Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು : ಕರ್ನಾಟಕ ಪ್ರಕಾಶಕರ ಸಂಘ (ರಿ.) ಮತ್ತು ಬಿ.ಎಂ.ಶ್ರೀ. ಪ್ರತಿಷ್ಠಾನ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ‘ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನಾಚರಣೆ’ ಹಾಗೂ ‘ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ’ವು ಬೆಂಗಳೂರಿನ ಎನ್.ಆರ್. ಕಾಲೋನಿಯಲ್ಲಿರುವ ಬಿ.ಎಂ.ಶ್ರೀ. ಪ್ರತಿಷ್ಠಾನದ ಎಂ.ವಿ.ಸೀ. ಸಭಾಂಗಣದಲ್ಲಿ ದಿನಾಂಕ 23-04-2024ರಂದು ಬೆಳಗ್ಗೆ 10-30ಕ್ಕೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಮೈಸೂರಿನ ಕನ್ನಡ ಪುಸ್ತಕ ಪ್ರಾಧಿಕಾರ ಮಳಿಗೆಯ ಶ್ರೀ ನಿಂಗರಾಜ್ ಚಿತ್ತಣ್ಣನವರ್ ಇವರಿಗೆ ‘ಎಂ. ಗೋಪಾಲಕೃಷ್ಣ ಅಡಿಗ ಪುಸ್ತಕ ಪರಿಚಾರಕ ಪ್ರಶಸ್ತಿ’ ಮತ್ತು ವಿಜಯಪುರ ಪುಸ್ತಕ ಪ್ರೀತಿಯ ಶ್ರೀಮತಿ ರೂಪಾ ಮತ್ತೀಕೆರೆಯವರಿಗೆ ‘ನಂಜನಗೂಡು ತಿರುಮಲಾಂಬ ಪ್ರಕಾಶನ ಪ್ರಶಸ್ತಿ’ ಪ್ರದಾನ ಮಾಡಲಾಗುವುದು.
ಉಡುಪಿ : ಉಡುಪಿಯ ಎಂ.ಜಿ.ಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ), ಹಾಗೂ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 20-04-2024ರ ಶನಿವಾರದಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಳಿಯ ಸಮಿತಿ ಅಧ್ಯಕ್ಷರಾದ ಡಾ. ನಾ. ದಾಮೋದರ ಶೆಟ್ಟಿ “ಎಲ್ಲರ ಮನಸ್ಸಿನಲ್ಲಿ ಕನ್ನಡ ಉಳಿಯಬೇಕು ಎಂಬ ಪ್ರಯತ್ನ ನಡೆಯುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆಯ ಪ್ರಾಮುಖ್ಯತೆಯನ್ನು ಕಡಿಮೆ ಮಾಡುವ ಪ್ರಯತ್ನ ವಿಶ್ವವಿದ್ಯಾನಿಲಯಗಳಿಂದ ಆಗುತ್ತಿದೆ, ಕನ್ನಡದ ಅವಸಾನದ ಕ್ರಿಯೆ ನಡೆಯುತ್ತಿದೆ. ಎಂದರು. ಪ್ರಶಸ್ತಿ ಪ್ರದಾನ ಮಾಡಿದ ನಾಡೋಜ ಕೆ.ಪಿ. ರಾವ್ ಮಾತನಾಡಿ “ಎಲ್ಲಾ ಕಾಲಗಳು ಒಳ್ಳೆಯ ಕಾಲಗಳು. ಕೇರಳಕ್ಕೆ ಹೋಗಿ ಕಲಿತು ಬರುವುದೇ ದಕ್ಷಿಣ ಕನ್ನಡದವರ ವೈಶಿಷ್ಯ. ಪಂಜೆಯವರು, ಮುಳಿಯ, ಗೋವಿಂದ ಪೈಗಳು ತಮ್ಮಲ್ಲೆ ಒಂದು ಸಮಾಜದ ಸೃಷ್ಟಿ ಮಾಡಿದರು.” ಎಂದರು. ಪ್ರಶಸ್ತಿ ಸ್ವೀಕರಿಸಿದ…
ಸುರತ್ಕಲ್ : ಗೋವಿಂದ ದಾಸ ಕಾಲೇಜಿನ ಗ್ರಂಥಾಲಯ ವಿಭಾಗವು, ಆಂತರಿಕ ಗುಣಮಟ್ಟ ಖಾತರಿ ಕೋಶದ ಸಹಭಾಗಿತ್ವದಲ್ಲಿ ನಡೆಸುತ್ತಿರುವ ‘ಪುಸ್ತಕ ಪ್ರೀತಿ’ ಪರಿಚಯ ಸರಣಿ ಕಾರ್ಯಕ್ರಮದಲ್ಲಿ, ಪ್ರಥಮ ಬಿ. ಕಾಂ. ವಿದ್ಯಾರ್ಥಿನಿ ಧನ್ಯಾ ಎ.ಎಸ್. ಇವರು 1997ರಲ್ಲಿ ಸಾಹಿತ್ಯ ಪ್ರಕಾಶನ ಹುಬ್ಬಳ್ಳಿ ಪ್ರಕಟಿಸಿದ, ಖ್ಯಾತ ಪತ್ರಕರ್ತ ಡಾ. ಪಾಟೀಲ ಪುಟ್ಟಪ್ಪ ವಿರಚಿತ ‘ಬದುಕಲು ಬೇಕು ಬದುಕುವ ಈ ಮಾತು’ ಎಂಬ ಪುಸ್ತಕವನ್ನು ಪರಿಚಯಿಸಿದರು. 75 ಲೇಖನಗಳ ಈ ಪುಸ್ತಕದಲ್ಲಿ ಲೇಖಕರ ಉದಾತ್ತ ಚಿಂತನೆ, ಅನುಭವ, ಆಳವಾದ ಆಲೋಚನೆಗಳು ಅವರ ನೆನಪಿನ ಅಂಕುರಗಳಾಗಿ ಮೂಡಿ ನಿಂತಿವೆ ಎಂದರು. ಬದುಕು ಪೂರ್ಣ ಸಿಹಿಯೂ ಅಲ್ಲ; ಪೂರ್ಣ ಕಹಿಯೂ ಅಲ್ಲ. ಅವುಗಳ ವಿವಿಧ ಪ್ರಮಾಣದ ಪಾಕ. ಕಹಿಯನ್ನು ಸಹಿಸುವ ಶಕ್ತಿ ಗಳಿಸಿದಂತೆ, ಜೀವನ ಮತ್ತಷ್ಟು ಬಲಗೊಳ್ಳುತ್ತದೆ. ಕಹಿಯ ಅನುಭವದಿಂದ ಸಿಹಿಗೆ ಮತ್ತಷ್ಟು ಕಳೆಯಿದೆ. ಕಹಿಯನ್ನು ಸಿಹಿಯನ್ನಾಗಿಸಿ ಸಮನಾಗಿ ಸ್ವೀಕರಿಸುವ ಜಾಣ್ಮೆಯೇ ಈ ಬದುಕು. ಮಿತ್ರರೇ, ಬದುಕು ಎಂದರೇನು? ವಿವರಿಸುವುದು ಕಷ್ಟ. ಪ್ರಶ್ನೆ ಒಂದು, ಉತ್ತರಗಳು ಹಲವು! ಸುತ್ತಲಿನ…
ಮಡಿಕೇರಿ : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಕಲಾಸಂಘ ಬೊಳುವಾರು ಪುತ್ತೂರು ಇವರು ಶ್ರೀ ರಾಮೋತ್ಸವ ಸಮಿತಿ ಮಡಿಕೇರಿ ಇವರಿಂದ ನಡೆಸಲ್ಪಡುವ 130ನೇ ವರ್ಷದ ರಾಮೋತ್ಸವದ ಅಂಗವಾಗಿ ಹಟ್ಟಿಯಂಗಡಿ ರಾಮಭಟ್ಟ ವಿರಚಿತ (ಶ್ರೀ ರಾಮ ದರ್ಶನ) ಎಂಬ ತಾಳಮದ್ದಳೆ ದಿನಾಂಕ 18-04-2024 ರಂದು ಮಡಿಕೇರಿಯಲ್ಲಿ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಸುಬ್ರಾಯ ಸಂಪಾಜೆ ಹಾಗೂ ಚೆಂಡೆ ಮದ್ದಳೆಗಳಲ್ಲಿ ಪದ್ಯಾಣ ಜಯರಾಮ ಭಟ್ , ಮುರಳೀಧರ ಕಲ್ಲೂರಾಯ ಸಹಕರಿಸಿದರು. ಹಿಮ್ಮೇಳದಲ್ಲಿ ಹನೂಮಂತನಾಗಿ ಶುಭಾ .ಜೆ.ಸಿ.ಅಡಿಗ, ಅರ್ಜುನನಾಗಿ ಕಿಶೋರಿ ದುಗ್ಗಪ್ಪ ನಡುಗಲ್ಲು, ವೃದ್ಧ ಬ್ರಾಹ್ಮಣ ಮತ್ತು ಶ್ರೀರಾಮನಾಗಿ ಗಾಯತ್ರಿ ಹೆಬ್ಬಾರ್ ಸಹಕರಿಸಿದರು. ರಾಮೋತ್ಸವ ಸಮಿತಿಯ ಕಾರ್ಯಾಧ್ಯಕ್ಷೆ ಗೀತಾ ಗಿರೀಶ್ ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ಕಾರ್ಯಕ್ರಮದ ಸಂಯೋಜಕ ಸುಬ್ರಾಯ ಸಂಪಾಜೆ ವಂದಿಸಿದರು. ರಾಮೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಅನಂತ ಸುಬ್ಬರಾವ್ ಕಲಾವಿದರಿಗೆ ಶುಭ ಹಾರೈಸಿದರು.
ಸೋಮವಾರಪೇಟೆಯಲ್ಲಿ ಪೂಜಾ ಸಾಮಾಗ್ರಿಗಳ ಮಳಿಗೆಯನ್ನು ಹೊಂದಿರುವ ಗಣೇಶ್ ಪಿ.ಎಲ್. ಇವರ ಸತಿಯಾಗಿ ಕೊಡಗಿಗೆ ಬಂದವರು ಯಶಸ್ವಿ ಗಣೇಶ್ ಸೋಮವಾರಪೇಟೆ. ಈ ಹಿಂದೆ ಕರ್ನಾಟಕ ರಾಜ್ಯವಾಗಿದ್ದ ಕಾಸರಗೋಡು ತಾಲೂಕಿನ ಪೆರ್ಲ ಗ್ರಾಮದ ಭಾಸ್ಕರ ನಾಯಕ್ ಮತ್ತು ರೇಖಾ ದಂಪತಿಯ ಪುತ್ರಿ. ತಮ್ಮ ವಿದ್ಯಾಭ್ಯಾಸವನ್ನು ಕೇರಳ ರಾಜ್ಯದಲ್ಲಿ ಇದ್ದರೂ ಸಹ ಕನ್ನಡದಲ್ಲಿಯೇ ಮಾಡಿರುತ್ತಾರೆ. ಪ್ರಾಥಮಿಕ ಶಿಕ್ಷಣವನ್ನು ಶ್ರೀ ಭಾರತೀ ವಿಧ್ಯಾಪೀಠ ಶಾಲೆ, ಬದಿಯಡ್ಕದಲ್ಲಿ 5ರಿಂದ 10ನೆಯ ತರಗತಿಯವರೆಗೆ ನವಜೀವನ ಪ್ರೌಢಶಾಲೆ ಪೆರಡಾಲದಲ್ಲಿ ಮುಗಿಸಿ ಪುತ್ತೂರಿನ ಸರ್ಕಾರಿ ಕಾಲೇಜಿನಲ್ಲಿ ಬಿ.ಬಿ.ಎಂ ಪದವಿಯನ್ಮು ಪಡೆದಿದ್ದಾರೆ. ಮುಂದೆ ಮೈಸೂರು ಜ್ಞಾನಗಂಗೋತ್ರಿ ಮುಕ್ತ ವಿಶ್ವವಿದ್ಯಾಲಯದಿಂದ ಎಂ.ಕಾಂ. ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಎಳೆಯ ವಯಸ್ಸಿನಿದಲೇ ಸಾಹಿತ್ಯ ಮತ್ತು ಸಂಗೀತದಲ್ಲಿ ಆಸಕ್ತಿ ಹೊಂದಿದ್ದವರು ಮದುವೆಯ ನಂತರವೂ ತಮ್ಮ ಮನೆಯವರ ಪ್ರೋತ್ಸಾಹದಿಂದ ಬರವಣಿಗೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಇವರು ತಮ್ಮ ‘ಮೌನರಾಗ’ ಕವನ ಸಂಕಲನವನ್ನು ಇತ್ತೀಚೆಗೆ ನೆಲ್ಲಿಹುದಿಕೇರಿಯಲ್ಲಿ ನಡೆದ ರಾಜ್ಯ ಮಹಿಳಾ ಸಂಘದ ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಮಾಡಿ ಸಾರಸ್ವತ ಲೋಕಕ್ಕೆ ಪದಾರ್ಪಣೆ ಮಾಡಿದ್ದಾರೆ. ಇವರ ಲೇಖನ…
ಮಂಗಳೂರು : ಕಲಾಭಿ ಥಿಯೇಟರ್ ಮಂಗಳೂರು, ಕೆನರಾ ಕಲ್ಚರಲ್ ಅಕಾಡೆಮಿಯ ಸಹಕಾರದೊಂದಿಗೆ 9ರಿಂದ 17 ವರ್ಷದ ಮಕ್ಕಳಿಗೆ ಹತ್ತು ದಿನಗಳ ವೃತ್ತಿಪರ ರಂಗಭೂಮಿ ಕಾರ್ಯಾಗಾರವು ದಿನಾಂಕ 11-04-2024ರಿಂದ 21-04-2024ರವರೆಗೆ ಕೊಡಿಯಾಲ್ ಬೈಲಿನ ಕೆನರಾ ಇಂಗ್ಲೀಷ್ ಹೈಯರ್ ಪ್ರೈಮರಿ ಶಾಲೆಯಲ್ಲಿ ‘ಅರಳು 2024’ ನಡೆಯುತ್ತಿದ್ದು, ಈ ಮಕ್ಕಳ ಶಿಬಿರದ ಕೊನೆಯ ದಿನ ‘ಮಕ್ಕಳ ನಾಟಕೋತ್ಸವ’ದಲ್ಲಿ ಅದ್ಭುತವಾದ ಎರಡು ನಾಟಕಗಳು ಮೂಡಿಬರಲಿವೆ. ಕೆ. ರಾಮಯ್ಯ ರಚಿಸಿರುವ ‘ಹಕ್ಕಿಹಾಡು’ ಎಂಬ ನಾಟಕವು ರಾಜು ಮಣಿಪಾಲ್ ಅವರ ನಿರ್ದೇಶನದಲ್ಲಿ, ಡಾ ಶ್ರೀಪಾದ್ ಭಟ್ ಸಂಗೀತದಲ್ಲಿ ಹಾಗೂ ಪ್ರಶಾಂತ್ ಉದ್ಯಾವರ ಅವರ ನೃತ್ಯ ಸಂಯೋಜನೆಯಲ್ಲಿ ಮೂಡಿಬರಲಿದ್ದು, ಮತ್ತೊಂದು ನಾಟಕವು ಲೀಲಾ ಗರಡಿ ಅವರು ರಚಿಸಿರುವ ‘ಕಪಟ ಸನ್ಯಾಸಿ ಮಾರ್ಜಾಲ ಮತ್ತು ಮೂಷಕ ಕುಲ’ ಆಗಿದ್ದು, ‘ಪ್ರಸಿದ್ಧ ಸನ್ಯಾಸಿ ವೇಷ ಧರಿಸಿದ ಬೆಕ್ಕಿನ ಕಥೆ‘ಯ ಮೇಲೆ ಆಧಾರಿತವಾಗಿದೆ. ಈ ನಾಟಕವು ರಮೇಶ್ ಕೆ. ಬೆಣಕಲ್ ಅವರ ನಿರ್ದೇಶನದಲ್ಲಿ ಹಾಗೂ ಮನೋಜ್, ವೀಕ್ಷಣ್ ಮತ್ತು ಭುವನ್ ಮಣಿಪಾಲ್ ಅವರ ಸಂಗೀತ ಸಾರಥ್ಯದಲ್ಲಿ…
ಉಡುಪಿ : ಭಾವನಾ ಪೌಂಡೇಶನ್ (ರಿ.) ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಉಡುಪಿಯ ನಾಗಲಕ್ಷ್ಮೀ ಶ್ರೀನಿವಾಸ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಹಾಗೂ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಾಫಿಕಲ್ ಆರ್ಟ್ಸ್ ಮತ್ತು ಸೈನ್ಸ್ ಮಾಹೆಯ ಸಹಯೋಗದಲ್ಲಿ ಆಯೋಜಿಸುತ್ತಿರುವ ಜನಪದ ಸರಣಿ ಕಲಾ ಕಾರ್ಯಾಗಾರಗಳ ಉದ್ಘಾಟನೆ ದಿನಾಂಕ 18-04-2024ರಂದು ನಡೆಯಿತು. ಈ ಕಾರ್ಯಾಗಾರವನ್ನು ನಿವೃತ್ತ ಪ್ರಾಂಶುಪಾಲರಾದ ಶ್ರೀ ಕೃಷ್ಣಮೂರ್ತಿರಾವ್ ಕಿದಿಯೂರು ಇವರು ಉದ್ಘಾಟಿಸಿ ಮಾತನಾಡಿ “ಭಾರತದ ದೇಸೀಯ ಕಲೆಗಳೆಲ್ಲ ಒಂದು ಮನೆಯ ಹಲವಾರು ಕೋಣೆಗಳಿದ್ದಂತೆ, ಈ ಕೋಣೆಗಳನ್ನು ಉಡುಪಿಯ ಕಲಾಸಕ್ತರಿಗೆ ಪರಿಚಯಿಸುತ್ತಿರುವುದು ಉತ್ತಮ ಕಾರ್ಯ ಎಂದು ಶ್ಲಾಘಿಸುತ್ತ, ಈ ತೆರನಾದ ಭಾರತದ ಮೂಲೆಮೂಲೆಯಲ್ಲಿನ ಕಲಾಪ್ರಕಾರಗಳನ್ನು ಇನ್ನಷ್ಟು ಯುವ ಪೀಳಿಗೆ ಕಲಿತು ಆಸ್ವಾದಿಸಬೇಕು” ಎಂಬುದಾಗಿ ಅಭಿಪ್ರಾಯವಿತ್ತರು. ಈ ಸರಣಿ ಕಲಾ ಕಾರ್ಯಾಗಾರದ ಭಾಗವಾಗಿ ಮದುವೆಯ ಸಂದರ್ಭಗಳಲ್ಲಿ ಮಾಡಲಾಗುವ ಕೋಹ್ಬಾರ್ ಚಿತ್ರಕಲೆ, ಟಿಕುಲಿ ಹಾಗೂ ಮಂಜೂಷಾ ಚಿತ್ರಕಲೆ ಮತ್ತು ಜಾಲಿ ಫ್ರೇಂ ವಿನ್ಯಾಸಗಳ ಕಲೆಯನ್ನು ಈ ಬಾರಿ ಪರಿಚಯಿಸುತ್ತಿದ್ದು, ಬಿಹಾರದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ…
ಕನ್ನಡದ ಪಾಲಿಗೆ ಪೌರಾಣಿಕ ಕಾದಂಬರಿಗಳು ಹೊಸತೇನಲ್ಲ. ದೇವುಡು ಅವರಿಂದ ತೊಡಗಿ ಎಸ್.ಎಲ್. ಭೈರಪ್ಪನವರೆಗೆ ಅವುಗಳ ವ್ಯಾಪ್ತಿ ಇದೆ. ಮಾಸ್ತಿ, ಕುವೆಂಪು, ಪು.ತಿ.ನ., ಗೋಪಾಲಕೃಷ್ಣ ಅಡಿಗ ಮುಂತಾದವರು ಕತೆ, ಕಾವ್ಯ, ಮಹಾಕಾವ್ಯ, ನಾಟಕಗಳ ಮೂಲಕ ಪುರಾಣ ಕಥನವನ್ನು ಆಧುನಿಕ ಕಾಲಕ್ಕೆ ತಂದಿದ್ದಾರೆ. ಪೌರಾಣಿಕ ಪ್ರಸಂಗಗಳನ್ನು ಆಧರಿಸಿದ ಸಂಸ್ಕೃತ ಕೃತಿಗಳ ಅನುವಾದಗಳೊಂದಿಗೆ ಮೂಲ ಪುರಾಣಗಳ ಭಾಷಾಂತರಗಳಲ್ಲದೆ ಅವುಗಳನ್ನು ಕುರಿತ ಸಂಶೋಧನೆ, ವಿಮರ್ಶೆಗಳೂ ಅಧ್ಯಯನ ಯೋಗ್ಯವಾಗಿವೆ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ತೆಕ್ಕುಂಜ ಅವರ ‘ಮಂಡೋದರಿ’ ಎಂಬ ಕಾದಂಬರಿಯನ್ನು ಯಕ್ಷಗಾನ ಪರಂಪರೆಯ ಆಧಾರದಲ್ಲಿ ಮೂಡಿ ಬಂದ ರಚನೆ ಎನ್ನಬಹುದು. ಆದ್ದರಿಂದ ಅವರಿಗೆ ರಾಮಾಯಣದ ಪಾತ್ರಗಳ ಅತಿಮಾನುಷ ಗುಣಗಳನ್ನು ಬದಿಗಿರಿಸದೆ, ಅವರನ್ನು ಶಕ್ತಿ ದೌರ್ಬಲ್ಯಗಳಿರುವ ಸಾಮಾನ್ಯ ಮನುಷ್ಯರಂತೆ ಕಾಣದೆ ಮೂಲಕ್ಕೆ ಹೆಚ್ಚು ನಿಷ್ಠರಾಗಿದ್ದುಕೊಂಡೇ ಪಾತ್ರಗಳನ್ನು ಚಿತ್ರಿಸಲು ಸಾಧ್ಯವಾಗಿದೆ. ಇದರ ಹಿಂದೆ ಲೇಖಕರ ವಿಶೇಷ ಧ್ಯಾನ- ಅಧ್ಯಯನ, ಇತಿಹಾಸ ಪ್ರಜ್ಞೆ, ಪುರಾಣಾದಿ ಸಾಹಿತ್ಯಗಳು ಮೂಡಿಸಿದ ಭಾರತೀಯ ಸಂಸ್ಕೃತಿಯ ಪ್ರಭಾವಗಳು ಕೆಲಸ ಮಾಡಿವೆ. ಅನಲೆಯ ಪಾತ್ರ ಚಿತ್ರಣಕ್ಕೆ ಕುವೆಂಪು ಅವರ ‘ಶ್ರೀರಾಮಾಯಣ…
ಧಾರವಾಡ : ಯಕ್ಷಗಾನ ಮತ್ತು ಸಂಸ್ಕೃತಿ ಸಂಘ ಧಾರವಾಡ ಇವರಿಂದ ಹನುಮ ಜಯಂತಿ ಪ್ರಯುಕ್ತ ‘ಚೂಡಾಮಣಿ’ ಪ್ರಸಂಗದ ಯಕ್ಷಗಾನ ತಾಳಮದ್ದಳೆಯು ದಿನಾಂಕ 22-04-2024ರಂದು ಸಂಜೆ ಗಂಟೆ 6-30ಕ್ಕೆ ಧಾರವಾಡದ ಸಿವಿಲ್ ಕೋರ್ಟ್ ಆವರಣದಲ್ಲಿ ನಡೆಯಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಮಂಜುನಾಥ ಹೆಗಡೆ ಮತ್ತು ಶ್ರೀ ನರಸಿಂಹ ಸ್ವಾಮಿ, ಮದ್ದಳೆಯಲ್ಲಿ ಶ್ರೀ ಶ್ರೀಪಾದ ಭಟ್ ಮೂಡಗಾರು ಹಾಗೂ ಚಂಡೆಯಲ್ಲಿ ಶ್ರೀ ನಾರಾಯಣ ಕೋಮಾರ್ ಮತ್ತು ಮುಮ್ಮೇಳದಲ್ಲಿ ರಾಮನಾಗಿ ಶ್ರೀ ಆನಂದ ಭಟ್, ಲಕ್ಷ್ಮಣನಾಗಿ ಶ್ರೀಮತಿ ವಾಸವಿ ಹೆಗಡೆ, ಸುಗ್ರೀವನಾಗಿ ಶ್ರೀಮತಿ ವಾಣಿಶ್ರೀ ಕೊಡ್ಲೆಕೆರೆ, ಹನುಮಂತನಾಗಿ ವಿದ್ವಾನ್ ವಿನಾಯಕ ಭಟ್ ಶೇಡಿಮನೆ, ಜಾಂಬವಂತನಾಗಿ ಶ್ರೀಮತಿ ಶಶಿಕಲಾ ಜೋಶಿ, ಸಂಪಾತಿಯಾಗಿ ಶ್ರೀ ಪ್ರಕಾಶ ಸಂಣಿಗಮ್ಯನವರ್, ರಾವಣನಾಗಿ ಶ್ರೀ ಎಸ್.ಆರ್. ಹೆಗಡೆ, ಸೀತೆಯಾಗಿ ಶ್ರೀ ವಿ.ಜಿ. ಭಟ್, ಸರಮೆಯಾಗಿ ಶ್ರೀ ಅಭಿನಂದನ, ಲಂಕಿಣಿಯಾಗಿ ಶ್ರೀ ಮಂಜುನಾಥ್ ಭಟ್ ಹೆಬ್ರೆ, ತ್ರಣಬಿಂದುವಾಗಿ ಶ್ರೀ ಸುರೇಶ್ ಭಟ್ ಧಾರವಾಡ ಇವರುಗಳು ಸಹಕರಿಸಲಿದ್ದಾರೆ.
ಉಡುಪಿ : ಉಡುಪಿ ಮಟಪಾಡಿಯ ಯಕ್ಷಗಾನದ ಖ್ಯಾತ ಹಾಸ್ಯ ಕಲಾವಿದ ಶ್ರೀ ಮಟಪಾಡಿ ಪ್ರಭಾಕರ್ ಆಚಾರ್ಯ ದಿನಾಂಕ 19-04-2024ರಂದು ಉಡುಪಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ನಿಧನ ಹೊಂದಿದರು ಅವರಿಗೆ 63ವರ್ಷ ವಯಸ್ಸಾಗಿತ್ತು. ಯಕ್ಷಗಾನದ ಖ್ಯಾತ ಮದ್ದಳೆವಾದಕ ಶ್ರೀ ಶಂಕರ ಆಚಾರ್ಯ ಮತ್ತು ಶ್ರೀಮತಿ ಕಲ್ಯಾಣಿ ದಂಪತಿಯ ಪ್ರಥಮ ಮಗನಾಗಿ ದಿನಾಂಕ 01-06-1961ರಲ್ಲಿ ಜನಿಸಿದ ಇವರು ತೋನ್ಸೆ ಜಯಂತ ಕುಮಾರ ಇವರ ಶಿಷ್ಯರಾಗಿ ಯಕ್ಷಗಾನದಲ್ಲಿ ಪ್ರಭುತ್ವವನ್ನು ಸಾಧಿಸಿದರು. ಉತ್ತಮ ಭಜನೆ ಗಾಯಕರಾಗಿದ್ದ ಇವರು ಹಲವಾರು ಭಜನೆ ಕಾರ್ಯಕ್ರಮಗಳಲ್ಲಿ ಹಾಗೂ ಶನಿಕಥಾ ಪಾರಾಯಣಗಳಲ್ಲಿ ಭಾಗವಹಿಸಿದ್ದರು. ತಮ್ಮ 14ನೇ ವಯಸ್ಸಿನಿಂದ ಯಕ್ಷಗಾನ ಕ್ಷೇತ್ರದಲ್ಲಿ ದುಡಿದು ಹಾಸ್ಯ ಕಲಾವಿದ ಎಂದೇ ಪ್ರಸಿದ್ಧರಾಗಿದ್ದರೂ ಯಕ್ಷಗಾನದ ಎಲ್ಲಾ ಪ್ರಕಾರಗಳಲ್ಲೂ ಕೈಯಾಡಿಸಿ ಪಳಗಿದವರು. ಉತ್ತಮ ಅರ್ಥದಾರಿಯಾಗಿದ್ದ ಇವರು ಹಲವಾರು ತಾಳಮದ್ದಳೆ ಗಳಲ್ಲಿ ಭಾಗವಹಿಸಿದ್ದರು ಹಾಗೂ ಮಟಪಾಡಿ ನಂದಿಕೇಶ್ವರ ಯಕ್ಷಗಾನ ಸಂಘದ ಅಧ್ಯಕ್ಷರಾಗಿದ್ದರು. ಶ್ರೀಯುತರು ಪತ್ನಿ ವಸಂತಿ ಆಚಾರ್ಯ, ಮಕ್ಕಳಾದ ಶ್ರೀ ಸುಬ್ರಹ್ಮಣ್ಯ ಆಚಾರ್ಯ, ಶ್ರೀಮತಿ ಸುಕನ್ಯಾ ಆಚಾರ್ಯ, ಕುಮಾರಿ ಸುಮನಾ ಆಚಾರ್ಯ…