Author: roovari

ಹಾವಂಜೆ : ಕಾವಿ ಆರ್ಟ್ ಫೌಂಡೇಶನ್ ಹಾಗೂ ಭಾವನಾ ಪ್ರತಿಷ್ಠಾನ ಆಯೋಜಿಸುತ್ತಿರುವ ‘ಕನ್ನಡ ಶಾಲೆಯಲಿ ಕಾವಿಕಲೆಯ ಕಿಶೋರ ಕಾರ್ಯಾಗಾರ’ವು (ಕ.ಕಾ.ಕಿ. – 01) ಹಾವಂಜೆ ಕೀಳಂಜೆಯ ಬಿ.ವಿ. ಹೆಗ್ಡೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ 10 ಡಿಸೆಂಬರ್ 2024ರಂದು ಉದ್ಘಾಟನೆಗೊಂಡಿತು. ಈ ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದ ಫೌಂಡೇಶನ್‌ನ ಅಧ್ಯಕ್ಷರಾದ ಹಾವಂಜೆ ಮಂಜುನಾಥ ರಾವ್ ಇವರು ಮಾತನಾಡಿ “ಕರಾವಳಿಯ ದೇಶೀಯ ಕಲೆಯಾದ ಅಳಿವಿನಂಚಿನಲ್ಲಿರುವ ಕಾವಿ ಕಲೆಯನ್ನು ಉಳಿಸಿ ಬೆಳೆಸುವುದಕ್ಕಾಗಿ ಶಾಲೆಗಳಲ್ಲಿ ಈ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ನಮ್ಮಲ್ಲಿನ ಪುರಾತನ ಜ್ಞಾನವನ್ನು ಮತ್ತೆ ಪುನರ್ ಮನನ ಮಾಡಿಕೊಳ್ಳುವ ಸಂದರ್ಭ ಇದು. ಸುಮಾರು ನೂರು ಶಾಲೆಗಳನ್ನಾದರೂ ಇದು ತಲಪುವಂತಾಗಲಿ” ಎಂಬುದಾಗಿ ಆಶಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ಜನಾರ್ದನ ಹಾವಂಜೆ “ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಪ್ರಮುಖವಾಗಿ ಹೈಸ್ಕೂಲು ಶಾಲಾ ಮಕ್ಕಳಿಗೆ ಕೇಂದ್ರೀಕರಿಸಿ ನಮ್ಮ ಸಾಂಪ್ರದಾಯಿಕ ಕಲೆಯ ತಿಳಿವಳಿಕೆ ನೀಡುವುದರ ಜೊತೆಗೆ ಇದನ್ನು ಚಿತ್ರ ಪದ್ಧತಿಯಾಗಿ ಬೆಳೆಸುವ ಪ್ರಯತ್ನ ಇದಾಗಿದ್ದು, ಆಯಾ…

Read More

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು 10 ಡಿಸೆಂಬರ್ 2024 ರಿಂದ 15 ಡಿಸೆಂಬರ್ 2024ರ ವರೆಗೆ ಆಯೋಜಿಸಿರುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ’30ನೇ ವರ್ಷದ ಅಳ್ವಾಸ್ ವಿರಾಸತ್’ ಅಂಗವಾಗಿ ಹಮ್ಮಿಕೊಂಡ ಅನ್ವೇಷಣಾತ್ಮಕ ಶತಾಯುಷಿ ಕೃಷಿಕ ಮಿಜಾರುಗುತ್ತು ಆನಂದ ಆಳ್ವ ಸ್ಮರಣಾರ್ಥ ಕೃಷಿಮೇಳ, ಆಹಾರ ಮೇಳ, ಫಲಪುಷ್ಪ ಮೇಳ, ಕರಕುಶಲ ಮತ್ತು ಪ್ರಾಚ್ಯವಸ್ತು ಪ್ರದರ್ಶನ ಮೇಳ, ಚಿತ್ರಕಲಾ ಮೇಳ, ಕಲಾಕೃತಿ ಪ್ರದರ್ಶನ, ಛಾಯಾಚಿತ್ರಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳ ಮಹಾಮೇಳಗಳ ಉದ್ಘಾಟನಾ ಸಮಾರಂಭವು ದಿನಾಂಕ 10 ಡಿಸೆಂಬರ್ 2024ರಂದು ನಡೆಯಿತು. ಕಾರ್ಯಕ್ರಮದಲ್ಲಿ ಕೃಷಿ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್. ಸಿ. ಜಗದೀಶ್ “ಕರಾವಳಿಯ (ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ) ಯುವಜನತೆ ಕೃಷಿ ವಿಮುಖರಾಗುತ್ತಿದ್ದು, ಮಣ್ಣಿನೆಡೆಗೆ ಅವರನ್ನು ಸೆಳೆಯುವ ಇಂತಹ ಕಾರ್ಯಕ್ರಮಗಳು ಆದರ್ಶ ಮತ್ತು ಅನುಕರಣೀಯ. ನಮ್ಮ ವಿಶ್ವವಿದ್ಯಾಲಯ ವ್ಯಾಪ್ತಿಗೆ ಬರುತ್ತಿರುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ…

Read More

ಮಂಗಳೂರು : ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಇದರ ಮಂಗಳೂರು ಶಾಖಾ ಮಠದ ರಜತ ಮಹೋತ್ಸವ ಕಾರ್ಯಕ್ರಮ ದಿನಾಂಕ 26 ನವೆಂಬರ್ 2024ರಂದು ನಡೆಯಿತು. ಈ ಸಂದರ್ಭದಲ್ಲಿ ಪುತ್ತೂರಿನ ನಾಟ್ಯರಂಗ ನೃತ್ಯ ಸಂಸ್ಥೆಯ ನಿರ್ದೇಶಕಿ ವಿದುಷಿ ಮಂಜುಳಾ ಸುಬ್ರಹ್ಮಣ್ಯ ಇವರಿಗೆ ‘ಕರಾವಳಿ ರತ್ನ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಸಾಂಪ್ರದಾಯಿಕ ಶಾಸ್ತ್ರೀಯ ನೃತ್ಯ ಹಾಗೂ ಆಧುನಿಕ ಸಂವೇದನೆಯ ರಂಗಭೂಮಿ ಕ್ಷೇತ್ರಗಳಲ್ಲಿ ಅನುಸಂಧಾನ ನಡೆಸಿ ಹಲವಾರು ಪ್ರತಿಷ್ಠಿತ ವೇದಿಕೆಗಳಲ್ಲಿ ವೈಯುಕ್ತಿಕ ಹಾಗೂ ತಮ್ಮ ತಂಡದೊಂದಿಗೆ ನೃತ್ಯ, ನೃತ್ಯ ರೂಪಕ, ದೃಶ್ಯ ರೂಪಕ, ನಾಟಕ ಪ್ರದರ್ಶನಗಳನ್ನು ನೀಡುತ್ತಾ ತಮ್ಮ ಸೃಜನಶೀಲತೆಯಿಂದ ರಂಗಭೂಮಿ ಹಾಗೂ ನಾಟ್ಯ ಕ್ಷೇತ್ರವನ್ನು ಬೆಸುಗೆ ಹಾಕುವ ಹತ್ತಾರು ಪ್ರಯೋಗಗಳಿಗೆ ಇವರು ಭಾಷ್ಯ ಬರೆದಿದ್ದಾರೆ. ಕೇರಳದ ಸಮರ ಕಲೆ ಕಳರಿ ಪಯ್ಯಟ್ಟುವನ್ನು ತಿರುವನಂತಪುರದ ಗೋಪಿನಾಥ್ ಇವರಲ್ಲಿ ಕಲಿತಿರುತ್ತಾರೆ. ಇವರ ಸಂಶೋಧನಾ ಪ್ರವೃತ್ತಿಯನ್ನು ಗುರುತಿಸಿ ಕೇಂದ್ರ ಸರಕಾರದ ಸಂಸ್ಕೃತಿ ಇಲಾಖೆಯ ಸಚಿವಾಲಯವು ಜೂನಿಯರ್ ಫೆಲೋಶಿಪ್ ನೀಡಿ ಪ್ರೋತ್ಸಾಹಿಸಿದೆ. ಇವರು ದೂರದರ್ಶನದಲ್ಲಿ ಭರತನಾಟ್ಯದ ‘ಬಿ’ ಗ್ರೇಡ್ ಕಲಾವಿದೆ ಹಾಗೂ…

Read More

ಬೆಂಗಳೂರು : ‘ಥೇಮಾ’ ತಂಡ ಮತ್ತು ನಾಟಕ ಬೆಂಗಳೂರು 25 ರಂಗಭೂಮಿ ಸಂಭ್ರಮದ ಪ್ರಯುಕ್ತ ಕೌಶಿಕ್ ಹೆಚ್.ಏ. ಇವರ ರಚನೆ ಮತ್ತು ನಿರ್ದೇಶನದಲ್ಲಿ 2ನೇ ವಿಶ್ವ ಯುದ್ಧ ಆಧಾರಿತ ನಾಟಕ ‘ಡಖವ್’ ಇದರ ಪ್ರದರ್ಶನವು ದಿನಾಂಕ 13 ಡಿಸೆಂಬರ್ 2024ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ಕಲಾಗ್ರಾಮದಲ್ಲಿ ನಡೆಯಲಿದೆ.

Read More

ಕರ್ಕಿ : ಅಭಿನೇತ್ರಿ ಆರ್ಟ್ ಟ್ರಸ್ಟ್ (ರಿ) ನೀಲ್ಲೋಡ್ ಅರ್ಪಿಸುವ ‘ಅಭಿನೇತ್ರಿ ಯಕ್ಷೋತ್ಸವ ’ ಯಕ್ಷಗಾನ, ತಾಳಮದ್ದಳೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 21 ಹಾಗೂ 22 ಡಿಸೆಂಬರ್ 2024ರಂದು ಕವಲಕ್ಕಿ ಇಲ್ಲಿನ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಯಕ್ಷಗಾನದ ಹಿರಿಯ ಸ್ತ್ರೀವೇಷಧಾರಿಯಾದ ಶ್ರೀ ಶ್ರೀಧರ ಷಡಕ್ಷರಿ ಇವರಿಗೆ ‘ಅಭಿನೇತ್ರಿ’ ಪ್ರಶಸ್ತಿ, ಯಕ್ಷಗಾನದ ಹಿರಿಯ ಹಾಸ್ಯಗಾರರಾದ ಶ್ರೀ ಹಳ್ಳಾಡಿ ಜಯರಾಮ ಶೆಟ್ಟಿ ಇವರಿಗೆ ‘ಬೆಳೆಯೂರು ಕೃಷ್ಣಮೂರ್ತಿ’ ಪ್ರಶಸ್ತಿ ಮತ್ತು ಶ್ರೀ ಅಮೃತೇಶ್ವರಿ ಮೇಳದ ಪ್ರಧಾನ ಭಾಗವತರಾದ ಶ್ರೀ ರಾಘವೇಂದ್ರ ಮಯ್ಯ ಹಾಲಾಡಿ ಇವರಗೆ ‘ಕಣ್ಣಿ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಹಾಗೂ ಅಶಕ್ತ ಅರ್ಹ ಕಲಾವಿದರಿಬ್ಬರಿಗೆ ರೂಪಾಯಿ 50ಸಾವಿರ ಸಹಾಯಧನ ನೀಡಲಾಗುವುದು.

Read More

ಬೆಂಗಳೂರು : ಸುಸ್ಥಿರ ಪ್ರತಿಷ್ಠಾನ ಬೆಂಗಳೂರು ಕಳೆದ ಮೂರು ವರ್ಷಗಳಿಂದ ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ರಂಗ ತರಬೇತಿ, ವಿಚಾರ ಸಂಕಿರಣ, ನಾಟಕ ನಿರ್ಮಾಣ, ನಿರ್ದೇಶನ ಹಾಗೂ ಪ್ರದರ್ಶನ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರುತ್ತಿದೆ. ಇದರ ಭಾಗವಾಗಿ ಪ್ರಸ್ತುತ ಭಾವ, ಸಂಚಾರಿ ಭಾವ ಹಾಗೂ ನವರಸಗಳ ಬಗೆಗಿನ ಒಂದು ವಾರದ ಭಾವ-ರಸ ವಿಶೇ಼ಷ ಶಿಬಿರವನ್ನು ಆಯೋಜಿಸುತ್ತಿದೆ. ನಾಡಿನ ಹಿರಿಯ ರಂಗಭೂಮಿ ಮತ್ತು ಚಲನಚಿತ್ರ ನಿರ್ದೇಶಕರು ಹಾಗೂ ನಟನಾ ತರಬೇತುದಾರರಾಗಿರುವ ಜೋಸೆಫ್ ಜಾನ್ ಈ ಶಿಬಿರದ ನಿರ್ದೇಶಕರಾಗಿದ್ದು, ಭಾವ, ರಸಾಧಾರಿತ ವಿವಿಧ ಕೌಶಲ್ಯಗಳನ್ನು ಕಲಿಸಲಿದ್ದಾರೆ. ಈ ಶಿಬಿರವು ದಿನಾಂಕ 22 ಡಿಸೆಂಬರ್ 2024ರಿಂದ 28 ಡಿಸೆಂಬರ್ 2024ರವರೆಗೆ ಸಂಜೆ ಘಂಟೆ 7.00ರಿಂದ 9.00ರ ವರೆಗೆ ‘ಶೃಂಗ’ ನಂ. 816, 3ನೇ ಮುಖ್ಯ ರಸ್ತೆ, (ತೆರಿಗೆ ಭವನದ ಎದುರು) 11 ನೇ ಬ್ಲಾಕ್ , ನಾಗರಭಾವಿ , ಬೆಂಗಳೂರು ಇಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 9148250972, 9035553123, 9449074898 ಸಂಖ್ಯೆಗಳನ್ನು ಸಂಪರ್ಕಿಸಬಹುದು.…

Read More

ಬೆಳ್ತಂಗಡಿ : ಯುವಕ ಮಂಡಲ (ರಿ.) ಕನಕಮಜಲು, ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ (ಕಾವಾ) ಮೈಸೂರು ಆಶ್ರಯದಲ್ಲಿ ನಡೆದ ಸು-ಯೋಗ 2024 ನಿಸರ್ಗ ಚಿತ್ರಕಲಾ ಶಿಬಿರದ ಸಮಾರೋಪ ಸಮಾರಂಭವು ದಿನಾಂಕ 08 ಡಿಸೆಂಬರ್ 2024ರಂದು ಮೂರ್ಜೆ ಕನಕಮಜಲು ಇಲ್ಲಿಯ ಶ್ರೀ ಬಾಲ ನಿಲಯದಲ್ಲಿ ನಡೆಯಿತು. ಸಮಾರೋಪ ಸಮಾರಂಭದ ಸಭಾಧ್ಯಕ್ಷತೆಯನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಕುಮಾರಿ ಭಾಗೀರಥಿ ಮುರುಳ್ಯ ಇವರು ವಹಿಸಿದರು. ಮುಖ್ಯ ಅಥಿತಿಗಳಾಗಿ ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ನರೇಂದ್ರ ರೈ ದೇರ್ಲ, ಯುವಜನ ಸಂಯುಕ್ತ ಮಂಡಳಿ ಸುಳ್ಯ ಇದರ ನಿರ್ದೇಶಕ ಪ್ರಸಾದ್ ಕಾಟೂರು, ಕಾರ್ಯಕ್ರಮ ಸಂಯೋಜಕರಾದ ಬಾಲಚಂದ್ರ ನಡಿಲು ಮತ್ತು ಅವಿನ್ ಮಳಿ, ಯುವಕ ಮಂಡಲ ಅಧ್ಯಕ್ಷ ಹರ್ಷಿತ್ ಉಗ್ಗಮೂಲೆ, ಕಾರ್ಯದರ್ಶಿ ಅಶ್ವಥ್ ಅಡ್ಯಾರ್, ಕಾವಾ ಕಾಲೇಜ್ ಮೈಸೂರು ಇದರ ಸಾಂಸ್ಕೃತಿಕ ಕಾರ್ಯದರ್ಶಿ ಸ್ಕಂದ ಭಾರದ್ವಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಯುವಕ ಮಂಡಲದ ಎಲ್ಲಾ ಪೂರ್ವಾಧ್ಯಕ್ಷರುಗಳು, ಪದಾಧಿಕಾರಿಗಳು, ಸದಸ್ಯರುಗಳು ಹಾಗೂ ಕಾವಾ ಕಾಲೇಜಿನ ಶಿಬಿರಾರ್ಥಿಗಳು, ಊರಿನ ಕಲಾಪ್ರೇಮಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.…

Read More

ಬೆಳ್ತಂಗಡಿ : ನಿನಾದ ಸಾಂಸ್ಕೃತಿಕ ಕೇಂದ್ರ ತಂಟೆಪ್ಪಾಡಿ ಇದರ ಆಶ್ರಯದಲ್ಲಿ ಕ.ಸಾ.ಪ. ಸುಳ್ಯ ತಾಲೂಕು ಘಟಕ, ಪ್ರೆಸ್ ಕ್ಲಬ್ ಸುಳ್ಯ ಮತ್ತು ಕಳಂಜ ಯುವಕ ಮಂಡಲ ಸಹಯೋಗದಲ್ಲಿ ಡಾ. ಪುರುಷೋತ್ತಮ ಬಿಳಿಮಲೆಯವರ ಕೃತಿ ‘ಹುಡುಕಾಟ’ ಅನಾವರಣ ಹಾಗೂ ಸಂವಾದ ಕಾರ್ಯಕ್ರಮವು ತಂಟೆಪ್ಪಾಡಿಯ ಪ್ರಶಾಂತ ಪರಿಸರದ ಸುಂದರ ‘ನಿನಾದ’ ಕೇಂದ್ರದ ವೇದಿಕೆಯಲ್ಲಿ ದಿನಾಂಕ 07 ಡಿಸೆಂಬರ್ 2024ರಂದು ನೆರವೇರಿತು. ವೇದಿಕೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಡಾ. ಬಿಳಿಮಲೆಯವರು ಸಂವಾದ ಕಾರ್ಯಕ್ರಮದಲ್ಲಿ ಆಗಮಿಸಿದ ಗಣ್ಯ ವ್ಯಕ್ತಿಗಳೊಂದಿಗೆ ತಮ್ಮ ಕಾರ್ಯ ಕ್ಷೇತ್ರದ ಹಾಗೂ ಕನ್ನಡ ಭಾಷೆ ನಾಡು, ನುಡಿ, ಜಲ, ಇತಿಹಾಸ, ಪುರಾಣ ಹಾಗೂ ಸಂಪ್ರದಾಯಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು ಹಾಗೂ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ‘ನಿನಾದ’ ಕೇಂದ್ರದ ಅಧ್ಯಕ್ಷ ಪಿ. ಐತ್ತಪ್ಪ ಶೆಟ್ಟಿ ವಹಿಸಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಬೆಂಗಳೂರಿನ ಚಿರಂತ್ ಪ್ರಕಾಶನದ ಪರಮೇಶ್ವರ್ ಹೆಚ್., ಕ.ಸಾ.ಪ. ಸುಳ್ಯ ಘಟಕದ ಅಧ್ಯಕ್ಷ ಚಂದ್ರಶೇಖರ…

Read More

ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.) ಮತ್ತು ನಾಗರಿಕ ಸಲಹಾ ಸಮಿತಿ (ರಿ.) ಸುರತ್ಕಲ್ ಈ ಸಂಸ್ಥೆಗಳು ಜಂಟಿಯಾಗಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ವಿದ್ವಾನ್ ಎನ್. ಕೆ. ಸುಂದರಾಚಾರ್ಯ ಸ್ಮರಣಾರ್ಥ ಪ್ರಸ್ತುತ ಪಡಿಸುವ ‘ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ’ಯನ್ನು ದಿನಾಂಕ 13 ಡಿಸೆಂಬರ್ 2024ರಂದು ಸಂಜೆ 5-30 ಗಂಟೆಗೆ ಸುರತ್ಕಲ್ಲಿನ ಅನುಪಲ್ಲವಿಯ ಶ್ರೀ ವಿಶ್ವೇಶ ತೀರ್ಥ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಯು.ಎಸ್.ಎ.ಯ ಅನಂತ ಮೈಸೂರು ಇವರ ಹಾಡುಗಾರಿಕೆಗೆ ಪುತ್ತೂರಿನ ತನ್ಮಯೀ ಉಪ್ಪಂಗಳ ಮಯಲಿನ್, ಮೈಸೂರಿನ ಪ್ರಣವ್ ಸುಬ್ರಹ್ಮಣ್ಯ ಮೃದಂಗದಲ್ಲಿ ಮತ್ತು ಸುರತ್ಕಲ್ಲಿನ ವೈ. ಸುಜಾತಾ ಭಟ್ ತಂಬೂರದಲ್ಲಿ ಸಾಥ್ ನೀಡಲಿದ್ದಾರೆ. ಮಂಗಳೂರಿನ ಸನಾತನ ನಾಟ್ಯಾಲಯದ ನೃತ್ಯ ಗುರು ವಿದುಷಿ ಶಾರದಾಮಣಿ ಶೇಖರ್ ಇವರು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು. ಮಣಿ ಕೃಷ್ಣಸ್ವಾಮಿ ಆಕಾಡೆಮಿಯ ಕಾರ್ಯದರ್ಶಿಯಾದ ಪಿ. ನಿತ್ಯಾನಂದ ರಾವ್ ಹಾಗೂ ಸುರತ್ಕಲ್ ನಾಗರಿಕ ಸಲಹಾ ಸಮಿತಿ ಅಧ್ಯಕ್ಷರಾದ ಡಾ. ಕೆ. ರಾಜಮೋಹನ್ ರಾವ್ ತಮಗೆಲ್ಲರಿಗೂ…

Read More

ಬೆಂಗಳೂರು : ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ಭಕ್ತ ಮಂಡಳಿ ಟ್ರಸ್ಟ್ ರಾಗಿಗುಡ್ಡ ಜಯನಗರ ಬೆಂಗಳೂರು ಇವರ ವತಿಯಿಂದ 56ನೇ ಹನುಮ ಜಯಂತಿ ಉತ್ಸವ ಪ್ರಯುಕ್ತ ಬಡಗತಿಟ್ಟಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಅಮೋಘ ಯಕ್ಷಗಾನ ಕಾರ್ಯಕ್ರಮವನ್ನು ದಿನಾಂಕ 15 ಡಿಸೆಂಬರ್ 2024ರಂದು ಸಂಜೆ 6-00 ಗಂಟೆಗೆ ಬೆಂಗಳೂರಿನ ರಾಗಿಗುಡ್ಡ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಯಕ್ಷಗಾನ ಕಾರ್ಯಕ್ರಮದಲ್ಲಿ ‘ಕರ್ಣಪರ್ವ’ ಪ್ರಸಂಗ ಪ್ರಸ್ತುತಗೊಳ್ಳಲಿದ್ದು, ಭಾಗವತರಾಗಿ ವಿನಯ್ ಆರ್. ಶೆಟ್ಟಿ, ಮದ್ದಳೆಯಲ್ಲಿ ಸಂಪತ್ ಆಚಾರ್, ಚಂಡೆಯಲ್ಲಿ ಮನೋಜ್ ಆಚಾರ್ ಸಹಕರಿಸಲಿದ್ದಾರೆ. ಮುಮ್ಮೇಳದಲ್ಲಿ ಸುಧೀಂದ್ರ ಹೊಳ್ಳ – ಕರ್ಣ, ಭರತ್ ರಾಜ್ ಪರ್ಕಳ – ಶಲ್ಯ, ಶಿಥಿಲ್ ಶೆಟ್ಟಿ ಐರ್ ಬೈಲ್ – ಕೃಷ್ಣ, ಹವ್ಯಕ್ ಮಂಜು – ಅರ್ಜುನ, ದೇವದಾಸ್ ಶೆಟ್ಟಿ ಮರಾಳಿ – ಕೌರವನಾಗಿ ಸಹಕರಿಸಲಿದ್ದು, ವೇಷಭೂಷಣ ಶಂಕರ ಹೊಸೂರು ಹಾಗೂ ಬೆಂಗಳೂರಿನ ಯಕ್ಷರಂಗದ ಅಧ್ಯಕ್ಷರಾದ ಹೆಚ್.ಬಿ. ರಾಜೀವ ಶೆಟ್ಟಿ ಸಂಯೋಜನೆ ಮಾಡಲಿದ್ದಾರೆ.

Read More