Subscribe to Updates
Get the latest creative news from FooBar about art, design and business.
Author: roovari
ಉಡುಪಿ : ಪರ್ಕಳದ ಸರಿಗಮ ಭಾರತಿ ಸಂಗೀತ ವಿದ್ಯಾಲಯದಲ್ಲಿ ದಿನಾಂಕ 12 ಅಕ್ಟೋಬರ್ 2024ರಂದು ವಿಜಯದಶಮಿ ಸಂಗೀತೋತ್ಸವ, ಸಂಸ್ಥೆಯ ರಜತ ಸಂಭ್ರಮ ಸಮಾರಂಭ ಜರಗಿತು. ಬೆಳಗ್ಗೆ 8-00 ಗಂಟೆಗೆ ಮಣಿಪಾಲದ ಹಿಂದುಸ್ತಾನಿ ಗಾಯಕ ಪಂಡಿತ್ ರವಿಕಿರಣ್ ಅವರು ‘ಶ್ರೀ ದುರ್ಗಾ ಮಾತೆ’ಯ ಪ್ರಾರ್ಥನೆಯನ್ನು ಪ್ರಸ್ತುತ ಪಡಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಸಂಗೀತ ಶಾಲೆಯ ವಿದ್ಯಾರ್ಥಿಗಳು ಪಿಳ್ಳಾರಿ ಗೀತೆಗಳನ್ನು ಹಾಡಿದರು ಹಾಗೂ ಅಭಿನವ್ ಭಟ್ ಹಾಗೂ ತನ್ವಿ ಶಾಸ್ತ್ರಿ ಇವರಿಂದ ಹಾಡುಗಾರಿಕೆ ನಡೆಯಿತು. ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಇವರು ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಅತಿಥಿಗಳಾಗಿ ಉಡುಪಿಯ ಹಿರಿಯ ಸಾಹಿತಿ ಪ್ರೊ. ಮುರಲೀಧರ ಉಪಾಧ್ಯ ಹಾಗೂ ಪರ್ಕಳದ ಮಂಜುನಾಥ ಉಪಾಧ್ಯ ಭಾಗವಹಿಸಿ ಶುಭಹಾರೈಸಿದರು. ಇದೇ ಸಂದರ್ಭದಲ್ಲಿ ಬಹುಮುಖ ಪ್ರತಿಭೆಯ ಕಲಾವಿದೆ ಶ್ರೀಮತಿ ಸುರೇಖಾ ಭಟ್ ಪಟ್ಲ ಇವರನ್ನು ಅಭಿನಂದಿಸಿ ಸರಿಗಮ ಭಾರತಿ ಪರವಾಗಿ ಗೌರವಿಸಲಾಯಿತು. ಸಂಸ್ಥೆಯ ನಿರ್ದೇಶಕ ಡಾ. ಉದಯಶಂಕರ ಭಟ್ ಪ್ರಸ್ತಾವಿಕವಾಗಿ…
ಪುತ್ತೂರು : ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ನವರಾತ್ರಿ ಉತ್ಸವದ ಅಂಗವಾಗಿ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ದಿನಾಂಕ 10 ಅಕ್ಟೋಬರ್ 2024ರಂದು ‘ಶುಕ್ರ ಸಂಜೀವಿನಿ’ ಎಂಬ ತಾಳಮದ್ದಳೆ ಶ್ರೀ ದೇವಳದಲ್ಲಿ ಜರಗಿತು. ಹಿಮ್ಮೇಳದಲ್ಲಿ ಭಾಗವತರಾಗಿ ಭವ್ಯ ಶ್ರೀ ಕುಲ್ಕುಂದ ಹಾಗೂ ಚೆಂಡೆ ಮದ್ದಲೆಗಳಲ್ಲಿ ಪಿ.ಟಿ. ಜಯರಾಮ ಭಟ್, ಮುರಳೀಧರ ಕಲ್ಲೂರಾಯ, ಮಾಸ್ಟರ್ ಅಮೋಘ ಶಂಕರ್ ಹಾಗೂ ಮಾಸ್ಟರ್ ಅಭಯಕೃಷ್ಣ ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ ಬಾರ್ಯ (ಶುಕ್ರಾಚಾರ್ಯ), ಭಾಸ್ಕರ ಶೆಟ್ಟಿ ಸಾಲ್ಮರ (ಕಚ), ನಾ. ಕಾರಂತ ಪೆರಾಜೆ (ದೇವಯಾನಿ), ಗೋಪಾಲ ಶೆಟ್ಟಿ ಕಳೆಂಜ (ವೃಷಪರ್ವ), ಗಣರಾಜ್ ಭಟ್ ಬಡೆಕ್ಕಿಲ (ಧೂಮಕೇತ) ಸಹಕರಿಸಿದರು. ಶಿವಪ್ರಸಾದ್ ರೈ ಮತ್ತು ಮುರಳೀಧರ ರೈ ಮಠಂತಬೆಟ್ಟು ಕಲಾವಿದರನ್ನು ಗೌರವಿಸಿದರು. ದಿವಂಗತ ಶ್ರೀನಿವಾಸ ರೈ ಅವರ ಪತ್ನಿ ಶ್ರೀಮತಿ ಸವಿತಾ ಎಸ್. ರೈ ಹಾಗೂ ಮನೆಯವರು ಉಪಸ್ಥಿತರಿದ್ದರು.
ಬೆಂಗಳೂರು : ರಾಷ್ಟ್ರೋತ್ಥಾನ ಸಾಹಿತ್ಯ ಇದರ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ‘ಕನ್ನಡ ಪುಸ್ತಕ ಹಬ್ಬ 2024’ವನ್ನು ದಿನಾಂಕ 26 ಅಕ್ಟೋಬರ್ 2024ರಿಂದ 01 ಡಿಸೆಂಬರ್ 2024ರವರೆಗೆ ಬೆಂಗಳೂರಿನ ಕೆಂಪೇಗೌಡನಗರ, ರಾಷ್ಟ್ರೋತ್ಥಾನ ಪರಿಷತ್, ‘ಕೇಶವಶಿಲ್ಪ’ ಸಭಾಂಗಣದಲ್ಲಿ ಆಯೋಜಿಸಲಾಗಿದೆ. 37 ದಿನಗಳ ಕನ್ನಡ ಪುಸ್ತಕ ಪ್ರದರ್ಶನ ಮತ್ತು ಮಾರಾಟವನ್ನು ಬೆಳಗ್ಗೆ 10-00 ಗಂಟೆಯಿಂದ ರಾತ್ರಿ 9-00 ಗಂಟೆವರೆಗೆ ಹಮ್ಮಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಹೊಸ ಪುಸ್ತಕಗಳ ಲೋಕಾರ್ಪಣೆ, ವಿದ್ಯಾರ್ಥಿಗಳಿಗಾಗಿ ಸ್ಪರ್ಧೆಗಳು ಸಂಗೀತ, ನೃತ್ಯ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಮಂಗಳೂರು: ಸಾಹಿತಿ ಶಿವರಾಮ ಕಾರಂತರ ಜನ್ಮದಿನದ ಅಂಗವಾಗಿ ಕಲ್ಕೂರ ಪ್ರತಿಷ್ಠಾನವು ಆಯೋಜಿಸಿದ್ದ ಕಾರಂತರ ಜನ್ಮದಿನಾಚರಣೆ ಹಾಗೂ ‘ಕಾರಂತ’ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 10 ಅಕ್ಟೋಬರ್ 2024ರ ಗುರುವಾರದಂದು ಮಂಗಳೂರಿನ ಪತ್ತುಮುಡಿ ಸೌಧದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ 2024ನೇ ಸಾಲಿನ ಕಾರಂತ ಪ್ರಶಸ್ತಿಯನ್ನು ಬಹುಶ್ರುತ ವಿದ್ವಾಂಸ ಎಂ. ಪ್ರಭಾಕರ ಜೋಶಿ ಇವರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪ್ರದಾನ ಮಾಡಿದ ಮಂಗಳೂರು ವಿ. ವಿ. ಕುಲಪತಿ ಪ್ರೊ. ಪಿ. ಎಲ್. ಧರ್ಮ ಮಾತನಾಡಿ “ಭವಿಷ್ಯವನ್ನು ಇಂದೇ ತಿಳಿಯುವ ಮಟ್ಟಕ್ಕೆ ತಂತ್ರಜ್ಞಾನ ಬೆಳೆದಿದೆ, ಸಂಶೋಧನೆಗಳು ನಡೆಯುತ್ತವೆ, ಆದರೆ ನಮ್ಮ ನಡುವಿನ ಸಾಧಕರ ಅದ್ಭುತ ಕೃತಿಗಳ ಬಗ್ಗೆ ಯುವಜನರಿಗೆ ಗೊತ್ತಿಲ್ಲ. ಪುಸ್ತಕಗಳ ಸ್ಪರ್ಶ ಸುಖ, ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಕಾರಂತರ ಜನ್ಮದಿನವು ಪುಸ್ತಕ ಓದುವ ಕ್ರಾಂತಿ ಸೃಷ್ಟಿಸಬೇಕು. ಕಾರಂತರ ‘ಚೋಮನ ದುಡಿ’ಯಲ್ಲಿ ಬರುವ ದುಡಿಯು ಕೇವಲ ಸಾಮಾಜಿಕ ಸಂಕೇತದ ದುಡಿಯಲ್ಲ. ಆ ದುಡಿಯಲ್ಲಿ ಸಾಮಾಜಿಕ ನೋವು, ಧ್ವನಿ ಇಲ್ಲದವರ ಧ್ವನಿ, ಕ್ರಾಂತಿ ಎಲ್ಲವೂ ಇವೆ. ಈ ಕೃತಿಯು…
ಮಂಗಳೂರು : ಕಡಬ ಸಂಸ್ಮರಣಾ ಸಮಿತಿ ರಥಬೀದಿ ಮಂಗಳೂರು ಇದರ ಪಂಚಮ ವಾರ್ಷಿಕೋತ್ಸವ ಸಮಾರಂಭವು ದಿನಾಂಕ 27 ಅಕ್ಟೋಬರ್ 2024ರಂದು ಅಪರಾಹ್ನ 2-30 ಗಂಟೆಗೆ ಮಂಗಳೂರಿನ ರಥಬೀದಿಯಲ್ಲಿರುವ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ‘ಕಡಬದ್ವಯ ಸಂಸ್ಮರಣಾ ಯಕ್ಷಗಾನ ಪ್ರಶಸ್ತಿ’ ಪ್ರದಾನ ಹಾಗೂ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ. ಈ ಕಾರ್ಯಕ್ರಮ ಅಧ್ಯಕ್ಷತೆಯನ್ನು ಕಡಬ ಸಂಸ್ಮರಣಾ ಸಮಿತಿಯ ಅಧ್ಯಕ್ಷರಾದ ಶ್ರೀ ಸುಂದರ ಆಚಾರ್ಯ ಬೆಳುವಾಯಿ ಇವರು ವಹಿಸಲಿದ್ದು, ಹಿರಿಯ ಕಲಾವಿದರಾದ ಶ್ರೀ ಜಯರಾಮ ಆಚಾರ್ಯ ಬಂಟ್ವಾಳ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಡಾ. ದಿನಕರ ಪಚ್ಚನಾಡಿ ಇವರ ನಿರ್ದೇಶನದಲ್ಲಿ ಶ್ರೀ ಕಾಳಿಕಾಂಬಾ ವಿನಾಯಕ ಯಕ್ಷಗಾನ ಕೇಂದ್ರದ ಸದಸ್ಯರುಗಳು ‘ಶ್ರೀ ರಾಮ ದರ್ಶನ’ ಹಾಗೂ ಜಿಲ್ಲೆಯ ಸುಪ್ರಸಿದ್ಧ ಕಲಾವಿದರುಗಳಿಂದ ‘ದಮಯಂತಿ ಪುನಃ ಸ್ವಯಂವರ’ ಎಂಬ ಪ್ರಸಂಗದ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಕುಂದಾಪುರ: ಕೊಮೆ ತೆಕ್ಕಟ್ಟೆಯ ಯಶಸ್ವೀ ಕಲಾವೃಂದ ‘ಸಿನ್ಸ್ 1999 ಶ್ವೇತಯಾನ-72’ ಕಾರ್ಯಕ್ರಮದಡಿಯಲ್ಲಿ ಹಟ್ಟಿಯಂಗಡಿ ಮಾರಲದೇವಿ ದೇಗುಲದಲ್ಲಿ ಶರನ್ನವರಾತ್ರಿಯ 8ನೇ ದಿನದ ಅಂಗವಾಗಿ ‘ಯಕ್ಷ-ಗಾನ-ವೈಭವ’ ಕಾರ್ಯಕ್ರಮವು ದಿನಾಂಕ 10 ಅಕ್ಟೋಬರ್ 2024ರಂದು ನಡೆಯಿತು. ಕಾರ್ಯಕ್ರಮ ನೀಡಿದ ತಂಡವನ್ನು ಗೌರವಿಸಿ ಮಾತನಾಡಿದ ದೇವಳದ ಪ್ರಧಾನ ಅರ್ಚಕ ಮಂಜುನಾಥ ಭಟ್ “ಸಾಂಸ್ಕೃತಿಕ ಕಾರ್ಯಕ್ರಮಗಳು ಧಾರ್ಮಿಕ ಕಾರ್ಯಕ್ರಮದ ಒಂದು ಅಂಗ. ಅದರಲ್ಲೂ ಚಿಣ್ಣರ ಯಕ್ಷ ಗಾಯನ ನೆರೆದ ಸಮಸ್ತರನ್ನೂ ಆಕರ್ಷಿಸುವ ಕಾರ್ಯಕ್ರಮ. ಅಲ್ಲದೇ ಯಶಸ್ವೀ ಕಲಾವೃಂದಕ್ಕೆ ಕಾರ್ಯಕ್ರಮ ದೊರೆತರೆ ಮಕ್ಕಳ ಪ್ರತಿಭೆಗೆ ಕೊಡುವ ಪ್ರೋತ್ಸಾಹ. ಈ ಪ್ರೋತ್ಸಾಹ ನಮಗೆ ಸಾರ್ಥಕತೆ ನೀಡಿದೆ.” ಎಂದರು. ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ರಾಹುಲ್ ಕುಂದರ್ ಕೋಡಿ, ಕಿಶನ್ ಪೂಜಾರಿ ಬಾಳೆಹಿತ್ಲು, ಪವನ್ ಆಚಾರ್, ಪೂಜಾ ಆಚಾರ್, ಪಂಚಮಿ ವೈದ್ಯ, ಹರ್ಷಿತಾ ಅಮೀನ್, ರಾಹುಲ್ ಅಮೀನ್, ರಾಹುಲ್ ಕುಂದರ್ ಕೋಡಿ ಉಪಸ್ಥಿತರಿದ್ದರು.
ಮಂಗಳೂರು : ಹರೇಕಳ ಗ್ರಾಮದ ಸಂಪಿಗೆದಡಿ ಶ್ರೀ ಅರ್ಧನಾರೀಶ್ವರ ದೇವಸ್ಥಾನದ ನವರಾತ್ರಿ ಉತ್ಸವದಲ್ಲಿ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆಯು ದಿನಾಂಕ 09 ಅಕ್ಟೋಬರ್ 2024ರಂದು ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಖ್ಯಾತ ಯಕ್ಷಗಾನ ಅರ್ಥಧಾರಿ ಮತ್ತು ಸಾಹಿತಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಇವರು ಮಾತನಾಡಿ “ನಮ್ಮ ಸಂಸ್ಕೃತಿ ಮತ್ತು ಜನಜೀವನದೊಂದಿಗೆ ಹಾಸು ಹೊಕ್ಕಾಗಿರುವುದು ಭಾರತೀಯ ಲಲಿತ ಕಲೆಗಳು. ಪ್ರಾಚೀನ ಕಾಲದಿಂದಲೂ ಅವುಗಳಿಗೆ ಆಸರೆಯಾಗಿರುವುದು ಇಲ್ಲಿನ ದೇಗುಲಗಳು. ವಿಶೇಷ ಪರ್ವಕಾಲಗಳಲ್ಲಿ ಸಂಗೀತ, ನೃತ್ಯ, ಯಕ್ಷಗಾನಗಳು ನಡೆಯದಿರುವ ದೈವ ಸಾನಿಧ್ಯಗಳೇ ನಮ್ಮಲ್ಲಿಲ್ಲ. ಅದರಲ್ಲೂ ಯಕ್ಷಗಾನ ತಾಳಮದ್ದಳೆ, ಪುರಾಣ ಪ್ರವಚನ ಮತ್ತು ಬಯಲಾಟಗಳು ಆರಂಭಗೊಂಡಿರುವುದು ಈ ದೇವಸ್ಥಾನಗಳಿಂದಲೇ” ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಶುಭಾಶಂಸನೆಗೈದರು. ಮುಂಬೈ ಉದ್ಯಮಿ ಜಗದೀಶ ಪೂಜಾರಿ ಇರಾ ಆಚೆಬೈಲು ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು. ಶ್ರೀ ಅರ್ಧನಾರೀಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ…
ತೆಕ್ಕಟ್ಟೆ: ಕೊಮೆ ತೆಕ್ಕಟ್ಟೆಯ ಯಶಸ್ವೀ ಕಲಾವೃಂದದ ‘ಸಿನ್ಸ್ 1999 ಶ್ವೇತಯಾನ-71’ ಕಾರ್ಯಕ್ರಮವು 10 ಅಕ್ಟೋಬರ್ 2024ರಂದು ಮಾನ್ಯ ಮಾಜಿ ಸಚಿವ ಕೊರ್ಗಿ ಜಯಪ್ರಕಾಶ್ ಹೆಗ್ಡೆ ಇವರ ನಿವಾಸದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಯಪ್ರಕಾಶ್ ಹೆಗ್ಡೆ “ಮನೆಯ ಮನಗಳಲ್ಲಿ ಚೈತನ್ಯ ಉಕ್ಕಿಸುವ ಕಾರ್ಯಕ್ರಮ ಹೂವಿನಕೋಲು. ಯಶಸ್ವೀ ಕಲಾವೃಂದ ಕೊಮೆ ಕಳೆದ 13 ವರ್ಷಗಳಿಂದ ಈ ಕಲಾ ಪ್ರಕಾರವನ್ನು ಮನೆ ಮನೆಗಳಿಗೆ ಕೊಂಡೊಯ್ದು ಮನೆಯ ಮನಸ್ಸುಗಳಿಗೆ ಮುದ ನೀಡುವ ಕಾರ್ಯ ಮಾಡುತ್ತಿರುವುದು ನಿಜಕ್ಕೂ ಸ್ತುತ್ಯರ್ಹ ಸಂಗತಿ. ಮಕ್ಕಳ ಪ್ರತಿಭೆಗಳನ್ನು ಬೆಳಗಿಸುವ ಕಾರ್ಯಕ್ಕೆ ಜನರು ಸ್ಪಂದಿಸಬೇಕು. ಕಳೆದು ಹೋದ ದಿನಗಳನ್ನು ಮತ್ತೆ ಮನೆಗಳಲ್ಲಿ ನೆನಪಿಸುತ್ತಿರುವ ಕಾರ್ಯ ಶ್ಲಾಘನೀಯ.” ಎಂದು ತಂಡವನ್ನು ಗೌರವಿಸಿ ಮಾತನ್ನಾಡಿದರು. ಕಾರ್ಯಕ್ರಮದಲ್ಲಿ ರೊಟೇರಿಯನ್ ಸುಧಾಕರ ಶೆಟ್ಟಿ, ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ, ಭಾಗವತ ಹರ್ಷಿತಾ ಅಮೀನ್, ಆರಭಿ ಹೆಗಡೆ ನಿಟ್ಟೂರು, ಪರಿಣಿತಾ ವೈದ್ಯ ಉಪಸ್ಥಿತರಿದ್ದು, ‘ಕೃಷ್ಣಾರ್ಜುನ ಕಾಳಗ’ದ ಕಥಾ ಭಾಗ ರುಕ್ಮಿಣಿ-ಸುಭದ್ರೆಯ ಸನ್ನಿವೇಶವನ್ನು ಬಹಳ ಮಾರ್ಮಿಕವಾಗಿ ಕಟ್ಟಿಕೊಟ್ಟು ಗೆದ್ದರು.
ಮಂಗಳೂರು : ಮಂಗಳೂರು ಕೊಂಕಣಿ ಭಾಷಾ ಮಂಡಳ್ ಕರ್ನಾಟಕ ಇದರ ಸಭೆಯು ದಿನಾಂಕ 5 ಅಕ್ಟೋಬರ್ 2024ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಸಮ್ಮೇಳನದ ನೋಂದಣಿ ಕಾರ್ಯಕ್ಕೆ ಚಾಲನೆ ನೀಡಿದ ಅಖಿಲ ಭಾರತ ಕೊಂಕಣಿ ಪರಿಷತ್ತಿನ ಕಾರ್ಯಧ್ಯಕ್ಷ ಚೇತನ್ ಆಚಾರ್ಯ ಇವರು ಮಾತನಾಡಿ “ಕೊಂಕಣಿ ಮಾತೃ ಭಾಷೆಯ ಜನರು ಕರ್ನಾಟಕ, ಗೋವಾ, ಕೇರಳ ಮಹಾರಾಷ್ಟ್ರ ರಾಜ್ಯದ ವಿವಿಧೆಡೆ ಇದ್ದು, ಇವರನ್ನು ದಿನಾಂಕ 26 ಅಕ್ಟೋಬರ್ 2024 ಮತ್ತು 27 ಅಕ್ಟೋಬರ್ 2024ರಂದು ಗೋವಾದ ಮಡ್ಗಾಂವ್ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ‘ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನ’ದಲ್ಲಿ ಒಟ್ಟು ಸೇರಿಸಲಿದೆ” ಎಂದು ಹೇಳಿದರು. ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಪ್ರಶಾಂತ್ ನಾಯಕ್ ಮಾತನಾಡಿ, “ಪ್ರದೇಶದ ಪ್ರಭಾವ ಭಾಷೆಯ ಮೇಲೆ ಇದ್ದರೂ ಮಾತೃ ಭಾಷೆ ಹೃದಯದಿಂದ ಅರ್ಥವನ್ನು ಮಾಡಿಸುತ್ತದೆ” ಎಂದರು. ಹಿರಿಯ ಕೊಂಕಣಿ ಕಾರ್ಯಕರ್ತೆ ಗೀತಾ ಕಿಣಿ ಅವರು ಮೊದಲ ನೋಂದಣಿ ಮಾಡಿ ದರು. ಕೆ.ಬಿ.ಎಂ.ಕೆ. ಅಧ್ಯಕ್ಷ ಕೆ. ವಸಂತ ರಾವ್ ಸ್ವಾಗತಿಸಿ, ಕಾರ್ಯದರ್ಶಿ ರೇಮಂಡ್…
ಬೆಂಗಳೂರು : ಅಹರ್ನಿಶಿ ಪ್ರಕಾಶನ ನೇತೃತ್ವದಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅವರ ಸಹಯೋಗದೊಂದಿಗೆ ಮಂಗಳೂರಿನ ಎಂ.ಜಿ. ಹೆಗಡೆಯವರ ಆತ್ಮಕತೆ ‘ಚಿಮಣಿ ಬೆಳಕಿನಿಂದ’ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ದಿನಾಂಕ 17 ಅಕ್ಟೋಬರ್ 2024ರಂದು ಬೆಳಿಗ್ಗೆ 10-30 ಗಂಟೆಗೆ ಬೆಂಗಳೂರಿನ ಗಾಂಧೀ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷರಾದ ನಾಡೋಜಾ ಡಾ. ವೂಡೇ ಪಿ. ಕೃಷ್ಣ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ವಿಧಾನ ಪರಿಷತ್ ಸದಸ್ಯರಾದ ಶ್ರೀ ಬಿ.ಕೆ. ಹರಿಪ್ರಸಾದ್ ಇವರು ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಪುರುಷೋತ್ತಮ ಬಿಳಿಮಲೆ ಇವರು ಪ್ರಧಾನ ಭಾಷಣ ಮಾಡಲಿದ್ದು, ಬೆಳ್ತಂಗಡಿಯ ಗಾಂಧಿವಾದಿ ಶ್ರೀ ಶ್ರೀಧರ ಭಿಡೆ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು.