Subscribe to Updates
Get the latest creative news from FooBar about art, design and business.
Author: roovari
ಉಜಿರೆ : ಕನ್ನಡ ಸಾಹಿತ್ಯ ಪರಿಷತ್ ಸುವರ್ಣ ವರ್ಷಾಚರಣೆ ಪ್ರಯುಕ್ತ ದ.ಕ. ಜಿಲ್ಲಾ ಕ. ಸಾ. ಪ. ಆಶ್ರಯದಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಕನ್ನಡ ವಿಭಾಗದ ಸಹಯೋಗದೊಂದಿಗೆ ‘ವಿದ್ಯಾರ್ಥಿಗಳೆಡೆಗೆ ಸಾಹಿತ್ಯದ ನಡಿಗೆ’ ವಿಶೇಷ ಕಾರ್ಯಕ್ರಮವು ದಿನಾಂಕ 04 ಡಿಸೆಂಬರ್ 2024ರಂದು ಉಜಿರೆಯ ಹಳೆಪೇಟೆ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಕ. ಸಾ. ಪ. ಅಧ್ಯಕ್ಷರಾದ ಡಾ. ಎಂ. ಪಿ. ಶ್ರೀನಾಥ್ ಮಾತನಾಡಿ “ಪ್ರೌಢ ಶಾಲಾ ವಿದ್ಯಾರ್ಥಿಗಳ ಮಾನಸಿಕ, ಬೌದ್ಧಿಕ ಬೆಳವಣಿಗೆಗೆ ಪಾಠದ ಜತೆಗೆ ಸಾಹಿತ್ಯ, ಕ್ರೀಡೆ ಹಾಗೂ ಪತ್ಯೇತರ ಚಟುವಟಿಕೆಗಳು ಪೂರಕವಾಗಿದ್ದು, ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಆಸಕ್ತಿ, ಅಭಿರುಚಿ ಬೆಳೆಸಿ ಸಾಹಿತ್ಯಕ ಚಟುವಟಿಕೆಗಳನ್ನು ನಡೆಸಿ ಪ್ರೇರೇಪಿಸುವಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿ ಪತ್ರಿಕೆ, ಪುಸ್ತಕ, ಸಾಹಿತ್ಯಕ ಕೃತಿಗಳನ್ನು ಓದುವ ಹವ್ಯಾಸ ಬೆಳೆಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಕನ್ನಡ ವಿಭಾಗ ಕಾಲೇಜಿನ ವಿಸ್ತರಣಾ ಚಟುವಟಿಕೆಯನ್ವಯ ತಾಲೂಕಿನ ವಿವಿಧ ಪ್ರೌಢ ಶಾಲೆಗಳಲ್ಲಿ…
ಕಾಸರಗೋಡು :ಕರ್ನಾಟಕದ ಬಾಗಲಕೋಟ ಜಿಲ್ಲೆಯ ಹಿರಿಯ ಕನ್ನಡ ಹೋರಾಟಗಾರ ಹಾಗೂ ಸಂಘಟಕರಾದ ಡಾ. ಸಿದ್ದಣ್ಣ ಭಾಡಗಿ ಮುದೋಳ ಬಾಗಲಕೋಟ ಇವರನ್ನು ಕೇರಳ ರಾಜ್ಯ, ಕಾಸರಗೋಡು ಕನ್ನಡ ಭವನದ ಬಾಗಲಕೋಟ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ಕನ್ನಡ ಭವನದ “ರಜತ ಸಂಭ್ರಮ ಸಮಿತಿ” ದಿನಾಂಕ 05 ಡಿಸೆಂಬರ್ 2024ರಂದು ನಡೆದ ಸಭೆಯಲ್ಲಿ ಆಯ್ಕೆ ಮಾಡಿದೆ. ಕನ್ನಡ ಭವನದ ಕರ್ನಾಟಕ ರಾಜ್ಯ ಸಂಚಾಲಕರಾದ ಡಾ. ಟಿ. ತ್ಯಾಗರಾಜ್ ಮೈಸೂರು ನಾಮ ನಿರ್ದೇಶನ ಮಾಡಿ, ಇನ್ನೊರ್ವ ಕರ್ನಾಟಕ ರಾಜ್ಯ ಸಂಚಾಲಕರಾದ ಬಿ. ಶಿವಕುಮಾರ್ ಕೋಲಾರ ಅನುಮೋದಿಸಿದರು. ಸರ್ವಾನುಮತದಿಂದ ಆಯ್ಕೆಯಾದ ಡಾ. ಸಿದ್ದಣ್ಣ ಭಾಡಗಿ, ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ಕನ್ನಡ ಭವನ ಪ್ರಕಾಶನ, ಕನ್ನಡ ಭವನ ಸಾರ್ವಜನಿಕ ವಾಚನಾಲಯ, ಕನ್ನಡ ಭವನ ಉಚಿತ ವಸತಿ ಸೌಕರ್ಯ, (ಕರ್ನಾಟಕದಿಂದ ಕಾಸರಗೋಡಿಗೆ ಆಗಮಿಸುವ ಸಾಹಿತ್ಯ, ಸಾಂಸ್ಕೃತಿಕ ರಾಯಬಾರಿಗಳಿಗೆ, ನಿಬಂದನೆಗಳೊಂದಿಗೆ ). ಕನ್ನಡ ಭವನದ “ರಜತ ಸಂಭ್ರಮ..2025” ಕಾರ್ಯಕ್ರಮ ಸಂಘಟನೆ, ಸಂಯೋಜನೆಗೆ ಹಾಗೂ ಕರ್ನಾಟಕ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಂಸ್ಥೆಯ…
ಬೆಳ್ತಂಗಡಿ: ಯಕ್ಷಧ್ರುವ ಪಟ್ಟ ಫೌಂಡೇಷನ್ ಬೆಳ್ತಂಗಡಿ ಘಟಕದ 3ನೇ ವಾರ್ಷಿಕೋತ್ಸವ ‘ಯಕ್ಷ ಸಂಭ್ರಮ -2024’ ಗುರುವಾಯನಕೆರೆ ಶಕ್ತಿನಗರದ ನವಶಕ್ತಿ ಕ್ರೀಡಾಂಗಣದಲ್ಲಿ ಘಟಕದ ಗೌರವಾಧ್ಯಕ್ಷ ಶಶಿಧರ್ ಶೆಟ್ಟಿ ಇವರ ನೇತೃತ್ವದಲ್ಲಿ 14 ಡಿಸೆಂಬರ್ 2024ರಂದು ನಡೆಯಲಿದ್ದು ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಉಜಿರೆ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕೇಸರ ಶರತ್ ಕೃಷ್ಣ ಪಡುವೆಟ್ನಾಯ ದಿನಾಂಕ 04 ಡಿಸೆಂಬರ್ 2024ರಂದು ಲೋಕಾರ್ಪಣೆ ಗೊಳಿಸಿದರು. ಯಕ್ಷ ಧ್ರುವ ಪಟ್ಲ ಫೌಂಡೇಷನ್ ಹಲವಾರು ಅಶಕ್ತ ಕಲಾವಿದರ ಬಾಳಿಗೆ ಬೆಳಕಾಗಿ ಸಮಾಜದ ಮೆಚ್ಚುಗೆಗೆ ಪಾತ್ರವಾಗಿದೆ. 2 ವರ್ಷಗಳಿಂದ ಬೆಳ್ತಂಗಡಿ ತಾಲ್ಲೂಕಿನಲ್ಲಿ ಶಶಿಧರ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಉಜಿರೆ ಜನಾರ್ದನ ದೇವಸ್ಥಾನದ ವಠಾರದಲ್ಲಿ ಕಾರ್ಯಕ್ರಮ ನಡೆದಿದೆ. ತಾಲ್ಲೂಕಿನ ವಿವಿಧೆಡೆ ಕಾರ್ಯಕ್ರಮ ಆಯೋಜಿಸುವ ಅವರ ಯೋಚನೆಯಂತೆ, ಈ ಬಾರಿಯ 3ನೇ ವರ್ಷದ ಕಾರ್ಯಕ್ರಮ ಗುರುವಾಯನಕೆರೆ ನವಶಕ್ತಿ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದರು. ಇದೇ ಸಂದರ್ಭದಲ್ಲಿ ಶರತ್ ಕೃಷ್ಣ ಪಡುವೆಟ್ನಾಯ ಇವರನ್ನು ಗೌರವಿಸಲಾಯಿತು. ಘಟಕದ ಪದಾಧಿಕಾರಿಗಳಾದ ಸುರೇಶ್ ಶೆಟ್ಟಿ ಲಾಯಿಲ, ಶಿತಿಕಂಠ ಭಟ್,…
ಮಂಗಳೂರು : ಕರಾವಳಿ ಲೇಖಕಿಯರ-ವಾಚಕಿಯರ ಸಂಘದಲ್ಲಿ ಲಕ್ಷ್ಮೀ ರಾವ್ ಆರೂರು, ರಾಧಾಬಾಯಿ, ನಾರಾಯಣ ಬಾಬು ಮತ್ತು ಶಾರದಾ ಭಟ್ ದತ್ತಿ ನಿಧಿ ಕಾರ್ಯಕ್ರಮ ಮತ್ತು ಸಾಧಕರಿಗೆ ಸಮ್ಮಾನಕಾರ್ಯಕ್ರಮ ದಿನಾಂಕ 01 ಡಿಸೆಂಬರ್ 2024 ರಂದು ನಡೆಯಿತು. ಸಂಘದ ಅಧ್ಯಕ್ಷೆ ಶಕುಂತಳಾ ಟಿ. ಶೆಟ್ಟಿ ಇವರು ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಈ ವರ್ಷದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಮತ್ತು ಇತ್ತೀಚೆಗೆ 93ನೇ ಹುಟ್ಟುಹಬ್ಬವನ್ನಾಚರಿಸಿದ ದತ್ತಿನಿಧಿಯ ರೂವಾರಿಗಳಲ್ಲೊಬ್ಬರಾದ ಸಮಾಜ ಸೇವಕಿ ಲಕ್ಷ್ಮೀ ರಾವ್ ಆರೂರು ಮತ್ತು ಕಳೆದ ಜುಲೈ ತಿಂಗಳಲ್ಲಿ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಕಣಿ ರಸ್ತೆಯ ಮನೆಯೊಂದರಲ್ಲಿ ನಡೆದ ಕಳ್ಳತನವನ್ನು ಕೆಲವೇ ಗಂಟೆಗಳಲ್ಲಿ ಬೇಧಿಸಿದ ತಂಡದ ನಾಯಕಿ, ಊರ್ವ ಠಾಣೆಯ ಇನ್‌ಸ್ಪೆಕ್ಟರ್ ಭಾರತಿ ಜಿ. ಇವರನ್ನು ಸಮ್ಮಾನಿಸಲಾಯಿತು. ದ.ಕ. ಜಿ. ಪ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಆನಂದ್ ಇವರು ಸಮ್ಮಾನಿತರನ್ನು ಅಭಿನಂದಿಸಿದರು. ಸಮ್ಮಾನಕ್ಕೆ ಪ್ರತಿಕ್ರಿಯಿಸಿದ ಲಕ್ಷ್ಮೀ ರಾವ್ ಆರೂರು “ಈ ಭೂಮಿ ನಮ್ಮದಲ್ಲ. ಭೂಮಿಗೆ ಬಂದ ಮೇಲೆ ನಾವು…
ಕಾಸರಗೋಡು: ಗಡಿನಾಡಿನ ತುಳು, ಕನ್ನಡ ರಂಗ ಭೂಮಿಗೆ ಮಹತ್ವದ ಕೊಡುಗೆ ನೀಡಿದ ರಂಗನಿರ್ದೇಶಕ, ನಟ, ನಾಟಕಕಾರ ಚಟ್ಲ ರಾಮಯ್ಯ ಶೆಟ್ಟಿ ಇವರಿಗೆ ಅಭಿನಂದನಾ ಸಮಾರಂಭ ರಾಮಯ್ಯ ಶೆಟ್ಟಿ ಅವರ ನಿವಾಸದಲ್ಲಿ ದಿನಾಂಕ 04 ಡಿಸೆಂಬರ್ 2024ರಂದು ನಡೆಯಿತು. ಕಾಸರಗೋಡಿನ ಸಾಂಸ್ಕಂತಿಕ, ಸಾಹಿತ್ಯಿಕ ಸಂಸ್ಥೆಯಾದ ರಂಗ ಚಿನ್ನಾರಿ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡದ ರಂಗ ಚಿನ್ನಾರಿ ಇದರ ನಿರ್ದೇಶಕ ಹಾಗೂ ಚಿತ್ರನಟ ಕಾಸರಗೋಡು ಚಿನ್ನಾ “ಚಟ್ಲ ರಾಮಯ್ಯ ಶೆಟ್ಟಿ ಇವರು 1970-80ರ ದಶಕದಲ್ಲಿ ಕಾಸರಗೋಡಿನ ರಂಗ ಭೂಮಿಯಲ್ಲಿ ನಾಟಕ ಕಲಾವಿದನಾಗಿ, ನಿರ್ದೇಶಕನಾಗಿ, ನಾಟಕ ರಚನಾಕಾರನಾಗಿ ಖ್ಯಾತಿ ಗಳಿಸಿದವರು.” ಜತೆಗೆ ಸಾಮಾಜಿಕ ಹಾಗೂ ಬ್ಯಾಂಕಿಂಗ್ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸಿರುವವರು.” ರಾಮಯ್ಯ ಶೆಟ್ಟಿ ಇವರನ್ನು ಶಾಲು ಹೊದಿಸಿ, ಸ್ಮರಣಿಕ, ಫಲಪುಷ್ಪ ನೀಡಿ ಕಾಸರಗೋಡು ಚಿನ್ನಾ ಗೌರವಿಸಿದರು. ರಂಗಚಿನ್ನಾರಿ ನಿರ್ದೇಶಕರಾದ ಸತೀಶ್ಚಂದ್ರ ಭಂಡಾರಿ ಕೋಳಾರು, ರಂಗ ನಟ ದೂಮಣ್ಣ ರೈ, ಮಹಾಬಲ ರೈ, ಲೋಕೇಶ್, ಸಂಜು ಕಾಸರಗೋಡು, ಕೆ. ಸತ್ಯನಾರಾಯಣ, ಸಂಕಪ್ಪ…
ಮಂಗಳೂರು : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಮಂಗಳೂರು ಅವರ ವತಿಯಿಂದ ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮದಡಿ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ ಬ್ರಹ್ಮ ಬೈದರ್ಕಳ ಗರಡಿ ಸಭಾಭವನದಲ್ಲಿ ದಿನಾಂಕ 01 ಡಿಸೆಂಬರ್ 2024ರಂದು ನಡೆಯಿತು. ಗುಡ್ಡೆಗುತ್ತು ಸೂರ್ಯ ನಾರಾಯಣ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗಣೇಶ್ ಗಟ್ಟಿಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ತಾಲೂಕಿನ ಯೋಜನಾಧಿಕಾರಿ ಮಮತಾ ಶೆಟ್ಟಿ, ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಗೀತಾ ಪ್ರವೀಣ್, ಬ್ರಹ್ಮ ಬೈದ್ರಕಳ ಗರಡಿ ಕ್ಷೇತ್ರದ ಅರ್ಚಕ ಗುರುಪ್ರಸಾದ್, ಮಂಗಳೂರು ವಲಯಧ್ಯಕ್ಷ ಸರಳ ಉಪಸ್ಥಿತರಿದ್ದರು. ಉಪನ್ಯಾಸಕಿ ಪಲ್ಲವಿ ಹಾಗೂ ಸುರೇಶ್ ನೆಗಳಗುಳಿ ಉಪನ್ಯಾಸ ನೀಡಿದರು. ಮಂಗಳೂರು ವಲಯ ಮೇಲ್ವಿಚಾರಕಿ ಶೋಭಾ ಐ. ಸ್ವಾಗತಿಸಿ, ಸಮನ್ವಯ ಅಧಿಕಾರಿ ಆಶಾಚಂದ್ರ ನಿರೂಪಿಸಿದರು.
ಮಂಗಳೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಪರಿಶಿಷ್ಟ ಜಾತಿ ಉಪಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಯುವಜನರಿಂದ ಜಾನಪದ ಕಲಾ ಪ್ರಕಾರಗಳ ತರಬೇತಿ ಶಿಬಿರಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಜಾನಪದ ಕಲಾ ಪ್ರಕಾರಗಳ ತರಬೇತಿ ಶಿಬಿರವನ್ನು 10 ಡಿಸೆಂಬರ್ 2024 ರಿಂದ 17 ಡಿಸೆಂಬರ್ 2024ರ ವರೆಗೆ ನಡೆಯಲಿದೆ. ಶಿಬಿರದಲ್ಲಿ 16 ರಿಂದ 40 ವರ್ಷದೊಳಗಿನ ಯುವಕ/ಯುವತಿಯರು ಮಾತ್ರ ಭಾಗವಹಿಸಬಹುದು. ತರಬೇತಿ ಶಿಬಿರದಲ್ಲಿ ಭಾಗವಹಿಸುವ ಶಿಬಿರಾರ್ಥಿಗಳ ದೂರವಾಣಿ/ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು. ತರಬೇತಿ ಅವಧಿಯಲ್ಲಿ ಊಟೋಪಹಾರ, ಪ್ರಮಾಣ ಪತ್ರ ಹಾಗೂ ಹೊರ ಜಿಲ್ಲೆಗಳಿಂದ ಭಾಗವಹಿಸುವವರಿಗೆ ಸಾಮಾನ್ಯ ವಸತಿ ವ್ಯವಸ್ಥೆ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು 08 ಡಿಸೆಂಬರ್ 2024 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳಾ ಕ್ರೀಡಾಂಗಣ, ಮಂಗಳೂರು ಇಲ್ಲಿ ಸಂಪರ್ಕಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಧಾರವಾಡ : ಶ್ರೀ ಸುಜ್ಞಾನ ವಿದ್ಯಾಪೀಠ ಮತ್ತು ಸಾಂಸ್ಕೃತಿಕ ರಂಗಕಲಾವಿದರ, ಸಾಧಕರ ಶ್ರೀ ಮಾತಾ ಪ್ರಕಾಶನ (ರಿ.) ಕರ್ನಾಟಕ ಆಯೋಜಿಸುವ ಡಾ. ದಾ. ರಾ. ಬೇಂದ್ರೆ ಸದ್ಭಾವನಾ ಸೇವಾ ರತ್ನ ಪ್ರಶಸ್ತಿ ಪ್ರದಾನ ಹಾಗೂ ಕವಿ ಗೋಷ್ಠಿ ಕಾರ್ಯಕ್ರಮವು ದಿನಾಂಕ 08 ಡಿಸೆಂಬರ್ 2024ನೇ ಭಾನುವಾರದಂದು ಧಾರವಾಡದ ರಂಗಾಯಣ ಸಾಂಸ್ಕೃತಿಕ ಸಭಾ ಭವನದಲ್ಲಿ ನಡೆಯಲಿದೆ. ಶಿಕ್ಷಕಿ ಹಾಗೂ ಆಕಾಶವಾಣಿ ಕಲಾವಿದೆಯಾದ ಶ್ರೀಮತಿ ಸುಮಾ ಬಸವರಾಜ ಹಡಪದ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮಾರಂಭವನ್ನು ಪತ್ರಕರ್ತ ಹಾಗೂ ಸಿನೆಮಾ ನಿರ್ಮಾಪಕರಾದ ಶ್ರೀ ಡಾ. ರಾಜು ಮೋರೆ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಶ್ರೀ ಪರಮಪೂಜ್ಯ ಡಾ. ಅವದೂತ ಮಹರ್ಷಿ ಸಿದ್ದಾರ್ಥ ಸ್ವಾಮೀಜಿ ಉಪಸ್ಥಿತರಿದ್ದು, ಮನಸೂರಿನ ಶ್ರೀ ರೇವಣ ಸಿದ್ದೇಶ್ವರ ಮಠದ ಶ್ರೇ ಡಾ. ಬಸವರಾಜ ದೇವರು ಆಶೀರ್ವಚನ ನೀಡಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಸುಮಾ ಬಸವರಾಜ ಹಾಡಪದ ಇವರ ಶ್ರೀ ಗುರು ಪುಟ್ಟರಾಜ ಸಂಗೀತ ಪಾಠಶಾಲೆ ಧಾರವಾಡ, ಶ್ರೀಮತಿ ಜಯಶ್ರೀ ಪಾಟೇಲ್ ಶ್ರೀ ಕುಮಾರೇಶ್ವರ…
ಮಿಜಾರು: ಮಂಗಳೂರಿನ ಸಸಿಹಿತ್ಲುವಿನಲ್ಲಿ ದಿನಾಂಕ 01 ಡಿಸೆಂಬರ್ 2024ರಂದು ನಡೆದ ಜಿಲ್ಲಾ ಮಟ್ಟದ ಯುವಜನೋತ್ಸವದಲ್ಲಿ ಸ್ಪರ್ಧಿಸಿದ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಜನಪದ ನೃತ್ಯ (ಡೊಳ್ಳು- ಪ್ರಥಮ), ಜನಪದ ನೃತ್ಯ (ಏಕವ್ಯಕ್ತಿ) ಪ್ರಥಮ, ಕತೆ ಬರೆಯುವುದು- ಪ್ರಥಮ ಮತ್ತು ದ್ವಿತೀಯ, ಭಾಷಣ ಕಲೆ -ಪ್ರಥಮ, ಕವಿತೆ ಬರೆಯುವುದು -ಪ್ರಥಮ ಮತ್ತು ದ್ವಿತೀಯ ಬಹುಮಾನ ಪಡೆದಿದ್ದಾರೆ. ಸ್ಪರ್ಧೆಯ ಪ್ರಥಮ ಬಹುಮಾನ ವಿಜೇತರು ರಾಜ್ಯಮಟ್ಟದ ಯುವಜನೋತ್ಸವಕ್ಕೆ ಆಯ್ಕೆಯಾಗಿದ್ದಾರೆ. ವಿಜೇತ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಟ್ರಸ್ಟಿ ವಿವೇಕ ಆಳ್ವ ಅಭಿನಂದಿಸಿದ್ದಾರೆ.
ಬೆಂಗಳೂರು : ಡಾ. ಶಿವರಾಮ ಕಾರಂತರು ಯಕ್ಷಗಾನವನ್ನು ಪ್ರವೇಶಿಸಿದಾಗ ಅವರೊಂದಿಗೆ ದೊಡ್ಡಮಟ್ಟದಲ್ಲಿ ವಿದ್ಯಾವಂತರು, ನೌಕರರು, ಯಕ್ಷಗಾನ ಆಸಕ್ತರು, ಕೃಷಿಕರು ಯಕ್ಷಗಾನದತ್ತ ಹೊರಳಿದ್ದು ಯಕ್ಷಗಾನದ ಮಟ್ಟಿಗೆ ದೊಡ್ಡ ಬೆಳವಣಿಗೆ. ಇದು ಯಕ್ಷಗಾನವನ್ನು ವೃತ್ತಿರಂಗದ ಜೊತೆ ಜೊತೆಯಲ್ಲಿ ಹವ್ಯಾಸಿ ರಂಗಭೂಮಿಯನ್ನು ದೊಡ್ಡ ಮಟ್ಟದಲ್ಲಿ ಕಟ್ಟುವುದಕ್ಕೆ ನಾಂದಿಯಾಯಿತು. ಈ ಕಾರಣಕ್ಕೆ ನಮ್ಮ ಬಹುತೇಕ ಊರಿಗಳಲ್ಲಿ ಯಕ್ಷಗಾನಕ್ಕಾಗಿಯೇ ಸಂಘ ಸಂಸ್ಥೆಗಳು ಹುಟ್ಟಿಕೊಂಡು ಅದರಲ್ಲಿ ಕಲಾವಿದರಾಗಿ ಕಾಣಿಸಿಕೊಂಡು ವರ್ಷದಲ್ಲಿ ಅನೇಕ ಪ್ರಯೋಗಗಳನ್ನು ಪ್ರದರ್ಶನಗಳನ್ನು ಮಾಡುತ್ತಾ ತಮ್ಮ ಕಲಾರಾಧನೆಯನ್ನು ಮಾಡುತ್ತಾ ಬರುತ್ತಿರುವುದು ಗಮನಾರ್ಹವಾದ ಸಂಗತಿಯಾಗಿದೆ. 80-90ರ ದಶಕದಲ್ಲಿ ಔದ್ಯೋಗಿಕ ವಲಯದಲ್ಲಿ ಉಂಟಾದಂತಹ ಕ್ರಾಂತಿಯ ಕಾರಣಕ್ಕೆ ಹಲವಾರು ಮಂದಿಗಳು ನಮ್ಮ ಊರುಗಳಿಂದ ಪಟ್ಟಣಗಳನ್ನು, ಬೇರೆ ಬೇರೆ ನಗರಗಳನ್ನು ಆಶ್ರಯಿಸಿ ಉದ್ಯೋಗ ವ್ಯವಹಾರಗಳನ್ನು ಮಾಡುತ್ತಾ ತಮ್ಮ ಜೀವನವನ್ನು ರೂಪಿಸಿಕೊಂಡರು. ಆದರೆ ಅವರೊಳಗಿದ್ದ ಕಲಾಪ್ರೇಮ, ಯಕ್ಷಗಾನದ ಬಗೆಗಿನ ಪ್ರೀತಿ ಒಂದಿನಿತು ಕಡಿಮೆಯಾಗಲಿಲ್ಲ. ತಾವು ಹೋದ ಸ್ಥಳದಲ್ಲಿಯೇ ಯಕ್ಷಗಾನ ಸಂಸ್ಥೆಗಳನ್ನು, ಸಂಘಗಳನ್ನು ಕಟ್ಟಿದರು, ಯಕ್ಷಗಾನವನ್ನು ಕಲಿತರು, ಬಣ್ಣ ಹಚ್ಚಿ ಕುಣಿದು ಸಂತೋಷವನ್ನು ಅನುಭವಿಸಿದರು. ಇದೆಲ್ಲ ಯಕ್ಷಗಾನದ…