Subscribe to Updates
Get the latest creative news from FooBar about art, design and business.
Author: roovari
ಮಂಡ್ಯ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಡ್ಯ, ಅರುವಿ ಟ್ರಸ್ಟ್ (ರಿ.) ಮಂಡ್ಯ, ದೃಶ್ಯ ಟ್ರಸ್ಟ್ (ರಿ.) ಮೇಲುಕೋಟೆ ಹಾಗೂ ಎಸ್.ಇ.ಟಿ. ಪಾಲಿಟೆಕ್ನಿಕ್ ಮೇಲುಕೋಟೆ ಇವರ ಸಹಯೋಗದಲ್ಲಿ 2025-26ನೇ ಸಾಲಿನ ‘ಚಿಗುರು’ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದಿನಾಂಕ 31 ಜುಲೈ 2025ರಂದು ಬೆಳಗ್ಗೆ 11-00 ಗಂಟೆಗೆ ಮೇಲುಕೋಟೆಯ ಎಸ್.ಇ.ಟಿ. ಪಾಲಿಟೆಕ್ನಿಕ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ಮಾನ್ಯ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಇವರ ಘನ ಉಪಸ್ಥಿತಿಯಲ್ಲಿ ಮಾನ್ಯ ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ಇವರು ಉದ್ಘಾಟನೆ ಮಾಡಲಿದ್ದಾರೆ. ವಾದ್ಯ ಸಂಗೀತದಲ್ಲಿ ಕೆ.ಆರ್. ಪೇಟೆಯ ಲೋಹಿತ್ ಎಂ. ಮತ್ತು ತಂಡ, ಸುಗಮ ಸಂಗೀತದಲ್ಲಿ ಮಂಡ್ಯದ ತನ್ವಿ ಸಿ. ಮತ್ತು ತಂಡ, ಜನಪದ ಗೀತೆ ಮಂಡ್ಯದ ರಾಜೇಶ್ವರಿ ಮತ್ತು ತಂಡ, ಸಮೂಹ ನೃತ್ಯದಲ್ಲಿ ಮದ್ದೂರು ತನುಷಿ ಗೌಡ ಮತ್ತು ತಂಡ, ನಾಟಕ ಪ್ರದರ್ಶನ ಮಂಡ್ಯದ ಪೃಥ್ವಿರಾಜ್ ಕೆ.ಎಲ್. ಮತ್ತು ತಂಡ ಹಾಗೂ ಏಕಪಾತ್ರಾಭಿನಯದಲ್ಲಿ ಪಾಂಡವಪುರದ ಮೋನಿಷ್ ಎನ್. ಶೆಟ್ಟಿ ಮತ್ತು ತಂಡದವರು ಭಾಗವಹಿಸಲಿದ್ದಾರೆ.…
ಪುತ್ತೂರು : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ(ರಿ.) ಪುತ್ತೂರು ಇದರ 133ನೇ ಸರಣಿ ಕಾರ್ಯಕ್ರಮ ‘ನೃತ್ಯಾಂತರಂಗ’ ಕಾರ್ಯಕ್ರಮ ದಿನಾಂಕ 29 ಜುಲೈ 2025 ರಂದು ಪುತ್ತೂರಿನ ಶಶಿಶಂಕರ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ದುಬೈಯ ಬಾಲಪ್ರತಿಭೆ ಕು. ನಿತಾರಾ ನಾಯರ್ ಇವರ ಭರತನಾಟ್ಯ ಕಾರ್ಯಕ್ರಮ ಪುತ್ತೂರಿನ ಜನರ ಮನಗೆದ್ದಿತು. ಭರತನಾಟ್ಯ ಕಾರ್ಯಕ್ರಮದುದ್ದಕ್ಕೂ ತನ್ನ ಹಿತಮಿತವಾದ ಸಹಜ ಅಭಿನಯ, ಕರಾರುವಕ್ಕಾದ ಅಡವು ಹಾಗೂ ತನ್ನ ಮಾಧುರ್ಯಭರಿತ ನಿರೂಪಣೆಯಿಂದ ಸೇರಿದ ಸಭಿಕರ ಮನಗೆದ್ದ ನಿತಾರಾ, ತನ್ನ ನೃತ್ಯ ಜೀವನದ ಅನುಭವಗಳನ್ನು ಹಂಚಿಕೊಂಡರು. ಅಭ್ಯಾಗತರಾದ ಎಸ್. ಡಿ. ಪಿ. ರೆಮೆಡೀಸ್ ಇದರ ಸಹ ಪಾಲುದಾರರಾದ ಶ್ರೀಮತಿ ರೂಪಲೇಖಾ ಇವರು ಕಲಾವಿದೆ ನಿತಾರಾಳ ಶ್ರದ್ಧೆ, ಪರಿಶ್ರಮ ಹಾಗೂ ಸಂಸ್ಥೆಯ ನಿರ್ದೇಶಕ ವಿದ್ವಾನ್ ದೀಪಕ್ ಕುಮಾರ್ ಇವರ ಕಲಾಪರಿಶ್ರಮದ ಬಗ್ಗೆ ಬಹಳಷ್ಟು ಮೆಚ್ಚುಗೆಯ ಮಾತುಗಳನ್ನಾಡಿದರು. ಊತುಕ್ಕಾಡು ವೆಂಕಟಸುಬ್ಬ ಅಯ್ಯರ್ ರಚನೆಯ, ಜಯಂತಶ್ರೀ ರಾಗ ಹಾಗೂ ಆದಿತಾಳದಲ್ಲಿರುವ ಕೃಷ್ಣ ಕೃತಿಯೊಂದಿಗೆ ತನ್ನ ನೃತ್ಯ ಪ್ರಸ್ತುತಿಯನ್ನು ಪ್ರಾರಂಭಿಸಿದ ನಿತಾರಾ ಮುಂದೆ ಸುಮಾರು 30…
ಪುತ್ತೂರು: ಪುತ್ತೂರಿನ ಸ್ವರ್ಣೋದ್ಯಮಿ ಜಿ. ಎಲ್. ಆಚಾರ್ಯ ಶತಮಾನೋತ್ಸವದ ಅಂಗವಾಗಿ ಶಿಕ್ಷಕರಿಗಾಗಿ ಕವಿಗೋಷ್ಠಿಯನ್ನು ಪುತ್ತೂರಿನ ರೋಟರಿ ಭವನದಲ್ಲಿ ದಿನಾಂಕ 4 ಆಗಸ್ಟ್ 2025ರಂದು ಅಪರಾಹ್ನ ಘಂಟೆ 2.00ಕ್ಕೆ ಏರ್ಪಡಿಸಲಾಗಿದೆ. ಇದೇ ಸಂದರ್ಭದಲ್ಲಿ ಸಾಹಿತಿ ಜಯಾನಂದ ಪೆರಾಜೆ ಸಂಪಾದಕತ್ವದ ಭಗವದ್ಗೀತೆಯ ಬಗ್ಗೆ ಕವಿಗಳಿಂದ ರಚಿತವಾದ ಕೃತಿ ‘ಗೀತಾ ಫಲ’ ಲೋಕಾರ್ಪಣೆಗೊಳ್ಳಲಿದೆ ಎಂದು ಕಥಾಬಿಂದು ಪ್ರಕಾಶನ ಮಂಗಳೂರಿನ ಪಿ. ವಿ. ಪ್ರದೀಪ ಕುಮಾರ್ ಮತ್ತು ಜಿ. ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಇದರ ಮಾಲಕ ಜಿ. ಎಲ್. ಬಲರಾಮ ಆಚಾರ್ಯ ತಿಳಿಸಿದ್ದಾರೆ. ಕವಿಗೋಷ್ಠಿಯಲ್ಲಿ ಭಾಗವಹಿಸಲು ಇಚ್ಛಿಸುವ ಕವಿಗಳು ಈ ಸಂಖ್ಯೆಯನ್ನು ಸಂಪರ್ಕಿಸಬಹುದು – 9448348234
ಕಾರ್ಕಳ : ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಹಾಗೂ ಕಾರ್ಕಳದಲ್ಲಿ ಆತ್ರೇಯಾ ಕ್ಲಿನಿಕ್ ನಡೆಸುತಿದ್ದ ಖ್ಯಾತ ವೈದ್ಯ ಡಾ. ಜಗದೀಶ್ ಪೈ ಇವರು 28 ಜುಲೈ 2025ರಂದು ನಿಧನ ಹೊಂದಿದರು. ಅವರಿಗೆ 62 ವರ್ಷ ವಯಸ್ಸಾಗಿತ್ತು. ಕನ್ನಡ ಹಾಗೂ ಕೊಂಕಣಿ ಸಾಹಿತಿಯಾಗಿದ್ದ ಇವರು ರಾಷ್ಟ್ರೀಯ ಸ್ವಯಂ ಸೇವಕರಾಗಿದ್ದರು. ರಾಷ್ಟ್ರೀಯವಾದಿ ಲೇಖನ, ಹಾಸ್ಯ ಲೇಖನ, ವ್ಯಕ್ತಿತ್ವ ವಿಕಸನ ಕುರಿತು ಹಲವಾರು ಪುಸ್ತಕ ಪ್ರಕಟಿಸಿದ್ದ ಇವರು ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲೂ ಸಕ್ರಿಯರಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಮೃತರು ಪತ್ನಿ ಡಾ. ನಂದಾ ಪೈ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ನೇತೃತ್ವದಲ್ಲಿ ವಿವಿಧ ಕೊಂಕಣಿ ಸಂಘಟನೆಗಳ ಸಹಕಾರದಲ್ಲಿ ಇತ್ತೀಚೆಗೆ ನಿಧನರಾದ ಕೊಂಕಣಿ ಸಾಹಿತಿ ಗ್ಲೇಡಿಸ್ ರೇಗೊ ಇವರಿಗೆ ಶೃದ್ಧಾಂಜಲಿ ಸಭೆಯನ್ನು ದಿನಾಂಕ 26 ಜುಲೈ 2025ರಂದು ಸಂದೇಶ ಸಭಾಂಗಣದಲ್ಲಿ ನಡೆಸಲಾಯಿತು. ಸಂದೇಶ ಫೌಂಡೇಶನ್, ಮಾಂಡ್ ಸೊಭಾಣ್, ಕೊಂಕಣಿ ಲಖಕ ಸಂಘ ಕರ್ನಾಟಕ, ಸಂತ ಎಲೋಶಿಯಸ್ ಕಾಲೇಜಿನ ಕೊಂಕಣಿ ಸಂಘ, ದಾಯ್ಜಿ ದುಬಾಯ್ ಮಂಗಳೂರು ಘಟಕ, ಕೊಂಕಣಿ ಭಾಷಾ ಮಂಡಳ ಕರ್ನಾಟಕ ಇದರ ಪದಾಧಿಕಾರಿಗಳು ಪುಷ್ಪ ನಮನ ಸಲ್ಲಿಸಿದರು. ಸ್ವಾಗತಿಸಿ, ಪ್ರಸ್ತಾವನೆಗೈದ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಅಲ್ವಾರಿಸ್ ಇವರು “ಗ್ರೇಡಿಸ್ ರೇಗೊ ಕೊಂಕಣಿಯ ವೀರ ಮಹಿಳೆಯಂತಿದ್ದರು. ಕೊಂಕಣಿ ಪುಸ್ತಕ ಪ್ರಕಾಶನ, ಸಾಹಿತ್ಯ ರಚನೆ, ಸಂಶೋಧನೆ, ಜನಪದ, ಕತೆ, ಕವಿತೆ, ಕಾದಂಬರಿ ಹೀಗೆ ಎಲ್ಲಾ ಪ್ರಕಾರಗಳಲ್ಲಿ ಕೆಲನ ಮಾಡಿ, ಸ್ಪೂರ್ತಿಯ ನೆಲೆಯಾಗಿದ್ದವರು. ಅವರ ಕೆಲಸ ಕಾರ್ಯಗಳ ಪ್ರೇರಣೆಯಿಂದ ನಮ್ಮ ಕೆಲಸ ಮುಂದುವರಿಸೋಣ. ಹಿರಿಯ ಲೇಖಕರನ್ನು ಅವರು ಜೀವಂತವಿರುವಾಗ ಗೌರವಿಸಬೇಕು. ಈ ಪರಿಪಾಟವನ್ನು ಅಕಾಡೆಮಿ ಆರಂಭಿಸಿದ್ದು, ವಯಸ್ಸು…
ಉಡುಪಿ : ಚೆನ್ನೈಯ ‘ದಕ್ಷಿಣ’ ಇವರು ಪ್ರಸ್ತುತ ಪಡಿಸುವ ಗುರು ದಿವ್ಯಾ ನಾಯರ್ ಇವರ ಶಿಷ್ಯೆ ಮಾನಸ ಇವರ ‘ಭರತನಾಟ್ಯ ರಂಗಪ್ರವೇಶ’ವನ್ನು ದಿನಾಂಕ 30 ಜುಲೈ 2025ರಂದು ಸಂಜೆ ಗಂಟೆ 5-30ಕ್ಕೆ ಉಡುಪಿಯ ಇನ್ಫೋಸಿಸ್ ಯಕ್ಷಗಾನ ಕಲಾರಂಗದಲ್ಲಿ ಆಯೋಜಿಸಲಾಗಿದೆ. ಶ್ರೀಮತಿ ಮಲ್ಲಿಕಾ ಮತ್ತು ಸಿ.ಕೆ. ಮಂಜುನಾಥ ಇವರ ಪುತ್ರಿಯಾಗಿರುವ ಮಾನಸ ಭರತನಾಟ್ಯದಲ್ಲಿ ಜೂನಿಯರ್, ಸೀನಿಯರ್ ಮತ್ತು ವಿದ್ವತ್ ಪರೀಕ್ಷೆಗಳನ್ನು ಉತ್ತಮ ಶ್ರೇಣಿಯಲ್ಲಿ ಪೂರೈಸಿರುತ್ತಾರೆ. 2019ರಲ್ಲಿ ಯುವ ಕಲಾ ಪ್ರಶಸ್ತಿ ದೊರಕಿದ್ದು, ರಾಜ್ಯ ಮತ್ತು ಕೇಂದ್ರ ಸರಕಾರದ ವಿದ್ಯಾರ್ಥಿ ವೇತನವನ್ನು ಪಡೆದಿರುತ್ತಾರೆ.
ಕಾಸರಗೋಡು : ಕೇರಳ ರಾಜ್ಯ-ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ, ದಕ್ಷಿಣ ಕನ್ನಡ ಜಿಲ್ಲಾ ಘಟಕ ಮತ್ತು ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕ ಸಂಯುಕ್ತ ಆಶ್ರಯದಲ್ಲಿ ‘ಮನೆ ಮನೆ -ಕನ್ನಡ ಜಾಗೃತಿ ಅಭಿಯಾನ’ದ ದ್ವಿತೀಯ ಕಾರ್ಯಕ್ರಮವು ದಿನಾಂಕ 27 ಜುಲೈ 2025ರಂದು ದ.ಕ. ಜಿಲ್ಲಾ ಅಧ್ಯಕ್ಷರಾದ ಸಾಹಿತಿ ಡಾ. ಗೋವಿಂದ ಭಟ್ ಕೊಳ್ಚಪ್ಪೆ ಇವರ ಮಂಗಳೂರಿನ ನಿವಾಸದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಕನ್ನಡ ಭವನ ಮತ್ತು ಕೇರಳ ರಾಜ್ಯ-ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಸ್ಥಾಪಕ ಸಂಚಾಲಕರಾದ ಡಾ. ವಾಮನ್ ರಾವ್ ಬೇಕಲ್ ಇವರು ಮಾತನಾಡಿ “ಕನ್ನಡ ಭಾಷೆ, ಸಾಹಿತ್ಯ, ಕನ್ನಡ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕನ್ನಡದ ಕಟ್ಟಾಳುಗಳನ್ನು ಪರಸ್ಪರ ಜೋಡಿಸುವುದೇ ‘ಮನೆ ಮನೆ -ಕನ್ನಡ ಜಾಗೃತಿ ಅಭಿಯಾನ’ದ ಪ್ರಧಾನ ಉದ್ದೇಶ. ಕನ್ನಡ ಮನಸುಗಳು ಒಂದಾಗಬೇಕು. ಕನ್ನಡ ಪ್ರಜ್ಞೆ ಹೊಸ ತಲೆಮಾರಿನಲ್ಲಿ ಬೇರೂರಿಸುವ ಪ್ರಯತ್ನಕ್ಕೆ, ಕವಿಗಳು, ಸಾಹಿತಿಗಳು, ಕಲಾವಿದರು, ಸಂಘಟಕರು ಒಂದಾಗಿ ಸೇರಿ ಚರ್ಚಿಸುವ ವೇದಿಕೆ…
ಬಂಟ್ವಾಳ : ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಸಹಯೋಗದಲ್ಲಿ ವಿಶ್ವಭಾರತಿ ಯಕ್ಷ ಸಂಜೀವಿನಿ ಟ್ರಸ್ಟ್ ಮುಡಿಪು ವತಿಯಿಂದ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ತಾಳಮದ್ದಳೆ ಹಾಗೂ ಹಿರಿಯ ಭಾಗವತರಾದ ದಿವಂಗತ ಕುಬಣೂರು ಶ್ರೀಧರ ರಾವ್ ಸ್ಮರಣೆ ಕಾರ್ಯಕ್ರಮ ಬಿ.ಸಿ.ರೊಡಿನ ತುಳು ಶಿವಳ್ಳಿ ಸಭಾಭವನದಲ್ಲಿ ದಿನಾಂಕ 27 ಜುಲೈ 2025ರಂದು ನಡೆಯಿತು. ತುಳು ಶಿವಳ್ಳಿ ಸೇವಾ ಟ್ರಸ್ಟ್ ಬಂಟ್ವಾಳ ಸಹಯೋಗದೊಂದಿಗೆ ಒಂಭತ್ತು ದಿನಗಳ ಕಾಲ ನಡೆದ ಭಾರತ ದರ್ಶನ ಸರಣಿ ತಾಳಮದ್ದಳೆಯ ಸಮಾರೋಪವೂ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ “ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ವಿಶ್ವಭಾರತಿ ನಡೆಸುತ್ತಿರುವ ಪ್ರಯತ್ನಗಳು ಶ್ಲಾಘಿನೀಯ. ಹಿರಿಯ ಯಕ್ಷಗಾನ ಕಲಾವಿದ ಜಬ್ಬಾರ್ ಸಮೋ ಸಂಪಾಜೆ ಇವರು ಕುಬಣೂರು ಶ್ರೀಧರ ರಾವ್ ಅವರ ಸಂಸ್ಮರಣೆಯನ್ನು ನೆರವೇರಿಸಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಕೃಷ್ಣಪ್ಪ ಕಿನ್ಯ, ಮಾಜಿ ಸದಸ್ಯ ಭಾಸ್ಕರ ರೈ ಕುಕ್ಕುವಳ್ಳಿ, ಸಚಿಪಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್, ವೈದ್ಯರಾದ ಡಾ.…
ಸುಳ್ಯ : ಸಂತಕವಿ ಕನಕದಾನ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ವತಿಯಿಂದ ಕನಕದಾಸರ ಕುರಿತು ‘ಕನಕ ಕಾವ್ಯ ವೈಭವ’ ಎಂಬ ನಂಗೀತ-ನೃತ್ಯ ರೂಪಕ, ಕನಕದಾಸರ ಕುರಿತು ಉಪನ್ಯಾಸ, ಗಮಕ ವಾಚನ-ವ್ಯಾಖ್ಯಾನ ಒಳಗೊಂಡಂತೆ ಒಂದು ದಿನದ ‘ಕನಕ ಉತ್ಸವ’ ಕಾರ್ಯಕ್ರಮವು ಗೋವಾದಲ್ಲಿ ದಿನಾಂಕ 24 ಆಗಸ್ಟ್ 2025ರಂದು ಗೋವಾದ ಹೊಟೇಲ್ ಝಡ್ ಸ್ವೇರ್ ನಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕನಕದಾಸರ ಕುರಿತು ಉಪನ್ಯಾಸ ನೀಡಲು ಕರ್ನಾಟಕದಿಂದ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರರೂ ಆದ ಡಾ. ಅನುರಾಧಾ ಕುರುಂಜಿಯವರು ಆಯ್ಕೆಯಾಗಿದ್ದಾರೆ. ವ್ಯಕ್ತಿತ್ವ ವಿಕಸನ ತರಬೇತುದಾರರಾಗಿ ಸುಮಾರು 2500ಕ್ಕೂ ಮಿಕ್ಕಿ ತರಬೇತಿ, ಉಪನ್ಯಾಸಗಳನ್ನು ನೀಡಿದುದಲ್ಲದೇ ಹಲವು ಅಂತಾರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿರುವ ಡಾ. ಅನುರಾಧಾ ಕುರುಂಜಿಯವರು ಪದ್ಮಯ್ಯ ಗೌಡ ಕುರುಂಜಿ ಹಾಗೂ ಸೀತಮ್ಮ ಕುರುಂಜಿ ದಂಪತಿಗಳ ಪುತ್ರಿ ಹಾಗೂ ಕೆವಿಜಿ ಪಾಲಿಟೆಕ್ನಿಕ್ ಶಿಕ್ಷಕ ಚಂದ್ರಶೇಖರ ಬಿಳಿನೆಲೆಯವರ ಪತ್ನಿಯಾಗಿದ್ದಾರೆ.
ಬೆಂಗಳೂರು : ಸಂಜೋಗ್ ಬಾನ್ಸುರಿ ಮಹಾವಿದ್ಯಾಲಯ ಪ್ರಸ್ತುತ ಪಡಿಸುವ ‘ಗುರುವಂದನಾ 2025’ ಕಾರ್ಯಕ್ರಮವನ್ನು ದಿನಾಂಕ 02 ಆಗಸ್ಟ್ 2025ರಂದು ಸಂಜೆ 3-00 ಗಂಟೆಗೆ ಬೆಂಗಳೂರು ಮಲ್ಲೇಶ್ವರಂನಲ್ಲಿರುವ ಚೌಡಯ್ಯ ಮೆಮೋರಿಯಲ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಹಾಡುಗಾರಿಕೆ ಮತ್ತು ಬಾನ್ಸುರಿ ಜುಗಲ್ಬಂದಿಯಲ್ಲಿ ಶಾದಜ್ ಗಾಡ್ಖಿಂಡಿ ಬಾನ್ಸುರಿ, ಅನಿರುದ್ಧ ಐತಾಳ್ ಹಾಡುಗಾರಿಕೆ, ರೂಪಕ್ ಕಲ್ಲೂರ್ಕರ್ ತಬಲಾ ಮತ್ತು ಪ್ರಸಾದ್ ಕಾಮತ್ ಹಾರ್ಮೋನಿಯಂನಲ್ಲಿ ಹಾಗೂ ವಿಶಿಷ್ಟ ಹಿಂದೂಸ್ತಾನಿ ಮತ್ತು ಕರ್ನಾಟಿಕ್ ಕೊಳಲು ಜುಗಲ್ಬಂದಿಯಲ್ಲಿ ಡಾ. ಪಂಡಿತ್ ಪ್ರವೀಣ್ ಗಾಡ್ಖಿಂಡಿ ಇವರಿಂದ ಬಾನ್ಸುರಿ, ವಿದ್ವಾನ್ ಶಶಾಂಕ್ ಸುಬ್ರಮಣ್ಯಂ ಕರ್ನಾಟಿಕ್ ಕೊಳಲು, ವಿದ್ವಾನ್ ತುಮಕೂರು ಬಿ. ರವಿಶಂಕರ್ ಇವರು ಮೃದಂಗ ಮತ್ತು ವಿದ್ವಾನ್ ಕಿರಣ್ ಗಾಡ್ಖಿಂಡಿ ತಬಲಾದಲ್ಲಿ ಸಹಕರಿಸಲಿದ್ದಾರೆ.