Subscribe to Updates
Get the latest creative news from FooBar about art, design and business.
Author: roovari
ಮಂಗಳೂರು: ಸರೋಜಿನಿ ಮಧುಸೂದನ ಕುಶೆ ವಿದ್ಯಾಸಂಸ್ಥೆಯಲ್ಲಿ ನಡೆದ ಸರೋಜ್ ಮಧುಕಲಾ ಉತ್ಸವದ ಸಮಾರಂಭವು ದಿನಾಂಕ 23 ನವೆಂಬರ್ 2024ರ ಶನಿವಾರ ಶಾಲಾ ಸಂಸ್ಥಾಪಕ ಸರೋಜಿನಿ ಮಧುಸೂದನ ಕುಶೆ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಮಂಗಳೂರಿನ ಐ. ಸಿ. ಎ. ಐ. ಇದರ ಮಾಜಿ ಅಧ್ಯಕ್ಷರಾದ ಸಿಎ ಎಸ್. ಎಸ್. ನಾಯಕ್ ಮಾತನಾಡಿ “ಮಕ್ಕಳಿಗೆ ಅಭಿರುಚಿ ಇರುವ ಕ್ಷೇತ್ರದಲ್ಲೇ ಅವರಿಗೆ ಪ್ರೋತ್ಸಾಹ ನೀಡಬೇಕು, ಕೇವಲ ಅಂಕಗಳಿಸುವುದೇ ಜೀವನದ ಗುರಿಯಾಗಿರಬಾರದು. ನಮ್ಮಲ್ಲಿ ಇರುವ ಪ್ರತಿಭೆಗಳಿಂದಲೇ ಜೀವನದಲ್ಲಿ ಯಶಸ್ಸು ಗಳಿಸಬಹುದು. ಸಮಯ ವ್ಯರ್ಥ ಮಾಡದೆ ನಿರಂತರ ಪ್ರಯತ್ನದ ಮೂಲಕ ಜೀವನದಲ್ಲಿ ನಾವು ಅಂದುಕೊಂಡದ್ದನ್ನು ಸಾಧಿಸಬಹುದು, ಮಕ್ಕಳ ಅನಾವರಣಕ್ಕೆ ಇದು ಉತ್ತಮ ವೇದಿಕೆಯಾಗಿದೆ.” ಎಂದು ಹೇಳಿದರು. ಮತ್ತೋರ್ವ ಅತಿಥಿ ರಂಗಭೂಮಿ ಮತ್ತು ಸಿನಿಮಾ ಕಲಾವಿದರಾದ ಪ್ರದೀಪ್ ಚಂದ್ರ ಕುತ್ಪಾಡಿ ಮಾತನಾಡಿ “ಇಂದಿನ ಕಾಲಘಟ್ಟದಲ್ಲಿ ನಮ್ಮ ಕಲೆ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂಬ ಅಭಿಲಾಷೆ ಹೊಂದಿರುವ ಕುಶೆ ಸಂಸ್ಥೆಯ ಸಾಧನೆ ಅಮೋಘವಾದುದು, ಮಕ್ಕಳಲ್ಲಿರುವ ವ್ಯಕ್ತಿತ್ವ ವಿಕಸನಕ್ಕೆ ಪಠ್ಯದ…
ತೀರ್ಥಹಳ್ಳಿ : ಕೊಡಚಾದ್ರಿ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಇದರ ಸಾಂಸ್ಕೃತಿಕ ಸಮಿತಿ ವತಿಯಿಂದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ನಾಗವೃಜ ಕ್ಷೇತ್ರ, ಪಾವಂಜೆ ಇವರಿಂದ ‘ಯಕ್ಷಧ್ರುವ ‘ ಪಟ್ಲ ಸತೀಶ್ ಶೆಟ್ಟಿಯವರ ಸಾರಥ್ಯದಲ್ಲಿ ‘ಶ್ರೀ ಹರಿ ಲೀಲಾಮೃತ’ ಎನ್ನುವ ಕಥಾ ಪ್ರಸಂಗದ ಯಕ್ಷಗಾನ ಬಯಲಾಟವು ದಿನಾಂಕ 29 ನವೆಂಬರ್ 2024ರಂದು ಶುಕ್ರವಾರ ಸಂಜೆ 6 ಗಂಟೆಯಿಂದ 10 ಗಂಟೆವರೆಗೆ ನಡೆಯಲಿದೆ. ತೀರ್ಥಹಳ್ಳಿಯ ಸೊಪ್ಪುಗುಡ್ಡೆಯ ಶಾಂತವೇರಿ ಗೋಪಾಲ ಗೌಡ ರಂಗ ಮಂದಿರದೆದುರಿನ ಸಂಸ್ಕೃತಿ ಮಂದಿರದ ಆವರಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷರು ಮತ್ತು ಹಿರಿಯ ಸಹಕಾರಿಗಳಾಗಿರುವ ಡಾ. ಆರ್. ಎಂ. ಮಂಜುನಾಥ ಗೌಡ ವಿನಂತಿಸಿದ್ದಾರೆ. ಇದೇ ಸಂದರ್ಭದಲ್ಲಿ ಗುಡ್ಡೇಕೇರಿ ಕಾಳಿಂಗ ಫೌಂಡೇಶನ್ ಇದರ ಡಾ. ಗೌರಿಶಂಕರ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ತೀರ್ಥಹಳ್ಳಿ ತಾಲೂಕಿನವರಾದ ಎಂ. ಕೆ. ರಮೇಶ್ ಆಚಾರ್ಯ, ಯಕ್ಷಗಾನ ಅಕಾಡೆಮಿ ಪ್ರಶಸ್ತಿ ವಿಜೇತ ಕೊಕ್ಕುಡ್ತಿ…
ಮಂಗಳೂರು : ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆ್ಯಂಡ್ ಕಲ್ಚರಲ್ ಹೆರಿಟೇಜ್ (ಇಂಟಾಕ್) ನ ಮಂಗಳೂರು ವಿಭಾಗವು ವಿಶ್ವ ಪರಂಪರೆಯ ಸಪ್ತಾಹದ ಆಚರಣೆಯ ಅಂಗವಾಗಿ ಸಪ್ತಾಹದ ಸರಣಿಯಲ್ಲಿ ನಾಲ್ಕನೇ ಕಾರ್ಯಕ್ರಮವಾಗಿ ಆಯೋಜಿಸಿದ ಕಾವಿ ಕಲಾ ಪರಂಪರೆ ಕುರಿತು ಉಪನ್ಯಾಸವು ದಿನಾಂಕ 22 ನವೆಂಬರ್ 2024ರಂದು ಕೊಡಿಯಾಲ್ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ನಡೆಯಿತು. ಈ ಸ್ಥಳೀಯ ಮತ್ತು ಬಹುಮುಖ ಕಲಾ ಪ್ರಕಾರದ ಐತಿಹಾಸಿಕ ವಿಕಸನದ ಕುರಿತು ಖ್ಯಾತ ಕಲಾವಿದ ಮತ್ತು ಕಾವಿ ಕಲೆ ಕ್ಷೇತ್ರದ ಸಂಶೋಧಕ ಡಾ. ಜನಾರ್ದನ ರಾವ್ ಹಾವಂಜೆಯವರು ವಿವರವಾದ ಪ್ರಸ್ತುತಿಯನ್ನು ನೀಡಿದರು. ಸುಣ್ಣ, ಕೆಂಪು ಮಣ್ಣು ಮತ್ತು ಮರಳಿನಂತಹ ನೈಸರ್ಗಿಕ ವಸ್ತುಗಳನ್ನು ಬಳಸಿ, ವಿಭಿನ್ನ ಶೈಲಿಗಳನ್ನು ಅಳವಡಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಡಾ. ಹಾವಂಜೆಯವರ ಪ್ರಸ್ತುತಿಯು ಕೊಂಕಣ ಕರಾವಳಿಯಾದ್ಯಂತ ದೇವಾಲಯಗಳು, ಚರ್ಚ್ ಮತ್ತು ಖಾಸಗಿ ಮನೆಗಳಲ್ಲಿ ಕಾವಿ ಕಲೆಯನ್ನು ಪ್ರದರ್ಶಿಸುವ ಛಾಯಾಚಿತ್ರಗಳನ್ನು ಒಳಗೊಂಡಿತ್ತು. ಕಾವಿ ಕಲೆ ನಿಯಮಿತ ರೂಪರೇಷೆಗಳಿಲ್ಲದ ವಿಧಾನ ಆಧಾರಿತ ಕಲೆ, ಇದು ವಿಭಿನ್ನ ಕಲಾಶೈಲಿಗಳನ್ನು…
ಬೆಂಗಳೂರು : ಮಂಡ್ಯದಲ್ಲಿ ದಿನಾಂಕ 20 ಡಿಸಂಬರ್ 2024ರಿಂದ 22 ಡಿಸೆಂಬರ್ 2024ರವರೆಗೆ ಅಯೋಜಿತವಾಗಿರುವ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಬರಹಗಾರ, ಜನಪದ ವಿದ್ವಾಂಸ ಗೊ.ರು. ಚನ್ನಬಸಪ್ಪನವರು ಆಯ್ಕೆಯಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಾರ್ಯಕಾರಿ ಸಮಿತಿಯಲ್ಲಿ ಸರ್ವಾನುಮತದಿಂದ ಈ ನಿರ್ಣಯವನ್ನು ತೆಗೆದುಕೊಳ್ಳಲಾಯಿತೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ದಿನಾಂಕ 20 ನವೆಂಬರ್ 2024ರಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಪತ್ರಿಕಾ ಗೋಷ್ಟಿಯಲ್ಲಿ ತಿಳಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ 60 ಸದಸ್ಯರಲ್ಲಿ 53 ಜನ ಭಾಗವಹಿಸಿದ್ದು, ಐತಿಹಾಸಿಕವೆಂದು ತಿಳಿಸಿದ ಅವರು ಸೌಹಾರ್ದಯುತ ವಾತಾವರಣದಲ್ಲಿ ಈ ಚರ್ಚೆ ನಡೆದು ಗೊ.ರು.ಚ. ಅವರ ಆಯ್ಕೆಯಾಯಿತು. ಆಯ್ಕೆಯ ನಂತರ ನಾಡೋಜ ಡಾ. ಮಹೇಶ ಜೋಷಿಯವರು ದೂರವಾಣಿಯ ಮೂಲಕ ಗೊ.ರು. ಚನ್ನಬಸಪ್ಪನವರಿಗೆ ವಿಷಯವನ್ನು ತಿಳಿಸಿ ಅಭಿನಂದಿಸಿದಾಗ ಅವರು ಅತ್ಯಂತ ಸಂತೋಷದಿಂದ ತಮ್ಮ ಒಪ್ಪಿಗೆಯನ್ನು ಸೂಚಿಸಿದ್ದನ್ನೂ ನಾಡೋಜ ಡಾ.ಮಹೇಶ ಜೋಶಿ ಪತ್ರಿಕಾ ಗೋಷ್ಟಿಯಲ್ಲಿ ಹಂಚಿಕೊಂಡರು.…
ಕಾಸರಗೋಡು : ವಿಶ್ರಾಂತ ಪ್ರಾಧ್ಯಾಪಕಿ, ಸಾಹಿತಿ ಡಾ. ಯು. ಮಹೇಶ್ವರಿಯವರ ಬದುಕು ಬರಹದ ‘ಸಾಹಿತ್ಯ ಸಲ್ಲಾಪ’ ಕಾರ್ಯಕ್ರಮ ಪರಕ್ಕಿಲದ ಶ್ರೀಮಹಾದೇವ ಕ್ಷೇತ್ರದ ನಟರಾಜ ಮಂಟಪದಲ್ಲಿ ದಿನಾಂಕ 24 ನವೆಂಬರ್ 2024ರ ಭಾನುವಾರದಂದು ಜರಗಿತು. ಸಮತಾ ಸಾಹಿತ್ಯ ವೇದಿಕೆ ಬದಿಯಡ್ಕ ಹಾಗೂ ತರುಣ ಕಲಾವೃಂದ ಉಳಿಯ ಆಯೋಜಿಸಿದ ಈ ಕಾರ್ಯಕ್ರಮವನ್ನು ತಂತ್ರಿವರ್ಯ ಉಳಿಯತ್ತಾಯ ವಿಷ್ಣು ಆಸ್ರ ಉದ್ಘಾಟಿಸಿದರು. ಗಡಿನಾಡ ಚೇತನ ಪ್ರಶಸ್ತಿ ಪುರಸ್ಕೃತ ಕವಿ, ಪತ್ರಕರ್ತ ರಾಧಾಕೃಷ್ಣ ಉಳಿಯತ್ತಡ್ಕ ಸಭೆಯ ಅಧ್ಯಕ್ಷತೆವಹಿಸಿದ್ದರು. ಡಾ. ರಮಾನಂದ ಬನಾರಿ, ಕಾಸರಗೋಡು ಚಿನ್ನಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಬಳಿಕ ಡಾ. ಮೀನಾಕ್ಷಿ ರಾಮಚಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಹಿತ್ಯ ಸಮೀಕ್ಷೆಯಲ್ಲಿ ಕಾವ್ಯದ ಬಗ್ಗೆ ಸೌಮ್ಯ ಪ್ರಸಾದ್, ಅಂಕಣ ಹಾಗೂ ಲೇಖನ ಬರಹಗಳ ಬಗ್ಗೆ ಕಾರ್ತಿಕ್ ಪಡ್ರೆ, ವಿಮರ್ಶೆ ಹಾಗೂ ಸಂಶೋಧನಾ ಲೇಖನಗಳ ಬಗ್ಗೆ ಡಾ. ಸುಭಾಷ್ ಪಟ್ಟಾಜೆ ವಿಷಯ ಮಂಡಿಸಿದರು. ಬಳಿಕ ನಡೆದ ಮಹೇಶ್ವರಿ ಅವರೊಡನೆ ಸಂವಾದ ಕಾರ್ಯಕ್ರಮದಲ್ಲಿ ಕವಿಗಳಾದ ಟಿ.ಎ.ಎನ್. ಖಂಡಿಗೆ, ಬಾಲಕೃಷ್ಣ ಬೇರಿಕೆ, ವಿಕ್ರಂ…
ಮಂಗಳೂರು : ಯಕ್ಷಾಂಗಣ ಮಂಗಳೂರು ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆ ಹಾಗೂ ಕರ್ನಾಟಕ ಯಕ್ಷ ಭಾರತಿ ಪುತ್ತೂರು ವತಿಯಿಂದ ಕರ್ನಾಟಕ ರಾಜ್ಯೋತ್ಸವ ಕಲಾಸಂಭ್ರಮ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2024’ 12ನೇ ವರ್ಷದ ನುಡಿ ಹಬ್ಬದಲ್ಲಿ ದಿನಾಂಕ 16 ನವೆಂಬರ್ 2024ರಂದು ಕೀರ್ತಿಶೇಷ ಅರ್ಥಧಾರಿಗಳಾದ ದಿ. ಎ.ಕೆ. ನಾರಾಯಣ ಶೆಟ್ಟಿ ಫರಂಗಿಪೇಟೆ ಮತ್ತು ಎ.ಕೆ. ಮಹಾಬಲ ಶೆಟ್ಟಿಯವರ ಸಂಸ್ಮರಣಾ ಕಾರ್ಯಕ್ರಮವು ಕದ್ರಿ ಶ್ರೀ ಮಂಜುನಾಥ ದೇವಾಲಯದ ರಾಜಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲನೆ ಮಾಡಿ ಆಶೀರ್ವಚನ ನೀಡಿದ ಕನ್ಯಾನ ಕಣಿಯೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿ “ಕರಾವಳಿ ಜಿಲ್ಲೆಗಳಲ್ಲಿ ಯಕ್ಷಗಾನ ಮತ್ತು ನಾಟಕಗಳು ಜನ ಜೀವನದಲ್ಲಿ ಹಾಸುಹೊಕ್ಕಾಗಿವೆ. ಇವೆರಡೂ ನಮ್ಮ ಸಂಸ್ಕೃತಿಯ ಉಸಿರು. ಮಠ – ಮಂದಿರ ಮತ್ತು ಸಂಘ ಸಂಸ್ಥೆಗಳು ಅವುಗಳಿಗೆ ಇನ್ನಷ್ಟೂ ಪೋಷಣೆ ನೀಡುವ ಅಗತ್ಯವಿದೆ. ಯಕ್ಷಗಾನ ಆಟ ಕೂಟಗಳಲ್ಲಿ ಮೆರೆದ ಹಿಂದಿನ ಕಲಾವಿದರು ಬದುಕಿರುವಾಗ ಮಾಡಿದ ಸಾಧನೆಗಳನ್ನು ನೆನಪಿಟ್ಟು, ಮುಂದಿನ…
ಉಡುಪಿ : ಶ್ರೀ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ (ರಿ.) ಹೆಬ್ರಿ ಪ್ರಾಯೋಜಿತ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿ ನೀಡುವ ‘ಶಾರದಾ ಕೃಷ್ಣ’ ಪ್ರಶಸ್ತಿ -2025ಕ್ಕೆ ಈ ಬಾರಿ ಕನ್ನಡ ರಂಗಭೂಮಿಯ ಪ್ರಸಿದ್ಧ ರಂಗನಿರ್ದೇಶಕ, ನಟ, ರಂಗ ಶಿಕ್ಷಕ, ಸಂಘಟಕ ಡಾ. ಜೀವನ್ ರಾಂ ಸುಳ್ಯ ಇವರು ಆಯ್ಕೆಯಾಗಿದ್ದಾರೆ. ಜನವರಿ ತಿಂಗಳಲ್ಲಿ ನಡೆಯುವ ‘ಸಂಸ್ಕೃತಿ ಉತ್ಸವ’ದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿ ಪತ್ರ, ಫಲಕ ಹಾಗೂ ರೂಪಾಯಿ 25,000 ನಗದಿನೊಂದಿಗೆ ಗೌರವಿಸಲಾಗುವುದು ಎಂದು ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಚಾಲಕರಾದ ರವಿರಾಜ್ ಎಚ್.ಪಿ.ಯವರು ತಿಳಿಸಿರುತ್ತಾರೆ. ಡಾ. ಜೀವನ್ ರಾಂ ಸುಳ್ಯ ಕಿರು ಪರಿಚಯ ಕರ್ನಾಟಕದ ಸೃಜನಶೀಲ ರಂಗನಿರ್ದೇಶಕರ ಸಾಲಿನಲ್ಲಿ ಕೇಳಿ ಬರುವ ಪ್ರಮುಖ ಹೆಸರು ಡಾ. ಜೀವನ್ ರಾಂ ಸುಳ್ಯ. ನಟ, ನಿರ್ದೇಶಕ, ರಂಗಭೂಮಿ ತಜ್ಞ, ಜನಪದ ಕಲಾವಿದ, ಯಕ್ಷಗಾನ ಪರಿಣತ, ಗಾಯಕ, ಸಂಗೀತ ವಾದ್ಯ ಪ್ರವೀಣ, ಸಂಘಟಕ, ಚಿತ್ರನಟ, ಚಿತ್ರ ಕಲಾವಿದ, ಕಲಾ ನಿರ್ದೇಶಕ, ಜಾದೂಗಾರ, ಸಾಕ್ಷ್ಯಚಿತ್ರ ನಿರ್ದೇಶಕ, ವಸ್ತ್ರವಿನ್ಯಾಸಕ ಇತ್ಯಾದಿ…
ಉಡುಪಿ : ಯಕ್ಷಶಿಕ್ಷಣ ಟ್ರಸ್ಟ್ (ರಿ.) ಉಡುಪಿ ಇವರ ವತಿಯಿಂದ ಬ್ರಹ್ಮಾವರದ ಪ್ರದರ್ಶನ ಸಂಘಟನಾ ಸಮಿತಿ ಇವರ ಸಹಕಾರದಲ್ಲಿ ‘ಕಿಶೋರ ಯಕ್ಷಗಾನ ಸಂಭ್ರಮ 2024’ ಮಹಾಭಿಯಾನವು ದಿನಾಂಕ 23 ನವೆಂಬರ್ 2024ರಂದು ಬ್ರಹ್ಮಾವರದಲ್ಲಿ ಉದ್ಘಾಟನೆಗೊಂಡಿತು. ಉಡುಪಿ ಶಾಸಕರು, ಯಕ್ಷಶಿಕ್ಷಣ ಟ್ರಸ್ಟಿನ ಅಧ್ಯಕ್ಷರೂ ಆದ ಯಶ್ ಪಾಲ್ ಸುವರ್ಣರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ರಘುರಾಮ ಮಧ್ಯಸ್ಥ, ಬೈಕಾಡಿ ಸುಪ್ರಸಾದ್ ಶೆಟ್ಟಿ, ಬಿ. ಭುಜಂಗ ಶೆಟ್ಟಿ, ಧನಂಜಯ ಅಮೀನ್, ಬಿ.ಎನ್. ಶಂಕರ ಪೂಜಾರಿ, ಮಾರಾಳಿ ಪ್ರತಾಪ್ ಹೆಗ್ಡೆ, ರಾಜೀವ್ ಕುಲಾಲ್, ನಿತ್ಯಾನಂದ ಬಿ.ಆರ್. ಭಾಗವಹಿಸಿದ ಸಮಾರಂಭದ ಆರಂಭದಲ್ಲಿ ಬ್ರಹ್ಮಾವರ ಪ್ರದರ್ಶನ ಸಂಘಟನಾ ಸಮಿತಿಯ ಅಧ್ಯಕ್ಷರಾದ ಸುಧೀರ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಟ್ರಸ್ಟಿನ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣೇಶ್ ಬ್ರಹ್ಮಾವರ ನಿರ್ವಹಿಸಿದ ಕಾರ್ಯಕ್ರಮದ ಕೊನೆಯಲ್ಲಿ ಎಚ್.ಎನ್. ಶೃಂಗೇಶ್ವರ ಧನ್ಯವಾದ ಸಲ್ಲಿಸಿದರು. ಯಕ್ಷಗಾನ ಕಲಾರಂಗದ ಕಾರ್ಯಕರ್ತರಾದ ಯು.ಎಸ್. ರಾಜಗೋಪಾಲ ಆಚಾರ್ಯ, ಕೆ. ಆನಂದ ಶೆಟ್ಟಿ ಉಪಸ್ಥಿತರಿದ್ದರು. ಸಭೆಯ ಬಳಿಕ ನಿರ್ಮಲ ಇಂಗ್ಲೀಷ್ ಮೀಡಿಯಂ ಪ್ರೌಢಶಾಲಾ…
ಪುತ್ತೂರು : ಸಂಘಟನೆ, ಸಾಹಿತ್ಯ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸಾರ ಜೋಡುಮಾರ್ಗ, ರೋಟರಿ ಪುತ್ತೂರು ಎಲೈಟ್ ಮತ್ತು ನಿರತ ನಿರಂತ ಬಹುವಚನಂ ಇವುಗಳ ಸಂಯುಕ್ತ ಆಶ್ರಯದಲ್ಲಿ ಮೂರು ದಿನಗಳ ‘ಅಟ್ಟಾಮುಟ್ಟಾ’ ಮಕ್ಕಳ ನಾಟಕೋತ್ಸವವನ್ನು ದಿನಾಂಕ 28 ನವೆಂಬರ್ 2024ರಿಂದ 30 ನವೆಂಬರ್ 2024ರವರೆಗೆ ಪ್ರತಿದಿನ ಸಂಜೆ 6-30 ಗಂಟೆಗೆ ಪುತ್ತೂರಿನ ಎಡ್ವರ್ಡ್ ಹಾಲ್ ಸುದಾನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 28 ನವೆಂಬರ್ 2024ರಂದು ಸಾಗರದ ಕಿನ್ನರ ಮೇಳ ತುಮರಿ ಇದರ ಕಲಾವಿದರು ನಿಧಿ ಎಸ್. ಶಾಸ್ತ್ರಿ ಇವರ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ಅಭಿನಯಿಸುವ ಮಕ್ಕಳ ನಾಟಕ ‘ಇರುವೆ ಪುರಾಣ’. ಈ ನಾಟಕಕ್ಕೆ ದಿಗ್ವಿಜಯ ಹೆಗ್ಗೋಡು ಸಂಗೀತ, ಸಚಿನ್ ಕುಮಾರ್ ಎಸ್.ವಿ. ಇವರ ಸಹಾಯ ಹಾಗೂ ಕೆ.ಜಿ. ಕೃಷ್ಣ ಮೂರ್ತಿ ನಿರ್ಮಾಣ ಮಾಡಿರುತ್ತಾರೆ. ದಿನಾಂಕ 29 ನವೆಂಬರ್ 2024ರಂದು ನಡೆನುಡಿ ಕೊಂಬೆಟ್ಟು ಶಾಲಾ ಮಕ್ಕಳ ನಾಟಕ ಸಾಂಗತ್ಯ ಅಭಿನಯಿಸುವ ‘ಕತ್ತೆ & ದೆವ್ವ’ ನಾಟಕಕ್ಕೆ ಐ.ಕೆ. ಬೊಳುವಾರು ಇವರು ರಂಗಪಠ್ಯ ಮತ್ತು…
ಬ್ರಹ್ಮಾವರ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಬ್ರಹ್ಮಾವರ ತಾಲೂಕು ಘಟಕ ಪ್ರಸ್ತುತಪಡಿಸುವ ‘ಗ್ರಾಮ ಸಾಹಿತ್ಯ ಸಮ್ಮೇಳನ’ ಕ್ಯಾದಿಗೆ-2024 ಕಾರ್ಯಕ್ರಮವು ದಿನಾಂಕ 30 ನವೆಂಬರ್ 2024ರ ಶನಿವಾರ ಅಪರಾಹ್ನ ಘಂಟೆ 2.30ರಿಂದ ಕಾರ್ಕಡ ಸೀತಾರಾಮ ಸೋಮಯಾಜಯವರ ಮನೆಯಂಗಳದಲ್ಲಿ ನಡೆಯಲಿದೆ. ಶ್ರೀ ಕೆ. ತಾರನಾಥ ಹೊಳ್ಳ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಸಾಧಕರಿಗೆ ಗೌರವ ಸಮರ್ಪಣೆ, ಸ್ವರಚಿತ ಕವನ ವಾಚನ, ಗ್ರಾಮೀಣ ಕಂಠಸ್ಥ ಸಾಹಿತ್ಯ, ಕನ್ನಡಗೀತೆ, ಬಹುವಿಧ ಗೋಷ್ಠಿ, ಕಾರ್ತಿಕ ಮಾಸದ ತುಳಸಿ ಭಜನೆ, ಗ್ರಾಮ ಇತಿಹಾಸ ಹಾಗೂ ಸಾಲಿಗ್ರಾಮದ ಆರಾಧನಾ ಮೆಲೋಡಿಸ್ ಇವರಿಂದ ಗಾಯನ ಕಾರ್ಯಕ್ರಮ ನಡೆಯಲಿದೆ.