Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಕರಾವಳಿ ಲೇಖಕಿಯರ -ವಾಚಕಿಯರ ಸಂಘದ ಆಶ್ರಯದಲ್ಲಿ ಹಿರಿಯ ಲೇಖಕಿ ಅವರ ಲೇಖನಗಳ ಸಂಗ್ರಹ ‘ಸಾಹಿತ್ಯ ಕವಳ’ ಕೃತಿ ಲೋಕರ್ಪಣಾ ಸಮಾರಂಭವು ದಿನಾಂಕ 24 ನವೆಂಬರ್ 2024ರಂದು ಮಂಗಳೂರಿನ ಉರ್ವಸ್ಟೋರ್ ನಲ್ಲಿರುವ ಸಂಘದ ಸಭಾಂಗಣ ‘ಸಾಹಿತ್ಯ ಸದನ’ದಲ್ಲಿ ನಡೆಯಿತು. ಕೃತಿ ಲೋಕರ್ಪಣೆಗೊಳಿಸಿದ ವಿಶ್ವ ವಿದ್ಯಾನಿಲಯ ಕಾಲೇಜಿನ ಪ್ರಾಧ್ಯಾಪಿಕೆ ಡಾ. ಶೈಲಾ ಯು. ಮಾತನಾಡಿ “ಸಾಹಿತ್ಯ ಕವಳವು ವಿಷಯ ವೈವಿಧ್ಯಗಳನ್ನು ಒಳಗೊಂಡ ಕೃತಿ. ಉತ್ತಮ ಸಂಘಟಕಿ, ಬರಹಗಾರ್ತಿ ಮತ್ತು ಉತ್ತಮ ಮನುಷ್ಯ ಜೀವಿಯೂ ಆಗಿರುವ ಚಂದ್ರಕಲಾ ಅವರು ಇಲ್ಲಿ ಹಿಂಜರಿಕೆಯಿಲ್ಲದೆ, ಯಾವುದೇ ಇಸಂ ಹಾಗೂ ಅಹಂ ಇಲ್ಲದೆ ಸ್ಥಿತಪ್ರಜ್ಞತೆಯಿಂದ ಸತ್ಯವನ್ನು ತಮ್ಮ ಬರವಣಿಗೆಯಲ್ಲಿ ಹೇಳಿದ್ದಾರೆ. ಅವರ ಬರವಣಿಗೆಯಲ್ಲಿ ಹೆಣ್ಣು – ಗಂಡಿನ ಸಮಾನತೆಯ ಅಪೇಕ್ಷೆಯಿದೆ. ಜೀವನವನ್ನು ವಾಸ್ತವವಾಗಿ ನೋಡುವ ಕ್ರಮವಿದೆ.” ಎಂದರು. ಇದೇ ಸಂದರ್ಭದಲ್ಲಿ ಹೇಮಾಂಶು ಪ್ರಕಾಶನದ ವತಿಯಿಂದ ನೀಡಿಲಾದ ಸಮ್ಮಾನವನ್ನು ಸ್ವೀಕರಿಸಿ ಮಾತನಾಡಿದ ಪ್ರಕಾಶಕರಾದ ಕಲ್ಲೂರು ನಾಗೇಶ್ “ಬರಹಗಾರರು ತಮ್ಮ ಬರಹಗಳಿಗೆ ತಾವೇ ಓದುಗರ ಬಳಗವನ್ನು ಸೃಷ್ಟಿಸಬೇಕು.” ಎಂದರು. ಸಂಘದ…
ಮೂಡುಬಿದಿರೆ: ಆಳ್ವಾಸ್ ತುಳು ಸಂಸ್ಕೃತಿ ಅಧ್ಯಯನ ಕೇಂದ್ರದ ವತಿಯಿಂದ ಸಾಹಿತಿ ಡಾ. ಮಹಾಲಿಂಗ ಭಟ್ ಬರೆದ ನಾಣಜ್ಜೆರ್ ಸುದೆ ತಿರ್ಗಾಯೆರ್’ ಕಾದಂಬರಿಯ ಅವಲೋಕನ ಕಾರ್ಯಕ್ರಮವು ದಿನಾಂಕ 27 ನವೆಂಬರ್ 2024ರ ಬುಧವಾರದಂದು ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಸ್ನಾತಕೋತ್ತರ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಕುಲಸಚಿವ (ಶೈಕ್ಷಣಿಕ) ಡಾ. ಟಿ. ಕೆ. ರವೀಂದ್ರನ್ “ತುಳು ಭಾಷೆಯು ತಮಿಳಿನಷ್ಟೇ ಪುರಾತನವಾದ ಭಾಷೆ. ಪ್ರಪಂಚದಾದ್ಯಂತ ಒಂದು ಕೋಟಿಗೂ ಹೆಚ್ಚು ತುಳು ಭಾಷಿಕರಿದ್ದಾರೆ. ಸಂಗಮ ಸಾಹಿತ್ಯದಲ್ಲೂ ತುಳು ಭಾಷೆಯ ಉಲ್ಲೇಖವಿದೆ. ತಮ್ಮ ಭಾಷೆಯ ಮೇಲೆ ಯಾರಿಗೂ ಕೀಳರಿಮೆ ಇರಬಾರದು. ತುಳು ಭಾಷಿಕರು ಸಾಹಿತ್ಯಕ್ಕೆ ಹೆಚ್ಚಿನ ಒಲವು ನೀಡದೇ ಇರುವುದರಿಂದ ಸಾಹಿತ್ಯದಲ್ಲಿ ತುಳು ಭಾಷೆಯು ಹಿಂದುಳಿದಿದೆ. ತುಳು ಭಾಷಿಕರು ತುಳು ಭಾಷೆಯನ್ನು ಉತ್ತೇಜಿಸಬೇಕು. ‘ನಾಣಜ್ಜೆರ್ ಸುದೆ ತಿರ್ಗಾಯೆರ್’ ಕೃತಿಯು ತುಳು ಸಾಹಿತ್ಯದ ಸ್ಥಿತಿಯನ್ನೇ ಬದಲಾಯಿಸಿದ ಕೃತಿಯಾಗಿದೆ. ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕೃತಿ ಇದಾಗಿದ್ದು, ತುಳು ಸಾಹಿತ್ಯವು ಈ ಕೃತಿಯ ನಂತರ…
ಬೆಂಗಳೂರು : ಕಾವಿ ಆರ್ಟ್ ಫೌಂಡೇಶನ್ ಹಾಗೂ ಆರ್ಟ್ ಮ್ಯಾಟರ್ಸ್ ಸಂಯೋಜಿಸುವ ‘ಕರಾವಳಿಯ ಕಾವಿ ಕಲೆ ಮತ್ತು ಯಕ್ಷಗಾನ’ ಕರಿತು ವಿಚಾರ ಸಂಕಿರಣವನ್ನು ದಿನಾಂಕ 01 ಡಿಸೆಂಬರ್ 2024ರಂದು ಅಪರಾಹ್ನ 2-30 ಗಂಟೆಗೆ ಬೆಂಗಳೂರಿನ ಜಯನಗರ ಯುವ ಪಥ, ವಿವೇಕ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮ ಅಧ್ಯಕ್ಷತೆಯನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿ ಇದರ ಅಧ್ಯಕ್ಷರಾದ ಡಾ. ತಾಲ್ಲೂರು ಶಿವರಾಮ ಶೆಟ್ಟಿ ಇವರು ವಹಿಸಲಿದ್ದು, ಬೆಂಗಳೂರಿನ ಸಂಶೋಧಕರಾದ ಡಾ. ವಿಶ್ವನಾಥ ಎ. ಎಸ್., ಉಡುಪಿಯ ಲೇಖಕರಾದ ಡಾ. ಪೃಥ್ವೀರಾಜ ಕವತ್ತಾರು ಮತ್ತು ಉಡುಪಿಯ ಕಲಾವಿದರಾದ ಡಾ. ಜನಾರ್ದನ ರಾವ್ ಹಾವಂಜೆ ಇವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
ಬೆಂಗಳೂರು : ಯಕ್ಷ ಸಂಕ್ರಾಂತಿ ಬಳಗ, ಅಭಾಸಾಪ ತಾಳಮದ್ದಳೆ ಘಟಕ, ಯಕ್ಷ ಶರವಣ ಬಳಗ, ರಂಗಸ್ಥಳ ಯಕ್ಷಮಿತ್ರ ಕೂಟ, ಯಕ್ಷ ಕಲಾಸಾಗರ ಬಳಗ, ಕಲಾಕ್ಷೇತ್ರ ಯಕ್ಷಮಿತ್ರ ಬಳಗ, ಯಕ್ಷನುಡಿಸಿರಿ ಬಳಗ, ಯಕ್ಷ ಸಂಗಮ ಬಳಗ, ಟೀಮ್ ತಿತ್ತಿತೈ, ಧಾರ್ಮಿಕ್ ಸಂಸ್ಥೆ ಬಳಗ, ಯಕ್ಷ ಬ್ರಹ್ಮಶ್ರೀ, ಯಕ್ಷ ಪೌರ್ಣಿಮೆ ಬಳಗ ಇವುಗಳ ಸಂಯುಕ್ತ ಆಯೋಜನೆಯಲ್ಲಿ ‘ಭೃಗುಶಾಪ’ ಯಕ್ಷಗಾನ ತಾಳಮದ್ದಳೆಯನ್ನು ದಿನಾಂಕ 29 ನವೆಂಬರ್ 2024ರಂದು ಬೆಂಗಳೂರಿನ ನಯನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಹಿಮ್ಮೇಳದಲ್ಲಿ ಶ್ರೀ ವಿನಯ್ ಆರ್. ಶೆಟ್ಟಿ, ಶ್ರೀ ಸಂಪತ್ ಆಚಾರ್ಯ ಮತ್ತು ಶ್ರೀ ಪನ್ನಗ ಮಯ್ಯ ಹಾಗೂ ಮುಮ್ಮೇಳದಲ್ಲಿ ಶ್ರೀ ಜಬ್ಬಾರ್ ಸಮೋ, ಶ್ರೀ ಸತೀಶ್ ಶೆಟ್ಟಿ ಮೂಡುಬಗೆ, ಡಾ. ಜಗದೀಶ್ ಶೆಟ್ಟಿ ಸಿದ್ಧಾಪುರ, ಶ್ರೀ ಅವಿನಾಶ್ ಉಬರಡ್ಕ ಮತ್ತು ಶ್ರೀ ಸುಧಾಕರ ಜೈನ ಹೊಸಬೆಟ್ಟುಗುತ್ತು ಇವರುಗಳು ಸಹಕರಿಸಲಿರುವರು. ಬೆಂಗಳೂರಿನಲ್ಲಿ ಯಕ್ಷಗಾನಗಳು ಹೆಚ್ಚು ಆಗುತ್ತಲೆ ಇರುತ್ತವೆ. ಆದರೆ ಪೌರಾಣಿಕ ಕಥೆಗಳ ಪೂರ್ಣಪ್ರಮಾಣದ ಅರಿವು ಮೂಡಿಸುವ ಕೂಟಗಳು ಅಂದರೆ ತಾಳಮದ್ದಳೆಗಳು ಬೆಂಗಳೂರಿನಲ್ಲಿ ವಿರಳ.…
ಮಂಗಳೂರು : ಕಥಾಬಿಂದು ಪ್ರಕಾಶನ ಇದರ ಹದಿನೇಳನೇ ವಾರ್ಷಿಕ ಸಂಭ್ರಮದ ಪ್ರಯುಕ್ತ ಪಿ.ವಿ. ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ‘ಕಥಾಬಿಂದು ಸಾಹಿತ್ಯೋತ್ಸವ’ವು ದಿನಾಂಕ 01 ಡಿಸೆಂಬರ್ 2024ರಂದು ಮಂಗಳೂರಿನ ಬಾಳಂಭಟ್ ಹಾಲ್ ಇಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ 50 ಕೃತಿಗಳ ಲೋಕಾರ್ಪಣೆ, ‘ಚೈತನ್ಯ ಶ್ರೀ’, ಸೌರಭ ರತ್ನ’, ‘ಸಮಾಜಸೇವಾ ರತ್ನ’ ಪ್ರಶಸ್ತಿ ಪ್ರದಾನ, ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕಾಸರಗೋಡು ಕನ್ನಡ ಭವನ ಮತ್ತು ಕನ್ನಡ ಭವನ ಪ್ರಕಾಶನ ಇವರ ಸಹಕಾರದೊಂದಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಳಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಡಾ. ಕೊಳ್ಚಪ್ಪೆ ಗೋವಿಂದ ಭಟ್ 7045353049 ಇವರನ್ನು ಸಂಪರ್ಕಿಸಿರಿ.
ತುಮಕೂರು : ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದರ ವತಿಯಿಂದ ‘ತುಮಕೂರು ಜಿಲ್ಲಾ ಹದಿನಾರನೆಯ ಕನ್ನಡ ಸಾಹಿತ್ಯ ಸಮ್ಮೇಳನ’ವನ್ನು ಡಾ. ಅಗ್ರಹಾರ ಕೃಷ್ಣಮೂರ್ತಿ ಇವರು ಸಮ್ಮೇಳನಾಧ್ಯಕ್ಷತೆಯಲ್ಲಿ ದಿನಾಂಕ 29 ನವೆಂಬರ್ 2024 ಮತ್ತು 30 ನವೆಂಬರ್ 2024ರಂದು ತುಮಕೂರು ಗಾಜಿನ ಮನೆಯಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 29 ನವೆಂಬರ್ 2024ರಂದು ಬೆಳಿಗ್ಗೆ 8-00 ಗಂಟೆಗೆ ಜಾನಪದ ಕಲಾ ತಂಡದೊಂದಿಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಮತ್ತು ಸುಗಮ ಸಂಗೀತ ಪ್ರಸ್ತುತಿಯ ಬಳಿಕ ರಾಷ್ಟ್ರ ಧ್ವಜಾರೋಹಣ, ನಾಡ ಧ್ವಜಾರೋಹಣ ಮತ್ತು ಪರಿಷತ್ತಿನ ಧ್ವಜಾರೋಹಣ ನಡೆಯಲಿದೆ. 10-00 ಗಂಟೆಗೆ ಡಾ. ಶ್ರೀ ಶ್ರೀ ಹನುಮಂತನಾಥ ಮಹಾ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಬೆಂಗಳೂರಿನ ಸಾಹಿತಿಗಳು ಹಾಗೂ ಚಿಂತಕರಾದ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಇವರು ಈ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಶ್ರೀ ಕೆ.ಎನ್. ರಾಜಣ್ಣ ಇವರು ಸ್ಮರಣ ಸಂಚಿಕೆ ‘ಕಲ್ಪಸಂಪದ’, ಸಮ್ಮೇಳನಾಧ್ಯಕ್ಷರ ಕೃತಿಗಳಾದ ನಾಡ ವರ್ಗಳ್ – ವ್ಯಕ್ತಿ ಚಿತ್ರಗಳು, ಕಾಲ್ದಾರಿ – ವಿಮರ್ಶಾ ಲೇಖನಗಳು ಮತ್ತು ಜೀನ್ಸ್ ಪ್ಯಾಂಟ್…
ಧಾರವಾಡ : ದಿನಾಂಕ 26 ನವೆಂಬರ್ 2024ರಂದು ನಡೆದ 76ನೇಯ ಸಂವಿಧಾನ ದಿನಾಚರಣೆಯ ಅಂಗವಾಗಿ ‘ಗಣಕರಂಗ’ (ರಿ) ಧಾರವಾಡ ಇವರು ಏರ್ಪಡಿಸಿದ್ದ ಕಥಾ ಸ್ಪರ್ಧೆಯಲ್ಲಿ ಬರಹಗಾರ, ಮೂಲವ್ಯಾಧಿ ಹಾಗೂ ಚರ್ಮರೋಗ ತಜ್ಞ, ವೈದ್ಯಕೀಯ ನಿರ್ದೇಶಕ, ಕಣಚೂರು ಮತ್ತು ಮಂಗಳಾ ಆಸ್ಪತ್ರೆಯಲ್ಲಿ ಸಲಹಾ ವೈದ್ಯರಾಗಿರುವ ಡಾ. ಸುರೇಶ ನೆಗಳಗುಳಿ ಇವರು ಬರೆದ ‘ಸ್ವಯಂ ವಿಧಾನ’ ಶಿರೋನಾಮೆಯ ಕಥೆಗೆ ಪ್ರಥಮ ಬಹುಮಾನವನ್ನು ಲಭಿಸಿದೆ. ರೂಪಾಯಿ ಐದು ಸಾವಿರ ನಗದು ಹಾಗೂ ಪ್ರಮಾಣ ಪತ್ರ ಹೊಂದಿರುವ ಈ ಪ್ರಶಸ್ತಿಯು ಅಂತರ್ಜಾಲ ಮಟ್ಟದಲ್ಲಿ ಲಭಿಸಿದ್ದು, ಪ್ರಥಮ, ದ್ವಿತೀಯ, ತೃತೀಯ ಹಾಗೂ ಹತ್ತು ಮೆಚ್ಚುಗೆಯ ಬಹುಮಾನಗಳನ್ನು ಒಳಗೊಂಡಿತ್ತು. ರಾಜ್ಯ ರಾಷ್ಟ್ರಾದ್ಯಂತದ ಹಲವು ಮಂದಿ ಕನ್ನಡಿಗರು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಸಂವಿಧಾನದ ಮಹತ್ವ ಸಾರುವ ವಿಭಿನ್ನ ಕಥೆಗಳ ಬಿತ್ತರವಾಯಿತು. ಧಾರವಾಡದಲ್ಲಿ ವಿಜೃಂಭಣೆಯಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭವು ಶೀಘ್ರದಲ್ಲೇ ನಡೆಯಲಿದೆ ಎಂದು ಸಂಘಟಕ ಸಿದ್ಧರಾಮ ಹಿಪ್ಪರಗಿ, ಗಣಪತಿ ಗೋ ಚಲವಾದಿ ಮತ್ತು ರವಿ ಚಲವಾದಿ ತಿಳಿಸಿರುತ್ತಾರೆ. ಈ ಸ್ಪರ್ಧೆಯಲ್ಲಿ ಡಾ ವಿ.…
ಮಂಗಳೂರು : ಸಂಗೀತ ಪರಿಷತ್ ಮಂಗಳೂರು ಇದರ ವತಿಯಿಂದ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಭಾರತೀಯ ವಿದ್ಯಾಭವನ ಮತ್ತು ರಾಮಕೃಷ್ಣ ಮಠ ಇವುಗಳ ಸಹಯೋಗದೊಂದಿಗೆ ಪ್ರಸ್ತುತ ಪಡಿಸುವ ‘ಮಂಗಳೂರು ಸಂಗೀತೋತ್ಸವ 2024’ವನ್ನು ಮಂಗಳೂರಿನ ಮಂಗಳಾದೇವಿಯಲ್ಲಿರುವ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ದಿನಾಂಕ 29 ನವೆಂಬರ್ 2024ರಿಂದ 1 ಡಿಸೆಂಬರ್ 2024ರವರೆಗೆ ಆಯೋಜಿಸಲಾಗಿದೆ. ದಿನಾಂಕ 29 ನವೆಂಬರ್ 2024ರಂದು ಸಂಜೆ 5-00 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಶರವು ಮಹಾ ಗಣಪತಿ ದೇವಸ್ಥಾನದ ಟ್ರಸ್ಟಿ ಶ್ರೀ ರಾಘವೇಂದ್ರ ಶಾಸ್ತ್ರಿ ಇವರು ದೀಪ ಪ್ರಜ್ವಲನೆ ಮಾಡಲಿರುವರು. ಶ್ರೀ ಚೇರ್ತಲ ಕೆ.ಎನ್. ರಂಗನಾಥ ಶರ್ಮ ಇವರಿಂದ ಹಾಡುಗಾರಿಕೆಗೆ ಅವನೇಶ್ವರಂ ಎಸ್.ಆರ್. ವಿನು ಇವರು ವಯೋಲಿನ್, ಶ್ರೀ ಮನ್ನಾರಗುಡಿ ಎ. ಈಶ್ವರನ್ ಮೃದಂಗ ಮತ್ತು ಶ್ರೀ ವೆಲ್ಲನ್ ತ್ತಂಜೂರ್ ಶ್ರೀಜಿತ್ ಘಟಂನಲ್ಲಿ ಸಹಕರಿಸಲಿದ್ದಾರೆ. ದಿನಾಂಕ 30 ನವೆಂಬರ್ 2024ರಂದು ಸಂಜೆ 5-00 ಗಂಟೆಗೆ ಶ್ರೀಮತಿ ಎನ್.ಜೆ. ನಂದಿನಿ ಇವರಿಂದ ಹಾಡುಗಾರಿಕೆಗೆ ಶ್ರೀ…
ಬೆಂಗಳೂರು: ಮಂಡ್ಯದಲ್ಲಿ 20,21 ಮತ್ತು 22 ಡಿಸಂಬರ್ 2024 ರಂದು ಅಯೋಜನೆಗೊಂಡಿರುವ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ಜ್ಯೋತಿಯನ್ನು ಹೊತ್ತ ‘ಕನ್ನಡ ರಥ’ ಕನ್ನಡದ ನಾಡದೇವತೆಯಾದ ‘ಶ್ರೀ ಭುವನೇಶ್ವರಿಯ ದೇವಿ ದೇವಾಲಯ’ವಿರುವ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೋಕಿನ ಭುವನಗಿರಿಯಿಂದ ಪ್ರಾರಂಭವಾಗಿ ಕರ್ನಾಟಕದ ಬಹುತೇಕ ಜಿಲ್ಲೆಗಳನ್ನು ಸಂಚರಿಸಿ ದಿನಾಂಕ 27 ನವೆಂಬರ್ 2024ರಂದು ಬೆಂಗಳೂರಿನಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಚೇರಿಗೆ ಬಂದಿತ್ತು.\ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ, ಗೌರವ ಕಾರ್ಯದರ್ಶಿಗಳಾದ ಡಾ. ಪದ್ಮಿನಿ ನಾಗರಾಜು, ಗೌರವ ಕೋಶಾಧ್ಯಕ್ಷರಾದ ಬಿ. ಎಂ. ಪಟೇಲ್ ಪಾಂಡು ಸೇರಿದಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಸಿಬ್ಬಂದಿ ಮತ್ತು ಅಪಾರ ಸಂಖ್ಯೆ ಕನ್ನಡಿಗರು ಕನ್ನಡ ರಥಕ್ಕೆ ಸ್ವಾಗತವನ್ನು ಕೋರಿದರು. ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ “ಕನ್ನಡ ರಥ ಸಂಚರಿಸಿದಲ್ಲೆಲ್ಲ ಕನ್ನಡಿಗರು ಅಪಾರ ಸಂಖ್ಯೆಯಲ್ಲಿ ನೆರೆದು ಸ್ವಾಗತವನ್ನು ಕೋರಿದ್ದಾರೆ.…
ಮಂಗಳೂರು : ಮಂಗಳೂರು ಸಂಸ್ಕೃತ ಸಂಘ ಮತ್ತು ಶ್ರೀ ಭಗವದ್ಗೀತಾ ಅಭಿಯಾನ ಸಮಿತಿ ಸೋಂದಾ ಸ್ವರ್ಣವಲ್ಲಿ ಮಠ ಶಿರಸಿ ಹಾಗೂ ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಭಗವದ್ಗೀತಾ ಕಂಠಪಾಠ ಸ್ಪರ್ಧಾ ಕಾರ್ಯಕ್ರಮ ದಿನಾಂಕ 23 ನವೆಂಬರ್ 2024 ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ಎಂ. ಬಿ. ಪುರಾಣಿಕರು ಮಾತನಾಡಿ “ಕರ್ತವ್ಯ ಪ್ರಜ್ಞೆಯನ್ನು ಜಾಗೃತಗೊಳಿಸಿದ ಶ್ರೀಕೃಷ್ಣ ಸಂದೇಶ ಸಾರ್ವಕಾಲಿಕವಾದುದು. ಜೀವನವನ್ನು ಸಂತೋಷವಾಗಿ ನೋಡಬಲ್ಲ ಅಂತರಂಗ ದೃಷ್ಟಿಯನ್ನು ಜಗತ್ತಿಗೆ ತೋರಿಸಿದ ಭಗವದ್ಗೀತಾ ಸಂದೇಶ ವಿಶ್ವಮಾನ್ಯವಾದುದು. ಹಾಗಾಗಿ ನಾವು ನಮ್ಮ ಸನಾತನ ಧರ್ಮದ ರಕ್ಷಣೆಯ ಕರ್ತವ್ಯವನ್ನು ಅರಿತು ಗೀತೆಯ ಸಾರವನ್ನು ಜನಸಾಮಾನ್ಯರಿಗೂ ತಲುಪುವಂತೆ ಮಾಡುವ ಶ್ರೀ ಸೋಂದಾ ಸ್ವರ್ಣವಲ್ಲೀ ಶ್ರೀಗಳ ಕಾರ್ಯ ಸ್ತುತ್ಯರ್ಹವಾದುದು.” ಎಂದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಶ್ರೀ ಪ್ರದೀಪ ಕುಮಾರ ಕಲ್ಕೂರ ಮಾತನಾಡಿ “ಆಧುನಿಕ ಜಗತ್ತಿಗೆ ಭಗವದ್ಗೀತಾ ಸಂದೇಶದ ಮಹತ್ವವನ್ನು ತಿಳಿಯಪಡಿಸುತ್ತಿರುವ…