Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು: ಬಸವನಗುಡಿಯ ನ್ಯಾಷನಲ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರಮೋದ್ ಮುತಾಲಿಕ್ (68) ಅವರು ನಗರದಲ್ಲಿ ನಿಧನರಾಗಿದ್ದಾರೆ. ಕೆಲ ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಪ್ರಮೋದ್ ಮುತಾಲಿಕ್ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಇಹಲೋಕ ತ್ಯಜಿಸಿದ್ದಾರೆ. ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯಲ್ಲಿ ವಾಸಿಸುತ್ತಿದ್ದ ಅವರಿಗೆ ಒಬ್ಬ ಪುತ್ರ ಮತ್ತು ಪತ್ನಿ ಇದ್ದಾರೆ. ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿಯವರಾದ ಪ್ರಮೋದ್ ಮುತಾಲಿಕ್ ಅವರು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ 37 ವರ್ಷ ಆಂಗ್ಲ ಭಾಷೆಯ ಅಧ್ಯಾಪಕರಾಗಿ, ಕೆಲ ವರ್ಷಗಳ ಕಾಲ ಉಪ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದುಕೊಂಡಿದ್ದರು. ಆಂಗ್ಲ ಮತ್ತು ಕನ್ನಡ ಭಾಷೆಗಳಲ್ಲಿ ಪ್ರಭುತ್ವ ಹೊಂದಿದ್ದ ಮುತಾಲಿಕ್ ಅವರು ಅನುವಾದ ಮತ್ತು ವಿಮರ್ಶೆಯಲ್ಲಿ ಸಾಕಷ್ಟು ಕೃಷಿ ಮಾಡಿದ್ದರು. ಜಗತ್ತಿನ ಶ್ರೇಷ್ಠ ಕೃತಿಗಳನ್ನು ಕನ್ನಡಕ್ಕೆ ಮತ್ತು ಕನ್ನಡದ ಶ್ರೇಷ್ಠ ಕೃತಿಗಳನ್ನು ಆಂಗ್ಲ ಭಾಷೆಗೆ ಅನುವಾದಿಸಿದ್ದಾರೆ. ಚಿನು ಅಂಬೆಯ Things fall apart, ಆರ್.ಕೆ. ನಾರಾಯಣ್ ಅವರ…
ಪುತ್ತೂರು : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ವಿಂಶತಿ ಸರಣಿ ತಾಳಮದ್ದಳೆ 14 ಸಂಘದ ಸದಸ್ಯೆ ಜಯಂತಿ ಹೆಬ್ಬಾರ್ ಇವರ ಪ್ರಾಯೋಜಕತ್ವದಲ್ಲಿ ಬನ್ನೂರು ಭಾರತಿ ನಗರದ ಶ್ರೀ ಬಲಮುರಿ ವಿದ್ಯಾಗಣಪತಿ ದೇವಳದ ಆಶ್ರಯದಲ್ಲಿ ದಿನಾಂಕ 25 ನವೆಂಬರ್ 2024ರಂದು ನಡೆಯಿತು. ಹಳೆಯಂಗಡಿ ರಾಮ ಭಟ್ಟ ವಿರಚಿತ ‘ಶರಸೇತು ಬಂಧನ’ ತಾಳಮದ್ದಳೆಯಲ್ಲಿ ಹಿಮ್ಮೇಳದಲ್ಲಿ ಭಾಗವತರಾಗಿ ಕುಸುಮಾಕರ ಆಚಾರ್ಯ ಹಳೆನೇರೆಂಕಿ ಹಾಗೂ ಚೆಂಡೆ ಮದ್ದಳೆಯಲ್ಲಿ ಪದ್ಯಾಣ ಶಂಕರನಾರಾಯಣ ಭಟ್ ಮತ್ತು ಮಾಸ್ಟರ್ ಪರೀಕ್ಷಿತ್ ಸಹಕರಿಸಿದರು. ಮುಮ್ಮೇಳದಲ್ಲಿ ಹನೂಮಂತ (ಗುಂಡ್ಯಡ್ಕ ಈಶ್ವರ ಭಟ್), ಅರ್ಜುನ (ಭಾಸ್ಕರ್ ಬಾರ್ಯ ಮತ್ತು ಮಾಂಬಾಡಿ ವೇಣುಗೋಪಾಲ ಭಟ್), ವೃದ್ದ ವಿಪ್ರ (ಗುಡ್ಡಪ್ಪ ಬಲ್ಯ), ಶ್ರೀ ರಾಮ (ಬಡೆಕ್ಕಿಲ ಚಂದ್ರಶೇಖರ್ ಭಟ್) ಸಹಕರಿಸಿದರು. ನಿರ್ದೇಶಕ ಭಾಸ್ಕರ್ ಬಾರ್ಯ ಸ್ವಾಗತಿಸಿ, ಚಂದ್ರಶೇಖರ್ ಭಟ್ ವಂದಿಸಿದರು.
ಸಾಹಿತ್ಯದಲ್ಲಿ ಪತ್ತೇದಾರಿ ಕಥೆ-ಕಾದಂಬರಿಗಳ ಪ್ರಸ್ತುತತೆ ಏನು ? ಓದುಗರ ಕುತೂಹಲ ಹೆಚ್ಚಿಸುತ್ತ ಅವರಿಗೆ ಮನೋರಂಜನೆ ನೀಡುವುದೆ ? ಸಮಾಜದಲ್ಲಿ ನಡೆಯುವ ಅಪರಾಧಗಳ ಕುರಿತು ಮಾಹಿತಿ ನೀಡುವುದೆ ? ಪತ್ತೇದಾರರ ಜಾಣ್ಮೆಯ ಬಹುಸಾಧ್ಯತೆಗಳ ಪ್ರದರ್ಶನಕ್ಕೊಂದು ವೇದಿಕೆ ಕಲ್ಪಿಸುವುದೆ ? ಅಥವಾ ಜನಪ್ರಿಯ ಸಾಹಿತ್ಯ ಜಗತ್ತಿನಲ್ಲಿ ಒಪ್ಪಿತ ರೂಢಿಗತ ಸಂಪ್ರದಾಯವಾಗಿ ಬೆಳೆದು ಬಂದಿರುವ ಬರೇ ಒಂದು ಕಥಾ ಕಾಲಕ್ಷೇಪವೆ ? ಈ ಬಗ್ಗೆ ಚಿಂತನೆ ನಡೆಸುತ್ತಿದ್ದಂತೆ ನನಗನ್ನಿಸಿದ್ದು ಸಾಹಿತ್ಯದ ಈ ಒಂದು ಪ್ರಕಾರ ದಿನೇ ದಿನೇ ಅಪರಾಧಗಳು ಹೆಚ್ಚುತ್ತಿರುವ ನಮ್ಮ ಇಂದಿನ ಸಂದರ್ಭದಲ್ಲಿ ಅತ್ಯಗತ್ಯ ಎಂದು. ಅಪರಾಧಿಗಳನ್ನು ಪತ್ತೆ ಹಚ್ಚುವುದರ ಕುರಿತಾದ ಕಥೆಗಳು ನಮ್ಮ ಪಾರಂಪರಿಕ ಸಾಹಿತ್ಯದಲ್ಲೂ ಇದ್ದವು. ಆದರೆ ಅದು ಒಂದು ಪ್ರಕಾರವಾಗಿ ಬೆಳೆದಿರಲಿಲ್ಲ. 19ನೆಯ ಶತಮಾನದ ಪಾಶ್ಚಾತ್ಯ ಸಾಹಿತ್ಯದಲ್ಲಿ ಎಡ್ಗರ್ ಅಲನ್ ಪೋ, ಜಿ.ಕೆ. ಚೆಸ್ಟರ್ ಟನ್, ಆರ್ಥರ್ ಕಾನನ್ ಡಾಯ್ಲ್ ಮೊದಲಾದವರ ಮೂಲಕ ಅದು ಒಂದು ಶಿಸ್ತಾಗಿ ಬೆಳೆಯಿತು. ಅವರ ಎಲ್ಲರ ಕಥೆಗಳಲ್ಲಿ ಡಿಟೆಕ್ಟಿವ್ ಅನ್ನುವವನು ಬಹಳ ಮುಖ್ಯವಾದ ಒಂದು…
ಬೆಂಗಳೂರು : ಮುಳಿಯ ಜ್ಯುವೆಲ್ಸ್ ಬೆಂಗಳೂರಿನ ಮಳಿಗೆಯಲ್ಲಿ ಮಕ್ಕಳಿಗೆ ಕರ್ನಾಟಕದ ವಿವಿಧ ನೃತ್ಯ ಸ್ಪರ್ಧೆಯನ್ನು ಆಯೋಜಿಸುವ ಮೂಲಕ ಕನ್ನಡ ರಾಜ್ಯೋತ್ಸವವನ್ನು ದಿನಾಂಕ 24 ನವೆಂಬರ್ 2024ರಂದು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ ಹೋಟೆಲ್ ಮಾಲಕರ ಸಂಘದ ರಾಜ್ಯಾಧ್ಯಕ್ಷ ಜಿ. ಕೆ. ಶೆಟ್ಟಿ ಮಾತನಾಡಿ “ಮಕ್ಕಳನ್ನು ಹುರಿದುಂಬಿಸುವ ಈ ಬಗೆಯ ಕಾರ್ಯಕ್ರಮ ತುಂಬಾ ಒಳ್ಳೆಯದು. ಹಾಗೆಯೆ ಹೋಟೆಲ್ ಕಾರ್ಮಿಕರಲ್ಲಿ ಕನ್ನಡದ ಅಭಿಮಾನ ಹೆಚ್ಚಾಗಿ ಕಾಣಬಹುದು.” ಎಂದರು. ಇನ್ನೋರ್ವ ಅತಿಥಿ, ಮಿಸೆಸ್ ಯುನಿವರ್ಸ ಶ್ರೀಮತಿ ಸತ್ಯವತಿ ಬಸವರಾಜು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ವೇಣುಶರ್ಮ ಮಾತನಾಡಿ “ಮುಳಿಯದ ವಿಶೇಷ ಡಿಸೈನ್ಗಳ ಮಾರಾಟದ ಜೊತೆಗೆ ಸಾಮಾಜಿಕ ಕಳಕಳಿ ಇರುವುದು ವಿಶೇಷ.” ಎಂದರು. ಈ ಕಾರ್ಯಕ್ರಮ ಸಂಧ್ಯಾ ಜಯರಾಮ್ ಇವರ ಸಹಯೋಗದಲ್ಲಿ ನಡೆಯಿತು . ಸಮಾರೋಪ ಸಮಾರಂಭದಲ್ಲಿ ಚಿತ್ರ ನಟ ಸ್ಟೈಲ್ ಶಿವು ಹಾಗೂ ಕಾಸಿಯಾದ ಗೌರವ ಕಾರ್ಯದರ್ಶಿ, ಉದ್ಯಮಿ ಶ್ರೀ ಸುರೇಶ್ ಯನ್. ಸಾಗರ್ ವೇದಿಕೆಯಲ್ಲಿದ್ದು, ವಿಜೇತರಿಗೆ ಬಹುಮಾನ ವಿತರಿಸಿದರು. ಮುಳಿಯ…
ಸುಳ್ಯ : ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ (ರಿ.) ಹಳೆಗೇಟು ಸುಳ್ಯ ಮತ್ತು ಮಹಾಬಲ ಲಲಿತ ಕಲಾ ಸಭಾ (ರಿ.) ಪುತ್ತೂರು ಇದರ ಸಹಯೋಗದಲ್ಲಿ ‘ಶಾಸ್ತ್ರೀಯ ಸಂಗೀತ ಸಂಭ್ರಮ’ ಕಾರ್ಯಕ್ರಮವನ್ನು ದಿನಾಂಕ 08 ಡಿಸೆಂಬರ್ 2024ರಂದು ಸಂಜೆ ಗಂಟೆ 5-45ಕ್ಕೆ ಸುಳ್ಯ ರಂಗಮನೆ ಹಳೆಗೇಟು ಇಲ್ಲಿ ಹಮ್ಮಿಕೊಳ್ಳಲಾಗಿದೆ. ಪದ್ಮ ಭೂಷಣ ವಿಶ್ವ ಮೋಹನ ಭಟ್ ಇವರ ಪುತ್ರ ತಂತಿ ಸಾಮ್ರಾಟ್ ಪಂಡಿತ್ ಸಲಿಲ್ ವಿ. ಭಟ್ ಇವರ ಸಾತ್ವಿಕ ವೀಣಾ ವಾದನಕ್ಕೆ ಶ್ರೀ ಹಿಮಾಂಶು ಮಹಂತ್ ವಡೋದರ ತಬಲ ಸಾಥ್ ನೀಡಲಿದ್ದಾರೆ ಮತ್ತು ಸುರಮಣಿ ಮಹಾಲಕ್ಷ್ಮೀ ಶೆಣೈ ಕಾರ್ಕಳ ಇವರ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಕ್ಕೆ ಶ್ರೀ ವಿಶ್ವನಾಥ್ ಭಟ್ ಎಣ್ಣೆಹೊಳೆ ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ.
ಮಂಗಳೂರು : ಕೀರ್ತಿಶೇಷ ಕುಂಬ್ಳೆ ಸುಂದರ ರಾವ್ ಸಂಸ್ಮರಣ ವೇದಿಕೆ ಮತ್ತು ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಇವರು ಜಂಟಿಯಾಗಿ ‘ಕುಂಬ್ಳೆ ಸುಂದರ ರಾವ್ ಸಂಸ್ಮರಣೆ’ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ದಿನಾಂಕ 14 ಡಿಸೆಂಬರ್ 2024ರಂದು ಸಂಜೆ 5-00 ಗಂಟೆಗೆ ಮಂಗಳೂರಿನ ಕೆನರಾ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಹಿರಿಯ ಸಾಹಿತಿ ಡಾ. ನಾ. ದಾಮೋದರ ಶೆಟ್ಟಿ ಇವರು ವಹಿಸಲಿದ್ದು, ಯಕ್ಷಗಾನ ಅರ್ಥಧಾರಿ ಮತ್ತು ವಿಮರ್ಶಕರಾದ ಶ್ರೀ ಭಾಸ್ಕರ ರೈ ಕುಕ್ಕುವಳ್ಳಿ ಇವರು ಸಂಸ್ಮರಣೆ ಭಾಷಣ ಮಾಡಲಿದ್ದಾರೆ. ಇದೇ ವೇದಿಕೆಯಲ್ಲಿ ಹಿರಿಯ ಯಕ್ಷಗಾನ ಕಲಾವಿದರಾದ ಶ್ರೀ ಅರುವ ಕೊರಗಪ್ಪ ಶೆಟ್ಟಿ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ‘ಸುಧನ್ವ ಮೋಕ್ಷ’ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
ಬೆಂಗಳೂರು : ಕರ್ನಾಟಕ ಲೇಖಕಿಯರ ಸಂಘ ನೀಡುವ ‘ಎಚ್.ವಿ. ಸಾವಿತ್ರಮ್ಮ ಪ್ರಶಸ್ತಿ’ ಪ್ರಕಟವಾಗಿದೆ. ಒಟ್ಟು ನಾಲ್ಕು ವರ್ಷಗಳ ಪ್ರಶಸ್ತಿ ಘೋಷಣೆಯಾಗಿದ್ದು, 2020, 2021, 2022 ಹಾಗೂ 2023ನೆಯ ಸಾಲಿಗೆ ಅನುಕ್ರಮವಾಗಿ ಅಲಕಾ ಕಟ್ಟೆಮನೆಯವರ ‘ಹೊರಳು ಹಾದಿಯ ನೋಟ’ ಕಥಾ ಸಂಕಲನ, ಎಲ್.ವಿ. ಶಾಂತಕುಮಾರಿಯವರ ‘ಎಪಿಕ್ಟೆಟಸ್’ ಅನುವಾದ ಕೃತಿ, ಹೆಚ್.ಆರ್. ಸುಜಾತಾ ಅವರ ‘ಮಣಿಬಾಲೆ’ ಕಾದಂಬರಿ ಹಾಗೂ ಅನುಪಮಾ ಪ್ರಸಾದ್ ಅವರ ‘ಚೋದ್ಯ’ ಕಥಾಸಂಕಲನ ಆಯ್ಕೆಯಾಗಿವೆ ಎಂದು ಸಂಘದ ಅಧ್ಯಕ್ಷರಾದ ಡಾ. ಎಚ್.ಎಲ್. ಪುಷ್ಪ ತಿಳಿಸಿದ್ದಾರೆ. ಅಲಕಾ ಕಟ್ಟೆಮನೆ ಎಲ್.ವಿ. ಶಾಂತಕುಮಾರಿ ಹೆಚ್.ಆರ್. ಸುಜಾತಾ ಅನುಪಮಾ ಪ್ರಸಾದ್ ಪ್ರಶಸ್ತಿಯು ರೂ.25,000/- ನಗದು ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿದ್ದು, ದಿನಾಂಕ 08 ನವೆಂಬರ್ 2024ರಂದು ಬೆಳಿಗ್ಗೆ ಗಂಟೆ 10-30ಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ. ಖ್ಯಾತ ನ್ಯಾಯವಾದಿಗಳಾದ ಹೇಮಲತಾ ಮಹಿಷಿಯವರು ಪ್ರಶಸ್ತಿ ಪ್ರದಾನ ಮಾಡಲಿದ್ದು, ವಿಮರ್ಶಕ ಬಂಜಗೆರೆ ಜಯಪ್ರಕಾಶ್ ಇವರು ಮುಖ್ಯ ಅತಿಥಿಗಳಾಗಿರುತ್ತಾರೆ. ಖ್ಯಾತ ಅನುವಾದಕಿ ಹಾಗೂ ಕತೆ,…
ಮಂಗಳೂರು : ಶ್ರೀ ಕಟೀಲು ಮೇಳದಲ್ಲಿ 35 ವರ್ಷಗಳಿಂದ ಕಲಾಸೇವೆ ಮಾಡುತ್ತಿರುವ ಬಣ್ಣದ ವೇಷಧಾರಿ ನಗ್ರಿ ಮಹಾಬಲ ರೈ ಇವರಿಗೆ ಕದ್ರಿ ಯಕ್ಷ ಬಳಗ ‘ಕದ್ರಿ ವಿಷ್ಣು ಪ್ರಶಸ್ತಿ – 2024’ ನೀಡಿ ಗೌರವಿಸಿತು. ಕದ್ರಿ ಯಕ್ಷ ಬಳಗದ ವತಿಯಿಂದ ದಿನಾಂಕ 27 ನವೆಂಬರ್ 2024ರಂದು ಆಯೋಜಿಸಲಾದ ಕಟೀಲು ಮೇಳದ ಸೇವೆ ಆಟದ ಸಂದರ್ಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸಹಭಾಗಿತ್ವದಲ್ಲಿ ಸದಸ್ಯ ಮೋಹನ್ ಕೊಪ್ಪಳ ಕದ್ರಿ ಅವರ ಉಪಸ್ಥಿತಿಯಲ್ಲಿ ಸುಧಾಕರ ರಾವ್ ಪೇಜಾವರ ಅವರು ಕದ್ರಿ ವಿಷ್ಣು ಸಂಸ್ಮರಣೆ ಮಾಡಿದರು. ಬಳಗದ ಅಧ್ಯಕ್ಷ ನವನೀತ ಶೆಟ್ಟಿ, ಭಾಸ್ಕರ ಶೆಟ್ಟಿ, ಗುರುದೇವ್ ಕಲ್ಯಾಣ್, ಸೀತಾರಾಮ್ ಅರೆಕೆರೆಬೈಲ್, ರವೀಂದ್ರನಾಥ ಶೆಟ್ಟಿ ಮುಂಡೂರು ದೊಡ್ಡಮನೆ, ಗೋಕುಲ್ ಕದ್ರಿ, ಬೆಟ್ಟಂಪಾಡಿ ಸುಂದರ ಶೆಟ್ಟಿ, ಜಯಶೀಲ ಅಡ್ಯಂತಾಯ, ತಾರಾನಾಥ್ ಶೆಟ್ಟಿ ಬೋಳಾರ, ರಾಮಚಂದ್ರ ಭಟ್ ಎಲ್ಲೂರು, ನಿವೇದಿತಾ ಶೆಟ್ಟಿ, ಭಾಸ್ಕರ ರೈ ಕುಕ್ಕುವಳ್ಳಿ, ಹರೀಶ್ ಕುಮಾರ್ ಚಿತ್ರಾಪುರ, ಮೂಲ್ಕಿ ಕರುಣಾಕರ ಶೆಟ್ಟಿ, ಪಣಂಬೂರು…
ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ಮಹಿಳಾ ವಿಂಶತಿ ಸರಣಿ -18 ತಾಳಮದ್ದಳೆ ಕಾರ್ಯಕ್ರಮವು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಳದ ನವಗ್ರಹ ಗುಡಿಯಲ್ಲಿ ‘ಕರ್ಣ ಪರ್ವ’ ಎಂಬ ಆಖ್ಯಾನದೊಂದಿಗೆ ದಿನಾಂಕ 02 ಡಿಸೆಂಬರ್ 2024ರ ಸೋಮವಾರ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಲಕ್ಷ್ಮೀನಾರಾಯಣ ಭಟ್ ಬಟ್ಯಮೂಲೆ, ನಿತೀಶ್ ಎಂಕಣ್ಣ ಮೂಲೆ ಹಾಗೂ ಚೆಂಡೆ ಮದ್ದಳೆಗಳಲ್ಲಿ ಪಿ.ಟಿ. ಜಯರಾಮ್ ಭಟ್, ಮುರಳಿಧರ ಕಲ್ಲೂರಾಯ ಮತ್ತು ಮಾಸ್ಟರ್ ಪರೀಕ್ಷಿತ್ ಹಂದ್ರಟ್ಟ ಸಹಕರಿಸಿದರು. ಮುಮ್ಮೇಳದಲ್ಲಿ ಗುಂಡ್ಯಡ್ಕ ಈಶ್ವರ ಭಟ್ (ಕರ್ಣ), ಭಾಸ್ಕರ ಬಾರ್ಯ (ಶ್ರೀ ಕೃಷ್ಣ), ಮಾಂಬಾಡಿ ವೇಣುಗೋಪಾಲ ಭಟ್ (ಅರ್ಜುನ), ಗುಡ್ಡಪ್ಪ ಬಲ್ಯ (ಶಲ್ಯ), ದುಗ್ಗಪ್ಪ ನಡುಗಲ್ಲು (ಅಶ್ವಸೇನ) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ಗೌರವ ಕಾರ್ಯದರ್ಶಿ ರಂಗನಾಥ ರಾವ್ ವಂದಿಸಿದರು.
ಮಂಗಳೂರು : ತಲಪಾಡಿಯ ಶಾರದಾ ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನಲ್ಲಿ ‘ಕನ್ನಡ ಹಬ್ಬ’ವನ್ನು ದಿನಾಂಕ 27 ನವೆಂಬರ್ 2024ರಂದು ಸಂಭ್ರಮದಿಂದ ಆಚರಣೆ ಮಾಡಲಾಯಿತು. ಕಾರ್ಯಕ್ರಮವನ್ನು ಕನ್ನಡ ತಾಯಿ ಭುವನೇಶ್ವರಿ ಭಾವಚಿತ್ರ ಮತ್ತು ಅದರ ಸುತ್ತ ಇರುವ ಪಂಪ, ರನ್ನ, ಜನ್ನರಿಂದ ಹಿಡಿದು ಇತ್ತೀಚಿನ ಕವಿಗಳ ಮಹಾ ಕಾವ್ಯಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಆರಂಭಿಸಲಾಯಿತು. ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಹಚ್ಚೇವು ಕನ್ನಡದ ದೀಪ ಎಂಬ ಹಾಡಿನೊಂದಿಗೆ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿದ್ಯಾರ್ಥಿನಿಯರಿಂದ ನಾಡಗೀತೆ ಗಾಯನದ ನಂತರ ಕಾಲೇಜಿನ ಪ್ರಾಂಶುಪಾಲ ವಿನಾಯಕ್ ಬಿ. ಜಿ. ಗಣ್ಯರನ್ನು ಸ್ವಾಗತಿಸಿದರು. ಗಣ್ಯರಿಗೆ ಕನ್ನಡದ ಶಾಲು ಹೊದಿಸಿ ಹೂ ನೀಡಿ ಸ್ವಾಗತಿಸಲಾಯಿತು. ಇದೇ ಸಂದರ್ಭದಲ್ಲಿ ಸಾಹಿತ್ಯ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಂಗಳೂರು ವಿ.ವಿ. ಇಲ್ಲಿನ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಚಾರ್ಯ ಡಾ. ಧನಂಜಯ್ ಕುಂಬ್ಳೆ ಇವರನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ.ಬಿ. ಪುರಾಣಿಕ್ ಇವರು ಸನ್ಮಾನಿಸಿದರು. ಉಪನ್ಯಾಸಕಿ ಸಹನಾ ಪರಿಚಯಿಸಿದರು. ಈ ವೇಳೆ ಡಾ.…