Author: roovari

ಹೈದರಾಬಾದ್ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ವತಿಯಿಂದ ಹೈದರಾಬಾದ್ ಘಟಕದ ಉದ್ಘಾಟನಾ ಸಮಾರಂಭವನ್ನು ದಿನಾಂಕ 10 ಸೆಪ್ಟೆಂಬರ್ 2025ರಂದು ಸಂಜೆ 6-00 ಗಂಟೆಗೆ ಹೈದರಾಬಾದ್ ಬಾಗಲಿಂಗಂಪಳ್ಳಿಯ ಸುಂದರಯ್ಯ ಕಲಾನಿಲಯದಲ್ಲಿ ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ಭಾಗವತ ಪಟ್ಲ ಸತೀಶ ಶೆಟ್ಟಿಯವರಿಗೆ ‘ಯಕ್ಷ ಕಾಮಧೇನು’ ಬಿರುದು ಪ್ರದಾನ ಮಾಡಲಾಗುವುದು.

Read More

ಕ್ಷೇತ್ರವೋ ಜೀವವೋ ಇಳೆಯ ಪಾವಿತ್ರ್ಯತೆಯ ಪ್ರಶ್ನೆ ಮ್ಲಾನವದನ ತಾಯಿಯ ಕಣ್ಣಹನಿ ತೆರೆದ ಕನ್ನಡಿಯಂತಿತ್ತು ಏಕೆ ತಾಯೇ ಖಿನ್ನಳಾದೆ ? ಮತ್ತೊಮ್ಮೆ ಪ್ರಶ್ನೆ ಮಾಡಿದೆ ! ಏನ ಹೇಳಲಿ ಮಗೂ,,,,, ಗದ್ಗದಿತ ಧ್ವನಿಗೆ ಹಕ್ಕಿಗಳೂ ಮೌನ ಎನ್ನೊಡಲ ಬಗೆದಿರುವೆಯಾ ಕಂದ ? ಮರು ಪ್ರಶ್ನೆಗೆ ಅವಾಕ್ಕಾದೆ ಹೇಗೆ ? ಪೊರೆವ ಒಡಲನು ಬಗೆವುದೇ ? ಪಾಪಿಷ್ಟನಾಗಲೊಲ್ಲೆ ! ಅಯ್ಯೋ ಮರುಳೇ ನೀ ಯಾವ ಲೋಕದವನು ? ಭವಿತವ್ಯದ ಕವಳ ಬರಿದಾಗಿದೆ ಯಾರದೋ ಪಾಲಾಗಿದೆ ಹಸಿರು ಕೆಂಪಾಗಿ ಕೆಸರು ಕಪ್ಪಾಗಿ ಬಸಿರೆಲ್ಲವೂ ಕಸದ ಕುಪ್ಪೆಗಳಾಗಿವೆ ಕಾಣದಾದೆಯಾ ? ಬಾನ ಚುಂಬಿಸುವ ಇಮಾರತು ಪಾತಾಳ ಕೂಪದ ಭಂಡಾರ ಕಾಣು ಬಂಡೆಗಳ ಧೂಳು ಹಸಿರೆಲೆಗಳ ಭಸ್ಮ ಮೇರು ಮಲೆಯ ಬಯಲಿನಲಿ ನರ್ತಿಸುವುದು ಜಲಜೆಯರಲ್ಲವೋ ದಾಯಾದಿ ಹಣದ ದಿಬ್ಬಣಗಳು ಕಾಣದಾದೆಯಾ ಮರುಳೇ ? ಹೊಸಿಲು ದಾಟಿ ಬಾ ಕಂದ ಉದರದಲಿ ಏನೆಲ್ಲಾ ಅಡಗಿದೆ ಛಿದ್ರ ದೇಹ ಸೀಳಿದ ಗರ್ಭ ಹೊಸಕಿದ, ಹೆಣ್ಣು ಭ್ರೂಣಗಳು ಅಕಾಲ ಮರ್ತ್ಯದ ರುದ್ರ ಲೋಕ…

Read More

ಪುತ್ತೂರು : ಗೆಜ್ಜೆಗಿರಿಯ ಶ್ರೀ ಆದಿ ಧೂಮಾವತಿ ಶ್ರೀ ದೇಯಿ ಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಇದರ ವತಿಯಿಂದ ‘ಶ್ರೀ ದೇವಿ ಮಹಾತ್ಮೆ’ ಹಾಗೂ ‘ಕೋಟಿ ಚೆನ್ನಯ’ ಪ್ರಸಂಗವನ್ನು ಸಮರ್ಥವಾಗಿ ಪ್ರದರ್ಶಿಸಬಲ್ಲ ಸಮರ್ಥ್ಯದ ಮಾನದಂಡದಲ್ಲಿ ಕಟ್ಟಲ್ಪಟ್ಟ ನಮ್ಮ ಅಭಿಮಾನದ ಶ್ರೀ ಗೆಜ್ಜೆಗಿರಿ ಮೇಳವು ಮುಂದಿನ 2025-26ನೇ ಸಾಲಿನ ತಿರುಗಾಟದಲ್ಲಿ ಸೇವಾರ್ಥಿಗಳ ಇಚ್ಛಾನುಸಾರ, ಆಯ್ಕೆಯ ಯಾವುದೇ ಪೌರಾಣಿಕ ಹಾಗೂ ಐತಿಹಾಸಿಕ ಪ್ರಸಂಗಗಳನ್ನು ಕನ್ನಡ ಅಥವಾ ತುಳು ಭಾಷೆಗಳಲ್ಲಿ ಸಮರ್ಥವಾಗಿ ಪ್ರದರ್ಶನ ನೀಡಲಿದೆ. ನಮ್ಮ ಮೇಳದಲ್ಲಿ ಪ್ರದರ್ಶನಗೊಳ್ಳಲಿರುವ ನೂತನ ಪ್ರಸಂಗಗಳ ವಿವರ ಅತೀ ಶೀಘ್ರದಲ್ಲಿ ಪ್ರಕಟಿಸುವವರಿದ್ದು, ಯಕ್ಷಗಾನಭಿಮಾನಿಗಳಾದ ತಮ್ಮೆಲ್ಲರ ಸಂಪೂರ್ಣ ಸಹಕಾರವನ್ನು ಬಯಸುತ್ತೇವೆ.

Read More

ಬೆಂಗಳೂರು : ಯಕ್ಷಸಿಂಚನ ಟ್ರಸ್ಟ್‌ (ರಿ.) ಬೆಂಗಳೂರು ಇದರ ವತಿಯಿಂದ ಪ್ರತಿವರ್ಷ ಯಕ್ಷಗಾನ ಕ್ಷೇತ್ರದಲ್ಲಿ ಅಪರೂಪದ ಸೇವೆ ಸಲ್ಲಿಸಿದ ಮಹನೀಯರಿಗೆ ನೀಡುವ ‘ಸಾರ್ಥಕ ಸಾಧಕ’ ಪ್ರಶಸ್ತಿಯನ್ನು ಈ ಬಾರಿ ಯಕ್ಷಗಾನದಲ್ಲಿ ನಾಲ್ಕು ದಶಕಗಳ ವಿಶಿಷ್ಟ ಸೇವೆಗಾಗಿ ಚೇರ್ಕಾಡಿ ಮಂಜುನಾಥ ಪ್ರಭು ಇವರಿಗೆ ನೀಡಲು ನಿರ್ಧರಿಸಿದೆ. ದಿನಾಂಕ 21 ಸೆಪ್ಟೆಂಬರ್ 2025ರಂದು ಬೆಂಗಳೂರಿನ ಬಿ.ಪಿ. ವಾಡಿಯಾ ಸಭಾಂಗಣದಲ್ಲಿ ನಡೆಯುವ ಯಕ್ಷಸಿಂಚನದ 16ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಗಣ್ಯರ ಸಮ್ಮುಖದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಮಂಜುನಾಥ ಪ್ರಭು ಇವರು ತಮ್ಮ ಕಲಾಪಯಣವನ್ನು ಮಂದಾರ್ತಿ ಮೇಳದಲ್ಲಿ ಆರಂಭಿಸಿ, ಆರಂಭದ ದಿನಗಳಲ್ಲಿ ನಿತ್ಯವೇಷಗಳನ್ನು ಮಾಡುತ್ತಾ, ಸಹಾಯಕ ಮದ್ದಲೆಗಾರರಾಗಿಯೂ ಅನುಭವ ಪಡೆದರು. ಬಳಿಕ ಪೆರ್ಡೂರು, ಅಮೃತೇಶ್ವರಿ, ಸಾಲಿಗ್ರಾಮ, ಸುರತ್ಕಲ್ ಮೊದಲಾದ ಮೇಳಗಳಲ್ಲಿ ಮದ್ದಲೆವಾದಕರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಇವರು ಅಗರಿ ಭಾಗವತರು, ಶೇಣಿ ಗೋಪಾಲಕೃಷ್ಣ ಭಟ್, ಕುಂಬಳೆ ಸುಂದರರಾಯರು, ತೆಕ್ಕಟ್ಟೆ ಆನಂದ ಮಾಸ್ತರ್, ಕೆರೆಮನೆ ಮಹಾಬಲ ಹೆಗಡೆ, ಕೆರೆಮನೆ ಶಂಭು ಹೆಗಡೆ, ಕೆರೆಮನೆ ಗಜಾನನ ಹೆಗಡೆ,…

Read More

ಮಡಿಕೇರಿ : ಮನೆ ಮನೆ ಕಾವ್ಯಗೋಷ್ಠಿ ಪರಿಷತ್ತು ವತಿಯಿಂದ ಮಡಿಕೇರಿಯ ಮೊಣ್ಣಂಡ ಶೋಭಾ ಸುಬ್ಬಯ್ಯ ಇವರ ಪ್ರಾಯೋಜಕತ್ವದಲ್ಲಿ ದಿನಾಂಕ 28 ಸೆಪ್ಟೆಂಬರ್ 2025ರ ಭಾನುವಾರದಂದು ಬೆಳಿಗ್ಗೆ 10-00 ಗಂಟೆಗೆ ಮಡಿಕೇರಿಯ ಶೋಭಾ ಸುಬ್ಬಯ್ಯನವರ ಮನೆಯಲ್ಲಿ ಕಾವ್ಯ ಕಮ್ಮಟ ಏರ್ಪಡಿಸಲಾಗಿದ್ದು, ಖ್ಯಾತ ಕವಿಗಳಾದ ಡಾ. ಜಯಪ್ಪ ಹೊನ್ನಾಳಿ ಇವರು ನಡೆಸಿಕೊಡಲಿದ್ದಾರೆ.‌ ಭಾಗವಹಿಸಲು ಇಚ್ಚೆ ಉಳ್ಳವರು 88614 05738 ವೈಲೇಶ ಪಿ.ಎಸ್. ಕೊಡಗು ಹಾಗೂ 94483 66715 ಮೊಣ್ಣಂಡ ಶೋಭಾ ಸುಬ್ಬಯ್ಯ ಇವರ ಬಳಿ ಹೆಸರು ನೋಂದಾಯಿಸಿಕೊಳ್ಳಲು ತಿಳಿಯಪಡಿಸುತ್ತೇವೆ. ಪ್ರವೇಶ ಶುಲ್ಕ ನೂರು ರೂಪಾಯಿಗಳನ್ನು ಶೋಭಾ ಸುಬ್ಬಯ್ಯನವರಿಗೆ ತಲುಪಿಸಬೇಕಾಗಿ ಕೋರಲಾಗಿದೆ. ಇಪ್ಪತ್ತು ಜನರಿಗೆ ಮಾತ್ರ ಅವಕಾಶವಿದ್ದು, ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು. ಹಿರಿಯ ಕವಿಗಳಾದ ಗಿರೀಶ್ ಎಸ್. ಕಿಗ್ಗಾಲು ಮತ್ತು ಕ.ಸಾ.ಪ.ದ ನಿಕಟಪೂರ್ವ ಅಧ್ಯಕ್ಷರಾದ ಬಿ.ಎಸ್. ಲೋಕೇಶ್ ಸಾಗರ್ ಭಾಗವಹಿಸಲಿದ್ದಾರೆ.

Read More

ತೆಕ್ಕಟ್ಟೆ : ತೆಕ್ಕಟ್ಟೆ ಮಹಾಲಿಂಗೇಶ್ವರ ದೇಗುಲದಲ್ಲಿ ದಿನಾಂಕ 06 ಸೆಪ್ಟೆಂಬರ್ 2025ರಂದು ಯಶಸ್ವೀ ಕಲಾವೃಂದದ ಸಹಕಾರದಲ್ಲಿ ದೇಗುಲದ ಸೋಣೆ ಆರತಿ ಕಾರ್ಯಕ್ರಮದಲ್ಲಿ ರಸರಂಗ (ರಿ.) ಕೋಟ ಪ್ರಸ್ತುತಿಯ ‘ಗಾಂಧಾರಿ’ ಯಕ್ಷಗಾನ ಪ್ರದರ್ಶನಕ್ಕೂ ಪೂರ್ವದಲ್ಲಿ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಉಡುಪಿಯವರ ಸಾಕ್ಷರತಾ ಸಪ್ತಾಹದಲ್ಲಿ ‘ಸಾಕ್ಷರ ಕಿರಣ’ ಯಕ್ಷಗಾನ ಪ್ರದರ್ಶನಗೊಂಡಿತು. ಇದೇ ಸಂದರ್ಭದಲ್ಲಿ ಮಾತನಾಡಿದ ಇಲಾಖೆಯ ಉಮೇಶ್ “ಜಿಲ್ಲೆಯಲ್ಲಿ ಅನಕ್ಷರಸ್ಥರ ಸಂಖ್ಯೆ ವಿರಳವಾಗಿದ್ದು, ಎಲ್ಲರೂ ಸಾಕ್ಷರರಾಗಬೇಕೆಂಬ ಗುರಿಯೊಂದಿಗೆ ಇಲಾಖೆಯು ಕಾರ್ಯಕ್ರಮ ಅನುಷ್ಠಾನ ಮಾಡುತ್ತಿದ್ದು ಉಡುಪಿ ಜಿಲ್ಲೆಯನ್ನು ಸಂಪೂರ್ಣ ಸಾಕ್ಷರತಾ ಜಿಲ್ಲೆಯನ್ನಾಗಿಸುವ ಪ್ರಯತ್ನದಲ್ಲಿ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯತ್ ಉಡುಪಿ ಸದಾ ಕ್ರಿಯಾಶೀಲವಾಗಿದ್ದು ಈ ನಿಟ್ಟಿನಲ್ಲಿ ರಸರಂಗ (ರಿ.) ಕೋಟ, ಯಶಸ್ವೀ ಕಲಾವೃಂದ ಪ್ರತೀ ವರ್ಷವೂ ಸಹಕಾರಿಯಾಗಿ ಬೆಂಬಲಿಸುತ್ತಿರುವುದು ಶ್ಲಾಘ್ಯಾಯೋಗ್ಯ ವಿಚಾರ” ಎಂದು ಹೇಳಿದರು. “ಯಕ್ಷಗಾನದಲ್ಲಿ ಅನೇಕ ನೂರಾರು ಪ್ರಸಂಗಗಳು ರಂಗದಲ್ಲಿ ಪ್ರದರ್ಶನಕ್ಕಾಗಿ ವಿರಳವಾಗಿದೆ. ಅದರಲ್ಲಿನ ‘ಗಾಂಧಾರಿ’ ಆಖ್ಯಾನವೂ ಒಂದು. ಇಂತಹ ಪ್ರಸಂಗಗಳನ್ನು ಆಗಾಗ ರಂಗದಲ್ಲಿ ಪ್ರದರ್ಶಿಸಿ ಪರಿಚಯಿಸುವ ಕಾರ್ಯ ರಸರಂಗ…

Read More

ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ದಿನಾಂಕ 06 ಸಪ್ಟೆಂಬರ್‌ 2025ರಂದು ಅಕಾಡೆಮಿ ಸಭಾಂಗಣದಲ್ಲಿ ‘ಕಾವ್ಯಾಂ ವ್ಹಾಳೊ-6’ ಶೀರ್ಷಿಕೆಯಡಿ ಕವಿಗೋಷ್ಟಿಯನ್ನು ಆಯೋಜಿಸಲಾಗಿತ್ತು. ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದು, ಪ್ರಾಸ್ತಾವಿಕವಾಗಿ ಮಾತಾನಾಡಿ ಅಕಾಡೆಮಿಗೆ ಕೊಂಕಣಿ ಜನರು ಯಾವಾಗಲೂ ಹತ್ತಿರವಿರಬೇಕು ಎನ್ನುವ ಉದ್ದೇಶದಿಂದ ಹಾಗೂ ಕೊಂಕಣಿ ಯುವ ಕವಿಗಳಿಗೆ ವೇದಿಕೆ ದೊರೆಯಬೇಕು ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಇದ್ದೇವೆ. ಪ್ರತಿಯೊಬ್ಬ ಇದರ ಪ್ರಯೋಜನ ಪಡೆಯಬೇಕೆಂದು ಕರೆಕೊಟ್ಟರು. ಕೊಂಕಣಿಯ ಹಿರಿಯ ಸಾಹಿತಿಗಾರರಾದ ಶ್ರೀ ಹೇಮಾಚಾರ್ಯಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿ “ಯಾವುದೇ ಒಬ್ಬ ನಾಟಕಕಾರ, ನಟ, ನೃತ್ಯಗಾರ, ಚಿತ್ರಕಾರ ಆಗಬೇಕಾದರೂ ಅವನು ಹುಟ್ಟುವಾಗಲೇ ಕವಿಯಾಗಿ ಹುಟ್ಟಬೇಕು. ಕಾದಂಬರಿ, ಸಣ್ಣಕಥೆ, ಕಥೆ, ಇವುಗಳ ಮುಂದೆ ಕವಿತೆಗಳಿಗೆ ಅದರದ್ದೇ ಆದ ಪ್ರಾಶಸ್ತ್ಯವಿದೆ. ಕವಿತೆಗಳನ್ನು ರಚಿಸುವವನು ಜೀವನದಲ್ಲಿ ಸಾಧನೆ ಮಾಡುತ್ತಾನೆ” ಎಂದು ಅವರು ಕವಿಯಾದ ಬಗ್ಗೆ ವಿವರಿಸಿದರು. ಶ್ರೀ ರೊನಾಲ್ಡ್ ಕ್ರಾಸ್ತಾ ಇವರು ಕವಿಗೋಷ್ಟಿಯನ್ನು ನಡೆಸಿದರು. ಶ್ರೀ ರೋಶನ್ ಎಮ್.…

Read More

ಮಂಗಳೂರು : ಯುವ ಲೇಖಕಿ ಫಾತಿಮಾ ರಲಿಯಾ ಇವರ ಅನುಭವ ಕಥನ ‘ಕೀಮೋ’ ಪುಸ್ತಕದ ಲೋಕರ್ಪಣಾ ಸಮಾರಂಭವು ದಿನಾಂಕ 07 ಸೆಪ್ಟೆಂಬರ್ 2025ರ ಭಾನುವಾರದಂದು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ರಾಬರ್ಟ್ ಸಿಕ್ವೇರಾ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳಿಸಿದ ಎಂದು ಹಿರಿಯ ವೈದ್ಯರಾದ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಮಾತನಾಡಿ “ಶಿಕ್ಷಣ, ಆರೋಗ್ಯ, ಸಾಹಿತ್ಯ, ರಂಗಭೂಮಿ, ಬ್ಯಾಂಕಿಂಗ್, ವೈದ್ಯಕೀಯ ಇತ್ಯಾದಿ ವಲಯಗಳಲ್ಲಿನ ಸಾಧನೆಗಳ ಮೂಲಕ ಬುದ್ಧಿವಂತರ ಜಿಲ್ಲೆ ಎಂದು ಹೇಳಿಕೊಳ್ಳುತ್ತಿದ್ದ ನಮ್ಮಲ್ಲೀಗ ಮತೀಯವಾದವು ತಾಂಡವಾಡುತ್ತಿದೆ. ದಿನನಿತ್ಯ ಕರಾವಳಿಯ ಈ ಜಿಲ್ಲೆಯಲ್ಲಿ ದಾಳಿ ಹೆಚ್ಚುತ್ತಿವೆ. ಇದರಿಂದ ನಮ್ಮನ್ನು ನಾವೇ ಚಿಕಿತ್ಸಕ ದೃಷ್ಟಿಯಿಂದ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಕರಾವಳಿಯ ಈ ರೋಗ ಶಮನಕ್ಕೆ ಮದ್ದು ಕಂಡು ಹಿಡಿಯಬೇಕಿದೆ. ವೈದ್ಯರು ರೋಗಿಗಳನ್ನು ಸಮಾನವಾಗಿ ಕಾಣಬೇಕಿದೆ. ಆದರೆ ಇತ್ತೀಚಿನ ದಿನಗಳಲ್ಲಿ ವೈದ್ಯರಲ್ಲೂ ಮತೀಯವಾದ ವೃದ್ಧಿಸುತ್ತಿದೆ. ಇದೊಂದು ವಿಷವಾಗಿದ್ದು, ರೋಗಿಗಳ ಪಾಲಿಗೆ ಮಾತ್ರವಲ್ಲ ಸಾಮಾಜಿಕವಾಗಿಯೂ ಅಪಾಯಕಾರಿಯಾಗಿದೆ. ಹಾಗಾಗಿ ಎಲ್ಲಾ ರೀತಿಯ ಮತೀಯವಾದವನ್ನು ನಿರ್ಮೂಲನ ಮಾಡಲು ಪಣತೊಡಬೇಕಿದೆ” ಎಂದರು.…

Read More

ಮೈಸೂರು : ಕರ್ಣಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಇವರು ನಡೆಸಿದ 2024-25ನೇ ಸಾಲಿನ ಹಿಂದೂಸ್ತಾನಿ ತಾಳವಾದ್ಯ ಪರೀಕ್ಷೆ ಸೀನಿಯರ್ ವಿಭಾಗದಲ್ಲಿ ಉದಯ ಕುಮಾರ್ ಇವರು ಶೇ.72.4% ಅಂಕಗಳೊಂದಿಗೆ ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್ ಗಳಿಸಿರುತ್ತಾರೆ. ಇವರು ಉಡುಪಿಯ ತಬಲಾ ಗುರುಗಳಾದ ವಿದ್ವಾನ್ ಎನ್. ಮಾಧವ ಆಚಾರ್ಯರ ಶಿಷ್ಯರಾಗಿದ್ದು, ಪ್ರಸ್ತುತ ತಬಲಾದಲ್ಲಿ ಉನ್ನತ ಶಿಕ್ಷಣದ ತರಬೇತಿ ಪಡೆಯುತ್ತಿದ್ದಾರೆ. ಮಂಗಳೂರಿನ ಎಂ.ಆರ್.ಪಿ.ಎಲ್. ಸಂಸ್ಥೆಯಲ್ಲಿ ಚೀಫ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Read More

ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ಶ್ರೀ ಕೃಷ್ಣ ಸೇವಾ ಟ್ರಸ್ಟ್ (ರಿ.) ಪುತ್ತೂರು, ವಲಯ ಕಡಬ ಇದರ ವಾರ್ಷಿಕ ಮಹಾಸಭೆ, ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಅಂಗವಾಗಿ ತಾಳಮದ್ದಳೆ ಕಾರ್ಯಕ್ರಮವು ದಿನಾಂಕ 07 ಸೆಪ್ಟೆಂಬರ್ 2025ರಂದು ಸವಣೂರಿನ ಶ್ರೀ ವಿನಾಯಕ ಸಭಾಭವನದಲ್ಲಿ ‘ಶ್ರೀ ಕೃಷ್ಣ ಸಂಧಾನ’ ಎಂಬ ಆಖ್ಯಾನದೊಂದಿಗೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಆನಂದ ಸವಣೂರು, ಕುಮಾರಿ ಶ್ರೇಯಾ ಇಡ್ಯಾಡಿ, ಚೆಂಡೆ ಮದ್ದಳೆಗಳಲ್ಲಿ ಮುರಳೀಧರ ಕಲ್ಲೂರಾಯ, ಅಚ್ಯುತ ಪಾಂಗಣ್ಣಾಯ, ತಾರಾನಾಥ ಸವಣೂರು ಸಹಕರಿಸಿದರು. ಮುಮ್ಮೇಳದಲ್ಲಿ ನಾ ಕಾರಂತ ಪೆರಾಜೆ (ಶ್ರೀ ಕೃಷ್ಣ), ಭಾಸ್ಕರ ಬಾರ್ಯ (ವಿದುರ), ಗುಡ್ಡಪ್ಪ ಬಲ್ಯ (ಕೌರವ) ಸಹಕರಿಸಿದರು. ಆನಂದ ಸವಣೂರು ಸ್ವಾಗತಿಸಿ, ವಲಯಾಧ್ಯಕ್ಷ ವಾಸುದೇವ ಇಡ್ಯಾಡಿ ಕಲಾವಿದರನ್ನು ಗೌರವಿಸಿ, ವಂದಿಸಿದರು.

Read More