Author: roovari

ಮುಂಬೈ: ತ್ರಿರಂಗ ಸಂಗಮ ಮುಂಬೈ ಇವರ ಸಂಚಾಲಕತ್ವದಲ್ಲಿ ಮಂಗಳೂರಿನ ಜೈ ಮಾತಾ ಕಲಾತಂಡ ಅಭಿನಯಿಸುವ ‘ ಗುಸು ಗುಸು ಉಂಡುಗೆ ‘ ತುಳು ನಾಟಕದ ಮುಂಬೈ ಪ್ರವಾಸವು ದಿನಾಂಕ 22-07-2023 ರಿಂದ 30-07-2023ರ ವರೆಗೆ ನಡೆಯಲಿದೆ. ಅರುಣ್ ಶೆಟ್ಟಿ ಕಥೆ ಮತ್ತು ಸಂಚಾಲಕತ್ವದ ಈ ತಂಡದ ಸಾರಥ್ಯ ರಮೇಶ್ ರೈ ಕುಕ್ಕುವಳ್ಳಿ ಅವರದ್ದು. ಈ ನಾಟಕಕ್ಕೆ ದಿನಕರ ಭಂಡಾರಿ ಕಣಂಜಾರು ಸಂಭಾಷಣೆ ಬರೆದಿದ್ದು, ಸಂಗೀತ ಸಂದೀಪ್ ಮಧ್ಯ ಅವರದ್ದು. ಮುಂಬೈ ಕಾರ್ಯಕ್ರಮದ ಮಾಹಿತಿಗಾಗಿ ಕರ್ನೂರು ಮೋಹನ ರೈ-9867304757, ಅಶೋಕ್ ಪಕ್ಕಳ-9323822352, ನವೀನ್ ಶೆಟ್ಟಿ ಇನ್ನ ಬಾಳಿಕೆ-9820411114, ಇವರನ್ನು ಸಂಪರ್ಕಿಸಬಹುದು.

Read More

ಪುತ್ತೂರು: ಡಿಸೆಂಬರ್ 2023ರಲ್ಲಿ ನಡೆಯಲಿರುವ ಶ್ರೀ ಆಂಜನೇಯ 55ರ ಸಂಭ್ರಮಕ್ಕೆ ಪೂರಕವಾಗಿ ಪ್ರಾರಂಭವಾದ ‘ಯಕ್ಷ ಬಾನುಲಿ ಸರಣಿ’ ಎಂಬ ಕಾರ್ಯಕ್ರಮದಡಿಯಲ್ಲಿ, ಜೂನ್ 22ರಂದು ವಿವೇಕಾನಂದ ಕಾಲೇಜಿನ ಆಡಳಿತಕ್ಕೊಳಪಟ್ಟ ರೇಡಿಯೋ ಪಾಂಚಜನ್ಯದಲ್ಲಿ ‘ಯಕ್ಷ ದಾಂಪತ್ಯ’ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಎಲ್.ಎನ್. ಭಟ್ ಬಟ್ಯಮೂಲೆ, ಆನಂದ ಸವಣೂರು, ಶ್ರೀಪತಿ ಭಟ್ ಉಪ್ಪಿನಂಗಡಿ, ಆದಿತ್ಯ ನಾರಾಯಣ ಪಿ.ಎಸ್. ಸಹಕರಿಸಿದರು. ಮುಮ್ಮೇಳದಲ್ಲಿ ಪಕಳಕುಂಜ ಶ್ಯಾಮ್ ಭಟ್ (ಈಶ್ವರ), ಶುಭಾ ಜೆ.ಸಿ. ಅಡಿಗ (ದಾಕ್ಷಾಯಿಣಿ), ದುಗ್ಗಪ್ಪ ಎನ್. (ಭೀಮಸೇನ), ಕಿಶೋರಿ ದುಗ್ಗಪ್ಪ ನಡುಗಲ್ಲು (ದ್ರೌಪದಿ) ಸಹಕರಿಸಿದರು. ತೇಜಸ್ವಿನಿ ಕೆಮ್ಮಿಂಜೆ ಹಾಗೂ ಪ್ರಶಾಂತ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.

Read More

ಪುತ್ತೂರು : ವಿವೇಕಾನಂದ ಕಾಲೇಜಿನ ಬಳಿ ಇರುವ ಭಾರತಿನಗರದ ಬನ್ನೂರು ಶ್ರೀ ಬಲಮುರಿ ವಿದ್ಯಾಗಣಪತಿ ದೇವಸ್ಥಾನದಲ್ಲಿ ಪ್ರತಿ ತಿಂಗಳ ಮೂರನೇ ಮಂಗಳವಾರ ನಡೆಯಲಿರುವ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಇದರ ತಾಳಮದ್ದಳೆ ದಿನಾಂಕ : 20-06-2023ರಂದು ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ‘ಶ್ರೀ ರಾಮ ವನಗಮನ’ ಪ್ರಸಂಗದ ತಾಳಮದ್ದಳೆಯ ಹಿಮ್ಮೇಳದಲ್ಲಿ ಎಲ್.ಎನ್. ಭಟ್, ಆನಂದ ಸವಣೂರು, ಮುರಳೀಧರ ಕಲ್ಲೂರಾಯ, ಅಚ್ಯುತ ಪಾಂಗಣ್ಣಾಯ ಕೋಡಿಬೈಲು, ಆದಿತ್ಯ ಹಾಗೂ ಅಮೋಘ ಸಹಕರಿಸಿದರು. ಮುಮ್ಮೇಳದಲ್ಲಿ ದಶರಥನಾಗಿ ಭಾಸ್ಕರ್ ಬಾರ್ಯ, ಕೈಕೇಯೀಯಾಗಿ ಭಾಸ್ಕರ್ ಶೆಟ್ಟಿ ಸಾಲ್ಮರ, ಶ್ರೀರಾಮನಾಗಿ ಪಕಳಕುಂಜ ಶ್ಯಾಮ್ ಭಟ್, ಲಕ್ಷ್ಮಣನಾಗಿ ದುಗ್ಗಪ್ಪ ಎನ್. ಮತ್ತು ಮಂಥರೆಯಾಗಿ ಬಡೆಕ್ಕಿಲ ಚಂದ್ರಶೇಖರ್ ಭಟ್ ಸಹಕರಿಸಿದರು. ಶ್ರೀ ದೇವಳ ಅಧ್ಯಕ್ಷ ಬೊನಂತಾಯ ಶಿವಶಂಕರ ಭಟ್ ಸ್ವಾಗತಿಸಿ, ಸಂಘದ ಗೌರವ ಕಾರ್ಯದರ್ಶಿ ಟಿ. ರಂಗನಾಥ ರಾವ್ ವಂದಿಸಿದರು. ಅರ್ಚಕ ವೃಂದ ಹಾಗೂ ಅನೇಕ ಕಲಾಭಿಮಾನಿಗಳು ಉಪಸ್ಥಿತರಿದ್ದರು.

Read More

ದುಬಾಯಿ: ಯು.ಎ.ಇ ಬ್ರಾಹ್ಮಣ ಸಮಾಜದ ಸಂವತ್ಸರ ಪೂರ್ತಿ ನಡೆಯಲಿರುವ ವಿಂಶತಿ ಉತ್ಸವದ 2ನೇ ಕಾರ್ಯಕ್ರಮ ಯಕ್ಷಗಾನ ಸಾಧಕರ ಸನ್ಮಾನ ಮತ್ತು ತಾಳ ಮದ್ದಳೆಯ ‘ಯಕ್ಷ ಮದ್ದಳೆ’ ಕಾರ್ಯಕ್ರಮ ಜೂನ್ 10 ಶನಿವಾರ ಸಂಜೆ ದುಬೈಯ ಫಾರ್ಚ್ಯೂನ್ ಪ್ಲಾಜಾ ಸಭಾಂಗಣದಲ್ಲಿ ಯಶಸ್ವಿಯಾಗಿ ನೆರವೇರಿತು. ತಾಯ್ನಾಡಿನಿಂದ ಆಗಮಿಸಿದ ಅಥಿತಿ ಕಲಾವಿದರಾದ ಶ್ರೀ ಪದ್ಮನಾಭ ಉಪಾಧ್ಯಾಯ (ಹಿಮ್ಮೇಳ ಕಲಾವಿದರು ಬಪ್ಪನಾಡು ಮೇಳ) ಹಿರಿಯ ಕಲಾವಿದರಾದ ಶ್ರೀ ಮಧೂರು ರಾಧಾಕೃಷ್ಣ ನಾವಡ (ಪಾವಂಜೆ ಮತ್ತು ಬಪ್ಪನಾಡು ಮೇಳ) ಶ್ರೀ ಚೈತನ್ಯ ಕೃಷ್ಣ ಪದ್ಯಾಣ (ಹಿಮ್ಮೇಳ ಕಲಾವಿದರು ಹನುಮಗಿರಿ ಮೇಳ) ವಿದುಷಿ ಸುಮಂಗಲಾ ರತ್ನಾಕರ್ ರಾವ್ (ಯಕ್ಷಾರಾಧನಾ ಕಲಾಕೇಂದ್ರ ಮಂಗಳೂರು) ಇವರನ್ನು ಸ್ಮರಣಿಕೆ ಶಾಲು ಹಾಗೂ ಚಿನ್ನದ ನಾಣ್ಯದೊಂದಿಗೆ ಗೌರವಿಸಿ ಸನ್ಮಾನಿಸಲಾಯಿತು. ಈ ಸಂಧರ್ಭದಲ್ಲಿ ವೇದಿಕೆಯಲ್ಲಿ ವೀನಸ್ ಹೋಟೆಲ್ ನ ಮಾಲೀಕರು ಮತ್ತು ವಿಂಶತಿ ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ಪುತ್ತಿಗೆ ವಾಸು ಭಟ್, ಭೀಮ ಜ್ಯೂವೆಲ್ಡರ್ಸ್‌ ನ ನಿರ್ದೇಶಕರು ಹಾಗು ವಿಂಶತಿ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ನಾಗರಾಜ ರಾವ್,…

Read More

ಮೈಸೂರು : ಶ್ರೀ ಗುರು ಕಲಾ ಶಾಲೆ ಅರ್ಪಿಸುವ ಎಚ್. ಎಸ್.ಕವಿತಾ ಧನಂಜಯ ಸಂಗೀತ ಮತ್ತು ನಿರ್ದೇಶನದ ‘ಮಥನ’ ನಾಟಕವು ದಿನಾಂಕ 29-06-2023 ರಂದು ಮೈಸೂರಿನ ಕಲಾಮಂದಿರ ಆವರಣದ ಕಿರು ರಂಗಮಂದಿರ ದಲ್ಲಿ ಪ್ರದರ್ಶನಗೊಳ್ಳಲಿದೆ. ನಾಟಕದ ಬಗ್ಗೆ: ಪ್ರಸ್ತುತ ನಾಟಕವು ಎರಡು ಪ್ರಮುಖ ಪಾತ್ರಗಳಾದ ಕುಂತಿ ಮತ್ತು ದ್ರೌಪದಿಯನ್ನು ಕೇಂದ್ರೀಕರಿಸಿ ರಚಿತವಾದ ನಾಟಕವಾಗಿದೆ. ಇಬ್ಬರ ಸಂಭಾಷಣೆಯಲ್ಲಿ ಮಹಾಭಾರತದ ಅನೇಕ ಸಂಗತಿಗಳು ಪ್ರಸ್ತಾಪವಾಗುತ್ತವೆ. ಇಬ್ಬರ ನಡುವಿನ ಮಾನಸಿಕ ಸಂಘರ್ಷವನ್ನು ನಾಟಕ ಸಶಕ್ತವಾಗಿ ತೆರೆದಿಡುತ್ತದೆ. ಕುಂತಿಗೆ ದ್ರೌಪದಿಯ ಮೇಲೆ ಬಹಳ ಪ್ರೀತಿ ಮತ್ತು ವಿಶ್ವಾಸ. ಐವರು ಪಾಂಡವರನ್ನು ಒಂದೇ ಸಮನಾಗಿ ಹಿಡಿದಿಟ್ಟಿದ್ದಾಳೆ ಪಾಂಚಾಲಿ ಎಂಬ ಹೆಮ್ಮೆ ಕುಂತಿಗೆ. ಕುರುಕ್ಷೇತ್ರ ಯುದ್ಧ ಆಗದಂತೆ ತಡೆಯುವ ದೊಡ್ಡ ಜವಾಬ್ದಾರಿ ದ್ರೌಪದಿಯ ಮೇಲಿದೆ. ಅವಳಿಂದ ಆರಂಭವಾದ ಯುದ್ಧದ ಕಾರ್ಮೋಡ ಅವಳಿಂದಲೇ ತಿಳಿಯಾಗಬೇಕು. ಅದಕ್ಕಾಗಿ ಅವಳು ಪಂಚ ಪಾಂಡವರ ಜೊತೆ ಆರನೆಯವನಾದ ಕರ್ಣನನ್ನೂ ಪತಿಯನ್ನಾಗಿ ಸ್ವೀಕರಿಸಬೇಕು ಎಂಬುದು ಕುಂತಿಯ ವಾದ. ಕೃಷ್ಣನಿಗೆ ಅಸಾಧ್ಯವಾದದ್ದು ಕೃಷ್ನೆಗೆ ಸಾಧ್ಯವಾಗುತ್ತದೆ ಎಂಬ ನಂಬಿಕೆ ಕುಂತಿಯದು.…

Read More

ಮಂಗಳೂರು: ಮಂಗಳೂರು ವಿವಿ ಪ್ರಸಾರಾಂಗ ಪ್ರಕಟಿಸಿದ ಮೂರನೇ ಚತುರ್ಮಾಸದ ಏಳು ಕನ್ನಡ ಭಾಷಾ ಪಠ್ಯಪುಸ್ತಕಗಳನ್ನು ದಿನಾಂಕ 21-06-2023ರಂದು ಸಿಂಡಿಕೇಟ್ ಸಭಾಂಗಣದಲ್ಲಿ ಅನಾವರಣಗೊಳಿಸಲಾಯಿತು. ಮಂಗಳ ಪಠ್ಯಪುಸ್ತಕ ಮಾಲಿಕೆಯಡಿ ಪ್ರಕಟಿಸಲಾದ ಕಲಾಮಂಗಳ, ವಾಣಿಜ್ಯ ಮಂಗಳ, ಮುಕ್ತ ಮಂಗಳ, ನಿರ್ವಹಣಾ ಮಂಗಳ, ಗಣಕ ಮಂಗಳ, ಸೌಂದರ್ಯ ಮಂಗಳ, ವಿಜ್ಞಾನ ಮಂಗಳ ಎಂಬ ಕೃತಿಗಳನ್ನು ಮಂಗಳೂರು ವಿವಿಯ ಕುಲಪತಿ ಪ್ರೊ. ಜಯರಾಜ್ ಅಮೀನ್ ಬಿಡುಗಡೆಗೊಳಿಸಿ ಮಾತನಾಡುತ್ತಾ “ಶೈಕ್ಷಣಿಕ ವ್ಯವಸ್ಥೆಯಲ್ಲಿ ಪಠ್ಯ ಪುಸ್ತಕಗಳಿಗೆ ಅತೀ ಹೆಚ್ಚು ಮಹತ್ವವಿದ್ದು ಅದು ತಲೆಮಾರುಗಳ ಆಲೋಚನೆಯನ್ನು ರೂಪಿಸುತ್ತದೆ. ಅಂತಹ ಪಠ್ಯರಚನೆಯಲ್ಲಿ ಪೂರ್ವಾಗ್ರಹಗಳು, ಜ್ಞಾನಕಿಂತ ಹೊರತಾದ ಹಿತಾಸಕ್ತಿ ಇರಬಾರದು. ಮಂಗಳೂರು ವಿವಿಯ ಕನ್ನಡ ಪಠ್ಯಗಳನ್ನು ಎಲ್ಲರ ಸಹಭಾಗಿತ್ವದಲ್ಲಿ ಸಕಾಲದಲ್ಲಿ ಸಂಪಾದಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುತ್ತಿರುವ ಅಧ್ಯಯನ ಮಂಡಳಿ ಮತ್ತು ಪ್ರಸಾರಾಂಗದ ಕಾರ್ಯ ಶ್ಲಾಘನೀಯ” ಎಂದರು. ಮಂಗಳೂರು ವಿವಿ ಕುಲಸಚಿವ ಪ್ರೊ. ಕಿಶೋರ್ ಕುಮಾರ್ ಸಿ.ಕೆ. ಮಾತನಾಡಿ “ಮಂಗಳೂರು ವಿವಿಯ ಕನ್ನಡ ಪಠ್ಯ ಕರಾವಳಿಯ ಅಸ್ಮಿತೆ ಮತ್ತು ಮುದ್ರಣದ ಗುಣಮಟ್ಟದಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಎನ್.ಇ.ಪಿ. ಪೂರಕವಾಗುವಂತೆ…

Read More

ಮಂಗಳೂರು: ಮಂಗಳೂರಿನ ದಾಸಸಾಹಿತ್ಯ ಸೇವಾ ಪ್ರತಿಷ್ಠಾನವು ರಾಮಕೃಷ್ಣ ಮಠದ ಸಹಯೋಗದೊಂದಿಗೆ ಮಂಗಳೂರಿನ ರಾಮಕೃಷ್ಣ ಮಠದಲ್ಲಿನ ವಿವೇಕಾನಂದ ಸಭಾಂಗಣದಲ್ಲಿ ರಾಜ್ಯದ ಹೆಸರಾಂತ ಗಾಯಕ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪುತ್ತೂರು ನರಸಿಂಹ ನಾಯಕ್‌ ಅವರಿಂದ ಹರಿದಾಸ ಕೃತಿ ಕೀರ್ತನೆಗಳ ಗಾಯನ ‘ದಾಸ ಗಾನಾಮೃತ’ ಕಾರ್ಯಕ್ರಮವು ದಿನಾಂಕ : 16-06-2023ರಂದು ಸಂಜೆ ನಡೆಯಿತು. ಕಾರ್ಯಕ್ರಮವನ್ನು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಉದ್ಘಾಟಿಸಿದರು. ದಾಸಸಾಹಿತ್ಯ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಎಂ.ಎಸ್‌. ಗುರುರಾಜ್ ಅವರು ಸ್ವಾಗತಿಸಿದರು. ಕೊಂಚಾಡಿ ಗುರುದತ್‌ ಕಾಮತ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪುತ್ತೂರು ನರಸಿಂಹ ನಾಯಕ್‌ ಅವರು ಕೀರ್ತನೆ ಹಾಡುವ ಮುನ್ನ ಕೃತಿ ರಚನೆಗಾರರ ಹಾಗೂ ಕೃತಿಯ ಸಾಹಿತ್ಯದ ಬಗ್ಗೆ ಮಾಹಿತಿ ನೀಡಿದರು. ತಬಲಾದಲ್ಲಿ ರಾಜೇಶ್ ಭಾಗವತ್ ಹಾಗೂ ಹಾರ್ಮೋನಿಯಂನಲ್ಲಿ ಹೇಮಂತ್ ಭಾಗವತ್ ಮತ್ತು ತಾಳದಲ್ಲಿ ವಿಶ್ವಾಸ್ ಪ್ರಭು ಸಾತ್ ನೀಡಿ ಸಹಕರಿಸಿದರು. ವಿದ್ಯಾರಾವ್ ಅವರು ನಿರೂಪಿಸಿ, ಸಂಜನಾ ಮೂರ್ತಿ ವಂದಿಸಿದರು.

Read More

ಕಾಸರಗೋಡು : ಗಡಿನಾಡ ಭೀಮಕವಿ, ನಾಡೋಜ ಡಾ. ಕಯ್ಯಾರ ಕಿಞಣ್ಣ ರೈ ಅವರ ಹೆಸರಿನಲ್ಲಿ ಕಾಸರಗೋಡಿನ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯು ಕೊಡಮಾಡುವ ಎರಡನೆಯ ವರ್ಷದ ಪ್ರತಿಷ್ಠಿತ ನಾಡೋಜ ಕಯ್ಯಾರ ಕಿಞಣ್ಣ ರೈ ಪ್ರಶಸ್ತಿಯು ನಿವೃತ್ತ ಕನ್ನಡ ಪ್ರಾಧ್ಯಾಪಿಕೆ, ಹಿರಿಯ ಲೇಖಕಿ, ಬಹುಶ್ರುತ ವಿದ್ವಾoಸೆ, ಸಂಶೋಧಕಿ ಡಾ. ಪ್ರಮೀಳಾ ಮಾಧವ್ ಅವರಿಗೆ ದೊರಕಿದೆ. ಕರ್ನಾಟಕ ಸರಕಾರದ ಕನ್ನಡ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಶ್ರಯದಲ್ಲಿ ಕಾಸರಗೋಡಿನ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಹಾಗೂ ಮಂಗಳೂರಿನ ಮಂಜುನಾಥ ಎಜುಕೇಷನ್ ಟ್ರಸ್ಟ್ ಇವುಗಳ ಸಹಕಾರದೊಂದಿಗೆ ನಾಡೋಜ ಕವಿ ಕಯ್ಯಾರರ 108ನೇ ಜನ್ಮದಿನದ ಅಂಗವಾಗಿ ಅವರ ಹುಟ್ಟೂರಾದ ಕಾಸರಗೋಡಿನ ಕಯ್ಯಾರಿನಲ್ಲಿರುವ ಶ್ರೀ ರಾಮಕೃಷ್ಣ ಕಿ.ಪ್ರಾ. ಶಾಲೆ ಆವರಣದಲ್ಲಿ 08-06-2023 ರಂದು ಕಯ್ಯಾರ ಜನ್ಮದಿನಾಚರಣೆ ಹಾಗೂ ಪ್ರಶಸ್ತಿ ವಿತರಣಾ ಸಮಾರಂಭ ಜರಗಿತು. ಸಮಾರಂಭದಲ್ಲಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ವಿಶ್ವನಾಥ ಹಿರೇಮಠ್ ಅವರು ಪ್ರಶಸ್ತಿ ವಿತರಿಸಿ. ಬಳಿಕ ಮಾತನಾಡಿದ ಅವರು ಹಿರಿಯ ಚೇತನ…

Read More

ಮಂಗಳೂರು : ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಆಶ್ರಯದಲ್ಲಿ ಪ್ರತಿ ವರ್ಷ ಮಳೆಗಾಲದಲ್ಲಿ ಜರಗುವ ತುಳುವರ ಮೋಜು – ಮಸ್ತಿಯ ಕಾರ್ಯಕ್ರಮ ‘ಮರಿಯಲದ ಮಿನದನ’ವನ್ನು ಈ ಬಾರಿ ಜುಲೈ 9ರಂದು ಭಾನುವಾರ ಮರವೂರು ನದಿ ಕಿನಾರೆಯ ಗ್ರಾಂಡ್ ಬೇ ಆವರಣದಲ್ಲಿ ಏರ್ಪಡಿಸಲಾಗಿದೆ ಎಂದು ಟ್ರಸ್ಟ್ ಸ್ಥಾಪಕಾಧ್ಯಕ್ಷ ಎ.ಸದಾನಂದ ಶೆಟ್ಟಿ ಹೇಳಿದ್ದಾರೆ. ನಗರದ ಬಲ್ಮಠ ಕುಡ್ಲ ಪೆವಿಲಿನ್ ನ ಸದಾಶಯ ಕಚೇರಿಯಲ್ಲಿ ಜರಗಿದ ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಪೂರ್ವಭಾವಿ ಸಭೆಯಲ್ಲಿ ಅವರು ಈ ವಿಷಯವನ್ನು ಪ್ರಕಟಿಸಿದರು. ತುಳುನಾಡಿನಲ್ಲಿ ಎಲ್ಲ ಋತುಗಳಲ್ಲೂ ವಿಶೇಷವಾದ – ಹಬ್ಬ ಆಚರಣೆಗಳು ನಡೆಯುತ್ತವೆ. ಸಂಸ್ಕೃತಿ – ಸಂಪ್ರದಾಯ, ಆಚಾರ – ವಿಚಾರ, ಆಟ – ಕೂಟ ಮತ್ತು ತಿಂಡಿ – ತಿನಿಸುಗಳಲ್ಲಿ ತುಳು ಜನರ ಪ್ರಾದೇಶಿಕ ಅನನ್ಯತೆ ಕಂಡುಬರುತ್ತದೆ. ಅವುಗಳನ್ನು ಯುವ ಸಮುದಾಯಕ್ಕೆ ಪರಿಚಯಿಸುವ ಸಲುವಾಗಿ ಕಾಲಕಾಲಕ್ಕೆ ಇಂತಹ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ’ ಎಂದವರು ತಿಳಿಸಿದರು. ಕಾರ್ಯಕ್ರಮ ವೈವಿಧ್ಯ: ಮಹಿಳಾ ವಿಭಾಗದ ಅಧ್ಯಕ್ಷೆ ವಿಜಯಲಕ್ಷ್ಮಿ ಬಿ. ಶೆಟ್ಟಿ ಮಾತನಾಡಿ…

Read More

ಕಾಸರಗೋಡು : ಧಾರವಾಡದ ಸಾಹಿತ್ಯ ಗಂಗಾ ವೇದಿಕೆಯು ಕಾಸರಗೋಡು ಜಿಲ್ಲೆಯ ಬರಹಗಾರರನ್ನು ಪ್ರೋತ್ಸಾಹಿಸಲು ನಡೆಸಿದ ಕಾಸರಗೋಡು ಜಿಲ್ಲಾ ಮಟ್ಟದ ಕವನ ಸ್ಪರ್ಧೆಯ ಫಲಿತಾಂಶವನ್ನು ದಿನಾಂಕ : 11-06-2023ರಂದು ಪ್ರಕಟಿಸಲಾಯಿತು. ಶ್ರೀಮತಿ ಸೌಮ್ಯ ಪ್ರವೀಣ್ ಮಂಗಳೂರು – ಪ್ರಥಮ, ಶ್ರೀಮತಿ ಲಕ್ಷ್ಮೀ ಕೆ. ಕಾಸರಗೋಡು – ದ್ವಿತೀಯ ಹಾಗೂ ಶ್ರೀಮತಿ ಶ್ರೀವಿದ್ಯಾ ಪಡ್ರೆ ಬೆಂಗಳೂರು – ತೃತೀಯ ಬಹುಮಾನಗಳನ್ನು ಪಡೆದಿದ್ದಾರೆ. ಕಾಸರಗೋಡು ಜಿಲ್ಲಾ ಮಟ್ಟದ ಕವನ ಸ್ಪರ್ಧೆಯಲ್ಲಿ 30ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದರು. ಕಾಸರಗೋಡು ಜಿಲ್ಲಾಮಟ್ಟದ ಕವನ ಸ್ಪರ್ಧೆಯಲ್ಲಿ ಬಹುಮಾನಿತರಾದವರು ಮತ್ತು ಸಕ್ರಿಯವಾಗಿ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳು ಹಾಗೂ ಈ ಸ್ಪರ್ಧೆ ಯಶಸ್ವಿಯಾಗಿ ನಡೆಯಲು ಸಹಕರಿಸಿದ ಕಾಸರಗೋಡಿನ ಎಲ್ಲ ಸಾಹಿತ್ಯಪ್ರಿಯರಿಗೂ ಸಾಹಿತ್ಯ ಗಂಗಾ ಮುಖ್ಯಸ್ಥ ವಿಕಾಸ ಹೊಸಮನಿ ಮತ್ತು ಸಂಚಾಲಕ ಡಾ. ಸುಭಾಷ್ ಪಟ್ಟಾಜೆ ಅಭಿನಂದನೆಗಳನ್ನು ತಿಳಿಸಿದ್ದಾರೆ. ಈ ಬಾರಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ಮಹಿಳೆಯರೇ ಪಡೆದಿರುವುದು ವಿಶೇಷ. ಈ ಮೂವರು ಮಹಿಳೆಯರು ಮುಂದೆ ಇನ್ನೂ ಚೆನ್ನಾಗಿ ಕವಿತೆ ಬರೆಯಬಲ್ಲ…

Read More