Author: roovari

ಸೊರಬ : ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸೊರಬ ಶಿವಮೊಗ್ಗ ಜಿಲ್ಲೆ ಇದರ ವತಿಯಿಂದ ‘ಜಿಲ್ಲಾ ಮಟ್ಟದ ಯುಗಾದಿ ಕವಿಗೋಷ್ಠಿ -2025’ಯನ್ನು ದಿನಾಂಕ 06 ಏಪ್ರಿಲ್ 2025ರಂದು ಮಧ್ಯಾಹ್ನ 2-30 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಹೆಸರನ್ನು ನೋಂದಾಯಿಸಲು 9611002416, 9632861570, 9741470173 ಮತ್ತು 9113820718 ಹಾಗೂ ಪ್ರವೇಶ ಶುಲ್ಕ ರೂ.100/- ಆಗಿದ್ದು, ಫೋನ್ ಪೇ ಸಂಖ್ಯೆ 9980571552 ಸಂಪರ್ಕಿಸಿರಿ.

Read More

ಕೋಲಾರ : ಆಕೃತಿ ಪುಸ್ತಕ, ಜಂಗಮ ಕಲೆಕ್ವಿವ್, ಬೀ ಕಲ್ಚರ್, ಬಯಲು ಬಳಗ, ತಮಟೆ ಮೀಡಿಯಾ, ಬುಡ್ಡಿದೀಪ ಇವರ ಸಹಯೋಗದಲ್ಲಿ ಹುಸೇನಜ್ಜನ ನೆನಪಿನಲ್ಲಿ ಕೋಟಗಾನಹಳ್ಳಿ ರಾಮಯ್ಯನವರ ‘ದರ್ಗಾ ಮಾಳದ ಚಿತ್ರಗಳು’ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ದಿನಾಂಕ 08 ಏಪ್ರಿಲ್ 2025ರಂದು ಸಂಜೆ 4-30 ಗಂಟೆಗೆ ಕೋಲಾರ ಪಾಪರಾಜನಹಳ್ಳಿ ಬುಡ್ಡಿದೀಪ ಪಾಠಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಇವರು ಪುಸ್ತಕ ಬಿಡುಗಡೆ ಮಾಡಲಿದ್ದು, ಡಾ. ನೆಲ್ಲುಕುಂಟೆ ವೆಂಕಟೇಶಯ್ಯ ಮತ್ತು ದೀಪಾ ಧನರಾಜ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಕೆ. ಚಂದ್ರಶೇಖರ್ ಇವರ ನಿರ್ದೇಶನದಲ್ಲಿ ಜಂಗಮ ಕಲೆಕ್ವಿವ್ ತಂಡದಿಂದ ‘ಪಂಚಮ ಪದ’ ಪ್ರಸ್ತುತಗೊಳ್ಳಲಿದೆ.

Read More

ಮಂಗಳೂರು : ಸಪ್ತಕ ಬೆಂಗಳೂರು ಇದರ ವತಿಯಿಂದ ಚಿರಂತನ ಚಾರಿಟೇಬಲ್ ಟ್ರಸ್ಟ್ ಸುರತ್ಕಲ್ ಮತ್ತು ರಾಮಕೃಷ್ಣ ಮಠ ಮಂಗಳೂರು ಇವರ ಸಹಯೋಗದೊಂದಿಗೆ ಪ್ರಸ್ತುತ ಪಡಿಸುವ ಪಂಡಿತ್ ಓಂಕಾರ ಗುಲ್ವಾಡಿಯವರಿಗೆ ಸನ್ಮಾನ ‘ಸಂಗೀತ್ ಸಮ್ಮಾನ್’ ಕಾರ್ಯಕ್ರಮವನ್ನು ದಿನಾಂಕ 13 ಏಪ್ರಿಲ್ 2025ರಂದು ಸಂಜೆ 5-00 ಗಂಟೆಗೆ ಮಂಗಳೂರಿನ ರಾಮಕೃಷ್ಣ ಮಠದಲ್ಲಿ ಆಯೋಜಿಸಲಾಗಿದೆ. ಸಂಜೆ 5-00 ಗಂಟೆಗೆ ನಡೆಯಲಿರುವ ಅಂಕುಶ್ ನಾಯಕ್ ಮತ್ತು ಕಾರ್ತಿಕ್ ಭಟ್ ಇವರ ಸಿತಾರ್ ಕೊಳಲು ಜುಗಲ್ ಬಂದಿಗೆ ಧಾರವಾಡದ ಹೇಮಂತ್ ಜೋಶಿ ತಬಲಾ ಸಾಥ್ ನೀಡಲಿದ್ದಾರೆ. 6-00 ಗಂಟೆಗೆ ಪಂಡಿತ್ ವೆಂಕಟೇಶ್ ಕುಮಾರ್ ಇವರ ಅಧ್ಯಕ್ಷತೆಯಲ್ಲಿ ಸನ್ಮಾನ ಸಮಾರಂಭ ನಡೆಯಲಿದೆ. 6-30 ಗಂಟೆಗೆ ಧಾರವಾಡದ ಪಂಡಿತ್ ವೆಂಕಟೇಶ್ ಕುಮಾರ್ ಇವರ ಹಾಡುಗಾರಿಕೆಗೆ ಪಂಡಿತ್ ಓಂಕಾರ ಗುಲ್ವಾಡಿ ತಬಲಾ ಹಾಗೂ ಮುಂಬೈಯ ಪಂಡಿತ್ ಸುಧೀರ್ ನಾಯಕ್ ಸಂವಾದಿನಿ ನುಡಿಸಲಿದ್ದಾರೆ.

Read More

ಮಂಗಳೂರು: ಗಾನ ನೃತ್ಯ ಅಕಾಡೆಮಿ ಆಶ್ರಯದಲ್ಲಿ ಸಂಸ್ಥೆಯ ನಿರ್ದೇಶಕಿ ವಿದ್ಯಾಶ್ರೀ ರಾಧಾಕೃಷ್ಣ ಇವರ ಶಿಷ್ಯೆಯರಿಂದ ‘ಪ್ರೇರಣಾ’ ಭರತನಾಟ್ಯ ಕಾರ್ಯಕ್ರಮ ದಿನಾಂಕ 29 ಮಾರ್ಚ್ 2025ರಂದು ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜಿನ ಎಲ್. ಸಿ. ಆರ್. ಐ. ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ವಿದ್ವಾನ್ ಚಂದ್ರಶೇಖರ್ ನಾವಡ ಮಾತನಾಡಿ “ಭಾರತೀಯ ಪರಂಪರೆಯನ್ನು ಉಳಿಸುವಲ್ಲಿ ಇಂತಹ ಕಾರ್ಯಕ್ರಮಗಳು ಪೂರಕ. ಇಂತಹ ಪ್ರತಿಭೆಗಳನ್ನು ರೂಪಿಸುವಲ್ಲಿ ಗುರುಗಳ ಹಾಗೂ ಹೆತ್ತವರ ಪಾತ್ರ ಮಹತ್ವದ್ದು” ಎಂದು ತಿಳಿಸಿದರು. ಸಂಸ್ಥೆಯ ನಿರ್ದೇಶಕಿ ವಿದ್ಯಾಶ್ರೀ ರಾಧಾಕೃಷ್ಣ ಇವರು ಪ್ರಾಸ್ತಾವಿಕ ಭಾಷಣದ ಮೂಲಕ ಪ್ರೇರಣಾ ಕಾರ್ಯಕ್ರಮದ ಉದ್ದೇಶವನ್ನು ತಿಳಿಸುತ್ತಾ ಕಾರ್ಯಕ್ರಮದ ಯಶಸ್ಸಿನಲ್ಲಿ ಪ್ರೇಕ್ಷಕರ ಪಾತ್ರವನ್ನು ಉಲ್ಲೇಖಿಸಿದರು. ಬೆಂಗಳೂರು ದೂರದರ್ಶನದ ಗ್ರೇಡೆಡ್ ಕಲಾವಿದರಾಗಿ ಆಯ್ಕೆಗೊಂಡಿರುವ ತ್ವಿಷಾ ಶೆಟ್ಟಿ, ಮೈತ್ರೇಯಿ ನಾವಡ ಹಾಗೂ ದಿಶಾ ಗಿರೀಶ್ ಅವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಹಾಡುಗಾರಿಕೆಯಲ್ಲಿ ಗುರು ವಿದ್ಯಾಶ್ರೀ ರಾಧಾಕೃಷ್ಣ, ನಟುವಾಂಗದಲ್ಲಿ ಅನಂತಕೃಷ್ಣ, ಮೃದಂಗದಲ್ಲಿ ಬಾಲಚಂದ್ರ ಭಾಗವತ್ ಹಾಗೂ ಕೊಳಲಿನಲ್ಲಿ ನಿತೀಶ್ ಅಮ್ಮಣ್ಣಾಯ ಸಹಕರಿಸಿದರು. ಸಂಸ್ಥೆಯು ಕಾರ್ಯದರ್ಶಿ…

Read More

ಮಂಗಳೂರು: ಕೇಂದ ಸರ್ಕಾರದ ಸಂಸ್ಕೃತಿ ಸಚಿವಾಲಯದಡಿ ಬರುವ ಸಾಹಿತ್ಯ ಅಕಾಡೆಮಿಯ ಪಶ್ಚಿಮ ವಲಯ ಪ್ರಾದೇಶಿಕ ಭಾಷಾ ಸಲಹಾ ಸಮಿತಿಗೆ ಮ೦ಗಳೂರಿನ ಕೊಂಕಣಿ ಕವಿ ಮೆಲ್ವಿನ್ ರೊಡ್ರಿಗಸ್ ನೇಮಕಗೊಂಡಿದ್ದಾರೆ. ಈ ವಲಯದಲ್ಲಿ ಗುಜರಾತಿ, ಮರಾಠಿ, ಸಿಂಧಿ ಮತ್ತು ಕೊಂಕಣಿ ಭಾಷೆಳಿದ್ದು, ಮೆಲ್ವಿನ್ ಅವರು ಕೊಂಕಣಿ ಭಾಷಾ ಸಲಹಾ ಸಮಿತಿ ಮುಖ್ಯಸ್ಥರಾಗಿದ್ದಾರೆ. ಕವಿತಾ ಟ್ರಸ್ಟ್ ಇದರ ಸ್ಥಾಪಕರಾಗಿರುವ ಮೆಲ್ವಿನ್ ಕೊಂಕಣಿ ಕಾವ್ಯ ಕ್ಷೇತ್ರದ ಅಭಿವೃದ್ಧಿಯಲ್ಲಿ ಸಕ್ರಿಯ ಪಾತ್ರ ನಿರ್ವಹಿಸುತ್ತಾ ಬಂದಿದ್ದಾರೆ. ಆರು ಕವನ ಸಂಕಲನಗಳು, ಎರಡು ಪ್ರಬಂಧ ಸಂಕಲನಗಳು, ಮೂರು ಭಾಷಾಂತರಗೊಂಡ ಕೃತಿಗಳು, ಆರು ಸಂಪಾದಿತ ಕೃತಿಗಳು, ಒಂದು ನೀಳ್ಗತೆ ಸೇರಿ ಸುಮಾರು 34 ಕೃತಿಗಳನ್ನು ಪ್ರಕಟಿಸಿದ್ದಾರೆ. ಕೊಂಕಣಿ ಕಾವ್ಯಕ್ಕೆ ಸಂಬಂಧಿಸಿದಂತೆ ಸುಮಾರು 220 ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಇವರ ಕೊಂಕಣಿ ಹಾಡುಗಳ ಧ್ವನಿ ಸುರುಳಿಗಳೂ ಬಿಡುಗಡೆಗೊಂಡಿವೆ.

Read More

ಮಂಗಳೂರು: ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಸಂಸ್ಥಾಪಕ ಡಾ. ಎ. ಸದಾನಂದ ಶೆಟ್ಟಿ ಇವರ ನೇತೃತ್ವದಲ್ಲಿ ವರ್ಷಪ್ರತಿ ಜರಗುವ ತುಳುವರ ಸೌರಮಾನ ಯುಗಾದಿ ‘ಬಿಸು ಪರ್ಬೊ’ ಸಂಭ್ರಮವನ್ನು ಈ ಬಾರಿ 16 ಏಪ್ರಿಲ್ 2025ರಂದು ಮಂಗಳೂರಿನಲ್ಲಿ ಏರ್ಪಡಿಸಲಾಗಿದ್ದು, ಈ ಬಗ್ಗೆ ಕಾರ್ಯಕ್ರಮದ ಪೂರ್ವ ಸಿದ್ಧತೆಗಾಗಿ ಟ್ರಸ್ಟ್ ಪದಾಧಿಕಾರಿಗಳ ಸಭೆ 01 ಏಪ್ರಿಲ್ 2025ರಂದು ಬಲ್ಮಠದ ಕುಡ್ಲ ಸದಾಶಯ ಕಚೇರಿಯಲ್ಲಿ ಕಾರ್ಯಾಧ್ಯಕ್ಷ ದೇವಿ ಚರಣ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಜರಗಿತು. ತುಳುನಾಡಿನ ಕೃಷಿ ಸಮೃದ್ಧಿಯನ್ನು ಬಿಂಬಿಸುವ ತುಳುವರ ಯುಗಾದಿಯನ್ನು ಅರ್ಥವತ್ತಾಗಿ ಆಚರಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಅಲ್ಲದೆ ತುಳು ಸಂಸ್ಕೃತಿಯನ್ನು ಬಿಂಬಿಸುವ ‘ಪದ – ನಲಿಕೆ’ ಹಾಡು ಮತ್ತು ಕುಣಿತಗಳ ‘ಬಿಸು ಮಿನದನ’ ಕಾರ್ಯಕ್ರಮವನ್ನು ವಿವಿಧ ಬಂಟರ ಸಂಘಗಳ ವತಿಯಿಂದ ನಡೆಸಲಾಗುವುದು ಹಾಗೂ ಇದರೊಂದಿಗೆ ವಿಷು ಹಬ್ಬದ ಮಹತ್ವವನ್ನು ತಿಳಿಸುವ ಸಲುವಾಗಿ ತಜ್ಞರಿಂದ ವಿಶೇಷ ಉಪನ್ಯಾಸವನ್ನು ಏರ್ಪಡಿಸಲಾಗುವುದು ಎಂದು ಸಭಾಧ್ಯಕ್ಷರು ತಿಳಿಸಿದರು‌. 14 ಎಪ್ರಿಲ್ 2025ರಂದು ನಾಡಿನೆಲ್ಲೆಡೆ ಹಬ್ಬದ ಸಂಭ್ರಮವಿರುವುದರಿಂದ ಈ ಕಾರ್ಯಕ್ರಮವನ್ನು…

Read More

ಬೆಂಗಳೂರು : ಸಾಹಿತ್ಯ ಸರಸ್ವತಿ ಕಲಾ ವೇದಿಕೆ (ರಿ.) ಸ್ನೇಹಕೂಟ ಸಾಂಸ್ಕೃತಿಕ ವೇದಿಕೆ ಹಾಗೂ ಡಾ. ಸಿಸಿರಾ ಸ್ನೇಹ ಬಳಗ ಇವರ ಸಂಯುಕ್ತಾಶ್ರಯದಲ್ಲಿ ಸಾಹಿತಿ ಡಾ. ಎಸ್. ರಾಮಲಿಂಗೇಶ್ವರ ಇವರ ಬದುಕು ಬರಹ : ವಿಚಾರಗೋಷ್ಠಿ, ಪ್ರಶಸ್ತಿ ಪ್ರದಾನ ಹಾಗೂ ಕಥಾ ಸಂಕಲನ ಲೋಕಾರ್ಪಣೆ ಸಮಾರಂಭವನ್ನು ದಿನಾಂಕ 10 ಏಪ್ರಿಲ್ 2025ರಂದು ಬೆಳಗ್ಗೆ 10-00 ಗಂಟೆಗೆ ಬೆಂಗಳೂರಿನ ಚಾಮರಾಜ ಪೇಟೆ ಕನ್ನಡ ಸಾಹಿತ್ಯ ಪರಿಷತ್ತು ಕುವೆಂಪು ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಸಂತವಾಣಿ ಸುಧಾಕರ್, ಅನುರಾಗ್ ಗದ್ದಿ, ವಿದ್ಯಾ ಅಮಿತ್, ಅಂಬುಜಾಕ್ಷಿ, ಬೀರೇಶ್ ಇವರುಗಳಿಂದ ನಡೆಯುವ ಡಾ. ಸಿಸಿರಾ ವಿರಚಿತ ಗೀತೆಗಳ ಗಾಯನಕ್ಕೆ ಶ್ರೀ ಶಿವಲೀಲಾ ಸಂಗೀತ ಮತ್ತು ನೃತ್ಯ ಅಕಾಡೆಮಿಯಿಂದ ನೃತ್ಯ ಪ್ರದರ್ಶನಗೊಳ್ಳಲಿದೆ. ಬಹುಶ್ರುತ ವಿದ್ವಾಂಸರಾದ ಶಾಸ್ತ್ರ ಚೂಡಾಮಣಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಇವರು ಅಧ್ಯಕ್ಷತೆ ವಹಿಸಲಿದ್ದು, ಅಂತರ ರಾಷ್ಟ್ರೀಯ ಖ್ಯಾತಿಯ ವಿದ್ವಾಂಸ ನಾಡೋಜ ಪ್ರೊ. ಹಂಪನಾ ಇವರು ಈ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಲೇಖಕಿ ಶಾಂತಿವಾಸು ಇವರ ‘ಅಂತಃಪುರ ದರ್ಪಣ’ ಕಥಾ…

Read More

ಉಡುಪಿ : ಅಂಬಲಪಾಡಿಯ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನ ಇವರ ಆಶ್ರಯದಲ್ಲಿ ರಂಗಭೂಮಿ (ರಿ.) ಉಡುಪಿ ಆಯೋಜಿಸುತ್ತಿರುವ ರಂಗ ನಿರ್ದೇಶಕ ವಿದ್ದು ಉಚ್ಚಿಲ್ ಇವರ ನಿರ್ದೇಶನದಲ್ಲಿ ‘ರಂಗ ತರಬೇತಿ ಶಿಬಿರ 2025’ವನ್ನು ದಿನಾಂಕ 12 ಏಪ್ರಿಲ್ 2025ರಿಂದ 20 ಏಪ್ರಿಲ್ 2025ರವರೆಗೆ ಪ್ರತಿದಿನ ಬೆಳಗ್ಗೆ 8-45ರಿಂದ ಮಧ್ಯಾಹ್ನ 1-00 ಗಂಟೆ ತನಕ ಅಂಬಲಪಾಡಿ ದೇವಾಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಮೊದಲು ನೋಂದಾಯಿಸಿದ 50 ಶಿಬಿರಾರ್ಥಿಗಳಿಗೆ ಮಾತ್ರ ಅವಕಾಶವಿದ್ದು, ನೋಂದಣಿ ಶುಲ್ಕ ರೂ.100/- ಆಗಿರುತ್ತದೆ. ನೋಂದಾವಣೆ ಶುಲ್ಕವನ್ನು 7795291485 ಸಂಖ್ಯೆಗೆ ಗೂಗಲ್ ಪೇ ಮಾಡಿ ಹಾಗೂ ಶಿಬಿರಾರ್ಥಿಯ ವಿವರ ಮತ್ತು ಪಾವತಿಯ ಮಾಹಿತಿಯನ್ನು ಅದೇ ಸಂಖ್ಯೆಗೆ ಕಳುಹಿಸಿ.

Read More

ಶಾಂತರಸರ ಜನ್ಮ ಶತಾಬ್ದಿ ಆಚರಿಸುವ ಹೊತ್ತಿನಲ್ಲಿಯೇ ‘ಸಂಗಾತ ಪುಸ್ತಕ’ವು ಎಚ್.ಎಸ್. ಮುಕ್ತಾಯಕ್ಕ ಇವರ ‘ಅಪ್ಪ ನಾನು ಕಂಡಂತೆ’ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯನ್ನು ನಾವೆಲ್ಲರೂ ಓದುವಂತಾಗಬೇಕು. ಇದು ಶಾಂತರಸರಿಗೆ ನಾವು ನಿಜವಾಗಿಯೂ ಸಲ್ಲಿಸುವ ಗೌರವದ ಬಗೆಯೂ ಆಗಿದೆ. ಈ ಕೃತಿಯಲ್ಲಿ ಮುಕ್ತಾಯಕ್ಕನವರು ಶಾಂತರಸರ ನೆನಪುಗಳನ್ನು ಮೊಗೆ ಮೊಗೆದು ಕೊಟ್ಟಿದ್ದಾರೆ. ನಾವು ಈವರೆಗೂ ಶಾಂತರಸರ ಕವಿತೆ, ಬರಹ, ಭಾಷಣಗಳ ಮೂಲಕ ಅವರ ವ್ಯಕ್ತಿತ್ವವನ್ನು ಗಮನಿಸಿದ್ದೇವೆ. ಆದರೆ ಮುಕ್ತಾಯಕ್ಕನವರು ಮಾತ್ರ ಬರೆಯಬಹುದಾದ, ನಮಗೆ ಅಪರಿಚಿತವಾದ ಅಪರೂಪದ ನೂರಾರು ಖಾಸಗಿ ನೆನಪುಗಳನ್ನು ಇದರಲ್ಲಿ ದಾಖಲಿಸಿದ್ದಾರೆ. ಅವು ಖಾಸಗಿ ನೆನಪುಗಳಾಗಿದ್ದರೂ ಶಾಂತರಸರ ಸಾಹಿತ್ಯಕ ವ್ಯಕ್ತಿತ್ವ ನಿರ್ಮಾಣಗೊಂಡ ಬಗೆ, ಆ ಕಾಲಘಟ್ಟದ ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ ಪ್ರಾಂತ್ಯಗಳ ಜನ ಜೀವನ, ಕುಟುಂಬ ಸಂರಚನೆ, ಸಾಮಾಜಿಕ ಚಿತ್ರಣಗಳ ಜೊತೆಗೆ ಆ ಕಾಲದ ಒಂದು ಮನೋಭಿತ್ತಿಯನ್ನು ನಮ್ಮ ಗ್ರಹಿಕೆಗೆ ನಿಲುಕುವ ಹಾಗೆ ಮಾಡುತ್ತವೆ. ಮುಕ್ತಾಯಕ್ಕನವರು ಗಜಲ್ ಗಳನ್ನು ಆರ್ಧವಾಗಿ, ತೀವ್ರವಾಗಿ ಬರೆಯುವದು ಅದನ್ನು ಓದಿದ ಎಲ್ಲರಿಗೂ ಗೊತ್ತಿರುವ ಸಂಗತಿ. ಅವರು…

Read More

ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.) ಮತ್ತು ನಾಗರಿಕ ಸಲಹಾ ಸಮಿತಿ (ರಿ.) ಸುರತ್ಕಲ್ ಈ ಸಂಸ್ಥೆಗಳು ಜಂಟಿಯಾಗಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಪ್ರಸ್ತುತ ಪಡಿಸುವ ‘ಉದಯರಾಗ – 61’ನೇ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯು ದಿನಾಂಕ 06 ಏಪ್ರಿಲ್ 2025ರಂದು ಬೆಳಗ್ಗೆ 6-00 ಗಂಟೆಗೆ ಸುರತ್ಕಲ್ಲಿನ ಫ್ಲೈ ಓವರಿನ ತಳಭಾಗದಲ್ಲಿ ಎಂ.ಸಿ.ಎಫ್. ನಾಗರಿಕ ಸಲಹಾ ಸಮಿತಿ ಸಾಂಸ್ಕೃತಿಕ ವೇದಿಕೆಯಲ್ಲಿ ನಡೆಯಲಿದೆ. ಹೊಸಬೆಟ್ಟುವಿನ ಆತ್ರೇಯ ಗಂಗಾಧರ್ ಇವರ ಹಾಡುಗಾರಿಕೆಗೆ ಮೂಲ್ಕಿ ಹೇಮಂತ್ ಭಾಗವತ್ ಇವರು ಹಾರ್ಮೋನಿಯಂ, ಸುರತ್ಕಲ್ಲಿನ ಪ್ರಥಮ್ ಆಚಾರ್ಯ ಇವರು ತಬಲಾ, ಸುರತ್ಕಲ್ಲಿನ ಸುಜಾತಾ ಎಸ್. ಭಟ್ ಇವರು ತಂಬೂರ ಮತ್ತು ಮಂಗಳೂರಿನ ರಾಮನಾಥ್ ಕಿಣಿ ಇವರು ತಾಳದಲ್ಲಿ ಸಾಥ್ ನೀಡಲಿದ್ದಾರೆ. ಎ.ಕೆ. ಅಯ್ಯ ಇವರು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು. ಮಣಿ ಕೃಷ್ಣಸ್ವಾಮಿ ಆಕಾಡೆಮಿಯ ಕಾರ್ಯದರ್ಶಿಯಾದ ಪಿ. ನಿತ್ಯಾನಂದ ರಾವ್ ಹಾಗೂ ಸುರತ್ಕಲ್ ನಾಗರಿಕ ಸಲಹಾ ಸಮಿತಿ ಅಧ್ಯಕ್ಷರಾದ ಡಾ.…

Read More