Author: roovari

ಮಂಗಳೂರು : ದಸರಾ ಹಬ್ಬದ ಅಂಗವಾಗಿ ಮಂಗಳೂರಿನ ಧ್ಯಾನ ಸಂಗೀತ ಅಕಾಡೆಮಿ ಕಲಾ ಟ್ರಸ್ಟಿನ ವತಿಯಿಂದ ಉರ್ವಸ್ಟೋರ್‌ನ ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಸಭಾಂಗಣದಲ್ಲಿ ‘ಶಾರದಾ ವಂದನಾ’ ಸಂಗೀತ ಕಾರ್ಯಕ್ರಮ ದಿನಾಂಕ 21-10-2023ರಂದು ನಡೆಯಿತು. ಸಂಗೀತ ಪೋಷಕರಾದ ಸತೀಶ್ ಕಾಮತ್, ಲಕ್ಷ್ಮಣ್ ಕುಂದರ್, ಸಂಘದ ಅಧ್ಯಕ್ಷರಾದ ಜ್ಯೋತಿ ಚೇಳೈರು ಉದ್ಘಾಟಿಸಿದರು. ಅಕಾಡೆಮಿಯ ವಿದ್ಯಾರ್ಥಿಗಳಾದ ಕಶ್ವಿ ಉಡುಪಿ, ಆಯುಶ್ ಪ್ರೇಮ್, ಸಾನ್ವಿ ನಾಯಕ, ಸಹನಾ ಕಿಣಿ ದಾಸ ಕೀರ್ತನೆಯನ್ನು ನಡೆಸಿಕೊಟ್ಟರು. ಸುಶಾನ್ ಸಾಲ್ಯಾನ್, ಲೋಲಾಕ್ಷಿಯವರು ಮರಾಠಿ ಅಭಂಗ ಪ್ರಸ್ತುತ ಪಡಿಸಿದರು. ಉದಯೋನ್ಮುಖ ಕಲಾವಿದರಾದ ಪ್ರಧಯ್‌ ಶೆಣೈ, ಕೀರ್ತನ್ ನಾಯ್ಗ, ಅಮಿತ್ ಕುಮಾರ್ ಬೆಂಗ್ರೆ ಇವರೆಲ್ಲಾ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಛೇರಿ ನಡೆಸಿಕೊಟ್ಟರು. ಹಾರ್ಮೋನಿಯಂನಲ್ಲಿ ಹೇಮಂತ್ ಭಾಗವತ್, ತಬಲಾದಲ್ಲಿ ಶ್ರೀವತ್ಸ ಶರ್ಮಾ ಪಡುಬಿದ್ರೆ ಮತ್ತು ಸಂತೋಷ್ ಸಾಲ್ಯಾನ್, ತಾಳದಲ್ಲಿ ರಾಮನಾಥ ಕಿಣಿ ಸಹಕರಿಸಿದರು. ರವೀಂದ್ರ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.

Read More

ಕಾಸರಗೋಡು : ತುಳು ಲಿಪಿ ಬ್ರಹ್ಮನೆಂದೇ ಖ್ಯಾತರಾದ, ತಾಡೆಯೋಲೆ, ಶಿಲಾಶಾಸನದಲ್ಲಿ ಮಾತ್ರ ಕಾಣುತಿದ್ದ ತುಳು ಲಿಪಿಯನ್ನು ಸಂಶೋಧನೆ ಮಾಡಿ ಜನ ಸಾಮಾನ್ಯರೂ ಸುಲಭವಾಗಿ ಕಲಿಯಬಹುದೆಂದು ಲೋಕಕ್ಕೆ ತೋರಿಸಿಕೊಟ್ಟ ಡಾ. ಪುಂಡೂರು ವೆಂಕಟರಾಜ ಪುಣಿಂಚತ್ತಾಯರ ಜನ್ಮದಿನ ದಿನಾಂಕ 10-10-2023ರಂದು ‘ವಿಶ್ವ ತುಳು ಲಿಪಿ ದಿನ’ವನ್ನು ಜೈ ತುಲುನಾಡ್ (ರಿ.) ಕಾಸರಗೋಡು ವಲಯದ ವತಿಯಿಂದ ಪುಣಿಂಚತ್ತಾಯರು ಕಲಿತ ಶಾಲೆ ಮಹಾಜನ ಸಂಸ್ಕೃತ ಕಾಲೇಜು ನೀರ್ಚಾಲು ಪೆರಡಾಲ ಇದರ ಸಹಯೋಗದೊಂದಿಗೆ ನಡೆಸಲಾಯಿತು. ಶಾಲೆಯ ವ್ಯವಸ್ಥಾಪಕರಾದ ಜಯದೇವ ಖಂಡಿಗೆರವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಾ “ಪುಣಿಂಚಿತ್ತಾಯರು ಇಲ್ಲಿ ವಿದ್ಯಾಭ್ಯಾಸ ಮಾಡಿದವರೆಂಬುವುದೇ ನಮಗೆ ಹೆಮ್ಮೆ ಎನಿಸುತ್ತದೆ. ಅವರ ಜನ್ಮದಿನವನ್ನು ಇವತ್ತು ನಮ್ಮ ಶಾಲೆಯಲ್ಲಿ ಜೈ ತುಲುನಾಡ್ (ರಿ.) ಸಂಘಟನೆಯವರು ಆಚರಿಸುತ್ತಿರುವುದು ಸಂತೋಷ ತಂದಿದೆ” ಎಂದು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಪುವೆಂಪುರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಗೈಯ್ಯಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಶಿವಪ್ರಕಾಶ್ ಎಂ.ಕೆ. ಇವರು ಮುಖ್ಯ ಅತಿಥಿಯಾಗಿ “ಪುವೆಂಪು ನಮ್ಮ ಶಾಲೆಯ ಹಳೆ ವಿದ್ಯಾರ್ಥಿ ಎಂಬುದೇ ನಮಗೆ ಹೆಮ್ಮೆ ಎನಿಸುತ್ತದೆ.…

Read More

ಕೋಟ : ಸಾಲಿಗ್ರಾಮ ಕಾರ್ಕಡದ ಗೆಳೆಯರ ಬಳಗದ ವತಿಯಿಂದ ದಿನಾಂಕ 14-10-2023ರ ಶನಿವಾರ ನಡೆದ ಡಾ.ಕೋಟ ಶಿವರಾಮ ಕಾರಂತರ ಜನ್ಮದಿನಾಚರಣೆ, ಕಾರಂತ ಸಂಸ್ಮರಣೆ, ಕಾರಂತ ಪುರಸ್ಕಾರ ಸಮಾರಂಭದಲ್ಲಿ ಕಾರ್ಕಡ ಗೆಳೆಯರ ಬಳಗದ ‘ಕಾರಂತ ಪುರಸ್ಕಾರ’ವನ್ನು ಸ್ವೀಕರಿಸಿದ ಸಾಹಿತಿ ವೈದೇಹಿಯವರು ಮಾತನಾಡುತ್ತಾ “ಪ್ರಾಮಾಣಿಕವಾಗಿ, ಅನುಭವಕ್ಕೆ ಸರಿಯಾಗಿ ಬರೆಯುವ ಸ್ವಭಾವದರಾಗಿದ್ದ ಕಾರಂತರು ನನ್ನ ಸಾಹಿತ್ಯ ಕ್ಷೇತ್ರಕ್ಕೆ ದೀಕ್ಷೆ, ಬರಹಕ್ಕೆ ಶಕ್ತಿ ನೀಡಿದವರು. ಕಾರಂತರು ಸ್ತ್ರೀಯರ ಜೀವನ, ಸಂವೇದನೆಯನ್ನು ತಮ್ಮ ಕಾದಂಬರಿಗಳ ಮೂಲಕ ಎಲ್ಲರಿಗೂ ತಿಳಿಸುವ ಪ್ರಯತ್ನವನ್ನು ಮಾಡಿರುವ ನೋಬೆಲ್‌ ಪುರಸ್ಕಾರಕ್ಕೂ ಅರ್ಹರಾಗಿದ್ದರು. ಕಾರಂತರ ಈ ಪುರಸ್ಕಾರ ಸ್ತ್ರೀ ಕುಲಕ್ಕೆ ನೀಡಿರುವ ಪುರಸ್ಕಾರ” ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮವನ್ನು ಕುಂದಾಪುರ ಶಾಸಕ ಕಿರಣ್‌ ಕೊಡ್ಗಿ ಉದ್ಘಾಟಿಸಿ ಕಾರಂತರ ವ್ಯಕ್ತಿತ್ವವನ್ನು ಇಂತಹ ಕಾರ್ಯಕ್ರಮಗಳ ಮೂಲಕ ನೆನಪಿಸುತ್ತಿರುವುದು ಶ್ಲಾಘನೀಯ ಎಂದರು. ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಎಸ್.ಪ್ರದೀಪ್‌ ಕುಮಾರ್‌ ಕಲ್ಕೂರ ಕಾರಂತರ ಭಾವಚಿತ್ರಕ್ಕೆ ನುಡಿನಮನ ಸಲ್ಲಿಸಿದರು. ಉಡುಪಿ…

Read More

ಉಡುಪಿ : ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ದಿನಾಂಕ 21-10-2023ರಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಉಡುಪಿ ತಾಲೂಕು ಘಟಕದ ಸಹಭಾಗಿತ್ವದಲ್ಲಿ ಕಾಲೇಜು ವಿದ್ಯಾರ್ಥಿಗಳ ಕವಿಗೋಷ್ಠಿಯು ಉದ್ಘಾಟನೆಗೊಂಡು, ಕವಿಗೋಷ್ಠಿಯೊಂದಿಗೆ ಸಂಪನ್ನಗೊಂಡಿತು. ಕಾಲೇಜಿನ ಪ್ರಾಚಾರ್ಯೆ ಶ್ರೀಮತಿ ಆಶಾ ಕುಮಾರಿ ಉದ್ಘಾಟಿಸಿ “ಕಲೆ, ಸಾಹಿತ್ಯ, ಸಂಗೀತ, ಕಾವ್ಯ, ನಾಟಕ ಇವುಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವುದರಿಂದ ಓದಿನಲ್ಲಿ ಏಕಾಗ್ರತೆ ಮತ್ತು ಶ್ರದ್ಧೆ ಮೂಡುತ್ತದೆ” ಎಂದರು. ಕ.ಸಾ.ಪ. ಉಡುಪಿ ಜಿಲ್ಲೆಯ ಕೋಶಾಧ್ಯಕ್ಷರಾದ ಶ್ರೀ ಮನೋಹರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಭಾಧ್ಯಕ್ಷತೆ ವಹಿಸಿದ್ದ ಉಡುಪಿ ತಾಲ್ಲೂಕಿನ ಕ.ಸಾ.ಪ. ಅಧ್ಯಕ್ಷ ಹಾಗೂ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಶ್ರೀ ರವಿರಾಜ್ ಹೆಚ್.ಪಿ. “ವಿದ್ಯಾರ್ಥಿಗಳು ಕಾಲೇಜು ಜೀವನದಲ್ಲಿ ಕಥೆ, ಕವನಗಳನ್ನು ರಚಿಸಲು ಒಲವು ತೋರಿದ್ದಲ್ಲಿ ಮುಂದೆ ಸಾಮಾಜಿಕ ವೇದಿಕೆಯಲ್ಲಿ ಉತ್ತಮ ಕವಿ ಮತ್ತು ಲೇಖಕರಾಗಿ ಮೂಡಿಬರಲು ಸಾಧ್ಯ” ಎಂದು ಅಭಿಪ್ರಾಯ ಪಟ್ಟರು. ಹಿರಿಯಡ್ಕದ ಕವಯಿತ್ರಿ ಶ್ರೀಮತಿ ಪೂರ್ಣಿಮಾ ಸುರೇಶ್ ಕವಿಗೋಷ್ಠಿಯ ಆಶಯ ಭಾಷಣದಲ್ಲಿ “ಕವಿತೆಯ ಮೂಲಕ ಭಾವನೆಗಳನ್ನು ಪ್ರಕಟ ಮಾಡುವವರು…

Read More

ಮಂಗಳೂರು : ಮಂಗಳೂರು ವಿಶ್ವವಿದ್ಯಾಲಯದ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆ ಮತ್ತು ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ಪ್ರಚಾರೋಪನ್ಯಾಸ ಮಾಲಿಕೆಯಡಿ ಕನ್ನಡ ಸಾಹಿತ್ಯ ಚರಿತ್ರೆ ರಚನೆ ಪ್ರಾರಂಭಿಕ ಪ್ರಯತ್ನಗಳು ಎಂಬ ವಿಷಯದಲ್ಲಿ ಉಪನ್ಯಾಸ ಕಾರ್ಯಕ್ರಮವು ದಿನಾಂಕ 18-10-2023ರ ಬುಧವಾರದಂದು ಮಂಗಳೂರು ವಿವಿ ಕನ್ನಡ ವಿಭಾಗದ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಹಾಗೂ  ವಿದ್ವಾಂಸ ಪ್ರೊ. ಎ.ವಿ. ನಾವಡ ಮಾತನಾಡಿ “ಕನ್ನಡ ಸಾಹಿತ್ಯ ಚರಿತ್ರೆಯನ್ನು ರೂಪಿಸಿದ ಆರಂಭದ ದಿನಗಳಲ್ಲಿ ವಿದೇಶಿ ವಿದ್ವಾಂಸರುಗಳಾದ ವೈಗ್ಲೆ, ಕಿಟ್ಟೆಲ್, ಇ.ಪಿ. ರೈಸ್, ಮೋಗ್ಲಿಂಗ್ ಮೊದಲಾದವರ ಕೊಡುಗೆ ಅಪಾರ. ಆರ್. ನರಸಿಂಹಾಚಾರ್, ಕನ್ನಡವಕ್ಕಿ, ಮುಗಳಿ, ಮರಿಯಪ್ಪ ಭಟ್ಟರಂತಹ ದೇಶೀ ವಿದ್ವಾಂಸರು ಸೇರಿಕೊಂಡು ಸಾಹಿತ್ಯ ಚರಿತ್ರೆ ನಿರ್ಮಾಣದ ಪ್ರಕ್ರಿಯೆ ಹುಲುಸಾಗಿ ಬೆಳೆಯಿತು. ವಿದೇಶದಿಂದ ಬಂದು ಇಲ್ಲಿನ ಸಂಸ್ಕೃತ, ಕನ್ನಡ ಭಾಷೆಗಳನ್ನು ಕಲಿತು ಇಲ್ಲಿನ ಲಿಖಿತ ಮತ್ತು ಮೌಖಿಕ ಸಾಹಿತ್ಯ ಸಂಗ್ರಹ ಮತ್ತು ಗ್ರಂಥ…

Read More

ಕಾರ್ಕಳ : ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ತಾಲೂಕು ಘಟಕ ಮತ್ತು ಕನ್ನಡ ಸಂಘ ಕಾಂತಾವರ ಇವರ ಜಂಟಿ ಸಹಯೋಗದೊಂದಿಗೆ ಆಯೋಜಿಸುವ ತಿಂಗಳ ಉಪನ್ಯಾಸ ‘ಅರಿವು ತಿಳಿವು’ ಕಾರ್ಯಕ್ರಮವು ದಿನಾಂಕ 21-10-2023 ರಂದು ಕಾರ್ಕಳದ ಸರಕಾರಿ ಪ.ಪೂ.ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ ಖ್ಯಾತ ಇತಿಹಾಸ ತಜ್ಞ ಹಾಗೂ ಬಂಟ್ವಾಳದ ತುಳು ಬದುಕು ವಸ್ತುಸಂಗ್ರಹಾಲಯ ಮತ್ತು ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ. ಎಂಬ ವಿಷಯದ ಕುರಿತು ಮಾತನಾಡುತ್ತಾ “ಚರಿತ್ರೆ ಎನ್ನುವುದು ಕೇವಲ ಕಾಲ ಮತ್ತು ಘಟನೆಗಳ ಮೊತ್ತವಷ್ಟೇ ಆಗಿರದೆ ಮೌಖಿಕ ಸಾಹಿತ್ಯ ಮತ್ತು ಭೌತಿಕ ಸಾಮಾಗ್ರಿಗಳು ಕೂಡಾ ಚರಿತ್ರೆಯ ಭಾಗಗಳೇ ಆಗಿವೆ. ಮನುಷ್ಯ ನಿರ್ಮಿತ ಈ ಭೌತಿಕ ವಸ್ತುಗಳೆಲ್ಲವೂ ಗತಕಾಲದ ಜೀವನಕ್ರಮ ಮತ್ತು ಸಂಸ್ಕೃತಿಯನ್ನು ನಮಗೆ ಪರಿಚಯಿಸಿದರೆ, ಬದಲಾದ ಇಂದಿನ ಜೀವನಶೈಲಿ ಹಾಗೂ ಮುಂದೆ ಎದುರಾಗಲಿರುವ ಆಪತ್ತಿನ ಬಗ್ಗೆಯೂ ಸೂಚ್ಯವಾಗಿ ಅವು ನಮಗೆ ತಿಳಿಸಿಕೊಡುತ್ತವೆ. ಪ್ರತಿಯೊಂದು ಭೌತಿಕ ವಸ್ತುವಿನ ಹಿಂದೆಯೂ ಒಂದೊಂದು ಚರಿತ್ರೆಯಿದ್ದು, ಇವೆಲ್ಲವೂ ಒಂದು…

Read More

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಸಂಸ್ಥೆ ಹಾಗೂ ಆಳ್ವಾಸ್ ತುಳು ಸಂಸ್ಕೃತಿ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ರಾಜಶ್ರೀ ಟಿ. ರೈ ಪೆರ್ಲ ಬರೆದ ‘ಮುಸ್ರಾಲೊ ಪಟ್ಟೋ’ ಕಾದಂಬರಿ ಬಿಡುಗಡೆ ಹಾಗೂ ಅವಲೋಕನ ಕಾರ್ಯಕ್ರಮವು ದಿನಾಂಕ 20-10-2023ರಂದು ಮೂಡಬಿದಿರೆಯ ವಿದ್ಯಾಗಿರಿಯ ಕುವೆಂಪು ಸಭಾಂಗಣದಲ್ಲಿ ನಡೆಯಿತು. ಕೃತಿ ಅವಲೋಕಿಸಿ ಮಾತನಾಡಿದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ “ಸಮಾಜದ ಸಂಬಂಧಗಳು ಛಿದ್ರಗೊಂಡು ನೈತಿಕ ಅಧಃಪಥನಕ್ಕೊಳಗಾದಾಗ ನಾವೇ ಕಟ್ಟಿ ಬೆಳೆಸಿದ ಸಮೃದ್ಧ ವ್ಯವಸ್ಥೆ ಹೇಗೆ ವಿನಾಶದ ಹಾದಿಯನ್ನು ಹಿಡಿಯುತ್ತದೆ ಎಂಬುದನ್ನು ರಾಜಶ್ರೀ ಟಿ. ರೈ ಪೆರ್ಲ ಬರೆದ ‘ಮುಸ್ತಾಲೊ ಪಟ್ಟೋ’ ಕಾದಂಬರಿ ತೆರೆದಿಡುತ್ತದೆ. ಒಂದು ಗುತ್ತಿನ ಮನೆಯ ನೈತಿಕ ಅಧಃಪತನಕ್ಕೆ ಹೇಗೆ ಗುತ್ತಿನ ಮನೆಯ ನಾಯಕನ ಅಹಂಕಾರ ಕಾರಣವಾಗುತ್ತದೆ ಎಂಬುದನ್ನು ಪರಿಣಾಮಕಾರಿಯಾಗಿ ವಿವರಿಸಿದ ತುಳುವಿನ ಶ್ರೇಷ್ಠ ಕಾದಂಬರಿಗಳಲ್ಲಿ ಅಗ್ರಗಣ್ಯವಾಗಿ ನಿಲ್ಲುವ ಕಾದಂಬರಿ ಇದು. ಗುತ್ತಿನ ಮನೆಯ ಒಳಗಡೆ ಇರುವ ಹೆಣ್ಣಿನ ಅಸಹನೆ, ನೋವು, ಸಂಕಟ, ವೇದನೆ, ಅಸ್ತಿತ್ವದ ಪ್ರಶ್ನೆಗಳನ್ನೊಳಗೊಂಡ ಅಂತರಂಗದ ಪಿಸುಧ್ವನಿಯನ್ನು…

Read More

ಮೂಡುಬಿದಿರೆ: ಸಾಹಿತಿ ಡಾ. ಹಂ.ಪ. ನಾಗರಾಜಯ್ಯ ಅವರ ಮಹಾಕಾವ್ಯ ‘ಚಾರುವಸಂತ’ವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ರಂಗರೂಪಕ್ಕೆ ತರುತ್ತಿದ್ದು, ಇದರ ಪ್ರಥಮ ಪ್ರಯೋಗವು ದಿನಾಂಕ 29-10-2023ರ ಸಂಜೆ 6.15ಕ್ಕೆ ಮೂಡುಬಿದಿರೆಯ ಸ್ಕೌಟ್ ಗೈಡ್ ಕನ್ನಡ ಭವನದಲ್ಲಿ ಕಾಣಲಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಎಂ.ಮೋಹನ ಆಳ್ವ ಅಧ್ಯಕ್ಷತೆಯಲ್ಲಿ ಡಾ. ಹಂ.ಪ. ನಾಗರಾಜಯ್ಯ ಚಾರು ವಸಂತ ರಂಗ ಪಯಣವನ್ನು ಉದ್ಘಾಟಿಸಲಿರುವರು. ಡಾ.ನಾ. ದಾಮೋದರ ಶೆಟ್ಟಿ,  ಆಳ್ವಾಸ್ ಕಾಲೇಜು ಪ್ರಾಂಶುಪಾಲ ಡಾ. ಕುರಿಯನ್, ಪಿ.ಯು ಕಾಲೇಜು ಪ್ರಾಂಶುಪಾಲ ಪ್ರೊ. ಮಹಮ್ಮದ್ ಸದಾಕತ್ ಉಪಸ್ಥಿತರಿರುವರು. ಹಂಪನಾ ರಚಿಸಿದ ದೇಸೀ ಕಾವ್ಯವನ್ನು ರಂಗಕರ್ಮಿ ಹಾಗೂ  ಸಾಹಿತಿ ಡಾ. ನಾ.ದಾ. ಶೆಟ್ಟಿ ನಾಟಕವನ್ನಾಗಿಸಿದ್ದಾರೆ. ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಜೀವನ್ ರಾಂ ಸುಳ್ಯ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಕಲಾವಿದರು ಪ್ರದರ್ಶನ ನೀಡಲಿದ್ದಾರೆ. ಬಳಿಕ ರಾಜ್ಯದ ವಿವಿಧೆಡೆ ತಂಡದ ರಂಗಪಯಣ ನಡೆಯಲಿದೆ.  ಮೂಡಬಿದಿರೆಯ ಈ ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದೆ. ಡಾ. ಹಂ.ಪ. ನಾಗರಾಜಯ್ಯ…

Read More

ಆಸಕ್ತಿ ಕ್ಷೇತ್ರ, ಕಲಿಯುವ ಮನಸ್ಸು ಇದ್ದರೆ ಯಶಸ್ಸು ಖಂಡಿತಾ ಖಚಿತ ಎಂಬುದಕ್ಕೆ ಸಾಕ್ಷಿ ಶೈಲೇಶ್ ತೀರ್ಥಹಳ್ಳಿ. ಕಾಲಿಗೆ ಗೆಜ್ಜೆ ಕಟ್ಟಿ ಭಾಗವತರ ಹಾಡಿಗೆ ಹೆಜ್ಜೆ ಹಾಕುತ್ತಿದ್ದ ಶೈಲೇಶ್ ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಮೂಲಕ ಯಕ್ಷಗಾನ ಕ್ಷೇತ್ರದಲ್ಲಿ ಯಶಸ್ವಿ ಕಲಾವಿದರಾಗುತ್ತಿದ್ದಾರೆ. 28.10.1995ರಂದು ತೀರ್ಥಹಳ್ಳಿ ತಾಲ್ಲೂಕು ದೇವಂಗಿ ಗ್ರಾಮದ ಜೆಡ್ಡುಗದ್ದೆಯ ಚಂದ್ರಶೇಖರ ಹಾಗೂ ನಾಗರತ್ನ ದಂಪತಿಗಳ ಮಗನಾಗಿ ಶೈಲೇಶ್ ಜನನ. ಎಮ್ ಎ ಜರ್ನಲಿಸಂ ಇವರ ವಿದ್ಯಾಭ್ಯಾಸ. ಗುರು ಬನ್ನಂಜೆ ಸಂಜೀವ ಸುವರ್ಣ, ಪ್ರಸಾದ್ ಮೊಗೆಬೆಟ್ಟು, ಮಂಜುನಾಥ ಕುಲಾಲ್, ಸತೀಶ್ ಕೆದ್ಲಾಯ ಇವರ ಯಕ್ಷಗಾನ ಗುರುಗಳು. ಕೃಷ್ಣಮೂರ್ತಿ ಭಟ್ ಬಗ್ವಾಡಿ ಚಂಡೆ – ಮದ್ದಳೆ ಗುರುಗಳು. ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಗುರು ಬನ್ನಂಜೆ ಸಂಜೀವ ಸುವರ್ಣ ಹಾಗೂ ಕೇಂದ್ರದ ಹಲವು ಗುರುಗಳಲ್ಲಿ ಯಕ್ಷಗಾನ  ಹೆಜ್ಜೆ ಮತ್ತು ಹಿಮ್ಮೇಳ ಅಭ್ಯಾಸ ಮಾಡಿರುತ್ತಾರೆ. ಉಡುಪಿ ಯಕ್ಷಗಾನ ಕೇಂದ್ರದಲ್ಲಿ 8 ವರ್ಷ ಗುರುಗಳಾಗಿ ಮತ್ತು ಯಕ್ಷರಂಗದ ಕಲಾವಿದರಾಗಿ ಸೇವೆ ಸಲ್ಲಿಸಿದ್ದು, ಹಲವಾರು ಯಕ್ಷಗಾನ ಮತ್ತು ಯಕ್ಷಗಾನ…

Read More

ಮೈಸೂರು : ನಟನ ಪಯಣ ರೆಪರ್ಟರಿ ತಂಡದ ಹೊಸ ಪ್ರಯೋಗ ‘ಅಂಧಯುಗ’ ನಾಟಕದ ಪ್ರದರ್ಶನವು ದಿನಾಂಕ 29-10-2023ರ ಸಂಜೆ ಘಂಟೆ 6.30ಕ್ಕೆ ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ನಟನ ರಂಗಶಾಲೆಯಲ್ಲಿ ನಡೆಯಲಿದೆ. ಮೂಲ ಧರ್ಮವೀರ ಭಾರತಿ ವಿರಚಿತ ಈ ನಾಟಕವನ್ನು ಸಿದ್ಧಲಿಂಗ ಪಟ್ಟಣಶೆಟ್ಟಿ ಹಾಗೂ ತಿಪ್ಪೇಸ್ವಾಮಿಯವರು ಕನ್ನಡಕ್ಕೆ ಅನುವಾಡಿಸಿದ್ದಾರೆ. ಖ್ಯಾತ ನಟ ಹಾಗೂ ನಿರ್ದೇಶಕರಾದ ಮಂಡ್ಯ ರಮೇಶ್ ನಿರ್ದೇಶಿಸಿಸಿರುವ ಈ ನಾಟಕಕ್ಕೆ ಮೇಘ ಸಮೀರ ದೃಶ್ಯ ಸಂಯೋಜನೆ ಹಾಗೂ ವಿನ್ಯಾಸ ಮಾಡಿದ್ದಾರೆ. ವಸ್ತ್ರಾಲಂಕಾರವನ್ನು ರಂಜನಾ ಕೇರಾ ನಿರ್ವಹಿಸಿದ್ದು, ದಿಶಾ ರಮೇಶ್ ಸಂಗೀತ ಸಂಯೋಜಿಸಿದ್ದಾರೆ. ನಟನ ಪಯಣ ರೆಪರ್ಟರಿ ನಟನದಲ್ಲಿ ಅನೇಕ ವರ್ಷಗಳಿಂದ ರಂಗ ಕಾರ್ಯದಲ್ಲಿ ತೊಡಗಿದ ನುರಿತ ಕಲಾವಿದರು ಮತ್ತು ನಟನ ರಂಗಶಾಲೆಯ ಡಿಪ್ಲೊಮಾ ತರಬೇತಿ ಮುಗಿಸಿದ ರಂಗಾಭ್ಯಾಸಿಗಳ ವೃತ್ತಿಪರ ತಂಡ ‘ನಟನ ಪಯಣ ರೆಪರ್ಟರಿ’. ವಾರಾಂತ್ಯಗಳಲ್ಲಿ ನಟನದ ರಂಗ ಮಂದಿರದಲ್ಲಿ ಪ್ರದರ್ಶನಗಳನ್ನು ನೀಡುವುದರ ಜೊತೆಗೆ ದೇಶದಾದ್ಯಂತ ನಟನ ರೆಪರ್ಟರಿಯು ವಿವಿಧೆಡೆ ನಾಟಕಗಳನ್ನು ಪ್ರಯೋಗಿಸಿದೆ. ವಾಸ್ತವವಾದಿ, ಶೈಲೀಕೃತ, ಭಾರತೀಯ, ಪಾಶ್ಚಾತ್ಯ, ಸಾಂಪ್ರದಾಯಿಕ, ಸಮಕಾಲೀನ,…

Read More