Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ 2025ನೆಯ ಸಾಲಿನ ‘ನಾಗಡಿಕೆರೆ-ಕಿಟ್ಟಪ್ಪ ರುಕ್ಮಣಿ ತೀರ್ಥಹಳ್ಳಿ’ ಪ್ರಶಸ್ತಿಗೆ ಕನ್ನಡ ಪತ್ರಿಕೋದ್ಯಮದಲ್ಲಿ ಅಪಾರ ಸೇವೆ ಸಲ್ಲಿಸಿರುವ ಪ್ರಸ್ತುತ ಪ್ರಜಾವಾಣಿ ದಿನ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾದ ರವೀಂದ್ರ ಭಟ್ಟ ಅವರು ಆಯ್ಕೆಯಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ತಿಳಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರಾದ ಕಿಟ್ಟಪ್ಪ ಗೌಡರು ಹತ್ತನೆಯ ತರಗತಿ ಓದುತ್ತಿದ್ದಾಗಲೇ ಬ್ರಿಟೀಷರ ವಿರುದ್ಧದ ‘ಭಾರತ ಬಿಟ್ಟು ತೊಲಗಿ’ ಚಳುವಳಿಯಲ್ಲಿ ಭಾಗವಹಿಸಿದ್ದರು. ರೈತ ಚಳುವಳಿ, ಗೋಕಾಕ ಚಳುವಳಿಗಳಲ್ಲಿಯೂ ಭಾಗವಹಿಸಿದ ಇವರು ಸದಾ ಜನಪರ ಚಳುವಳಿಯಲ್ಲಿ ಸಕ್ರಿಯರಾಗಿದ್ದವರು. ಪ್ರೌಢಶಾಲಾ ಶಿಕ್ಷಕರಾಗಿ ವೃತ್ತಿಯನ್ನು ಆರಂಭಿಸಿದ ಇವರು ಮೈಸೂರು ವಿಶ್ವವಿದ್ಯಾಲಯದ ಅಕಾಡಮಿಕ್ ಕೌನ್ಸಿಲ್ ಸದಸ್ಯರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ. ಯಾವುದೇ ಆಮಿಷಗಳಿಗೆ ಒಳಗಾಗದೆ ದಿಟ್ಟತನದಿಂದ ಸಮಾಜದ ನ್ಯೂನತೆಯನ್ನು ತೋರಿಸುವ ಶ್ರೇಷ್ಠ ಪತ್ರಕರ್ತರನ್ನು ಗುರುತಿಸಬೇಕು ಎನ್ನುವ ಉದ್ದೇಶದಿಂದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ‘ನಾಗಡಿಕೆರೆ-ಕಿಟ್ಟಪ್ಪಗೌಡ ರುಕ್ಮಿಣಿ ತೀರ್ಥಹಳ್ಳಿ ದತ್ತಿ ಪ್ರಶಸ್ತಿ’ಯನ್ನು ಸ್ಥಾಪಿಸಿದ್ದಾರೆಂದು ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದ್ದಾರೆ. ಉತ್ತರ ಕನ್ನಡ…
ಮೂದಬಿದಿರೆ : ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ನಲ್ವತ್ತಮೂರನೇ ಕಾರ್ಯಕ್ರಮ ದಿನಾಂಕ 12 ಮಾರ್ಚ್ 2025ರಂದು ಮೂಡಬಿದ್ರೆಯ ಶ್ರೀ ಮಹಾವೀರ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ “ಸ್ವಾಮಿ ವಿವೇಕಾನಂದ – ಚಿರಂತನ ಸ್ಪೂರ್ತಿ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಸ್ನಾತಕೋತ್ತರ ವಿಭಾಗದ ಡೀನ್ ಆಗಿರುವ ಡಾ. ವಿಜಯ ಸರಸ್ವತಿ ಬಿ. ಮಾತನಾಡಿ “ಸ್ವಾಮಿ ವಿವೇಕಾನಂದರು ಭಾರತೀಯ ತತ್ವಶಾಸ್ತ್ರ, ಆಧ್ಯಾತ್ಮಿಕತೆ ಹಾಗೂ ಸಮಾಜಸೇವೆಗೆ ಶಾಶ್ವತ ಸ್ಫೂರ್ತಿಯಾಗಿದ್ದಾರೆ. ಅವರ ಸಂದೇಶಗಳು ಶಕ್ತಿಶಾಲಿ, ಸಮಕಾಲೀನ ಮತ್ತು ಎಲ್ಲಾ ತಲೆಮಾರುಗಳಿಗೆ ಪೂರಕವಾಗಿವೆ. ವಿಶ್ವದ ವೇದಿಕೆಯಲ್ಲಿ ಭಾರತೀಯ ಸಂಸ್ಕೃತಿಯನ್ನು ಘೋಷಿಸಿದ ಅವರು, ಯುವಕರಿಗೆ ಆತ್ಮವಿಶ್ವಾಸ, ಶಿಸ್ತು, ತ್ಯಾಗ ಮತ್ತು ಸೇವೆಯ ಮಹತ್ವವನ್ನು ಬೋಧಿಸಿದರು. ವಿವೇಕಾನಂದರು ಭಾರತೀಯ ಯುವಕರಿಗೆ “ಉತ್ತಿಷ್ಠತ ಜಾಗ್ರತ” ಎಂಬ ಸಂದೇಶ ನೀಡಿ, ಅವರಲ್ಲಿ ದೇಶಭಕ್ತಿಯನ್ನು ಮೂಡಿಸಿದರು. ಅವರಿಂದ ಪ್ರೇರಿತರಾದ ಅನೇಕರು…
ಕನ್ನಡ ಸಾಹಿತ್ಯ ಲೋಕ ಒಂದು ಸಾಗರ ಇದ್ದಂತೆ. ಆ ಸಾಗರದ ಬೇರೆ ಬೇರೆ ಪ್ರಕಾರಗಳಲ್ಲಿ ಕೈಯಾಡಿಸಿ ಪ್ರಸಿದ್ಧರಾದವರು ಬಹಳ. ಕೆಲವೇ ಮಂದಿ ಮಹಿಳಾ ಲೇಖಕಿಯರಿದ್ದ ಆ ಕಾಲಘಟ್ಟದಲ್ಲಿ ಕನ್ನಡ ಭಾಷೆಯ ಬರಹಗಾರ್ತಿಯಾಗಿ, ಕಾದಂಬರಿ ಕ್ಷೇತ್ರದಲ್ಲಿ ಕೃಷಿ ಮಾಡಿ ಪ್ರಸಿದ್ಧರಾದವರು ಆರ್ಯಾಂಬಾ ಪಟ್ಟಾಭಿ. ಇವರು ಬಿ.ಎಂ. ಕೃಷ್ಣಸ್ವಾಮಿ ಮತ್ತು ಶ್ರೀಮತಿ ತಂಗಮ್ಮ ದಂಪತಿಯ ಸುಪುತ್ರಿ, 1936 ಮಾರ್ಚ್ 12 ರಂದು ಮೈಸೂರಿನಲ್ಲಿ ಜನಿಸಿದರು. 1958ರಲ್ಲಿ ರಾಜೇಂದ್ರಪುರ ಪಟ್ಟಾಭಿರಾಮಯ್ಯರೊಂದಿಗೆ ಇವರ ವಿವಾಹ ನಡೆಯಿತು. ಕನ್ನಡ ಸಾಹಿತ್ಯ ಲೋಕದ ಹಿರಿಯ ವಿದ್ವಾಂಸರೂ, ಕವಿಗಳೂ ಆದ ಬಿ. ಎಂ. ಶ್ರೀಕಂಠಯ್ಯ, ಜನಪ್ರಿಯ ಕಾದಂಬರಿಗಾರ್ತಿಯಾದ ವಾಣಿ ಮತ್ತು ‘ತ್ರಿವೇಣಿ’ ಎಂಬ ಕಾವ್ಯ ನಾಮದಿಂದ ಜನಪ್ರಿಯರಾದ ಅನಸೂಯ ಶಂಕರ್, ಇವರೆಲ್ಲರೂ ಆರ್ಯಾಂಬಾ ಪಟ್ಟಾಭಿಯವರ ಬಂಧುಗಳು. ಬರಹಗಾರರ ಪ್ರಸಿದ್ಧ ಕುಟುಂಬದಿಂದ ಬಂದ ಇವರು 32 ಕಾದಂಬರಿಗಳ ರಚನೆ ಮಾಡುವುದರೊಂದಿಗೆ, ಸಣ್ಣ ಕಥಾ ಸಂಕಲನಗಳು, ಜೀವನ ಚರಿತ್ರೆಗಳು, ನಾಟಕಗಳು, ಪ್ರಬಂಧಗಳು, ಮಕ್ಕಳಿಗಾಗಿ ಪುಸ್ತಕಗಳಲ್ಲದೆ, ಟೆನ್ನಿಸ್, ಟೇಬಲ್ ಟೆನಿಸ್, ಚದುರಂಗ ಆಟಗಳು ಹವ್ಯಾಸಗಳಾಗಿದ್ದ ಕಾರಣ…
ಕಿನ್ನಿಗೋಳಿ: ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ತುಳು ವರ್ಲ್ಡ್ ಫೌಂಡೇಷನ್ ಆಯೋಜನೆಯಲ್ಲಿ ತುಳುನಾಡ ಆದಿಮೂಲ ದೈವೊಲು ಬೆರ್ಮೆರ್ ಬೊಕ್ಕ ಲೆಕ್ಕೇಸಿರಿ ಪಾಡ್ಡನ, ಆಲಡೆ ಬೊಕ್ಕ ಪ್ರಾದೇಶಿಕತೆ ಅಧ್ಯಯನ ರಾಷ್ಟ್ರೀಯ ತುಳು ವಿಚಾರ ಸಂಕಿರಣ ಕಾರ್ಯಕ್ರಮವು ದಿನಾಂಕ 16 ಮಾರ್ಚ್ 2025ರಂದು ನಡೆಯಲಿದೆ. ಕೆ. ಎಲ್. ಕುಂಡಂತಾಯ, ಡಾ. ಬಿ. ಎಸ್. ಶಿವಕುಮಾರ್, ಎ. ಸಿ. ಭಂಡಾರಿ, ಸರ್ವೋತ್ತಮ ಶೆಟ್ಟಿ ದುಬೈ, ಡಾ. ಇಂದಿರಾ ಹೆಗ್ಗಡೆ, ಡಾ. ಕನರಾಡಿ ವಾದಿರಾಜ ಭಟ್, ಡಾ. ರವೀಶ ಪಡುಮಲೆ, ಪಾಂಗಾಳ ಬಾಬು ಕೊರಗ ಮುಂತಾದವರು ಭಾಗವಹಿಸಲಿದ್ದಾರೆ. ಯದುಪತಿ ಗೌಡ, ದಯಾನಂದ ಕತ್ತಲ್ಸಾರ್, ಡಾ. ಮಾಧವ ಎಂ.ಕೆ, ಪ್ರೊ. ಪುರುಷೋತ್ತಮ ಬಲ್ಯಾಯ, ಜಾನಕಿ ಬ್ರಹ್ಮಾವರ ಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ.
ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು 2022 ಹಾಗೂ 2023ನೇ ಸಾಲಿನ ಪುಸ್ತಕ ಪ್ರಶಸ್ತಿ ಹಾಗೂ ದತ್ತಿ ನಿಧಿ ಪುಸ್ತಕ ಪುರಸ್ಕಾರವನ್ನು ಪ್ರಕಟಿಸಿದೆ. ನಾಲ್ಕು ಮಂದಿ ಲೇಖಕರಿಗೆ ವಾರ್ಷಿಕ ಪುಸ್ತಕ ಬಹುಮಾನ ಹಾಗೂ 6 ಮಂದಿ ಲೇಖಕರಿಗೆ ವಾರ್ಷಿಕ ದತ್ತಿ ನಿಧಿ ಪುಸ್ತಕ ಬಹುಮಾನ ನೀಡಲಾಗುತ್ತಿದೆ. 2022ನೇ ಸಾಲಿನ ತುಳು ಕವನ ವಿಭಾಗದ ಪುಸ್ತಕ ಬಹುಮಾನಕ್ಕೆ ಪತ್ರಕರ್ತ ರಾಜೇಶ್ ಶೆಟ್ಟಿ ದೋಟ ಇವರ ‘ಮುಗದಾರಗೆ’ ಕವನ ಸಂಕಲನ ಹಾಗೂ 2023ನೇ ಸಾಲಿನ ತುಳು ಕವನ ವಿಭಾಗಕ್ಕೆ ರಘು ಇಡೀದು ಇವರ ‘ಎನ್ನ ನಲಿಕೆ’ ಕವನ ಸಂಕಲನ ಆಯ್ಕೆಯಾಗಿದೆ. 2023ನೇ ಸಾಲಿನ ತುಳು ಕಾದಂಬರಿ ಬಹುಮಾನಕ್ಕೆ ರಾಜಶ್ರೀ ಟಿ. ರೈ ಪೆರ್ಲ ಇವರ ‘ಮುಸ್ರಾಲೋ ಪಟ್ಟೋ’ ಕಾದಂಬರಿ ಹಾಗೂ 2023ನೇ ಸಾಲಿನ ತುಳು ಅನುವಾದ ವಿಭಾಗದ ಪುಸ್ತಕ ಬಹುಮಾನಕ್ಕೆ ಕುಶಲಾಕ್ಷಿ ವಿ. ಕುಲಾಲ್ ಇವರ ‘ತಗೊರಿ ಮಿತ್ತ ಮಣ್’ ಅನುವಾದ ಕೃತಿ ಆಯ್ಕೆಯಾಗಿದೆ. ಈ ಪುಸ್ತಕ ಪ್ರಶಸ್ತಿಗಳು ರೂಪಾಯಿ 25000 ನಗದು, ಸ್ಮರಣಿಕೆ…
ಗೋವಾ : ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ಸಹಕಾರದಲ್ಲಿ ಗೋವಾ ಪಣಜಿಯ ಕನ್ನಡ ಸಮಾಜ ಹಮ್ಮಿಕೊಂಡ ‘ಯಕ್ಷ ಶರಧಿ’ ಕಾರ್ಯಕ್ರಮ ದಿನಾಂಕ 09 ಮಾರ್ಚ್ 2025ರ ಭಾನುವಾರ ಗೋವಾ ಪಣಜಿಯ ಮೆನೆಜಸ್ ಭ್ರಗಾಂಜ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ.ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ “ಯಕ್ಷಗಾನ ಕಲೆ ಕಲಿಯಲು, ಅಭ್ಯಾಸಿಸಲು ಯಾವುದೇ ಪ್ರಾದೇಶಿಕ ಸರಹದ್ದಿನ ಭಯವಿಲ್ಲ. ಈ ನಿಟ್ಟಿನಲ್ಲಿ ಗೋವಾದ ಕನ್ನಡ ಸಮಾಜ ಯಕ್ಷಗಾನ ಪ್ರೇಮವನ್ನು ಮೆರೆಯದಿರುವುದು ಅಭಿನಂದನೀಯ. ಇಂದು ಯಕ್ಷಗಾನ ಸೀಮೋಲ್ಲಂಘನೆ ನಡೆಸಿದೆ. ಬೆಂಗಳೂರು, ಮುಂಬಾಯಿ, ದೆಹಲಿ ಅಲ್ಲದೆ ಅಮೇರಿಕಾದಲ್ಲಿಯೂ ತನ್ನ ಕಂಪನ್ನು ಬೀರುತ್ತಿದೆ. ಅಪಾರ ಯಕ್ಷಗಾನ ಪ್ರೇಮಿಗಳನ್ನು ಹುಟ್ಟುಹಾಕಿದೆ. ಅಕಾಡೆಮಿ ಇಂತಹ ಯಕ್ಷಗಾನ ಕಾರ್ಯಕ್ರಮಗಳಿಗೆ ನಿರಂತರ ಪ್ರೋತ್ಸಾಹ ನೀಡಲಿದೆ. ಯಕ್ಷಗಾನ ಅಕಾಡೆಮಿ ಅಧ್ಯಕ್ಷನಾಗಿ ಸಾಧ್ಯವಾದಷ್ಟು ಪ್ರವಾಸ ಮಾಡಿ, ಯಕ್ಷಗಾನಕ್ಕೆ ಪ್ರೋತ್ಸಾಹ ನೀಡುವ ಕಾರ್ಯವನ್ನು ಮಾಡುತ್ತಿದ್ದೇನೆ. ಯಕ್ಷಗಾನ ಕಲೆ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು. ದೇಶ…
ಸುರತ್ಕಲ್: ಹಿಂದೂ ವಿದ್ಯಾದಾಯಿನಿ ಸಂಘ ಸುರತ್ಕಲ್ ಇದರ ಆಡಳಿತಕ್ಕೊಳಪಟ್ಟ ಗೋವಿಂದ ದಾಸ ಕಾಲೇಜಿನ ಗ್ರಂಥಾಲಯ ವಿಭಾಗವು, ಆಂತರಿಕ ಗುಣಮಟ್ಟ ಖಾತರಿ ಕೋಶದ ಸಹಭಾಗಿತ್ವದಲ್ಲಿ ನಡೆಸುತ್ತಿರುವ ‘ಪುಸ್ತಕ ಪ್ರೀತಿ ಪರಿಚಯ’ ಸರಣಿ ಕಾರ್ಯಕ್ರಮ ದಿನಾಂಕ 12 ಮಾರ್ಚ್ 2025ರಂದು ನಡೆಯಿತು. ಕಾರ್ಯಕ್ರಮದಲ್ಲಿ ತೃತೀಯ ಬಿ. ಎ. ವಿದ್ಯಾರ್ಥಿನಿ ಧನುಶ್ರೀ ಇವರು ಕುಂ. ವೀರಭದ್ರಪ್ಪ ಬರೆದ ಚಾಪ್ಲಿನ್ (ಜೀವನ ಮತ್ತು ಸಾಧನೆ) ಎಂಬ ಪುಸ್ತಕವನ್ನು ಪರಿಚಯಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಹರೀಶ ಆಚಾರ್ಯ ಪಿ. ಇವರು ಧನುಶ್ರೀ ಇವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಆಶಾಲತಾ ಪಿ., ಪ್ರಾಧ್ಯಾಪಕರುಗಳಾದ ಡಾ.ಸುಧಾ ಯು., ಡಾ. ವಿಜಯಲಕ್ಷ್ಮೀ, ಡಾ. ಸಂತೋಷ್ ಆಳ್ವ, ಕಿಟ್ಟು, ಹಾಗೂ ಗ್ರಂಥಪಾಲಕಿ ಡಾ. ಸುಜಾತಾ ಬಿ., ಉಪಸ್ಥಿತರಿದ್ದರು. ತೃತೀಯ ಬಿ.ಎ. ವಿದ್ಯಾರ್ಥಿನಿ ಮೇಘ ಸ್ವಾಗತಿಸಿ, ವಂದಿಸಿದರು.
ಬೆಂಗಳೂರು : ರಂಗಶಾಲ ಅರ್ಪಿಸುತ್ತಿರುವ ವಿನಯ್ ನೀನಾಸಂ ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ಮಿಸ್ ಅಂಡರ್ ಸ್ಟ್ಯಾಂಡಿಂಗ್’ ಹಾಸ್ಯ ನಾಟಕ ಪ್ರದರ್ಶನವನ್ನು ದಿನಾಂಕ 14, 15 ಮತ್ತು 16 ಮಾರ್ಚ್ 2025ರಂದು ಸಂಜೆ 6-00 ಗಂಟೆಗೆ ಬೆಂಗಳೂರು ವಿಜಯನಗರ ಹೊಸ ಹಳ್ಳಿ ವಿಜಯನಗರ ಮೆಟ್ರೋ ಹತ್ತಿರ 14 ನೇ ಮುಖ್ಯ ರಸ್ತೆ ಮೂರನೇ ಮಹಡಿಯಲ್ಲಿರುವ ರಂಗಶಾಲದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ನಾಟಕವನ್ನು ಅಕ್ಷರ ಕೆ.ವಿ. ರಚಿಸಿರರು, ಸಂಗೀತ ರಾಜೇಶ್ ಹಳೆಮನೆ ಇವರು ನೀಡಿದ್ದು, ಸುರೇಶ್ ಇವರು ನಿರ್ವಹಣೆ ಹಾಗೂ ಜಯಂತ್ ಇವರು ಬೆಳಕಿನ ವಿನ್ಯಾಸ ಮಾಡಿರುತ್ತಾರೆ.
ಗದಗ : ಗದಗ ಇಲ್ಲಿನ ಸಾಹಿತಿ, ಕಲಾಪೋಷಕ, ಕಾಳಮಂಜಿ ವೆಂಕಟಗಿರಿಯಪ್ಪ ಶ್ರೀನಿವಾಸ್ (ಕಾ.ವೆಂ.ಶ್ರೀ) ನಿಧನರಾಗಿದ್ದಾರೆ. ಇವರಿಗೆ 52 ವರ್ಷ ವಯಸ್ಸಾಗಿತ್ತು. ಆರೋಗ್ಯ ಸಮಸ್ಯೆಯಿಂದಾಗಿ ಗದಗ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ದಿನಾಂಕ 10 ಮಾರ್ಚ್ 2025ರ ಸೋಮವಾರ ಮಧ್ಯಾಹ್ನ ನಿಧನರಾಗಿದ್ದಾರೆ. ಕಲೆ, ಸಂಸ್ಕೃತಿ ಉಳಿವಿಗಾಗಿ ಕಾವೆಂಶ್ರೀ ಇವರು 1996ರಲ್ಲಿ ‘ಕಲಾ ಚೇತನ’ ಸಂಸ್ಥೆ ಸ್ಥಾಪಿಸಿದರು. ಕಲಾ ಚೇತನ ಸಂಸ್ಥೆಯ ಮೂಲಕ ಅಂತರಾಷ್ಟ್ರೀಯ ಕಲಾವಿದರ ಕಾರ್ಯಕ್ರಮ ಆಯೋಜಿಸುತ್ತಿದ್ದರು. ಶಿವಮೊಗ್ಗ ಜಿಲ್ಲೆಯ ಕಾಳಮಂಜಿ ಮೂಲದ ಕಾ. ವೆಂ. ಶ್ರೀನಿವಾಸ್ ಅವರು ಗದಗ ನಗರದಲ್ಲಿ ಕಳೆದ 34 ವರ್ಷದಿಂದ ವಾಸವಾಗಿದ್ದರು. ಕಲೆ, ಸಾಹಿತ್ಯ ಆಸಕ್ತಿ ಬೆಳೆಸಿಕೊಂಡಿದ್ದ ಶ್ರೀನಿವಾಸ್ ಅವರು ಅನೇಕ ಪತ್ರಿಕೆಗಳಲ್ಲಿ ಕಲೆ, ಸಾಹಿತ್ಯದ ಬಗ್ಗೆ ಲೇಖನ ಬರೆದಿದ್ದರು. ಕಾವೆಂಶ್ರೀ ಅವರು ಹೋಟೆಲ್ ಉದ್ಯಮದ ಜೊತೆಗೆ ಕಲಾ ಸೇವೆಯಲ್ಲೂ ಸಹ ತೊಡಗಿದ್ದರು. ಕಾವೆಂಶ್ರೀ ಅವರು ಯಾವುದೇ ಫಲಾಪೇಕ್ಷೆ ಇಲ್ಲದೆ ಕಲಾಸೇವೆ ನಡೆಸುತ್ತಾ ಬಂದಿದ್ದರು. ಇವರ ಕಲಾಚೇತನ ಸಾಂಸ್ಕೃತಿಕ ಅಕಾಡೆಮಿ 25 ವರ್ಷಗಳನ್ನು ಪೂರೈಸಿದೆ.…
ಗದಗ : ಆಕಾಶವಾಣಿ ದೂರದರ್ಶನ ಕಲಾವಿದೆ ವಿದುಷಿ ಡಾ. ಸುಮಾ ಬಸವರಾಜ ಹಡಪದ ಬೆಳ್ಳಿಗಟ್ಟಿ ಧಾರವಾಡ ಇವರನ್ನು ರಜತ ಮಹೋತ್ಸವ ಸಂಭ್ರಮ ಹೊಸ್ತಿಲಲ್ಲಿ ಇರುವ ಡಾ. ಪಂ. ಪುಟ್ಟರಾಜ ಸೇವಾ ಸಮಿತಿ (ರಿ.) ಗದಗ ಸಂಸ್ಥೆಯ ರಾಜ್ಯ ಸಂಚಾಲಕಿಯಾಗಿ ನೇಮಕ ಮಾಡಲಾಗಿದೆ ಎಂದು ಸಂಸ್ಥಾಪಕ ವೇ. ಚನ್ನವೀರಸ್ವಾಮಿ ಹಿರೇಮಠ ಕಡಣಿ ಗದಗ ಇವರು ತಿಳಿಸಿದ್ದಾರೆ. ಡಾ. ಸುಮಾ ಹಡಪದ ವೀರೇಶ್ವರ ಪುಣ್ಯಾಶ್ರಮದ ಪರಂಪರೆಯ ಪ್ರಶಿಷ್ಯರು. ಇವರ ತಂದೆ ಮಹಾಲಿಂಗರಾಜ ಬುವ ಪುಟ್ಟರಾಜ ಗವಾಯಿಗಳ ಶ್ರೇಷ್ಠ ಶಿಷ್ಯರಲ್ಲಿ ಒಬ್ಬರು. ತಂದೆಯೇ ಗುರುವಾಗಿ ಸ್ವೀಕರಿಸಿ ಬಾಲ ಪ್ರತಿಭೆಯಾಗಿ ತಂದೆಯ ಪ್ರಿಯ ಶಿಷ್ಯಳಾಗಿ ಅಪಾರ ಸಂಗೀತ ಜ್ಞಾನ ಸಂಪಾಡಿಸಿಕೊಂಡಿದ್ದಾರೆ. ಸಂಗೀತದಲ್ಲಿ ವಿದ್ವತ್ ಪದವೀಧರೆ, ಆಕಾಶವಾಣಿ, ದೂರದರ್ಶನ ಮಾನ್ಯತೆ ಪಡೆದ ಕಲಾವಿದೆ. ಪ್ರಸ್ತುತ ಹಳಿಯಾಳದಲ್ಲಿ ಪ್ರಾಥಮಿಕ ಶಾಲೆಯ ವಿಷಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಸಂಗೀತದ ಜರ್ನಿಯನ್ನು ಆಕಾಶವಾಣಿ ಧಾರವಾಡ ಪ್ರಸಾರ ಮಾಡಿದೆ. ಪತಿ ಬಸವರಾಜ ಸಂಗೀತ ಪ್ರೇಮಿ, ಹವ್ಯಾಸಿ ಗಾಯಕ, ಶಿಕ್ಷಕ ಉತ್ತರ ಕನ್ನಡ ಜಿಲ್ಲೆ…