Author: roovari

ಸಾಗರ : ‘ನಾ ಧಿನ್ ಧಿನ್ ನಾ ಹಿಂದೂಸ್ಥಾನೀ ತಬಲಾ ವಿದ್ಯಾಲಯ’ದ ದ್ವಿತೀಯ ವಾರ್ಷಿಕೋತ್ಸವದ ಪ್ರಯುಕ್ತ ‘ಲಯವತ್ಸರ -2’ ದಿನಾಂಕ 03-12-2023ರಂದು ಸಾಗರದ ಸೇವಾ ಸಾಗರ ಶಾಲೆಯ ಅಜಿತ್ ಸಭಾಭವನದಲ್ಲಿ ನಡೆಯಲಿದೆ. ಮುಂಜಾನೆ ಗಂಟೆ 9ರಿಂದ ಕುಮಾರಿ ನಂದಾ ಭಟ್ ಭೀಮನಕೋಣೆ ಇವರಿಂದ ಗಾಯನ. ಕುಮಾರ ಶ್ರೀಷ ದತ್ತಾತ್ರೇಯ ಮತ್ತು ಸುದೀಪ್ ಕೆ.ಎಂ. ಕಿಬ್ಬಚ್ಚಲು ತಬಲಾದಲ್ಲಿ ಹಾಗೂ ಕುಮಾರ ಸಂವತ್ಸರ ಸಾಗರ ಇವರು ಸಂವಾದಿನಿಯಲ್ಲಿ ಸಾಥ್ ನೀಡಲಿದ್ದಾರೆ. ಗಂಟೆ 10ರಿಂದ ವಿದ್ಯಾಲಯದ ವಿದ್ಯಾರ್ಥಿಗಳಿಂದ ತಬಲಾ ವಾದನ ಕಾರ್ಯಕ್ರಮ, ಅಪರಾಹ್ನ 12ರಿಂದ ಸಂತೂರ್-ಬಾನ್ಸುರಿ-ವಯೋಲಿನ್ ‘ತ್ರಿಗಲ್ ಬಂದಿ’ಯಲ್ಲಿ ಶ್ರೀಮತಿ ಸುಮಾ ಹೆಗಡೆ – ಸಂತೂರ್, ಶ್ರೀ ಸಮರ್ಥ ಹೆಗಡೆ – ಬಾನ್ಸುರಿ ಮತ್ತು ಶ್ರೀ ರಂಜನ್ ಕುಮಾರ್ ಬೇವುರ – ವಯೋಲಿನ್ ನುಡಿಸಲಿದ್ದಾರೆ. ವಿ. ಸಂತೋಷ್ ಆರ್. ಹೆಗಡೆ ಮತ್ತು ವಿ. ಶೌರಿ ಶಾನಭೋಗ್ ತಬಲಾ ಮತ್ತು ಪಖವಾಜ್ ಸಾಥ್ ನೀಡಲಿದ್ದಾರೆ. ಗಂಟೆ 2.30ರಿಂದ ವಿದ್ಯಾಲಯದ ವಿದ್ಯಾರ್ಥಿಗಳಿಂದ ತಬಲಾ ವಾದನ ಕಾರ್ಯಕ್ರಮ, ಸಂಜೆ ಗಂಟೆ…

Read More

ಸುಬ್ರಹ್ಮಣ್ಯ : ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಕ್ಕೊಳಪಟ್ಟ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ವೈಭವಕ್ಕೆ ದಿನಾಂಕ 18-11-2023ರಂದು ಪುತ್ತೂರಿನ ನಾಟ್ಯರಂಗದ ನೃತ್ಯಗುರು ಮತ್ತು ಕಾಲೇಜಿನ ಹಿರಿಯ ವಿದ್ಯಾರ್ಥಿನಿ ವಿದುಷಿ ಮಂಜುಳಾ ಸುಬ್ರಹ್ಮಣ್ಯ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅವರು ಮಾತನಾಡುತ್ತಾ “ಕಲೆಯನ್ನು ನಮ್ಮ ಬದುಕಿನ ಭಾಗವಾಗಿ ಇರಿಸಿಕೊಳ್ಳುವುದು ಅತ್ಯಗತ್ಯ. ಕಲೆಯು ಜೀವನಕ್ಕೆ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಬೋಧಿಸುತ್ತದೆ. ಕೇವಲ ನೃತ್ಯ ಸಂಗೀತ ಮಾತ್ರ ಕಲೆಯಲ್ಲ ಬದಲಾಗಿ ಬದುಕುವುದು ಕೂಡಾ ಒಂದು ವಿಶಿಷ್ಠವಾದ ಕಲೆ. ಸಾಂಸ್ಕೃತಿಕವಾಗಿ ತೊಡಗಿಸಿಕೊಂಡರೆ ನಮಗೆ ಬದುಕುವ ಕಲೆ ಕರಗತವಾಗುತ್ತದೆ. ಎಳವೆಯಲ್ಲಿಯೇ ಕಲೆಯನ್ನು ಬೆಳೆಸಿಕೊಂಡರೆ ಶಿಸ್ತುಬದ್ದ ಜೀವನ ನಡೆಸಲು ಪೂರಕವಾಗುತ್ತದೆ. ಕಲೆಯು ಆತ್ಮವಿಶ್ವಾಸ ಮತ್ತು ಶಿಸ್ತಿನಿಂದ ಕೂಡಿದ ಅತ್ಯುತ್ತಮ ಜೀವನ ನಡೆಸಲು ಪ್ರೇರಣೆ ನೀಡುತ್ತದೆ. ನಮ್ಮೊಳಗೆ ಆಂತರಿಕ ಸೌಂದರ್ಯದ ವೃದ್ಧಿಗೆ ಕಲೆ ಪ್ರೇರಕವಾಗುತ್ತದೆ. ಜೀವನಾನಂದ ಪಡೆಯಲು ಕಲೆ ಮತ್ತು ಸಂಸ್ಕೃತಿಯು ಅಗತ್ಯವಾಗುತ್ತದೆ. ಕಲೆಯು ನೈಜ ಸತ್ಯವಾಗಿದೆ ಮತ್ತು ಸರ್ವರ…

Read More

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ವತಿಯಿಂದ ಇತ್ತೀಚೆಗೆ ನಮ್ಮನ್ನೆಲ್ಲ ಅಗಲಿದ ಕವಿ ಹೃದಯದ ಹಿರಿಯ ಖ್ಯಾತ ವೈದ್ಯ ಡಾ. ಜಿ.ಜಿ. ಲಕ್ಷ್ಮಣ ಪ್ರಭು ಅವರಿಗೆ ಮಂಗಳೂರಿನ ಹೋಟೆಲ್ ವುಡ್‌ಲ್ಯಾಂಡ್ಸ್ ನಲ್ಲಿ ದಿನಾಂಕ 20-11-2023ರಂದು ಶ್ರದ್ಧಾಂಜಲಿ ಕಾರ್ಯಕ್ರಮ ಏರ್ಪಾಡಿಸಲಾಗಿತ್ತು. ಕ.ಸಾ.ಪ. ಮಂಗಳೂರು ತಾಲೂಕು ಘಟಕದ ಅಧ್ಯಕ್ಷ ಡಾ.ಮಂಜುನಾಥ್ ಎಸ್. ರೇವಣಕರ್ ರವರು ಅಧ್ಯಕ್ಷತೆ ವಹಿಸಿದ್ದರು. ನುಡಿನಮನ ಸಲ್ಲಿಸಿ ಮಾತನಾಡಿದ ಶ್ರೀಮತಿ ಭುವನೇಶ್ವರಿ ಹೆಗ್ಗಡೆಯವರು ಡಾ. ಜಿ.ಜಿ. ಲಕ್ಷ್ಮಣ ಪ್ರಭುಗಳ ವ್ಯಕ್ತಿತ್ವ, ಹಾಸ್ಯಪ್ರಿಯತೆ ಮತ್ತು ಕರ್ತವ್ಯ ಬದ್ಧತೆಯನ್ನು ಸಭೆಗೆ ಪರಿಚಯಿಸಿ, ಒಬ್ಬ ಆದರ್ಶ ವೈದ್ಯನಲ್ಲಿ ಇರಬೇಕಾದ ಎಲ್ಲ ಗುಣವೂ ಅವರಲ್ಲಿ ಇತ್ತು. ಕೆಲವು ವ್ಯಕ್ತಿಗಳಿಗೆ ಪರ್ಯಾಯವೇ ಇರುವುದಿಲ್ಲ. ಅಂಥಹ ವ್ಯಕ್ತಿಗಳಲ್ಲಿ ಡಾ.ಜಿ.ಜಿ. ಲಕ್ಷ್ಮಣ ಪ್ರಭುಗಳು ಒಬ್ಬರು. ಅವರ ಅಗಲಿಕೆಯಿಂದ ಉಂಟಾದ ಶೂನ್ಯತೇ ಹಾಗೆಯೇ ಉಳಿಯುತ್ತದೆ. ಅವರು ವೈದ್ಯರಾಗಿ ಮಾತ್ರವಲ್ಲ, ವ್ಯಕ್ತಿಯಾಗಿಯೂ ಆದರ್ಶಪ್ರಾಯರು ಎಂದು ನುಡಿದರು. ಗೌರವ ಕಾರ್ಯದರ್ಶಿ ಗಣೇಶ್ ಪ್ರಸಾದ್ ಜೀಯವರು ಡಾ.ಜಿ.ಜಿ.ಲಕ್ಷ್ಮಣ ಪ್ರಭುಗಳ…

Read More

ಬಂಟ್ವಾಳ : ಬಂಟ್ವಾಳ ದರ್ಬೆ ಯಕ್ಷಕಾವ್ಯ ತರಂಗಿಣಿ ಮತ್ತು ನೇರಂಬೋಳು ಶ್ರೀ ರಕ್ತೇಶ್ವರಿ ಯುವಕ ಸಂಘ ಇದರ ಜಂಟಿ ಆಶ್ರಯದಲ್ಲಿ ಯಕ್ಷಗಾನ ಕಲಿಕಾ ವಿದ್ಯಾರ್ಥಿಗಳಿಗೆ ‘ಬಣ್ಣಗಾರಿಕೆ ಶಿಬಿರ’ವು ದಿನಾಂಕ 19-11-2023ರಂದು ನೇರಂಬೋಳು ಸಭಾಭವನದಲ್ಲಿ ನಡೆಯಿತು. ರಾಜ್ಯ ಪ್ರಶಸ್ತಿ ಪುರಸ್ಕೃತ, ಯಕ್ಷಗಾನ ಸಂಘಟಕ ಮತ್ತು ಕಲಾವಿದರಾದ ಶ್ರೀ ಅಶೋಕ ಶೆಟ್ಟಿ ಸರಪಾಡಿ ಇವರು ಶಿಬಿರವನ್ನು ಉದ್ಘಾಟಿಸಿ, ಯಕ್ಷಕಾವ್ಯ ತರಂಗಿಣಿ ಮಾಡುತ್ತಿರುವ ಕಾರ್ಯವನ್ನು ಶ್ಲಾಘಿಸಿ, ಯಕ್ಷಗಾನದ ಮಹತ್ವವನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ಪ್ರಸಾಧನ ಕಲಾವಿದ ಶ್ರೀ ಪ್ರಭಾಕರ ಶೆಟ್ಟಿ ತೆಂಕಕಾರಂದೂರು ಇವರನ್ನು ಸನ್ಮಾನಿಸಲಾಯಿತು. ಇವರು ಬಣ್ಣಗಾರಿಕೆಯನ್ನು ಪ್ರಾತ್ಯಕ್ಷಿಕೆಯ ಮೂಲಕ ಮಕ್ಕಳಿಗೆ ಬಣ್ಣ ಹೇಗೆ ಹಚ್ಚುವುದು ಮತ್ತು ಯಕ್ಷಗಾನದಲ್ಲಿ ಬಣ್ಣದ ಪಾತ್ರ ಹೇಗೆ ಎಂಬ ಬಗ್ಗೆ ತಿಳಿಸಿಕೊಟ್ಟರು. ಈ ಕಾರ್ಯಕ್ರಮವು ಶ್ರೀ ಸಂಜೀವ ಕಜೆಪದವು ಇವರ ಮಾರ್ಗದರ್ಶನದಲ್ಲಿ ನಡೆದು ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಶ್ರೀ ರವಿ ನೇರಂಬೋಳು ಕಾರ್ಯಕ್ರಮದ ನಿರೂಪಣೆ ಮಾಡಿದರು. ಈ ಬಣ್ಣಗಾರಿಕೆ ಯಕ್ಷಗಾನ ಶಿಬಿರದಲ್ಲಿ ಯಕ್ಷಕಾವ್ಯ ತರಂಗಿಣಿ ದರ್ಬೆ ಮತ್ತು…

Read More

ಮಂಗಳೂರು : ಹರಿಕಥಾ ಪರಿಷತ್ (ರಿ.) ಮಂಗಳೂರು ಇದರ ವತಿಯಿಂದ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ಎಂಟನೇ ತರಗತಿಯಿಂದ ಪಿಯುಸಿ ಎರಡನೇ ವರ್ಷದವರೆಗಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ಆಯೋಜಿಸಿದ ‘ಹರಿಕಥಾ ಸ್ಪರ್ಧೆ 2023’ ಪ್ರಾಥಮಿಕ ಹಂತದ ಸ್ಪರ್ಧೆಗೆ ಹದಿನೈದು ನಿಮಿಷಗಳಿಗೆ ಮೀರದ ಹರಿಕಥಾ ಪ್ರಸ್ತುತಿಯ ತಮ್ಮ ವಿಡಿಯೋವನ್ನು ಈ ಕೆಳಗೆ ನೀಡಿರುವ ಈ ಮೇಲ್ ಅಥವಾ ವಾಟ್ಸಪ್ ಸಂಖ್ಯೆಗೆ ದಿನಾಂಕ 15-12-2023ರ ಒಳಗಾಗಿ ಹೆಸರು, ವಿದ್ಯಾಸಂಸ್ಥೆ, ವಿಳಾಸ, ಮೊಬೈಲ್ ಸಂಖ್ಯೆ ಇತ್ಯಾದಿ ವಿವರಗಳೊಂದಿಗೆ ಕಳುಹಿಸಬೇಕು. ಇದರಲ್ಲಿ ಆಯ್ಕೆಯಾದ ಹನ್ನೆರಡು ಮಂದಿ ಸ್ಪರ್ಧಿಗಳಿಗೆ ದಿನಾಂಕ 31-12-2023ರಂದು ನಡೆಯಲಿರುವ ಅಂತಿಮ ಸುತ್ತಿನ ಸ್ಪರ್ಧೆಗೆ ಅವಕಾಶ ನೀಡಲಾಗುವುದು. ಅಂತಿಮ ಸುತ್ತಿನಲ್ಲಿ 25 ನಿಮಿಷಗಳ ಸರ್ವಾಂಗೀಣ ಹರಿಕಥಾ ಪ್ರದರ್ಶನವನ್ನು ವೇದಿಕೆಯಲ್ಲಿ, ಪಕ್ಕವಾದ್ಯಗಳೊಂದಿಗೆ ಸ್ಪರ್ಧಿಯು ನೀಡಬೇಕಾಗುವುದು. ನಿರ್ಣಾಯಕರ ತೀರ್ಮಾನ ಅಂತಿಮವಾಗಿರುತ್ತದೆ. ವಿಡಿಯೋ ಕಳುಹಿಸಬೇಕಾದ ವಾಟ್ಸಪ್‌ ಸಂಖ್ಯೆ : 9945370655 ಮತ್ತು ಇಮೇಲ್ ವಿಳಾಸ : [email protected] ಈ ಸ್ಪರ್ಧೆಯ ವಿಜೇತರಿಗೆ ಪ್ರಥಮ ಬಹುಮಾನ ರೂ.10,000/- ದ್ವಿತೀಯ ಬಹುಮಾನ…

Read More

ಕಾಸರಗೋಡು : ರಂಗ ಚಿನ್ನಾರಿ ಕಾಸರಗೋಡು (ರಿ.) ಇದರ ಸಂಗೀತ ಘಟಕವಾದ ‘ಸ್ವರ ಚಿನ್ನಾರಿ’ ಪ್ರಸ್ತುತ ಪಡಿಸುವ 2ನೇ ಸರಣಿ ಕಾರ್ಯಕ್ರಮ ‘ಕನಕ ಸ್ಮರಣೆ’ ದಿನಾಂಕ 28-11-2023ರಂದು ಸಂಜೆ 5 ಗಂಟೆಗೆ ಕಾಸರಗೋಡಿನ ಕರಂದಕ್ಕಾಡು ಪದ್ಮಗಿರಿ ಕಲಾ ಕುಟೀರದಲ್ಲಿ ನಡೆಯಲಿದೆ.  ಖ್ಯಾತ ಕವಿಗಳಾದ ಶ್ರೀಕೃಷ್ಣಯ್ಯ ಅನಂತಪುರ ಇವರ ಅಧ್ಯಕ್ಷತೆಯಲ್ಲಿ ತುಳು ಸಾಹಿತಿ ಶ್ರೀ ಸತೀಶ್ ಸಾಲಿಯಾನ್ ಮತ್ತು ಕಾಸರಗೋಡಿನ ಸರಕಾರಿ ಕಾಲೇಜು ಸಹ ಪ್ರಾಧ್ಯಾಪಕಿಯಾದ ಡಾ. ಆಶಾಲತಾ ಇವರುಗಳು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಸಂಜೆ 5.30ರಿಂದ ನಡೆಯಲಿರುವ ‘ಕನಕ ದಾಸರ ಗೀತೆಗಳ ‘ಸಂಗೀತ ರಸ ಸಂಜೆ’ಯಲ್ಲಿ ಹಾಡಲಿರುವ ಗಾಯಕರು ಶ್ರೀ ಕಿಶೋರ್ ಪೆರ್ಲ, ಶ್ರೀ ಗಣೇಶ್ ಪ್ರಸಾದ್ ನಾಯಕ್, ಶ್ರೀ ರತ್ನಾಕರ್ ಎಸ್. ಓಡಂಗಲ್ಲು, ಶ್ರೀಮತಿ ಪ್ರತಿಜ್ಞಾ ರಂಜಿತ್, ಶ್ರೀಮತಿ ಅಕ್ಷತಾ ಪ್ರಕಾಶ್, ಶ್ರೀಮತಿ ಜಯಶ್ರೀ ಅನಂತಪುರ, ಶ್ರೀಮತಿ ಬಬಿತಾ ಆಚಾರ್ಯ. ಕೀಬೋರ್ಡಿನಲ್ಲಿ ಪುರುಷೋತ್ತಮ್ ಕೊಪ್ಪಲ್, ಹಾರ್ಮೋನಿಯಂನಲ್ಲಿ ಸತ್ಯನಾರಾಯಣ ಐಲ, ರಿದಂ ಪ್ಯಾಡಿನಲ್ಲಿ ಪ್ರಭಾಕರ್ ಮಲ್ಲ ಮತ್ತು ತಬಲಾದಲ್ಲಿ ಲವಕುಮಾರ್…

Read More

ಪುತ್ತೂರು : ನಾಟ್ಯರಂಗ ಪುತ್ತೂರು ಪ್ರಸ್ತುತ ಪಡಿಸಿದ ‘ನೃತ್ಯ ಹರ್ಷ’ ಕಾರ್ಯಕ್ರಮವು ವಿವೇಕಾನಂದ ಕನ್ನಡ ಶಾಲಾ ಸಭಾಂಗಣದಲ್ಲಿ ದಿನಾಂಕ 19-11-2023ರಂದು ಸಂಪನ್ನಗೊಂಡಿತು. ಕರ್ನಾಟಕ ಕಲಾಶ್ರೀ ಶಾರದಾಮಣಿ ಶೇಖರ್ ಅವರು ದೀಪ ಪ್ರಜ್ವಲಿಸಿ ಮಾತನಾಡಿ “ಕಲೆ ವ್ಯಕ್ತಿತ್ವವನ್ನು ಅರಳಿಸುತ್ತದೆ. ಬಾಲ್ಯದಿಂದಲೇ ಮಕ್ಕಳಿಗೆ ಹೆತ್ತವರಾದ ನಾವು ನೀಡುವ ಪ್ರೋತ್ಸಾಹ, ಪ್ರೇರಣೆ ಮಕ್ಕಳಲ್ಲಿ ಕಲಾಸಕ್ತಿಯನ್ನು ಬೆಳೆಸುತ್ತದೆ. ಈ ನಿಟ್ಟಿನಲ್ಲಿ ನೃತ್ಯ, ರಂಗಕಲೆಯಲ್ಲಿ ಸ್ವ-ಸಾಮರ್ಥ್ಯ ಹಾಗೂ ನಿರಂತರ ಶ್ರಮಗಳಿಂದ ವಿಭಿನ್ನ ಆಲೋಚನೆ ಹಾಗೂ ಅನುಷ್ಠಾನಗಳಿಂದ ಗುರುತಿಸಿಕೊಂಡಿರುವ ನೃತ್ಯ ಗುರುಗಳಾದ ಮಂಜುಳಾ ಸುಬ್ರಹ್ಮಣ್ಯ ಇವರ ಸಾರಥ್ಯದಲ್ಲಿ ಮಕ್ಕಳ ಕಲಾ ಪ್ರಜ್ಞೆ ಅರಳಿ ಬೆಳಗಲಿ” ಎಂದು ಶುಭ ಹಾರೈಸಿದರು. ಅಭ್ಯಾಗತರಾಗಿ ಉಪಸ್ಥಿತರಿದ್ದ ಶಾಲಾ ಆಡಳಿತ ಸಮಿತಿಯ ಸದಸ್ಯರೂ, ದಂತ ವೈದ್ಯರೂ ಆದ ಡಾಕ್ಟರ್ ಆಶಾ ಇವರು “ಭಾರತೀಯ ಶ್ರೇಷ್ಠ ಕಲಾ ಪ್ರಕಾರವಾದ ಶಾಸ್ತ್ರೀಯ ನೃತ್ಯ ಅಭಿನಯಕ್ಕೆ ಇಂದು ಸಾಕ್ಷಿಯಾದ ವಿವೇಕಾನಂದ ಕನ್ನಡ ಶಾಲೆ ಸದಾ ಈ ಬಗೆಯ ಕಾರ್ಯಕ್ರಮಗಳಿಗೆ ಸ್ಪಂದಿಸುತ್ತಲೇ ಬಂದಿದೆ. ಇಂದಿಗ ಇಲ್ಲಿ ಪ್ರದರ್ಶನ ನೀಡುತ್ತಿರುವ ಎಲ್ಲಾ ಮಕ್ಕಳಿಗೂ,…

Read More

ಪುತ್ತೂರು : ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ, ಶಿಕ್ಷಣ ಇಲಾಖೆ ಪುತ್ತೂರು, ಗ್ರಾಮ ಪಂಚಾಯತ್ ಬಜತ್ತೂರು ಸಹಕಾರದೊಂದಿಗೆ, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಸಂಯೋಜನೆಯೊಂದಿಗೆ, ಮಿತ್ರಂಪಾಡಿ ಜಯರಾಮ ರೈಯವರ ಮಹಾಪೋಷಕತ್ವದಲ್ಲಿ ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಘೋಷವಾಕ್ಯದಲ್ಲಿ ನಡೆಯುವ ಗ್ರಾಮ ಸಾಹಿತ್ಯ ದಶ ಸಂಭ್ರಮ ಕಾರ್ಯಕ್ರಮವು ಈ ಬಾರಿ ಬಜತ್ತೂರು ಗ್ರಾಮದ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ದಿನಾಂಕ 25-11-2023ರಂದು ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಗಂಗಾಧರ ಪಿ.ಎನ್. ಅವರು ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿರುವ ಶ್ರೀಮತಿ ವಿಮಲಾ ಭರತ್, ಬಜತ್ತೂರು ಕ್ಲಸ್ಟರ್ ಸಿ.ಆರ್‌.ಪಿ. ಮಂಜುನಾಥ್ ಕೆ.ವಿ. ಹಾಗೂ ಉಪ್ಪಿನಂಗಡಿ ಹೋಬಳಿ ಕ.ಸಾ.ಪ. ನಿಯೋಜಿತ ಅಧ್ಯಕ್ಷರಾದ ಶ್ರೀ ಕರುಣಾಕರ ಸುವರ್ಣ, ಕೋಶಾಧ್ಯಕ್ಷರಾದ ಡಾ. ಹರ್ಷ ಕುಮಾರ್ ರೈ, ಶ್ರೀ ಹಿರಿಯ ಪತ್ರಕರ್ತರಾದ ಉದಯಕುಮಾರ್ ಯು.ಎಲ್. ಅವರು ಭಾಗವಹಿಸಲಿದ್ದಾರೆ. ಪುತ್ತೂರು ಉಮೇಶ್ ನಾಯಕ್ ಅವರು ಸಭಾಧ್ಯಕ್ಷತೆಯನ್ನು ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರು ಸಾಹಿತಿಗಳಾದ ವಿಲ್ಫ್ರೆಡ್…

Read More

ಉಡುಪಿ : ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಹೆಬ್ರಿ ತಾಲೂಕು ಘಟಕ ಮತ್ತು ಗ್ರಾಮ ಪಂಚಾಯತ್ ಗ್ರಂಥಾಲಯ ಅರಿವು ಕೇಂದ್ರ ಹೆಬ್ರಿ ಇವರ ಸಹಯೋಗದೊಂದಿಗೆ ‘ದತ್ತಿ ಉಪನ್ಯಾಸ’ ಹಾಗೂ ‘ಓದುವ ಬೆಳಕು’ ಕಾರ್ಯಕ್ರಮ ದಿನಾಂಕ 18-11-2023ರಂದು ಹೆಬ್ರಿಯ ಗ್ರಾಮ ಪಂಚಾಯತ್ ಗ್ರಂಥಾಲಯ ಅರಿವು ಕೇಂದ್ರದಲ್ಲಿ ಜರುಗಿತು. ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾದ ತಿಂಗಳ ಸಡಗರ ಕಾರ್ಯಕ್ರಮದಲ್ಲಿ ಅಂಬಲಪಾಡಿ ಜಾನಕಿ ವ್ಯಾಸ ಬಲ್ಲಾಳ ದತ್ತಿ ಹಾಗೂ ಶ್ರೀ ಸದಾನಂದ ಸುವರ್ಣ ದತ್ತಿ ಉಪನ್ಯಾಸವು ಅ.ಪೊಳಲಿ ಬಾಲಕೃಷ್ಣ ಶೆಟ್ಟಿ ಮತ್ತು ಡಾ.ಶಿವರಾಮ ಕಾರಂತ ಬದುಕು ಮತ್ತು ಬರಹ ಎಂಬ ಎರಡು ದತ್ತಿ ಉಪನ್ಯಾಸಗಳನ್ನು ಹಮ್ಮಿಕೊಳ್ಳಲಾಗಿತ್ತು. ಅಮೃತ ಭಾರತಿ ಪ್ರೌಢಶಾಲೆ ಹೆಬ್ರಿ ಇಲ್ಲಿಯ ಕನ್ನಡ ಅಧ್ಯಾಪಕರಾದ ಮಹೇಶ್ ಹೈಕಾಡಿ ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ ನೀಡಿದರು. ಗ್ರಾಮ ಪಂಚಾಯತ್ ಗ್ರಂಥಾಲಯದ ಅರಿವು ಕೇಂದ್ರದ ವತಿಯಿಂದ ನಡೆಸಲಾದ ‘ಓದುವ ಬೆಳಕು’ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ತಾವು ಓದಿದ ಮೆಚ್ಚಿನ…

Read More

ಮಡಿಕೇರಿ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಹಾಕತ್ತೂರು ಸರ್ಕಾರಿ ಪ್ರೌಢ ಶಾಲೆಯ ಸಂಯುಕ್ತಾಶ್ರಯದಲ್ಲಿ ದಿನಾಂಕ 17-11-2023ರಂದು ಹಾಕತ್ತೂರು ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಬಿ.ಆರ್. ಸಾಯಿನಾಥ್’ ಮತ್ತು ತ್ರಿಭಾಷಾ ಸಾಹಿತಿ ಮುಲ್ಲೇಂಗಡ ದಿ. ಬೇಬಿ ಚೋಂದಮ್ಮ ಅವರ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಮಡಿಕೇರಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಬಿ.ಸಿ. ದೊಡ್ಡೇ ಗೌಡ ಇವರು ಉದ್ಘಾಟಿಸಿ ಮಾತನಾಡುತ್ತಾ “ಶಾಲೆಗಳಿಗೆ ಸಾಹಿತ್ಯವನ್ನು ಕೊಂಡೊಯ್ದು ವಿದ್ಯಾರ್ಥಿಗಳನ್ನು ಸಾಹಿತ್ಯಾಸಕ್ತರನ್ನಾಗಿ ಕನ್ನಡ ಭಾಷೆಯನ್ನು ಬೆಳೆಸುವ ಕಾರ್ಯಕ್ರಮ ಪ್ರತಿಯೊಂದು ಶಾಲೆಗಳಲ್ಲಿ ವ್ಯವಸ್ಥಿತವಾಗಿ ನಡೆಯಬೇಕು” ಎಂದು ನುಡಿದರು. ಕೊಡಗಿನ ಮಹಿಳಾ ಸಾಹಿತ್ಯದಲ್ಲಿ ಕಥೆಗಾರ್ತಿ ಗೌರಮ್ಮ ಅವರ ಸಾಧನೆಯ ಕುರಿತು ಮಾತನಾಡಿ, “ನಂಜನಗೂಡು ತಿರುಮಲಾಂಬಾ ಕಲ್ಯಾಣಮ್ಮನವರ ಸಮಕಾಲೀನರಾಗಿ ಗೌರಮ್ಮನವರು ಬರೆದ ಪುಸ್ತಕಗಳು ಇಂದು ಓದುಗರ ಮನದಲ್ಲಿ ಅಚ್ಚಳಿಯದೆ ಉಳಿದಿವೆ. ಹತ್ತನೇ ಶತಮಾನದ ಕವಿ ನಾಗವರ್ಮ 15ನೇ ಶತಮಾನದ ಜೈನ ಕವಿ ದೇವಪ್ಪ ರೆ.ಫಾ.ಕಿಟಲ್ ಅನಂತರ ಪಂಜೆ ಮಂಗೇಶರಾಯರು, ಭಾರತೀಸುತರು,…

Read More