Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಕೊಲ್ಯದ ಸಂತ ಜೋಸೆಪ್ ಜೋಯ್ ಲ್ಯಾಂಡ್ ಶಾಲೆ ಮತ್ತು ಚಿತ್ತಾರ ಪ್ರತಿಷ್ಠಾನ ಪಿಲಾರು ಇದರ ವತಿಯಿಂದ 19ನೇ ವರ್ಷದ ವಿವಿಧ ಶಾಲಾ ಮಕ್ಕಳಿಗಾಗಿ ಉಚಿತ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭವು ದಿನಾಂಕ 15-04-2024ರಂದು ಜರಗಿತು. ಈ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಕೊಲ್ಯದ ಸಂತ ಜೋಸೆಪ್ ಜೋಯ್ ಲ್ಯಾಂಡ್ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ವೀಣಾ ಭಟ್ “ಮಕ್ಕಳ ಕ್ರಿಯಾತ್ಮಕ ಚಟುವಟಿಕೆ ಹಾಗೂ ತಮ್ಮಲ್ಲಿರುವ ಪ್ರತಿಭೆಗಳನ್ನು ಗುರುತಿಸಲು ಇಂತಹ ಶಿಬಿರಗಳು ಬಹಳ ಸಹಕಾರಿ” ಎಂದು ಅಭಿಪ್ರಾಯಪಟ್ಟರು. ದೈಹಿಕ ಶಿಕ್ಷಕರಾದ ಶ್ರೀಯುತ ನಾಗಪ್ಪ ಪನೋಲಿಬೈಲ್ ಹಾಗೂ ಶಿಬಿರದ ನಿರ್ದೇಶಕರಾದ ಶ್ರೀಯತ ನವೀನ್ ಪಿಲಾರು ಉಪಸ್ಥಿತರಿದ್ದರು. ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ರಂಗ ನಿರ್ದೇಶಕರಾದ ಶ್ರೀ ಜಗನ್ ಪವಾರ್ ಇವರು ರಂಗ ತರಬೇತಿ ಬಗ್ಗೆ, ಕುಂಬಳೆ ಶಾಲೆಯ ಶಿಕ್ಷಕರಾದ ಶ್ರೀ ರಾಜು ಕಿದೂರು ಪ್ರಾಣಿ ಪಕ್ಷಿಗಳ ಬಗ್ಗೆ, ತೊಕ್ಕೊಟ್ಟು ಶಾಲೆಯ ಚಿತ್ರಕಲಾ ಶಿಕ್ಷಕರಾದ ಶ್ರೀ ಚಂದ್ರಾಡ್ಕಾರ್ ಮತ್ತು ಚಿತ್ರ ಕಲಾವಿದ ಶ್ರೀ…
ಉಡುಪಿ : ಯು. ಶ್ರೀಧರ್ ಅವರು ಬರೆದ ‘ಉಡುಪಿ ಪರ್ಯಾಯವೂ, ಮಟ್ಟಿ (ವಾದಿರಾಜ) ಗುಳ್ಳವೂ ಮತ್ತು ಇತರ ಆಯ್ದ ಲೇಖನಗಳು’ ಕೃತಿ ದಿನಾಂಕ 21-04-2024 ರಂದು ಯಕ್ಷಗಾನ ಕಲಾರಂಗದ ನೂತನ ಕಟ್ಟಡದಲ್ಲಿ ಲೋಕಾರ್ಪಣೆಗೊಂಡಿತು. ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಸೋದೆ ವಾದಿರಾಜ ಮಠಾಧೀಶರಾದ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು “ಯು. ಶ್ರೀಧರರು ಇಳಿ ವಯಸ್ಸಿನಲ್ಲೂ ಮಾಡುತ್ತಿರುವ ಸಾಹಿತ್ಯ ಮತ್ತು ಸಾಮಾಜಿಕ ಕೆಲಸಗಳು ಅಭಿನಂದನಾರ್ಹ.” ಎಂದರು. ವರ್ಷದ ಹಿಂದೆ ಗತಿಸಿದ ತಮ್ಮ ಪತ್ನಿ ಸುಗುಣಾಳ ನೆನಪಿಗೆ ಈ ಕೃತಿಯನ್ನು ಸಮರ್ಪಿಸಿದ ಲೇಖಕರು ಮಾರಾಟದಿಂದ ಬಂದ ಹಣವನ್ನು ವಿದ್ಯಾಪೋಷಕ್ ಗೆ ನೀಡುವುದಾಗಿ ಹೇಳಿದರು. ಇದು ಈ ಲೇಖಕರ ಹತ್ತನೆಯ ಕೃತಿಯಾಗಿದೆ. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್, ನಾರಾಯಣ ಎಂ. ಹೆಗಡೆ, ಡಾ. ವಿರೂಪಾಕ್ಷ ದೇವರಮನೆ, ಎಚ್. ಎನ್. ವೆಂಕಟೇಶ್, ಯು. ಹರಿಶ್ಚಂದ್ರ, ರವಿ .ಎಂ ಅಮೀನ್ ಉಪಸ್ಥಿತರಿದ್ದರು.
ಉಡುಪಿ : ಪಲಿಮಾರು ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ತಮ್ಮ ಗುರುಗಳಾದ ಶ್ರೀ ವಿದ್ಯಾಮಾನ್ಯ ಶ್ರೀಪಾದರ ಹೆಸರಿನಲ್ಲಿ ಪ್ರತೀವರ್ಷ ಕೊಡಮಾಡುವ ‘ಶ್ರೀ ವಿದ್ಯಾಮಾನ್ಯ ಯಕ್ಷಕಲಾ’ ಪ್ರಶಸ್ತಿಯನ್ನು ಬಡಗುತಿಟ್ಟಿನ ಶ್ರೇಷ್ಠ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆಯವರಿಗೆ ದಿನಾಂಕ 23-04-2024 ರಂದು ಪಲಿಮಾರಿನಲ್ಲಿ ನಡೆದ ಹನುಮ ಜಯಂತಿಯ ಸಂದರ್ಭದಲ್ಲಿ ಪ್ರದಾನ ಮಾಡಿದರು. ಈ ಪ್ರಶಸ್ತಿಯು 50,000/- ನಗದು ಪುರಸ್ಕಾರಗಳನ್ನೊಳಗೊಂಡಿದೆ. ಕಾರ್ಯಕ್ರಮದಲ್ಲಿ ಶ್ರೀ ಕಾಣಿಯೂರು, ಶ್ರೀ ಸೋದೆ, ಶ್ರೀ ಭೀಮನಕಟ್ಟೆ ಹಾಗೂ ಪಲಿಮಾರು ಕಿರಿಯ ಶ್ರೀಪಾದಂಗಳವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಪಲಿಮಾರು ಶ್ರೀಗಳು “ಎರಡು ದಶಕಗಳ ಹಿಂದೆ ಕೊಂಡದಕುಳಿಯವರು ನಿರ್ವಹಿಸಿದ ಹನುಮಂತನ ಪಾತ್ರ ಇಂದಿಗೂ ನನ್ನ ಮನಸ್ಸಿನಲ್ಲಿ ಹಸಿರಾಗಿದೆ. ಇಂತಹ ಶ್ರೇಷ್ಠ ಕಲಾವಿದ ಇನ್ನಷ್ಟು ಸಮಯ ರಂಗದಲ್ಲಿ ಪಾತ್ರನಿರ್ವಹಿಸುವಂತಾಗಲಿ.” ಎಂದು ತಮ್ಮ ಅನುಗ್ರಹ ಸಂದೇಶದಲ್ಲಿ ನುಡಿದರು. ಪ್ರಶಸ್ತಿ ಸ್ವೀಕರಿಸಿದ ಕೊಂಡದಕುಳಿಯವರು ಮಾತನಾಡಿ “ಈ ದಿನ ನನ್ನ ಪಾಲಿಗೆ ಸಂತಸದ ಕ್ಷಣ. ಕಲಾವಿದನಾದವನು ಅಧ್ಯಯನಶೀಲನಾಗಿರಬೇಕು. ಕಲಾವಿದರು ತಪಸ್ವಿಗಳು ಎಂದು ಪೇಜಾವರ ವಿಶ್ವೇಶ ತೀರ್ಥರು ಹೇಳಿದ್ದರು. ಶ್ರದ್ಧೆ…
ಮಂಗಳೂರು : ಮಂಗಳೂರಿನ ನಾಟ್ಯಾರಾಧನಾ ಕಲಾ ಕೇಂದ್ರ (ರಿ.) ಉರ್ವ ಇದರ ತ್ರಿಂಶೋತ್ಸವ ಸಮಾರಂಭದ ‘ನೃತ್ಯಾಮೃತ ಸರಣಿ ನೃತ್ಯ ಕಾರ್ಯಕ್ರಮ -3’ ದಿನಾಂಕ 09-04-2024ರಂದು ಮಂಗಳೂರಿನ ಪುರಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಅಗರಿ ಎಂಟರ್ಪ್ರೈಸಸ್ ಸಂಸ್ಥೆಯ ಮಾಲಕರಾದ ಶ್ರೀ ಅಗರಿ ರಾಘವೇಂದ್ರ ರಾವ್ ಮಾತನಾಡಿ “ಬಾಲ್ಯದಿಂದಲೇ ಭಾರತೀಯ ನೃತ್ಯ, ಸಂಗೀತ ಮುಂತಾದ ಕಲೆಗಳಲ್ಲಿ ಮಕ್ಕಳು ತಮ್ಮನ್ನು ತೊಡಗಿಸಿಕೊಂಡರೆ ಭವಿಷ್ಯದಲ್ಲಿ ದೇಶದ ಉತ್ತಮ ಪ್ರಜೆಯಾಗಿ ರೂಪುಗೊಳ್ಳುವುದರಲ್ಲಿ ಅನುಮಾನವಿಲ್ಲ. ಸಾಂಸ್ಕೃತಿಕ ಕಲೆಗಳು ಮನಸ್ಸು ಕಟ್ಟುವ ಕೆಲಸ ಮಾಡುತ್ತದೆ.” ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀ ನಾರಾಯಣ ಗುರು ಸೇವಾ ಟ್ರಷ್ಟ್ ಅಶೋಕನಗರದ ಇದರ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣ ಮಾತನಾಡಿ “ಪರಿಶ್ರಮವಿಲ್ಲದೆ ಯಶಸ್ಸಿಲ್ಲ. ಈ ನಿಟ್ಟಿನಲ್ಲಿ ಕಳೆದ 30 ವರುಷಗಳಿಂತ ನಿರಂತರವಾಗಿ ಭರತನಾಟ್ಯ ಕಲಾ ಪ್ರಸರಣ ಕಾರ್ಯದಲ್ಲಿ ತೊಡಗಿರುವ ಯಶಸ್ವಿ ಸಂಸ್ಥೆಯ ಕಾರ್ಯ ವೈಖರಿ ಶ್ಲಾಘನೀಯ.” ಎಂದರು. ಸಭೆಯಲ್ಲಿ ಮಾಜಿ ಕ.ಸಾ.ಪ ದ ರಾಜ್ಯಾಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು, ಹಿರಿಯ ನೃತ್ಯ ಗುರುಗಳಾದ ನಾಟ್ಯಾಲಯ…
ಮಂಗಳೂರು : ಭರತಾಂಜಲಿ (ರಿ) ಕೊಟ್ಟಾರ ಮಂಗಳೂರು ನೃತ್ಯ ಸಂಸ್ಥೆಯು ವಿಪ್ರ ವೇದಿಕೆ (ರಿ) ಕೋಡಿಕಲ್ ಇವರ ಸಹಕಾರದಲ್ಲಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ ಹರಿಕಥಾ ಕಾರ್ಯಕ್ರಮವು ದಿನಾಂಕ 21-04-2024ರಂದು ಕೋಡಿಕಲ್ಲಿನ ಬೆನಕ ಸಭಾಭವನದಲ್ಲಿ ನಡೆಯಿತು. ವೇದಿಕೆಯ ಗೌರವಾಧ್ಯಕ್ಷ ನ್ಯಾಯವಾದಿ ಜಯರಾಮ ಪದಕಣ್ಣಾಯ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಅಧ್ಯಕ್ಷ ಹಾಗೂ ಭರತಾಂಜಲಿಯ ನಿರ್ದೇಶಕ ಶ್ರೀಧರ ಹೊಳ್ಳ ಸ್ವಾಗತಿಸಿದರು. ನೃತ್ಯ ಗುರು ವಿದುಷಿ ಪ್ರತಿಮಾ ಶ್ರೀಧರ್, ಕಾರ್ಯದರ್ಶಿ ದುರ್ಗಾದಾಸ್ ಕಟೀಲ್, ವಿದ್ಯಾರಾವ್, ಮೊದಲಾದವರು ಉಪಸ್ಥಿತರಿದ್ದರು. ಹರಿಕಥಾ ಕೀರ್ತನಾ ಕೇಸರಿ ಬಿರುದಾಂಕಿತ ಶಾಂ. ನಾ. ಅಡಿಗ ಕುಂಬ್ಳೆ ಹಾಗೂ ಬಳಗದವರಿಂದ ಹರಿಕಥಾ ಕಾಲಕ್ಷೇಪ ‘ಭಕ್ತ ಅಂಬರೀಶ’ ಸಂಪನ್ನಗೊಂಡಿತು.
ಮಂಗಳೂರು : ಶರವು ಶ್ರೀ ಮಹಾಗಣಪತಿ ದೇವಸ್ಥಾನದ ಕಾಲಾವಧಿ ಮಹೋತ್ಸವದ ಸಮಾರೋಪ ಸಮಾರಂಭ ಹಾಗೂ ದಿವಂಗತ ಶರವು ರಾಮಕೃಷ್ಣ ಶಾಸ್ತ್ರಿ ಸಂಸ್ಮರಣಾ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 17-04-2024 ರಂದು ಮಂಗಳೂರಿನ ಶರವು ದೇವಸ್ಥಾನದ ವಠಾರದಲ್ಲಿ ನಡೆಯಿತು. ಶರವು ರಾಮಕೃಷ್ಣ ಶಾಸ್ತ್ರಿ ಸಂಸ್ಮರಣಾ ಪ್ರಶಸ್ತಿಯನ್ನು ಧಾರ್ಮಿಕ , ಕಲಾ, ವಿದ್ಯಾ, ಹಾಗೂ ಅತ್ಯುತ್ತಮ ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಮಾನ್ಯರಿಗೆ ನೀಡುತ್ತಾ ಬಂದಿದ್ದು, ಈ ಸಾಲಿನ ಪ್ರಶಸ್ತಿಯನ್ನು ವೇದಮೂರ್ತಿ ಅತ್ತೂರು ಜಯರಾಮ ಉಡುಪರಿಗೆ ನೀಡಿ ಗೌರವಿಸಲಾಯಿತು. ಪ್ರಶಸ್ತಿಯು ಚಿನ್ನದ ಪದಕ, ಗೌರವ ಸಂಭಾವನೆ, ಗೌರವ ಪತ್ರವನ್ನು ಒಳಗೊಂಡಿತ್ತು. ಶರವು ಕ್ಷೇತ್ರದ ಶಿಲೆ ಶಿಲೆ ಮೋಕ್ತೇಸರಾದ ಶರವು ರಾಘವೇಂದ್ರ ಶಾಸ್ತ್ರಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬಿ. ರಘುನಾಥ ಸೋಮಯಾಜಿ ಭಾಗವಹಿಸಿದ್ದರು. ಸುಧಾಕರ ರಾವ್ ಪೇಜಾವರ ಇವರು ಶರವು ರಾಮಕೃಷ್ಣ ಶಾಸ್ತ್ರಿ ಸಂಸ್ಮರಣೆ ಮತ್ತು ಪ್ರಶಸ್ತಿ ಪುರಸ್ಕೃತರಾದ ಅತ್ತೂರು ಜಯರಾಮ ಉಡುಪರ ಅಭಿನಂದನೆಗೈದರು. ವೇದಿಕೆಯಲ್ಲಿ ಡಾಕ್ಟರ್ ಸುಧೇಶ್ ಶಾಸ್ತ್ರಿ ಶರವು,…
ಬೆಂಗಳೂರು : ‘ನಟನಂ’ ನೃತ್ಯ ಸಂಸ್ಥೆಯ ವತಿಯಿಂದ ಆಚಾರ್ಯ ಶ್ರೀಮತಿ ಡಾ. ರಕ್ಷಾ ಕಾರ್ತಿಕ್ ಮತ್ತು ಅವರ ಶಿಷ್ಯ ವೃಂದದವರಿಂದ ‘ಶ್ರೀ ಶ್ಯಾಮ ಶಾಸ್ತ್ರಿಗಳಿಗೆ ನಮನ’ ಕಾರ್ಯಕ್ರಮವು ದಿನಾಂಕ 27-04-2024ರಂದು ಸಂಜೆ ಗಂಟೆ 5.45ಕ್ಕೆ ಬೆಂಗಳೂರಿನ ಜಯನಗರ, 4ನೇ ಬ್ಲಾಕ್, 11ನೇ ಮೈನ್ ರೋಡ್, 31ನೇ ಕ್ರಾಸ್ ಇಲ್ಲಿರುವ ಯುವಕ ಸಂಘದಲ್ಲಿ ನಡೆಯಲಿದೆ. ಈ ನೃತ್ಯ ಕಾರ್ಯಕ್ರಮಕ್ಕೆ ನಟ್ಟುವಾಂಗಂನಲ್ಲಿ ವಿದ್ವಾನ್ ದೇವರಾಜು ಬಿ.ವಿ., ಹಾಡುಗಾರಿಕೆಯಲ್ಲಿ ವಿದ್ವಾನ್ ಬಾಲಸುಬ್ರಹ್ಮಣ್ಯ ಶರ್ಮ, ಮೃದಂಗದಲ್ಲಿ ವಿದ್ವಾನ್ ಶ್ರೀಹರಿ ರಂಗಸ್ವಾಮಿ, ವೀಣೆಯಲ್ಲಿ ವಿದ್ವಾನ್ ಪ್ರಶಾಂತ್, ಕೊಳಲಿನಲ್ಲಿ ವಿದ್ವಾನ್ ಜಯರಾಂ ಕಿಕ್ಕೇರಿ ಮತ್ತು ರಿದಂ ಪ್ಯಾಡ್ ನಲ್ಲಿ ವಿದ್ವಾನ್ ಪ್ರಸನ್ನ ಕುಮಾರ್ ಇವರುಗಳು ಸಹಕರಿಸಲಿದ್ದಾರೆ.
ಮೂಡುಬಿದಿರೆ : ದೇಶದ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲಿ ಒಂದಾದ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ರಂಗಭೂಮಿಯ ಅಭಿನಯ, ರಂಗಸಂಗೀತ, ವಾದ್ಯ ಪರಿಕರಗಳ ನಿರ್ವಹಣೆ, ರಂಗ ತಾಂತ್ರಿಕತೆ ಮತ್ತು ನಾಟಕ ಇವುಗಳಲ್ಲಿ ಆಸಕ್ತಿಯಿದ್ದು, ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಉಚಿತ ಪ್ರೌಢಶಾಲೆ, ಪಿ.ಯು.ಸಿ. (ಕಲಾ ಮತ್ತು ವಾಣಿಜ್ಯ) ಹಾಗೂ ಪದವಿ ಕಾಲೇಜು ಶಿಕ್ಷಣಕ್ಕೆ ಅವಕಾಶ ಕಲ್ಪಿಸಿದೆ. ಆಸಕ್ತರು ದಿನಾಂಕ 30-04-2024ರ ಒಳಗೆ ತಮ್ಮ ಸ್ವ-ವಿವರಗಳನ್ನು ಕಳಿಸಿಕೊಡುವುದು. ಹೆಚ್ಚಿನ ವಿವರಗಳಿಗೆ ಡಾ. ಜೀವನ್ ರಾಂ ಸುಳ್ಯ – 9448215946 ಇವರನ್ನು ಸಂಪರ್ಕಿಸಬಹುದು.
ಪುತ್ತೂರು : ಪುತ್ತೂರು ಸಮೀಪದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಆರ್ಯಾಪು ಇದರ ಪುನರ್ ಪ್ರತಿಷ್ಠಾ ಆಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇವರ ವತಿಯಿಂದ ದಿನಾಂಕ 22-04-2024ರಂದು ‘ಶ್ರೀ ರಾಮ ದರ್ಶನ’ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಜಯಪ್ರಕಾಶ್ ನಾಕೂರು, ರಾಜೇಂದ್ರ ಪ್ರಸಾದ್ ಪುಂಡಿಕಾಯಿ, ಲಕ್ಷ್ಮೀಶ ಬೇಂಗ್ರೋಡಿ ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಗಣೇಶ್, ಕಿಶೋರಿ ದುಗ್ಗಪ್ಪ ನಡುಗಲ್ಲು, ಹರಿಣಾಕ್ಷೀ ಜೆ. ಶೆಟ್ಟಿ, ಮನೋರಮಾ ಜಿ. ಭಟ್, ಭಾರತೀ ಜಯರಾಂ ಸಹಕರಿಸಿದರು. ನಿರ್ದೇಶಕ ಭಾಸ್ಕರ್ ಬಾರ್ಯ ಸ್ವಾಗತಿಸಿ, ಬ್ರಹ್ಮಕಲಶೋತ್ಸವದ ಕಾರ್ಯಧ್ಯಕ್ಷ ರಾಧಾಕೃಷ್ಣ ಬೋರ್ಕರ್ ವಂದಿಸಿದರು. ಅಧ್ಯಕ್ಷ ಬುಡಿಯಾರು ಬಾಲಕೃಷ್ಣ ರೈ ಪ್ರಾಯೋಜಿಸಿದ್ದರು.
ಬೆಂಗಳೂರು : ಕಲಾಸಿಂಧು ಅಕಾಡೆಮಿ ಆಫ್ ಡಾನ್ಸ್ ಆ್ಯಂಡ್ ರಿಲೇಟೆಡ್ ಆರ್ಟ್ಸ್ ಇವರ ವತಿಯಿಂದ ಕುಮಾರಿ ಅನಘಾ ಕೆ. ಇವರ ‘ರಂಗಾರ್ಪಣೆ’ ನೃತ್ಯ ಕಾರ್ಯಕ್ರಮವು ದಿನಾಂಕ 26-04-2024ರಂದು ಸಂಜೆ ಗಂಟೆ 6-30ಕ್ಕೆ ಬೆಂಗಳೂರಿನ ಜಯನಗರ, 8ನೇ ಬ್ಲಾಕ್, 38ನೇ ಕ್ರಾಸ್, 1ನೇ ಮೈನ್ ರೋಡ್, ಜೆ.ಎಸ್.ಎಸ್. ಆಡಿಟೋರಿಯಮ್ ಇಲ್ಲಿ ನಡೆಯಲಿದೆ. ಹೆಸರಾಂತ ಸಂಗೀತ ವಿದ್ವಾಂಸರಾದ ಶ್ರೀಮತಿ ಟಿ.ಎಸ್. ಸತ್ಯವತಿ, ಭರತನಾಟ್ಯ ಕಲಾವಿದ ಶ್ರೀ ಪ್ರವೀಣ್ ಕುಮಾರ್ ಮತ್ತು ಸಂಶೋಧನಾ ವಿದ್ವಾಂಸ, ಶಿಕ್ಷಣತಜ್ಞ ಮತ್ತು ಭರತನಾಟ್ಯ ಕಲಾವಿದೆಯಾದ ಶ್ರೀಮತಿ ಶಿಲ್ಪಾ ನಂಜಪ್ಪ ಇವರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿರುವರು.