Subscribe to Updates
Get the latest creative news from FooBar about art, design and business.
Author: roovari
ಕೋಟ : ವಿವೇಕ ವಿದ್ಯಾ ಸಂಸ್ಥೆಗಳಲ್ಲಿ ಯಕ್ಷಶಿಕ್ಷಣವು ದಿನಾಂಕ 27 ಜುಲೈ 2024ರಂದು ಪ್ರಾರಂಭಗೊಂಡಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಖ್ಯಾತ ಯಕ್ಷಗಾನ ಕಲಾವಿದ ಕೋಟ ಸುರೇಶ್ ಇವರು ಮಾತನಾಡಿ “ಪಾರಂಪರಿಕ ಯಕ್ಷಗಾನವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ, ಪ್ರೌಢಶಾಲೆಗಳಲ್ಲಿ ಯಕ್ಷಗಾನ ಕಲಿಸುತ್ತಿರುವ ಯಕ್ಷಶಿಕ್ಷಣ ಟ್ರಸ್ಟಿಗೆ ಅಭಿನಂದನೆಗಳು. ಓರ್ವ ವೃತ್ತಿ ಕಲಾವಿದನಾಗಿ ನನಗೆ ತುಂಬಾ ಸಂತೋಷವನ್ನು ಕೊಟ್ಟ ಯೋಜನೆ ಇದಾಗಿದ್ದು, ಯಶಸ್ವಿಯಾಗಲಿ” ಎಂದು ಹಾರೈಸಿದರು. “ಈ ಬಾರಿ ಕುಂದಾಪುರ ವಿಧಾನಸಭಾ ವ್ಯಾಪ್ತಿಯ 24 ಪ್ರೌಢಶಾಲೆಗಳಲ್ಲಿ ಯಕ್ಷಶಿಕ್ಷಣ ಆರಂಭಗೊಂಡಿದ್ದು, ಇದಕ್ಕೆ ಕಾರಣೀಕರ್ತರಾದ ಶಾಸಕ ಕಿರಣ್ ಕುಮಾರ್ ಕೊಡ್ಗಿಯವರು ಅಭಿನಂದನೀಯರು. ರಾಜ್ಯಕ್ಕೆ ಮಾದರಿಯಾದ ವಿವೇಕ ವಿದ್ಯಾ ಸಂಸ್ಥೆಯ ಆವರಣದಲ್ಲಿ ಹುಡುಗರ ಮತ್ತು ಹುಡುಗಿಯರ ಎರಡು ತಂಡಗಳಿಗೆ ಯಕ್ಷಶಿಕ್ಷಣ ನೀಡುತ್ತಿರುವುದು ಟ್ರಸ್ಟಿಗೆ ಅಭಿಮಾನದ ವಿಚಾರವಾಗಿದೆ” ಎಂಬುದಾಗಿ ಯಕ್ಷಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಮುರಲಿ ಕಡೆಕಾರ್ ಈ ಸಂದರ್ಭದಲ್ಲಿ ಸಂತಸ ವ್ಯಕ್ತಪಡಿಸಿದರು. ಈ ಎರಡೂ ಪ್ರೌಢಶಾಲೆಗಳಿಗೆ ಗುರುಗಳಾಗಿ ಕಾರ್ಯ ನಿರ್ವಹಿಸುವ ನರಸಿಂಹ ತುಂಗರು ಮಾತನಾಡುತ್ತಾ, “ತಾನು ವಿದ್ಯಾರ್ಜನೆಗೈದ ಶಾಲೆಯಲ್ಲಿ ಯಕ್ಷಗಾನ ಕಲಿಸಲು…
ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 29-07-2024ರಂದು ಸಂಜೆ ಗಂಟೆ 6.25ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ದಿನದ ಸರಣಿ ಕಾರ್ಯಕ್ರಮದಲ್ಲಿ ಕುಮಾರಿ ಖುಷಿ ಕನ್ನರ್ಪಾಡಿ ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ. ರಂಜನಾ ಎಸ್. ನಾಯಕ್ ಹಾಗೂ ಶ್ರೀಧರ್ ಜಿ. ನಾಯಕ್ ದಂಪತಿಗಳ ಸುಪುತ್ರಿಯಾದ ಕು. ಖುಶಿ ಎಸ್. ನಾಯಕ್ ಇವರು ಬಾಲ್ಯದಿಂದಲೇ ನೃತ್ಯದಲ್ಲಿ ಬಹಳ ಆಸಕ್ತಿಯುಳ್ಳ ಈಕೆ ಸುಮಾರು 17 ವರ್ಷಗಳಿಂದ ಸುಧೀರ್ ರಾವ್ ಹಾಗೂ ಮಾನಸಿ ಸುಧೀರ್ ಇವರಲ್ಲಿ ನೃತ್ಯಾಭ್ಯಾಸವನ್ನು ನಡೆಸುತಿದ್ದು, ಜೂನಿಯರ್ ಹಾಗೂ ಸೀನಿಯರ್ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಗಳೊಂದಿಗೆ ತೇರ್ಗಡೆಯಾಗಿದ್ದಾಳೆ. ನೃತ್ಯನಿಕೇತನ ಕೊಡವೂರಿನ ತಂಡದ ಭಾಗವಾಗಿ ಸುಮಾರು 200ಕ್ಕೂ ಹೆಚ್ಚು ನೃತ್ಯ ಕಾರ್ಯಕ್ರಮಗಳನ್ನು ನೀಡಿರುತ್ತಾಳೆ. ತನ್ನ ಶಾಲಾ ಕಾಲೇಜಿನ ದಿನಗಳಲ್ಲಿ ಹಲವಾರು ಅಂತರ್ ಶಾಲಾ ಹಾಗೂ ಅಂತರ್…
ಉಡುಪಿ : ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್ (ರಿ.) ಪ್ರಾಯೋಜಿತ 2024ನೇ ಸಾಲಿನ ಗುರು ಮಟಪಾಡಿ ವೀರಭದ್ರ ನಾಯಕ್ ಪ್ರಶಸ್ತಿಗೆ ಖ್ಯಾತ ಯಕ್ಷಗಾನ ಬಣ್ಣದ ವೇಷಧಾರಿ ಶ್ರೀ ಎಳ್ಳಂಪಳ್ಳಿ ಜಗನ್ನಾಥ ಆಚಾರ್ಯ ಅವರು ಆಯ್ಕೆಯಾಗಿರುತ್ತಾರೆ ಯಕ್ಷಗಾನ ಕೇಂದ್ರ ಇಂದ್ರಾಳಿ ಇದರ ಸಹಯೋಗದಲ್ಲಿ ಕೊಡಮಾಡುವ ಈ ಪ್ರಶಸ್ತಿಯು ರೂಪಾಯಿ 10,000 ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ. ಪ್ರಶಸ್ತಿಯನ್ನು 09 ನವಂಬರ್ 2024ರಂದು ಎಂ. ಜಿ. ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್ ಇವರ ಸಹಯೋಗದಲ್ಲಿ ನೀಡಿ ಗೌರವಿಸಲಾಗುವುದು ಎಂದು ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ತಿಳಿಸಿದ್ದಾರೆ. ಬಡಗುತಿಟ್ಟು ಯಕ್ಷಗಾನ ಪ್ರಪಂಚದಲ್ಲಿ ಬಣ್ಣದ ವೇಷಧಾರಿಯಾಗಿ ವಿಖ್ಯಾತರಾಗಿರುವ ಶ್ರೀ ಎಳ್ಳಂಪಳ್ಳಿ ಜಗನ್ನಾಥ ಆಚಾರ್ಯ ಇವರು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ನೀಲಾವರ ಸಮೀಪದ ಎಲ್ಲಂಪಳ್ಳಿ ಎಂಬಲ್ಲಿ 1956ರಲ್ಲಿ ಜನಿಸಿದರು. ಉಡುಪಿ ಬಸವ, ವಂಡ್ಸೆ ನಾರಾಯಣ ಗಾಣಿಗ, ಪೇತ್ರಿ ಮಾಧವ ನಾಯ್ಕ್ ಇವರಿಂದ ಪ್ರಾಥಮಿಕ ನೃತ್ಯಾಭ್ಯಾಸ…
ಧಾರವಾಡ : ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆ ಧಾರವಾಡ ಇದರ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತು ಧಾರವಾಡ ಜಿಲ್ಲಾ ಘಟಕ ಇದರ ಸಹಯೋಗದೊಂದಿಗೆ 2023ನೇ ಸಾಲಿನ ‘ರಾಘವೇಂದ್ರ ಪಾಟೀಲ ಕಥಾಪ್ರಶಸ್ತಿ’ ಪ್ರದಾನ ಸಮಾರಂಭವು ದಿನಾಂಕ 28 ಜುಲೈ 2024ರಂದು ಅಪರಾಹ್ನ 4-30 ಗಂಟೆಗೆ ಧಾರವಾಡದ ಆರ್.ಎನ್. ಶೆಟ್ಟಿ ಕ್ರೀಡಾಂಗಣದ ಪಕ್ಕ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ‘ರಾಘವೇಂದ್ರ ಪಾಟೀಲ ಕಥಾಪ್ರಶಸ್ತಿ’ಯನ್ನು ಧಾರವಾಡದ ಪ್ರಸಿದ್ಧ ಸಾಹಿತಿಗಳಾದ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಇವರು ಲೇಖಕಿ ಶ್ರೀಮತಿ ಕಾವ್ಯಾ ಕಡಮೆ ಇವರಿಗೆ ಪ್ರದಾನ ಮಾಡಲಿರುವರು. ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ಪ್ರೊ. ಮಲ್ಲಿಕಾರ್ಜುನ ಹಿರೇಮಠ ಇವರು ಅಧ್ಯಕ್ಷತೆ ವಹಿಸಲಿದ್ದಾರೆ.
ಮಂಗಳೂರು : ಮಂಗಳೂರು ಸಂಸ್ಕಾರ ಭಾರತೀಯು ಕಳೆದ 20 ವರ್ಷಗಳಿಂದ ಗುರುಪೂರ್ಣಿಮೆಯoದು ನಾಡಿನ ಹಲವಾರು ಹಿರಿಯ ಕಲಾವಿದರನ್ನು ಗುರುತಿಸಿ ಸನ್ಮಾನಿಸುತ್ತಾ ಬಂದಿದೆ. ಈ ವರ್ಷ 21 ಜುಲೈ 2024ನೇ ಭಾನುವಾರ ಬೆಳಿಗ್ಗೆ ಹಿರಿಯ ಸಾಧಕರ ನಿವಾಸಕ್ಕೆ ತೆರಳಿ ಗುರುನಮನ ಸಲ್ಲಿಸಲಾಯಿತು. ಕಲಾ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅಜ್ಞಾತ ಕಲಾವಿದರು, ಶ್ರೇಷ್ಠ ಕಲಾಗುರುಗಳನ್ನು ಗುರುತಿಸಿ, ಅವರು ಇರುವಲ್ಲಿಗೇ ತೆರಳಿ, ಫಲ, ಹಾರ, ಸ್ಮರಣಿಕೆ ಹಾಗೂ ನಿಟ್ಟೆ ಸಂಸ್ಥೆ ನೀಡಿದ ರೂ.10,000/- ನಗದು ಪುರಸ್ಕಾರದೊಂದಿಗೆ ಸತ್ಕರಿಸಿ ಅಭಿನಂದಿಸಲಾಯಿತು. ಪ್ರತಿಯೊಬ್ಬರ ಗುರುನಮನದಲ್ಲಿ ಕಾರ್ಯಕ್ರಮವನ್ನು ಧ್ಯೇಯ ಗೀತೆಯೊಂದಿಗೆ ಆರಂಭಿಸಲಾಯಿತು. ಸಂಗೀತ, ಸಾಹಿತ್ಯ ಕ್ಷೇತ್ರದಲ್ಲಿ ಮೈಗೂಡಿಸಿರುವ ಬಿ. ಭೋಜ ಸುವರ್ಣ ಬರ್ಕೆ, ಚಿತ್ರಕಲೆಯಲ್ಲಿ ಅಪೂರ್ವ ಸಾಧನೆಗೈದ ಕೆ. ಚಂದ್ರಯ್ಯ ಆಚಾರ್ಯ ಹಾಗೂ ಯಕ್ಷಗಾನ ಪ್ರಸಾಧನದಲ್ಲಿ ಮಹತ್ತರ ಸಾಧನೆಗೈದಿರುವ ಜಿ. ನಾರಾಯಣ ಹೊಳ್ಳ ಇವರುಗಳಿಗೆ ಶ್ರದ್ಧಾ ಗೌರವ ಪೂರ್ವಕವಾಗಿ ಗೌರವಿಸಿ ಗುರುವಂದನೆ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಸಮಾಜ ಸೇವೆಯಲ್ಲಿ ಅನನ್ಯ ಸೇವೆ ಗೈದ ಪಂಡಿತ್ ರಾಮ ರಾವ್ ಮತ್ತು ನಾಟಿ…
ಉಡುಪಿ : ಮಹತೋಬಾರ ಶ್ರೀ ಶಂಕರನಾರಾಯಣ ದೇವಸ್ಥಾನ ಮತ್ತು ನೃತ್ಯನಿಕೇತನ ಕೊಡವೂರು ಸಂಯೋಜನೆಯ ‘ನೃತ್ಯಶಂಕರ’ ಸಾಪ್ತಾಹಿಕ ನೃತ್ಯ ಸರಣಿ 55ರಲ್ಲಿ ದೇವಸ್ಥಾನದ ವಸಂತಮಂಟಪದಲ್ಲಿ 22 ಜುಲೈ 2024ರಂದು ನಡೆಯಿತು. ವಿದುಷಿ ಕು. ವಸುಂಧರಾರವರು ತನ್ನ ನೃತ್ಯಾಭಿನಯನದ ಮೂಲಕ ಪೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾದರು. ನಾಟ್ಯಾಧಿ ದೇವತೆಯಾದ ಶಿವನಿಗೆ ಹೂ, ಮೈ, ಮನಗಳನ್ನು ಅರ್ಪಿಸಿ, ದೇವತೆಗಳಿಗೆ ಗುರುಗಳಿಗೆ ತಂದೆ-ತಾಯಿಯರಿಗೆ ನಮಸ್ಕರಿಸಿ, ಬಂದಂತ ಎಲ್ಲಾ ಕಲಾಭಿಮಾನಿಗಳನ್ನು ಸ್ವಾಗತಿಸುವ ಪುಷ್ಪಾಂಜಲಿ ಮೂಲಕ ನೃತ್ಯ ಪ್ರಾರಂಭಿಸಿದರು. ಪದವರ್ಣ ಪ್ರಸ್ತುತಿಯಲ್ಲಿ ವರ್ಣವನ್ನು ವಿಭಿನ್ನವಾಗಿ ಚಿತ್ರಿಸಲಾಗಿದೆ. ಇಲ್ಲಿ ರುಕ್ಮಿಣಿಯು ತನ್ನ ಬಾಲ್ಯದಿಂದ ಕೃಷ್ಣನ ಕಥೆ, ಮಹಿಮೆಗಳನ್ನು ಕೇಳುತ್ತಾ, ಅಪಾರವಾಗಿ ಆತನನ್ನು ಪ್ರೀತಿಸತೊಡಗಿದಳು. ಆತನನ್ನೇ ತನ್ನ ಕಲ್ಪನೆ ಚಿತ್ರಿಸಿದಂತೆ ಪಟವೊಂದರಲ್ಲಿ ಚಿತ್ರಿಸಿ ಅದರೊಂದಿಗೆ ಮಾತನಾಡುವ ವೇಳೆ ಸಖಿಯು ಸತಾಯಿಸಿದಾಗ, ಅಣ್ಣ ರುಕ್ಮನು ಬಂದು ಆ ಚಿತ್ರಪಟವನ್ನು ಹರಿದು ಆಕೆಯನ್ನು ಕೋಣೆಯಲ್ಲಿರಿಸಿದನು. ಅದೇ ವೇಳೆ ಅಲ್ಲಿಂದಲೇ ಹಾದು ಹೋಗುತ್ತಿದ್ದ ದೇವಾಲಯದ ಅರ್ಚಕರಲ್ಲಿ ಬಾಗಿಲುಗಳ ತೆರೆಯಲು ಹೇಳಿ, ತನ್ನ ಸ್ವಯಂವರದ ಮೊದಲೇ ದೇವಿಯ ದೇವಸ್ಥಾನಕ್ಕೆ ಬಂದು…
ಕಾಸರಗೋಡು : ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಚತುರ್ಥ ಚಾತುರ್ಮಾಸ್ಯ ವ್ರತಾಚರಣೆ ಸಂದರ್ಭ ದಿನಾಂಕ 25 ಜುಲೈ 2024ರಂದು ಶ್ರೀ ಎಡನೀರು ಮಠದ ಭಾರತೀ ಕಲಾ ಸದನದಲ್ಲಿ ಎರಡು ದಿನಗಳ ಸಂಗೀತೋತ್ಸವ ಆರಂಭವಾಯಿತು. ನಾಡಿನ ಖ್ಯಾತ ಸಂಗೀತ ವಿದ್ವಾಂಸರು ಈ ಉತ್ಸವದಲ್ಲಿ ಭಾಗವಹಿಸಿದ್ದಾರೆ. ಜುಲೈ 26 2024ರಂದು ಸಂಜೆ 6-00 ಗಂಟೆಯಿಂದ ವಿದ್ವಾನ್ ಆನೂರು ಅನಂತಕೃಷ್ಣ ಶರ್ಮ ಅವರ ನಿರ್ದೇಶನದಲ್ಲಿ ‘ಲಯಲಾವಣ್ಯ ತಾಳವಿದ್ಯಾ’ ಎಂಬ ವಿಶೇಷ ಕಾರ್ಯಕ್ರಮ ನಡೆಯಲಿದ್ದು, ಸುಮಾರು ಹತ್ತಕ್ಕೂ ಹೆಚ್ಚು ವಿವಿಧ ವಾದ್ಯ ಪರಿಕರಗಳ ಕಲಾವಿದರು ಭಾಗವಹಿಸಲಿದ್ದಾರೆ. ಚಾತುರ್ಮಾಸ್ಯ ವ್ರತಾಚರಣೆಯ ಸಂದರ್ಭ ಮಾನ್ಯ ವಲಯ ಸಮಿತಿಯ ಒಂದು ದಿನದ ಪೂರ್ಣಸೇವೆಯು 27 ಜುಲೈ 2024ರಂದು ನಡೆಯಲಿದೆ. ಬೆಳಗ್ಗೆ 9ಕ್ಕೆ ಶ್ರೀಗಳಿಂದ ದೀಪಪ್ರಜ್ವಲನೆ, ಕಲ್ಲಕಟ್ಟ ಶ್ರೀಕೃಷ್ಣಗಾನ ಭಜನಾ ಸಂಘದಿಂದ ಭಜನೆ, 10 ಗಂಟೆಗೆ ಶ್ರೀ ಸಚ್ಚಿದಾನಂದ ಭಾರತೀ ಶಿಷ್ಯವೃಂದ ಮಾನ್ಯ ಇವರಿಂದ ಭಜನೆ, 11ರಿಂದ ಶ್ರೀ ಶಾಸ್ತಾ ಮಹಿಳಾ ಭಜನಾ…
ಮೈಸೂರು : ಶ್ರೀ ಲಕ್ಕಮ್ಮದೇವಿ ಕಲಾ ಪೋಷಕ ಸಂಘ (ರಿ.) ಬೆಳಗಾವಿ ಇದರ ವತಿಯಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು ಇದರ ಸಹಕಾರದಲ್ಲಿ ‘ರಾಷ್ಟ್ರೀಯ ಜಾನಪದ ಲೋಕೋತ್ಸವ 2024’ ಕಾರ್ಯಕ್ರಮವನ್ನು 28 ಜುಲೈ 2024ರಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು ಇದರ ಕನ್ನಡ ಭವನದಲ್ಲಿ ಆಯೋಜಿಸಲಾಗಿದೆ. ಡಾ. ಗುರು ಕಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು ಇದರ ಅಧ್ಯಕ್ಷರಾದ ಶ್ರೀ ಮಡ್ಡಿಕೆರೆ ಗೋಪಾಲ್ ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. 2024ನೇ ಸಾಲಿನ ನ್ಯಾಷನಲ್ ಅಚೀವ್ಮೆಂಟ್ ಗ್ಲೋಬಲ್ ಅವಾರ್ಡ್ ಪ್ರದಾನ ಸಮಾರಂಭ ಹಾಗೂ ವಿಚಾರ ಸಂಕೀರ್ಣ, ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಉಡುಪಿ : ರಂಗಭೂಮಿ ಉಡುಪಿ ವತಿಯಿಂದ ಉಡುಪಿ ರಂಗ ತಂಡಗಳ ಸಹಭಾಗಿತ್ವದಲ್ಲಿ ದಿನಾಂಕ 25 ಜುಲೈ 2024ರಂದು ಎಂ.ಜಿ.ಎಂ. ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ರಂಗಭೂಮಿಯ ದಿ. ಸದಾನಂದ ಸುವರ್ಣ ಅವರಿಗೆ ನುಡಿ ನಮನ ಕಾರ್ಯಕ್ರಮ ಮತ್ತು ‘ಸಮಕಾಲೀನ ರಂಗನಟನೆಯಲ್ಲಿ ಭಾರತೀಯ ಪರಂಪರೆ ಎಂಬುದುದೊಂದು ಇದೆಯೇ ?’ ಎಂಬ ವಿಷಯದಲ್ಲಿ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಹಿರಿಯ ರಂಗಕರ್ಮಿ ಪ್ರಸನ್ನ ಇವರು “ಪ್ರಸ್ತುತ ಯಾವ ರಾಜಕಾರಣಿಗಳು ಕೂಡ ನಾಟಕವನ್ನು ನೋಡುತ್ತಿಲ್ಲ. ಈ ಅದ್ಭುತ ಮನರಂಜನಾತ್ಮಕ ಶೈಕ್ಷಣಿಕ ಕ್ಷೇತ್ರವನ್ನು ಎಲ್ಲರೂ ಕಡೆಗಣಿಸುತ್ತಿದ್ದಾರೆ. ರಾಜಕಾರಣಿಗಳನ್ನು ಮತ್ತು ರಾಜಕೀಯ ಪಕ್ಷಗಳನ್ನು ಮೂರ್ಖರ ರೀತಿಯಲ್ಲಿ ನಂಬಿ ಜಗಳ ಆಡುವ ದುರಂತ ಸ್ಥಿತಿಗೆ ದೇಶ ಬಂದಿದೆ. ರಂಗಭೂಮಿ ಪ್ರಸ್ತುತತೆ ಅವುಗಳಿಂದಾಗುವ ಸಾಮಾಜಿಕ ಪರಿಣಾಮಗಳ ಬಗ್ಗೆ ಅರಿವೇ ಇಲ್ಲದ ಸ್ಥಿತಿಯಲ್ಲಿ ವ್ಯವಸ್ಥೆ ಇದೆ. ಕ್ರಿಯೆಯನ್ನು ಕಟ್ಟಿದಾಗ ಮಾತ್ರ ನಟನಲ್ಲಿ ನಿಜವಾದ ಪಾತ್ರ ಭಾವನೆ ಮೂಡುತ್ತದೆ, ಶಕ್ತಿಯನ್ನು ನೀಡುತ್ತದೆ. ಆ ಶಕ್ತಿಯೇ ಭಾವವಾಗಿ ಪರಿವರ್ತನೆಯಾಗುತ್ತದೆ. ಕ್ರಿಯೆಯನ್ನು ಬಳಸಿಕೊಂಡು ಸಂಭಾಷಣೆ…
ಬೆಂಗಳೂರು : ಜನಪದರು ಸಾಂಸ್ಕೃತಿಕ ವೇದಿಕೆ (ರಿ.) ಇದರ ವತಿಯಿಂದ ನಾಟಕ ಪ್ರದರ್ಶನವನ್ನು ದಿನಾಂಕ 27 ಜುಲೈ 2024 ಮತ್ತು 28 ಜುಲೈ 2024ರಂದು ಸಂಜೆ 6-30 ಗಂಟೆಗೆ ಬೆಂಗಳೂರಿನ ನಿಂಬೆಕಾಯಿಪುರದ ಶ್ರೀ ಅಭಯಾಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿರುವ ಜನಪದರು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 27 ಜುಲೈ 2024ರಂದು ಡಾ. ಬಾಲಗುರುಮೂರ್ತಿ ರಚಿಸಿರುವ ಎಂ. ಸುರೇಶ್ ಇವರ ನಿರ್ದೇಶನದಲ್ಲಿ ಅಲೆಮಾರಿ ಬುಡಕಟ್ಟನ್ನು ಕುರಿತ ಕನ್ನಡದ ಮೊದಲ ನಾಟಕ ‘ಖಡ್ಗನಾದ’ ಮತ್ತು 28 ಜುಲೈ 2024ರಂದು ಶ್ರೀ ಕೃಷ್ಣ ಆಲನಹಳ್ಳಿಯವರ ಕಾದಂಬರಿ ಆಧಾರಿತ ಕೆ.ಎಸ್.ಡಿ.ಎಲ್. ಚಂದ್ರು ನಿರ್ದೇಶನದಲ್ಲಿ ‘ರೂಪಾಂತರ’ ಅಭಿನಯಿಸುವ ನಾಟಕ ‘ಪರಸಂಗದ ಗೆಂಡೆತಿಮ್ಮ’ ಪ್ರದರ್ಶನಗೊಳ್ಳಲಿದೆ.