Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆ್ಯಂಡ್ ಕಲ್ಚರಲ್ ಹೆರಿಟೇಜ್ (ಇಂಟಾಕ್)ನ ಮಂಗಳೂರು ವಿಭಾಗವು ಕುಡ್ಲ ಆರ್ಟ್ಸ್ ಸಹಯೋಗದಲ್ಲಿ ದಿನಾಂಕ 19 ನವೆಂಬರ್ 2024 ಮಂಗಳವಾರ ಸಂಜೆ 5-30 ಗಂಟೆಗೆ ‘ವಾಲಿ-ಸುಗ್ರೀವರ ಕಾಳಗ’ ಎಂಬ ಮನಮೋಹಕ ಹರಿಕಥಾ ಪ್ರದರ್ಶನದೊಂದಿಗೆ ವಿಶ್ವ ಪರಂಪರೆಯ ಸಪ್ತಾಹಕ್ಕೆ ಚಾಲನೆ ನೀಡಿತು. ನಗರದ ಕೊಡಿಯಾಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಖ್ಯಾತ ಕಲಾವಿದ ಹರಿದಾಸ ಶೇಣಿ ಮುರಳಿ ಪಾಲ್ಗೊಂಡರು, ಸಹಕಲಾವಿದರಾಗಿ ಹಾರ್ಮೋನಿಯಂನಲ್ಲಿ ಶ್ರೀಪತಿ ಭಟ್ ಬೆಳ್ಳೇರಿ ಮತ್ತು ತಬಲಾದಲ್ಲಿ ಕೌಶಿಕ್ ಮಂಜನಾಡಿ ಸಹಕಾರ ನೀಡಿದರು. ದಿನಾಂಕ 19 ನವೆಂಬರ್ 2024ರಿಂದ 25 ನವೆಂಬರ್ 2024ರವರೆಗೆ ಆಚರಿಸಲಾಗುವ ‘ವಿಶ್ವ ಪರಂಪರೆಯ ಸಪ್ತಾಹ’ದಲ್ಲಿ ಉಪನ್ಯಾಸ ಮತ್ತು ಪ್ರದರ್ಶನಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ರಾಷ್ಟ್ರದ ಶ್ರೀಮಂತ ಕಲಾತ್ಮಕ ಮತ್ತು ಸಾಂಸ್ಕೃತಿಕ ಪರಂಪರೆಯ ಬಗ್ಗೆ ಮೆಚ್ಚುಗೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಹರಿದಾಸ ಶೇಣಿ ಮುರಳಿ ಅವರು ಹರಿಕಥೆಯ ಇತಿಹಾಸವನ್ನು ವಿವರಿಸಿದರು. “ಸಾಮಾನ್ಯವಾಗಿ ವಿಷ್ಣುವಿನ ಪೌರಾಣಿಕ…
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಬೆಂಗಳೂರು ಕ.ಸಾ.ಪ. ವತಿಯಿಂದ ‘69ನೆಯ ಕನ್ನಡ ರಾಜ್ಯೋತ್ಸವ’ ಮತ್ತು ಪರಿಷತ್ತಿನ ವಿವಿಧ ದತ್ತಿ ಪ್ರಶಸ್ತಿಗಳ ಪ್ರದಾನ ಕಾರ್ಯಕ್ರಮವು ದಿನಾಂಕ 23 ನವೆಂಬರ್ 2024ರಂದು ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ಮಾತನಾಡಿ “ಕನ್ನಡ ರಾಜ್ಯೋತ್ಸವದ ಆಚರಣೆ ನವಂಬರ್ ತಿಂಗಳಿಗೆ ಸೀಮಿತವಾಗದೆ ನಿತ್ಯೋತ್ಸವವಾಗಿ ಆಚರಣೆಗೊಳ್ಳಲಿ, ಕನ್ನಡಿಗರು ತಮ್ಮ ಭಾಷೆಗೆ ಸಮರ್ಪಸಿಕೊಳ್ಳುವ ಕೆಲಸವನ್ನು ಪ್ರತಿನಿತ್ಯವೂ ಮಾಡಲಿ. ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ, ಕನ್ನಡಿಗ-ಕರ್ನಾಟಕಕ್ಕೆ ದುಡಿಯುವ ಸಂಸ್ಥೆಯಾಗಿದ್ದು, ನಿರಂತರವಾಗಿ ಕನ್ನಡವನ್ನು ಜಾಗೃತಿಗೊಳಸುತ್ತಿರುವ ಸಂಸ್ಥೆಯಾಗಿದೆ. ಕನ್ನಡಕ್ಕೆ ಅಪಾರ ಕೊಡುಗೆ ನೀಡಿದ ಹಲವು ಹಿರಿಯರ ಮಾತೃಭಾಷೆ ಕನ್ನಡವಾಗಿರಲಿಲ್ಲ. ಅಷ್ಟೇ ಅಲ್ಲ ವಿದೇಶದಿಂದ ಬಂದ ಮೊಗ್ಲಿಂಗ್, ಕಿಟಲ್, ಕಬ್ಬನ್ ಮೊದಲಾದವರು ಕನ್ನಡ ನಾಡಿಗೆ ಬಹು ದೊಡ್ಡ ಕೊಡುಗೆಗಳನ್ನು ನೀಡಿದ್ದಾರೆ. ಇದು ನಮಗೆ ಪ್ರೇರಣೆಯಾಗಬೇಕು. ಕನ್ನಡ ಸಾಹಿತ್ಯ ಬಹು ಶ್ರೀಮಂತವಾಗಿದೆ. ನಮ್ಮಲ್ಲಿ ಬೆಳಗನ್ನು ‘ಮೂಡಣ ಮನೆಯ ಮುತ್ತಿನ…
ಮಂಗಳೂರು : ಶರಧಿ ಪ್ರತಿಷ್ಠಾನ (ರಿ.) ಮಂಗಳೂರು ಅರ್ಪಿಸುವ ‘ಕಲಾ ಪರ್ಬ’ ಚಿತ್ರ ನೃತ್ಯ ಮೇಳವನ್ನು ದಿನಾಂಕ 11 ಜನವರಿ 2025 ಮತ್ತು 12 ಜನವರಿ 2025ರಂದು ಮಂಗಳೂರಿನ ಕದ್ರಿ ಪಾರ್ಕಿನಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಚಿತ್ರಕಲಾ ಪ್ರದರ್ಶನ, ನೃತ್ಯಕಲಾ ಪ್ರದರ್ಶನ, ಶಿಲ್ಪಕಲಾ ಪ್ರದರ್ಶನ, ವಿಚಾರ ಗೋಷ್ಠಿ, ಸಂವಾದ, ಕಲಾ ಕಮ್ಮಟ ಮತ್ತು ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಕಲಾವಿದರೆಲ್ಲರನ್ನೂ ಒಗ್ಗೂಡಿಸಿ ವಿವಿಧ ಕಲಾ ಪ್ರಕಾರಗಳನ್ನು ಒಂದೇ ಕಡೆ ಅಭಿವ್ಯಕ್ತ ಪಡಿಸುವ ಮತ್ತು ಇದರ ಮೂಲಕ ಕಲಾ ಕ್ಷೇತ್ರ ಇನ್ನಷ್ಟು ವಿಕಸನವಾಗುವ ಉದ್ದೇಶವನ್ನು ಇಟ್ಟುಕೊಂಡು ಈ ‘ಕಲಾ ಪರ್ಬ’ವನ್ನು ಆಯೋಜಿಸಲಾಗುತ್ತಿದೆ. ಇಲ್ಲಿ ಮೂರ್ತ – ಅಮೂರ್ತ, ಹಿರಿಯ – ಕಿರಿಯ ಎಂಬ ಯಾವುದೇ ಅಂತರ, ಬೇಧ ಇಲ್ಲದೇ ಎಲ್ಲಾ ಕಲಾವಿದರು ತಮ್ಮ ಕಲಾ ಪ್ರಕಾರಗಳನ್ನು ಕಲಾ ವೀಕ್ಷಕರಿಗೆ, ಕಲಾಭಿಮಾನಿಗಳಿಗೆ ಕಲಾಕೃತಿಗಳ ಪ್ರದರ್ಶನ, ಮಾರಾಟ ಮತ್ತು ಪ್ರಾತ್ಯಕ್ಷಿಕೆ ಮೂಲಕ ಪರಿಚಯಿಸುವುದು ಪ್ರಮುಖವಾಗಿರುತ್ತದೆ. ಚಿತ್ರ ಕಲೆ, ಶಿಲ್ಪಕಲೆ ಮತ್ತು ನೃತ್ಯ ಪ್ರಕಾರಗಳ ವಿವಿಧ ರೂಪಗಳ…
ಉಡುಪಿ : ವಿಶ್ವ ಮಾನವ ರಾಷ್ಟ್ರಕವಿ ಕುವೆಂಪು ಸಂಸ್ಮರಣೆಯ ಅಂಗವಾಗಿ ಕರ್ನಾಟಕ ರಾಜ್ಯ ಯುವ ಬರಹಗಾರರ ಬಳಗ (ರಿ.) ಉಡುಪಿ ಜಿಲ್ಲಾ ಘಟಕದ ವತಿಯಿಂದ ಉಡುಪಿ ನಗರದಲ್ಲಿ ಡಿಸೆಂಬರ್ ತಿಂಗಳಿನಲ್ಲಿ ಹಮ್ಮಿಕೊಂಡಿರುವ ಜಿಲ್ಲಾ ಮಟ್ಟದ ಪ್ರಥಮ ಕವಿಗೋಷ್ಠಿಗೆ ಉಡುಪಿ ಜಿಲ್ಲೆಯ ಆಸಕ್ತ ಕವಿ-ಕವಯಿತ್ರಿಯರಿಂದ ಕವನಗಳನ್ನು ಆಹ್ವಾನಿಸಲಾಗಿದೆ ಎಂದು ಜಿಲ್ಲಾಧ್ಯಕ್ಷರಾದ ಜಿ.ಎನ್. ಕಿರಣ್ ಕುಮಾರ್ ತಿಳಿಸಿದ್ದಾರೆ. ಈ ಕವಿಗೋಷ್ಠಿಯಲ್ಲಿ ಭಾಗವಹಿಸಲು ಇಚ್ಛಿಸುವ ಜಿಲ್ಲೆಯ ಯಾವುದೇ ವಯೋಮಾನದ ಆಸಕ್ತ ಕವಿ-ಕವಯಿತ್ರಿಯರು ಯಾವುದೇ ವಸ್ತು ವಿಷಯ ಕುರಿತು ರಚಿಸಿದ, ತಮ್ಮ ಸ್ವ-ರಚಿತ 20 ಸಾಲುಗಳ ಮಿತಿಯೊಳಗಿನ ಎರಡು ಕವಿತೆಗಳು / ಗಜಲ್ ಗಳನ್ನು ಅಥವಾ 6 ಸಾಲಿನ ಮಿತಿಯೊಳಗಿನ ಅರು ಚುಟುಕು / ಹನಿಗವಿತೆಗಳನ್ನು ಕಳುಹಿಸಿಕೊಡಬೇಕು. ಆಯ್ಕೆಯಾದ ಕವಿತೆಗಳ ಕವಿಗಳಿಗೆ ಜಿಲ್ಲಾ ಮಟ್ಟದ ಕವಿಗೋಷ್ಠಿಯಲ್ಲಿ ಕವನ ವಾಚಿಸಲು ಅವಕಾಶ ಮಾಡಿಕೊಡಲಾಗುವುದು. ಜೊತೆಗೆ ಭಾಗವಹಿಸುವ ಎಲ್ಲಾ ಕವಿಗಳಿಗೂ ಬಳಗದ ಉದ್ಘಾಟನಾ ಸಮಾರಂಭದಲ್ಲಿ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಗುವುದು. ಆಸಕ್ತ ಕವಿಗಳು ತಮ್ಮ ಕವಿತೆಗಳನ್ನು…
ತೆಕ್ಕಟ್ಟೆ : ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ಇದರ ಸಂಯೋಜನೆಯಲ್ಲಿ ದಿನಾಂಕ 23 ನವೆಂಬರ್ 2024ರಂದು ಗೋಪಾಡಿ ದಿ. ರಾಮಚಂದ್ರ ಭಟ್ ಇವರ ನಿವಾಸದಲ್ಲಿ ‘ಸಿನ್ಸ್ 1999 ಶ್ವೇತಯಾನ -78’ ಸರಣಿ ಕಾರ್ಯಕ್ರಮವಾಗಿ “ಯಕ್ಷ ಭಾವ ರಸಾಯನ” ರಂಗ ಪ್ರಸ್ತುತಿಯಲ್ಲಿ ಪ್ರಸಿದ್ಧ ಉದ್ಯಮಿ ಗೋಪಾಡಿ ಶ್ರೀನಿವಾಸ ರಾವ್, ರುಕ್ಮಿಣೀ ಶ್ರೀನಿವಾಸ ಹಾಗೂ ಜಿ. ಆರ್. ಕೃಷ್ಣಮೂರ್ತಿ ಇವರುಗಳನ್ನು ಸಂಸ್ಥೆಯ ಗುರು ಲಂಬೋದರ ಹೆಗಡೆಯವರು ಗೌರವಿಸಿದರು. ಈ ಕಾರ್ಯಕ್ರಮದ ಆಯೋಜಕರಾದ ಗೋಪಾಡಿ ಶ್ರೀನಿವಾಸ್ ರಾವ್ ಇವರು ಮಾತನಾಡಿ “ಅವಿರತ ಪ್ರಯತ್ನದಿಂದ ಯಶಸ್ಸು ಖಂಡಿತಾ ಸಾಧ್ಯ. ಕ್ಷೇತ್ರ ಯಾವುದಾದರೂ ನಿರಂತರ ಪ್ರಯತ್ನಬೇಕು. ಬೆಳೆ ಬರಲಿಲ್ಲ ಎನ್ನುವ ಕಾರಣಕ್ಕೆ ಭೂಮಿಯನ್ನು ಉಳುಮೆ ಮಾಡದೇ, ಬಿತ್ತನೆ ಮಾಡದೇ ಬಿಡಬಾರದು ಹೇಗೋ ಕಾರ್ಯಕ್ಷೇತ್ರದಲ್ಲೂ ಪ್ರತಿಫಲ ಸಿಗಲಿಲ್ಲವೆನ್ನುವ ಕಾರಣಕ್ಕೆ ಪ್ರಯತ್ನ ಕೈ ಬಿಡಬಾರದು. ಯಶಸ್ವೀ ಕಲಾವೃಂದ ನಿರಂತರ ಚಟುವಟಿಕೆಯಿಂದ ಗೆದ್ದು ಕಲಾಸಕ್ತರ ಮನದಲ್ಲಿ ಸ್ಥಾನ ಪಡೆದಿದ್ದಾರೆ. ಬಹುಬಗೆಯಲ್ಲಿ ಕಾರ್ಯಕ್ರಮದಲ್ಲಿ ನಾವೀನ್ಯತೆಯನ್ನು ಹೊಂದುತ್ತಾ ಹೊಸ ಹೊಸ ಬೆಳೆಯನ್ನು ತೆಗೆಯುವುದರ ಮೂಲಕ ಕಲಾಸಕ್ತರಿಗೆ…
ಧಾರವಾಡ : ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತು (ರಿ.) ಬೆಂಗಳೂರು ಇದರ ವತಿಯಿಂದ ಕನ್ನಡ ರಾಜ್ಯೋತ್ಸವದ ನುಡಿ ಸಂಭ್ರಮ -2024 ಪ್ರಥಮ ರಾಜ್ಯ ಮಟ್ಟದ ಕವಿಪೀಠ ಮಹಾಸಮ್ಮೇಳನ ಕಾರ್ಯಕ್ರಮವನ್ನು ದಿನಾಂಕ 24 ನವೆಂಬರ್ 2024ರಂದು ಬೆಳಿಗ್ಗೆ 10-30 ಗಂಟೆಗೆ ಧಾರವಾಡದ ಕರ್ನಾಟಕ ಕಾಲೇಜು ಆವರಣದ ಸೃಜನಾ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಖ್ಯಾತ ಸಾಹಿತಿಗಳು ಸುಪ್ರಸಿದ್ಧ ವಕೀಲರು ರಾಷ್ಟ್ರೀಯ ಅಂತ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಶ್ರೀ ಮಲ್ಲಿಕಾರ್ಜುನ ಗ. ಭೃಂಗಿಮಠ ಇವರು ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಲಿರುವರು. ಬೆಳಿಗ್ಗೆ 8-30 ಗಂಟೆಯಿಂದ ನಾಡ ಧ್ವಜಾರೋಹಣ ಮತ್ತು ಪರಿಷತ್ತಿನ ಧ್ವಜಾರೋಹಣ, ನಾಡದೇವಿ ಭುವನೇಶ್ವರಿ ಮಾತೆ ಭಾವಚಿತ್ರ ಹಾಗೂ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ಪರಮ ಪೂಜ್ಯ ಶ್ರೀ ಮ.ನಿ.ಪ್ರ. ಕುಮಾರ ವಿರೂಪಾಕ್ಷೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಧಾರವಾಡದ ಕ್ಲಾಸಿಕ ಸಮೂಹ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಶ್ರೀ ಲಕ್ಷ್ಮಣ ಎಲ್. ಉಪ್ಪಾರ ಇವರು ಈ ಸಮಾರಂಭದ ಉದ್ಘಾಟನೆ ಮಾಡಲಿದ್ದಾರೆ. ಬೆಳಗಾವಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಕೆ.ಎಚ್.…
ಬೆಂಗಳೂರು : ಲಹರಿ ಪ್ರಸ್ತುತ ಪಡಿಸುವ ಡಾ. ಜನಾರ್ದನ ರಾವ್ ಹವಾಂಜೆ ಇವರಿಂದ ಕರಾವಳಿ ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರವಾದ ‘ಕಾವಿ ಕಲೆ’ಯ ಕರಿತು ಸಂವಾದ ಕಾರ್ಯಕ್ರಮವನ್ನು ದಿನಾಂಕ 24 ನವೆಂಬರ್ 2024ರಂದು ಜಕ್ಕೂರ್ ಖಾಸಗಿ ನಿವಾಸದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಭಾಗವಹಿಸುವಿಕೆಗೆ ನೋಂದಣಿ ಅಗತ್ಯವಿರುತ್ತದೆ. viewform
ಬೆಂಗಳೂರು : ಪ್ರತಿಷ್ಠಿತ ‘ಕನಕ ಗೌರವ ಪ್ರಶಸ್ತಿ’ಯನ್ನು ಬೆಂಗಳೂರಿನಲ್ಲಿ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ದಿನಾಂಕ 18 ನವೆಂಬರ್ 2024ರಂದು ಡಾ. ತಾಳ್ತಜೆ ವಸಂತ ಕುಮಾರ ಪುತ್ತೂರು ಇವರಿಗೆ ನೀಡಿ ಗೌರವಿಸಿದರು. ದಿವಂಗತ ಕೃಷ್ಣ ಭಟ್ಟ ಹಾಗೂ ಲಕ್ಷ್ಮಿ ಇವರ ಸುಪುತ್ರನಾದ ಡಾ. ತಾಳ್ತಜೆ ವಸಂತ ಕುಮಾರ ಇವರು ‘ಕರ್ನಾಟಕದಲ್ಲಿ ಬೌದ್ಧ ಸಂಸ್ಕೃತಿ’ ಎಂಬ ವಿಷಯದಲ್ಲಿ ಪಿ.ಎಚ್.ಡಿ. ಪದವಿಯನ್ನು ಪಡೆದಿರುತ್ತಾರೆ. ಸುದೀರ್ಘ 37 ವರ್ಷಗಳ ಕಾಲ ಉಪನ್ಯಾಸಕ ವೃತ್ತಿಯನ್ನು ಮಾಡಿರುವ ಇವರು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಹಾಗೂ ಮುಂಬೈ ವಿಶ್ವವಿದ್ಯಾನಿಲಯದ ಮುಖ್ಯಸ್ಥರಾಗಿ ಸೇವೆಯನ್ನು ಸಲ್ಲಿಸಿರುತ್ತಾರೆ. ಇವರ ಮಾರ್ಗದರ್ಶನದಲ್ಲಿ 17 ಮಂದಿ ಪಿ.ಎಚ್.ಡಿ. ಹಾಗೂ 18 ಮಂದಿ ಎಂ.ಫಿಲ್. ಪಡೆದಿರುತ್ತಾರೆ. ಸಾಹಿತ್ಯ ಕ್ಷೇತ್ರದಲ್ಲಿ 55 ವರ್ಷಗಳ ಸುದೀರ್ಘ ಸೇವೆಯನ್ನು ನೀಡಿದ ಇವರು ಈವರೆಗೆ ಒಟ್ಟು 24 ಕೃತಿಗಳನ್ನು ರಚಿಸಿದ್ದು, ಇವರು ರಚಿಸಿದ ಅನೇಕ ಲೇಖನಗಳು ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 1993ರಲ್ಲಿ ಭಾರತ ಜರ್ಮನಿ ಸಾಂಸ್ಕೃತಿಕ ವಿನಿಮಯ ಯೋಜನೆಯ…
ಚಿಕ್ಕಬಳ್ಳಾಪುರ : ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಇದರ ವತಿಯಿಂದ ‘ಪುರಸ್ಕಾರ ಪ್ರದಾನ ಸಮಾರಂಭ’ವು ದಿನಾಂಕ 24 ನವೆಂಬರ್ 2024ರಂದು ಬೆಳಿಗ್ಗೆ 10-30 ಗಂಟೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಶ್ರೀಕ್ಷೇತ್ರ ಕೈವಾರದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಆದಿಕವಿ ಮತ್ತು ವಾಗ್ದೇವಿ ಪುರಸ್ಕಾರ ಪ್ರದಾನ ಮಾಡಲಾಗುವುದು. ಶ್ರೀಕ್ಷೇತ್ರ ಕೈವಾರದ ಧರ್ಮಾಧಿಕಾರಿ ಡಾ. ಎಂ.ಆರ್. ಜಯರಾಮ್ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಏಕವ್ಯಕ್ತಿ ತಾಳಮದ್ದಳೆ ಪ್ರಕಾರದ ರೂವಾರಿ ನಿವೃತ್ತ ಆಕಾಶವಾಣಿ ಅಧಿಕಾರಿಗಳಾದ ಶ್ರೀ ದಿವಾಕರ ಹೆಗಡೆ ಕೆರೆಹೊಂಡ ಇವರು ಮುಖ್ಯ ವಕ್ತಾರರಾಗಿ ಭಾಗವಹಿಸಲಿರುವರು. ಅ.ಭಾ.ಸಾ.ಪ. ಇದರ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ರಘುನಂದನ ಭಟ್ ನರೂರ ಇವರು ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ.
ಬೆಂಗಳೂರು : ಯುವಕ ಸಂಘ ಇದರ ವತಿಯಿಂದ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಹಾಗೂ ಕಾವಿ ಆರ್ಟ್ ಫೌಂಡೇಶನ್ ಇವುಗಳ ಸಹಯೋಗದೊಂದಿಗೆ ಪ್ರಸ್ತುತ ಪಡಿಸುವ ‘ಕಾವ್ಯ ರೇಖಾ’ ಜನಾರ್ದನ ರಾವ್ ಹವಾಂಜೆಯವರ ಕಾವಿ ಭಿತ್ತಿಚಿತ್ರಗಳ ಕಲಾ ಪ್ರದರ್ಶನವನ್ನು ದಿನಾಂಕ 25 ನವೆಂಬರ್ 2024ರಿಂದ 08 ಡಿಸೆಂಬರ್ 2024ರವರೆಗೆ ಬೆಂಗಳೂರಿನ ಜಯನಗರ 4ನೇ ಬ್ಲಾಕ್, ಯುವ ಪಥ, ಆರ್ಟ್ ಗ್ಯಾಲರಿಯಲ್ಲಿ ಆಯೋಜಿಸಲಾಗಿದೆ. ಈ ಕಲಾ ಪ್ರದರ್ಶನವು ದಿನಾಂಕ 25 ನವೆಂಬರ್ 2024ರಂದು ಸಂಜೆ 6-30 ಗಂಟೆಗೆ ಉದ್ಘಾಟನೆಗೊಳ್ಳಲಿದ್ದು, ಪ್ರದರ್ಶನವು ದಿನಾಂಕ 26 ನವೆಂಬರ್ 2024ರಿಂದ ಪ್ರತಿ ದಿನ 10-00 ಗಂಟೆಯಿಂದ 7-30 ಗಂಟೆವರೆಗೆ ನಡೆಯಲಿದೆ.