Author: roovari

ಕುಂದಾಪುರ : ಜೆ.ಸಿ.ಐ. ಕುಂದಾಪುರ ಇದರ ಸುವರ್ಣ ಸಂಭ್ರಮ ಪ್ರಯುಕ್ತ ‘ಸುವರ್ಣ ಜೇಸೀಸ್ ನಾಟಕೋತ್ಸವ’ವನ್ನು ದಿನಾಂಕ 22 ಡಿಸೆಂಬರ್ 2024ರಿಂದ 26 ಡಿಸೆಂಬರ್ 2024ರವರೆಗೆ ಪ್ರತಿದಿನ ಸಂಜೆ 7-00 ಗಂಟೆಗೆ ಕುಂದಾಪುರದ ಬೋರ್ಡ್ ಹೈಸ್ಕೂಲ್ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 22 ಡಿಸೆಂಬರ್ 2024ರಂದು ಶಶಿರಾಜ್ ಕಾವೂರು ಇವರ ರಚನೆ ಮತ್ತು ನಿರ್ದೇಶನದಲ್ಲಿ ರಂಗ ಸಂಗಾತಿ ತಂಡದವರು ‘ದಟ್ಸ್ ಆಲ್ ಯುವರ್ ಆನರ್’, ದಿನಾಂಕ 23 ಡಿಸೆಂಬರ್ 2024ರಂದು ಶಶಿರಾಜ್ ಕಾವೂರು ಇವರ ರಚನೆ ಹಾಗೂ ಹಾರಾಡಿಯ ಬಿ.ಎಸ್. ರಾಮ್ ಶೆಟ್ಟಿ ಇವರ ನಿರ್ದೇಶನದಲ್ಲಿ ಹಾರಾಡಿಯ ಭೂಮಿಕಾ (ರಿ.) ತಂಡದವರು ‘ಬರ್ಬರಿಕ’, ದಿನಾಂಕ 24 ಡಿಸೆಂಬರ್ 2024ರಂದು ಭವಭೂತಿ ರಚನೆ ಹಾಗೂ ಅಕ್ಷರ ಕೆ. ವಿ. ಇವರ ನಿರ್ದೇಶನದಲ್ಲಿ ಹೆಗ್ಗೋಡು ನೀನಾಸಂ ತಂಡದವರು ‘ಮಾಲತೀ ಮಾಧವ’, ದಿನಾಂಕ 25 ಡಿಸೆಂಬರ್ 2024ರಂದು ವಿದ್ಯಾನಿಧಿ ವನಾರಸೆ ಇವರ ನಿರ್ದೇಶನದಲ್ಲಿ ಹೆಗ್ಗೋಡು ನೀನಾಸಂ ತಂಡದವರು ‘ಅಂಕದ ಪರದೆ’, ದಿನಾಂಕ 26 ಡಿಸೆಂಬರ್ 2024ರಂದು ಮಂಜು ಕೊಡಗು…

Read More

ಬದಿಯಡ್ಕ (ಕಾಸರಗೋಡು): ಪ್ರಸಿದ್ಧ ಭರತನಾಟ್ಯ ಕಲಾವಿದೆ ವಿದುಷಿ ಅಯನಾ ಪೆರ್ಲ ಇವರ ವಿಶೇಷ ಭರತನಾಟ್ಯ ಪ್ರಸ್ತುತಿಯು ಸಂಗೀತ ಸಂಸ್ಥೆಯಾದ ‘ನಾರಾಯಣೀಯಂ’ನ ವೀಣಾವಾದಿನಿ ಸಂಗೀತ ವಿದ್ಯಾಪೀಠದ ಇಪ್ಪತ್ತೈದನೇ ವರ್ಷಾಚರಣೆಯ ಅಂಗವಾಗಿ ದಿನಾಂಕ 7 ಡಿಸೆಂಬರ್ 2024ರ ಶನಿವಾರದಂದು ತುಂಬಿದ ಸಭಾಗೃಹದಲ್ಲಿ ಪ್ರದರ್ಶಿಸಲ್ಪಟ್ಟಿತು. ಮೋಹನಕಲ್ಯಾಣಿ ರಾಗದ ಆದಿತಾಳದಲ್ಲಿರುವ ‘ಭುವನೇಶ್ವರಿಯ ನೆನೆ ಮಾನಸವೇ… ‘ ಎಂಬ ಹಾಡಿಗೆ ಅಯನಾ ಪೆರ್ಲ ಅವರು ಮನೋಜ್ಞವಾಗಿ ಅಭಿನಯಿಸಿದರು. ಗುರುಗಳಾದ ವಿದುಷಿ ಶಾರದಾಮಣಿ ಶೇಖರ್ ಇದಕ್ಕೆ ನೃತ್ಯಸಂಯೋಜನೆ ಮಾಡಿದ್ದಾರೆ. ಅನಂತರ ಆಂಗಿಕ ಹಾಗೂ ಅಭಿನಯಕ್ಕೆ ವಿಪುಲ ಅವಕಾಶಗಳಿರುವ ಪದವರ್ಣವನ್ನು ತನ್ನ ಪ್ರಸ್ತುತಿಗೆ ಆಯ್ದುಕೊಂಡರು. ಭೈರವಿ ರಾಗದಲ್ಲಿರುವ ಇದು ಆದಿತಾಳದಲ್ಲಿ ನಿಬದ್ಧವಾಗಿದೆ. ಇದು ಪೆರಿಯಸಾಮಿ ತೂರನ್ ಇವರ ರಚನೆಯಾಗಿದ್ದು, ಪ್ರಸಿದ್ಧ ಕಲಾವಿದೆ ಜಾನಕಿ ರಂಗರಾಜನ್ ನೃತ್ಯ ಸಂಯೋಜನೆ ಮಾಡಿದ್ದಾರೆ. ವಿದುಷಿ ಅಯನಾ ಅವರು ಉತ್ತಮವಾದ ಆಂಗಿಕ, ಅಭಿನಯ ಹಾಗೂ ಸಾಂದರ್ಭಿಕ ನಡೆಗಳಿಂದ ಆಕರ್ಷಕ ಮತ್ತು ಅರ್ಥಪೂರ್ಣ ಅಭಿನಯ ನೀಡಿದರು. ಬಳಿಕ ಯಮನ್ ರಾಗದ ಆದಿತಾಳದಲ್ಲಿರುವ ಶ್ರೀಕೃಷ್ಣನ ಕುರಿತ ‘ಕಡೆಗೋಲ ತಾರೆನ್ನ ಚಿನ್ನವೇ’…

Read More

ಮಂಗಳೂರು : ಮಂಗಳೂರಿನ ಅಕ್ಕ ಮಹಾದೇವಿ ಮಹಿಳಾ ಮಂಡಳಿ  04 ಜನವರಿ 2025ರಂದು ಆಯೋಜಿಸುವ ‘ವಚನ ಸಾಹಿತ್ಯ ಸಮ್ಮೇಳನ 2024-25’ ಇದರ ಲಾಂಛನದ  ಲೋಕಾರ್ಪಣಾ ಸಮಾರಂಭವು ದಿನಾಂಕ 04 ಡಿಸೆಂಬರ್ 2024ರ ಬುಧವಾರದಂದು ಮಂಗಳೂರಿನ ಶ್ರೀಕೃಷ್ಣ ಸಂಕೀರ್ಣಸಲ್ಲಿರುವ ಮಹಿಳಾ ಮಂಡಳಿಯ ಸ್ವಾಗತ ಸಮಿತಿಯ ಕಛೇರಿಯಾದ ಕಲ್ಕೂರ ಪ್ರತಿಷ್ಠಾನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಲಾಂಛನ ಬಿಡುಗಡೆಗೊಳಿಸಿದ ಮಂಗಳೂರು ತಾಲೂಕು ಮಹಿಳಾಮಂಡಲಗಳ ಒಕ್ಕೂಟದ ಅಧ್ಯಕ್ಷ್ಯೆಯಾದ  ಶ್ರೀಮತಿ ಚಂಚಲ ತೇಜೋಮಯ ಮಾತನಾಡಿ “ವಚನ ಸಾಹಿತ್ಯಗಳಿಗೆ ಸಮಾಜವನ್ನು ಒಗ್ಗೂಡಿಸುವ ಶಕ್ತಿ ಇದೆ. ಇಂತಹ ಸಮ್ಮೇಳನಗಳನ್ನು ಮಾಡುವುದರಿಂದ ಮುಂದಿನ ಪೀಳಿಗೆಗೆ ವಚನ ಸಾಹಿತ್ಯ ಹಾಗೂ ತತ್ವ ಸಿದ್ಧಾಂತಗಳನ್ನು ತಿಳಿಸಿಕೊಟ್ಟಂತಾಗುತ್ತದೆ. ತಾವು ಮಾಡಲು ಹೊರಟಿರುವ ಈ ಕಾರ್ಯಕ್ರಮ ಯಶಸ್ವಿಯಾಗಲಿ.” ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ, ಊರ್ವಸ್ಟೋರ್ ಶ್ರೀಮಹಾ ಗಣಪತಿ ದೇವಸ್ಥಾನದ ಅಧ್ಯಕ್ಷರಾದ ಶ್ರೀ ಸುರೇಂದ್ರ ರಾವ್, ಅಕ್ಕಮಹಾದೇವಿ ವೀರಶೈವ ಮಹಿಳಾ ಸಂಘ ಇದರ ಅಧ್ಯಕ್ಷ್ಯೆಯಾದ ಶ್ರಿಮತಿ ಸುಮಾ ಅರುಣ್ ಮಾನ್ವಿ, ಮಾಜಿ…

Read More

ವಿದ್ಯಾಗಿರಿ, ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ದಿನಾಂಕ 11 ಡಿಸೆಂಬರ್ 2024 ರಿಂದ 15 ಡಿಸೆಂಬರ್ 2024ರ ವರೆಗೆ ಆಯೋಜಿಸಿರುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ’30ನೇ ವರ್ಷದ ‘ಅಳ್ವಾಸ್ ವಿರಾಸತ್” ಕಾರ್ಯಕ್ರಮದ ಉದ್ಘಾಟನೆ ಮಂಗಳವಾರ ಸಂಜೆ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ “ವಿಶ್ವವನ್ನೇ ಹೃದಯದಲ್ಲಿ ತುಂಬುವ ಹಬ್ಬವೇ ‘ವಿರಾಸತ್’. ಇದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಕಾರ್ಯಕ್ರಮ. ಸಾಹಿತ್ಯ ಮತ್ತು ಸಂಸ್ಕೃತಿ ಜೊತೆಯಾಗಿ ಮೇಳೈಸಿದ ಕಾರ್ಯಕ್ರಮ. ನಮ್ಮ ಸಾಂಸ್ಕೃತಿಕ ಸಂಪತ್ತು ಹೆಚ್ಚಾದಾಗ ಮನಸ್ಸು ಅರಳುತ್ತದೆ. ಎಲ್ಲರಿಗೂ ಸಂತೋಷ ನೀಡುವ ವ್ಯಕ್ತಿತ್ವವೇ ಆಳ್ವ. ಒಳ್ಳೆಯದನ್ನು ಒಪ್ಪಿಕೊಂಡು ಅಪ್ಪಿಕೊಳ್ಳಿ. ಆ ಹಾದಿಯಲ್ಲಿ ಸಮಾಜ, ದೇಶ ಬೆಳೆಯಬೇಕು. ನಾವೂ ಪ್ರಕೃತಿಯನ್ನು ಹಾಗೂ ಹೃದಯವನ್ನು ಅರಳಿಸಬೇಕು. ಆಳ್ವಾಸ್ ಕೃಷಿ ಮೇಳ ಕಂಡು ನೀವೂ ಸಣ್ಣ ಕೈತೋಟ ಮಾಡಿ. ಮಣ್ಣು, ಪರಿಸರ ಪ್ರೀತಿಸಿ. ಪಂಚೇಂದ್ರೀಯಗಳಿಗೆ…

Read More

ಉಡುಪಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು, ವಾದಿರಾಜ ಕನಕದಾಸ ಸಂಗೀತೋತ್ಸವ ಸಮಿತಿ, ಕನಕದಾಸ ಅಧ್ಯಯನ ಸಂಶೋಧನ ಪೀಠ, ಉಡುಪಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್, ಎಂ.ಜಿ.ಎಂ. ಕಾಲೇಜು ಉಡುಪಿ, ಸರಿಗಮ ಭಾರತಿ ಸಂಗೀತ ವಿದ್ಯಾಲಯ (ರಿ) ಪರ್ಕಳ ಇವರ ಸಹಯೋಗದಲ್ಲಿ ದಿನಾಂಕ 06 ಡಿಸೆಂಬರ್ 2024 ರಿಂದ 08 ಡಿಸೆಂಬರ್ 2024ರವರೆಗೆ 46ನೆಯ  ವಾದಿರಾಜ ಕನಕದಾಸ ಸಂಗೀತೋತ್ಸವ ಉಡುಪಿಯ ಎಂ. ಜಿ. ಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಟಿ. ಮೋಹನದಾಸ ಪೈ ಕೌಶಲ್ಯ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕರಾದ ಶ್ರೀ ಟಿ. ರಂಗ ಪೈ   ಮಾತನಾಡಿ “ಈ ಕಾರ್ಯಕ್ರಮ ಯುವ ಜನರಿಗೆ ಮಾದರಿಯಾಗಿದೆ. ಸಂಗೀತ ಆಸಕ್ತಿಯ ಬಗ್ಗೆ ಕೋರ್ಸ್ ಮಾಡಿದರೆ ಮಕ್ಕಳ ಕೌಶಲ ಅಭಿವೃದ್ಧಿ ಸಾಧ್ಯವಾಗಲಿದೆ. ಕಲೆಯನ್ನು ಆಸ್ವಾದಿಸುವವರು, ಕಲಾಕಾರರು, ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸಂಗೀತಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಸಾಹಿತ್ಯ ಸಂಗೀತ ಕೂಡಿ ಭಕ್ತಿ ರಸವನ್ನು ಉತ್ಪಾದಿಸುತ್ತದೆ. ಈ ನಿಟ್ಟಿನಲ್ಲಿ ಇಂತಹ…

Read More

ಬೆಂಗಳೂರು : ರಂಗ ಶಂಕರ ಇದರ ವತಿಯಿಂದ ಕನ್ನಡ ನಾಟಕೋತ್ಸವ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಚಾಮರಾಜನಗರದ ಶಾಂತಲಾ ಕಲಾವಿದರು ಇವರ ಸಹಯೋಗದೊಂದಿಗೆ ‘ರಂಗಕಲಿಕೆ ಕಾರ್ಯಾಗಾರ’ವನ್ನು ದಿನಾಂಕ 04 ಜನವರಿ 2024ರಿಂದ 08 ಜನವರಿ 2024ರವರೆಗೆ ಚಾಮರಾಜನಗರದ ಜೆ.ಎಸ್.ಎಸ್. ಮಹಿಳಾ ಕಾಲೇಜು ಸಭಾಂಗಣದಲ್ಲಿ ಪ್ರತಿ ದಿನ ಬೆಳಿಗ್ಗೆ 10-00ರಿಂದ ಸಂಜೆ 5-00 ಗಂಟೆ ತನಕ ಹಮ್ಮಿಕೊಳ್ಳಲಾಗಿದೆ. ದಿನಾಂಕ 04 ಜನವರಿ 2024ರಂದು ದು ಸರಸ್ವತಿ ಇವರಿಂದ ‘ಏಕವ್ಯಕ್ತಿ ಪ್ರದರ್ಶನ ಕಟ್ಟಿಕೊಳ್ಳುವ ಬಗೆ’, ದಿನಾಂಕ 05 ಜನವರಿ 2024ರಂದು ಕೆ.ವೈ. ನಾರಾಯಣ ಸ್ವಾಮಿ ಇವರಿಂದ ‘ನಾಟಕ ರಚನೆಯ ಸೂಕ್ಷ್ಮಗಳು’, ದಿನಾಂಕ 06 ಜನವರಿ 2024ರಂದು ಪಿಚ್ಚಳ್ಳಿ ಶ್ರೀನಿವಾಸ ಇವರಿಂದ ‘ರಂಗ ಸಂಗೀತ ಎಂದರೇನು..’, ದಿನಾಂಕ 07 ಜನವರಿ 2024ರಂದು ಕೃಷ್ಣಮೂರ್ತಿ ಹನೂರು ಇವರಿಂದ ‘ಜನಪದ ಸಾಹಿತ್ಯದಲ್ಲಿ ನಾಟಕೀಯತೆ’ ಮತ್ತು ದಿನಾಂಕ 08 ಜನವರಿ 2024ರಂದು ಎಂ.ಎಸ್. ಆಶಾದೇವಿ ಇವರಿಂದ ‘ಸಾಹಿತ್ಯವಾಗಿ ನಾಟಕವನ್ನು ಓದಿಕೊಳ್ಳುವುದು’ ಎಂಬ ವಿಷಯದ ಬಗ್ಗೆ ಕಾರ್ಯಾಗಾರ ನಡೆಯಲಿದೆ.…

Read More

ಆಂಟನ್ ಚೆಕೋಫನ ಪ್ರಸಿದ್ಧ ಕಥೆ ‘ವಾರ್ಡ್ ನಂ.6’. ಅದರ ನಾಟಕ ರೂಪಾಂತರ ಎಂಬ ನೆಲೆಯಿಂದ ‘ಭ್ರಾಂತಾಲಯಂ’ ಎಂಬ ನಾಟಕ ಗಮನಾರ್ಹವಾಗುತ್ತದೆ. ಈ ಪ್ರಸಿದ್ಧವಾದ ಕಥೆಯನ್ನು ಕನ್ನಡದ ಹಿರಿಯ ಲೇಖಕ ಡಾ. ಡಿ.ಆರ್. ನಾಗರಾಜ್ ‘ಕತ್ತಲ ದಾರಿ ದೂರ’ ಎಂಬ ನಾಟಕವಾಗಿ ರೂಪಾಂತರಿಸಿದ್ದನ್ನು ಶ್ರೀಮತಿ ಪಾರ್ವತಿ ಐತಾಳ್ ಮಲೆಯಾಳಕ್ಕೆ ‘ಭ್ರಾಂತಾಲಯಂ’ ಎಂಬ ಹೆಸರು ಕೊಟ್ಟು ಅತ್ಯಂತ ಸುಂದರವಾದ ಒಂದು ಅನುಭವವಾಗಿ ಪರಿವರ್ತಿಸಿದ್ದಾರೆ. ಒಂದು ಪ್ರದೇಶದಲ್ಲಿ ಒಂದು ಆಸ್ಪತ್ರೆ ಬರುವುದು ಪ್ರಗತಿಯ ಪ್ರತೀಕವಾಗಿ. ಆಸ್ಪತ್ರೆ ಬರುವುದು ಆ ಊರಿನ ಅಗತ್ಯ. ಯಾವುದೇ ಊರಿನ ಅಗತ್ಯ ಕೂಡಾ. ಅಂಥ ಒಂದು ಊರಿನಲ್ಲಿ ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಆಡಳಿತ ವರ್ಗವು ಹುಚ್ಚಿಗೆ ಚಿಕಿತ್ಸೆ ನೀಡುವ ಒಂದು ವಾರ್ಡ್ ಬೇಕೆಂದು ನಿರ್ಧರಿಸುತ್ತದೆ. ಹುಚ್ಚರೆಂದು ಅವರಿಗೆ ಅನ್ನಿಸಿದ ಕೆಲವರನ್ನು ಅಲ್ಲಿ ಚಿಕಿತ್ಸೆ ನೀಡಲೆಂದು ಹಿಡಿದು ತರುತ್ತದೆ. ಅವರೆಲ್ಲರೂ ಹುಚ್ಚರೇನಲ್ಲ. ಹುಚ್ಚು ಅನ್ನುವುದು ಸಮಾಜದ ಸೃಷ್ಟಿ ಎಂಬ ದೃಷ್ಟಿಯಿಂದ ಇಲ್ಲಿನ ಕಥಾಪಾತ್ರಗಳನ್ನು ಪ್ರಸ್ತುತ ಪಡಿಸಲಾಗಿದೆ. ಅವರನ್ನು ಹುಚ್ಚರಾಗಿ ನಿಲ್ಲಿಸುವುದು ಆಡಳಿತ ವರ್ಗದ ಒಂದು…

Read More

ಕಾಸರಗೋಡು : ಕಾಸರಗೋಡಿನ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯಾದ ರಂಗಚಿನ್ನಾರಿ (ರಿ.) ಇದರ ಸಹ ಸಂಸ್ಥೆಗಳಲ್ಲಿ ಒಂದಾದ ‘ಸ್ವರ ಚಿನ್ನಾರಿ’ಯ ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದೊಂದಿಗೆ ಏರ್ಪಡಿಸುತ್ತಿರುವ ‘ರಾಗಾಲಾಪ’ ರಾಗಸಂಯೋಜನಾ ಶಿಬಿರವು ದಿನಾಂಕ 14 ಡಿಸೆಂಬರ್ 2024ರಂದು ಕಾಸರಗೋಡಿನ ಕರಂದೆಕ್ಕಾಡಿನಲ್ಲಿರುವ ‘ಪದ್ಮಗಿರಿ ಕಲಾ ಕುಟೀರ’ದಲ್ಲಿ ನಡೆಯಲಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ಖ್ಯಾತ ಸಂಗೀತ ನಿರ್ದೇಶಕರಾದ ಶ್ರೀ ವಿ. ಮನೋಹರ್ ಇವರು ಈ ಶಿಬಿರದ ನಿರ್ದೇಶಕರಾಗಿರುತ್ತಾರೆ. ಬೆಳಿಗ್ಗೆ 9-30 ಗಂಟೆಗೆ ಖ್ಯಾತ ನೇತ್ರ ತಜ್ಞರಾದ ಡಾ. ಅನಂತ್ ಕಾಮತ್ ಇವರು ಈ ಶಿಬಿರದ ಉದ್ಘಾಟನೆ ಮಾಡಲಿದ್ದು, ಖ್ಯಾತ ಕವಿ ಶ್ರೀಕೃಷ್ಣಯ್ಯ ಅನಂತಪುರ ಇವರು ಅಧ್ಯಕ್ಷತೆ ವಹಿಸಲಿರುವರು. ಖ್ಯಾತ ಅಂಕಣಕಾರರಾದ ಮೈಸೂರಿನ ಶ್ರೀ ರವೀಂದ್ರ ಜೋಶಿ ಇವರು ಸಮಾರೋಪ ಮಾತುಗಳನ್ನಾಡಲಿದ್ದಾರೆ.

Read More

ಕಾಸರಗೋಡು : ಪತ್ರಕರ್ತ, ಸಂಘಟಕ ಹಾಗೂ ಕಲ್ಪತರು ಕಲಾ ಟ್ರಸ್ಟ್ (ರಿ.) ಇದರ ಅಧ್ಯಕ್ಷರಾದ ಚಿಟಗೇರಿ ಕೊಟ್ರೇಶಿ ಇವರನ್ನು ಕೇರಳ ರಾಜ್ಯದ ಕಾಸರಗೋಡು ಕನ್ನಡ ಭವನದ, ಕರ್ನಾಟಕ ರಾಜ್ಯ ವಿಜಯಪುರ ಜಿಲ್ಲೆಯ ಕನ್ನಡ ಭವನ ಘಟಕದ ಜಿಲ್ಲಾಧ್ಯಕ್ಷರನ್ನಾಗಿ ಕನ್ನಡ ಭವನದ ‘ರಜತ ಸಂಭ್ರಮ ಸಮಿತಿ’ ದಿನಾಂಕ 05 ಡಿಸೆಂಬರ್ 2024ರಂದು ನಡೆದ ಸಭೆಯಲ್ಲಿ ಆಯ್ಕೆ ಮಾಡಿದೆ. ಕಾಸರಗೋಡು ಕನ್ನಡ ಭವನದ ನಿರ್ದೇಶಕರಾದ ಪತ್ರಕರ್ತ ಸಿ. ವೈ. ಮೆಣಶಿನಕಾಯಿ ಇವರು ಕೊಟ್ರೇಶಿಯವರನ್ನು ನಾಮನಿರ್ದೇಶನ ಮಾಡಿ, ಕನ್ನಡ ಭವನದ ಕರ್ನಾಟಕ ರಾಜ್ಯ ಸಂಚಾಲಕರಾದ ಡಾ. ಟಿ. ತ್ಯಾಗರಾಜ್ ಮೈಸೂರು ಅನುಮೋದಿಸಿದರು. ರಜತ ಸಂಭ್ರಮ ವರ್ಷವಾದ 2025ರಲ್ಲಿ ಕರ್ನಾಟಕ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕನ್ನಡ ಪರ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಸದುದ್ದೇಶದಿಂದ ಎಲ್ಲಾ ಜಿಲ್ಲೆಗಳಲ್ಲಿ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಸರ್ವಾನುಮತದಿಂದ ಆಯ್ಕೆಯಾದ ಚಿಟಗೇರಿ ಕೊಟ್ರೇಶಿ ಇವರು, ಕನ್ನಡ ಭವನ ಮತ್ತು ಗ್ರಂಥಾಲಯ (ರಿ.), ಕನ್ನಡ ಭವನ ಪ್ರಕಾಶನ, ಕನ್ನಡ ಭವನ ಸಾರ್ವಜನಿಕ ವಾಚನಾಲಯ, ಕನ್ನಡ ಭವನ ಉಚಿತ ವಸತಿ…

Read More

ಬಂಟ್ವಾಳ : ಯಕ್ಷಾವಾಸ್ಯಮ್ ಕಾರಿಂಜ ಇದರ ಚತುರ್ಥ ವಾರ್ಷಿಕೋತ್ಸವ ಕಾರ್ಯಕ್ರಮವು ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮ ಪಂಚಾಯತ್ ವಗ್ಗ , ಕಾಡಬೆಟ್ಟು ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ದಿನಾಂಕ 08 ಡಿಸೆಂಬರ್ 2024ರಂದು ನಡೆಯಿತು. ಮಧ್ಯಾಹ್ನ ಪಚ್ಚಾಜೆಗುತ್ತು ಪಿ. ಜಿನರಾಜ ಆರಿಗ ಇವರಿಂದ ಕಾರ್ಯಕ್ರಮವು ಉದ್ಘಾಟನೆಗೊಂಡು ಸಂಸ್ಥೆಯ ವಿದ್ಯಾರ್ಥಿಗಳಿಂದ ಯಕ್ಷಗಾನ ಪೂರ್ವರಂಗ ಪ್ರಸ್ತುತಿಗೊಂಡಿತು. ಅಜಪುರದ ಸುಬ್ಬ ವಿರಚಿತ ‘ನರಕಾಸುರ’ ಮತ್ತು ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ಮೈಂದ ದ್ವಿವಿದ’ ಎಂಬ ಪ್ರಸಂಗದ ಯಕ್ಷಗಾನ ಪ್ರದರ್ಶನ ನಡೆಯಿತು. ಸಂಜೆ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಉಪ ಪ್ರಾಂಶುಪಾಲ ಬಿ. ಉದಯ ಕುಮಾರ್ ಜೈನ್ ಇವರು ಅಧ್ಯಕ್ಷತೆ ವಹಿಸಿ ಮಾತನಾಡಿ, “ಯಕ್ಷಗಾನವು ಸರ್ವಾಂಗೀಣ ಶ್ರೇಷ್ಠ ಕಲೆಯಾಗಿದ್ದು, ವಿದ್ಯಾರ್ಥಿಗಳು ಯಕ್ಷಗಾನದಲ್ಲಿ ತೊಡಗಿಸಿಕೊಳ್ಳುವುದರಿಂದ ಭಾಷಾ ಶುದ್ಧಿಯ ಜತೆ ಜ್ಞಾನ ಭಂಡಾರ ಬೆಳೆಯುವುದು. ಯಕ್ಷಗಾನ ತರಬೇತಿ ನೀಡಿ ಮುಂದಿನ ಪೀಳಿಗೆಯ ಕಲಾವಿದರನ್ನು ರೂಪಿಸುವ ಯಕ್ಷವಾಸ್ಯಮ್ ಸಂಸ್ಥೆಯ ಕಾರ್ಯ ಪ್ರಶಂಸನೀಯ” ಎಂದು ಹೇಳಿದರು. ಈ…

Read More