Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕ ಇದರ ಆಶ್ರಯದಲ್ಲಿ ಎ.ಆರ್. ಡಿಸೋಜ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ದಿನಾಂಕ 18 ಡಿಸೆಂಬರ್ 2024ರಂದು ಅಪರಾಹ್ನ 2-00 ಗಂಟೆಗೆ ಮಂಗಳೂರಿನ ಗೋರಿಗುಡ್ಡೆಯ ಕಿಟೆಲ್ ವಿದ್ಯಾ ಸಂಸ್ಥೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ಅಧ್ಯಕ್ಷರಾದ ಡಾ. ಮಂಜುನಾಥ ಎಸ್. ರೇವಣ್ಕರ್ ಇವರು ವಹಿಸಲಿದ್ದು, ಯೇನಪೋಯ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕಿ ಡಾ. ದೀಕ್ಷಿತಾ ಪ್ರಶಾಂತ್ ಇವರು ‘ಕರ್ನಾಟಕ ಕ್ರೈಸ್ತರ ಇತಿಹಾಸ, ಕನ್ನಡ ಸಾಹಿತ್ಯಕ್ಕೆ ಕ್ರೈಸ್ತರ ಕೊಡುಗೆ ಹಾಗೂ ಕ್ರೈಸ್ತ ಸಾಹಿತ್ಯ ಪರಂಪರೆ’ ಎಂಬ ವಿಷಯದ ಬಗ್ಗೆ ದತ್ತಿ ಉಪನ್ಯಾಸ ನೀಡಲಿದ್ದಾರೆ.
ಹಾಸನ : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.) ಬೆಂಗಳೂರು ಕೇಂದ್ರ ಸಮಿತಿ ಮತ್ತು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಎಡೆಯೂರು ಹೋಬಳಿ ಘಟಕದ ವತಿಯಿಂದ ಹಮ್ಮಿಕೊಂಡಿರುವ ಅಖಿಲ ಕರ್ನಾಟಕ ಪ್ರಥಮ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕನ್ನಡ ನಾಡು ಕಂಡ ಮಹಾನ್ ಶರಣ ಚಿಂತಕ, ಸುಪ್ರಸಿದ್ಧ ಸಾಹಿತಿ, ಬಸವಾನುಯಾಯಿ ರಂಜಾನ್ ದರ್ಗಾರವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ತಿಳಿಸಿದ್ದಾರೆ. ಆಯ್ಕೆ ಸಂದರ್ಭದಲ್ಲಿ ಕೇಂದ್ರ ಸಮಿತಿಯ ಟ್ರಸ್ಟಿಗಳಾದ ಕೊಟ್ರೇಶ್ ಎಸ್. ಉಪ್ಪಾರ್, ನಾಗರಾಜ್ ದೊಡ್ಡಮನಿ, ಎಚ್.ಎಸ್. ಬಸವರಾಜ್, ಡಾ. ಪಿ. ದಿವಾಕರ ನಾರಾಯಣ, ದೇಸು ಆಲೂರು, ವಾಸು ಸಮುದ್ರವಳ್ಳಿ, ತುಮಕೂರು ಜಿಲ್ಲಾಧ್ಯಕ್ಷ ಡಾ. ವಿಜಯಕುಮಾರ ಕಮ್ಮಾರ, ಹಿರಿಯ ಸಾಹಿತಿ ಡಾ. ಬಿ.ಸಿ.ಶೈಲಾ ನಾಗರಾಜ್, ತಾಲೂಕು ಅಧ್ಯಕ್ಷೆ ಡಾ. ಚಿ.ದೇ. ಸೌಮ್ಯ, ಹೋಬಳಿ ಘಟಕದ ಅಧ್ಯಕ್ಷ ಸಿದ್ದೇಶ್ ಕುಮಾರ್ ವೈ.ಟಿ. ಸೇರಿದಂತೆ ಹಲವರು ಹಾಜರಿದ್ದರು. ಸಮ್ಮೇಳನವು ಶರಣ ಸಂತ, ಮಹಾತಪಸ್ವಿ ಶ್ರೀ ಸಿದ್ದಲಿಂಗೇಶ್ವರರ ಕರ್ಮಭೂಮಿಯಾದ ಎಡೆಯೂರು ಶ್ರೀ…
ಉಡುಪಿ : ರಾಜ್ಯದ ಹೆಸರಾಂತ ಹವ್ಯಾಸಿ ನಾಟಕ ಸಂಸ್ಥೆಯಾದ ‘ರಂಗಭೂಮಿ (ರಿ.) ಉಡುಪಿ’ ಇದರ 60ರ ಸಂಭ್ರಮದಲ್ಲಿ ದಿ. ಡಾ. ಟಿ.ಎಂ.ಎ. ಪೈ, ದಿ. ಎಸ್.ಎಲ್. ನಾರಾಯಣ ಭಟ್ ಮತ್ತು ದಿ. ಮಲ್ಪೆ ಮಧ್ವರಾಜ್ ಸ್ಮಾರಕ 45ನೆಯ ‘ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ’ಯು ದಿನಾಂಕ 04 ಡಿಸೆಂಬರ್ 2024ರಿಂದ 15 ಡಿಸೆಂಬರ್ 2024ರವರೆಗೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಿತು. ಪ್ರಥಮ ಬಹುಮಾನವು ರಂಗರಥ ಟ್ರಸ್ಟ್ (ರಿ.) ಬೆಂಗಳೂರು ತಂಡದ ‘ಧರ್ಮನಟಿ’ ನಾಟಕಕ್ಕೆ ಲಭಿಸಿದೆ. ಈ ತಂಡವು ಪಿ.ವಿ.ಎಸ್. ಬೀಡೀಸ್ ಪ್ರಾಯೋಜಿತ ದಿ. ಪುತ್ತು ವೈಕುಂಠ ಶೇಟ್ ಸ್ಮಾರಕ ಪ್ರಥಮ ನಗದು ಬಹುಮಾನ ರೂ.35,000/- ಮತ್ತು ಸ್ಮರಣಿಕೆ ಹಾಗೂ ಡಾ. ಟಿ.ಎಮ್.ಎ. ಪೈ ಸ್ಮಾರಕ ಪರ್ಯಾಯ ಫಲಕ ಹಾಗೂ ದಿ. ಎಸ್.ಎಲ್. ನಾರಾಯಣ ಭಟ್ ಸ್ಮಾರಕ ಸ್ಮರಣಿಕೆಯನ್ನು ತನ್ನದಾಗಿಸಿಕೊಂಡಿದೆ. ದ್ವಿತೀಯ ಬಹುಮಾನವಾದ ದಿ. ಮಲ್ಪೆ ಮಧ್ವರಾಜ್ ಸ್ಮಾರಕ ಪ್ರಮೋದ್ ಮಧ್ಯರಾಜ್ ರವರ ಕೊಡುಗೆಯಾದ ರೂ.25,000/- ನಗದು ಬಹುಮಾನ ಹಾಗೂ ಡಾ.…
ಮಡಿಕೇರಿ : ಬಾಲಸುಬ್ರಹ್ಮಣ್ಯ ಕಂಜರ್ಪಣೆ ಇವರು ಕೊಡಗು ಜಿಲ್ಲೆಯ ಹಿರಿಯ ಸಾಹಿತಿ, ವೃತ್ತಿಯಲ್ಲಿ ವಕೀಲರು. ಮಂಡ್ಯದಲ್ಲಿ ದಿನಾಂಕ 20 ಡಿಸಂಬರ್ 2024ರಿಂದ 22 ಡಿಸೆಂಬರ್ 2024ರವರೆಗೆ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವಿಶೇಷ ಉಪನ್ಯಾಸದ ಉಪನ್ಯಾಸಕರಾಗಿ ಆಯ್ಕೆಯಾಗಿದ್ದು, ಇವರು ಭಾರತ ಸಂವಿಧಾನ 75ರ ಕುರಿತಾಗಿ ಉಪನ್ಯಾಸ ಮಂಡಿಸಲಿದ್ದಾರೆ. ದಿನಾಂಕ 05 ಮೇ 1954ರಂದು ಕಂಜರ್ಪಣೆ ಪರಮೇಶ್ವರಯ್ಯರವರ ಪುತ್ರನಾಗಿ ಜನಿಸಿದ ಇವರು ತಮ್ಮ ವಿದ್ಯಾಭ್ಯಾಸವನ್ನು ಸುಳ್ಯ ಪುತ್ತೂರಿನಲ್ಲಿ ಮುಗಿಸಿ ಉಡುಪಿಯ ಲಾ ಕಾಲೇಜಿನಿಂದ ಕಾನೂನು ಪದವಿಯನ್ನು, ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ ಪದವಿಯನ್ನು ಪಡೆದಿದ್ದಾರೆ. ವಕೀಲರಾಗಿ 1976ರಿಂದ ಕೊಡಗಿನಲ್ಲಿ ಪ್ರಸಿದ್ಧರಾಗಿದ್ದ ಇವರು ಮಡಿಕೇರಿ ಸರಕಾರಿ ಹಿರಿಯ ಕಾಲೇಜಿನಲ್ಲಿ ಒಂದು ವರ್ಷ ಇಂಗ್ಲೀಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯ, ಸಂಗೀತ, ಕ್ರೀಡೆ ಇವುಗಳಲ್ಲಿ ಅಪಾರ ಆಸಕ್ತಿ ಹೊಂದಿರುವ ಇವರು ಮೂರು ಕವನಗಳು, ಒಂದು ಕಥಾ ಸಂಕಲನ, ಮೂರು ಬದುಕು ಬರಹದ ಕೃತಿಗಳು, ಒಂದು ಸಾಮಾಜಿಕ ಸಾಹಿತಿಕ ಲೇಖನಗಳ ಸಂಗ್ರಹ, ಒಂದು ಕಾನೂನು ನ್ಯಾಯ…
ಉಡುಪಿ : ಗಿಲಿ ಗಿಲಿ ಮ್ಯಾಜಿಕ್ ಗಾರುಡಿಗ ಪ್ರೊ. ಶಂಕರ್ ಅಭಿನಂದನ ಸಮಿತಿ ಉಡುಪಿ ಇದರ ವತಿಯಿಂದ ಪ್ರೊ. ಶಂಕರ್ ಅಭಿನಂದನಾ ಸಮಾರಂಭವು ದಿನಾಂಕ 14 ಡಿಸೆಂಬರ್ 2024ರಂದು ಉಡುಪಿಯ ಯಕ್ಷಗಾನ ಕಲಾರಂಗ ಐವೈಸಿ ಸಭಾಂಗಣದಲ್ಲಿ ನಡೆಯಿತು. ಈ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ “ಬದುಕಿನ ಸತ್ಯ, ಮಾಯೆಯ ನೆಲೆಯ ಜೀವನದಲ್ಲಿ ಪ್ರೊ. ಶಂಕರ್ ಇವರು ಕಲೆಗಾಗಿ ಬದುಕಿದ ವ್ಯಕ್ತಿ. ಮ್ಯಾಜಿಕ್ ಮೂಲಕವೂ ಜನರ ಮದ್ಯವ್ಯಸನ ಮುಕ್ತ ಬದುಕಿಗೆ ಕೊಡುಗೆ ನೀಡಿದ್ದಾರೆ. ನಾಡಿನ ಎಲ್ಲ ಕಲಾವಿದರೂ ಸಹ ಕಲೆಯೊಂದಿಗೆ ಗಳಿಸಿದ ಸಂಪತ್ತಿನಲ್ಲಿ ಅಲ್ಪ ಭಾಗವನ್ನು ಸಮಾಜಕ್ಕೆ ನೀಡುವ ಮೂಲಕ ಋಣ ತೀರಿಸಬೇಕು” ಎಂದು ನುಡಿದರು. ಕಾರ್ಯಕ್ರಮ ಉದ್ಘಾಟಿಸಿದ ಕ.ಸಾ.ಪ. ಮಾಜಿ ಅಧ್ಯಕ್ಷ, ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿ, “ಕರ್ನಾಟಕ ಕರಾವಳಿಯ ಮೊಟ್ಟ ಮೊದಲ ಜಾದೂಗಾರ ಪ್ರೊ. ಶಂಕರ್ ಇವರಿಗೆ ಎಂದೋ ಅಭಿನಂದನೆ, ಸನ್ಮಾನ ಆಗಬೇಕಿತ್ತು. ಪ್ರಶಸ್ತಿ ಸನ್ಮಾನಗಳಿಂದ ದೂರವಿರುವ ನಾಡಿನ…
ಶಿರ್ವ : ಯಕ್ಷಶಿಕ್ಷಣ ಟ್ರಸ್ಟ್( ರಿ.) ಉಡುಪಿ ಆಯೋಜಿಸುತ್ತಿರುವ ‘ಕಿಶೋರ ಯಕ್ಷಗಾನ ಸಂಭ್ರಮ-2024’ರ ಕಾಪು ವಿಧಾನ ಸಭಾ ವ್ಯಾಪ್ತಿಯಲ್ಲಿ ನಡೆಯುವ ಹದಿನೇಳು ಶಾಲೆಗಳ ಪ್ರದರ್ಶನಗಳ ಉದ್ಫಾಟನೆಯು ದಿನಾಂಕ 15 ಡಿಸೆಂಬರ್ 2024ರಂದು ಶಿರ್ವಾದ ಮಹಿಳಾ ಸೌಧದಲ್ಲಿ ಸಂಪನ್ನಗೊಂಡಿತು. ನಿವೃತ್ತ ಪ್ರಾಧ್ಯಾಪಕಿ ಶಾರದಾ ಎಂ. ದೀಪ ಪ್ರಜ್ವಲನಗೊಳಿಸಿ ವಿದ್ಯುಕ್ತ ಚಾಲನೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿಯವರು ಮಾತನಾಡಿ “ಯಕ್ಷಗಾನ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಇನ್ನಷ್ಟು ಶಾಲೆಗಳು ಯಕ್ಷಶಿಕ್ಷಣಕ್ಕೆ ಆಸಕ್ತಿ ತೋರಿಸಬೇಕಾಗಿದೆ” ಎಂದು ನುಡಿದರು. ವೇದಿಕೆಯಲ್ಲಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಉಪಾಧ್ಯಕ್ಷರಾದ ಎಸ್.ವಿ. ಭಟ್, ವಿ.ಜಿ. ಶೆಟ್ಟಿ, ವಿಠಲ್ ಬಿ. ಅಂಚನ್, ಕೆ. ಶ್ರೀಧರ್ ಕಾಮತ್, ನಾರಾಯಣ ಎಂ. ಹೆಗಡೆ, ನಟರಾಜ ಉಪಾಧ್ಯಾಯ ಉಪಸ್ಥಿತರಿದ್ದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರದರ್ಶನ ಸಂಘಟನಾ ಸಮಿತಿಯ ಸಂಚಾಲಕರಾದ ಕೆ. ಶ್ರೀಪತಿ ಕಾಮತ್ ಸ್ವಾಗತಿಸಿ, ಅನಂತ ಮೂಡಿತ್ತಾಯರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಸಭಾ…
ಬೆಂಗಳೂರು: ಪುಸ್ತಕ ಲೋಕದಲ್ಲಿ ಹೊಸ ಇತಿಹಾಸ ಸೃಷ್ಟಿ ಮಾಡುತ್ತಿರುವ ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ‘ಕ್ರಿಯೇಟಿವ್ ಪುಸ್ತಕ ಮನೆ’ ವತಿಯಿಂದ 6 ಪುಸ್ತಕಗಳ ಲೋಕಾರ್ಪಣೆ ಹಾಗೂ ‘ಕ್ರಿಯೇಟಿವ್ ಪುಸ್ತಕ ಪ್ರಶಸ್ತಿ-2024’ ಪ್ರದಾನ ಸಮಾರಂಭವು ದಿನಾಂಕ 15 ಡಿಸೆಂಬರ್ 2024ರಂದು ಬೆಂಗಳೂರಿನ ಕೃಷ್ಣರಾಜ ಪರಿಷತ್ ಮಂದಿರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಖ್ಯಾತ ಬರಹಗಾರ ಪದ್ಮರಾಜ್ ದಂಡಾವತಿ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಖ್ಯಾತ ಸಾಹಿತಿಗಳಾದ ಜೋಗಿ, ಬಿ. ಆರ್. ಲಕ್ಷ್ಮಣ್ ರಾವ್ ಹಾಗೂ ಡಾ. ನಾ. ಸೋಮೇಶ್ವರ ಇವರುಗಳು ಈ ವೇದಿಕೆಯಲ್ಲಿ ಕೃತಿಕಾರರಾದ ಕೆ. ಸತ್ಯನಾರಾಯಣ್, ಡಿ. ಎಸ್. ಚೌಗಲೆ, ನರೇಂದ್ರ ರೈ ದೇರ್ಲ, ಡಾ. ಲಕ್ಷ್ಮಣ ವಿ. ಎ. ಈ ಕೃತಿಕಾರರ ಆರು ಪುಸ್ತಕಗಳನ್ನು ಲೋಕಾರ್ಪಣೆ ಮಾಡಿದರು. ಪ್ರಾಸ್ತವಿಕ ಮಾತನಾಡಿದ ಕ್ರಿಯೇಟಿವ್ ಕಾಲೇಜು ಹಾಗೂ ಪುಸ್ತಕ ಮನೆ ಸಂಸ್ಥಾಪಕರಲ್ಲಿ ಒಬ್ಬರಾದ ಅಶ್ವಥ್ ಎಸ್. ಎಲ್. “ಕರಾವಳಿಯಿಂದ ರಾಜಧಾನಿಯವರೆ ನಮ್ಮ ಪುಸ್ತಕ ಪಯಣಕ್ಕೆ ಇದು ಸಂಭ್ರಮದ ಕ್ಷಣ. ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ಶಿಕ್ಷಣದ ಜತೆ…
ಕುಂದಾಪುರ: ಬನ್ನೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನ ನೀಡುವ ‘ಬನ್ನೂರು ಅಪ್ಪಣ್ಣ ಹೆಗ್ಡೆ ಪ್ರಶಸ್ತಿ’ಗೆ ನಿವೃತ್ತ ಕುಲಪತಿ ಪ್ರೊ. ಬಿ. ಎ. ವಿವೇಕ ರೈ ಆಯ್ಕೆಯಾಗಿದ್ದಾರೆ. ದಿನಾಂಕ 24 ಡಿಸೆಂಬರ್ 2024ರಂದು ಸಂಜೆ ಘಂಟೆ 6.00 ರಿಂದ ವಕ್ವಾಡಿಯ ಗುರುಕುಲ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ನಡೆಯುವ ‘ಬಿ.ಅಪ್ಪಣ್ಣ ಹೆಗ್ಡೆ-90’ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಮಿತಿಯ ಅಧ್ಯಕ್ಷರಾದ ಡಾ. ಎಂ.ಮೋಹನ ಆಳ್ವ, ಬನ್ನೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನ ಅಧ್ಯಕ್ಷ ರಾಮ್‌ಕಿಶನ್ ಹೆಗ್ಡೆ ತಿಳಿಸಿದ್ದಾರೆ. ಪ್ರಶಸ್ತಿಯು ಬೆಳ್ಳಿಫಲಕ, ಸನ್ಮಾನ ಪತ್ರ ಒಳಗೊಂಡಿದೆ. ಡಾ. ಬಿ. ಎ. ವಿವೇಕ ರೈ ಇವರು ಕನ್ನಡದ ಹಿರಿಯ ಸಂಶೋಧಕ, ವಿಮರ್ಶಕ, ಅನುವಾದಕ, ಜಾನಪದ ವಿದ್ವಾಂಸ, ನಿವೃತ್ತ ಕನ್ನಡ ಪ್ರಾಧ್ಯಾಪಕರು ಮತ್ತು ವಿಶ್ರಾಂತ ಕುಲಪತಿಗಳು. ಇವರು ಕಳೆದ 54 ವರ್ಷಗಳಿಂದ ಅಧ್ಯಯನ, ಅಧ್ಯಾಪನ ಮತ್ತು ಸಂಶೋಧನ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕನ್ನಡ ಮತ್ತು ತುಳುವಿನ ಕುರಿತು ಹೆಚ್ಚಿನ ಕೆಲಸ ಮಾಡಿದ್ದಾರೆ. ಇವರ ತಾಯ್ನುಡಿ ತುಳು. ಇವರಿಗೆ ಚಿಕ್ಕ ವಯಸ್ಸಿಗೆ ತಮ್ಮ ತಂದೆ…
ತೆಕ್ಕಟ್ಟೆ: ಯಶಸ್ವೀ ಕಲಾವೃಂದ (ರಿ.)ಕೊಮೆ ತೆಕ್ಕಟ್ಟೆ ಸಹಯೋಗದೊಂದಿಗೆ ಡಾ. ಜಗದೀಶ್ ಶೆಟ್ಟಿ ಸಂಯೋಜನೆಯಲ್ಲಿ ‘ಸಿನ್ಸ್ 1999 ಶ್ವೇತಯಾನ-84’ ಹಾಗೂ ದಿನಾಂಕ 15 ಡಿಸೆಂಬರ್ 2024ರ ಭಾನುವಾರದಂದು ತೆಕ್ಕಟ್ಟೆ ಹಯಗ್ರೀವದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಲೀಲಾವತಿ ಬೈಪಡಿತ್ತಾಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಹಿರಿಯ ಯಕ್ಷಗಾನ ಕಲಾವಿದ ಉಜಿರೆ ಅಶೋಕ್ ಭಟ್ ಮಾತನಾಡಿ “ವಿವಾಹ ನಂತರ ಪತಿಯೇ ಗುರುವಾಗಿ ಸಂಗೀತಗಾರರಾಗಿದ್ದ ಲೀಲಾವತಿಯಮ್ಮನನ್ನು ತೆಂಕು ತಿಟ್ಟಿನ ಯಶಸ್ವೀ ಭಾಗವತರನ್ನಾಗಿ ಮಾಡಿದ ಖ್ಯಾತಿ ಅವರ ಪತಿ ಹರಿ ನಾರಾಯಣ ಬೈಪಡಿತ್ತಾಯರಿಗೆ ಸಲ್ಲುತ್ತದೆ. ಗುರುವಾಗಿ ಅನೇಕ ಶಿಷ್ಯರನ್ನು ಭಾಗವತಿಕೆ ಕ್ಷೇತ್ರಕ್ಕೆ ನೀಡಿದ ಹಿರಿಮೆ ಲೀಲಾವತಿ ಬೈಪಡಿತ್ತಾಯರದು. ಕಷ್ಟದ ಬದುಕಿನ ನಿವಾರಣೆಗಾಗಿ ಮೇಳದ ತಿರುಗಾಟ ನಡೆಸಿದ ಏಕೈಕ ಮಹಿಳಾ ಪ್ರಥಮ ಭಾಗವತರಾಗಿ ನಿಂತವರು ಲೀಲಾವತಿ ಬೈಪಡಿತ್ತಾಯರು. ಯಕ್ಷಲೋಕಕ್ಕೆ, ಯಕ್ಷಗಾನ ಕಲಾವಿದರಿಗೆ ಎಂದೆಂದಿಗೂ ಮಾತೆಯಾಗಿ ಉಳಿದು ಅಜರಾಮರರಾದರು.” ಎಂದರು. ಶಿರಸಿ ಮೇಳವನ್ನು ಮೆರೆಸಿ ಯಕ್ಷಗಾನವನ್ನು ಶ್ರೀಮಂತಗೊಳಿಸಿದ್ದ ಯಜಮಾನರಾದ ಶ್ರೀ ಕೃಷ್ಣ ನಾಯ್ಕ್, ಡಾ. ಗಣೇಶ್ ಯು., ಉದ್ಯಮಿ ಗೋಪಾಲ ಪೂಜಾರಿ, ಭಾಗವತ…
ಮಂಗಳೂರು : ಕೀರ್ತಿಶೇಷ ಕುಂಬ್ಳೆ ಸುಂದರ ರಾವ್ ಸಂಸ್ಮರಣಾ ವೇದಿಕೆ ಹಾಗೂ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ದಿನಾಂಕ 14 ಡಿಸೆಂಬರ್ 2024ರಂದು ಕೆನರಾ ಪದವಿ ಪೂರ್ವ ಕಾಲೇಜಿನಲ್ಲಿ ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಕುಂಬ್ಳೆ ಸುಂದರ ರಾವ್ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನೆರವೇರಿತು. ಯಕ್ಷಗಾನ ಹಿರಿಯ ಕಲಾವಿದ ಅರುವ ಕೊರಗಪ್ಪ ಶೆಟ್ಟಿಯವರಿಗೆ ಈ ವೇಳೆ ‘ಕುಂಬ್ಳೆ ಸುಂದರ ರಾವ್ ಸಂಸ್ಮರಣಾ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿದ ಅರುವ ಕೊರಗಪ್ಪ ಶೆಟ್ಟಿ ಮಾತನಾಡಿ “ಕುಂಬ್ಳೆ ಸುಂದರ ರಾವ್ ಜೊತೆ ಅನ್ಯೋನ್ಯ ಸಂಬಂಧ ಹೊಂದಿದ್ದೆ. ಅವರಿಂದಾಗಿ ನನಗೆ ಸಂಘದ ಸಂಪರ್ಕ ಸಿಕ್ಕಿತು. ನನ್ನ ಯಕ್ಷಗುರು ಪಡ್ರೆ ಚಂದು. ಆದರೆ, ಯಕ್ಷಗಾನ ರಂಗದಲ್ಲಿ ನನಗೆ ವ್ಯಕ್ತಿತ್ವ ಕರುಣಿಸಿದ್ದು ಕುಂಬ್ಳೆ” ಎಂದರು. ಸಂಸ್ಮರಣಾ ಭಾಷಣ ಮಾಡಿದ ಯಕ್ಷಗಾನ ಅರ್ಥಧಾರಿ ಭಾಸ್ಕರ ರೈ ಕುಕ್ಕುವಳ್ಳಿ, “ಕುಂಬ್ಳೆ ಸುಂದರ ರಾವ್ ಅವರು ಯಕ್ಷಗಾನ ರಂಗದ ಪ್ರಾತಃಸ್ಮರಣೀಯರು. ಯಕ್ಷಗಾನದಲ್ಲಿ ಅರ್ಥಗಾರಿಕೆಗೆ ಹೊಸ ಆಯಾಮ ನೀಡಿದ ಇವರು…