Subscribe to Updates
Get the latest creative news from FooBar about art, design and business.
Author: roovari
ಸುಳ್ಯ : ಹಿರಿಯ ಯಕ್ಷಗಾನ ಕಲಾವಿದ, ಅರ್ಥಧಾರಿ, ನಿವೃತ್ತ ಶಿಕ್ಷಕ ಕೆ. ವಿ. ಗಣಪಯ್ಯ ಇವರು ಅಲ್ಪಕಾಲದ ಅಸೌಖ್ಯದಿಂದ ದಿನಾಂಕ 04 ಫೆಬ್ರವರಿ 2025 ರ ಮಂಗಳವಾರದಂಡು ನಿಧನರಾದರು. ಇವರಿಗೆ 92 ವರ್ಷ ವಯಸ್ಸಾಗಿತ್ತು. ಬೆಳ್ತಂಗಡಿ, ಪುತ್ತೂರು, ಸುಳ್ಯ ತಾಲ್ಲೂಕುಗಳ ವಿವಿಧ ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದ ಇವರು ಬಳಿಕ ಕಾಣಿಯೂರು ನಿಂತಿಕಲ್ಲು ಬಳಿಯ ಆಲಾಜೆ ಎಂಬಲ್ಲಿ ಕೃಷಿಕರಾಗಿ ನಿವೃತ್ತ ಜೀವನ ನಡೆಸುತ್ತಿದ್ದರು. ಗಣಪಯ್ಯ ಕೆ.ವಿ. ಹರಿತವಾದ ಮಾತಿನ ಅರ್ಥಗಾರಿಕೆಗೆ ಹೆಸರುವಾಸಿಯಾಗಿದ್ದರು. ಭೀಷ್ಮ, ಕೌರವ, ವಾಲಿ, ತಾಮ್ರಧ್ವಜ ಮೊದಲಾದ ಪಾತ್ರಗಳನ್ನು ವಿಶಿಷ್ಟವಾಗಿ ಕಟ್ಟಿಕೊಡುತ್ತಿದ್ದರು. ಅನೇಕ ಯಕ್ಷಗಾನ ಸಂಘ ಸಂಸ್ಥೆಗಳಿಗೆ, ಅರ್ಥಧಾರಿಗಳಿಗೆ ಮಾರ್ಗದರ್ಶನ ಮಾಡಿದ್ದರು.
ಮಂಗಳೂರು : ಮಂಗಳೂರಿನ ಕಲಾ ಸಾಧನ ಸಂಸ್ಥೆಯು ಮಂಗಳೂರಿನ ಸ್ವಸ್ತಿಕ ನ್ಯಾಶನಲ್ ಬಿಸಿನೆಸ್ ಸ್ಕೂಲ್ ಸಹಭಾಗಿತ್ವದಲ್ಲಿ ಆಯೋಜಿಸುವ ‘ಸ್ವರ ಸಾನ್ನಿಧ್ಯ’ ರಾಷ್ಟ್ರೀಯ ಮಟ್ಟದ ಯುವ ಸಂಗೀತೋತ್ಸವ ಹಾಗೂ ದೇಶದ ಖ್ಯಾತ ಸಂಗೀತ ಕಲಾವಿದರ ಸಂಗೀತ ಕಾರ್ಯಕ್ರಮವು ದಿನಾಂಕ 08 ಫೆಬ್ರವರಿ 2025ರಂದು ಮಂಗಳೂರಿನ ಟಿ. ಎಂ. ಎ. ಪೈ ಇಂಟರ್‌ನ್ಯಾಶನಲ್ ಕನ್ವೆನ್ಷನ್ ಸೆಂಟರ್ ಇಲ್ಲಿ ನಡೆಯಲಿದೆ. ಅಂದು ಬೆಳಗ್ಗೆ ಘಂಟೆ 8.00ಕ್ಕೆ ದೀಪ ಪ್ರಜ್ವಲನದೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಬೆಳಗ್ಗೆ 8.40ರಿಂದ 9.30ರ ವರೆಗೆ ವಿಭಾ ಎಸ್. ನಾಯಕ್ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ನಡೆಯಲಿದೆ ಇವರಿಗೆ ತಬಲಾದಲ್ಲಿ ವಿಘ್ನೇಶ್ ಪ್ರಭು, ಹಾರ್ಮೋನಿಯಂನಲ್ಲಿ ಹೇಮಂತ್ ಭಾಗವತ್ ಸಾಥ್ ನೀಡಲಿದ್ದಾರೆ. ಬಳಿಕ 9.40ರಿಂದ 10.30ರ ವರೆಗೆ ಮೂಡುಬಿದಿರೆಯ ಸ್ವಯಂ ಪ್ರಕಾಶ್ ಪ್ರಭು ಇವರಿಂದ ಕೊಳಲು ವಾದನ, 10.40ರಿಂದ 11.30ರ ವರೆಗೆ ಆತ್ರೇಯಾ ಗಂಗಾಧರ್ ಇವರಿಂದ ಗಾಯನ ನಡೆಯಲಿದೆ. 11.40ರಿಂದ ಕಲಾಸಾಧನ ವಿದ್ಯಾರ್ಥಿಗಳಿಂದ ಕಾರ್ಯಕ್ರಮ, ಸಂಜೆ ಘಂಟೆ 5.00ಕ್ಕೆ ಹಿಂದೂಸ್ತಾನಿ ಸಂಗೀತ ಕಛೇರಿ ಉದ್ಘಾಟನ ನಡೆಯಲಿದ್ದು,…
ಬಂಟ್ವಾಳ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ ಧರ್ಮಸ್ಥಳ ಇವರು ದಿನಾಂಕ 08 ಫೆಬ್ರವರಿ 2025ರಂದು ಸಂಜೆ 7-00 ಗಂಟೆಗೆ ಪರಾರಿಗುತ್ತು ದಿ. ಬಾಲಕೃಷ್ಣ ಶೆಟ್ಟಿ ಯವರ ತೃತೀಯ ವರ್ಷದ ಸವಿನೆನಪಿಗಾಗಿ ಬಂಟ್ವಾಳ ಪರಾರಿಗುತ್ತು ಮನೆಯಲ್ಲಿ ‘ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಬಯಲಾಟವನ್ನು ಆಡಿ ತೋರಿಸಲಿರುವರು. ಇದೇ ಸಂದರ್ಭದಲ್ಲಿ ಸಂಪಾಜೆ ದಿ. ಶೀನಪ್ಪ ರೈ, ಕುಂಬಳೆ ದಿ. ಶ್ರೀಧರ ರಾವ್ ಮತ್ತು ಬಂಟವಾಳ ದಿ. ಜಯರಾಮ ಆಚಾರ್ಯ ಇವರ ಸಂಸ್ಮರಣಾ ಕಾರ್ಯಕ್ರಮ ಹಾಗೂ ಸಂಪಾಜೆ ಶ್ರೀಮತಿ ಗಿರಿಜಾವತಿ ಶೀನಪ್ಪ ರೈ, ಕುಂಬಳೆ ಶ್ರೀಮತಿ ಸುಲೋಚನಾ ಶ್ರೀಧರ ರಾವ್ ಮತ್ತು ಬಂಟವಾಳ ಶ್ರೀಮತಿ ಶ್ಯಾಮಲಾ ಜಯರಾಮ ಆಚಾರ್ಯ ಇವರುಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಕಾಸರಗೋಡು : “ಸಂಗೀತವಾಗಲಿ ಜ್ಞಾನವಾಗಲಿ ಹಠತ್ತಾಗಿ ಬರುವುದಿಲ್ಲ. ಅದನ್ನು ಕಷ್ಟಪಟ್ಟು ಕರಗತ ಮಾಡಿಕೊಳ್ಳಬೇಕು. ಸಂಗೀತ ಕಲಿಯುವುದರಿಂದ ಅಥವಾ ಕೇಳುವುದರಿಂದ ಮನಸ್ಸು ಉಲ್ಲಸಿತವಾಗುವುದರ ಜೊತೆಗೆ ಆರೋಗ್ಯವು ವೃದ್ಧಿಯಾಗುತ್ತದೆ” ಎಂದು ಖ್ಯಾತ ವೈದ್ಯರು ಮತ್ತು ಮೃದಂಗವಾದಕರಾಗಿರುವ ಡಾ. ಶಂಕರರಾಜ್ ಆಲಂಪಾಡಿಯವರು ಹೇಳಿದರು. ಅವರು ಕಾಸರಗೋಡಿನ ಖ್ಯಾತ ಸಾಂಸ್ಕೃತಿಕ ಸಾಹಿತ್ಯಿಕ ಸಂಸ್ಥೆಯಾದ ರಂಗ ಚಿನ್ನಾರಿ ಹಾಗೂ ಅದರ ಸಂಗೀತ ಘಟಕ ಸ್ವರ ಚಿನ್ನಾರಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದೊಂದಿಗೆ ಏರ್ಪಡಿಸಿದ ಭಕ್ತಿಗೀತೆಗಳ ಗಾಯನ ‘ಭಕ್ತಿ ತೀರ್ಥ’ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಖ್ಯಾತ ಹರಿದಾಸರು ನ್ಯಾಯವಾದಿಗಳು ಆಗಿರುವ ಶಂ ನಾಡಿಗ ರವರು ಮಾತನಾಡಿ “ರಂಗ ಚಿನ್ನಾರಿಯು ನಡೆದುಕೊಂಡು ಬರುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಉಳಿದವರಿಗೆ ಮಾದರಿ ಎಂದರಲ್ಲದೆ ಗುರಿ ಸಾಧಿಸಲು ಗುರು ಬೇಕು ಗುರುವಿಲ್ಲದ ವಿದ್ಯೆಗೆ ಸಂಪೂರ್ಣ ಫಲ ಸಿಕ್ಕದು ಗುರು ಮುಖೇನ ಕಲಿತ ವಿದ್ಯೆ ಸಾರ್ಥಕ” ಎಂದು ಹೇಳಿದರು. ಮಂಗಳೂರಿನ ಖ್ಯಾತ ತುಳು ಸಿನಿಮಾ…
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಯಶಸ್ವೀ ಕಲಾವೃಂದದ ‘ಸಿನ್ಸ್ 1999 ಶ್ವೇತಯಾನ-108’ ಕಾರ್ಯಕ್ರಮ | ಫೆಬ್ರವರಿ 08
ಬೆಂಗಳೂರು : ಯಶಸ್ವೀ ಕಲಾವೃಂದ (ರಿ.) ಕೊಮೆ, ತೆಕ್ಕಟ್ಟೆ ಇವರ ವತಿಯಿಂದ ಸಿನ್ಸ್ 1999 ಶ್ವೇತಯಾನ -108 ಕಾರ್ಯಕ್ರಮದಡಿಯಲ್ಲಿ ‘ಯಶಸ್ವಿ ಕಲೋತ್ಸವ’ ವಾಗ್ವಿಲಾಸದ ಯಕ್ಷವಿಶೇಷವನ್ನು ದಿನಾಂಕ 08 ಫೆಬ್ರವರಿ 2025ರಂದು ರಾತ್ರಿ 9-30 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಹೂವಿನಕೋಲು, ಯಕ್ಷ ಗಾಯನ, ಪರಂಪರೆಯ ಒಡ್ಡೋಲಗ, ವಾಗ್ವಿಲಾಸದ ಯಕ್ಷವಿಶೇಷ ಪ್ರಸ್ತುತಗೊಳ್ಳಲಿದೆ.
ಕರಾವಳಿಯ ಪ್ರಸಿದ್ಧ ಸ್ಥಾನವನ್ನು ಪಡೆದ ಕಲೆ “ಯಕ್ಷಗಾನ”. ಕರ್ನಾಟಕದ ಗಂಡು ಕಲೆಯಾಗಿರುವ ಯಕ್ಷಗಾನ ಪಾರ್ತಿ ಸುಬ್ಬರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಜೃಂಭಿಸುತ್ತಿದೆ. ಇಂತಹ ಕಲೆಯಲ್ಲಿ ರಾರಾಜಿಸುತ್ತಿರುವ ಕಲಾವಿದ ಸತ್ಯಜಿತ್ ಹೆಚ್ ರಾವ್. 27.03.2001ರಂದು ಹರಿಪ್ರಸಾದ್ ರಾವ್ ವಿ ಹಾಗೂ ಹೇಮಾ ಹೆಚ್ ರಾವ್ ಇವರ ಮಗನಾಗಿ ಜನನ. ಪ್ರಾಥಮಿಕ ಶಿಕ್ಷಣವನ್ನು ಮೈಸೂರಿನಲ್ಲಿ ಪೂರ್ಣಗೊಳಿಸಿ, ಶ್ರೀ ಸತ್ಯಸಾಯಿ ಸೇವಾ ಲೋಕ ಅಳಿಕೆ (ಹೈಸೂಲ್ ಮತ್ತು ಪಿ.ಯು.ಸಿ) ಹಾಗೂ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಪದವಿ ಹಾಗೂ ಉನ್ನತ ಶಿಕ್ಷಣ ಎಮ್.ಬಿ.ಎ ಪದವಿಯನ್ನು ಪಡೆದಿರುತ್ತಾರೆ. ಯಕ್ಷಗಾನವು ಇವರ ಮನೆಯಲ್ಲಿ ಹಿರಿಯರಿಂದ ರಕ್ತಗತವಾಗಿ ಬಂದ ಕಲೆ. ಅಜ್ಜ, ಮುತ್ತಜ್ಜ, ತಂದೆ ಮತ್ತು ಅಣ್ಣನವರೆಲ್ಲರೂ ಯಕ್ಷಗಾನದ ಒಂದೊಂದು ಕ್ಷೇತ್ರದಲ್ಲಿ ತೊಡಗಿಸಿಕೊಂಡವರು. ಬಾಲ್ಯದಲ್ಲಿ ಮೈಸೂರಿನ ರಮೇಶ್ ಧಾನೂರ್ ಇವರಿಂದ ತಬಲಾ ವಾದನದ ಶಿಕ್ಷಣವನ್ನು ಪಡೆದು ಬಳಿಕ ಶ್ರೀ ಸತ್ಯಸಾಯಿ ಲೋಕ ಸೇವಾ ಕೇಂದ್ರದಲ್ಲಿ ನಿತ್ಯ ಭಜನೆಗೆ ತಬಲಾ ವಾದನದ ಅವಕಾಶ ನಿತ್ಯವೂ ಲಭಿಸಿತು. ಅಲ್ಲಿಯೇ ಇದ್ದ ಯಕ್ಷಗಾನದ ಮಕ್ಕಳ ತಂಡದಲ್ಲಿ ಅಭ್ಯಾಸಕ್ಕಾಗಿ…
ಬೆಂಗಳೂರು : ಸೈಡ್ ವಿಂಗ್ (ರಿ.) ಬೆಂಗಳೂರು ಪ್ರಸ್ತುತ ಪಡಿಸುವ ಶೈಲೇಶ್ ಕುಮಾರ್ ಎಂ.ಎಂ. ಇವರ ರಚನೆ ನಿರ್ಮಾಣ ಮತ್ತು ನಿದೇಶನದಲ್ಲಿ ‘ಸಡನ್ನಾಗ್ ಸತ್ಹೋದ್ರೆ’ ನಾಟಕ ಪ್ರದರ್ಶನವನ್ನು ದಿನಾಂಕ 08 ಫೆಬ್ರವರಿ 2025ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ಮಲ್ಲೇಶ್ವರದ ಸೇವಾ ಸದನದಲ್ಲಿ ಆಯೋಜಿಸಲಾಗಿದೆ. ಟಿಕೆಟ್ ದರ ರೂ.150/- ಆಗಿದ್ದು, ಹೆಚ್ಚಿನ ಮಾಹಿತಿಗಾಗಿ 9845087901 ಸಂಖ್ಯೆಯನ್ನು ಸಂಪರ್ಕಿಸಿರಿ.
ದಪ್ಪ ಮೀಸೆಯ ಅವಳಪ್ಪನ ಅಮಲು ಕಣ್ಣುಗಳಲಿ ಕದಡಿದ ನೆಮ್ಮದಿಯ ಹುಡುಕಿ ಸೋತಿದ್ದಾಳೆ! ಅಪ್ಪನ ಸೀಸೆಯ ಕಡು ಕಂದು ನೀರಿಗೆ ಅವಳ ಕಣ್ಣೀರಿನ ದಾಹ ತೀರಬಹುದೆಂದು ಕಾದಿದ್ದಾಳೆ! ನಿನ್ನೆಯ ಕನಸಿಗೆ ನಾಳೆಗಳಿಲ್ಲ ಇಂದಿನ ಬದುಕಿಗೆ ಆಸರೆಯಿಲ್ಲ ಕುಡುಕನಮಗಳು ಚುಚ್ಚುವರೆಲ್ಲ ಸ್ನೇಹಿತರಿಲ್ಲ ಬಂಧುಗಳಿಲ್ಲ ಅವಳು ತಲೆ ಎತ್ತಿ ಬದುಕುವುದನ್ನೇ ಮರೆತಿದ್ದಾಳೆ! ಸೀಸೆಯ ನೀರಿಗೆ ಬೆಂಕಿಯ ಸೇಡು ಸುಟ್ಟಿದೆ ಬದುಕು ಬೆಂದಿದೆ ಭಾವ ಹೂವಿನಂತಹ ಹುಡುಗಿ ಮುದುಡಿದ್ದಾಳೆ! ಬಣ್ಣಗೆಟ್ಟ ಅವಳ ಕಥೆಗಳು ಯಾರೋ ಕೇಳುತ್ತೇನೆ ಅನ್ನುತ್ತಾರೆ! ಅಪಾತ್ರರ ಕಣ್ಣ ಅನುಕಂಪಕ್ಕೆ ಮಿಡಿಯುತ್ತಾಳೆ! ಎಲ್ಲರಲ್ಲೂ ಅಪ್ಪನನ್ನು ಹುಡುಕಿ ಸೋಲುತ್ತಾಳೆ! ಬಣ್ಣ ತುಂಬುತ್ತೇನೆಂದು ಬಂದವರು ಮಸಿಯ ಬಳಿಯುತ್ತಾರೆ! ಹೃದಯ ಒಡೆಯುತ್ತಾರೆ ಎಂದೂ ಮುಗಿಯದ ಏಕಾಂಗಿ ಅವಳ ಕವಿತೆಗೆ ಹೆಸರು ಯಾಕೆ? ಅನ್ನುತ್ತಾಳೆ! ಅವಳು ಮಾತು ಮತ್ತು ನಗು ಮರೆತಿದ್ದಾಳೆ! ಅನುಕಂಪ ಸುಡುಗಾಡು ಅನುಭೂತಿ ಬಿಡುಗಡೆಯೆನ್ನುತ್ತಾಳೆ!! -ಅಕ್ಷತಾ ಪ್ರಶಾಂತ್ ಕವಯಿತ್ರಿ/ಆಪ್ತಸಮಾಲೋಚಕಿ/ ಬ್ಯಾಂಕ್ ಉದ್ಯೋಗಿ, ಟೀಚರ್ಸ್ ಬ್ಯಾಂಕ್ ಉಡುಪಿ
ಉಡುಪಿ : ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ರಂಗಭೂಮಿ (ರಿ.) ಉಡುಪಿ ಇದರ ವತಿಯಿಂದ ನಡೆಯುತ್ತಿರುವ ಮೂರು ದಿನಗಳ ‘ರಂಗಭೂಮಿ ರಂಗೋತ್ಸವ’ದ ಎರಡನೇ ದಿನ ದಿನಾಂಕ 02 ಫೆಬ್ರವರಿ 2025 ಭಾನುವಾರದಂದು ಪ್ರಸಿದ್ಧ ವೈದ್ಯ ಡಾ. ಭಾಸ್ಕರಾನಂದ ಕುಮಾರ್ ಇವರು ನಾಡಿನ ಸಾಮಾಜಿಕ, ವೈದ್ಯಕೀಯ, ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡಿರುವ ಅನನ್ಯ ಕೊಡುಗೆಗಾಗಿ ‘2025ನೇ ಸಾಲಿನ ರಂಗಭೂಮಿ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಭಾಸ್ಕರಾನಂದ ಕುಮಾರ್ “ಬಾಲ್ಯದಲ್ಲಿಯೇ ರಂಗ ಭೂಮಿಯತ್ತ ಸೆಳೆತವಿದ್ದ ನಾನು ಮುಂದೆ ಯಕ್ಷಗಾನ ಕ್ಷೇತ್ರದಲ್ಲೂ ಹವ್ಯಾಸಿ ಕಲಾವಿದನಾಗಿ ನನ್ನಿಂದಾದಷ್ಟು ಕಲಾ ಸೇವೆ ಮಾಡಿದ್ದೇನೆ. ವೈದ್ಯ ವೃತ್ತಿಯಲ್ಲಿ ನಡೆಸಿದ ನನ್ನ ಕೆಲವೊಂದು ಸಾಧನೆಗಳು ವಿಶ್ವ ಮಾನ್ಯತೆ ತಂದುಕೊಟ್ಟಿದೆ. ಇದೀಗ ರಂಗಭೂಮಿ ನನ್ನನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಸಂತೋಷ ತಂದಿದೆ” ಎಂದರು. ಮಂಗಳೂರಿನ ಶಾರದಾ ಸಮೂಹ ಸಂಸ್ಥೆಯ ಪ್ರೊ. ಎಂ.ಬಿ. ಪುರಾಣಿಕ್, ಮಂಗಳೂರು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ್, ಎಂಜಿಎಂ ಕಾಲೇಜಿನ…
ಉಡುಪಿ : ನೃತ್ಯ ಸುಧಾ ಸಂಸ್ಥೆಯ ವತಿಯಿಂದ ಕರ್ನಾಟಕ ಕಲಾಶ್ರೀ ಕೀರ್ತಿಶೇಷ ಗುರು ಕಮಲಾ ಭಟ್ ಅವರಿಗೆ ಪುಷ್ಪ ನಮನ ಹಾಗೂ ನೃತ್ಯಾರ್ಚನೆ ‘ನೃತ್ಯ ಕಮಲಾರ್ಪಣಂ’ ಕಾರ್ಯಕ್ರಮವು ದಿನಾಂಕ 26 ಜನವರಿ 2025ರಂದು ಉಡುಪಿಯ ಯಕ್ಷಗಾನ ಕಲಾ ರಂಗದ ಐವೈಸಿ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಡುಪಿ ಅಕಾಡಮಿ ಆಫ್ ಫೈನ್ ಆರ್ಟ್ಸ್ ಪ್ರಾಧ್ಯಾಪಕ ವಿದ್ವಾನ್ ಮಾಲೂರು ಪಿ. ಬಾಲಸುಬ್ರಹ್ಮಣ್ಯಂ ಮಾತನಾಡಿ “ಯಾವುದೇ ಕಲಾ ಸಂಸ್ಥೆ 20ವರ್ಷಗಳನ್ನು ಪೂರೈಸುವದೆಂದರೆ ಅದೊಂದು ದೊಡ್ಡ ಸಾಧನೆಯ ಮೈಲಿಗಲ್ಲು! ಇದರಿಂದ ನೃತ್ಯ ಸುಧಾ ಸಂಸ್ಥೆಯ ಗುರುಗಳು ಮತ್ತು ವಿದ್ಯಾರ್ಥಿಗಳ ಜವಾಬ್ದಾರಿ ಹೆಚ್ಚಾಗಿದೆ. ಸಂಸ್ಥೆ ಇನ್ನಷ್ಟು ಬೆಳೆದು ಬೆಳಗಲಿ” ಎಂದು ಶುಭ ಹಾರೈಸಿದರು. ಉಡುಪಿ ಗೆರೆಬರೆ ಚಿತ್ರಕಲಾ ಕೇಂದ್ರದ ನಿರ್ದೇಶಕ ಜೀವನ್ ಶೆಟ್ಟಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ನೀಡಿದರು. ಹಿರಿಯ ವಿದ್ಯಾರ್ಥಿಗಳು ವಿದುಷಿಯರಾದ ನಿಧಿ ಸಾತ್ವಿಕ್ ಶೆಟ್ಟಿ, ಭಾಗೀರತಿ ಎಂ., ಸಿಂಚನಾ ಎಚ್.ಎಸ್. ಅನುಭವ ಹಂಚಿಕೊಂಡರು. ಉಡುಪಿ ರಾಧಾಕೃಷ್ಣ…