Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆ್ಯಂಡ್ ಕಲ್ಚರಲ್ ಹೆರಿಟೇಜ್ (ಇಂಟಾಕ್)ನ ಮಂಗಳೂರು ವಿಭಾಗವು ‘ದಿ ಮಲ್ಯ ರೆಸಿಡೆನ್ಸ್’ ಶೀರ್ಷಿಕೆಯ ಛಾಯಾಚಿತ್ರ ಪ್ರದರ್ಶನವನ್ನು ಗುರುವಾರ ದಿನಾಂಕ 21 ನವೆಂಬರ್ 2024ರಂದು ಕೊಡಿಯಾಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ಉದ್ಘಾಟಿಸಿತು. ಸ್ವಾತಂತ್ರ್ಯೃ ಹೋರಾಟಗಾರ ಮತ್ತು ದಕ್ಷಿಣ ಕನ್ನಡದ ಮೊದಲ ಸಂಸದ ಉಳ್ಳಾಲ ಶ್ರೀನಿವಾಸ ಮಲ್ಯ ಅವರ 122ನೇ ಜನ್ಮದಿನದಂದು ಪ್ರಸ್ತುತಪಡಿಸಲಾದ ಈ ಪ್ರದರ್ಶನವು ಇಂಟಾಕ್‌ನ ವಿಶ್ವ ಪರಂಪರೆಯ ಸಪ್ತಾಹದ ಆಚರಣೆಯ ಭಾಗವಾಗಿದೆ. ಪ್ರದರ್ಶನವು ಅಪರೂಪದ ಛಾಯಾಚಿತ್ರಗಳು ಮತ್ತು ವಾಸ್ತುಶಿಲ್ಪದ ರೇಖಾಚಿತ್ರಗಳೊಂದಿಗೆ ಮಲ್ಯ ಅವರು ತಮ್ಮ ಬಾಲ್ಯವನ್ನು ಕಳೆದ ನಗರದ ರಥಬೀದಿಯಲ್ಲಿರುವ ಪೂರ್ವಜರ ಮನೆಯ ವಿವರವಾದ ದಾಖಲಾತಿಯನ್ನು ನೀಡುತ್ತದೆ. ಇಂಟಾಕ್‌ನ ಮಂಗಳೂರು ವಿಭಾಗದಿಂದ ಸಂಕಲಿಸಲಾದ ಪ್ರದರ್ಶನವು ಮಲ್ಯ ಅವರ ಜೀವನದ ವಿಶೇಷ ಒಳನೋಟಗಳನ್ನು ಒದಗಿಸುತ್ತದೆ. ಇಂಟಾಕ್ ಮಂಗಳೂರು ಸಂಚಾಲಕ ಸುಭಾಸ್ ಚಂದ್ರ ಬಸು ಅವರ ಸ್ವಾಗತ ಭಾಷಣದ ನಂತರ ತಂಡದ ಸದಸ್ಯೆ ಶರ್ವಾಣಿ ಭಟ್ ಇವರು ನಿಖರವಾದ ದಾಖಲಾತಿ ಪ್ರಕ್ರಿಯೆಯನ್ನು ವಿವರಿಸಿದರು.…
ಬೆಂಗಳೂರು : ಸಮರ್ಥ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಇದರ ವತಿಯಿಂದ ದಿನಾಂಕ 15 ಡಿಸೆಂಬರ್ 2024ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ‘ಮಹಿಳೆಯರಿಗಾಗಿ ಜಾನಪದ ಗೀತೆ ಸ್ಪರ್ಧೆ, ಭಾವಗೀತೆ ಸ್ಪರ್ಧೆ, ಭಕ್ತಿಗೀತೆ ಸ್ಪರ್ಧೆ’ ಹೀಗೆ ಮೂರು ವಿಭಾಗಗಳಲ್ಲಿ ಗಾಯನ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಪ್ರತಿ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನವನ್ನು ಪಡೆದವರಿಗೆ ಪಾರಿತೋಷಕದೊಂದಿಗೆ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವ ಆಸಕ್ತರು ಬಿ. ಶೃಂಗೇಶ್ವರ ಇವರ ವಾಟ್ಸಾಪ್ ನಲ್ಲಿ (99008 45757) ತಮ್ಮ ಹೆಸರು, ವಯಸ್ಸು, ಊರು, ಸ್ಪರ್ಧಾ ವಿಭಾಗ ಮತ್ತು ವಾಟ್ಸಾಪ್ ಸಂಖ್ಯೆಯನ್ನು ನಮೂದು ಮಾಡುವುದರ ಮೂಲಕ ಹೆಸರನ್ನು ನೋಂದಾಯಿಸಿಕೊಳ್ಳುವುದು. ನಿಯಮಗಳು :- 1) ಸ್ಪರ್ಧೆಯು 20ರಿಂದ 45 ವಯಸ್ಸಿನೊಳಗಿನ ಮಹಿಳೆಯರಿಗೆ ಮಾತ್ರ ತೆರೆದಿದೆ. 2) ಮೂರು ವಿಭಾಗಗಳಲ್ಲಿ ಸ್ಪರ್ಧೆ ಇರುವುದಾದರೂ ಸ್ಪರ್ಧಾರ್ಥಿಗಳು ಮೂರರಲ್ಲಿ ಒಂದು ವಿಭಾಗದಲ್ಲಿ ಮಾತ್ರ ಸ್ಪರ್ಧಿಸಬಹುದಾಗಿದೆ. 3) ದಿನಾಂಕ 15 ಡಿಸೆಂಬರ್ 2024ರಂದು ಬೆಳಗ್ಗೆ 10-00 ಗಂಟೆಗೆ ಸರಿಯಾಗಿ ಸ್ಪರ್ಧೆ ಪ್ರಾರಂಭವಾಗುವ…
ಹಾಸನ : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ(ರಿ.), ಬೆಂಗಳೂರು, ತಾಲ್ಲೂಕು ಘಟಕ ಅರಸೀಕೆರೆ ವತಿಯಿಂದ ಹೋಬಳಿ ಘಟಕ ಉದ್ಘಾಟನೆ, ಜಿಲ್ಲಾ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರದಾನ ಮತ್ತು ಜಿಲ್ಲಾ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮವು ದಿನಾಂಕ 25 ನವೆಂಬರ್ 2024ರಂದು ಜಾವಗಲ್ ಪಟ್ಟಣದ ಹಳೇಬೀಡು ರಸ್ತೆಯಲ್ಲಿರುವ ಖಾದ್ರಿಯಾ ಕಾಂಪ್ಲೆಕ್ಸ್ ಹೊರಾಂಗಣ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕುವೆಂಪು ವಿ. ವಿ. ಇದರ ಪ್ರಾಧ್ಯಾಪಕಿಯಾದ ಡಾ. ಹಸೀನಾ ಎಚ್. ಕೆ. ಮಾತನಾಡಿ ರಾಜ್ಯೋತ್ಸವ ಎಂಬುದು ಕನ್ನಡ ನಾಡುನುಡಿಗೆ ಸಂಬಂಧಿಸಿದ ಆಚರಣೆ, ಇದು ಕನ್ನಡಿಗರ ಭಾವನಾತ್ಮಕ ಅನುಸಂಧಾನ. ಜಾತಿ, ಮತ, ಧರ್ಮ, ಲಿಂಗದೆಲ್ಲೆಗಳ ಮೀರಿದ ನಿರಂತರ ನಿತ್ಯೋತ್ಸವ. ಈಗಾಗಲೇ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ನಿರಂತರವಾಗಿ ವರ್ಷದುದ್ದಕ್ಕೂ ಕನ್ನಡದ ಕೈಂಕರ್ಯವನ್ನು ಮಾಡುತ್ತಾ ಬಂದಿದೆ. ನಾಡುನುಡಿಯ ಬಗೆಗಿನ ಪ್ರೀತಿ ಪ್ರತಿಯೊಬ್ಬ ಕನ್ನಡಿಗನಲ್ಲಿಯೂ ಅಂತರ್ಗತವಾದ ಅಂಶ. ಕೆಲವು ಸಂಸ್ಥೆಗಳು ಪ್ರತಿವರ್ಷ ನವೆಂಬರ್ ಬಂದಾಗ ಮಾತ್ರ ಕನ್ನಡ ಧ್ವಜಹಾರಿಸಿ, ಆಚರಣೆ ಮಾಡಿ…
ಉಡುಪಿ : ರಾಗ ಧನ ಉಡುಪಿ (ರಿ) ಸಂಸ್ಥೆ ಆಯೋಜಿಸುವ ರಾಗರತ್ನ ಮಾಲಿಕೆ ಸರಣಿಯ 31ನೇ ‘ರಂಜನಿ ಸಂಸ್ಮರಣಾ ಸಂಗೀತ ಕಛೇರಿ’ ದಿನಾಂಕ 24 ನವೆಂಬರ್ 2024ರ ಆದಿತ್ಯವಾರ ಸಂಜೆ ಘಂಟೆ 3.00 ರಿಂದ 6:30ರ ವರೆಗೆ ಉಡುಪಿ ಪರ್ಕಳದ ‘ಸರಿಗಮ ಭಾರತಿ ಸಂಗೀತ ವಿದ್ಯಾಲಯ’ದಲ್ಲಿ ನಡೆಯಿತು. ಪ್ರಸಿದ್ಧ ಸಂಗೀತ ಕಲಾವಿದರಾದ ಬೆಂಗಳೂರಿನ ಶ್ರೀ ಹೆಮ್ಮಿಗೆ ಎಸ್. ಪ್ರಶಾಂತ್ ಇವರು ಸಂಗೀತ ಕಚೇರಿಯನ್ನು ನಡೆಸಿಕೊಟ್ಟರು. ಇವರ ಗುರುಗಳಲ್ಲೊಬ್ಬರಾದ ಶ್ರೇಷ್ಠ ವಿದ್ವಾಂಸ ಕೆ. ವಿ. ನಾರಾಯಣ ಸ್ವಾಮಿಯವರ ಛಾಪನ್ನು ಇವರ ಸಂಗೀತದಲ್ಲಿಯೂ ಕಾಣಬಹುದಾಗಿದೆ. ಶ್ರೀ ಪ್ರಶಾಂತ್ ಅವರು ಆರಿಸಿಕೊಂಡ ಎಲ್ಲಾ ಪ್ರಸ್ತುತಿಗಳಲ್ಲಿಯೂ ಆಯಾ ರಾಗಗಳ ಸಂಚಾರದಲ್ಲಿನ ನಿಖರತೆ, ಸ್ವರಪ್ರಸ್ತಾರಗಳಲ್ಲಿನ ಖಚಿತತೆ, ಲಯ ಬದ್ಧತೆ ಎಲ್ಲವೂ ಎದ್ದು ಕಾಣುತ್ತಿತ್ತು. ಅವರು ಆರಿಸಿಕೊಂಡ ವರ್ಣ ನೆರನಮ್ಮಿತಿ -ಕಾನಡಾ- ಅಟತಾಳ ಸಂಪ್ರದಾಯಬದ್ಧವಾಗಿತ್ತು. ಮುಂದಕ್ಕೆ ‘ನೀವಾಡ ನೇಗಾನ’ (ಸಾರಂಗ- ಖಂಡ ಛಾಪು- ತ್ಯಾಗರಾಜ) ಚಿಕ್ಕ ಚೊಕ್ಕದಾದ ಸ್ವರಪ್ರಸ್ತಾರದಿಂದ ಕೂಡಿತ್ತು. ಮುಂದೆ (ಲೇಕನಾ ನಿನ್ನು ಜೂಟಿ- ಅಸಾವೇರಿ- ಆದಿತಾಳ ವಿಳಂಬ)…
ತೀರ್ಥಹಳ್ಳಿ : ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ತೀರ್ಥಹಳ್ಳಿ ಲೀಜನ್ ಇವರು ಆಯೋಜಿಸಿದ ‘ಭಾವಗೀತೆಗಳ ಕಲಿಕಾ ಶಿಬಿರ ಮತ್ತು ಸಂಗೀತ ಸಂಜೆ’ ಕಾರ್ಯಕ್ರಮವು ಎಲೆ ಮನೆ, ಹಾಲಿಡೇ ರಿಟ್ರೀಟ್, ಮ್ರಗವಧೆ ಇಲ್ಲಿ ಕನ್ನಡನಾಡಿನ ಹೆಸರಾಂತ ಗಾಯಕರು, ಸಂಗೀತ ನಿರ್ದೇಶಕರಾದ ಉಪಾಸನಾ ಮೋಹನ್ ಇವರ ಮಾರ್ಗದರ್ಶನದಲ್ಲಿ ದಿನಾಂಕ 24 ನವೆಂಬರ್ 2024ರಂದು ನೆರವೇರಿತು. ಸುಮಾರು 25 ಶಿಬಿರಾರ್ಥಿಗಳು ಚನ್ನಗಿರಿ, ಭದ್ರಾವತಿ, ಶಿವಮೊಗ್ಗ, ಕೊಪ್ಪ ಮತ್ತು ತೀರ್ಥಹಳ್ಳಿ ತಾಲೂಕುಗಳಿಂದ ಭಾವಗೀತೆಗಳ ಕಲಿಕಾ ಶಿಬಿರದಲ್ಲಿ ಭಾಗವಹಿಸಿದರು. ಶ್ರೀ ಮಲ್ಲಿಕಾರ್ಜುನ ದೇವಾಲಯ ಮ್ರಗವಧೆ ಇದರ ಅಧ್ಯಕ್ಷರು ಶ್ರೀ ಉದಯಶಂಕರ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಸೀನಿಯರ್ ಹೆಚ್.ಎನ್. ಸೂರ್ಯನಾರಾಯಣ ಇವರು ಅಧ್ಯಕ್ಷತೆಯನ್ನು ವಹಿಸಿದ್ದರು. ಶ್ರೀ ಉಪಾಸನಾ ಮೋಹನ್ ಇವರು ಕೆಲವು ಪ್ರಸಿದ್ಧ ಭಾವಗೀತೆಗಳನ್ನು ಮಕ್ಕಳಿಗೆ ಶ್ರುತಿ ಬದ್ದವಾಗಿ ಹಾಡುವ ವಿಧಾನವನ್ನು ತಿಳಿಸಿದರು. ಸಂಜೆ ನಡೆದ ಮುಕ್ತಾಯ ಸಮಾರಂಭದಲ್ಲಿ ಶ್ರೀ ಉಪಾಸನಾ ಮೋಹನ್ ಇವರನ್ನು ಸನ್ಮಾನಿಸಲಾಯಿತು. ಉಪಾಸನಾ ಮೋಹನ್ ಇವರ ಜೊತೆ ಶ್ರೀ ರಾಘವೇಂದ್ರ ಕಿರಣಕೆರೆ, ಕುಮಾರಿ ನಿಧಿ,…
ಬೆಂಗಳೂರು : ಜಯನಗರದ ಯುವಕ ಸಂಘದ ಬೆಂಗಳೂರು ಆರ್ಟ್ ಗ್ಯಾಲರಿಯಲ್ಲಿ ಕಾವಿ ಆರ್ಟ್ ಫೌಂಡೇಶನ್ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಸಹಯೋಗದೊಂದಿಗೆ ಉಡುಪಿಯ ಕಲಾವಿದ ಜನಾರ್ದನ ರಾವ್ ಹಾವಂಜೆಯವರ ‘ಕಾವ್ಯರೇಖಾ’ ಕಾವಿ ಕಲೆಯ ಏಕವ್ಯಕ್ತಿ ಕಲಾ ಪ್ರದರ್ಶನವು 25 ನವೆಂಬರ್ 2024ರಂದು ಉದ್ಘಾಟನೆಗೊಂಡಿತು. ಈ ಕಲಾ ಪ್ರದರ್ಶನವನ್ನು ಉದ್ಘಾಟಿಸಿದ ಡನ್ ಆಂಡ್ ಪರ್ಟ್ ನರ್ಸ್ ಸಂಸ್ಥಾಪಕರಾದ ಅರವಿಂದ ಹೆಗಡೆಯವರು ಮಾತನಾಡಿ “ಪುರಾತನ ಕಟ್ಟಡಗಳಲ್ಲಿನ ಕಾವಿ ಕಲೆ ನನ್ನ ಬಾಲ್ಯದ ದಿನಗಳಲ್ಲಿ ಶಿರಸಿಯ ಭಾಗಗಳಲ್ಲೆಲ್ಲ ನೋಡಿದ ನೆನಪು ಇಂದು ಹಸಿರಾದಂತಾಯಿತು. ಅಳಿವಿನಂಚಿನಲ್ಲಿನ ನಮ್ಮ ಕರ್ನಾಟಕದ ಈ ಕಲೆಯನ್ನು ಕಾಪಿಡಲು ಹಾಗೂ ಅದನ್ನು ಈ ತೆರನಾದ ಕಲಾಪ್ರದರ್ಶನದ ಮೂಲಕ ಇನ್ನಷ್ಟು ಜನರಿಗೆ ಹಂಚಲು ಉತ್ಸುಕರಾಗಿರುವ ಕಲಾವಿದ ಜನಾರ್ದನ ಹಾವಂಜೆಯವರ ಶ್ರಮ ಅಭಿನಂದನೀಯ. ಇನ್ನಷ್ಟು ಯುವ ಕಲಾವಿದರು ಈ ಕಲೆಯಲ್ಲಿ ತೊಡಗಿಸಿಕೊಂಡು ನಮ್ಮ ಸಂಸ್ಕೃತಿಯ ಭಾಗವೇ ಆಗಿರುವ ಕರಾವಳಿಯ ಕಲೆಯನ್ನು ಬೆಳೆಸುವಂತಾಗಲಿ” ಎಂಬುದಾಗಿ ಆಶಿಸಿದರು. “ಸುಣ್ಣ ಮತ್ತು ಕೆಮ್ಮಣ್ಣಿನಲ್ಲಿ ಗೀರಿ ನಿರ್ಮಾಣವಾಗುವ ಕಾವಿ ಕಲೆ…
ಮಡಿಕೇರಿ : ರಾಷ್ಟ್ರಕವಿ ರಸಋಷಿ ಕುವೆಂಪು ಅವರು ರಚಿಸಿದ ನಾಡಗೀತೆ “ಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ” ಈ ಗೀತೆಗೆ ನೂರು ಪರುಷ ತುಂಬಿದೆ. 1924ರಲ್ಲಿ ಕುವೆಂಪುರವರು ಈ ಗೀತೆಯನ್ನು ರಚಿಸಿದ್ದು ಭಾರಿ ಜನಮನ್ನಣೆ ಗಳಿಸಿಕೊಂಡಿತ್ತು. ಕರ್ನಾಟಕ ಸರಕಾರ ಈ ಗೀತೆಯನ್ನು ನಾಡಗೀತೆ ಎಂದು ಘೋಷಿಸಿತು. ನಂತರ ಸರಕಾರಿ ಮತ್ತು ಸರಕಾರೇತರ ಕಾರ್ಯಕ್ರಮಗಳಲ್ಲಿ ಪ್ರಾರಂಭದಲ್ಲಿ ಹಾಡುವುದು ಕಡ್ಡಾಯವಾಗಿಸಿತು. ಕನ್ನಡ ಸಾಹಿತ್ಯ ಪರಿಷತ್ತು ಬಹಳ ಹಿಂದಿನಿಂದಲೇ ಈ ಗೀತೆಯನ್ನು ತನ್ನ ಕಾರ್ಯಕ್ರಮಗಳಲ್ಲಿ ಅಳವಡಿಸಿಕೊಂಡು ಬಂದಿದೆ. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಾಡಗೀತೆಯ ನೂರನೆಯ ವರ್ಷ ಆಚರಣೆಯನ್ನು ಜಿಲ್ಲೆಯಲ್ಲಿ ವೈವಿಧ್ಯಪೂರ್ಣವಾಗಿ ನಡೆಸುವಂತೆ ತೀರ್ಮಾನಿಸಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ದಿನಾಂಕ 29 ಡಿಸೆಂಬರ್ 2024ರಂದು ಕುವೆಂಪು ಜನ್ಮದಿನದಂದು ಮಡಿಕೇರಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಇದರ ಪ್ರಯುಕ್ತ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ನಾಡಗೀತೆ ಗಾಯನ ಸ್ಪರ್ಧೆ, ನಾಡಗೀತೆ ವಿಶ್ಲೇಷಣೆ, ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ.…
ಮಂಗಳೂರು : ‘ಯಕ್ಷಾಂಗಣ ಮಂಗಳೂರು’ ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆ ಹಾಗೂ ಕರ್ನಾಟಕ ಯಕ್ಷ ಭಾರತಿ ಪುತ್ತೂರು ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ಕದ್ರಿ ಶ್ರೀ ಮಂಜುನಾಥ ದೇವಾಲಯದ ರಾಜಾಂಗಣದಲ್ಲಿ ದಿನಾಂಕ 15 ನವೆಂಬರ್ 2024ರಂದು 12ನೇ ವರ್ಷದ ನುಡಿ ಹಬ್ಬ ಯಕ್ಷಗಾನ ತಾಳಮದ್ದಳೆ ಸಪ್ತಾಹದ ಅಂಗವಾಗಿ ‘ದಿ. ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಸಂಸ್ಮರಣಾ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಸ್ಮರಣ ಭಾಷಣ ಮಾಡಿ ಪೂಂಜರ ಸಾಧನೆಗಳನ್ನು ಸ್ಮರಿಸಿದ ಯಕ್ಷಾಂಗಣದ ಕಾರ್ಯಾಧ್ಯಕ್ಷ, ಯಕ್ಷಗಾನ ಅರ್ಥಧಾರಿ ಮತ್ತು ವಿಮರ್ಶಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ “ಯಕ್ಷಗಾನ ಕ್ಷೇತ್ರದಲ್ಲಿ ಸವ್ಯಸಾಚಿ ಎಂದು ಗುರುತಿಸಲ್ಪಟ್ಟ ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಭಾಗವತರಾಗಿ, ಪ್ರಸಂಗಕರ್ತರಾಗಿ, ಹಿಮ್ಮೇಳ – ಮುಮ್ಮೇಳಗಳ ಸಮರ್ಥ ಕಲಾವಿದರಾಗಿ ಮೆರೆದವರು. ಅವರು ಯಕ್ಷರಂಗದಲ್ಲಿ ಸರ್ವ ಸಾಧ್ಯತೆಗಳನ್ನು ಕಂಡರಸಿದ ಶೋಧಕರು. ಮನೆಯನ್ನೇ ಗುರುಕುಲವನ್ನಾಗಿಸಿ ನೂರಾರು ಶಿಷ್ಯರ ಮೂಲಕ ತಮ್ಮ ಯೋಚನೆಗಳನ್ನೆಲ್ಲ ಸಾಕಾರಗೊಳಿಸಿದ ದೊಡ್ಡ ಸಾಹಸಿ. ಸುಮಾರು 32 ಕನ್ನಡ-ತುಳು ಪ್ರಸಂಗಗಳನ್ನು ಬರೆದ…
ಪುತ್ತೂರು : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ವಿಂಶತಿ ಸರಣಿ ತಾಳಮದ್ದಳೆ – 14 ಸಂಘದ ಸದಸ್ಯೆ ಜಯಂತಿ ಹೆಬ್ಬಾರ್ ಇವರ ಪ್ರಾಯೋಜಕತ್ವದಲ್ಲಿ ದಿನಾಂಕ 25 ನವೆಂಬರ್ 2024ರಂದು ಬನ್ನೂರು ಭಾರತಿ ನಗರದ ಶ್ರೀ ಬಲಮುರಿ ವಿದ್ಯಾಗಣಪತಿ ದೇವಳದ ಆಶ್ರಯದಲ್ಲಿ ನಡೆಯಿತು. ಹಳೆಯಂಗಡಿ ರಾಮ ಭಟ್ಟ ವಿರಚಿತ ‘ಶರಸೇತು ಬಂಧನ’ ತಾಳಮದ್ದಳೆಯ ಹಿಮ್ಮೇಳದಲ್ಲಿ ಭಾಗವತರಾಗಿ ಕುಸುಮಾಕರ ಆಚಾರ್ಯ ಹಳೆನೇರೆಂಕಿ ಚೆಂಡೆ ಮದ್ದಳೆಯಲ್ಲಿ ಪದ್ಯಾಣ ಶಂಕರನಾರಾಯಣ ಭಟ್, ಮಾ. ಪರೀಕ್ಷಿತ್ ಸಹಕರಿಸಿದರು. ಮುಮ್ಮೇಳದಲ್ಲಿ ಹನೂಮಂತನಾಗಿ ಗುಂಡ್ಯಡ್ಕ ಈಶ್ವರ ಭಟ್, ಅರ್ಜುನನಾಗಿ ಭಾಸ್ಕರ್ ಬಾರ್ಯ ಮತ್ತು ಮಾಂಬಾಡಿ ವೇಣುಗೋಪಾಲ ಭಟ್, ವೃದ್ದ ವಿಪ್ರನಾಗಿ ಗುಡ್ಡಪ್ಪ ಬಲ್ಯ, ಶ್ರೀ ರಾಮನಾಗಿ ಬಡೆಕ್ಕಿಲ ಚಂದ್ರಶೇಖರ್ ಭಟ್ಸಹಕರಿಸಿದರು. ನಿರ್ದೇಶಕ ಭಾಸ್ಕರ್ ಬಾರ್ಯ ಸ್ವಾಗತಿಸಿ ಚಂದ್ರಶೇಖರ್ ಭಟ್ ವಂದಿಸಿದರು.
ಮಂಗಳೂರು: ‘ನಾದಸ್ವರ ಸೆಲ್ವಂ’ ವಿದ್ವಾನ್ ನಾಗೇಶ್ ಎ. ಬಪ್ಪನಾಡು ಇವರಿಗೆ ಆಕಾಶವಾಣಿಯ ಅತ್ಯುನ್ನತ ಶ್ರೇಣಿ ಲಭಿಸಿದ ಹಿನ್ನೆಲೆಯಲ್ಲಿ ವಿದ್ವಾನ್ ನಾಗೇಶ್ ಎ. ಬಪ್ಪನಾಡು ಅಭಿನಂದನ ಸಮಿತಿ ವತಿಯಿಂದ ಸಾರ್ವಜನಿಕ ಅಭಿನಂದನಾ ಸಮಾರಂಭ ದಿನಾಂಕ 24 ನವೆಂಬರ್ 2024ರ ರವಿವಾರ ಹಂಪನಕಟ್ಟೆ ವಿ.ವಿ. ಕಾಲೇಜಿನ ರವೀಂದ್ರ ಕಲಾ ಮಂದಿರದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಪೇಜಾವರ ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ ಮಾತನಾಡಿ “ನಾಗೇಶ್ ಬಪ್ಪನಾಡು ಇವರು ಶ್ರೇಷ್ಟ ಕಲಾವಿದರಾಗಿದ್ದು, ಇವರಿಗೆ ಅರ್ಹವಾಗಿಯೇ ಆಕಾಶವಾಣಿಯ ಅತ್ಯುನ್ನತ ಶ್ರೇಣಿ ಲಭಿಸಿದೆ. ಮಂಗಳವಾದ್ಯ ಕ್ಷೇತ್ರದಲ್ಲಿ ಅವರ ಸಾಧನೆ ನಾಡಿಗೆ ಕೀರ್ತಿ ತಂದಿದೆ. ಅವಿಭಜಿತ ಜಿಲ್ಲೆಯ ದೇಗುಲಗಳಲ್ಲಿ ನಾದಸ್ವರಕ್ಕೆ ಅದರದ್ದೇ ಆದ ಮಹತ್ವದ ಸ್ಥಾನವಿದೆ. ಅಯೋಧ್ಯೆಯಲ್ಲಿ ನಾದಸ್ವರವನ್ನು ನುಡಿಸುವ ಅವಕಾಶವನ್ನೂ ಅವರು ಪಡೆದಿದ್ದಾರೆ. ಇಂತಹ ಅವಕಾಶಗಳು ಅವರಿಗೆ ಮುಂದೆಯೂ ಲಭಿಸಲಿ.” ಎಂದರು. ಅಭಿನಂದನಾ ಸಮಿತಿ ಗೌರವಾಧ್ಯಕ್ಷರಾದ ಡಾ. ಹರಿಕೃಷ್ಣ ಪುನರೂರು ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಾಗೇಶ್ ಎಂ. ಬಪ್ಪನಾಡು ಇವರನ್ನು ಪತ್ನಿ ಶ್ರೀ ಲತಾ, ಪುತ್ರ…