Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು : ಬೆಂಗಳೂರಿನ ‘ತ್ವರಿತ’ ಮತ್ತು ‘ಬಿ. ಐ. ಸಿ.’ ಸಂಸ್ಥೆಗಳ ಸಹಕಾರದಲ್ಲಿ ಬೆಂಗಳೂರಿನ ‘ಯಕ್ಷದೇಗುಲ’ದ ಪರಿಕಲ್ಪನೆಯಲ್ಲಿ ಆಯೋಜಿಸಿದ ಯಕ್ಷಗಾನ ಪ್ರಾತ್ಯಕ್ಷಿಕೆ ಕಾರ್ಯಕ್ರಮವು ದಿನಾಂಕ 14 ಫೆಬ್ರವರಿ 2025 ರಂದು ಬೆಂಗಳೂರಿನ ದೊಂಬ್ಲೂರಿನಲ್ಲಿರುವ ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ ನಡೆಯಿತು. ಕೋಟ ಸುದರ್ಶನ ಉರಾಳರ ಸಂಯೋಜನೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ರಂಗದಲ್ಲಿ ಗಣಪತಿ ಪೂಜೆ ನಡೆಸುವ ಮೂಲಕ ಯಕ್ಷಗಾನ ವಿದ್ವಾಂಸರಾದ ಸುಜಯೀಂದ್ರ ಹಂದೆ ಮತ್ತು ಯಕ್ಷಗುರುಗಳಾದ ಪ್ರಿಯಾಂಕ ಕೆ. ಮೋಹನ್ ಇವರು ನಡೆಸಿಕೊಟ್ಟರು. ಎರಡು ಗಂಟೆಗಳ ಕಾಲ ನಡೆದ ಈ ಪ್ರಾತ್ಯಕ್ಷಿಕೆಯಲ್ಲಿ ಯಕ್ಷಗಾನದ ಕ್ಯಾದಿಗೆ ಮುಂದಲೆಯ ಅಟ್ಟೆ ಕಟ್ಟುವ ಕ್ರಮ, ಬಣ್ಣದ ವೇಷದ ಮುಖವರ್ಣಿಕೆ, ವೇಷಭೂಷಣ ತೊಡುವ ಕ್ರಮ, ಹಸ್ತಾಭಿನಯ, ಯುದ್ಧ ಕುಣಿತ, ಪ್ರಯಾಣ ಕುಣಿತ, ಕೃಷ್ಣನ ಒಡ್ಡೋಲಗ, ಬಾಲಗೋಪಾಲ, ಪೀಠಿಕಾ ಸ್ತ್ರೀ ವೇಷ ಮತ್ತು ಎರಡು ಯಕ್ಷಗಾನದ ಪ್ರಸಂಗದ ಸನ್ನಿವೇಷ ನಡೆಸಲಾಯಿತು. ಭಾಗವತರಾಗಿ ಲಂಬೋದರ ಹೆಗಡೆ, ಮದ್ದಲೆಯಲ್ಲಿ ಚಿನ್ಮಯಿ, ಚಂಡೆಯಲ್ಲಿ ಪನ್ನಗ ಹಾಗೇ ಕಲಾವಿದರಾಗಿ ಸುಜಯೀಂದ್ರ ಹಂದೆ, ಪ್ರಿಯಾಂಕ ಕೆ. ಮೋಹನ್, ಕೃಷ್ಣಮೂರ್ತಿ…
ಗೊಂಗೊಳ್ಳಿ : ಕೋಟದ ಸಾಲಿಗ್ರಾಮ ಮಕ್ಕಳ ಮೇಳವು ತನ್ನ ಐವತ್ತರ ಸುವರ್ಣ ಸಂಭ್ರಮದ ಸರಣಿ ಕಾರ್ಯಕ್ರಮವಾಗಿ ಆಯೋಜಿಸಿದ ಬಡಗುತಿಟ್ಟಿನ ವೇಷಭೂಷಣಗಳ ಪರಿಚಯ ಕಾರ್ಯಕ್ರಮ ‘ಯಕ್ಷಲೋಕದೊಳಗೊಂದು ಪಯಣ’ ಕಾರ್ಯಕ್ರಮವು ದಿನಾಂಕ 17 ಫೆಬ್ರವರಿ 2025ರಂದು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಗಂಗೊಳ್ಳಿಯ ಉದ್ಯಮಿ ಹಾಗೂ ಜಿ. ಎಸ್. ವಿ. ಎಸ್. ಅಸೋಸಿಯೇಷನ್ ಇದರ ಸಂಚಾಲಕರಾದ ಗಣೇಶ್ ಕಾಮತ್ ಮಾತನಾಡಿ “ಬಾಲ್ಯದಿಂದಲೂ ನಮ್ಮನ್ನೆಲ್ಲ ಆಕರ್ಷಿಸಿದ ಕಲೆ ಯಕ್ಷಗಾನ. ಅಲ್ಲಿಯ ವೈವಿಧ್ಯಮಯವಾದ ವೇಷಭೂಷಣ ಮನಸ್ಸಿಗೆ ಬೆರಗು ಮತ್ತು ಅಚ್ಚರಿ ಹುಟ್ಟಿಸಿದ ಅಂಶ. ಯಾವುದೇ ಆಧುನಿಕ ಸೌಲಭ್ಯವಿಲ್ಲದ ಆ ಕಾಲದಲ್ಲಿ ಗ್ಯಾಸ್ ಲೈಟ್ ಗಳ ನೆರಳು ಬೆಳಕಿನಲ್ಲಿ ಕಲಾವಿದರು ಧರಿಸುತ್ತಿದ್ದ ಉಡುಗೆತೊಡುಗೆಗಳು, ಮುಖವರ್ಣಿಕೆ, ಕಿರೀಟ ಮೊದಲಾದವು ಪೌರಾಣಿಕ ಲೋಕವನ್ನೇ ಸೃಷ್ಟಿಸುತ್ತಿದ್ದವು. ಇಂದು ಕಾಲ ಬದಲಾಗಿದೆ. ಆದರೂ ಅಂದಿನ ಅದೇ ಆಕರ್ಷಣೆ ಯಕ್ಷಗಾನಕ್ಕಿದೆ. ಐವತ್ತರ ಸಂಭ್ರಮವನ್ನು ಆಚರಿಸುತ್ತಿರುವ ಸಾಲಿಗ್ರಾಮ ಮಕ್ಕಳ ಮೇಳವು ಶಾಲೆ ಶಾಲೆಗಳಲ್ಲಿ ಆಯೋಜಿಸಿರುವ ವೇಷಭೂಷಣಗಳ ಪರಿಚಯಾತ್ಮಕವಾದ ಕಮ್ಮಟವು ಅರ್ಥಪೂರ್ಣವೂ…
ಹೊಸಪೇಟೆ : ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಗೀತ ಮತ್ತು ನೃತ್ಯ ವಿಭಾಗದ ಷಡ್ಜ ವೇದಿಕೆಯಲ್ಲಿ 15 ದಿನಗಳ ಕಾಲ ನಡೆದ ನಾಟಕ ರಚನೆ ನಟನೆ ಹಾಗೂ ನಿರ್ದೇಶನ ಶಿಬಿರದ ಸಮಾರೋಪ ಸಮಾರಂಭವು ದಿನಾಂಕ 15 ಫೆಬ್ರವರಿ 2025 ರಂದು ನಡೆಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಂಗಭೂಮಿ ಹಾಗೂ ಚಲನಚಿತ್ರ ನಟ, ನಿರ್ದೇಶಕ, ನಿರ್ಮಾಪಕ ಶ್ರೀ ಚಿಂದೋಡಿ ಬಂಗಾರೇಶ್ ಮಾತನಾಡಿ “ನಾಟಕ ಸಮಾಜವನ್ನು ತಿದ್ದುವ, ಎಚ್ಚರಿಸುವ ಹಾಗೂ ಎಲ್ಲಾ ಕ್ಷೇತ್ರಗಳಲ್ಲಿ ಜಾಗೃತಿ ಮೂಡಿಸುವ ಅದ್ಭುತ ಶಕ್ತಿಯಾಗಿದೆ. ನಾಟಕ ಮತ್ತು ಸಂಗೀತಕ್ಕೆ ಮೂಲ ನೆಲೆಗಟ್ಟು ಶ್ರದ್ದೆ. ಪಾತ್ರ ಪರಕಾಯ ಪ್ರವೇಶ ಮಾಡಬೇಕು, ಗ್ರಹಿಸುವ ಶಕ್ತಿ ಬೇಕು. ಸಂಗೀತದಿಂದಲೇ ನಾಟಕ, ಸಂಗೀತವಿಲ್ಲದೆ ನಾಟಕವಿಲ್ಲ. ನಮ್ಮನ್ನು ಸ್ವರ ಚೇತನಗೊಳಿಸಿದರೆ ಅಕ್ಷರ ಜಾಗೃತಗೊಳಿಸುತ್ತದೆ. ನಾಟಕದಲ್ಲಿ ಸಂಭಾಷಣೆಗೆ ಶುದ್ಧ ಕನ್ನಡಬೇಕು. ನಾಟಕ, ಸಂಗೀತ, ಸಾಹಿತ್ಯವನ್ನು ಅರಿತು ನಟಿಸುವವನೇ ನಿಜವಾದ ನಟನಾಗುತ್ತಾನೆ. ಸಾಹಿತ್ಯದ ಸೊಗಡು ಬಿಡಬೇಡಿ” ಎಂದು ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು. ಶಿಬಿರಾರ್ಥಿಗಳಾದ ಮಂಜುನಾಥ ಕರಲಿಂಗಣ್ಣ, ಹೆಚ್. ಮಲ್ಲಿಕಾರ್ಜುನ, ಮುಮ್ತಾಜ್…
ಮಂಗಳೂರು : ಅವಿನಾಶ್ ಫೋಕ್ ಡಾನ್ಸ್ ಮಂಗಳೂರು (ರಿ.) ಅರ್ಪಿಸುವ 3ನೇ ವರ್ಷದ ‘ಕಲಾಯನ’ ಜಾನಪದ ಸಮೂಹ ನೃತ್ಯ ಸ್ಪರ್ಧೆಯನ್ನು ದಿನಾಂಕ 25 ಫೆಬ್ರವರಿ 2025ರಂದು ಬೆಳಿಗ್ಗೆ 8-00 ಗಂಟೆಗೆ ಮಂಗಳೂರಿನ ಉರ್ವಸ್ಟೋರ್ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ 9980358774. ಸ್ಪರ್ಧೆಯ ನಿಯಮಗಳು : * ಹತ್ತು ಜನ ನೃತ್ಯಗಾರರು ಕಡ್ಡಾಯವಾಗಿ ವೇದಿಕೆಯಲ್ಲಿರತಕ್ಕದ್ದು. * ಐದು ಜನ ಹಿಮ್ಮೇಳದವರಿಗೆ ಮಾತ್ರ ಅವಕಾಶ. * ಸಮೂಹ ನೃತ್ಯ 10 ನಿಮಿಷದ್ದಾಗಿರುತ್ತದೆ. * ವಯಸ್ಸು ಮಿತಿ ಇರುವುದಿಲ್ಲ. * ಸಿ.ಡಿ. ಹಾಡಿಗೆ ಅವಕಾಶವಿದೆ. * ಕುಣಿತಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುವುದು. * ಹಿನ್ನಲೆಯನ್ನು ತೀರ್ಪುಗಾರರಿಗೆ ಮುಂಚಿತವಾಗಿ ನೀಡಬೇಕು. * ಸ್ಪರ್ಧೆಯಲ್ಲಿ ನೀರು, ಬೆಂಕಿ ಮತ್ತು ಸ್ಫೋಟಕ ಬಳಕೆ ನಿಷೇಧಿಸಲಾಗಿದೆ. * ಅಶ್ಲೀಲ ಅಸಂಬದ್ಧ ಅಥವಾ ಜಾತಿ ಧರ್ಮಗಳ ಅವಹೇಳನಕ್ಕೆ ಅವಕಾಶ ಇರುವುದಿಲ್ಲ. * ಕಡ್ಡಾಯವಾಗಿ ದೈವಗಳ ಪಾತ್ರಕ್ಕೆ ಅವಕಾಶವಿಲ್ಲ. * ಮುಕ್ತ ವಿಭಾಗದ ಸ್ಪರ್ಧೆ. * ತಂಡಗಳು ನಿಮಗೆ…
ಉಪ್ಪಿನಕುದ್ರು : ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ವತಿಯಿಂದ 2025ರ ವಿನೂತನ ಕಾರ್ಯಕ್ರಮ ಸರಣಿಯ ಫೆಬ್ರವರಿ ತಿಂಗಳ ಕಾರ್ಯಕ್ರಮದಲ್ಲಿ ಯುವ ಪ್ರತಿಭೆ ಕುಮಾರಿ ಪ್ರಣೀತ ಪ್ರಶಾಂತ್ ನಾಯಕ್ ಕೋಟ ಇವರಿಂದ ‘ಭರತನಾಟ್ಯ’ ಪ್ರದರ್ಶನ’ವು ದಿನಾಂಕ 23 ಫೆಬ್ರವರಿ 2025ರಂದು ಸಂಜೆ ಗಂಟೆ 4-00ರಿಂದ ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ನಡೆಯಲಿದೆ.
ಮಡಿಕೇರಿ : ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಕೊಡಗು ಜಿಲ್ಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಕನ್ನಡ ಸಾರಸ್ವತ ಲೋಕದಲ್ಲಿ ಸಾಹಿತ್ಯ ಕೃಷಿಯ ಮೂಲಕ ಶಾಶ್ವತ ಸ್ಥಾನ ಪಡೆದ, ಕೊಡಗಿನ ವಿಶಿಷ್ಟ ಸಂಸ್ಕೃತಿಯನ್ನು ತಮ್ಮ ಹುತ್ತರಿ ಹಾಡಿನ ಮೂಲಕ ಕಟ್ಟಿಕೊಟ್ಟ ಹಿರಿಯ ಚೇತನ ‘ಪಂಜೆ ಮಂಗೇಶರಾಯರ 150ನೇ ವರ್ಷಾಚರಣೆ’ಯು ದಿನಾಂಕ 20 ಫೆಬ್ರವರಿ 2025ರಂದು ಬೆಳಿಗ್ಗೆ 10-00 ಗಂಟೆಗೆ ಕೊಡಗು ಜಿಲ್ಲೆ ಮಡಿಕೇರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಶ್ರೀ ಎಂ.ಪಿ. ಕೇಶವ ಕಾಮತ್ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಇವರು ಉದ್ಘಾಟನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಹಾಗೂ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂರ್ತ ಗೌಡ ಇವರು ಸಾಹಿತಿ…
ಮಡಿಕೇರಿ : ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಕೊಡಗು ಇದರ ಜಿಲ್ಲಾಧ್ಯಕ್ಷರಾಗಿ ಚಾಮೆರ ದಿನೇಶ್ ಬೆಳ್ಯಪ್ಪ ಅವರನ್ನು ಆಯ್ಕೆಮಾಡಿ ರಾಜ್ಯಧ್ಯಕ್ಷ ಸಿ. ಎನ್. ಅಶೋಕ್ ಆದೇಶಿಸಿದ್ದಾರೆ. ದೇಶದ ನಾನಾ ರಾಜ್ಯಗಳಲ್ಲಿ ತನ್ನ ಘಟಕಗಳ ಮೂಲಕ ಕಾರ್ಯಕ್ಷೇತ್ರ ಹೊಂದಿರುವ ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ ಒಂದು ರಾಷ್ಟ್ರೀಯ ಸಂಘಟನೆಯಾಗಿದ್ದು, ಮಕ್ಕಳಲ್ಲಿ ಸಾಹಿತ್ಯ ಅಭಿರುಚಿಯನ್ನು ಬೆಳೆಸುವ ಜೊತೆಗೆ, ಅವರಲ್ಲಿ ಸೃಜನಶೀಲ ಬೆಳವಣಿಗೆ, ಪರಿಸರ ಸಂರಕ್ಷಣೆ, ಸಹಬಾಳ್ವೆಯ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ದುಡಿಯುತ್ತಿರುವ ಸಂಸ್ಥೆಯಾಗಿದೆ. ಕೊಡಗು ಜಿಲ್ಲೆಯಲ್ಲಿ ಚಾಮೆರ ದಿನೇಶ್ ಬೆಳ್ಯಪ್ಪ ಅವರ ಸಾಹಿತ್ಯ ಮತ್ತು ಸಾಮಾಜಿಕ ಸೇವೆಯನ್ನು ಗುರುತಿಸಿ, ಸರ್ವ ಸದಸ್ಯರ ಸರ್ವಾನುಮತದಿಂದ ಕೊಡಗು ಜಿಲ್ಲಾ ಅಧ್ಯಕ್ಷರನ್ನಾಗಿ ನೇಮಿಸಿದ್ದು ಮುಂದೆ ಜಿಲ್ಲೆಯ ಮಕ್ಕಳಲ್ಲಿ ಬೆಳವಣಿಗೆಯಾಗಲು ಶ್ರಮಿಸುವಂತೆ ಆಶಿಸಿದ್ದಾರೆ.
ಕುಂದಾಪುರ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಕೊಡಮಾಡುವ “ಕರ್ನಾಟಕ ಕಣ್ಮಣಿ” ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 11 ಫೆಬ್ರವರಿ 2025ರಂದು ಉಪ್ಪಿನಕುದ್ರು ಗೊಂಬೆಯಾಟ ಯಕ್ಷಗಾನ ಅಕಾಡೆಮಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕಳೆದ 50 ವರ್ಷಗಳಿಂದ ದೇಶ ಹಾಗೂ ವಿದೇಶಗಳಲ್ಲಿ ಕರ್ನಾಟಕ ಕರಾವಳಿ ಜಿಲ್ಲೆಗಳ ಅಪ್ಪಟ ಕನ್ನಡ ಭಾಷೆಯ ಯಕ್ಷಗಾನವನ್ನು ವಿಶ್ವವ್ಯಾಪ್ತಿಗಳಲ್ಲಿ ವೈಭವೀಕರಿಸಿದ ಯಕ್ಷಗಾನ ಗೊಂಬೆಯಾಟ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಉಪ್ಪಿನಕುದ್ರು ಗೊಂಬೆಯಾಟ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಭಾಸ್ಕರ್ ಕೊಗ್ಗ ಕಾಮತ್ ಇವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ‘ಕಲಾಕುಂಚ’ ಯಕ್ಷರಂಗದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ, ‘ಕಲಾಕುಂಚ’ ಮಹಿಳಾ ವಿಭಾಗದ ಸಂಸ್ಥಾಪಕರಾದ ಶ್ರೀಮತಿ ಜ್ಯೋತಿ ಗಣೇಶ್ ಶೆಣೈ, ಸಮಿತಿ ಸದಸ್ಯರಾದ ಶ್ರೀಮತಿ ಸನ್ನಿಧಿ ಸಂದೀಪ್ ಶೆಣೈ ದಂಪತಿಗಳು ಮತ್ತು ಕುಮಾರಿ ಮಾನ್ಯ ಶೆಣೈಯವರು ಉಪಸ್ಥಿತರಿದ್ದರು
ಪಂಜ : ಸಂಧ್ಯಾರಶ್ಮಿ ಸಾಹಿತ್ಯ ಸಂಘ ಹಾಗೂ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಪಂಜ ಹೋಬಳಿ ಘಟಕ ಇವುಗಳ ಸಂಯುಕ್ತಾಶ್ರಯದಲ್ಲಿ ಸಂಧ್ಯಾರಶ್ಮಿ ಸಾಹಿತ್ಯ ಸಂಘದ ‘ತಿಂಗಳ ಸಾಹಿತ್ಯ ಸಂವಾದ’ ಕಾರ್ಯಕ್ರಮವು ದಿನಾಂಕ 15 ಫೆಬ್ರವರಿ 2025ರಂದು ಹರಿಹರ ಪಳ್ಳತ್ತಡ್ಕದ ಶ್ರೀ ಹರಿಹರೇಶ್ವರ ಕಲಾಮಂದಿರದಲ್ಲಿ ನಡೆಯಿತು. ಮಾಲಿಕೆ ಕಾರ್ಯಕ್ರಮದಲ್ಲಿ ಲೇಖಕಿ ಶ್ರೀಮತಿ ಲಲಿತಾಜ ಮಲ್ಲಾರ ಇವರ ಸಾಹಿತ್ಯ ವಿಚಾರ ಮಂಡನೆ ನಡೆಯಿತು. ಸಂದ್ಯಾರಶ್ಮಿ ಸಾಹಿತ್ಯ ಸಂಘದ ಅಧ್ಯಕ್ಷರಾದ ಶ್ರೀಮತಿ ಲೀಲಾ ದಾಮೋದರ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಶ್ರೀಮತಿ ತಾರಾಮತಿ ಕಗ್ಗೋಡಿ ಇವರು ಲಲಿತಾಜ ಮಲ್ಲಾರ ರವರ ವ್ಯಕ್ತಿತ್ವ ಪರಿಚಯ ಮಾಡಿದರು. ಸಾಹಿತಿಗಳಾದ ಕುಮಾರಸ್ವಾಮಿ ತಕ್ಕುಂಜ ಇತ್ತೀಚೆಗೆ ಬಿಡುಗಡೆಗೊಂಡ ಲಲಿತಾಜ ಮಲ್ಲಾರ ರಚಿಸಿದ “ಕೋಟಿ ತೀರ್ಥ” ಕೃತಿಯ ಪರಿಚಯವನ್ನು ನೆರವೇರಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೂಜುಗೋಡು, ಸುಳ್ಯ ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಡಾ.…
ಶಶಿಧರ ಹಾಲಾಡಿ ಇವರು ಕನ್ನಡದ ಪರಿಸರಾಸಕ್ತ ಓದುಗರನ್ನು ಮತ್ತೊಮ್ಮೆ ತಾವು ಹುಟ್ಟಿ ಬೆಳೆದ ಹಾಲಾಡಿ ಎಂಬ ಹಸುರಿನ ಬನಸಿರಿಯ ಸುತ್ತ ಸಂಚರಿಸಲು ತಮ್ಮ ಹೊಸ ಕೃತಿ ‘ಪರಿಸರದ ಒಡನಾಟ’ದ ಮೂಲಕ ಪ್ರೇರೇಪಿಸಿದ್ದಾರೆ. ಚಿಕ್ಕ ಬಾಲಕನಾಗಿದ್ದ ಕಾಲದಲ್ಲಿ ತಾವು ಕಂಡ ಹಾಲಾಡಿಯ ಗಿಡ-ಮರ-ಬಳ್ಳಿ-ಹಣ್ಣು-ಕಾಯಿ-ಹಸಿರೆಲೆ-ಪ್ರಾಣಿ-ಪಕ್ಷಿ-ಸರೀಸೃಪ-ಕ್ರಿಮಿ-ಕೀಟಗಳ ಜತೆಗೆ ಸೌಹಾರ್ದ ಸಂಬಂಧ ಬೆಳೆಸಿಕೊಂಡು ಸಂತೃಪ್ತ ಬದುಕು ಸಾಗಿಸುತ್ತಿದ್ದ ಹಳ್ಳಿಯ ಜನರ ಜೀವನ ಕ್ರಮದ ನೆನಪು ಈಗ ಅವರ ಪಾಲಿಗೊಂದು ಅಕ್ಷಯ ಪಾತ್ರೆ. ನೆನಪುಗಳಲ್ಲಿ ಅಚ್ಚಳಿಯದೆ ಉಳಿದಿರುವ ಅವೆಲ್ಲವೂ ಅವರ ಈ ವರೆಗಿನ ಕಥೆ-ಕಾದಂಬರಿ-ಲೇಖನಗಳಲ್ಲಿ ಶಾಶ್ವತ ಸ್ಥಾನ ಪಡೆದುಕೊಂಡಿರುವುದನ್ನು ನಾವು ನೋಡಿದ್ದೇವೆ. ‘ಪರಿಸರದ ಒಡನಾಟ’ ಶಶಿಧರ ಅವರ ಹದಿನೆಂಟನೇ ಕೃತಿ. ಇದರಲ್ಲಿ 42 ಲೇಖನಗಳಿವೆ. ಇಲ್ಲಿ ಹಳ್ಳಿಯಲ್ಲಿ ಕಳೆದ ಸಮೃದ್ಧ ಬಾಲ್ಯದ ನೆನಪುಗಳ ಮೂಲಕ ಅಡಕೆ ತೋಟ, ಮನೆಯ ಮುಂದಿನ ಬಗ್ಗು ಬಾವಿ, ಅಗೇಡಿ, ಗದ್ದೆ ಬಯಲುಗಳು, ನೀರು ಹರಿಯುವ ತೋಡುಗಳು, ಆ ನೀರನ್ನು ಜನರು ಬಳಸುತ್ತಿದ್ದ ಪರಿ, ಬೀಸುವ ಗಾಳಿ, ಸೋಗೆ ಮಾಡಿನ ಶಾಲೆಗೆ ಹೋಗುವ ದಾರಿಯಲ್ಲಿ…