Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆಯು ಮಂಗಳೂರು ವಿ.ವಿ. ಡಾ.ದಯಾನಂದ ಪೈ, ಶ್ರೀ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ಯಕ್ಷ ಭಾರತಿ ಪುತ್ತೂರು ಸಹಯೋಗದೊಂದಿಗೆ ನಡೆಸುವ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮ, ಹನ್ನೊಂದನೇ ವರ್ಷದ ನುಡಿ ಹಬ್ಬ ‘ಶ್ರೀಹರಿ ಚರಿತ್ರೆ’ ಯಕ್ಷಗಾನ ತಾಳಮದ್ದಳೆ ಸಪ್ತಾಹ – 2023 ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ರವೀಂದ್ರ ಕಲಾಭವನದಲ್ಲಿ ದಿನಾಂಕ 19-11-2023ರಂದು ಉದ್ಘಾಟನೆಗೊಂಡಿತು. ಈ ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದ ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇವರು ಮಾತನಾಡುತ್ತಾ “ಯಕ್ಷಗಾನ ಹಲವು ರೋಗಗಳಿಗೆ ಔಷಧ ರೂಪದಲ್ಲಿ ಪರಿಣಾಮ ಬೀರುತ್ತದೆ. ಯಕ್ಷಗಾನ ವೀಕ್ಷಣೆಯಿಂದ ಮಾನಸಿಕ ಒತ್ತಡ ದೂರವಾಗಿ ನೆಮ್ಮದಿ ಪಡೆಯಬಹುದು. ತಾಳಮದ್ದಳೆ ಸಪ್ತಾಹದ ಮೂಲಕ ಯಕ್ಷಾಂಗಣ ಸಂಸ್ಥೆ ಕನ್ನಡವನ್ನು ಉಳಿಸುವ ಕೆಲಸ ಮಾಡುತ್ತಿದೆ” ಎಂದು ಹೇಳಿದರು. ಮುಖ್ಯ ಅತಿಥಿಯಾಗಿದ್ದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ “ಇಂದಿನ ಪೀಳಿಗೆ ಮೊಬೈಲ್ ವೀಕ್ಷಣೆಗೆ ಸಮಯ…
ಕಾಸರಗೋಡು : ಕಾಸರಗೋಡಿನ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಸ್ಥೆ ರಂಗ ಚಿನ್ನಾರಿಯ ಅಂಗ ಸಂಸ್ಥೆಯಾದ ನಾರಿ ಚಿನ್ನಾರಿಯ ಹನ್ನೊಂದನೆಯ ಸರಣಿ ಕಾರ್ಯಕ್ರಮವು ದಿನಾಂಕ 19-11-2023ರಂದು ಚತುರ್ಭಾಷೆಗಳ ನಾರಿಯರ ಸಮ್ಮಿಲನದ ‘ರಸ ಪಯಸ್ವಿನಿ’ ಪದ್ಮಗಿರಿ ಕಲಾಕುಟೀರ ಕರಂದಕ್ಕಾಡಿನಲ್ಲಿ ಅರ್ಥಪೂರ್ಣವಾಗಿ ಮತ್ತು ಯಶಸ್ವಿಯಾಗಿ ಸಂಪನ್ನಗೊಂಡಿತು. ಪ್ರಪ್ರಥಮವಾಗಿ ಕಾಸರಗೋಡಿನ ನಾಲ್ಕು ಭಾಷೆಗಳ ಮಹಿಳೆಯರು ಒಟ್ಟಾಗಿ ಒಂದೇ ವೇದಿಕೆಯಲ್ಲಿ ಕಲೆತು ಸಂಭ್ರಮಿಸಿದರು. ಈ ವಿಶಿಷ್ಟ ಕಾರ್ಯಕ್ರಮವನ್ನು ಹಿರಿಯ ಲೇಖಕಿ, ವಿಶ್ರಾಂತ ಪ್ರಾಧ್ಯಾಪಕಿ ಡಾ. ಪ್ರಮೀಳಾ ಮಾಧವ್ (ಕನ್ನಡ), ಸಂಶೋಧಕಿ, ಸಾಹಿತಿ, ಕುಶಾಲಾಕ್ಷಿ ಕುಲಾಲ್ (ತುಳು), ಗಾಯಕಿ, ಗೃಹಿಣಿ ಮಾಯಾ ಮುಕುಂದ ರಾಜ್ (ಕೊಂಕಣಿ), ಸಮಾಜ ಸೇವಕಿ, ಮಾನವ ಹಕ್ಕು ಸಂರಕ್ಷಣಾ ಸಮಿತಿ ಅಧ್ಯಕ್ಷೆ ಜುಲೇಖಾ ಮಾಹಿನ್ (ಮಲಯಾಳ) ಜತೆಗೂಡಿ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಡಾ. ಪ್ರಮೀಳಾ ಮಾಧವ್ “ನಾಲ್ಕು ಭಾಷೆಗಳ ಅಕ್ಕತಂಗಿಯರೆಲ್ಲ ಸೇರಿ ಸಂತೋಷಗೊಳ್ಳುವ ಸಂದಭ೯ವನ್ನು ಮೊದಲ ಬಾರಿಗೆ ಸೃಷ್ಟಿಸಿದ ನಾರಿಚಿನ್ನಾರಿಯ ಹೆಜ್ಜೆಯನ್ನು ಶ್ಲಾಘಿಸಿದರು. ಹೆಣ್ಣು ಮಕ್ಕಳ ಕುರಿತಾಗಿ ಇರುವ ಅನೇಕ ಪೂವಾ೯ಗ್ರಹಗಳು ಕಡಿಮೆಯಾಗಿವೆ.…
ವಿರಾಜಪೇಟೆ : ಮೊಗರಗಲ್ಲಿಯಲ್ಲಿ ಸಾಧಿಕ್ ಆರ್ಟ್ ಗ್ಯಾಲರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ‘ಕಲಾ ಉತ್ಸವ ಕೊಡಗು -2023’ ವರ್ಣಚಿತ್ರಗಳು, ಶಿಲ್ಪಗಳು, ಅನುಸ್ಥಾಪನ ಕಲೆ, ಛಾಯಾಗ್ರಹಣ ಇವುಗಳ ತಯಾರಿಕೆ ಮತ್ತು ಪ್ರದರ್ಶನವು ದಿನಾಂಕ 11-11-2023ರಂದು ಉದ್ಘಾಟನೆಗೊಂಡಿತು. ಈ ಕಾರ್ಯಕ್ರಮವು ದಿನಾಂಕ 31-12-2023ರ ತನಕ ನಡೆಯಲಿದೆ. ಕೊಡಗು ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ ಈ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿ “ಕೊಡಗು ರಮ್ಯ ಪರಿಸರದ, ಪ್ರಕೃತಿ ಸೊಬಗಿನ ನಾಡು. ಇದು ಕಲಾವಿದರಿಗೆ ಸ್ಫೂರ್ತಿ ನೀಡುತ್ತದೆ. ಇದನ್ನೇ ಕುಂಚದಲ್ಲಿ ಅರಳಿಸಿದರೆ ಉತ್ತಮ ಕಲಾ ಚಿತ್ರ ಮೂಡಿ ಬರುತ್ತದೆ. ಆದ್ದರಿಂದ ಕಲಾವಿದರಿಗೆ ಒತ್ತಾಸೆ ನೀಡುವಂತಹ ತಾಣಗಳನ್ನು ಆರಿಸಿ ಚಿತ್ರಕಲಾ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ಕಲೆ, ಸಾಹಿತ್ಯಕ್ಕೆ ಕೊಡಗು ಮರುಭೂಮಿಯಂತೆ. ವಿದ್ಯಾವಂತರಿದ್ದರೂ ಕಲೆ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಬರುವುದಿಲ್ಲ ಹಾಗೂ ಪ್ರೋತ್ಸಾಹ ನೀಡುವುದಿಲ್ಲ. ಕಲಾವಿದರಿಗೆ ಪ್ರೋತ್ಸಾಹ ನೀಡಿ ವೇದಿಕೆ ಒದಗಿಸಬೇಕು” ಎಂದು ಅಭಿಪ್ರಾಯಪಟ್ಟರು. ಕೊಡಗು ಜಾನಪದ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಮುನೀರ್…
ಗದಗ : ಲಕ್ಷ್ಮೇಶ್ವರದ ಕಲಾ ವೈಭವ ಸಾಂಸ್ಕೃತಿಕ ವಿವಿದೋದ್ದೇಶ ಸಂಸ್ಥೆಯು ಒಂದು ದಿನದ ಭರತನಾಟ್ಯ ಕಾರ್ಯಗಾರವನ್ನು ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿತ್ತು. ಯುವ ಭರತನಾಟ್ಯ ವಿದ್ವಾಂಸರಾದ ವಿದ್ವಾನ್ ಮಂಜುನಾಥ ಎನ್. ಪುತ್ತೂರು ಇವರು ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ದಿನಾಂಕ 19-11-2023ರಂದು ಈ ಕಾರ್ಯಕ್ರಮವನ್ನು ನಡೆಸಿಕೊಂಡರು. ಸಂಸ್ಥೆಯ ನಿರ್ದೇಶಕಿಯಾಗಿರುವ ಯುವ ಭರತನಾಟ್ಯ ಕಲಾವಿದೆ ಕು. ಭವ್ಯ.ಎಸ್ ಕತ್ತಿ ಇವರ ಶಿಷ್ಯರು ಈ ಕಾರ್ಯಾಗಾರದ ಪ್ರಯೋಜನವನ್ನು ಪಡೆದುಕೊಂಡರು. ಇದು ಮಂಜುನಾಥ್ ಇವರ 77ನೇ ಕಾರ್ಯಾಗಾರವಾಗಿದೆ.
ಶಿವಮೊಗ್ಗ : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ) ಬೆಂಗಳೂರು, ಇದರ ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ಮಂಗಳೂರಿನ ಮಂಗಳಾ ಆಸ್ಪತ್ರೆಯ ಆಯುರ್ವೇದ ಹಾಗೂ ಮೂಲವ್ಯಾಧಿ ಕ್ಷಾರ ಚಿಕಿತ್ಸಾ ತಜ್ಞ ಮತ್ತು ಬರಹಗಾರ ಡಾ. ಸುರೇಶ ನೆಗಳಗುಳಿ ಇವರಿಗೆ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ದಿನಾಂಕ 19-11-2023ದಂದು ಶಿವಮೊಗ್ಗದ ಕರ್ನಾಟಕ ಸಭಾಭವನದಲ್ಲಿ ಕರ್ನಾಟಕ ಮರು ನಾಮಕರಣದ ಸುವರ್ಣ ಸಂಭ್ರಮದ ನಿಮಿತ್ತ ಏರ್ಪಡಿಸಲಾಗಿದ್ದ ಪಂಚ ಭಾಷಾ ಕವಿಗೋಷ್ಠಿಯಲ್ಲಿ ಈ ಪ್ರಶಸ್ತಿಯನ್ನು ನೀಡಲಾಯಿತು. ವೇದಿಕೆ ಅಧ್ಯಕ್ಷ ಕೊಟ್ರೇಶ್ ಉಪ್ಪಾರ್, ಜಿಲ್ಲಾಧ್ಯಕ್ಷೆ ಡಾ. ಹಸೀನಾ ಕೆ.ಹೆಚ್., ರಂಜಾನ್ ದರ್ಗಾ, ನಾಗರಾಜ್ ದೊಡ್ಮನಿ, ಖ್ಯಾತ ಗಜಲ್ ಕವಿ ಸಿದ್ಧರಾಮ ಹೊನ್ಕಲ್, ಮಂಗಳೂರಿನ ನ್ಯಾಯವಾದಿ ಕವಯಿತ್ರಿ ವೇದಿಕೆಯ ಉಪಾಧ್ಯಕ್ಷೆ ಶ್ರೀಮತಿ ಪರಿಮಳಾ ಮಹೇಶ್, ಉಳುವಂಗಡ ಕಾವೇರಿ ಉದಯ, ಬಿ.ಎಂ. ಬಶೀರ್, ನಾಗೇಶ್ ಎಂ. ಅನ್ವೇಕರ, ಉಳ್ಳಾಲದ ಆರಕ್ಷಕ ಇಲಾಖೆಯ ಮನ್ಸೂರ್ ಮುಲ್ಕಿ, ಲತಾ ಎಂ.ಕೆ. ತುರುವೇಕೆರೆ, ಜೆ.ಜಿ. ನರಸಿಂಹ ಮೂರ್ತಿ ಮತ್ತಿತರ ಹಲವು ಗಣ್ಯರು ಈ…
ಸಕಾರಾತ್ಮಕ ಚಿಂತನೆಗಳು ಮಾತ್ರ ನಮ್ಮನ್ನು ಗುರಿಯಡೆಗೆ ತಲುಪಿಸುವುದಿಲ್ಲ, ಅದರೊಂದಿಗೆ ಕಠಿಣ ಪರಿಶ್ರಮವೂ ಬೇಕು ಎಂಬ ಮಾತಿದೆ. ಬಹುಶ: ನಂದಾವರ ದಂಪತಿಗಳಲ್ಲಿ ಇಂದು ಇಂತಹ ಕಠಿಣ ಪರಿಶ್ರಮವು ಜೊತೆಗಿತ್ತು ಎಂದರೆ ತಪ್ಪಾಗಲಾರದು. ಸುಂದರಿ ಮತ್ತು ವಾಮನ ಮೇಷ್ಟ್ರ ಹಿರಿಯ ಮಗಳಾಗಿ ದಿನಾಂಕ 21-11-1950ರಲ್ಲಿ ನಮ್ಮೆಲ್ಲರ ಪ್ರೀತಿಯ ಕೆ.ವಿ. ಚಂದ್ರಕಲಾ ಮೇಡಂ ಜನಿಸಿದರು. ಮುನಿಸಿಪಲ್ ಹಾಯರ್ ಪ್ರೈಮರಿ ಶಾಲೆ, ಕಾಪಿಕಾಡು ಇಲ್ಲಿ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಗಿಸಿ, ಹೈಸ್ಕೂಲ್ ವಿದ್ಯಾಭ್ಯಾಸವನ್ನು ಬೆಸೆಂಟ್ ಬಾಲಿಕಾ ಪ್ರೌಢಶಾಲೆ ಕೊಡಿಯಾಲ್ ಬೈಲಿನಲ್ಲಿ ಪೂರೈಸಿದರು. ಪದವಿ ಪೂರ್ವ ಶಿಕ್ಷಣವನ್ನು ನಗರದ ಸರಕಾರಿ ಕಾಲೇಜಿನಲ್ಲಿ ಪಡೆದ ಇವರು ನಂತರ ಹಿಂದಿ ರಾಷ್ಟ್ರಭಾಷಾ ಪ್ರವೀಣ ಪರೀಕ್ಷೆಯಲ್ಲಿ ದ್ವಿತೀಯ ಶ್ರೇಣಿ ಹಾಗೂ ಸಂಸ್ಕೃತ ಕೋವಿದ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಗೊಂಡರು. ಮೈಸೂರು ವಿಶ್ವವಿದ್ಯಾನಿಲಯದ ಎರಡು ವರ್ಷದ ಕನ್ನಡ ಡಿಪ್ಲೋಮಾ ಪದವಿಯನ್ನು ಮೂರನೇಯ ರ‍್ಯಾಂಕಿನೊಂದಿಗೆ ಉತ್ತಿರ್ಣರಾದ ನಂತರ ಬಜ್ಪೆಯ ಹೋಲಿ ಫ್ಯಾಮಿಲಿ ಹೈಸ್ಕೂಲಿನಲ್ಲಿ ಕನ್ನಡ ಪಂಡಿತರಾಗಿ ವೃತ್ತಿಗೆ ಸೇರಿಕೊಂಡರು. ಮಂಗಳ ಗಂಗೋತ್ರಿಯಲ್ಲಿ ಪ್ರಥಮ ಶ್ರೇಣಿಯಲ್ಲಿ ಕನ್ನಡ…
ಕಟೀಲು : ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ ಸಮಾರಂಭವು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸರಸ್ವತೀ ಸದನದಲ್ಲಿ ದಿನಾಂಕ 18-11-2023ರಂದು ಅತ್ಯಂತ ಯಶಸ್ವಿಯಾಗಿ ಜರಗಿತು. “ಸಂಸ್ಕಾರ ನೀಡುವ, ಸಂಸ್ಕೃತಿ ಉಳಿಸುವ, ಶ್ರೀಮಂತ ಕಲೆಯಾದ ಯಕ್ಷಗಾನದ ಕಲಾವಿದರ ತ್ಯಾಗ, ಶ್ರಮ ದೊಡ್ಡದು. ಅವರು ಸದಾ ಅಭಿನಂದನೀಯರು. ಅಂತಹ ಕಲಾವಿದರನ್ನು ಗೌರವಿಸುವುದು ಸ್ತುತ್ಯರ್ಹ” ಎಂದು ಪ್ರಶಸ್ತಿ ಪ್ರದಾನ ಮಾಡಿ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ತಮ್ಮ ಅನುಗ್ರಹ ಸಂದೇಶದಲ್ಲಿ ನುಡಿದರು. ಕಲಾವಿದರಾದ ಚಿದಂಬರಬಾಬು, ಕೋಟ ಗೋವಿಂದ ಉರಾಳ, ಮುಂಡ್ಕೂರು ವಸಂತ ಶೆಟ್ಟಿ, ತೀರ್ಥಹಳ್ಳಿ ಶಿವಶಂಕರ ಭಟ್, ಸಿದ್ದಾಪುರ ಸಂಜೀವ ಕೊಠಾರಿ, ಸೀತೂರು ಅನಂತಪದ್ಮನಾಭ ರಾವ್, ಕವ್ವಾಳೆ ಗಣಪತಿ ರಾಮಚಂದ್ರ ಭಾಗ್ವತ, ಮಂದಾರ್ತಿ ರಘುರಾಮ ಮಡಿವಾಳ, ಕೋಡಿ ವಿಶ್ವನಾಥ ಗಾಣಿಗ, ಸಿದ್ದಾಪುರ ಅಶೋಕ್ ಭಟ್, ಗುಣವಂತೆ ಸುಬ್ರಾಯ ನಾರಾಯಣ ಭಂಡಾರಿ, ಚೋರಾಡಿ ವಿಠಲ ಕುಲಾಲ್, ಎರ್ಮಾಳು ವಾಸುದೇವ ರಾವ್, ಈಚಲಕೊಪ್ಪ ಪ್ರಭಾಕರ ಹೆಗಡೆ, ಮಧೂರು ರಾಧಾಕೃಷ್ಣ ನಾವಡ, ಪಡುಬಿದ್ರೆ ರತ್ನಾಕರ ಆಚಾರ್ಯ,…
ಮಂಗಳೂರು : ಸುರತ್ಕಲ್ ವಿದ್ಯಾದಾಯಿನೀ ಪ್ರೌಢಶಾಲೆಯಲ್ಲಿ ದಿನಾಂಕ 18-11-2023ರಂದು ಜರಗಿದ ತುಳು ಕೂಟ (ರಿ) ಕುಡ್ಲದ ಬಂಗಾರ್ ಪರ್ಬ ವೈಭವ ಸರಣಿ -09ರ ‘ತುಳುವೆರೆ ತುಡರ ಪರ್ಬೊ’ ಕಾರ್ಯಕ್ರಮವನ್ನು ಅಗರಿ ಶ್ರೀ ರಾಘವೇಂದ್ರ ರಾವ್ ಇವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ “ತುಳುವಿನಲ್ಲಿ ಪರಂಪರಾನುಗತ ತುಳು ಮಾತನಾಡಲು ಕಷ್ಟವಾದರೂ ನಾವು ಸಮಯ – ಸಂದರ್ಭದಲ್ಲಿ ತುಳು ಭಾಷೆಯನ್ನಾಡಲೇ ಬೇಕಾಗುತ್ತದೆ. ಕೆಲವೊಮ್ಮೆ ತಪ್ಪಿದರೂ ಅದನ್ನು ತಿದ್ದಿಕೊಂಡು ತುಳು ನಮ್ಮದು ಎಂಬ ವಿಶೇಷ ಮಮತೆಯಿಟ್ಟು ಬೆಳಸೋಣ” ಎಂಬ ಸಂದೇಶವನ್ನು ನೀಡಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸನ್ನಿಧೀಸ್ ಹೋಟೆಲ್ಸ್ (ಪ್ರೈ) ಲಿ. ಇದರ ಜನರಲ್ ಮ್ಯಾನೇಜರ್ ಶ್ರೀ ಭಾಸ್ಕರ ಸಾಲ್ಯಾನರು “ನಾವು ತುಳುವರೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವಾದರೂ ನಾವು ಭಾಷೆಯನ್ನು ಅಷ್ಟಾಗಿ ದುಡಿಸಿಕೊಂಡಿಲ್ಲ. ಎಷ್ಟೇಷ್ಟೋ ಕವಿಗಳು, ಸಾಹಿತಿಗಳು ಬೆಳೆದರೂ ಭಾಷೆ ಹಿಂದುಳಿದಿದೆ. ನಾವು ಗ್ರಾಂಥಿಕವಾದ ತುಳು ಮಾತನಾಡಲು ಅಸಾಧ್ಯವಾದರೂ ನಮ್ಮ ಮನೆಯ ಭಾಷೆಯಾಗಿ ತುಳುವನ್ನು ಸ್ವೀಕರಿಸಬೇಕು. ಖಂಡಿತಾ ದೈನಂದಿನ ಚಟುವಟಿಕೆಗಳಲ್ಲಿ, ಪರಸ್ಪರ ಸಂಭಾಷಣೆಗಳಲ್ಲಿ ತುಳು…
ಬೆಂಗಳೂರು : ಬೆಂಗಳೂರಿನ ನರಸಿಂಹ ರಾಜ ಕಾಲೋನಿಯಲ್ಲಿರುವ ಬಿ.ಎಂ.ಶ್ರೀ ಪ್ರತಿಷ್ಠಾನದಲ್ಲಿ ಹಿರಿಯಡ್ಕದ ಅಮೋಘ (ರಿ.) ಮತ್ತು ಸಪ್ನ ಬುಕ್ ಹೌಸ್ ಆಯೋಜಿಸಿದ ಕಲಾವಿದೆ ಶ್ರೀಮತಿ ಪೂರ್ಣಿಮಾ ಸುರೇಶ್ ಅವರು ರಚಿಸಿದ ರಂಗಭೂಮಿಯ ಒಡನಾಟದ ಕಥನವನ್ನು ಹೇಳುವ ಕೃತಿ ‘ರಂಗ ರಂಗೋಲಿ’ಯ ಲೋಕಾರ್ಪಣೆ ದಿನಾಂಕ 19-11-2023ರಂದು ನಡೆಯಿತು. ಖ್ಯಾತ ಚಲನಚಿತ್ರ ನಿರ್ದೇಶಕರು ಹಾಗೂ ಕನ್ನಡಾಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಟಿ.ಎಸ್. ನಾಗಾಭರಣ ಅವರು ಕೃತಿ ಅನಾವರಣಗೊಳಿಸಿ ಮಾತನಾಡುತ್ತಾ, “ರಂಗಭೂಮಿ ಎನ್ನುವುದೇ ಸತ್ಯ. ಆದರೆ ಬಹುತೇಕರು ರಂಗಭೂಮಿಯನ್ನು ಮಿಥ್ಯಕ್ಕೆ ಹೋಲಿಸುತ್ತಾರೆ. ವಾಸ್ತವದಲ್ಲಿ ಸುಳ್ಳಿನ ನಿಜವಾದ ಅರ್ಥವನ್ನು ಹಾಗೂ ಸುಳ್ಳನ್ನು ಸರಣಿಯೋಪಾದಿಯಲ್ಲಿ ತೆರೆದಿಡುವ ವೇದಿಕೆಯೇ ರಂಗಭೂಮಿ. ಅದಕ್ಕೆ ಸತ್ಯದ ಪ್ರತೀಕವಾಗಿರುವ ರಂಗಭೂಮಿ ಉಳಿಯಬೇಕು, ಅದನ್ನು ಎಲ್ಲರೂ ಸೇರಿ ಬೆಳೆಸಬೇಕು. ಕಲೆ ಎನ್ನುವುದಕ್ಕೆ ಎಡ-ಬಲ ಸಂಸ್ಕೃತಿ ಇರುವುದಿಲ್ಲ. ಬದಲಾಗಿ ಕಲೆ ಎನ್ನುವುದು ಎಡ ಬಲ ಸಂಪ್ರದಾಯವನ್ನು ಮೀರಿ ಮಧ್ಯದ ಸಂಪ್ರದಾಯವನ್ನು ಬಿಂಬಿಸುವ ಕಲೆಗೆ ಯಾವುದೇ ಪಂಕ್ತಿಯ ರಂಗು ಹಚ್ಚಬಾರದು. ಕೃತಕ ಬುದ್ದಿಮತ್ತೆ ಎನ್ನವುದು ಇಂದು ರಂಗವನ್ನು…
ಪುತ್ತೂರು : ಸಂಸ್ಕಾರ ಭಾರತೀ ಪುತ್ತೂರು ಘಟಕದ ವತಿಯಿಂದ ವಾಲ್ಮೀಕಿ ನಮನ ಕಾರ್ಯಕ್ರಮವು ದಿನಾಂಕ 5-11-2023ನೇ ಭಾನುವಾರ ಅಪರಾಹ್ನ 4 ಗಂಟೆಗೆ ದರ್ಬೆಯಲ್ಲಿರುವ ಶಶಿಶಂಕರ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ನಿವೃತ್ತ ಉಪನ್ಯಾಸಕರು ಹಾಗೂ ಸಾಹಿತಿಗಳಾದ ಪ್ರೊ. ಹರಿನಾರಾಯಣ ಮಾಡಾವು ಇವರು “ದರೋಡೆಕಾರನಾದ ರತ್ನಾಕರನೆಂಬ ಬೇಡನು ದೇವರ್ಷಿ ನಾರದರ ಉಪದೇಶದ ಮೇರೆಗೆ ರಾಮಾಯಣದಂತಹ ಬೃಹತ್ ಗ್ರಂಥವನ್ನು ರಚಿಸಿ ಆದಿಕವಿ ವಾಲ್ಮೀಕಿ ಎನಿಸಿಕೊಂಡನು. 24,000 ಶ್ಲೋಕಗಳನ್ನೊಳಗೊಂಡ ರಾಮಾಯಣ ಗ್ರಂಥದ ಸಾರವು ಇಂದಿಗೂ ಪ್ರಸ್ತುತ.” ಎಂದ ಅವರು ವಾಲ್ಮೀಕಿಯ ಪೂರ್ವೇತಿಹಾಸದ ಸವಿಸ್ತಾರವಾದ ವಿವರಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ, ಸದಸ್ಯೆ ಶಂಕರಿ ಶರ್ಮ ಅವರು ವಾಲ್ಮೀಕಿ ನುಡಿನಮನ ಸಲ್ಲಿಸುತ್ತಾ, “ರಾಮಾಯಣದಲ್ಲಿರುವ ವಿಭಿನ್ನ ಪಾತ್ರಗಳು ಇಂದಿಗೂ ಜೀವಂತ ನಿದರ್ಶನದಂತಿವೆ.” ಎಂದರು. ಸದಸ್ಯೆ ವಿದುಷಿ ಪ್ರೀತಿಕಲಾ ಮತ್ತು ಸದಸ್ಯೆ ವಿದುಷಿ ಮೇಘನಾ ಪಾಣಾಜೆ ಇವರು ರಾಮಾಯಣದ ಉತ್ತರ ಕಾಂಡದಿಂದ ಆಯ್ದ ಶ್ಲೋಕಗಳ ವಿವರಣಾತ್ಮಕ ಗಾಯನದ ಮೂಲಕ ವಾಲ್ಮೀಕಿ ಗೀತ ನಮನಗೈದರು. ಸದಸ್ಯೆ ಕೃಷ್ಣವೇಣಿ ಮುಳಿಯ ಇವರು ರಾಮಾಯಣದ…