Author: roovari

ಮಂಗಳೂರು : ಉರ್ವ ಯಕ್ಷಾರಾಧನಾ ಕಲಾಕೆಂದ್ರದ 15ನೇ ವರ್ಷಾಚರಣೆಯ ಸಂಭ್ರಮದ ಪ್ರಯುಕ್ತ ಪ್ರಶಸ್ತಿ ಪ್ರದಾನ ಮತ್ತು ಯಕ್ಷಗಾನ ಪ್ರದರ್ಶನ ಕಾರ್ಯಕ್ರಮವು ದಿನಾಂಕ 13-07-2024ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಸ್ಮಾರಕ ಸಭಾಭವನದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಇವರು “ಯಕ್ಷಗಾನವೂ ಒಂದು ಕಾವ್ಯವೇ. ‘ಯಕ್ಷಗಾನ’ ದೃಶ್ಯಕಾವ್ಯವಾದರೆ, ಶ್ರವ್ಯ ಕಾವ್ಯವನ್ನು ‘ತಾಳಮದ್ದಲೆ’ಯಲ್ಲಿ ಕಾಣಬಹುದು. ಹಾಸ್ಯ ಬಂದಾಗ ನಗುವ, ದುಃಖದ ಪ್ರಸಂಗ ಬಂದಾಗ ಅಳುವ, ರಾಮನಂತಹ ಪಾತ್ರದ ಉದಾತ್ತ ಗುಣಗಳನ್ನು ಕೇಳುವಾಗ ನಮ್ಮಲ್ಲೂ ಅದನ್ನು ಅಳವಡಿಸಬೇಕು ಎನ್ನುವ ಭಾವನೆ ಮೂಡುತ್ತದೆ. ಈ ಎಲ್ಲವೂ ಇರುವ ವಿಶಿಷ್ಟ ಪರಿಕಲ್ಪನೆಯನ್ನು ಯಕ್ಷಗಾನದ ಮೂಲಕ ಮಾಡಿಕೊಟ್ಟಿದ್ದಾರೆ. ಯಕ್ಷಗಾನ ಬುದ್ಧಿವಂತರ ಕಲೆ. ಪ್ರತಿಭಾ ಸಂಪನ್ನನಾಗಿದ್ದರೆ ಮಾತ್ರ ಅದರಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ. ರಂಗದಲ್ಲೇ ನೃತ್ಯ, ಅಭಿನಯ, ಮಾತುಗಾರಿಕೆ ಮಾಡಬೇಕಾದ ಬುದ್ಧಿ ಸಂಪನ್ನತೆ ಇರಬೇಕು. ಜತೆಗೆ ಯಕ್ಷಗಾನವನ್ನು ಆಸ್ವಾದಿಸಲು ಒಳ್ಳೆಯ ಪ್ರೇಕ್ಷಕರು ಬೇಕು. ಇದರಿಂದ ನೂರ್ಕಾಲ ಯಕ್ಷಗಾನ ಉಳಿಯಲು ಸಾಧ್ಯ. ಆಗ ಮಾತ್ರ…

Read More

ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಇವರ ಜಂಟಿ ಆಶ್ರಯದಲ್ಲಿ ‘ನೃತ್ಯ ಶಂಕರ’ ವಿಶೇಷ ಕಾರ್ಯಕ್ರಮವು 28 ಜುಲೈ 2024ರಂದು ಸಂಜೆ 5-00 ಗಂಟೆಗೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ತುಮಕೂರಿನ ಶ್ರೀ ರಾಜರಾಜೇಶ್ವರಿ ನೃತ್ಯ ಕಲಾ ಕೇಂದ್ರದ ಕಲಾವಿದರಿಂದ ನೃತ್ಯ ಪ್ರಸ್ತುತಿ ನಡೆಯಲಿದೆ.

Read More

ಮಂಗಳೂರು : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ 2022 ಮತ್ತು 2023ನೇ ಸಾಲಿನ ಪುಸ್ತಕ ಬಹುಮಾನಕ್ಕೆ ಕವನ ಸಂಕಲನ, ಕಾದಂಬರಿ, ಕಥೆ ಹಾಗೂ ಎಲ್ಲ ಬ್ಯಾರಿ ಸಾಹಿತ್ಯ ಪ್ರಕಾರದ ಪುಸ್ತಕಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅದು ಬ್ಯಾರಿ ಭಾಷೆಯ ಸ್ವಂತ ಕೃತಿ ಅಥವಾ ಅನುವಾದಿತ ಕೃತಿಯೂ ಅಗಿರಬಹುದು. ಪುಸ್ತಕ ಬಹುಮಾನದ ಪ್ರಶಸ್ತಿ 25,000 ರೂ. ನಗದು, ‘ಪ್ರಮಾಣ ಪತ್ರ, ಸ್ಮರಣಿಕೆ ಒಳಗೊಂಡಿದೆ. ಅರ್ಜಿ ಸಲ್ಲಿಸಲು 3 ಆಗಸ್ಟ್2024 ಕೊನೆಯ ದಿನ. ಅರ್ಜಿಯನ್ನು ರಿಜಿಸ್ಟ್ರಾರ್, ಕರ್ನಾ ಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ಸಾಮರ್ಥ್ಯ ಸೌಧ, 2ನೇ ಮಹಡಿ, ಮಂಗಳೂರು ತಾ. ಪಂ. ಹಳೇ ಕಟ್ಟಡ, ಮಂಗಳೂರು ಈ ವಿಳಾಸಕ್ಕೆ ಕಳುಹಿಸಬಹುದು.

Read More

ಬೆಂಗಳೂರು : ಬೆಂಗಳೂರು ಪ್ಲೇಯರ್ಸ್ ಪ್ರಸ್ತುತ ಪಡಿಸುವ ಶ್ರೀಪಾದ ಎಸ್. ಇವರ ನಿರ್ದಶನದಲ್ಲಿ ‘ಗಾಂಪರ ಗುಂಪು’ ನಾಟಕ ಪ್ರದರ್ಶನವನ್ನು 27 ಜುಲೈ 2024ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ಕಲಾಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ 9036751448. ಹುಟ್ಟಿದಾರಭ್ಯ ಪಾಶ್ಚಾತ್ಯ ಸಂಸ್ಕೃತಿ ಬಗ್ಗೆ ಹೆಚ್ಚುತ್ತಿರುವ ಅನಗತ್ಯ ಅಭಿಮಾನ, ಅನುಕರಣೆ ಮಕ್ಕಳ ತಲೆಯಲ್ಲಿ ಹೇರುತ್ತ, ಪರದೇಶಕ್ಕೆ ಹಾರುವುದೇ ಒಂದು ಘನೂದ್ದೇಶವಾಗಬೇಕ್ವೆಂದು, ಅದನ್ನು ಜಂಬದಿಂದ ಮನೆ ಮಂದಿ ಹತ್ರ ಹೇಳುಕೊಳ್ಳುವುದೇ ದೊಡ್ಡಸ್ತಿಕೆ ಎಂದು ಬೀಗುವ, ಅರೆ ಬರೆ ಬೆಂದ ಕಾಳಿನ ಜನಗಳ ಮದ್ಯ…. ನಮ್ಮ ನಾಡಿನ ಮೌಲ್ಯಾಧಾರಿತ ಸಂಸ್ಕೃತಿಯನ್ನು ಹೆಚ್ಚಿಸುವಂತೆ ಮಾಡಿ ಅವರಿಗೆ ತಿಳುವಳಿಕೆ ನೀಡಿ, ತಪ್ಪು ಕಲ್ಪನೆಗಳಿಂದ ಆಗುವ ಅಪಾಯಗಳನ್ನು ತಪ್ಪಿಸಿ, ಅವರನ್ನು ನಮ್ಮ ನಾಡಿನ ಸಂಸ್ಕೃತಿಯ ಕುರಿತು ಗೌರವವನ್ನು ಹೆಚ್ಚಿಸಿಕೊಳ್ಳುವಂತೆ ಮಾಡುವ ಸಂದೇಶಗಳನ್ನು ಸಾರುವ ಹಲವಾರು ಅಂಶಗಳನ್ನು ಹೊಂದಿರುವ, ಹಾಸ್ಯ ರೂಪಕದ ನಾಟಕ ‘ಗಾಂಪರ ಗುಂಪು’. ‘ಗಾಂಪ’ ಪದಕ್ಕೆ ಒಂದು ವಿಶಿಷ್ಟ ರೂಪವನ್ನು ಕೊಟ್ಟಿದ್ದಾರೆ ಲೇಖಕ ದಾಶರಥಿ ದೀಕ್ಷಿತ. ಗುರು-ಶಿಷ್ಯ, ಪ್ರೀತಿ-ಕಾಮ,…

Read More

ಮಂಗಳೂರು : ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆಯು 22 ಜುಲೈ 2024ರಂದು ‘ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ’ ಪುರಸ್ಕೃತರಾದ ಸಮಿತಿಯ ಮೂವರು ಸಾಧಕರಿಗೆ ಬಲ್ಮಠ ಕುಡ್ಲ ಪೆವಿಲಿಯನ್ ಸಭಾಂಗಣದಲ್ಲಿ ಅಭಿನಂದನಾ ಸಮಾರಂಭವನ್ನು ಏರ್ಪಡಿಸಿತು. ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಹಿರಿಯ ವಿದ್ವಾಂಸ ಮತ್ತು ಸಂಸ್ಕೃತಿ ಚಿಂತಕ ಡಾ. ಎಂ. ಪ್ರಭಾಕರ ಜೋಶಿ ಇವರು “ಕಲೆ, ಸಂಸ್ಕೃತಿ, ಸಾಹಿತ್ಯ – ಶಿಕ್ಷಣ ಇತ್ಯಾದಿ ಕ್ಷೇತ್ರಗಳ ಬೆಳವಣಿಗೆಗೆ ಸಾಮಾಜಿಕ ಮತ್ತು ಧಾರ್ಮಿಕ ರಂಗದಲ್ಲಿ ದುಡಿಯುವವರ ಕೊಡುಗೆ ಅಪಾರ. ತಮ್ಮ ನೆಲದ ಸಂಸ್ಕೃತಿಯ ಮೇಲಿನ ಪ್ರೀತಿಯೇ ಅಂಥವರ ಸಾಧನೆಗೆ ಸೋಪಾನವಾಗಿದೆ” ಎಂದು ಹೇಳಿದರು. ಶ್ರೀದೇವಿ ಶಿಕ್ಷಣ ಸಂಸ್ಥೆಗಳ ಆಡಳಿತ ನಿರ್ದೇಶಕ ಮತ್ತು ಹಿರಿಯ ಉದ್ಯಮಿ ಡಾ. ಎ. ಸದಾನಂದ ಶೆಟ್ಟಿ ಇವರು ಜ್ಯೋತಿ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಬೆಂಗಳೂರಿನ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯಿಂದ 2024ನೇ ಸಾಲಿನ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪಡೆದ ಯಕ್ಷಾಂಗಣದ ಗೌರವ…

Read More

ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ಹರೀಶ್ ಟಿ.ಜಿ. ಇವರ ‘ಉದ್ದ ಲಂಗದ ಕಾಲೇಜು ದಿನಗಳು’ ಪುಸ್ತಕದ ಲೋಕಾರ್ಪಣಾ ಸಮಾರಂಭವು 23 ಜುಲೈ 2024ರಂದು ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪುಸ್ತಕವನ್ನು ಲೋಕಾರ್ಪಣೆಗೊಳಿಸಿದ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ “ಸಾಹಿತ್ಯ ಕೃತಿಗಳು ಬಿಡುಗಡೆಗೊಂಡು ವಿದ್ಯಾರ್ಥಿಗಳು ಸ್ಫೂರ್ತಿಗೊಳಗಾಗುವಂತೆ, ಸಂಶೋಧನಾ ಕೃತಿಗಳೂ ಬಿಡುಗಡೆಗೊಂಡು ವಿದ್ಯಾರ್ಥಿಗಳು ಪ್ರೇರಣೆಗೊಳಗಾಗಬೇಕು.” ಎಂದು ಅಭಿಪ್ರಾಯಪಟ್ಟರು. ನಾವು ಅನೇಕ ಸಂಕ್ರಮಣ ಕಾಲಘಟ್ಟವನ್ನು ದಾಟಿ ಬಂದಿದ್ದೆವೆ. ಪ್ರಸ್ತುತ ಸಮಾಜ ‘ನಿರ್ಧಾರಿತ ಆರ್ಥಿಕತೆ’ಯಿಂದ ಬದಲಾಗಿ ‘ಆರ್ಥಿಕತೆ ನಿರ್ಧಾರಿತ ಸಮಾಜ’ವಾಗಿ ಬದಲಾಗುತ್ತಿದೆ. ಇದರಿಂದಾಗಿ ಪ್ರತಿಯೊಂದು ವಿಷಯವು ಹಣಕಾಸಿನ ಆಧಾರದ ಮೇಲೆ ನಿರ್ಧಾರಿತವಾಗುತ್ತಿದೆ. ಹಿಂದಿನ ತಲೆಮಾರಿನವರು ಒತ್ತಡ ರಹಿತ ನಿರಾಳತೆಯ ಜೀವನ ನಡೆಸಿದ್ದರು. ಪ್ರಸ್ತುತ ಯುವಜನತೆ ಜೀವನದ ಸ್ಪಷ್ಟತೆಯನ್ನು ಹೊಂದಿದ್ದರೂ, ಒತ್ತಡದ ಜೀವನ ನಿರ್ವಹಿಸುವಂತಾಗಿದೆ. ವಿದ್ಯಾರ್ಥಿಗಳು ಜೀವಪರ ಕಾಳಜಿ  ಹೊಂದಿ ಸಂವೇದನಾಶೀಲ ನಡೆಯನ್ನು ಅನುಭವಿಸಲು ಸಾಹಿತ್ಯವನ್ನು ಓದಬೇಕು.” ಎಂದರು. ಕೃತಿಯನ್ನು ಬಿಸಿನೆಸ್ ಮ್ಯಾನೆಜ್‌ಮೆಂಟ್ ವಿಭಾಗದ ಉಪನ್ಯಾಸಕ ಮನು ಪರಿಚಯಿಸಿದರು. ಲೇಖಕ…

Read More

ಮಂಗಳೂರು : ಮಾಂಡ್ ಸೊಭಾಣ್ ತನ್ನ ಗಾಯನ ಮಂಡಳಿ ಸುಮೇಳ್ ನೇತೃತ್ವದಲ್ಲಿ ಗಾಯನದಲ್ಲಿ ಆಸಕ್ತಿಯುಳ್ಳ 5ರಿಂದ 10ನೇ ತರಗತಿವರೆಗಿನ ಮಕ್ಕಳಿಗಾಗಿ ಸುರ್ ಸೊಭಾಣ್ (ಸ್ವರ ಸೌಂದರ್ಯ) ಎಂಬ 60 ಗಂಟೆಗಳ ಕೊಂಕಣಿ ಗಾಯನ ತರಬೇತಿಯನ್ನು ಆಯೋಜಿಸುತ್ತಿದೆ. ತಿಂಗಳ ಮೊದಲ ಭಾನುವಾರ ಹೊರತುಪಡಿಸಿ, ಉಳಿದ ಎಲ್ಲಾ ಭಾನುವಾರಗಳಂದು ಅಪರಾಹ್ನ 3.00ರಿಂದ 5.30 ತನಕ ಶಕ್ತಿನಗರದ ಕಲಾಂಗಣದಲ್ಲಿ ತರಗತಿಗಳು ನಡೆಯಲಿವೆ. ಹಿಂದೂಸ್ತಾನಿ ಗಾಯನದಲ್ಲಿ ಪದವಿ ಪಡೆದ, ಕೊಂಕಣಿ ಗಾಯನ ಕ್ಷೇತ್ರದಲ್ಲಿ ತನ್ನ ಛಾಪು ಮೂಡಿಸಿರುವ ಶಿಲ್ಪಾ ತೇಜಸ್ವಿನಿ ಕುಟಿನ್ಹಾ ಇವರು ಪ್ರಧಾನ ತರಬೇತುದಾರರಾಗಿರುವರು. ಸ್ವರ, ಧ್ವನಿ ನಿಯಂತ್ರಣ, ಹಾಡುಗಾರಿಕೆಯ ತಂತ್ರಗಳು ಹಾಗೂ ಇವನ್ನು ಉಪಯೋಗಿಸಿ ಕೊಂಕಣಿ ಹಾಡುಗಳನ್ನು ಹಾಡುವ ಬಗ್ಗೆ ವಿದ್ಯುಕ್ತವಾಗಿ ಕಲಿಸಲಾಗುವುದು. ಪಠ್ಯಪುಸ್ತಕಗಳು ಹಾಗೂ ಬರಹ ಸಾಮಾಗ್ರಿಗಳನ್ನು ಒದಗಿಸಲಾಗುವುದು. ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಇವರಿಂದ ಪ್ರಮಾಣ ಪತ್ರ ಲಭಿಸಲಿದೆ. ದಿನಾಂಕ 18-08-2024ರಿಂದ ತರಗತಿಗಳು ಆರಂಭವಾಗಲಿದ್ದು, ವಾಟ್ಸಪ್ ಸಂಖ್ಯೆ 8105226626 ಮೂಲಕ…

Read More

ಮಂಗಳೂರು : ವಿಜಯ ಕರ್ನಾಟಕ ದಿನಪತ್ರಿಕೆ ಹಾಗೂ ಸಂಗೀತ ಭಾರತಿ ಪ್ರತಿಷ್ಠಾನದ ವತಿಯಿಂದ 21 ಜುಲೈ 2024ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಮುಂಬಯಿಯ ಪಂಚಮ್ ನಿಶಾದ್‌ನ ಅಭೂತಪೂರ್ವ ಪರಿಕಲ್ಪನೆಯ ‘ಬೋಲಾವ ವಿಠಲ’ ವಿನೂತನ ಕಾರ್ಯಕ್ರಮಕ್ಕೆ ಭರ್ಜರಿ ಸ್ಪಂದನೆ ಕರಾವಳಿಯಲ್ಲಿ ದೊರೆಯಿತು. ‘ಜಯ್ ಜಯ್ ರಾಮಕೃಷ್ಣ ಹರೀ…’ ಎನ್ನುವ ಹಾಡಿನ ಮೂಲಕ ಅನಾವರಣಗೊಂಡ ಈ ಕಾರ್ಯಕ್ರಮ ಭಕ್ತಿಯ ಅಲೆಗೆ ಮುನ್ನುಡಿಯಾಗಿ ಸೇರಿದ ಶೋತೃಗಳು ಭಕ್ತಿಯ ಅಲೆಯಲ್ಲಿ ಮಿಂದೆದ್ದರು. ಮಂಗಳೂರಿನಲ್ಲಿ ನಡೆದ ಆರನೇ ಆವೃತ್ತಿಯ ‘ಬೋಲಾವ ವಿಠಲ’ ಸಂಗೀತ ಕಾರ್ಯಕ್ರಮವನ್ನು ಮುಂಬಯಿಯ ಪಂಚಮ್ ನಿಶಾದ್‌ನ ಎಂ.ಡಿ. ಶಶಿ ವ್ಯಾಸ್‌ ಉದ್ಘಾಟಿಸಿದರು. ಹಿಂದೂಸ್ಥಾನಿ ಸಂಗೀತದ ಶ್ರೇಷ್ಠ ಕಲಾವಿದರಾದ ಸಂಗೀತ ಕಟ್ಟಿ ಕುಲಕರ್ಣಿ, ಜೀ ಮರಾಠಿ ಸರಿಗಮಪ ಸಂಗೀತ ಸ್ಪರ್ಧೆಯ ಫೈನಲಿಸ್ಟ್ ಮುಗ್ಧ ವೈಶಂಪಾಯನ ಹಾಗೂ ಪ್ರಥಮೇಶ ಲಘಾಟೆ ಅವರ ಮೂರು ಗಂಟೆಗಳ ಅಭಂಗ ರೂಪದ ಹಾಡುಗಾರಿಕೆ ಶೋತೃ ವರ್ಗದ ಮನಸೂರೆಗೊಂಡಿತು. ತಬ್ಲಾದಲ್ಲಿ ಪ್ರಸಾದ್ ಪಾದ್ಯೆ, ಪಕ್ವಾಜ್ ನಲ್ಲಿ ಸುಖದ್ ಮುಂಡೆ, ರಿದಂನಲ್ಲಿ ಸೂರ್ಯಕಾಂತ್ ಸುರ್ವೆ,…

Read More

ನಿರ್ಜಾಲು : ಕಣಿಪುರ ಮಿತ್ರ ಬಳಗ ಮತ್ತು ಕುಂಬ್ಳೆ ಶ್ರೀಧರ ರಾವ್ ಅಭಿಮಾನಿಗಳು ಇವರಿಂದ ದಿ. ಕುಂಬಳೆ ಶ್ರೀಧರ ರಾವ್ ಇವರಿಗೆ ನುಡಿನಮನ ಮತ್ತು ತಾಳಮದ್ದಳೆ ಕಾರ್ಯಕ್ರಮವು 28 ಜುಲೈ 2024ರಂದು ನಿರ್ಜಾಲು ಶ್ರೀ ಕುಮಾರ ಸ್ವಾಮಿ ಭಜನಾ ಮಂದಿರದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ನಿರ್ಜಾಲು ಮಹಾಜನ ವಿದ್ಯಾಸಂಸ್ಥೆಯ ಪ್ರಬಂಧಕರಾದ ಶ್ರೀ ಜಯದೇವ ಖಂಡಿಗೆ ಇವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಲಿದ್ದು, ಖ್ಯಾತ ಪತ್ರಕರ್ತರು, ಕಲಾವಿದರು ಮತ್ತು ಅಂಕಣಗಾರರಾದ ಶ್ರೀ ನಾ. ಕಾರಂತ ಪೆರಾಜೆ ಇವರು ಸಂಸ್ಮರಣೆ ಹಾಗೂ ಕ.ಸಾ.ಪ. ಕೇರಳ ಗಡಿನಾಡ ಘಟಕದ ಅಧ್ಯಕ್ಷರಾದ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಇವರು ನಲ್ನುಡಿ ಮಾತುಗಳನ್ನಾಡಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಇದೇ ಸಂದರ್ಭದಲ್ಲಿ ತೆಂಕುತಿಟ್ಟು ತವರಿನ ಪ್ರಸಿದ್ಧ ಕಲಾವಿದರಿಂದ ‘ಶ್ರೀರಾಮ ಪರಂಧಾಮ’ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.

Read More

ಮಂಗಳೂರು : ಪ್ರೊ. ಅಮೃತ ಸೋಮೇಶ್ವರರ ನೆನಪಿನ ‘ತುಳು ನಾಟಕ ರಚನಾ ಕಾರ್ಯಾಗಾರ’ದ ಮೊದಲ ಹಂತವು 19 ಜುಲೈ 2024ರಿಂದ 21 ಜುಲೈ 2024ರವರೆಗೆ ಮಂಗಳೂರಿನ ಶಕ್ತಿನಗರದಲ್ಲಿರುವ ಕಲಾಂಗಣ್ ನಲ್ಲಿ ನಡೆಯಿತು. ಈ ಕಾರ್ಯಾಗಾರವನ್ನು ಮಂಗಳೂರಿನ ಹವ್ಯಾಸಿ ನಾಟಕ ತಂಡ ಜರ್ನಿ ಥೇಟರ್ ಗ್ರೂಪ್ (ರಿ.) ಆಯೋಜಿಸಿತ್ತು. ಕಾರ್ಯಾಗಾರದ ಉದ್ಘಾಟನೆಯ ಸಂದರ್ಭ ಕಲಾಂಗಣ್ ನ ಎರಿಕ್ ಒಸಾರಿಯೋ, ಅಮೃತರ ಒಡನಾಡಿ ಸದಾಶಿವ ಉಚ್ಚಿಲ್, ಚೇತನ್ ಸೋಮೇಶ್ವರ ಮತ್ತು ರಾಜೇಶ್ವರಿ, ಜೀವನ್ ಸೋಮೇಶ್ವರ ಮತ್ತು ಸತ್ಯಾ ಜೀವನ್, ರೋಹನ್ ಉಚ್ಚಿಲ್ ಉಪಸ್ಥಿತರಿದ್ದರು. ಶಿಬಿರದ ಮಾರ್ಗದರ್ಶಕರಾಗಿ ನಾಟಕಕಾರ, ನಟ, ನಿರ್ದೇಶಕ ಮೈಸೂರಿನ ಎಸ್. ರಾಮನಾಥ್ ಮತ್ತು ಶಿಬಿರ ನಿರ್ದೇಶಕರಾಗಿ ನಟ, ಮಂಗಳೂರಿನ ವಿದ್ದು ಉಚ್ಚಿಲ್ ಕಾರ್ಯನಿರ್ವಹಿಸಿದರು. ಉಡುಪಿ, ಕಾಸರಗೋಡು, ಪುತ್ತೂರು, ಉಪ್ಪಿನಂಗಡಿ, ಪೂಂಜಾಲಕಟ್ಟೆ, ಬೆಳ್ತಂಗಡಿ, ಬಂಟ್ವಾಳ, ವಾಮಂಜೂರು, ಮಂಗಳೂರು ಮೊದಲಾದ ಪ್ರದೇಶಗಳಿಂದ ಅಭ್ಯರ್ಥಿಗಳು (ಮಹಿಳೆಯರೂ ಮತ್ತು ಪುರುಷರೂ) ಭಾಗವಹಿಸಿದ್ದರು. ಈ ಕಾರ್ಯಾಗಾರವು ಸಂಪೂರ್ಣವಾಗಿ ಉಚಿತವಾಗಿದ್ದು, ಅಭ್ಯರ್ಥಿಗಳಿಗೆ ವಸತಿ, ಊಟೋಪಚಾರದ ವ್ಯವಸ್ಥೆಯನ್ನು ಒದಗಿಸಲಾಗಿತ್ತು. ನಾಟಕ ಬರವಣಿಗೆಯನ್ನು…

Read More