Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ‘ಆಜಂದಿ ಎಣ್ಣೆ ಮಾಜಂದಿ ನಿನೇ ತೆಕ್ಕಂದಿ ತುಡರ್’ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ. ವಾಮನ ನಂದಾವರ ಇವರಿಗೆ ನುಡಿನಮನ ಸಲ್ಲಿಕೆ ಕಾರ್ಯಕ್ರಮವು ದಿನಾಂಕ 19 ಮಾರ್ಚ್ 2025ರಂದು ಉರ್ವಸ್ಟೋರ್ನ ತುಳು ಭವನದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಹಿರಿಯ ವಿದ್ವಾಂಸ ಪ್ರೊ. ವಿವೇಕ್ ರೈ ಮಾತನಾಡಿ “ಡಾ. ವಾಮನ ನಂದಾವರ ಅವರು ತುಳು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯ. ತುಳು ಸಾಹಿತ್ಯ ಬೆಳೆಯಲು ನಿರಂತರವಾಗಿ ಶ್ರಮಿಸಿದ್ದಾರೆ. ತನ್ನ ಕೃತಿಗಳ ಮೂಲಕ ನಿರಂತರ ತುಳು ಸೇವೆ ಮಾಡುತ್ತಲೇ ಇದ್ದರು. ನಂದಾವರ ಓರ್ವ ಉತ್ತಮ ಪ್ರಕಾಶಕ, ಸಂಘಟಕ, ಸಾಹಿತಿ, ಕಥೆಗಾರ ಆಗಿದ್ದರು. ಜತೆಗೆ ಊರವರೊಂದಿಗೆ ಅತ್ಯುತ್ತಮ ಬಾಂಧವ್ಯ ಹೊಂದಿದ ವ್ಯಕ್ತಿಯಾಗಿದ್ದರು. ಆರಂಭದ ದಿನಗಳಲ್ಲೇ ತುಳುವಿನ ಬಗ್ಗೆ ಕೆಲಸ ಮಾಡಬೇಕೆನ್ನುವ ಉತ್ಸಾಹ ಅವರಲ್ಲಿತ್ತು. ಗಣಿತ ಶಿಕ್ಷಕರಾಗಿದ್ದು ವಿದ್ಯಾರ್ಥಿಗಳಿಗಾಗಿ ಬರೆದ ಪದ್ಯಗಳು ಪ್ರಸಿದ್ಧಿ ಗಳಿಸಿವೆ.…
ಧಾರವಾಡ : ಸಾಹಿತ್ಯ ಗಂಗಾ ಧಾರವಾಡ ಸಂಸ್ಥೆಯು 45 ವರ್ಷದೊಳಗಿನ ಉದಯೋನ್ಮುಖ ಲೇಖಕ/ ಲೇಖಕಿಯರನ್ನು ಪ್ರೋತ್ಸಾಹಿಸಲು ಕಥೆ ಮತ್ತು ಪ್ರಬಂಧಗಳ ಸಂಪುಟವೊಂದನ್ನು ಯುವ ವಿಮರ್ಶಕರಾದ ವಿಕಾಸ ಹೊಸಮನಿ ಮತ್ತು ಸುಭಾಷ್ ಪಟ್ಟಾಜೆಯವರ ಸಂಪಾದಕತ್ವದಲ್ಲಿ ಪ್ರಕಟಿಸಲಿದೆ. ಈ ಸಂಪುಟದಲ್ಲಿ 20 ಕಥೆಗಳು ಮತ್ತು 20 ಪ್ರಬಂಧಗಳಿಗೆ ಮಾತ್ರ ಅವಕಾಶ ನೀಡಲಾಗುವುದು. ಆಸಕ್ತರು ನಿಯಮಾನುಸಾರವಾಗಿ ಬರಹಗಳನ್ನು ಕಳುಹಿಸಬೇಕು. ನಿಯಮಗಳು : # ಈ ಸಂಪುಟಕ್ಕೆ ಸ್ವತಂತ್ರ ಮತ್ತು ಅಪ್ರಕಟಿತ ಕಥೆ-ಪ್ರಬಂಧಗಳನ್ನು ಮಾತ್ರ ಕಳುಹಿಸಬೇಕು. # ಅನುವಾದ, ಅನುಸೃಷ್ಟಿ, ರೂಪಾಂತರ ಮಾಡಿದ ಕಥೆ-ಪ್ರಬಂಧಗಳಿಗೆ ಅವಕಾಶವಿಲ್ಲ. # ಒಬ್ಬರು ಒಂದು ಕಥೆ ಅಥವಾ ಪ್ರಬಂಧವನ್ನು ಮಾತ್ರ ಕಳುಹಿಸಬೇಕು. # ಕಥೆ-ಪ್ರಬಂಧಗಳು ಕನಿಷ್ಠ 700 ಪದಗಳ ಮೇಲೆ ಮತ್ತು ಗರಿಷ್ಠ 1500 ಪದಗಳೊಳಗಿರಬೇಕು. # ಕಥೆ-ಪ್ರಬಂಧಗಳನ್ನು ಕಡ್ಡಾಯವಾಗಿ docx & pdf ಎರಡೂ ರೂಪದಲ್ಲಿ ಕಳಿಸಬೇಕು. ಬರಹಗಾರರ ಸಂಕ್ಷಿಪ್ತ ಪರಿಚಯ, ವಯೋಮಿತಿ ದೃಢೀಕರಣದ ದಾಖಲೆ, ಪೂರ್ಣ ವಿಳಾಸ ಮತ್ತು ಒಂದು ಫೋಟೋ ಪ್ರತ್ಯೇಕವಾಗಿ ಕಳುಹಿಸಬೇಕು. # ಗುಣಮಟ್ಟವೊಂದೇ ಆಯ್ಕೆಯ…
ಹೆಗ್ಗೋಡು : ಕಿನ್ನರ ಮೇಳ ತುಮರಿ ಇವರ ವತಿಯಿಂದ ಕೆ.ಎಸ್. ರಾಜೇಂದ್ರನ್ ನೆನಪಿನ ಕಾರ್ಯಕ್ರಮವನ್ನು ದಿನಾಂಕ 22 ಮತ್ತು 23 ಮಾರ್ಚ್ 2025ರಂದು ಹೆಗ್ಗೋಡು ಭೀಮನಕೋಣೆ ಕಿನ್ನರ ಮೇಳ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 22 ಮಾರ್ಚ್ 2025ರಂದು ಸಂಜೆ 5-30 ಗಂಟೆಗೆ ರಾಜೇಂದ್ರನ್ ಸ್ಮರಣೆ ಮತ್ತು 7-00 ಗಂಟೆಗೆ ಕೆ.ಜಿ. ಕೃಷ್ಣಮೂರ್ತಿ ಇವರ ನಿರ್ದೇಶನದಲ್ಲಿ ‘ಸುದ್ದಿಯ ಮಾಯಾಜಾಲ’ ಕಿನ್ನರ ಮೇಳ ನಾಟಕ ಪ್ರದರ್ಶನಗೊಳ್ಳಲಿದೆ. ದಿನಾಂಕ 23 ಮಾರ್ಚ್ 2025ರಂದು ಬೆಳಗ್ಗೆ 10-00 ಗಂಟೆಗೆ ನಟ ಮತ್ತು ನಿರ್ದೇಶಕ ಸುಧನ್ವ ದೇಶಪಾಂಡೆ ಇವರಿಂದ ‘ವಿಕೃತ ಜಗತ್ತಿನೊಳಗೆ ರಂಗಭೂಮಿ’ ಒಂದು ಸಚಿತ್ರ ಉಪನ್ಯಾಸ ನಡೆಯಲಿದೆ. ಮಧ್ಯಾಹ್ನ 4-30 ಗಂಟೆಗೆ ಕೇರಳದ ನಿಧಿ ಎಸ್. ಶಾಸ್ತ್ರಿ ಇವರ ನಿರ್ದೇಶನದಲ್ಲಿ ‘ಇರುವೆ ಪುರಾಣ’ ಮಕ್ಕಳ ನಾಟಕ ಮತ್ತು ಸಂಜೆ 7-00 ಗಂಟೆಗೆ ದಾದಾನಟ್ಟಿ ಶ್ರೀ ಮಂಜುನಾಥ ಶ್ರೀಕೃಷ್ಣ ಪಾರಿಜಾತ ತಂಡದವರಿಂದ ‘ಶ್ರೀ ಕೃಷ್ಣ ಪಾರಿಜಾತ’ ಪ್ರಸ್ತುತಗೊಳ್ಳಲಿದೆ.
ಕಾಸರಗೋಡು : ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಕನ್ನಡ ಗ್ರಾಮ ಕಾಸರಗೋಡು ಹಾಗೂ ವಿ.ಕೆ.ಎಂ. ಕಲಾವಿದರು (ರಿ.) ಬೆಂಗಳೂರು ಇದರ ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರ ಬೆಂಗಳೂರು ಇದರ ಸಹಯೋಗದಲ್ಲಿ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಮೈಸೂರು, ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಮಂಗಳೂರು, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ ಕೇರಳ ರಾಜ್ಯ, ದಾಸ ಸಾಹಿತ್ಯ ಪರಿಷತ್ತು ಮತ್ತು ವಿವಿಧ ಸಂಘ, ಸಂಸ್ಥೆಗಳ ಸಹಕಾರದಲ್ಲಿ ದಿನಾಂಕ 27 ಮಾರ್ಚ್ 2025ರಂದು ಬೆಳಿಗ್ಗೆ ಗಂಟೆ 9-00ರಿಂದ ರಾತ್ರಿ 9-00ರವರೆಗೆ ಕಾಸರಗೋಡು ಕನ್ನಡ ಗ್ರಾಮದಲ್ಲಿ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಇದರ 25ನೇ ಬೆಳ್ಳಿ ಹಬ್ಬ ವರ್ಷಾಚರಣೆಯ ಸಂಭ್ರಮ, ಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನ – 2025 ಮತ್ತು ಕರ್ನಾಟಕ ಗಡಿನಾಡ ಉತ್ಸವ, ವಿ.ಕೆ.ಎಂ. ಕಲಾವಿದರು (ರಿ.) ಬೆಂಗಳೂರು…
ಉಡುಪಿ : ಯಕ್ಷಗಾನ ಕಲಾರಂಗ (ರಿ.) ಇದರ ವತಿಯಿಂದ ಭೀಮ ಗೋಲ್ಡ್ ಪ್ರೈ.ಲಿ. ಬೆಂಗಳೂರು ಇದರ ಪ್ರಾಯೋಜಕತ್ವದಲ್ಲಿ ಭೀಮ ‘ಯಕ್ಷಶಿಕ್ಷಣ ಸನಿವಾಸ ಶಿಬಿರ -2025’ವನ್ನು ದಿನಾಂಕ 22 ಮಾರ್ಚ್ 2025ರಿಂದ 28 ಮಾರ್ಚ್ 2025ರವರೆಗೆ ಉಡುಪಿಯ ಕಲಾರಂಗ ಐ.ವೈ.ಸಿ. ಸಭಾಂಗಣದಲ್ಲಿ ಆಯೋಜಿಸಲಾಗಿದೆ. ದಿನಾಂಕ 22 ಮಾರ್ಚ್ 2025ರಂದು ಪೂರ್ವಾಹ್ನ 10-30 ಗಂಟೆಗೆ ಮಾನ್ಯ ಶಾಸಕರಾದ ಯಶ್ ಪಾಲ್ ಎ. ಸುವರ್ಣ ಇವರು ಈ ಶಿಬಿರದ ಉದ್ಘಾಟನೆ ಮಾಡಲಿದ್ದು, ಬೆಂಗಳೂರು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀ ಗುರು ಬನ್ನಂಜೆ ಸಂಜೀವ ಸುವರ್ಣ ಇವರು ನಿರ್ದೇಶಕರಾಗಿದ್ದು, ಗುರುಗಳಾಗಿ ನರಸಿಂಹ ತುಂಗ ಮತ್ತು ಕುಮಾರಿ ಆದ್ಯತಾ ಭಟ್ ಹಾಗೂ ನಿರಂಜನ ಭಟ್ ಇವರು ಸಂಯೋಜಕರಾಗಿ ಈ ಶಿಬಿರ ನಡೆಸಿಕೊಡಲಿದ್ದಾರೆ. ಸಂಜೆ 6-00 ಗಂಟೆಗೆ ಉಡುಪಿಯ ‘ಯಕ್ಷಸಂಜೀವ ಯಕ್ಷಗಾನ ಕೇಂದ್ರ’ ಇಲ್ಲಿನ ವಿದ್ಯಾರ್ಥಿಗಳಿಂದ ಬನ್ನಂಜೆ ಸಂಜೀವ ಸುವರ್ಣ ಇವರ ನಿರ್ದೇಶನದಲ್ಲಿ ‘ಜಟಾಯು ಮೋಕ್ಷ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಸುಳ್ಯ : ಸಂಧ್ಯಾರಶ್ಮಿ ಸಾಹಿತ್ಯ ಸಂಘ ಸುಳ್ಯ ಮತ್ತು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸುಳ್ಯ ಹೋಬಳಿ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಸಾಹಿತಿ ಡಾ. ರಮಾನಂದ ಬನಾರಿಯವರ ಬಗ್ಗೆ ‘ತಿಂಗಳ ಸಾಹಿತ್ಯ ಸಂವಾದ ಮಾಲಿಕೆ’ ಕಾರ್ಯಕ್ರಮವನ್ನು ದಿನಾಂಕ 22 ಮಾರ್ಚ್ 2025ರಂದು ಪೂರ್ವಾಹ್ನ 10-30 ಗಂಟೆಗೆ ಕುರಂಜಿ ಬಾಗ್ ಸಂಧ್ಯಾರಶ್ಮಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಸಂಧ್ಯಾರಶ್ಮಿ ಸಾಹಿತ್ಯ ಸಂಘ ಇದರ ಅಧ್ಯಕ್ಷರಾದ ಶ್ರೀಮತಿ ಲೀಲಾ ದಾಮೋದರ ಅಧ್ಯಕ್ಷತೆ ವಹಿಸಲಿದ್ದು, ಸುಳ್ಯದ ಪ್ರತಿಭಾ ವಿದ್ಯಾಲಯ ಪ್ರಾಚಾರ್ಯರಾದ ವೆಂಕಟ್ರಾಮ್ ಭಟ್ ‘ವ್ಯಕ್ತಿತ್ವ ಪರಿಚಯ’, ಸಾಹಿತಿ ಹಾಗೂ ಪತ್ರಕರ್ತರಾದ ವಿರಾಜ್ ಅಡೂರು ‘ಮತ್ತೆ ಮತ್ತೆ ಶ್ರೀಕೃಷ್ಣ’, ಸಾಹಿತಿ ಕುಮಾರಸ್ವಾಮಿ ತೆಕ್ಕುಂಜ ‘ಕಾವ್ಯದಲ್ಲಿ ವ್ಯಕ್ತಿ ಚಿತ್ರಣ’, ವೈದ್ಯರಾದ ಡಾ. ವೀಣಾ ಇವರಿಂದ ‘ಆರೋಗ್ಯ ಗೀತೆಗಳು’ ಮತ್ತು ಕೆ.ಆರ್. ಗೋಪಾಲಕೃಷ್ಣ ಇವರಿಂದ ಗೀತ ಗಾಯನ ನಡೆಯಲಿದೆ.
ಧಾರವಾಡ : ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ ಇದರ ವತಿಯಿಂದ ನಾಡೋಜ ಡಾ. ಏಣಗಿ ಬಾಳಪ್ಪ ಸ್ಮರಣಾರ್ಥ ದತ್ತಿ ವಿಶ್ವರಂಗಭೂಮಿ ದಿನಾಚರಣೆ ಪ್ರಯುಕ್ತ ದತ್ತಿ ಉಪನ್ಯಾಸ ಹಾಗೂ ರಂಗ ಗೌರವ ಸಮಾರಂಭವನ್ನು ದಿನಾಂಕ 27 ಮಾರ್ಚ್ 2025ರಂದು ಸಂಜೆ 6-00 ಗಂಟೆಗೆ ಧಾರವಾಡದ ಕ.ವಿ.ವ. ಸಂಘ ಶ್ರೀ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಆಯೋಜಿಸಲಾಗಿದೆ. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ಇದರ ಅಧ್ಯಕ್ಷರಾದ ಚಂದ್ರಕಾಂತ ಬೆಲ್ಲದ ಇವರ ಅಧ್ಯಕ್ಷತೆಯಲ್ಲಿ ಧಾರವಾಡ ರಂಗಾಯಣದ ಅಧ್ಯಕ್ಷರಾದ ರಾಜು ತಾಳಿಕೋಟಿ ಇವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಲಕ್ಮೇ ಕಶ್ವರ ಸ್ತ್ರೀ ಸಂಗೀತ ನಾಟಕ ಮಂಡಳಿ ಇದರ ಪರವಾಗಿ ಶ್ರೀಮತಿ ಶಾರದಮ್ಮಾ ಹೊಂಬಳ ಗದಗ ಮತ್ತು ಚಿತ್ತರಗಿ ಶ್ರೀ ಕುಮಾರ ವಿಜಯ ನಾಟ್ಯ ಸಂಘ ಇದರ ಪರವಾಗಿ ಶ್ರೀಮತಿ ವಿಜಯಲಕ್ಷ್ಮಿ ಹಿರೇಮಠ ಬಾಗಲಕೋಟ ಇವರಿಗೆ ರಂಗ ಗೌರವ ನೀಡಲಾಗುವುದು. ಬೆಂಗಳೂರು ವಿಶ್ವವಿದ್ಯಾಲಯ ಸಂಶೋಧನಾ ವಿದ್ಯಾರ್ಥಿ ಮಹ್ಮದಲಿ ಆರ್. ಹೊಸೂರ ಮತ್ತು ಮೈಸೂರು ಪತ್ರಕರ್ತರು ರಂಗ ವಿಮರ್ಶಕರಾದ ಗಣೇಶ ಅಮೀನಗಡ…
ಮಂಜೇಶ್ವರ: ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿಯು ಗೋವಿಂದ ಪೈ ಹೆಸರಿನಲ್ಲಿ ನೀಡುವ ಪ್ರಶಸ್ತಿಗೆ ಖ್ಯಾತ ಅನುವಾದಕ ಮತ್ತು ಬರಹಗಾರ ಕೆ. ವಿ. ಕುಮಾರನ್ ಮಾಸ್ತರ್ ಆಯ್ಕೆಯಾಗಿದ್ದಾರೆ. ಸಾಹಿತ್ಯ ಕ್ಷೇತ್ರಕ್ಕೆ ಅವರು ನೀಡಿದ ಸಮಗ್ರ ಕೊಡುಗೆಗಳನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕುಮಾರನ್ ಮಾಸ್ತರ್ ಅವರಿಗೆ ಕೇಂದ್ರ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಇತ್ತೀಚೆಗೆ ಲಭಿಸಿದ್ದವು. 23 ಮಾರ್ಚ್ 2025ರಂದು ಬೆಳಗ್ಗೆ 10 ಗಂಟೆಗೆ ಗಿಳಿವಿಂಡುವಿನಲ್ಲಿ ನಡೆಯುವ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಇವರು ಪ್ರಶಸ್ತಿ ಪ್ರದಾನ ಮಾಡುವರು. ಈ ಪ್ರಶಸ್ತಿಯು ರೂಪಾಯಿ 5,000 ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಗಳನ್ನು ಒಳಗೊಂಡಿದೆ ಎಂದು ಸ್ಮಾರಕ ಸಮಿತಿ ಕಾರ್ಯದರ್ಶಿ ಉಮೇಶ್ ಎಂ .ಸಾಲಿಯಾನ್ ತಿಳಿಸಿದ್ದಾರೆ. ಸಮಾರಂಭವನ್ನು ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಉದ್ಘಾಟಿಸಲಿದ್ದು, ಸಮಿತಿಯ ಅಧ್ಯಕ್ಷರಾದ ಜಿಲ್ಲಾಧಿಕಾರಿ ಕೆ.ಇನ್ಬಶೇಖರ್ ಅಧ್ಯಕ್ಷತೆ ವಹಿಸಲಿರುವರು. ಕಾಸರಗೋಡು ಶಾಸಕ ಎನ್.…
ಮಂಗಳೂರು : ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಇತ್ತೀಚೆಗೆ ನಿಧನ ಹೊಂದಿದ ಹಿರಿಯ ಸಾಹಿತಿ ವಾಮನ ನಂದಾವರ ಇವರಿಗೆ ನುಡಿ ನಮನ ಹಾಗೂ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮವು ದಿನಾಂಕ 20 ಮಾರ್ಚ್ 2025 ರಂದು ಕಲ್ಕೂರ ಪ್ರತಿಷ್ಠಾನದ ಕಛೇರಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ವಾಮನ ನಂದಾವರ ಇವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಇದರ ನಿಕಟಪೂರ್ವ ಅಧ್ಯಕ್ಷರಾದ ಎಸ್. ಪ್ರದೀಪ ಕುಮಾರ ಕಲ್ಕೂರ ಮಾತನಾಡಿ “ತುಳು ಜನಪದ ಸಾಹಿತ್ಯದಲ್ಲಿ ಹಾಗೂ ಕನ್ನಡ ಸಾಹಿತ್ಯದಲ್ಲಿ ದಿ. ವಾಮನ ನಂದಾವರ ಅವರ ಕೊಡುಗೆ ಅನನ್ಯವಾದುದು, ತುಳುವರ ರಸಿಕತೆ, ಅರ್ಥವತ್ತಾದ ತುಳು ಗಾದೆ, ತುಳುವಿನ ಸಮಗ್ರ ಸಂಸ್ಕೃತಿಯ ಬಗ್ಗೆ ಅಪಾರ ಜ್ಞಾನವನ್ನು ಹೊಂದಿದ್ದ ನಂದಾವರರು ಹೇಮಾಂಶು ಪ್ರಕಾಶನದ ಮೂಲಕ ತಾವು ಹಾಗೂ ತುಳು ಭಾಷಾ ವಿದ್ವಾಂಸರಿಂದ ಪ್ರಕಟಿಸಿದ ತುಳು ಸಾಹಿತ್ಯ ಕೃತಿಗಳ ಮೂಲಕ ತುಳು ಭಾಷೆಯನ್ನು ಬಹು ಎತ್ತರಕ್ಕೆ ಬೆಳೆಸಿದ್ದಾರೆ ಎಂದರೆ ತಪ್ಪಾಗಲಾರದು. ಪತ್ನಿ ಚಂದ್ರಕಲಾ…
ಮಂಡ್ಯ: ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್ ನೀಡುವ 5ನೇ ವರ್ಷದ ‘ಕೆ.ಎಸ್. ನ ಸಾಹಿತ್ಯ ಪ್ರಶಸ್ತಿ’ಗೆ ಮಂಡ್ಯದ ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ. ಜಯಪ್ರಕಾಶ ಗೌಡ, ದಕ್ಷಿಣ ಕನ್ನಡ ಜಿಲ್ಲೆಯ ಲೇಖಕ ನಾ. ದಾಮೋದರ ಶೆಟ್ಟಿ ಭಾಜನ ರಾಗಿದ್ದಾರೆ. ‘ಕೆ. ಎಸ್. ನ ಕಾವ್ಯ ಗಾಯನ ಪ್ರಶಸ್ತಿ’ಗೆ ಗಾಯಕರಾದ ಧಾರವಾಡದ ಸಂಗೀತಾ ಕಟ್ಟಿ ಮತ್ತು ಕಾಸರಗೋಡಿನ ರಮೇಶ್ ಚಂದ್ರ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ತಲಾ ರೂಪಾಯಿ 25 ಸಾವಿರ ನಗದು ಮತ್ತು ಫಲಕವನ್ನು ಒಳಗೊಂಡಿದೆ. ಮಂಡ್ಯದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ 23 ಮಾರ್ಚ್ 2025ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿರುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಟ್ರಸ್ಟ್ ಅಧ್ಯಕ್ಷರಾದ ಕಿಕ್ಕೇರಿ ಕೃಷ್ಣಮೂರ್ತಿ ಮಾಹಿತಿ ನೀಡಿದ್ದಾರೆ. ಪ್ರೊ. ಜಯಪ್ರಕಾಶ ಗೌಡ ನಾ. ದಾಮೋದರ ಶೆಟ್ಟಿ ಸಂಗೀತಾ ಕಟ್ಟಿ ರಮೇಶ್ ಚಂದ್ರ