Author: roovari

ಬೆಂಗಳೂರು: ನಗರದ ಸಾಲಿಗ್ರಾಮ ಜೈನ ಮಿತ್ರ ಮಂಡಲಿಯವರು ನೀಡುವ ʻಸುಮಾವಸಂತ ಸಾಹಿತ್ಯ ದತ್ತಿ ಪ್ರಶಸ್ತಿʼಯನ್ನು ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಪ್ರೊ. ಬಿ.ಪಿ. ನ್ಯಾಮಗೌಡ ಇವರಿಗೆ ಮತ್ತು ʻಶ್ರೇಯೋಭದ್ರʼ ಪ್ರಶಸ್ತಿಯನ್ನು ಮಂಚೇನಹಳ್ಳಿ ಭಗವಾನ್ ಬಾಹುಬಲಿ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಕೆ.ಬಿ. ಅಶೋಕ ಕುಮಾರ ಇವರಿಗೆ ಇದೇ ಭಾನುವಾರ 18ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಸಭಾ ಮಂದಿರದಲ್ಲಿ ಪ್ರದಾನ ಮಾಡಲಾಗುವುದು. ಜೈನ ಸಾಹಿತ್ಯ ಕ್ಷೇತ್ರದಲ್ಲಿ ಮೌಲಿಕ ಸೇವೆ ಸಲ್ಲಿಸಿದ ಸಾಹಿತಿಗಳಿಗೆ ಕೊಡಮಾಡುವ ʻಸುಮಾವಸಂತ ಸಾಹಿತ್ಯ ದತ್ತಿ ಪ್ರಶಸ್ತಿʼ ಹಾಗೂ ಉತ್ತಮ ಧಾರ್ಮಿಕ ಹಾಗೂ ಸಾಮಾಜಿಕ ಸೇವೆಗಾಗಿ ನೀಡುವ ‘ಶ್ರೇಯೋಭದ್ರ’ ಪ್ರಶಸ್ತಿಯು ತಲಾ ರೂಪಾಯಿ10,000/-(ಹತ್ತು ಸಾವಿರ) ನಗದು, ಪ್ರಶಸ್ತಿ ಫಲಕ ಮತ್ತು ಫಲ ತಾಂಬೂಲಗಳನ್ನು ಒಳಗೊಂಡಿದೆ. ಸಾಲಿಗ್ರಾಮ ಜೈನ ಮಿತ್ರ ಮಂಡಲಿಯ 22ನೇ ವಾರ್ಷಿಕೋತ್ಸವ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಪ್ರದಾನ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ…

Read More

ಬೆಂಗಳೂರು : ಕಪ್ಪಣ್ಣ ಅಂಗಳ ಪ್ರಸ್ತುತ ಪಡಿಸುವ ಪ್ರತೀ ತಿಂಗಳ ಎರಡನೇ ಶನಿವಾರದಂದು ನಡೆಯುವ ಶಾಸ್ತ್ರೀಯ ಸಂಗೀತ ಸರಣಿ ಕಾರ್ಯಕ್ರಮ ‘ಆಲಾಪ್’ ಬೆಂಗಳೂರಿನ ಜೆ.ಪಿ. ನಗರದ ಕಪ್ಪಣ್ಣ ಅಂಗಳದಲ್ಲಿ ದಿನಾಂಕ 10-06-2023 ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ವಿದ್ವಾನ್ ಶ್ರೀಧರ್ ಸಾಗರ್ ರವರ ಸುಪುತ್ರರಾದ 9ನೇ ತರಗತಿಯ ವಿದ್ಯಾರ್ಥಿ ತ್ರಿಧಾತ್ ಸಾಗರ್ ಮತ್ತು ಸಂಗಡಿಗರಿಂದ ಕರ್ನಾಟಕ ಶೈಲಿಯ ಶಾಸ್ತ್ರೀಯ ಸಂಗೀತ ಸ್ಯಾಕ್ಸೊಫೋನ್ ವಾದನ ನಡೆಯಿತು. ಪಕ್ಕವಾದ್ಯ ಮೃದಂಗದಲ್ಲಿ ಅಮೋಘ ಕೈಪ, ವಯಲಿನ್ ನಲ್ಲಿ ಅರ್ಚನಾ ಮರಾಠೆ ಹಾಗೂ ಖಂಜೀರದಲ್ಲಿ ಅಶುತೋಷ್ ವಿಶ್ವೇಶ್ವರ ಸಹಕರಿಸಿದರು. ಯುವ ಪ್ರತಿಭೆ ತ್ರಿಧಾತ್ ಸಾಗರ್ ತನ್ನ ಪ್ರಾಥಮಿಕ ಅಭ್ಯಾಸವನ್ನು ತಂದೆಯವರಾದ ಶ್ರೀಧರ್ ಸಾಗರ್ ಹಾಗೂ ಮುಂದೆ ಪದ್ಮಭೂಷಣ ವಿದ್ವಾನ್ ಡಾ. ಕದ್ರಿ ಗೋಪಾಲನಾಥ್ ಬಳಿ ಅಭ್ಯಾಸ ಮಾಡಿದ್ದು ಪ್ರಸ್ತುತ ಕರ್ನಾಟಕ ಶಾಸ್ತ್ರೀಯ ಗಾಯನವನ್ನು ವಿದುಷಿ ಆರ್. ಎ. ರಮಾಮಣಿಯವರಲ್ಲಿ ಅಭ್ಯಾಸ ಮಾಡುತ್ತಿದ್ದಾನೆ , ಹಲವಾರು ಕಛೇರಿಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ವಯಲಿನ್ ನಲ್ಲಿ ಬಿ. ಇ. ಪದವೀಧರೆ ಹಾಗೂ…

Read More

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭಾಷಾ ಶಾಸ್ತ್ರಜ್ಞರಿಗಾಗಿ ಮೀಸಲಿಟ್ಟಿರುವ ʻಡಾ. ಟಿ.ವಿ.ವೆಂಕಟಾಚಲಶಾಸ್ತ್ರೀ ವಿದ್ವತ್‌ ಪ್ರಶಸ್ತಿʼಯನ್ನು ಪ್ರಕಟಿಸಲಾಗಿದ್ದು. 2022 ಹಾಗೂ 2023ನೆಯ ಸಾಲಿನ ಪ್ರಶಸ್ತಿಗಾಗಿ ಭಾಷಾಶಾಸ್ತ್ರದ ಮೂಲಕ ನಾಡಿನಲ್ಲಿ ಗಣನೀಯ ಸಾಧನೆ ಮಾಡಿದ ಸಾಹಿತಿಗಳನ್ನು ಆಯ್ಕೆ ಮಾಡಲಾಗಿದೆ.ಈ ಪ್ರಶಸ್ತಿಯು ಹಿರಿಯ ಭಾಷಾಶಾಸ್ತ್ರಜ್ಞರಿಗೆ ನೀಡುವ ಅತೀ ಮಹತ್ವವಾದ ಪುರಸ್ಕಾರವಾಗಿದ್ದು ಇದಕ್ಕೆ ಅವರ ಅಭಿಮಾನಿಗಳು ಹಾಗೂ ಬಂಧುಗಳು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿನಿಧಿಯನ್ನು ಸ್ಥಾಪಿಸಿದ್ದಾರೆ. ಪ್ರಶಸ್ತಿಯು 10,000/-(ಹತ್ತು ಸಾವಿರ)ರೂ. ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. ಹಳೆಗನ್ನಡ ಸಾಹಿತ್ಯ, ಛಂದಸ್ಸು, ವ್ಯಾಕರಣ, ನಿಘಂಟು ರಚನೆ, ಗ್ರಂಥ ಸಂಪಾದನೆ, ಅನುವಾದ, ಭಾಷಾ ಶಾಸ್ತ್ರ ಶಾಸ್ತ್ರಸಾಹಿತ್ಯ ಮೊದಲಾದ ವಿಷಯಗಳಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಹಿರಿಯ ಸಾಹಿತಿಗಳಿಗಾಗಿಯೇ ಈ ಪ್ರಶಸ್ತಿಯನ್ನು ದತ್ತಿ ದಾನಿಗಳು ಮೀಸಲಿಟ್ಟಿದ್ದು ಅದರಂತೆ ಕಳೆದ 12 ವರ್ಷಗಳಿಂದ ನಿರಂತರವಾಗಿ ಕನ್ನಡ ಸಾಹಿತ್ಯ ಪರಿಷತ್ತು ಈ ಪ್ರಶಸ್ತಿಯನ್ನು ಸಾಹಿತ್ಯ ಕ್ಷೇತ್ರದ ಸಾಧಕರಿಗೆ ನೀಡುತ್ತಾ ಬಂದಿರುತ್ತದೆ. ದಾನಿಗಳ ಮೂಲ ಉದ್ದೇಶದಂತೆ ಕರ್ನಾಟಕದಲ್ಲಿ ಕನ್ನಡ ಸಾರಸ್ವತಲೋಕದಲ್ಲಿ ಮಹತ್ವದ ಕೊಡುಗೆಗಳನ್ನು…

Read More

ಮಂಗಳೂರು : ದಿನಾಂಕ 03-06-2023ರಂದು ತಲಪಾಡಿಯ ದೇವಿಪುರದ ನಿವಾಸಿಯಾದ ರಾಜಾರಾಂ ಹೊಳ್ಳರ ಮನೆಯಲ್ಲಿ ಮನೆ ಮನೆ ಗಮಕ ಕಾರ್ಯಕ್ರಮ ನಡೆಯಿತು. ಅಲ್ಲಿ ‘ರುಕ್ಮಿಣಿ ವಿಜಯ’ ಎಂಬ ಕಥಾ ಭಾಗಕ್ಕೆ ಸುರೇಶ್ ರಾವ್ ಅತ್ತೂರು ಅವರು ವಾಚನ ಮತ್ತು ಎಂ.ಎಸ್. ವಿನಾಯಕ್ ಶಿವಮೊಗ್ಗ ಅವರು ಬಹಳ ಉತ್ತಮ ವ್ಯಾಖ್ಯಾನ ನೀಡಿದರು. ಈ ಕಾರ್ಯಕ್ರಮವು ಅಲ್ಲಿ ನೆರೆದ ಗಮಕ ಸಾಹಿತ್ಯಾಸಕ್ತರಿಂದ ಮೆಚ್ಚುಗೆ ಪಡೆಯಿತು. ಶ್ರೀ ಶುಭಕರ ಅವರು ನಿರೂಪಣೆ ಮಾಡಿ, ರಾಜರಾಂ ಹೊಳ್ಳರು ಸ್ವಾಗತ ಮತ್ತು ಧನ್ಯವಾದ ಸಮರ್ಪಣೆ ಮಾಡಿದರು.

Read More

ಉಡುಪಿ : ಭಾಷಾ ಉಪನ್ಯಾಸಕಿ, ಜಾನಪದ ಸಾಹಿತಿ, ಸಂಶೋಧಕಿ ಡಾ. ಸಾಯಿಗೀತಾ ಅವರು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದಿಂದ ಕೊಡಲ್ಪಡುವ ‘ಡಾ. ಯು.ಪಿ. ಉಪಾಧ್ಯಾಯ ಮತ್ತು ಡಾ. ಸುಶೀಲಾ ಪಿ. ಉಪಾಧ್ಯಾಯ ಸಂಶೋಧನಾ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ. ಬಹುಭಾಷಾ ವಿದ್ವಾಂಸರು, ತುಳು ನಿಘಂಟು ರಚನೆ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿರುವ ಡಾ. ಯು.ಪಿ. ಉಪಾಧ್ಯಾಯ ಮತ್ತು ಡಾ. ಸುಶೀಲಾ ಪಿ. ಉಪಾಧ್ಯಾಯ ಅವರ ನೆನಪಿನಲ್ಲಿ ಈ ಪ್ರಶಸ್ತಿ ನೀಡಲಾಗುವುದು. ಪ್ರಶಸ್ತಿಯು ರೂ.10,000/- ನಗದು ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿದೆ. ಡಾ. ಸಾಯಿಗೀತಾ ಅವರು ಮಂಗಳೂರಿನ ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಮಾನವಿಕ ವಿಭಾಗದ ಪ್ರಭಾರ ಮುಖ್ಯಸ್ಥರಾಗಿ, ಸಹಾಯಕ ಭಾಷಾ ಪ್ರಾಧ್ಯಾಪಿಕೆಯಾಗಿ, ನಿಟ್ಟೆ ವಿವಿ ತುಳು ಅಧ್ಯಯನ ಕೇಂದ್ರದ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ‘ತುಳುವ ಪರಿಪುಡು ಪೊಣ್ಣ ಮೂಲಕಟ್’ ವಿಷಯದ ಕುರಿತು ಕುಪ್ಪಂನ ದ್ರಾವಿಡಿಯನ್ ವಿ.ವಿ.ಯಿಂದ ಪಿ.ಎಚ್.ಡಿ. ಪಡೆದಿದ್ದಾರೆ. ಗೋವಿಂದ ಪೈ ಸಂಶೋಧನಾ ಕೇಂದ್ರದ ‘ಹಿಸ್ಟರಿ ಆಫ್ ಬಂಟ್ಸ್‌’ ಸಂಶೋಧನಾ ಯೋಜನೆಯಲ್ಲಿ ಸಂಶೋಧನಾ…

Read More

ಮಂಗಳೂರು : ರಾಮಕೃಷ್ಣ ಮಠ ಮಂಗಳೂರು ಇದರ ಸಹಯೋಗದೊಂದಿಗೆ ದಾಸಸಾಹಿತ್ಯ ಸೇವಾ ಪ್ರತಿಷ್ಠಾನ, ಮಂಗಳೂರು ಪ್ರಸ್ತುತ ಪಡಿಸುವ ಹರಿದಾಸರ ಕೃತಿ ಕೀರ್ತನೆಗಳ ಗಾಯನ ‘ದಾಸ ಗಾನಾಮೃತ’ ದಿನಾಂಕ 16-06-2023ರಂದು ಸಂಜೆ 5-15ಕ್ಕೆ ಮಂಗಳಾದೇವಿ, ರಾಮಕೃಷ್ಣ ಮಠ, ಸ್ವಾಮಿ ವಿವೇಕಾನ೦ದ ಸಭಾಂಗಣದಲ್ಲಿ ನಡೆಯಲಿದೆ. ರಾಜ್ಯೋತ್ಸವ ಪ್ರಶಸ್ತಿ ಹಾಗೂ ಪುರಂದರ ಪ್ರಶಸ್ತಿ ವಿಜೇತ ಶ್ರೀ ಪುತ್ತೂರು ನರಸಿಂಹ ನಾಯಕ್‌ ಇವರು ಈ ಕಾರ್ಯಕ್ರಮವನ್ನು ನಡೆಸಿ ಕೊಡಲಿದ್ದಾರೆ.

Read More

ಉಡುಪಿ : ರಾಗ ಧನ ಉಡುಪಿ ಸಂಸ್ಥೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಶ್ರೀಮತಿ ಮತ್ತು ಡಾ. ಕೃಷ್ಣಮೂರ್ತಿ ಭಟ್ ಇವರ ಆತಿಥ್ಯ ಮತ್ತು ಸಹ ಪ್ರಾಯೋಜಕತ್ವದಲ್ಲಿ ಪ್ರಸ್ತುತ ಪಡಿಸುವ ಗೃಹ ಸಂಗೀತ ಕಾರ್ಯಕ್ರಮ ‘ರಾಗ ರತ್ನ ಮಾಲಿಕೆ -13’ ದಿನಾಂಕ 17-06-2023 ಶನಿವಾರ ಸಂಜೆ ಉಡುಪಿ ಜಿಲ್ಲೆಯ ಪರ್ಕಳದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಶ್ರೀಮತಿ ಹೇಮಲತಾ ರಾವ್ ಮತ್ತು ಶಿಷ್ಯೆಯರಾದ ಚಿನ್ಮಯಿ ಭಟ್, ಸುರಭಿ ರಾವ್, ಧನ್ಯಾ ಪಿ. ಮತ್ತು ವೃಂದಾ ರಾವ್ ಇವರಿಂದ ಕೀರ್ತನೆಗಳ ಪ್ರಸ್ತುತಿ ನಡೆಯಲಿದೆ. ಹಾಡುಗಾರಿಕೆಗೆ ವಯೊಲಿನ್ ನಲ್ಲಿ ವೈಭವ್ ಪೈ ಮತ್ತು ಮೃದಂಗದಲ್ಲಿ ಪ್ರಜ್ಞಾನ್ ನಾಯಕ್ ಸಹಕರಿಸಲಿದ್ದಾರೆ. ಕಾಂಚನ ಸಹೋದರಿಯರೆಂದು ಖ್ಯಾತಿ ಪಡೆದ ಕಾಂಚನ ಎಸ್. ಶ್ರೀರಂಜನಿ ಹಾಗೂ ಕಾಂಚನ ಎಸ್. ಶ್ರುತಿರಂಜನಿ ಇವರ ದ್ವಂದ್ವ ಹಾಡುಗಾರಿಕೆ ನಡೆಯಲಿದ್ದು, ಹಾಡುಗಾರಿಕೆಗೆ ವಯೊಲಿನ್ ನಲ್ಲಿ  ಎಸ್. ಶ್ರೀಜಿತ್ ತಿರುವನಂತಪುರ, ಮೃದಂಗದಲ್ಲಿ ಜಿ.ಎಸ್. ರಾಮಾನುಜನ್ ಮತ್ತು ಘಟಂನಲ್ಲಿ ಶರತ್ ಕೌಶಿಕ್ ಸಹಕರಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ…

Read More

ಚಿತ್ರದುರ್ಗ : ಸಾಣೇಹಳ್ಳಿ ಶ್ರೀ ಶಿವಕುಮಾರ ರಂಗ ಪ್ರಯೋಗ ಶಾಲೆಯಲ್ಲಿ 2023-24ನೇ ಸಾಲಿನ ರಂಗ ಶಿಕ್ಷಣಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಸಂಸ್ಥೆಯು ಕರ್ನಾಟಕ ರಾಜ್ಯಸರ್ಕಾರದಿಂದ ಮಾನ್ಯತೆ ಪಡೆದಿದ್ದು, ಪ್ರವೇಶಕ್ಕೆ ಕನಿಷ್ಠ ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ. ಉತ್ತೀರ್ಣರಾದ ಮತ್ತು ಪದವೀಧರರಾಗಿರುವ 16 ವರ್ಷ ಮೇಲ್ಪಟ್ಟ ಹಾಗೂ 30 ವರ್ಷದ ಒಳಗಿನ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ರಂಗ ಶಿಕ್ಷಣದ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಊಟ ಹಾಗೂ ವಸತಿ ಸಂಪೂರ್ಣ ಉಚಿತವಾಗಿದ್ದು, 25-06-2023 ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ. ಅರ್ಜಿಗಳನ್ನು ಪ್ರಾಚಾರ್ಯರು ಶ್ರೀ ಶಿವಕುಮಾರ ರಂಗ ಪ್ರಯೋಗ ಶಾಲೆ ಸಾಣೇಹಳ್ಳಿ -577515 ಹೊಸದುರ್ಗ ತಾಲೂಕು, ಚಿತ್ರದುರ್ಗ ಜಿಲ್ಲೆ ಈ ವಿಳಾಸಕ್ಕೆ ಪತ್ರ ಬರೆದು ಪ್ರವೇಶ ಅರ್ಜಿಗಳನ್ನು ತರಿಸಿಕೊಳ್ಳಬಹುದು ಅಥವಾ ರಂಗಶಾಲೆಯ ವೆಬ್ ಸೈಟ್‌ನಲ್ಲಿ ಅರ್ಜಿಗಳನ್ನು ಪಡೆಯಬಹುದು www.theatreschoolsanehalli.org ಹೆಚ್ಚಿನ ಮಾಹಿತಿಗಾಗಿ 9448398144, 8861043553, 9972007015.

Read More

ಯಕ್ಷಗಾನ ಎಂದರೆ ಪುರುಷ ಪ್ರಧಾನವಾದದ್ದು. ರಂಗದಲ್ಲಿ ಪುರುಷರೇ ಮಹಿಳೆಯರಾಗುತ್ತಿದ್ದರು. ಇಲ್ಲಿ ಎಲ್ಲವೂ ಪುರುಷಮಯ ಎಂಬ ಕಾಲ ಬದಲಾಗಿದೆ. ಪುರುಷ ಪ್ರಧಾನವಾದ ಯಕ್ಷಗಾನ ಕ್ಷೇತ್ರಕ್ಕೆ ಮಹಿಳೆಯರು ಲಗ್ಗೆ ಇಟ್ಟಿದ್ದಾರೆ. ಪುರುಷರಿಗೆ ಕಡಿಮೆ ಇಲ್ಲದಂತೆ ಕುಣಿಯುತ್ತಾರೆ. ಸ್ತ್ರೀಸಹಜ ಬೆಡಗು, ಬಿನ್ನಾಣವಷ್ಟೇ ಅಲ್ಲ, ಭಯಾನಕ, ಭೀಭತ್ಸ, ಶೃಂಗಾರ, ಕರುಣೆ, ವೀರ ಹೀಗೆ ಪುರುಷ ಪಾತ್ರವನ್ನೂ ತೊಟ್ಟು ಸೈ ಎನಿಸಿಕೊಳ್ಳುತ್ತಿದ್ದಾರೆ ಮಹಿಳೆಯರು ಹೀಗೆ ಯಕ್ಷಗಾನ ರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸುತ್ತಿರುವ ಕಲಾವಿದೆ ವಿದುಷಿ ಭಾಗೀರಥಿ ಎಮ್ ರಾವ್. 14.06.1970 ರಂದು ಯು.ಜಯರಾಮ ರಾವ್ ಹಾಗೂ  ಶ್ರೀಮತಿ ನವೀನಮ್ಮ ಇವರ ಮಗಳಾಗಿ ಜನನ. ಬಿಕಾಂ ಇವರ ವಿದ್ಯಾಭಾಸ, ಕರ್ನಾಟಕ ಸಂಗೀತ ಹಾಗೂ ಭಾರತನಾಟ್ಯದಲ್ಲಿ ವಿದ್ವತ್ ಪದವಿಯನ್ನು ಪಡೆದಿರುತ್ತಾರೆ. ಶ್ರೀಮಾನ್ ಐರೋಡಿ ಸದಾನಂದ ಹೆಬ್ಬಾರ್ ಯಕ್ಷಗಾನ ಗುರುಗಳು, ಹೆಜ್ಜೆಗಾರಿಕೆಯನ್ನು ಸೀತಾರಾಮ ಶೆಟ್ಟಿ ಕೊಯ್ಯುರ್ ಬಳಿ ಅಭ್ಯಾಸ ಮಾಡಿ, ಭಾಗವತಿಕೆಯನ್ನು  ಕೆ. ಪಿ.ಹೆಗ್ಡೆ, ಸದಾನಂದ ಐತಾಳ್ ಬಳಿ ಕಲಿತಿರುತ್ತಾರೆ. ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆ ವಿ.ಬಾಬು ಶೆಟ್ಟಿ (ಗೆಳೆಯರ ಬಳಗ…

Read More

ಮಂಗಳೂರು : ಮಂಗಳೂರಿನ ಸಂಗೀತ ಭಾರತಿ ಪ್ರತಿಷ್ಠಾನ ಪ್ರಸ್ತುತಪಡಿಸಿದ ಉತ್ಕೃಷ್ಟ ಮಟ್ಟದ ‘ಸುರ್ ಓ ಸಾಜ್’ ಸಂಗೀತ ಕಾರ್ಯಕ್ರಮ ನಗರದ ಪುರಭವನದಲ್ಲಿ ದಿನಾಂಕ 11-06-2023 ಭಾನುವಾರ ಸಂಗೀತ ಪ್ರಿಯರ ಮನಸೂರೆಗೊಳಿಸುವಲ್ಲಿ ಯಶಸ್ವಿಯಾಯಿತು. ಡಾ. ನವೀನ್‌ ಚಂದ್ರ ಶೆಟ್ಟಿ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಡಾ. ಜಿ.ಜಿ. ಲಕ್ಷ್ಮಣ್‌ ಪ್ರಭು, ಸಂಗೀತ ಭಾರತಿ ಪ್ರತಿಷ್ಠಾನದ ಅಧ್ಯಕ್ಷ ಖ್ಯಾತ ಸಿತಾರ್ ವಾದಕ ಉಸ್ತಾದ್ ರಫೀಕ್ ಖಾನ್, ಸಂಗೀತ ಭಾರತಿ ಪ್ರತಿಷ್ಠಾನದ ಉಪಾಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್, ಕಾರ್ಯದರ್ಶಿ ಡಾ.ಉಷಾಪ್ರಭಾ ಎನ್. ನಾಯಕ್, ಪಂಡಿತ್‌ ಮೌನೇಶ್ ಕುಮಾರ್ ಛಾವಣಿ, ಯುವ ಸಿತಾರ್ ವಾದಕ ಅಂಕುಶ್ ಎನ್. ನಾಯಕ್‌ ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಹೊಸದಿಲ್ಲಿಯ ಡಾ. ಬಿಪುಲ್ ಕುಮಾರ್ ರಾಯ್ ಅವರಿಂದ ಸಂತೂರ್ ವಾದನ ನಡೆಯಿತು. ಅವರಿಗೆ ಖ್ಯಾತ ತಬ್ಲಾ ವಾದಕ ಬೆಂಗಳೂರಿನ ಪಂಡಿತ್ ರಾಜೇಂದ್ರ ನಾಕೋಡ್ ಸಾಥ್ ನೀಡಿದರು. ಬಳಿಕ ಧಾರವಾಡದ ಡಾ.ವಿಜಯ್‌ ಕುಮಾರ್ ಪಾಟೀಲ್‌ ಮತ್ತು ಬೆಂಗಳೂರಿನ ಕೌಶಿಕ್‌ ಐತಾಳ್…

Read More