Subscribe to Updates
Get the latest creative news from FooBar about art, design and business.
Author: roovari
ಉಡುಪಿ : ಯಕ್ಷಗಾನ ಕೇಂದ್ರ ಇಂದ್ರಾಳಿ ಮತ್ತು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಇದರ ಸಹಯೋಗದಲ್ಲಿ ಡಾ. ಕೋಟ ಶಿವರಾಮ ಕಾರಂತರ 122ನೇ ಜನ್ಮದಿನಾಚರಣೆ ಸಮಾರಂಭವು ದಿನಾಂಕ 10 ಅಕ್ಟೋಬರ್ 2024ರ ಗುರುವಾರದಂದು ಮಧ್ಯಾಹ್ನ 3-00 ಗಂಟೆಗೆ ಕುಂಜಿಬೆಟ್ಟಿನ ಐ.ವೈ.ಸಿ, ಯಕ್ಷಗಾನ ಕಲಾರಂಗ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಹೆಯ ಸಹಕುಲಾಧಿಪತಿಗಳಾದ ಡಾ. ಎಚ್.ಎಸ್. ಬಲ್ಲಾಳ್ ಇವರು ವಹಿಸಲಿದ್ದು, ಮಾಹೆಯ ಕುಲಪತಿಗಳಾದ ಡಾ. ಲೆ.ಜ.ಡಾ.ಎಂ.ಡಿ. ವೆಂಕಟೇಶ್, ಡಾ. ನಾರಾಯಣ ಸಭಾಹಿತ್, ವನ್ಯಜೀವಿ ತಜ್ಞರಾದ ಡಾ. ಕೆ. ಉಲ್ಲಾಸ್ ಕಾರಂತ ಇವರುಗಳು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕ ಅಧ್ಯಕ್ಷರಾದ ಶ್ರೀ ಎ.ಎಸ್.ಎನ್. ಹೆಬ್ಬಾರ್ ಇವರು ಕಾರಂತ ಸಂಸ್ಮರಣೆಯನ್ನು ನಡೆಸಿಕೊಡಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ಪ್ರಸಿದ್ಧ ಯಕ್ಷಗಾನ ಕಲಾವಿದರಿಂದ ‘ಅಂಬಾಶಪಥ’ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಹಿಮ್ಮೇಳದಲ್ಲಿ ಭಾಗವತರು – ಶ್ರೀ ಚಂದ್ರಕಾಂತ್ ರಾವ್ ಮೂಡುಬೆಳ್ಳೆ ಮತ್ತು ಶ್ರೀ ಸೃಜನ್ ಗಣೇಶ್ ಹೆಗಡೆ, ಮದ್ದಲೆ – ಎನ್.ಜಿ.…
ಬೆಂಗಳೂರು : ಸಂಸ ಥಿಯೇಟರ್ ಬೆಂಗಳೂರು ಹಾಗೂ ಕರ್ನಾಟಕ ಲೇಖಕಿಯರ ಸಂಘ ಬೆಂಗಳೂರು – ಜೊತೆಯಾಗಿ ಕನ್ನಡದ ಮಹತ್ವದ ಅನುವಾದಕಿ ಕೆ.ಎನ್. ವಿಜಯಲಕ್ಷ್ಮೀ ನೆನಪಿನ ಕಾವ್ಯ ಪ್ರಕಾರದ ಅನುವಾದ ಕಮ್ಮಟಕ್ಕೆ ಶಿಬಿರಾರ್ಥಿಗಳನ್ನು ಆಹ್ವಾನಿಸಲಾಗಿದೆ. ಮೊದಲು ನೋಂದಣಿ ಮಾಡಿದ 25 ಆಸಕ್ತ ಶಿಬಿರಾರ್ಥಿಗಳಿಗೆ ಮಾತ್ರ ಅವಕಾಶವಿದೆ. ಗ್ರೀಕ್ ಕವಯತ್ರಿ ಸ್ಯಾಪೋ ಒಳಗೊಂಡಂತೆ ಹಲವು ಮಹತ್ವದ ಕಾವ್ಯ ಮತ್ತು ನಾಟಕ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿರುವ ಕೆ.ಎನ್. ವಿಜಯಲಕ್ಷ್ಮಿ ಅವರ ನೆನಪಿನಲ್ಲಿ ಬೆಂಗಳೂರಿನ ಕನ್ನಡ ಭವನದ ‘ವರ್ಣ ಆರ್ಟ್ ಗ್ಯಾಲರಿ’ಯಲ್ಲಿ ದಿನಾಂಕ 25 ಅಕ್ಟೋಬರ್ 2024ರಿಂದ 27 ಅಕ್ಟೋಬರ್ 2024ರವರೆಗೆ ಮೂರು ದಿನಗಳ ಕಾಲ ಕೆ.ಎನ್. ವಿಜಯಲಕ್ಷ್ಮಿ ಅನುವಾದ ಪ್ರಶಸ್ತಿ ವಿಜೇತೆ ಡಾ. ಶಾಕೀರಾ ಖಾನುಂ ಇವರ ನಿರ್ದೇಶನದಲ್ಲಿ ಅನುವಾದ ಕಮ್ಮಟ ನಡೆಯಲಿದೆ. ಈ ಅನುವಾದ ಕಮ್ಮಟದಲ್ಲಿ ರಾಜ್ಯ ಮತ್ತು ಹೊರ ರಾಜ್ಯದ ಅನುವಾದ ಕ್ಷೇತ್ರದಲ್ಲಿ ನುರಿತ ತಜ್ಞರು ಮೂರು ದಿನಗಳ ಕಾಲ ಸಕ್ರಿಯವಾಗಿ ಭಾಗವಹಿಸಿ, ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ಮಾಡಲಿದ್ದಾರೆ. ಶಿಬಿರದ ನಿರ್ದೇಶಕರು : ಡಾ.…
ಜರ್ಮನಿ : ಜರ್ಮನಿಯು ಏಕೀಕರಣವಾದ ದಿನದಂದು ಮ್ಯೂನಿಕ್ ನಗರದ ಒಂದು ರಂಗ ಮಂದಿರದಲ್ಲಿ ದಿನಾಂಕ 3 ಅಕ್ಟೋಬರ್ 2024ರಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಇದರ ಯುರೋಪ್ ಘಟಕ ಉದ್ಘಾಟನೆಗೊಂಡಿತು. ಮುಖ್ಯ ಅತಿಥಿಗಳಾಗಿ ಭಾರತೀಯ ರಾಯಭಾರ ಕಚೇರಿಯಲ್ಲಿ ಸಾಂಸ್ಕೃತಿಕ ಅಧಿಕಾರಿಗಳಾಗಿರುವ ರಾಜೀವ್ ಚಿತ್ಕಾರ, ಮ್ಯೂನಿಕ್ ನಗರದ ಎಲ್.ಎಂ.ಯೂ. ವಿಶ್ವವಿದ್ಯಾಲಯ ಇಂಡಾಲಜಿ ವಿಭಾಗದ ಪ್ರಸಿದ್ಧ ನಿವೃತ್ತ ಪ್ರಾಧ್ಯಾಪಕ ಡಾ. ರಾಬರ್ಟ್ ಜೈಡನ್ಬೊಸ್ ಹಾಗೂ ಸನಾತನ ಅಕಾಡಮಿಯ ಅನೂಷಾ ಶಾಸ್ತ್ರಿ, ಸಿರಿಗನ್ನಡ ಕೂಟ ಮ್ಯೂನಿಕ್ ಅಧ್ಯಕ್ಷ ಶ್ರೀಧರ ಲಕ್ಷ್ಮಾಪುರ ಹಾಗೂ ಫ್ರಾಂಕ್ಫರ್ಟ್ ರೈನ್ ಮೈನ್ ಕನ್ನಡ ಸಂಘದ ಅಧ್ಯಕ್ಷ ವೇದಮೂರ್ತಿ ಇವರುಗಳು ಆಗಮಿಸಿದ್ದರು. ಮುಖ್ಯ ಅತಿಥಿಗಳು ದೀಪ ಹಚ್ಚಿ ಸಾಂಕೇತಿಕವಾಗಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಯುರೋಪ್ ಘಟಕದ ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಜೀವ್ ಚಿತ್ಕಾರರು “ಯಕ್ಷಗಾನ ಈ ಮೊದಲು ನೋಡಿರಲಿಲ್ಲ. ಇದು ನಮ್ಮ ಭಾರತದ ಅದ್ಭುತ ಕಲೆ ಎಂಬುದು ನಮಗೆ ಹೆಮ್ಮೆ. ಇಂತಹ ಪ್ರಾಚೀನ ಕಲೆಯನ್ನು ಪಾರಂಪರಿಕವಾಗಿ ಪ್ರಪಂಚಕ್ಕೆ ಪರಿಚಯಿಸುವಲ್ಲಿ ಈ ಯಕ್ಷಧ್ರುವ…
ಮಂಗಳೂರು : ಕದ್ರಿ ನೃತ್ಯ ವಿದ್ಯಾನಿಲಯ ಚಾರಿಟೇಬಲ್ ಟ್ರಸ್ಟ್ (ರಿ.) ಇದರ 89ನೇ ವಾರ್ಷಿಕೋತ್ಸವ ಮತ್ತು ಸಂಗೀತ ವಿದ್ಯಾನಿಲಯ ಕದ್ರಿ ಇದರ 31ನೇ ವಾರ್ಷಿಕೋತ್ಸವದ ಸಲುವಾಗಿ ಹಾಗೂ ನಾಟ್ಯ ಭೀಷ್ಮ ದಿ. ಯು.ಎಸ್. ಕೃಷ್ಣ ರಾವ್ ಇವರ 110ನೇ ವರ್ಷದ ಸಂಸ್ಮರಣೆಯಾಗಿ ‘ಸಂಗೀತೋತ್ಸವ ಮತ್ತು ನೃತ್ಯೋತ್ಸವ’ ಕಾರ್ಯಕ್ರಮವನ್ನು ದಿನಾಂಕ 10 ಅಕ್ಟೋಬರ್ 2024 ಮತ್ತು 11 ಅಕ್ಟೋಬರ್ 2024ರಂದು ನೃತ್ಯ ವಿದ್ಯಾನಿಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 10 ಅಕ್ಟೋಬರ್ 2024ರಂದು ಸಂಜೆ 5-00 ಗಂಟೆಗೆ ವಿದುಷಿ ವಾಣಿ ಸತೀಶ್, ವಿದುಷಿ ಡಾ. ವಿಜಯಲಕ್ಷ್ಮೀ ಸುಬ್ರಮಣಿಯಂ ಮತ್ತು ವಿದುಷಿ ಉಷಾ ಪ್ರವೀಣ್ ಇವರ ಶಿಷ್ಯ ವೃಂದದವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಇವರಿಗೆ ಉಡುಪಿಯ ವಿದ್ವಾನ್ ಶ್ರೀಧರ್ ಆಚಾರ್ ಪಾಡಿಗಾರ್ ಪಿಟೀಲು ಮತ್ತು ಮಂಗಳೂರಿನ ಶ್ರೀ ಯು.ಪಿ. ಶರಣ್ ಮೃದಂಗದಲ್ಲಿ ಸಾಥ್ ನೀಡಲಿದ್ದಾರೆ. ದಿನಾಂಕ 11 ಅಕ್ಟೋಬರ್ 2024ರಂದು ಸಂಜೆ 5-00 ಗಂಟೆಗೆ ಉರ್ವದ ನಾಟ್ಯಾರಾಧನಾ ಕಲಾ ಕೇಂದ್ರ (ರಿ.) ಇದರ ನಿರ್ದೇಶಕಿ…
ಮನೋರಮಾ ಎಂಬ ಹೆಸರು ಅನ್ವರ್ಥಗೊಂಡಿರುವುದು ನಮ್ಮ ಹಿರಿಯ ಲೇಖಕಿ, ಚಿಂತನಶೀಲೆ ಮನೋರಮಾ ಎಂ. ಭಟ್ಟರಲ್ಲಿ, ಅವರನ್ನು ಭೇಟಿಯಾದ ಎಲ್ಲರೂ ಅವರ ವ್ಯಕ್ತಿತ್ವದಿಂದ ಮನಸೂರೆಗೊಂಡವರೇ. ಮೊನ್ನೆ ಮೊನ್ನೆಯವರೆಗೆ ಅಂದರೆ ಸೆ. 7ರ ಗಣೇಶ ಚತುರ್ಥಿಯ ದಿನದವರೆಗೆ ಸಿಹಿಯನ್ನು ಇಷ್ಟಪಡುತ್ತಾ ತಿಂದು, ಸಿಹಿಯಾದ ನಗೆಯೊಂದಿಗೆ ಇದ್ದವರು. ಒಂದಿಷ್ಟು ಸುಸ್ತು ಎಂದು ಒತ್ತಾಯಕ್ಕೆ ಆಸ್ಪತ್ರೆ ಸೇರಿದವರು ಅಲ್ಲಿಂದಲೇ ನಮಗೆ ಹೇಳದೇ ತಿರುಗಿ ಬಾರದ ಊರಿಗೆ ಪಯಣಿಸಿದರು. ಇದೇ ಜುಲೈ 15ರಂದು 93ನೇ ವರ್ಷಕ್ಕೆ ಕಾಲಿಟ್ಟಿದ್ದ ಮನೋರಮಾ ಅವರು, ತಮ್ಮೆಲ್ಲ ನಿತ್ಯಕರ್ಮಗಳನ್ನು ತಾವೇ ಮಾಡಿಕೊಳ್ಳುತ್ತಾ ದೇಹ, ಮನಸ್ಸಿನ ಸ್ವಾಸ್ಥ್ಯವನ್ನು ಕಾಪಾಡಿಕೊಂಡಿದ್ದವರು, ಮಾತ್ರವಲ್ಲ ಜೀವನ ಪ್ರೀತಿ, ಜೀವನೋತ್ಸಾಹದ ಮಾತುಗಳಿಂದ, ನಿತ್ಯವೂ ಆಕಾಶವಾಣಿಯ ಕಾರ್ಯಕ್ರಮಗಳನ್ನು ಕೇಳುತ್ತಾ ಅದರ ಬಗ್ಗೆ ವಿಮರ್ಶೆ ಮಾಡುತ್ತಾ ಅಂದಿನ ಕಾರ್ಯಕ್ರಮಗಳನ್ನು ನೀಡಿದವರು ಪರಿಚಿತರಾಗಿದ್ದರೆ ಅವರಿಗೇ ಆಗಲೇ ಫೋನ್ ಮಾಡಿ ತನ್ನ ಸಂತೋಷವನ್ನು ಹಂಚಿಕೊಂಡು ಅವರಿಗೆ ಉತ್ಸಾಹ ತುಂಬುತ್ತಿದ್ದರು. ಅಪರಿಚಿತರಾದರೆ ಅವರ ಬಗ್ಗೆ ಯಾರಿಂದಲಾದರೂ ಫೋನ್ ನಂಬರ್ ಪಡೆದು ಫೋನ್ ಮಾಡಿ ಅವರಿಗೆ ಅಭಿನಂದನೆ ತಿಳಿಸುವುದು ಅವರ…
ಕಾಸರಗೋಡು : ಪಾಂಗೋಡು ಶ್ರೀ ದುರ್ಗಾಪರಮೇಶ್ವರೀ ಸುಬ್ರಹ್ಮಣ್ಯ ಕ್ಷೇತ್ರದ ಸಾಂಸ್ಕೃತಿಕ ಘಟಕ, ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಗ್ರಂಥಾಲಯ, ವಿಜ್ಡಮ್ ಇನ್‌ಸ್ಟಿಟ್ಯೂಟ್ ನೆಟ್ವರ್ಕ್ ಹಾಗೂ ಅಡೂರಿನ ಶಿವಗಿರಿ ಸಾಹಿತ್ಯ ವೇದಿಕೆಯ ಜಂಟಿ ಆಶ್ರಯದಲ್ಲಿ ದಿನಾಂಕ 6 ಅಕ್ಟೋಬರ್ 2024ರಂದು ಪಾಂಗೋಡು ಕ್ಷೇತ್ರದ ‘ಶ್ರೀ ದುರ್ಗಾಂಬಾ ವೇದಿಕೆ’ಯಲ್ಲಿ ಕನ್ನಡ ಭವನದ ಕೆ ವಾಮನ್ ರಾವ್ ಬೇಕಲ್, ಸಂಧ್ಯಾರಾಣಿ ಟೀಚರ್ ಸಾರಥ್ಯದಲ್ಲಿ ಕಾಸರಗೋಡು ದಸರಾ ಸಾಹಿತ್ಯ ಸಾಂಸ್ಕೃತಿಕೋತ್ಸವ-2024’ ನಡೆಯಿತು. ಈ ಕಾರ್ಯಕ್ರಮದಲ್ಲಿ ಕುಣಿತ ಭಜನೆ, ಭಜನೆ, ಸತ್ಸಂಗ ಹಾಗೂ ಶ್ರೀಮತಿ ಶಾಂತಾ ಕುಂಟಿನಿ ಸಾರಥ್ಯದ ಉಪ್ಪಿನಂಗಡಿಯ ಸತ್ಯಶಾಂತ ಪ್ರತಿಷ್ಠಾನದ ಸದಸ್ಯರಿಂದ ‘ಗಾನಲಹರಿ’ ನಡೆಯಿತು. ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ ಸಮಿತಿ ವತಿಯಿಂದ ಹಿರಿಯ ಸಾಹಿತಿ, ನಿವೃತ್ತ ಶಿಕ್ಷಕ ವಿ.ಬಿ. ಕುಳಮರ್ವ, ಲಲಿತಾಲಕ್ಷ್ಮಿ ಕುಳಮರ್ವ ದಂಪತಿಯರಿಗೆ ‘ಕಾಸರಗೋಡು ದಸರಾ ಸನ್ಮಾನ’ ನಡೆಯಿತು. ಕನ್ನಡ ಭವನ ಮತ್ತು ಗ್ರಂಥಾಲಯದ ಅಧ್ಯಕ್ಷ ವಾಮನ್ ರಾವ್ ಬೇಕಲ್ ಮತ್ತು ಸಂಧ್ಯಾರಾಣಿ ಟೀಚರ್, ಕುಳಮರ್ವ ದಂಪತಿಗಳಿಗೆ ಶಾಲು ಹೊದೆಸಿ, ಸ್ಮರಣಿಕೆ…
ಬೆಂಗಳೂರು : ಜನಪದರು ಸಾಂಸ್ಕೃತಿಕ ವೇದಿಕೆ (ರಿ.) ಇವರು ಅಭಿನಯಿಸುವ ಸಿದ್ದೇಶ್ವರ ನನಸುಮನೆ ಇವರ ಪರಿಕಲ್ಪನೆ, ರಚನೆ ಮತ್ತು ನಿರ್ದೇಶನದಲ್ಲಿ ‘SOME ಸಾರ’ ನಾಟಕ ಪ್ರದರ್ಶನವನ್ನು ದಿನಾಂಕ 8 ಅಕ್ಟೋಬರ್ 2024ರಂದು ಸಂಜೆ 6-30 ಗಂಟೆಗೆ ಬೆಂಗಳೂರಿನ ನಿಂಬೆಕಾಯಿಪುರದ ಶ್ರೀ ಅಭಯಾಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿರುವ ಜನಪದರು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಬಿಡಿ ಬಿಡಿಯಾದ ಹಾಸ್ಯ ಪ್ರಸಂಗಗಳಿಗೆ ನಾಟಕದ ರೂಪ ಕೊಟ್ಟು ಅದನ್ನು ರಂಗದ ಮೇಲೆ ತಂದಿರುವ ತಂತ್ರದ ಹಿನ್ನಲೆಯಲ್ಲಿ ‘SOME ಸಾರ’ ಎನ್ನುವ ಈ ನಾಟಕವು ಹಾಸ್ಯಕ್ಕಾಗಿ ಡಬ್ಬಲ್ ಮೀನಿಂಗ್ ಸಂಭಾಷಣೆ ಅಥವಾ ಇನ್ನಾವುದೇ ಆಂಗಿಕ ಚೇಷ್ಟೆಗಳನ್ನು ಬಳಸದೆ ಘಟನೆಗಳ ಮೂಲಕ ಪ್ರೇಕ್ಷಕರನ್ನು ನಗಿಸುತ್ತದೆ. ಬೆಂಗಳೂರು ಪೂರ್ವ ತಾಲೂಕಿನ ದೊಡ್ಡಬನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮದ ಹಿರಿಯರ ಮಾರ್ಗದರ್ಶನ ಮತ್ತು ಯುವಕರ ಪ್ರೋತ್ಸಾಹದಿಂದ ‘ಜನಪದರು’ ಎಂಬ ಸಾಂಸ್ಕೃತಿಕ ವೇದಿಕೆ ಮೂಲಕ ಸಿದ್ದೇಶ್ವರ ನನಸುಮನೆ ಇವರ ನಿದೇಶನದಲ್ಲಿ ಪ್ರಸ್ತುತಗೊಳ್ಳುವ ಈ ನಾಟಕ ಹಾಸ್ಯ ನಾಟಕಗಳು ಅಪರೂಪ ಎನ್ನುವ ಈ ಕಾಲಘಟ್ಟದಲ್ಲಿ ಸಂಸಾರ ಸಮೇತವಾಗಿ ನೋಡಬಹುದಾರ…
ಉಡುಪಿ : ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ರಮಣಶ್ರೀ ಪ್ರತಿಷ್ಠಾನ ನೀಡುವ 2024ನೇ ಸಾಲಿನ ‘ರಮಣಶ್ರೀ ಶರಣ ಸಾಹಿತ್ಯ ಪ್ರಶಸ್ತಿ’ಗೆ ಉಡುಪಿಯ ಸಾಹಿತಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅವರ ‘ಅಕ್ಕ ಕೇಳವ್ವ’ ಆಧುನಿಕ ವಚನಗಳ ಕೃತಿ ಪಾತ್ರವಾಗಿದೆ. ಪ್ರಶಸ್ತಿಯು 20,000 ನಗದು ಒಳಗೊಂಡಿದೆ. ನವೆಂಬರ್ 18ರಂದು ಬೆಂಗಳೂರಿನ ರಮಣಶ್ರೀ ಹೋಟೆಲ್ ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಉಡುಪಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರೊ . ನಿರಂಜನ ಚೋಳಯ್ಯ ತಿಳಿಸಿದ್ದಾರೆ.
ಸುಳ್ಯ : ಶ್ರೀ ಶಾರದಾಂಬ ಸಮೂಹ ಸಮಿತಿ ಸುಳ್ಯ ಇದರ ವತಿಯಿಂದ ಮಕ್ಕಳ ದಸರಾ 2024 ಪ್ರಯುಕ್ತ ವಿವಿಧ ಸ್ಪರ್ಧಾ ಕಾರ್ಯಕ್ರಮವನ್ನು ದಿನಾಂಕ 13 ಅಕ್ಟೋಬರ್ 2024ರಂದು ಬೆಳಿಗ್ಗೆ 9-00 ಗಂಟೆಗೆ ಚೆನ್ನಕೇಶವ ದೇವಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ. ಸರಕಾರಿ ಬಸ್ ನಿಲ್ದಾಣದಿಂದ ಚೆನ್ನಕೇಶವ ದೇವಾಲಯದವರೆಗೆ ಸ್ಕೌಟ್ ಗೈಡ್ ವಿದ್ಯಾರ್ಥಿಗಳ ಮೆರವಣಿಗೆಯೊಂದಿಗೆ ಈ ಸ್ಪರ್ಧಾ ಕಾರ್ಯಕ್ರಮವು ಬೆಳಗ್ಗೆ 10-00 ಗಂಟೆಗೆ ಪ್ರಾರಂಭವಾಗಲಿದೆ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಛದ್ಮವೇಷ, ಭಕ್ತಿಗೀತೆ, ಭಾವಗೀತೆ, ಗೂಡುದೀಪ, ಚಿತ್ರಕಲೆ, ಸಮೂಹ ಜನಪದ ಗೀತಾಗಾಯನ ಮತ್ತು ಸಮೂಹ ನೃತ್ಯ ಸ್ಪರ್ಧೆಗಳು ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 9611355496 ಮತ್ತು 9481178541 ಸಂಪರ್ಕಿಸಿರಿ.
ಮಂಗಳೂರು: ಮಂಗಳೂರಿನ ಪೋಲೀಸ್ ಲೈನ್ ಶ್ರೀದೇವಿ ದೇವಸ್ಥಾನದಲ್ಲಿ ಶರನ್ನವರಾತ್ರಿಯ ಶುಭ ಸಂದರ್ಭದಲ್ಲಿ ರಜತ ಸಂಭ್ರಮದಲ್ಲಿರುವ ಕೋಡಿಕಲ್ ಇಲ್ಲಿನ ಸರಯೂ ಯಕ್ಷ ವೃಂದ (ರಿ) ಇದರ ಕಲಾವಿದರಿಂದ ‘ಶೂರ್ಪನಖಾ ವಧೆ’ ಎಂಬ ಪ್ರಸಂಗದ ಬಯಲಾಟ ದಿನಾಂಕ 05 ಅಕ್ಟೋಬರ್ 2024 ರಂದು ನಡೆಯಿತು. ಇದೇ ಸಂದರ್ಭದಲ್ಲಿ ಯಕ್ಷಗಾನ ಹಿಮ್ಮೇಳದ ಗುರು ಯಕ್ಷಗಾನ ಸವ್ಯಸಾಚಿ ವಳಕುಂಜ ಶ್ರೀ ಕುಮಾರ ಸುಬ್ರಹ್ಮಣ್ಯ ಭಟ್ ಇವರಿಗ ಸನ್ಮಾನ ಹಾಗೂ ಬಾಲ ಕಲಾವಿದ ಮಾ. ದೃಶಾಲ್ ಪೂಜಾರಿ ಇವರಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ದೇವಳದ ಅಧ್ಯಕ್ಷ ಶ್ರೀ ಮಯೂರ್ ಉಳ್ಳಾಲ್, ನ್ಯಾಯವಾದಿಗಳಾದ ಕುಶಾಲಪ್ಪ, ಯಕ್ಷಗುರು ವರ್ಕಾಡಿ ರವಿ ಅಲೆವೂರಾಯ, ಡಾ. ನಂದಿನಿ ಹಾಗೂ ದೇವಿ ದೇವಸ್ಥಾನದ ಪದಾಧಿಕಾರಿಗಳು ಉಪಸ್ಥಿತರಿದ್ದರು.