Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಕರಾವಳಿ ಲೇಖಕಿಯರ – ವಾಚಕಿಯರ ಸಂಘ (ರಿ.)ವು ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳ ಲೇಖಕಿಯರಿಗಾಗಿ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದೆ. ಸಣ್ಣ ಕತೆಗಳ ಸಂಕಲನ – 2024 ಜನವರಿಯಿಂದ ದಶಂಬರ್ ತಿಂಗಳ ಕೊನೆಯ ಒಳಗೆ ಪ್ರಕಟಿತವಾದ ಸಣ್ಣ ಕಥಾ ಸಂಕಲನ. ಅತ್ಯುತ್ತಮ ಕಥಾಸಂಕಲನಕ್ಕೆ ಬಹುಮಾನ : ಪ್ರಾಯೋಜಕರು – ಶ್ರೀಮತಿ ಯಶೋದಾ ಜೆನ್ನಿ ಸ್ಮೃತಿ ಸಂಚಯ, ಹಿರಿಯಡ್ಕ, ಉಡುಪಿ ತಾಲೂಕು. ಏಕಾಂಕ ನಾಟಕ ರಚನಾ ಹಸ್ತಪ್ರತಿ ಸ್ಪರ್ಧೆ : ಸುಮಾರು ಒಂದು ಗಂಟೆ ಅವಧಿಯಲ್ಲಿ ಅಭಿನಯಿಸಬಹುದಾದ (ಫುಲ್ ಸ್ಕೇಪ್ ಹಾಳೆಯಲ್ಲಿ ಡಿ.ಟಿ.ಪಿ. ಮಾಡಿದ 30ರಿಂದ 35 ಪುಟ) ಸಾಮಾಜಿಕ, ಚಾರಿತ್ರಿಕ ಅಥವಾ ಪೌರಾಣಿಕ ನಾಟಕ ಕೃತಿ. ಅತ್ಯುತ್ತಮ ಕೃತಿಗೆ ಬಹುಮಾನ : ಪ್ರಾಯೋಜಕರು – ಸಂದೀಪ ಸಾಹಿತ್ಯ ಪ್ರಕಾಶನ, ಆತ್ರಾಡಿ, ಉಡುಪಿ- 576107. ಸ್ಪರ್ಧಿಗಳು ತಮ್ಮ ಕೃತಿಗಳನ್ನು ಎರಡೆರಡು ಪ್ರತಿಗಳಂತೆ ದಿನಾಂಕ 15 ಫೆಬ್ರವರಿ 2025ರ ಮೊದಲು ತಲುಪುವಂತೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು. ಮಾರ್ಚ್ ತಿಂಗಳಲ್ಲಿ ಸ್ಪರ್ಧೆಯ…
ಮಡಿಕೇರಿ : ಶ್ರೀಮತಿ ರಮ್ಯ ಕೆ.ಜಿ. ಮಂಡ್ಯದಲ್ಲಿ ದಿನಾಂಕ 20 ಡಿಸಂಬರ್ 2024ರಿಂದ 22 ಡಿಸೆಂಬರ್ 2024ರವರೆಗೆ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಭಾಗವಹಿಸಿ ಕವನ ವಾಚನ ಮಾಡಲಿದ್ದಾರೆ. ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಮೂರ್ನಾಡು ಗ್ರಾಮದವರು. ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ವಿದ್ಯಾಭ್ಯಾಸವನ್ನು ಮೂರ್ನಾಡಿನಲ್ಲಿ ಪಡೆದಿದ್ದು, ವಿರಾಜಪೇಟೆಯ ಸರ್ವೋದಯ ಡಿ.ಇಡಿ ಕಾಲೇಜಿನಲ್ಲಿ ಟೀಚರ್ ಟ್ರೈನಿಂಗ್ ಪಡೆದು, ಪ್ರಸ್ತುತ ಎಮ್ಮೆಮಾಡು ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇವರ ಮೊದಲ ಪ್ರಕಟಿತ ಕೃತಿ ‘ದಾಹಗಳ ಮೈ ಸವರುತ್ತಾ…’ ಎಂಬ ಕವನ ಸಂಕಲನ. ಈ ಕೃತಿಗೆ ಈ ಸಾಲಿನ ಕೊಡಗಿನ ಗೌರಮ್ಮ ಪ್ರಶಸ್ತಿ ಸಿಕ್ಕಿದೆ. ‘ಗಾಳಿಯಾಡುತ್ತಿರಲಿ ಗಾಯ’ (ಕವನ ಸಂಕಲನ), ‘ಅಮ್ಮ ಚೂರು ನಿಟಿಕೆ ಮುರಿಯೆ’ (ಮಕ್ಕಳಿಗಾಗಿ ಕವಿತೆಗಳು), ‘ಬೆನ್ನ ಹಾದಿಯ ಚಿಟ್ಟೆ’ (ಗಜ಼ಲ್ ಸಂಕಲನ) ಈಗಾಗಲೇ ಪ್ರಕಟಣೆಗೆ ಸಿದ್ಧವಾಗಿರುವ ಕೃತಿಗಳು. ಓದು, ಬರಹ, ತಿರುಗಾಟ ಇವರ ಮೆಚ್ಚಿನ ಹವ್ಯಾಸ. ಈ ಬಾರಿ ನಡೆಯುವ ಅಖಿಲ ಭಾರತ…
ಹುಬ್ಬಳ್ಳಿ : ಅವ್ವ ಸೇವಾ ಟ್ರಸ್ಟ್ ಆಯೋಜಿಸಿದ್ದ ಮಾತೋಶ್ರೀ ಗುರವ್ವ ಶಿವಲಿಂಗಪ್ಪ ಹೊರಟ್ಟಿ ಅವರ 14ನೇ ಪುಣ್ಯಸ್ಮರಣೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ 12 ಸಾಧಕರಿಗೆ ‘ಅವ್ವ’ ಪ್ರಶಸ್ತಿ ಪ್ರದಾನ ಸಮಾರಂಭ ದಿನಾಂಕ 15 ಡಿಸೆಂಬರ್ 2024 ರಂದು ಹುಬ್ಬಳ್ಳಿಯ ‘ಗುಜರಾತ್ ಭವನ’ದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಮಾತನಾಡಿ “ನಾಡಿನ ಮುತ್ಸದ್ದಿ ನಾಯಕರು ಹಾಗೂ ವಿಧಾನ ಪರಿಷತ್ ಇದರ ಸಭಾಪತಿಯಾದ ಬಸವರಾಜ ಹೊರಟ್ಟಿಯವರು ಅವರ ಮಾತೋಶ್ರೀ ಗುರವ್ವ ಶಿವಲಿಂಗಪ್ಪ ಹೊರಟ್ಟಿ ಅವರ ಹೆಸರಲ್ಲಿ ಸಾಧಕರಿಗೆ ಕೊಡಮಾಡುವ ‘ಅವ್ವ ಪ್ರಶಸ್ತಿ’ಯು ರಾಜ್ಯಕ್ಕೆ ಮಾದರಿಯಾದುದು. ಜನರ ಶ್ರೇಯೋಭಿವೃದ್ಧಿಗೆ ಜನಸೇವಕನಾಗಿ ಶ್ರಮಿಸುತ್ತಿರುವ ಬಸವರಾಜ ಹೊರಟ್ಟಿ ಅವರಂತಹ ಪುತ್ರನಿಗೆ ಜನ್ಮ ನೀಡಿದ ತಾಯಿ ಗುರವ್ವ ಅವರು ಮಗನಿಗೆ ಅತ್ಯುತ್ತಮ ಸಂಸ್ಕಾರ ನೀಡಿರುವುದು ಹೊರಟ್ಟಿಯವರ ಭವಿಷ್ಯ ರೂಪಿಸುವಲ್ಲಿ ಆಗಿನ ಕಾಲದಲ್ಲಿ ಅವರು ಪಟ್ಟಿರುವ ಶ್ರಮ ಎದ್ದು ಕಾಣುತ್ತದೆ. ಆ ಮಹಾ ತಾಯಿಯನ್ನು ಸ್ಮರಿಸೋಣ.” ಎಂದು ನುಡಿದರು. ಪ್ರಶಸ್ತಿ ಪ್ರದಾನ ಮಾಡಿ…
ಬೆಳ್ತಂಗಡಿ : ಮಂಗಳೂರು ಯಕ್ಷಧ್ರುವ ಪಟ್ಟ ಫೌಂಡೇಶನ್ ಇದರ ಬೆಳ್ತಂಗಡಿ ಘಟಕದಿಂದ ಯಕ್ಷಸಂಭ್ರಮ-2024 ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 14 ಡಿಸೆಂಬರ್ 2024ರಂದು ಗುರುವಾಯನಕೆರೆ ನವಶಕ್ತಿ – ಕ್ರೀಡಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮಾತನಾಡಿ “ಯಕ್ಷಗಾನಕ್ಕೆ ಹೊಸ ಕಲ್ಪನೆ ಕೊಟ್ಟವರು ಪಟ್ಲ ಸತೀಶ್ ಶೆಟ್ಟಿಯಾದರೆ ಅದಕ್ಕೆ ಶಶಿಯಾಗಿ ಬೆಳಕು ಕೊಟ್ಟವರು ಶಶಿಧರ್ ಶೆಟ್ಟಿ. ಕಲೆ ಮತ್ತು ಕಲಾವಿದರಿಗೆ ಪ್ರೋತ್ಸಾಹ ನೀಡುವ ಮನಸ್ಸು ಕರಾವಳಿಯಲ್ಲಿದೆ. ಯಕ್ಷಗಾನವನ್ನು ಈ ರೀತಿಯೂ ನಡೆಸಬಹುದು ಎಂಬ ಕಲ್ಪನೆ ಬೆಳ್ತಂಗಡಿಗೆ ನೀಡುವ ಮೂಲಕ ಬೆಳ್ತಂಗಡಿಯ ಜನತೆ ಹಿಂದೆಂದೂ ಕಂಡರಿಯದಂತಹ ಯಕ್ಷಲೋಕಕ್ಕೆ ಕರೆದೊಯ್ದಿದ್ದಾರೆ. ಯಕ್ಷಗಾನ ಕಲೆಯ ಮೂಲಕ ಎಲ್ಲ ಜಾತಿ, ಧರ್ಮವನ್ನು ಒಗ್ಗೂಡಿಸುವ ಕೆಲಸವಾಗಿದೆ.” ಎಂದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ “25 ವರ್ಷದ ವೃತ್ತಿ ಜೀವನದ ಇತಿಹಾಸದಲ್ಲಿ ಯಕ್ಷಗಾನಕ್ಕಾಗಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಸಂಯೋಜಿಸಿರುವುದು ಇದೇ ಪ್ರಥಮ. ಕರ್ನಾಟಕದಾದ್ಯಂತ ನಮ್ಮ ಫೌಂಡೇಶನ್…
ಮಡಿಕೇರಿ : ಸುಬ್ರಾಯ ಸಂಪಾಜೆಯವರು ಮಂಡ್ಯದಲ್ಲಿ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಸನ್ಮಾನ ಪಡೆಯಲಿದ್ದಾರೆ. ಇವರು ದಕ್ಷಿಣ ಕನ್ನಡದ ಸುಳ್ಯ ತಾಲೂಕಿನವರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಸಂಪಾಜೆಯಲ್ಲಿ ಪೂರೈಸಿದ ಸುಬ್ರಾಯರು ಸುಳ್ಯ ನೆಹರೂ ಸ್ಮಾರಕ ಮಹಾ ವಿದ್ಯಾಲಯದಲ್ಲಿ ಬಿ.ಎ. ಓದಿ ಮುಂದೆ ಮಂಗಳೂರು ವಿಶ್ವ ವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿ ಪಡೆದರು. 1995ರಲ್ಲಿ ಮಡಿಕೇರಿ ಆಕಾಶವಾಣಿಗೆ ಉದ್ಘೋಷಕರಾಗಿ ನೇಮಕಗೊಂಡ ಇವರು ಬಾನುಲಿಯ ಸೇವೆಯ ಜೊತೆಗೆ ಗಮಕ, ಯಕ್ಷಗಾನ ಹಾಡುಗಾರಿಕೆ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡರು. ‘ಪುಟ್ಟಕ್ಕ’ ಇದು ಸುಬ್ರಾಯ ಸಂಪಾಜೆಯವರು ಬರೆದ ಕಿರು ಕಾದಂಬರಿ. ಇವರ ‘ರಸ ರಾಮಾಯಣ’ ಮೂಲ ರಾಮಾಯಣವನ್ನಾಧರಿಸಿದ ರಸಪ್ರಶ್ನೆ ಪುಸ್ತಕ. ‘ಕೊಡಗು ಕ್ವಿಝ್’ ಕೊಡಗು ಜಿಲ್ಲೆಗೆ ಸಂಬಂಧಿಸಿದ ಮಾಹಿತಿ ಕೋಶ. ವಿದ್ವತ್ ವಲಯದಲ್ಲಿ ಸಂಪಾಜೆಯವರಿಗೆ ಅಪಾರ ಜನಪ್ರಿಯತೆ ಮತ್ತು ಗೌರವ ತಂದುಕೊಟ್ಟ ಅಧ್ಯಯನ ಗ್ರಂಥ ‘ಪುರಾಣ ಯಾನ’. ಇದು ಸಂಸ್ಕೃತದ ಹದಿನೆಂಟು ಮತ್ತು…
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕ ಇದರ ಆಶ್ರಯದಲ್ಲಿ ಎ.ಆರ್. ಡಿಸೋಜ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ದಿನಾಂಕ 18 ಡಿಸೆಂಬರ್ 2024ರಂದು ಅಪರಾಹ್ನ 2-00 ಗಂಟೆಗೆ ಮಂಗಳೂರಿನ ಗೋರಿಗುಡ್ಡೆಯ ಕಿಟೆಲ್ ವಿದ್ಯಾ ಸಂಸ್ಥೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ಅಧ್ಯಕ್ಷರಾದ ಡಾ. ಮಂಜುನಾಥ ಎಸ್. ರೇವಣ್ಕರ್ ಇವರು ವಹಿಸಲಿದ್ದು, ಯೇನಪೋಯ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕಿ ಡಾ. ದೀಕ್ಷಿತಾ ಪ್ರಶಾಂತ್ ಇವರು ‘ಕರ್ನಾಟಕ ಕ್ರೈಸ್ತರ ಇತಿಹಾಸ, ಕನ್ನಡ ಸಾಹಿತ್ಯಕ್ಕೆ ಕ್ರೈಸ್ತರ ಕೊಡುಗೆ ಹಾಗೂ ಕ್ರೈಸ್ತ ಸಾಹಿತ್ಯ ಪರಂಪರೆ’ ಎಂಬ ವಿಷಯದ ಬಗ್ಗೆ ದತ್ತಿ ಉಪನ್ಯಾಸ ನೀಡಲಿದ್ದಾರೆ.
ಹಾಸನ : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.) ಬೆಂಗಳೂರು ಕೇಂದ್ರ ಸಮಿತಿ ಮತ್ತು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಎಡೆಯೂರು ಹೋಬಳಿ ಘಟಕದ ವತಿಯಿಂದ ಹಮ್ಮಿಕೊಂಡಿರುವ ಅಖಿಲ ಕರ್ನಾಟಕ ಪ್ರಥಮ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕನ್ನಡ ನಾಡು ಕಂಡ ಮಹಾನ್ ಶರಣ ಚಿಂತಕ, ಸುಪ್ರಸಿದ್ಧ ಸಾಹಿತಿ, ಬಸವಾನುಯಾಯಿ ರಂಜಾನ್ ದರ್ಗಾರವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ತಿಳಿಸಿದ್ದಾರೆ. ಆಯ್ಕೆ ಸಂದರ್ಭದಲ್ಲಿ ಕೇಂದ್ರ ಸಮಿತಿಯ ಟ್ರಸ್ಟಿಗಳಾದ ಕೊಟ್ರೇಶ್ ಎಸ್. ಉಪ್ಪಾರ್, ನಾಗರಾಜ್ ದೊಡ್ಡಮನಿ, ಎಚ್.ಎಸ್. ಬಸವರಾಜ್, ಡಾ. ಪಿ. ದಿವಾಕರ ನಾರಾಯಣ, ದೇಸು ಆಲೂರು, ವಾಸು ಸಮುದ್ರವಳ್ಳಿ, ತುಮಕೂರು ಜಿಲ್ಲಾಧ್ಯಕ್ಷ ಡಾ. ವಿಜಯಕುಮಾರ ಕಮ್ಮಾರ, ಹಿರಿಯ ಸಾಹಿತಿ ಡಾ. ಬಿ.ಸಿ.ಶೈಲಾ ನಾಗರಾಜ್, ತಾಲೂಕು ಅಧ್ಯಕ್ಷೆ ಡಾ. ಚಿ.ದೇ. ಸೌಮ್ಯ, ಹೋಬಳಿ ಘಟಕದ ಅಧ್ಯಕ್ಷ ಸಿದ್ದೇಶ್ ಕುಮಾರ್ ವೈ.ಟಿ. ಸೇರಿದಂತೆ ಹಲವರು ಹಾಜರಿದ್ದರು. ಸಮ್ಮೇಳನವು ಶರಣ ಸಂತ, ಮಹಾತಪಸ್ವಿ ಶ್ರೀ ಸಿದ್ದಲಿಂಗೇಶ್ವರರ ಕರ್ಮಭೂಮಿಯಾದ ಎಡೆಯೂರು ಶ್ರೀ…
ಉಡುಪಿ : ರಾಜ್ಯದ ಹೆಸರಾಂತ ಹವ್ಯಾಸಿ ನಾಟಕ ಸಂಸ್ಥೆಯಾದ ‘ರಂಗಭೂಮಿ (ರಿ.) ಉಡುಪಿ’ ಇದರ 60ರ ಸಂಭ್ರಮದಲ್ಲಿ ದಿ. ಡಾ. ಟಿ.ಎಂ.ಎ. ಪೈ, ದಿ. ಎಸ್.ಎಲ್. ನಾರಾಯಣ ಭಟ್ ಮತ್ತು ದಿ. ಮಲ್ಪೆ ಮಧ್ವರಾಜ್ ಸ್ಮಾರಕ 45ನೆಯ ‘ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ’ಯು ದಿನಾಂಕ 04 ಡಿಸೆಂಬರ್ 2024ರಿಂದ 15 ಡಿಸೆಂಬರ್ 2024ರವರೆಗೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಿತು. ಪ್ರಥಮ ಬಹುಮಾನವು ರಂಗರಥ ಟ್ರಸ್ಟ್ (ರಿ.) ಬೆಂಗಳೂರು ತಂಡದ ‘ಧರ್ಮನಟಿ’ ನಾಟಕಕ್ಕೆ ಲಭಿಸಿದೆ. ಈ ತಂಡವು ಪಿ.ವಿ.ಎಸ್. ಬೀಡೀಸ್ ಪ್ರಾಯೋಜಿತ ದಿ. ಪುತ್ತು ವೈಕುಂಠ ಶೇಟ್ ಸ್ಮಾರಕ ಪ್ರಥಮ ನಗದು ಬಹುಮಾನ ರೂ.35,000/- ಮತ್ತು ಸ್ಮರಣಿಕೆ ಹಾಗೂ ಡಾ. ಟಿ.ಎಮ್.ಎ. ಪೈ ಸ್ಮಾರಕ ಪರ್ಯಾಯ ಫಲಕ ಹಾಗೂ ದಿ. ಎಸ್.ಎಲ್. ನಾರಾಯಣ ಭಟ್ ಸ್ಮಾರಕ ಸ್ಮರಣಿಕೆಯನ್ನು ತನ್ನದಾಗಿಸಿಕೊಂಡಿದೆ. ದ್ವಿತೀಯ ಬಹುಮಾನವಾದ ದಿ. ಮಲ್ಪೆ ಮಧ್ವರಾಜ್ ಸ್ಮಾರಕ ಪ್ರಮೋದ್ ಮಧ್ಯರಾಜ್ ರವರ ಕೊಡುಗೆಯಾದ ರೂ.25,000/- ನಗದು ಬಹುಮಾನ ಹಾಗೂ ಡಾ.…
ಮಡಿಕೇರಿ : ಬಾಲಸುಬ್ರಹ್ಮಣ್ಯ ಕಂಜರ್ಪಣೆ ಇವರು ಕೊಡಗು ಜಿಲ್ಲೆಯ ಹಿರಿಯ ಸಾಹಿತಿ, ವೃತ್ತಿಯಲ್ಲಿ ವಕೀಲರು. ಮಂಡ್ಯದಲ್ಲಿ ದಿನಾಂಕ 20 ಡಿಸಂಬರ್ 2024ರಿಂದ 22 ಡಿಸೆಂಬರ್ 2024ರವರೆಗೆ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವಿಶೇಷ ಉಪನ್ಯಾಸದ ಉಪನ್ಯಾಸಕರಾಗಿ ಆಯ್ಕೆಯಾಗಿದ್ದು, ಇವರು ಭಾರತ ಸಂವಿಧಾನ 75ರ ಕುರಿತಾಗಿ ಉಪನ್ಯಾಸ ಮಂಡಿಸಲಿದ್ದಾರೆ. ದಿನಾಂಕ 05 ಮೇ 1954ರಂದು ಕಂಜರ್ಪಣೆ ಪರಮೇಶ್ವರಯ್ಯರವರ ಪುತ್ರನಾಗಿ ಜನಿಸಿದ ಇವರು ತಮ್ಮ ವಿದ್ಯಾಭ್ಯಾಸವನ್ನು ಸುಳ್ಯ ಪುತ್ತೂರಿನಲ್ಲಿ ಮುಗಿಸಿ ಉಡುಪಿಯ ಲಾ ಕಾಲೇಜಿನಿಂದ ಕಾನೂನು ಪದವಿಯನ್ನು, ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ ಪದವಿಯನ್ನು ಪಡೆದಿದ್ದಾರೆ. ವಕೀಲರಾಗಿ 1976ರಿಂದ ಕೊಡಗಿನಲ್ಲಿ ಪ್ರಸಿದ್ಧರಾಗಿದ್ದ ಇವರು ಮಡಿಕೇರಿ ಸರಕಾರಿ ಹಿರಿಯ ಕಾಲೇಜಿನಲ್ಲಿ ಒಂದು ವರ್ಷ ಇಂಗ್ಲೀಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯ, ಸಂಗೀತ, ಕ್ರೀಡೆ ಇವುಗಳಲ್ಲಿ ಅಪಾರ ಆಸಕ್ತಿ ಹೊಂದಿರುವ ಇವರು ಮೂರು ಕವನಗಳು, ಒಂದು ಕಥಾ ಸಂಕಲನ, ಮೂರು ಬದುಕು ಬರಹದ ಕೃತಿಗಳು, ಒಂದು ಸಾಮಾಜಿಕ ಸಾಹಿತಿಕ ಲೇಖನಗಳ ಸಂಗ್ರಹ, ಒಂದು ಕಾನೂನು ನ್ಯಾಯ…
ಉಡುಪಿ : ಗಿಲಿ ಗಿಲಿ ಮ್ಯಾಜಿಕ್ ಗಾರುಡಿಗ ಪ್ರೊ. ಶಂಕರ್ ಅಭಿನಂದನ ಸಮಿತಿ ಉಡುಪಿ ಇದರ ವತಿಯಿಂದ ಪ್ರೊ. ಶಂಕರ್ ಅಭಿನಂದನಾ ಸಮಾರಂಭವು ದಿನಾಂಕ 14 ಡಿಸೆಂಬರ್ 2024ರಂದು ಉಡುಪಿಯ ಯಕ್ಷಗಾನ ಕಲಾರಂಗ ಐವೈಸಿ ಸಭಾಂಗಣದಲ್ಲಿ ನಡೆಯಿತು. ಈ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ “ಬದುಕಿನ ಸತ್ಯ, ಮಾಯೆಯ ನೆಲೆಯ ಜೀವನದಲ್ಲಿ ಪ್ರೊ. ಶಂಕರ್ ಇವರು ಕಲೆಗಾಗಿ ಬದುಕಿದ ವ್ಯಕ್ತಿ. ಮ್ಯಾಜಿಕ್ ಮೂಲಕವೂ ಜನರ ಮದ್ಯವ್ಯಸನ ಮುಕ್ತ ಬದುಕಿಗೆ ಕೊಡುಗೆ ನೀಡಿದ್ದಾರೆ. ನಾಡಿನ ಎಲ್ಲ ಕಲಾವಿದರೂ ಸಹ ಕಲೆಯೊಂದಿಗೆ ಗಳಿಸಿದ ಸಂಪತ್ತಿನಲ್ಲಿ ಅಲ್ಪ ಭಾಗವನ್ನು ಸಮಾಜಕ್ಕೆ ನೀಡುವ ಮೂಲಕ ಋಣ ತೀರಿಸಬೇಕು” ಎಂದು ನುಡಿದರು. ಕಾರ್ಯಕ್ರಮ ಉದ್ಘಾಟಿಸಿದ ಕ.ಸಾ.ಪ. ಮಾಜಿ ಅಧ್ಯಕ್ಷ, ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿ, “ಕರ್ನಾಟಕ ಕರಾವಳಿಯ ಮೊಟ್ಟ ಮೊದಲ ಜಾದೂಗಾರ ಪ್ರೊ. ಶಂಕರ್ ಇವರಿಗೆ ಎಂದೋ ಅಭಿನಂದನೆ, ಸನ್ಮಾನ ಆಗಬೇಕಿತ್ತು. ಪ್ರಶಸ್ತಿ ಸನ್ಮಾನಗಳಿಂದ ದೂರವಿರುವ ನಾಡಿನ…