾಗಿ ಅರ್ಥ ಹೇಳುವುದನ್ನು ನಿಲ್ಲಿಸಿದ್ದರೂ ನಮ್ಮ ಮಠದಲ್ಲಿ ಮಾತ್ರ ಕೊನೆವರೆಗೂ ಅರ್ಥ ಹೇಳಿದ್ದಾರೆ. ದೇರಾಜೆಯವರು ಅರ್ಥ ಹೇಳುತ್ತಾ ಇದ್ದಾಗ, ಅವರಿಗೆ ಗಂಟಲು ಕೆರೆತ ಉಂಟಾಗದಂತೆ,  ತನ್ನ ಪೂರ್ವಾಶ್ರಮದಲ್ಲಿ ಅವರಿಗೆ ಉಪ್ಪು ತಂದು ಕೊಡುತ್ತಿದ್ದೆ. ಆ ಉಪ್ಪಿನ ಋಣದ…

Read More

ಬೆಂಗಳೂರು : ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ (ರಿ.) ಮೈಸೂರು ಇದರ ಸಹಯೋಗದೊಂದಿಗೆ ಬೆಂಗಳೂರಿನ ರಮಣಶ್ರೀ ಪ್ರತಿಷ್ಠಾನದ ವತಿಯಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ‘ರಮಣಶ್ರೀ ಶರಣ ಪ್ರಶಸ್ತಿ’ ಪ್ರದಾನ ಮತ್ತು ಎಸ್. ಷಡಕ್ಷರಿ ಅವರ ‘ಕ್ಷಣ ಹೊತ್ತು ಆಣಿಮುತ್ತು ಭಾಗ 12-13’ ಪುಸ್ತಕಗಳ ಲೋಕಾರ್ಪಣೆಯು ದಿನಾಂಕ 16-11-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತನಾಡುತ್ತಾ “ಸಂವಿಧಾನ ಮತ್ತು ಶರಣ ಸಾಹಿತ್ಯದ ಆಶಯ ಒಂದೇ ಆಗಿದೆ. ಜಾತಿ ಬೇಧ-ಭಾವವಿಲ್ಲದ ಸಮಾಜ ನಿರ್ಮಾಣ ಇವೆರಡರ ಗುರಿಯೂ ಆಗಿದೆ. ಸಮಾಜದ ಋಣ ನಮ್ಮ ಮೇಲೆ ಇದೆ. ಬಸವಣ್ಣವನರ ವಚನ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜದ ಋಣ ತೀರಿಸಬೇಕು. ಪ್ರಸ್ತುತತೆಯಲ್ಲಿ ಮಾನವೀಯ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವುದು ಅತ್ಯವಶ್ಯಕವಾಗಿದೆ. ಸಂವಿಧಾನವಿದ್ದರೆ ನಾವೆಲ್ಲರೂ ಬಸವಣ್ಣನವರ ವಚನ ತತ್ವಾದರ್ಶಗಳ ಕಡೆಗೆ ಹೋಗುತ್ತೇವೆ” ಎಂದು ಹೇಳಿದರು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆ ವಹಿಸಿ ಮಾತನಾಡಿ, “ದಯವೇ ಧರ್ಮದ ಮೂಲವಯ್ಯ ಎಂಬಂತೆ…

Read More

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಸಂಘ, ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು ಸಹಯೋಗದಲ್ಲಿ ನಾಡಿನ ಹೆಸರಾಂತ ಶಿಕ್ಷಣ ತಜ್ಞ, ಸಾಹಿತ್ಯ ಪ್ರೇಮಿ, ಸಂಗೀತ, ಲಲಿತ ಕಲೆಗಳ ಪೋಷಕರಾಗಿದ್ದ ಡಾ. ಬಿ. ಯಶೋವರ್ಮರವರ ನೆನಪಿಗಾಗಿ ಅವರ ವ್ಯಕ್ತಿತ್ವ, ಸಾಹಿತ್ಯ-ಸಂಸ್ಕೃತಿ ಪರಿಚಾರಿಕೆ ಕುರಿತಾಗಿ ರಾಜ್ಯ ಮಟ್ಟದ ಕವಿಗೋಷ್ಠಿಯೊಂದನ್ನು ದಿನಾಂಕ 05-12-2023ರಂದು ಮಂಗಳೂರಿನಲ್ಲಿ ನಡೆಸಲು ಉದ್ದೇಶಿಸಲಾಗಿದ್ದು, ಸದ್ರಿ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗಿದೆ. ಕವನವು ಕನ್ನಡ/ತುಳು ಭಾಷೆಯಲ್ಲಿರಬಹುದಾಗಿದ್ದು, ವಾಚಿಸಲು 3 ನಿಮಿಷಗಳ ಕಾಲಾವಕಾಶ ಇದೆ. ಈ ಗೋಷ್ಠಿಯಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು, ಸಾಹಿತ್ಯಾಭಿಮಾನಿಗಳು ಯಾರು ಬೇಕಾದರೂ ಭಾಗವಹಿಸಬಹುದು. ತಾವು ರಚಿಸಿದ ಸ್ವ-ರಚಿತ ಕವನವನ್ನು ದಿನಾಂಕ 22-11-2023ರ ಮೊದಲು ಡಾ. ಎಂ.ಪಿ. ಶ್ರೀನಾಥ, ಜಿಲ್ಲಾಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಎಸ್.ಡಿ.ಎಂ. ಕಾಲೇಜು ಉಜಿರೆ-574 240 ಸಂಪರ್ಕ 9448558583 ಅಥವಾ ಡಾ. ಮಾಧವ ಎಂ.ಕೆ., ಮುಖ್ಯಸ್ಥರು, ಕನ್ನಡ ವಿಭಾಗ, ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು 9481270577 ಇವರಿಗೆ ಕಳುಹಿಸಿಕೊಡಬಹುದು. ಆಯ್ಕೆಯಾದವರ ಹೆಸರನ್ನು ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಲಾಗುವುದು.

Read More

ಕಿನ್ನಿಗೋಳಿ : ಮಣಿ ಕೃಷ್ಣಸ್ವಾಮಿ ಅಕಾಡೆಮಿ ಸಂಸ್ಥೆಯ ಆಶ್ರಯದಲ್ಲಿ ದಿನಾಂಕ 14-11-2023 ಮಂಗಳವಾರದಂದು ಕಿನ್ನಿಗೋಳಿಯ ನೇಕಾರ ಸೌಧ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಬಂಧಿತ ಕೃತಿಗಳನ್ನಾಧರಿಸಿದ 19ನೇ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ‘ಮಂಜುನಾದ’ ಹಾಗೂ ಸಂಗೀತ ತರಗತಿಯ ಉದ್ಘಾಟನೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿಧಾನ ಪರಿಷತ್ ಮಾಜಿ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ “ಇವತ್ತಿನ ವೇಗದ ದಿನಮಾನದಲ್ಲಿ ಸಂಸ್ಕೃತಿ ಸಂಸ್ಕಾರಗಳನ್ನು ನೃತ್ಯ ಸಂಗೀತದಂತಹ ಕಲೆಗಳ ಮೂಲಕ ಮಕ್ಕಳಿಗೆ ತಿಳಿಯಪಡಿಸುವ ಅಗತ್ಯವಿದೆ. ಇಲ್ಲದಿದ್ದರೆ ಯುವ ಸಮಾಜ ಅಪಾಯಕಾರಿ ಸ್ಥಿತಿಯತ್ತ ಸಾಗುವುದನ್ನು ತಡೆಯಲಾಗದು” ಎಂದು ಹೇಳಿದರು. ಸ್ವರಾಂಜಲಿ ಸಹೋದರಿಯರಾದ ಕಿನ್ನಿಗೋಳಿಯ ಶೋಭಿತಾ ಭಟ್ ಮತ್ತು ಆಶ್ವೀಜಾ ಉಡುಪ ಇವರ ಹಾಡುಗಾರಿಕೆಯ ಸಂಗೀತ ಕಛೇರಿ ಪ್ರೇಕ್ಷಕರನ್ನು ರಂಜಿಸಿತು. ವಯಲಿನ್ ನಲ್ಲಿ ತನ್ಮಯಿ ಉಪ್ಪಂಗಳ ಪುತ್ತೂರು, ಮೃದಂಗದಲ್ಲಿ ಪ್ರಣವ್ ಸುಬ್ರಹ್ಮಣ್ಯ ಬೆಂಗಳೂರು ಮತ್ತು ತಂಬೂರದಲ್ಲಿ ಸುಜಾತ ಎಸ್. ಭಟ್ ಸುರತ್ಕಲ್ ಸಹಕರಿಸಿದರು. ಅಕಾಡೆಮಿಯ ಕಾರ್ಯದರ್ಶಿ ಪಿ. ನಿತ್ಯಾನಂದ ರಾವ್ ಸ್ವಾಗತಿಸಿ, ಪ್ರಸ್ತಾವನೆ ಗೈದು ‘ಸಂಗೀತ…

Read More

ಮಂಗಳೂರು : ಶಾರದಾ ಪದವಿ ಪೂರ್ವ ಕಾಲೇಜಿನ ಬೆಳ್ಳಿ ಹಬ್ಬದ ಅಂಗವಾಗಿ ಹೈಸ್ಕೂಲ್ ಮಟ್ಟದ ಅಂತರ್ ಜಿಲ್ಲಾ Sharada Acadexpo 2k23ನ್ನು ದಿನಾಂಕ 25-11-2023ರಂದು ಬೆಳಗ್ಗೆ 9ರಿಂದ ಶಾರದಾ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದೆ. ಸಾಹಿತ್ಯ, ಸಂಗೀತ, ನೃತ್ಯ, ಚಿತ್ರಕಲೆ, ರಸಪ್ರಶ್ನೆ ಮೊದಲಾದ ವಿಷಯಗಳಿಗೆ ಸಂಬಂಧಿಸಿದ ಇಪ್ಪತ್ತಕ್ಕೂ ಹೆಚ್ಚು ಸ್ಪರ್ಧೆಗಳು ನಡೆಯಲಿವೆ. ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ವಿವಿಧ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿಯೊಂದು ಸ್ಪರ್ಧೆಗೂ ಆಕರ್ಷಕ ಬಹುಮಾನ ದೊರೆಯಲಿದೆ ಎಂದು ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ್ ತಿಳಿಸಿದ್ದಾರೆ. ವಿವರಗಳಿಗಾಗಿ ಅಂತರ್ಜಾಲ ಕೊಂಡಿ www.sharadapuc.org ಮತ್ತು ಇಮೇಲ್ ಐಡಿ [email protected] ನ್ನು ಸಂಪರ್ಕಿಸಬಹುದು. ಪ್ರವೇಶಾತಿಯನ್ನು ಆನ್ಲೈನ್ ಮೂಲಕ ಅಥವಾ ಇಮೇಲ್‌ ಗೆ ದಿನಾಂಕ 22-11-2023ರೊಳಗೆ ಸಲ್ಲಿಸಬಹುದು.

Read More

ಮಂಗಳೂರು : ರಥಬೀದಿಯಲ್ಲಿರುವ ವಿಶ್ವಕರ್ಮ ಯುವ ವೇದಿಕೆ (ರಿ.) ಇದರ 11ನೇ ವರ್ಷದ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ದೀಪೋತ್ಸವದ ಪ್ರಯುಕ್ತ ‘ಸಾಂಸ್ಕೃತಿಕ ವೈಭವ’ವು ದಿನಾಂಕ 25-11-2023 ಶನಿವಾರ ಸಂಜೆ 6.30ಕ್ಕೆ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ. ಸಭಾ ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಹಕಾರ ಬ್ಯಾಂಕ್ ನಿಯಮಿತ ಇದರ ಅಧ್ಯಕ್ಷರಾದ ಡಾ. ಎಸ್.ಆರ್. ಹರೀಶ್ ಆಚಾರ್ಯ, ಶಾಸಕರಾದ ಶ್ರೀ ಡಿ. ವೇದವ್ಯಾಸ್ ಕಾಮತ್, ನಿವೃತ್ತ ಸೇನಾಧಿಕಾರಿಯಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ಇವರುಗಳು ಅತಿಥಿಗಳಾಗಿ ಭಾಗವಹಿಸಲಿರುವರು. ಇದೇ ಸಂದರ್ಭದಲ್ಲಿ ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶ್ರೀ ಎ.ಜಿ. ಸದಾಶಿವ ಆಚಾರ್ಯ ಮತ್ತು ಶ್ರೀ ದಿವಾಕರ ಆಚಾರ್ಯ ಇವರುಗಳನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ನಂತರ ನಡೆಯಲಿರುವ ಸಾಂಸ್ಕೃತಿಕ ವೈಭವದಲ್ಲಿ ಮಂಗಳೂರಿನ ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದರಿಂದ ಶ್ವೇತಾ ಅರೆಹೊಳೆ ನಿರ್ದೇಶನದಲ್ಲಿ ‘ನೃತ್ಯ ವೈಭವ’ ಪ್ರದರ್ಶನಗೊಳ್ಳಲಿದೆ.

Read More

ಮಣಿಪಾಲ : ಕೆನರಾ ಬ್ಯಾಂಕ್‌ನ 118ನೇ ಸಂಸ್ಥಾಪಕರ ದಿನಾಚರಣೆ ಪ್ರಯುಕ್ತ ಮಣಿಪಾಲ ಅನಂತ ನಗರದಲ್ಲಿರುವ ಕೆನರಾ ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕ್ ಮ್ಯಾನೇಜ್‌ಮೆಂಟ್ (ಸಿಐಬಿಎಂ) ಮತ್ತು ಉಡುಪಿ ಆರ್ಟಿಸ್ಟ್ಸ್ ಫೋರಂ ಸಹಯೋಗದಲ್ಲಿ ಮಣಿಪಾಲದ ಸಿಐಬಿಎಂ ಸಂಸ್ಥೆಯಲ್ಲಿ ದಿನಾಂಕ 19-11-2023ರಂದು ಬೆಳಗ್ಗೆ 9.30ರಿಂದ 11.30ರವರೆಗೆ 5ರಿಂದ 7ನೇ ತರಗತಿ ಹಾಗೂ 8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಎರಡು ವಿಭಾಗಗಳಲ್ಲಿ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದೆ. 5ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ‘ಪರಿಸರ ರಕ್ಷಣೆ’, ‘ಆದರ್ಶ ಗ್ರಾಮ’, ‘ರಾಷ್ಟ್ರೀಯ ಹಬ್ಬಗಳು’ ಮತ್ತು 8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ‘ಆದರ್ಶ ನಗರ’, ‘ಕರಕುಶಲ/ಗುಡಿ ಕೈಗಾರಿಕೆ’, ‘ಜಲಚರ (ಸಾಗರ) ಸಂರಕ್ಷಣೆ’ ಎಂಬ ವಿಷಯಗಳಿದ್ದು, ಇದರಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ವಿದ್ಯಾರ್ಥಿಗಳು ಚಿತ್ರ ಬಿಡಿಸಬೇಕು. ಡ್ರಾಯಿಂಟ್ ಶೀಟ್ ನೀಡಲಾಗುತ್ತದೆ. ಉಳಿದ ಪರಿಕರಗಳನ್ನು ಮತ್ತು ಶಾಲಾ ಗುರುತಿನ ಚೀಟಿಯನ್ನು ಎಲ್ಲಾ ವಿದ್ಯಾರ್ಥಿಗಳೂ ತಾವೇ ತರಬೇಕು.

Read More

ಬೆಂಗಳೂರು : ಪ್ರಗತಿ ಗ್ರಾಫಿಕ್ಸ್ ಮತ್ತು ಶ್ರೀನಿವಾಸ ಪುಸ್ತಕ ಪ್ರಕಾಶನ ಅರ್ಪಿಸುವ ಸಾಹಿತಿ ರಾಜೇಂದ್ರ ಬಿ. ಶೆಟ್ಟಿಯವರ ‘ಅಮ್ಮ ಹಚ್ಚಿದ ದೀಪ’, ‘ಕಥೆಯೊಂದಿಗೆ ಗಣಿತ’ ಮತ್ತು ‘ದೈವಗಳ ನಾಡಿನಲ್ಲಿ’ ಎಂಬ ಮೂರು ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 19-11-2023ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಎನ್.ಆರ್. ಕಾಲೋನಿಯಲ್ಲಿರುವ ಡಾ. ಸಿ.ಅಶ್ವತ್ಥ್ ಕಲಾ ಭವನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞರಾದ ಶ್ರೀ ಡಿ. ಮಲ್ಲಾರೆಡ್ಡಿ, ಸಾಹಿತಿ ಡಾ. ನಾ. ದಾಮೋದರ ಶೆಟ್ಟಿ, ಖ್ಯಾತ ಹಾಸ್ಯಸಾಹಿತಿ ಶ್ರೀ ಎಚ್. ಡುಂಡಿರಾಜ್, ಕೆಎಸ್ಎಂ ಸ್ಮಾರಕ ಟ್ರಸ್ಟಿನ ಸಂಸ್ಥಾಪಕರಾದ ಡಾ.ಎಂ. ಬೈರೇಗೌಡ, ಅಂಕಣಕಾರರಾದ ಶ್ರೀ ಎನ್. ರಾಮನಾಥ್, ಕಟ್ಟೆಸತ್ಯ ಫೌಂಡೇಷನ್ ಮತ್ತು ಸತ್ತ್ವಶಾಲೆಯ ಸಂಸ್ಥಾಪಕರಾದ ಶ್ರೀ ಎಸ್. ಸುಜಯ್ ಮತ್ತು ನಿರೂಪಕರು, ಸಾಹಿತಿ, ಕಂಠದಾನ ಕಲಾವಿದರಾದ ಶ್ರೀ ಜಿ.ಪಿ. ರಾಮಣ್ಣ ಇವರುಗಳು ಭಾಗವಹಿಸಲಿರುವರು.

Read More

ಸುಳ್ಯ : ಬೆಟ್ಟಂಪಾಡಿಯ ಶ್ರೀ ಮಂಜುನಾಥೇಶ್ವರ ಭಜನಾ ಮಂದಿರ (ರಿ.), ಶಿವಾಜಿ ಯುವ ವೃಂದ ಹಳೆಗೇಟು ಹಾಗೂ ಶಿವಾಜಿ ಗೆಳೆಯರ ಬಳಗ ಹಳೆಗೇಟು ಇದರ ಸಂಯುಕ್ತ ಆಶ್ರಯದಲ್ಲಿ ಮುಖೇಶ್ ಬೆಟ್ಟಂಪಾಡಿಯವರ ಸಂಯೋಜನೆಯಲ್ಲಿ ಉಚಿತ ‘ಯಕ್ಷಗಾನ ತರಬೇತಿ ಕೇಂದ್ರ’ವು ಶ್ರೀ ಮಂಜುನಾಥೇಶ್ವರ ಭಜನಾ ಮಂದಿರ ಬೆಟ್ಟಂಪಾಡಿಯಲ್ಲಿ ದಿನಾಂಕ 12-11-2023ರಂದು ಆರಂಭಗೊಂಡಿತು. ಯಕ್ಷಗಾನ ಗುರುಗಳಾದ ಶ್ರೀ ಶಶಿ ಕಿರಣ ಕಾವು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಶಿವಾಜಿ ಗೆಳೆಯರ ಬಳಗದ ಅಧ್ಯಕ್ಷರಾದ ಶ್ರೀ ರಾಧಕೃಷ್ಣ ನಾಯಕ್, ಕಾರ್ಯದರ್ಶಿ ಶ್ರೀ ಭಾಸ್ಕರ್ ಎಂ.ಎಸ್., ಶ್ರೀ ಮಂಜುನಾಥೇಶ್ವರ ಭಜನಾ ಮಂದಿರದ ಗೌರವಾಧ್ಯಕ್ಷರಾದ ಶ್ರೀ ನಾರಾಯಣ ಬೆಟ್ಟಂಪಾಡಿ, ಭಜನಾ ಮಂದಿರದ ಅಧ್ಯಕ್ಷರಾದ ಶ್ರೀ ಅವಿನ್ ಬೆಟ್ಟಂಪಾಡಿ, ಕಲಾವಿದರಾದ ಶ್ರೀ ಸನತ್ ಬರೆಮೇಲು ಉಪಸ್ಥಿತರಿದ್ದರು. ಬಳಿಕ ಯಕ್ಷಗಾನ ಗುರು ಶ್ರೀ ಶಶಿ ಕಿರಣ ಕಾವು ಇವರು ತರಬೇತಿ ಕಾರ್ಯಾಗಾರ ನಡೆಸಿದರು. ಪರಿಸರದ ಮಕ್ಕಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದು, ಮಂದಿರದ ಪದಾಧಿಕಾರಿಗಳು ಮತ್ತು ಸದಸ್ಯರು ಸಹಕರಿಸಿದರು. ಪ್ರತೀ ಭಾನುವಾರ…

Read More