Author: roovari

ಕೊಡಗು : ಕೊಡಗು ವಿಶ್ವವಿದ್ಯಾಲಯದ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿನ ಕಾವೇರಿ ಸಭಾಂಗಣದಲ್ಲಿ ಸಂತ ಕವಿ ದಾಸ ಶ್ರೇಷ್ಠ ಕಾಲಜ್ಞಾನಿ ಶ್ರೀ ಕನಕದಾಸರ 537ನೇ ಜಯಂತೋತ್ಸವವನ್ನು ದಿನಾಂಕ 18 ನವೆಂಬರ್ 2024ರಂದು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಕೊಡಗು ವಿಶ್ವವಿದ್ಯಾಲಯದ ಕುಲಸಚಿವರು (ಮೌಲ್ಯಮಾಪನ) ಆದ ಪ್ರೊ. ಸುರೇಶ್ ಎಂ. ಮತ್ತು ಕೊಡಗು ವಿಶ್ವವಿದ್ಯಾಲಯದ ಸ್ನಾತಕ ಮತ್ತು ಸ್ನಾತಕೋತ್ತರ ಪರೀಕ್ಷೆಗಳ ಸಂಯೋಜಕರಾದ ಪ್ರೊ. ರವಿಶಂಕರ್ ಇವರು ಶ್ರೀ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಬೋಧಕ ವರ್ಗ ಮತ್ತು ಬೋಧಕೇತರ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕರಾದ ಡಾ. ಜಮೀರ್ ಅಹಮದ್ ಸ್ವಾಗತಿಸಿ, ವಿದ್ಯಾರ್ಥಿನಿ ಕುಮಾರಿ ದೀಪ್ತಿ ನಿರೂಪಣೆಯನ್ನು ಮಾಡಿದರು.

Read More

ಸುಳ್ಯ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ, 27ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಆಶ್ರಯದಲ್ಲಿ ದಿನಾಂಕ 23 ನವೆಂಬರ್ 2024ರಂದು ಅರಂತೋಡು ನೆಹರೂ ಸ್ಮಾರಕ ಪದವಿ ಪೂರ್ವ ವಿದ್ಯಾಲಯದಲ್ಲಿ ಸುಳ್ಯ ತಾಲೂಕು 27ನೇ ಕನ್ನಡ ಸಾಹಿತ್ಯ ಸಮ್ಮೇಳನವು ಡಾ. ಕುರುಂಜಿ ವೆಂಕಟ್ರಮಣ ಗೌಡ ವೇದಿಕೆ, ನಿರಂಜನ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಮ್ಮೇಳನ ಸಂಘಟನಾ ಸಮಿತಿ ಅಧ್ಯಕ್ಷರಾದ ಕೇಶವ ಅಡ್ತಲೆ, ಸಂತೋಷ್ ಕುತ್ತಮೊಟ್ಟೆ, ಕ.ಸಾ.ಪ. ಅಧ್ಯಕ್ಷ ಚಂದ್ರಶೇಖರ ಪೇರಾಲು ತಿಳಿಸಿದ್ದಾರೆ. ಹಿರಿಯ ಸಾಹಿತಿ ಶ್ರೀಮತಿ ಲೀಲಾ ದಾಮೋದರ ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದು, ಬೆಳಿಗ್ಗೆ 9-00 ಗಂಟೆಗೆ ಅರಂತೋಡು ಪೇಟೆಯಿಂದ ಕನ್ನಡ ಭುವನೇಶ್ವರಿಯ ಮೆರವಣಿಗೆ ನಡೆಯಲಿದೆ. ನಿವೃತ್ತ ಮುಖ್ಯ ಶಿಕ್ಷಕ ಹೊನ್ನಪ್ಪ ಮಾಸ್ತರ್ ಅಡ್ತಲೆ ಮೆರವಣಿಗೆಗೆ ಚಾಲನೆ ನೀಡುವರು. ಗ್ರಾ.ಪಂ. ಅಧ್ಯಕ್ಷ ಕೇಶವ ಅಡ್ತಲೆ ರಾಷ್ಟ್ರಧ್ವಜಾರೋಹಣ ಹಾಗೂ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಪರಿಷತ್ತಿನ ಧ್ವಜಾರೋಹಣ ನೆರವೇರಿಸುವರು. ಸುಳ್ಯ ತಹಶೀಲ್ದಾರ್ ಶ್ರೀಮತಿ ಮಂಜುಳಾ…

Read More

ತೀರ್ಥಹಳ್ಳಿ : ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ತೀರ್ಥಹಳ್ಳಿ ಇದರ ಆಶ್ರಯದಲ್ಲಿ ನಾಡಿನ ಹೆಸರಾಂತ ಗಾಯಕ ಸಂಗೀತ ನಿರ್ದೇಶಕ ಉಪಾಸನಾ ಮೋಹನ್ ಅವರ ಮಾರ್ಗದರ್ಶನದಲ್ಲಿ ‘ಭಾವಗೀತೆಗಳ ಶಿಬಿರ ಮತ್ತು ಸಂಗೀತ ಸಂಜೆ’ ಕಾರ್ಯಕ್ರಮವನ್ನು ದಿನಾಂಕ 24 ನವೆಂಬರ್ 2024ರಂದು ಬೆಳ್ಳಿಗೆ 10-00 ಗಂಟೆಗೆ ಮೃಗವಧೆ, ಆನುಗುಡಿಗೆ, ಎಲೆಮನೆ ರಿಟ್ರೀಟ್ ಇಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಶಿಬಿರದಲ್ಲಿ ಭಾಗವಹಿಸುವ ಆಸಕ್ತರು ನೋಂದಾಯಿಸಿಕೊಳ್ಳಲು 9844651774 ಮತ್ತು 8277582809 ಸಂಖ್ಯೆಯನ್ನು ಸಂಪರ್ಕಿಸಿರಿ.

Read More

ಮಂಗಳೂರು : ಮಂಗಳೂರಿನ ನಾಟ್ಯಾರಾಧನಾ ಕಲಾ ಕೇಂದ್ರದ 30ನೇ ವರ್ಷದ ಸಂಭ್ರಮ ತ್ರಿಂಶೋತ್ಸವದ ಸರಣಿ ಕಾರ್ಯಕ್ರಮದಲ್ಲಿ ‘ನೃತ್ಯಾಮೃತ 12’ ಭರತನಾಟ್ಯದೊಳಗಿನ ಧ್ವನಿ ಮತ್ತು ಬೆಳಕು ಎಂಬ ಒಂದು ದಿನದ ಕಾರ್ಯಾಗಾರದ ಉದ್ಘಾಟನಾ ಸಮಾರಂಭವು ದಿನಾಂಕ 18 ನವಂಬರ್ 2024ರಂದು ಸಂತ ಅಲೋಶಿಯಸ್ ಕಾಲೇಜಿನ ಎಲ್.ಸಿ.ಆರ್.ಐ. ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜನಪದ ವಿದ್ವಾಂಸರಾದ ಡಾ. ಗಣೇಶ್ ಅಮೀನ್ ಸಂಕಮಾರ್ ಇವರು ಮಾತನಾಡಿ “ಮನುಷ್ಯ ದೇಹದೊಳಗೆ ಅಡಗಿರುವ ಧ್ವನಿ ಮತ್ತು ಬೆಳಕು ಅದು ದೇವ ಸೃಷ್ಟಿಯ ಜೀವ ಭಾವ. ಅಂತಹ ಜೀವ ಭಾವವೇ ಭರತನಾಟ್ಯದ ಒಳಗೆ ಅಡಗಿರುವ ಧ್ವನಿ ಮತ್ತು ಬೆಳಕು. ಧ್ವನಿ ಬೆಳಕಿನ ಆಟವಿಲ್ಲದೆ ಯಾವ ನಾಟ್ಯವೂ ಈ ಪ್ರಪಂಚದೊಳಗೆ ಇಲ್ಲ. ಅಂತಹ ಆಧ್ಯಾತ್ಮದ ಶಕ್ತಿಯೇ ನಾವು ಕಾಣುವ ಧ್ವನಿ ಮತ್ತು ಬೆಳಕು” ಎಂದು ಅಭಿಪ್ರಾಯಪಟ್ಟರು. ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ರಂಗ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ನಡೆದ ಕಾರ್ಯಾಗಾರದ ಉದ್ಘಾಟನೆಯನ್ನು ನೆರವೇರಿಸಿದ ದಕ್ಷಿಣ ಕನ್ನಡ ಸಹಕಾರಿ ಹಾಲು…

Read More

ಕೊಪ್ಪಳ : ಆದಿ ಅನಾದಿ ಕಾಲದಿಂದ ಸಾಹಿತ್ಯದಲ್ಲಿ ಚುಟುಕಿಗೆ ಪ್ರಾಧಾನ್ಯತೆ ಸಿಕ್ಕಿದೆ. ರಾಜ್ಯಮಟ್ಟದಲ್ಲಿ ಚುಟುಕು ಸಾಹಿತ್ಯ ಪರಿಷತ್ತು ಗುರುತಿಸಿಕೊಂಡಂತೆ ಕೊಪ್ಪಳವು ಹಿಂದೆ ಬಿದ್ದಿಲ್ಲ. ದಿ. ಹನುಮಂತಪ್ಪ ಅಂಡಗಿ ಚಿಲವಾಡಗಿ ನಿರಂತರ, 12 ವರ್ಷ ಕೊಪ್ಪಳದ ಚುಟುಕು ಸಾಹಿತ್ಯ ಪರಿಷತ್ತಿನ ಪೋಷಕರಾಗಿ ಮುನ್ನಡೆಸಿದ್ದರು. ಅವರ ಆಶಯ ಮುಂದುವರೆಸುವ ಸೌಭಾಗ್ಯ ನನಗೆ ಸಿಕ್ಕಿದೆ. ಈ ಹಿನ್ನಲೆಯಲ್ಲಿ ಕೊಪ್ಪಳ ಚುಟುಕು ಸಾಹಿತ್ಯ ಪರಿಷತ್ತಿಗೆ ಜೀವ ತುಂಬುವ ಹಾದಿಯಲ್ಲಿ, ಕೊಪ್ಪಳ ಜಿಲ್ಲಾ ಮಟ್ಟದ ಚುಟುಕು ಕವಿಗೋಷ್ಠಿಗೆ, ಕವಿಗಳಿಗೆ ಆಹ್ವಾನ ನೀಡಲಾಗಿದೆ. ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತನ್ನು ಡಾ. ಎಂ.ಜಿ.ಆರ್. ಅರಸ್ ಉದ್ಘಾಟಿಸಲಿದ್ದು, ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ನಡೆಯಲಿದೆ. ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಚುಟುಕು ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 01 ಡಿಸೆಂಬರ್ 2024ರಂದು ಸಂಜೆ 4-00 ಗಂಟೆಗೆ ಕೊಪ್ಪಳದ ಕಿನ್ನಾಳ ರಸ್ತೆಯಲ್ಲಿರುವ ಶಾಂತಿ ನಿಕೇತನ ಕಟ್ಟಡ ಆವರಣದ, ಸೇಂಟ್ ಫಾಲ್ಸ್ ಪದವಿ ಕಾಲೇಜ್ ಸಭಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಕವನ ವಾಚಿಸುವ ಕವಿಗಳಿಗೆ ಪ್ರಮಾಣ…

Read More

ಕಮತಗಿ : ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ (ರಿ.) ಮತ್ತು ಹೆಜ್ಜೆ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ (ರಿ.) ಇವುಗಳ ಸಹಯೋಗದಲ್ಲಿ ಜಾನಪದ ಹಾಡುಗಾರ, ಗೀತ ರಚನೆಕಾರ, ನಾಟಕಕಾರ ಹಾಗೂ ಚಲಚಿತ್ರ ನಟರಾದ ಶ್ರೀ ಗುರುರಾಜ್ ಹೊಸಕೋಟೆಯವರ ಸರ್ವಾಧ್ಯಕ್ಷತೆಯಲ್ಲಿ ಕರ್ನಾಟಕ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ‘ಮೇಘಮೈತ್ರಿ ನೇಕಾರ ಸಾಹಿತ್ಯ ಸಮ್ಮೇಳನ – 2024’ವನ್ನು ದಿನಾಂಕ 23 ನವೆಂಬರ್ 2024ರಂದು ಕಮತಗಿಯ ಹಿರೇಮಠದ ಶ್ರೀ ಚೆನ್ನಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ. ಈ ಸಮ್ಮೇಳನದಲ್ಲಿ ಮೆರವಣಿಗೆ, ನೇಕಾರರ ಬದುಕು-ಬವಣೆ ಕುರಿತ ಕವಿಗೋಷ್ಠಿ, ವಿಚಾರಗೋಷ್ಠಿ, ಕಲಾ ಪ್ರದರ್ಶನ, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಗಾಂಧಿ ಚೌಕದಿಂದ ಹಿರೇಮಠದವರೆಗೆ ನಡೆಯಲಿರುವ ಕಾಲ್ನಡಿಗೆ ಮೆರೆವಣಿಗೆಗೆ ಹುನಗುಂದ ತಾಲೂಕು ಕ.ಸಾ.ಪ.ದ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಸಜ್ಜನ ಇವರು ಚಾಲನೆ ನೀಡಲಿದ್ದು, ಧ್ವಜಾರೋಹಣ, ಭುವನೇಶ್ವರಿ ಪ್ರತಿಮೆಗೆ ಪುಷ್ಪಾರ್ಚನೆ ಮತ್ತು ಖಾದಿ ಭಂಡಾರಕ್ಕೆ ಚಾಲನೆ ನಡೆಯಲಿದೆ. ಕಮತಗಿಯ ಹಿರೇಮಠದ ಶ್ರೀ ಶ್ರೀ…

Read More

ಮಂಗಳೂರು : ಮಂಗಳೂರಿನ ಪ್ರತಿಷ್ಟಿತ ನೃತ್ಯ ಸಂಸ್ಥೆಯಾದ ನೃತ್ಯಾಂಗನ್ ಪ್ರಸ್ತುತ ಪಡಿಸುವ ‘ಮಂಥನ 2024’ ಭರತನಾಟ್ಯ ಉತ್ಸವದ ದಶಮ ಆವೃತ್ತಿವನ್ನು ದಿನಾಂಕ 22 ನವೆಂಬರ್ 2024ರಂದು ಸಂಜೆ 5-45 ಗಂಟೆಗೆ ಮಂಗಳೂರಿನ ಡಾನ್ ಬೋಸ್ಕೋ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಚೆನ್ನೈ ಮೂಲದ ಭರತನಾಟ್ಯ ಕಲಾವಿದೆ ವಿದುಷಿ ಲಾವಣ್ಯ ಅನಂತ್ ಇವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಲಿದ್ದಾರೆ. ಹೆಸರಾಂತ ಭರತನಾಟ್ಯ ಕಲಾವಿದರಾದ ಕೊಡಗಿನ ವಿದುಷಿ ಶಿಲ್ಪಾ ನಂಜಪ್ಪ, ಚೆನ್ನೈಯ ವಿದುಷಿ ದಿವ್ಯಾ ನಾಯರ್, ಬೆಂಗಳೂರಿನ ವಿದುಷಿ ಇಂದು ವೇಣು, ಪುತ್ತೂರಿನ ವಿದುಷಿ ಮಂಜುಳಾ ಸುಬ್ರಹ್ಮಣ್ಯ ಮತ್ತು ಮಂಗಳೂರಿನ ವಿದುಷಿ ರಾಧಿಕಾ ಶೆಟ್ಟಿ ಇವರುಗಳು ಏಕ ವ್ಯಕ್ತಿ ಪ್ರದರ್ಶನ ನೀಡಲಿದ್ದು, ಇವರಿಗೆ ನಟುವಾಂಗದಲ್ಲಿ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ, ಹಾಡುಗಾರಿಕೆಯಲ್ಲಿ ನಂದಕುಮಾರ್ ಉಣ್ಣಿಕೃಷ್ಣನ್, ಮೃದಂಗದಲ್ಲಿ ಶ್ರೀ ಕಾರ್ತಿಕ್ ವಿಧಾತ್ರಿ ಹಾಗೂ ಕೊಳಲಿನಲ್ಲಿ ಶ್ರೀ ನಿತೀಶ್ ಅಮ್ಮಣ್ಣಯಾ ಇವರುಗಳು ಸಹಕರಿಸಲಿದ್ದಾರೆ.

Read More

ಕಾಸರಗೋಡು : ಶೇಣಿಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕುಂಬಳೆ ಉಪಜಿಲ್ಲಾ ಮಟ್ಟದ 63ನೇ ಕೇರಳ ರಾಜ್ಯ ಶಾಲಾ ಕಲೋತ್ಸವ ದಿನಾಂಕ 18 ನವೆಂಬರ್ 2024ರ ಸೋಮವಾರದಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಜೇಶ್ವರದ ಶಾಸಕ ಎ. ಕೆ. ಎಂ. ಅಶ್ರಫ್ ಮಾತನಾಡಿ “ಕೇರಳದಲ್ಲಿ ಪ್ರತಿ ವರ್ಷ ನಡೆಯುವ ಶಾಲಾ ಕಲೋತ್ಸವವನ್ನು ಏಷ್ಯಾದ ಅತಿ ದೊಡ್ಡ ಕಲೋತ್ಸವ ಎಂದೇ ಅಂತಾರಾಷ್ಟ್ರೀಯ ಮಾಧ್ಯಮಗಳು ಬಿಂಬಿಸಿವೆ. ಪಠ್ಯದೊಂದಿಗೆ ಕಲೆ, ಕ್ರೀಡೆ ಸಹಿತ ಪಠೇತರ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಕೇರಳದ ಶಿಕ್ಷಣ ವ್ಯವಸ್ಥೆ ದೇಶಕ್ಕೇ ಮಾದರಿಯಾಗಿದೆ. ಕಲೆಗೆ ಜಾತಿ, ಮತ, ಧರ್ಮಗಳ ಬೇಧವಿಲ್ಲ. ಇದರಿಂದ ಜನರನ್ನು ಒಗ್ಗೂಡಿಸಲು ಸಾಧ್ಯವಾಗುತ್ತದೆ. ಯಕ್ಷಗಾನ, ಭರತ ನಾಟ್ಯ, ಶಾಸ್ತ್ರೀಯ ಸಂಗೀತ ಸಹಿತ ನಾನಾ ಕಲಾ ಪ್ರಕಾರಗಳನ್ನೊಳಗೊಂಡ ಶಾಲಾ ಕಲೋತ್ಸವವು ನಾಳೆಯ ಗೋವಿಂದ ಪೈ ಹಾಗೂ ಕಯ್ಯಾರ ಕಿಂಞಣ್ಣ ರೈಗಳಂಥ ಮೇರು ವ್ಯಕ್ತಿಗಳನ್ನು ನಾಡಿಗೆ ಸಮರ್ಪಿಸುವ ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತಿದೆ.” ಎಂದರು. ಎಣ್ಮಕಜೆ ಗ್ರಾಮ ಪಂಚಾಯತ್ ಮತ್ತು ಕಲೋತ್ಸವದ ಸ್ವಾಗತ ಸಮಿತಿಯ ಅಧ್ಯಕ್ಷರಾದ…

Read More

ಉಡುಪಿ : ರಾಗ ಧನ ಉಡುಪಿ (ರಿ.) ಸಂಸ್ಥೆಯ ರಾಗರತ್ನಮಾಲಿಕೆ -31 ‘ಗೃಹಸಂಗೀತ’ ಕಾರ್ಯಕ್ರಮವು ದಿನಾಂಕ 24 ನವೆಂಬರ್ 2024ರಂದು ಉಡುಪಿ ಪರ್ಕಳದ ಸರಿಗಮ ಭಾರತಿ ಸಂಗೀತ ವಿದ್ಯಾಲಯದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಶ್ರೀ ಹೆಮ್ಮಿಗೆ ಎಸ್. ಪ್ರಶಾಂತ್ ಬೆಂಗಳೂರು ಇವರ ಹಾಡುಗಾರಿಕೆಗೆ ಬೆಂಗಳೂರಿನ ಶ್ರೀಮತಿ ಚಾರುಲತಾ ರಾಮಾನುಜಂ ವಯಲಿನ್ ನಲ್ಲಿ ಹಾಗೂ ಶ್ರೀ ಸುನಾದಕೃಷ್ಣ ಅಮೈ ಮೃದಂಗದಲ್ಲಿ ಸಹಕರಿಸಲಿದ್ದಾರೆ ಎಂದು ರಾಗ ಧನ ಉಡುಪಿಯ ಕಾರ್ಯದರ್ಶಿ ಉಮಾಶಂಕರಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ – 9964140601

Read More

ಹೊನ್ನಾವರ : ಲಯನ್ಸ್ ಕ್ಲಬ್ ಹೊನ್ನಾವರ ಇದರ ಆಶ್ರಯದಲ್ಲಿ ಶ್ರೀ ಕ್ಷೇತ್ರ ಮೆಕ್ಕೆಕಟ್ಟು ಮೇಳ ಹಾಗೂ ಅತಿಥಿ ದಿಗ್ಗಜರ ಕೂಡುವಿಕೆಯಲ್ಲಿ ‘ಲಯನ್ಸ್ ಯಕ್ಷ ಸಂಜೆ’ ಕಾರ್ಯಕ್ರಮವನ್ನು ದಿನಾಂಕ 24 ನವೆಂಬರ್ 2024ರಂದು ಸಂಜೆ 6-00 ಗಂಟೆಗೆ ಹೊನ್ನಾವರದ ಎಸ್.ಡಿ.ಎಮ್. ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ. ‘ಭೀಷ್ಮ ವಿಜಯ’ ಮತ್ತು ‘ಕವಿ ರತ್ನ ಕಾಳಿದಾಸ’ ಎಂಬ ಪ್ರಸಂಗದ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.

Read More