Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು : ರಂಗರಥ ತಂಡದ ಹೊಸ ನಾಟಕ ‘ಧರ್ಮನಟಿ’ ಇದರ ಮೊದಲ ಪ್ರದರ್ಶನವು ದಿನಾಂಕ 21-07-2024ರಂದು ಮಧ್ಯಾಹ್ನ ಗಂಟೆ 3:30 ಹಾಗೂ ಸಂಜೆ ಗಂಟೆ 7-30ಕ್ಕೆ ಬೆಂಗಳೂರಿನ ಜೆ.ಪಿ. ನಗರದ ರಂಗಶಂಕರದಲ್ಲಿ ಪ್ರಸ್ತುತಗೊಳ್ಳಲಿದೆ. ಇದು ಸಂಗೀತಮಯ ಐತಿಹಾಸಿಕ ಕನ್ನಡ ನಾಟಕವಾಗಿದ್ದು, ಆಸಿಫ್ ಕ್ಷತ್ರಿಯ ಮತ್ತು ಶ್ವೇತಾ ಶ್ರೀನಿವಾಸ್ ಇವರು ನಿರ್ದೇಶನ ಮಾಡಿದ್ದು, ಭಿನ್ನಷಡ್ಜ ಸಂಗೀತದಲ್ಲಿ ಸಹಕರಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 8050157443 (ಶ್ವೇತಾ ಶ್ರೀನಿವಾಸ್) ಅಥವಾ 9448286776 ಆಸಿಫ್ ಕ್ಷತ್ರಿಯ ಇವರನ್ನು ಸಂಪರ್ಕಿಸಿ. ರಂಗರಥ ಸಂಸ್ಥೆಯ ಬಗ್ಗೆ : ಭಾರತೀಯ ಪ್ರದರ್ಶನ ಕಲಾ ಸಂಸ್ಥೆಯಾದ ‘ರಂಗರಥ’ ಎಂಬುದು ರಂಗಪ್ರೇಕ್ಷಕರ ಮನಸೂರೆಗೊಂಡ ಬೆಂಗಳೂರಿನ ಕೆಲವು ರಂಗತಂಡಗಳಲ್ಲಿ ಒಂದು. ಹಲವು ವರ್ಷಗಳ ರಂಗಾನುಭವದ ಆಧಾರದ ಮೇಲೆ ರಂಗರಥದ ಪಯಣ ಸಾಗಿದೆ. ಅನುಭವೀ ರಂಗಕರ್ಮಿಗಳು, ನಾಟಕಕಾರರು, ಸಾಹಿತಿಗಳು, ಸಂಗೀತ ಸಂಯೋಜಕರು ಒಂದಾಗಿ, ರಂಗಪ್ರಯೋಗಗಳಲ್ಲಿ ಹೊಸ ಆಯಾಮ ಮತ್ತು ಸಾಧ್ಯತೆಗಳನ್ನು ಅಳವಡಿಸಿಕೊಂಡು, ಒಳ್ಳೆ ಅಭಿರುಚಿಯ ನಾಟಕ, ಯಕ್ಷಗಾನ, ನೃತ್ಯನಾಟಕಗಳನ್ನು ತಯಾರಿಸಿ ದೇಶಾದ್ಯಂತ ಪ್ರದರ್ಶಿಸುತ್ತಿದೆ. ವಿವಿಧ ತಂತ್ರಜ್ಞರು ಮತ್ತು ಹಲವು…
ತೆಕ್ಕಟ್ಟೆ: ಯಶಸ್ವಿ ಕಲಾವೃಂದದ ‘ಸಿನ್ಸ್ 1999 ಶ್ವೇತಯಾನ-44’ರ ಕಾರ್ಯಕ್ರಮದ ಅಂಗವಾಗಿ ಧಮನಿ ಟ್ರಸ್ಟ್ ನೇತೃತ್ವದಲ್ಲಿನ 25 ದಿನಗಳ ಮಕ್ಕಳ ನಾಟಕ ಕಾರ್ಯಗಾರದ ಸಮಾರೋಪ ಸಮಾರಂಭವು ದಿನಾಂಕ 17-07-2024 ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಖ್ಯಾತ ಸಾಹಿತಿ ಸುಧಾ ಆಡುಕಳ ಮಾತನಾಡಿ “ಮಕ್ಕಳ ಕಣ್ಣಿಗೆ ಎಲ್ಲಾ ವಿಧದ ಕಲೆಯನ್ನು ಆಸ್ವಾದಿಸುವಂತಹ ದೃಶ್ಯಗಳನ್ನು ಕಟ್ಟಿಕೊಡದೇ ಹೋದರೆ ಮೊಬೈಲಿನಿಂದ ಹೊರಬರುವುದಕ್ಕೆ ಸಾಧ್ಯ ಆಗುವುದಿಲ್ಲ. ಪರಿಸರವನ್ನು ಆರ್ಟ್ ಮೂಲಕ ಸುಂದರಗೊಳಿಸುವ, ಒಂದಷ್ಟು ಮನಸ್ಸುಗಳನ್ನು ಕಲೆಯ ಮೂಲಕ ಮೃದುಗೊಳಿಸುವ ಹಾಗೂ ಭಾಷೆಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವ ಕಾರ್ಯಗಳು ಬಹಳ ಮುಖ್ಯವಾಗುತ್ತದೆ. ಮಕ್ಕಳು ಕಲೆಯಿಂದ ಸಮಾಜವನ್ನು ಬೆಳಗಿಸುವ ಕಾರ್ಯ ಆಗಲೇಬೇಕಿದೆ. ಭುವಿಯಲ್ಲಿ ನಾವೆಲ್ಲ ನಾಟಕ ಮಾಡುವಂತಹ ಶಾಪಗ್ರಸ್ತರಾಗಿದ್ದೇವೆ. ಯಾಕೆಂದರೆ ಮಕ್ಕಳನ್ನು ರಂಗ ಕ್ರಿಯೆಯಲ್ಲಿ ತೊಡಗಿಸುವ ಕೆಲಸ ಕ್ಲಿಷ್ಟಕರವಾದದ್ದು. ಶಾಪವು ವರವಾಗಬೇಕಾದರೆ ಸಮುದಾಯದವರು ಇಂತಹ ಕಾರ್ಯದಲ್ಲಿ ನೆರವು ನೀಡುವುದರ ಮೂಲಕ ಕೈಗೂಡಿಸಬೇಕಾಗುತ್ತದೆ. ರಂಗಭೂಮಿಯನ್ನು ಬಲಗೊಳಿಸಲು ಆರ್ಥಿಕ ಭದ್ರತೆ ಬೇಕಾಗುತ್ತದೆ. ಆ ನಿಟ್ಟಿನಲ್ಲಿ ಕಲಾಸಕ್ತರು ಮನಮಾಡಬೇಕು.” ಎಂದರು. ‘ಸಿನ್ಸ್ 1999…
ಬೆಳ್ತಂಗಡಿ : ಧರ್ಮಸ್ಥಳದಲ್ಲಿ ದಿನಾಂಕ 16-07-2024 ರಿಂದ 17-08-2024ರ ವರೆಗೆ ನಡೆಯಲಿರುವ 53ನೇ ವರ್ಷದ ‘ಪುರಾಣ ಕಾವ್ಯ ವಾಚನ – ಪ್ರವಚನ’ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ದಿನಾಂಕ 16-07-2024ರ ಮಂಗಳವಾರದಂದು ನಡೆಯಿತು. ಕಾರ್ಯಕ್ರಮದಲ್ಲಿ ‘ಜೈಮಿನಿ ಭಾರತ’ ಮತ್ತು ‘ತುರಂಗ ಭಾರತ’ ಪುರಾಣ ಕಾವ್ಯ ವಾಚನ ಹಾಗೂ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ವಿದ್ವಾಂಸ ಪ್ರೊ. ಎಮ್. ಪ್ರಭಾಕರ ಜೋಶಿ ಮಾತನಾಡಿ “ಪುರಾಣಕ್ಕೆ ಹಲವಾರು ಅರ್ಥಗಳಿವೆ. ಭಾರತ ಮತ್ತು ಚೀನಾ ದೇಶದಲ್ಲಿ ಅತೀ ಹೆಚ್ಚು ಪುರಾಣಗಳಿದ್ದು ನೈತಿಕ ಮತ್ತು ಧಾರ್ಮಿಕ ಮೌಲ್ಯಗಳನ್ನು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸುವುದೇ ಪುರಾಣಗಳ ಉದ್ದೇಶವಾಗಿದೆ. ಪುರಾಣ ವಾಚನ – ಪ್ರವಚನದಿಂದ ಪ್ರತಿ ಕಲೆಯೂ, ಕಲಾವಿದರೂ ಬೆಳೆಯಬೇಕು. ದೇವರ ಕಲ್ಪನೆಯನ್ನು ಜನಮನಕ್ಕೆ ತಲುಪಿಸುವುದೇ ಪುರಾಣಗಳ ಉದ್ದೇಶವಾಗಿದೆ. ವಿಷ್ಣುಪುರಾಣ, ಭಾಗವತ, ರಾಮಾಯಣ, ಮಹಾಭಾರತ ಮೊದಲಾದ ಅನೇಕ ಪುರಾಣಗಳಿವೆ. ರಾಮಾಯಣದಲ್ಲಿಯೂ ಬೇರೆ ಬೇರೆ ಭಾಷೆಗಳಲ್ಲಿ ಹಲವು ರೀತಿಯ ರಾಮಾಯಣಗಳು ರಚನೆಯಾಗಿವೆ. ನಮ್ಮ ಸನಾತನ ಧಾರ್ಮಿಕ ಪರಂಪರೆಯನ್ನು ವಿಸ್ತರಿಸಿ ಸೃಜನಶೀಲತೆಯೊಂದಿಗೆ ಜನರಿಗೆ ತಲುಪಿಸುವ ಕಾಯಕವನ್ನು…
ವಿಜಯಪುರ : ಕರ್ನಾಟಕ ಗಮಕ ಕಲಾ ಪರಿಷತ್ತಿನ ವಿಜಯಪುರ ಜಿಲ್ಲಾ ಶಾಖೆ, ಪಿ. ಡಿ. ಜೆ. ಶಾಲೆ ಹಾಗೂ ಕರ್ನಾಟಕ ರಾಜ್ಯ ಗಮಕ ಕಲಾ ಪರಿಷತ್ತು ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ‘ಕುಮಾರವ್ಯಾಸ ಪ್ರಶಸ್ತಿ’ ಪುರಸ್ಕೃತ ಗಮಕ ಕಲಾವಿದೆ ಶ್ರೀಮತಿ ಶಾಂತಾ ಕೌತಾಳ ಇವರಿಗೆ ಸನ್ಮಾನ ಹಾಗೂ ಗಮಕ ವಾಚನ ಸಮಾರಂಭವು ದಿನಾಂಕ 12-07-2024ರಂದು ವಿಜಯಪುರದ ಪಿ. ಡಿ. ಜೆ. ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪಿ. ಡಿ. ಜೆ. ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಾಲರಾದ ಶ್ರೀಮತಿ ದೇವಕಿ ಕೆ. ಕುಲಕರ್ಣಿ ಮಾತನಾಡಿ “ಗಮಕ ಕಾರ್ಯಕ್ರಮದಿಂದ ವಿದ್ಯಾರ್ಥಿಗಳ ನೀತಿಮಟ್ಟ ಹೆಚ್ಚುತ್ತದೆ.” ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಶ್ರೀನಿವಾಸ ಬಾಳಾಜಿ ಕುಲಕರ್ಣಿ, ಗಮಕ ಪರಿಷತ್ ಅಧ್ಯಕ್ಷ ಶ್ರೀ ಬಿ.ಎಂ.ಪಾಟೀಲ, ಗಮಕಿಗಳಾದ ಶ್ರೀಮತಿ ಭೂದೇವಿ ಕುಲಕರ್ಣಿ, ಪುಷ್ಪಾ ಕುಲಕರ್ಣಿ, ಕಲ್ಯಾಣರಾವ್ ದೇಶಪಾಂಡೆ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿನಿಯರ ಭಗವದ್ಗೀತೆಯ ಪಠಣದೊಂದಿಗೆ ಸಮಾರಂಭವು ಆರಂಭಗೊಂಡಿತು. ಗಮಕ ಪರಿಷತ್ತಿನ ಸದಸ್ಯರಾದ ಶ್ರೀ ಎಸ್.…
ಪುತ್ತೂರು : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ.) ಪುತ್ತೂರು ತಾಲೂಕು ಘಟಕ ಇದರ ನೇತೃತ್ವದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ ಹಾಗೂ ರೋಟರಿ ಕ್ಲಬ್ ಪುತ್ತೂರು ಯುವ ಇದರ ಸಹಯೋಗದೊಂದಿಗೆ ‘ಪತ್ರಿಕಾ ದಿನಾಚರಣೆ, ಸನ್ಮಾನ ಹಾಗೂ ಉಪನ್ಯಾಸ’ ಕಾರ್ಯಕ್ರಮವನ್ನು ದಿನಾಂಕ 20-07-2024ರಂದು ಪುತ್ತೂರಿನ ಜೈನ ಭವನ ರಸ್ತೆಯ ರೋಟರಿ ಮನಿಷಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ ಇವರು ಉದ್ಘಾಟಿಸಲಿದ್ದು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ.) ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ಸಿದ್ಧಿಕ್ ನೀರಾಜೆ ಇವರು ಅಧ್ಯಕ್ಷತೆ ವಹಿಸಲಿರುವರು. ಪುತ್ತೂರಿನ ಸಹಾಯಕ ಕಮಿಷನರ್ ಶ್ರೀ ಜುಬಿನ್ ಇವರು ಉಪನ್ಯಾಸ ನೀಡಲಿದ್ದು, ಪತ್ರಿಕಾ ವಿತರಕರಾದ ಶ್ರೀ ವಿಶ್ವನಾಥ್ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು.
ಮಂಗಳೂರು : ಉರ್ವದಲ್ಲಿರುವ ನಾಟ್ಯಾರಾಧನಾ ಕಲಾ ಕೇಂದ್ರ (ರಿ.) ಇದರ ತ್ರಿಂಶೋತ್ಸವ ಸಂಭ್ರಮದ ಅಂಗವಾಗಿ ನಾಟ್ಯಾರಾಧನಾ ತ್ರಿಂಶೋತ್ಸವ ಸಮಿತಿ ಮತ್ತು ನಾಟ್ಯಾರಾಧನಾ ತ್ರಿಂಶೋತ್ಸವ ವಿದ್ಯಾರ್ಥಿ ಸಮಿತಿ ಇದರ ಸಹಯೋಗದೊಂದಿಗೆ ಅರ್ಪಿಸುವ ಸರಣಿ ನೃತ್ಯ ಕಾರ್ಯಕ್ರಮ ‘ನೃತ್ಯಾಮೃತ -7’ದಲ್ಲಿ ದಿನಾಂಕ 21-07-2024ರಂದು ಮಧ್ಯಾಹ್ನ ಗಂಟೆ 1-30ರಿಂದ ‘ಜ್ಞಾನಸುಧಾ’ ವಿಚಾರ ಸಂಕಿರಣ ಸಂವಾದವು ಶಾರದಾ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಶಾರದಾ ವಿದ್ಯಾಲಯ ಸಮೂಹ ಸಂಸ್ಥೆಗಳ ಅಧ್ಯಕ್ಷಾರಾದ ಡಾ. ಎಂ.ಬಿ. ಪುರಾಣಿಕ್ ಇವರು ಉದ್ಘಾಟಿಸಲಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ರವಿಶಂಕರ್ ರಾವ್ ಇವರು ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದು, ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ‘ನೃತ್ಯ ಸಂಯೋಜನಾ ತಂತ್ರಗಾರಿಕೆ’ ಎಂಬ ವಿಷಯದ ಬಗ್ಗೆ ಸಂವಾದ ಸಹಿತ ಉಪನ್ಯಾಸ ಮತ್ತು ‘ಭರತನಾಟ್ಯ / ಅಭಿನಯ ಪ್ರಸ್ತುತಿಯಲ್ಲಿ ಪ್ರಸ್ತುತತೆ’ ಎಂಬ ವಿಷಯದ ಕುರಿತು ಸಂವಾದಾತ್ಮಕ ಪ್ರಾತ್ಯಕ್ಷಿಕೆಯಿಂದ ಕೂಡಿದ ವಿಚಾರ ಸಂಕಿರಣ ನಡೆಯಲಿದೆ. ಬೆಂಗಳೂರಿನ ಪ್ರಸಿದ್ಧ ಭರತನಾಟ್ಯ ಕಲಾವಿದ ವಿದ್ವಾನ್…
ಪಟ್ಟೂರು : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ಬೆಳ್ತಂಗಡಿ ಘಟಕದ ಸಹಯೋಗದೊಂದಿಗೆ ಪಟ್ಟೂರಿನ ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ಯಕ್ಷಗಾನ ತರಗತಿಯ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 15-07-2024ರಂದು ನಡೆಯಿತು. ಜೀವ ವಿಮಾ ನಿಗಮ ಬೆಳ್ತಂಗಡಿ ಇದರ ಅಭಿವೃದ್ಧಿ ಅಧಿಕಾರಿ ಉದಯ ಶಂಕರ ಜಿ. ಕಾರ್ಯಕ್ರಮ ಉದ್ಘಾಟಿಸಿದರು. ಯಕ್ಷಧ್ರುವ-ಯಕ್ಷಶಿಕ್ಷಣ ತಂಡದ ಗುರುಗಳಾದ ಈಶ್ವರ ಪ್ರಸಾದ್ ನಿಡ್ಲೆರವರು ವಿದ್ಯಾರ್ಥಿಗಳಿಗೆ ಹೆಜ್ಜೆ ಅಭ್ಯಾಸ ಮಾಡಿಸಿದರು. ಈ ಸಂದರ್ಭ ಪಟ್ಲ ಫೌಂಡೇಶನ್ ಬೆಳ್ತಂಗಡಿ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು, ಶಾಲಾ ಆಡಳಿತ ಸಮಿತಿ ಸಂಚಾಲಕರಾದ ಪ್ರಶಾಂತ್ ಶೆಟ್ಟಿ ದೇರಾಜೆ, ಶಾಲಾ ಮುಖ್ಯ ಶಿಕ್ಷಕ ಚಂದ್ರಶೇಖರ ಶೇಟ್ ಉಪಸ್ಥಿರಿದ್ದರು.
ಮಂಗಳೂರು : ಸನಾತನ ನಾಟ್ಯಾಲಯದ ವತಿಯಿಂದ ‘ಸನಾತನ ಗುರು ಪರಂಪರ’ ಕಾರ್ಯಕ್ರಮವು ದಿನಾಂಕ 20-07-2024ರಂದು ಸಂಜೆ 6-00 ಗಂಟೆಗೆ ಮಂಗಳೂರಿನ ಕುದ್ಮುಲ್ ರಂಗ ರಾವ್ ಪುರಭವನದಲ್ಲಿ ನಡೆಯಲಿದೆ. ಧಾರ್ಮಿಕ ಚಿಂತಕರಾದ ಎನ್.ಆರ್. ದಾಮೋದರ ಶರ್ಮ ಬಾರ್ಕೂರು ಇವರ ಗೌರವ ಉಪಸ್ಥಿತಿಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಉಡುಪಿಯ ಸಮೂಹದ ರಂಗ ನಿರ್ದೇಶಕರು, ಸಾಹಿತಿ ಹಾಗೂ ಸಂಸ್ಕೃತಿ ಚಿಂತಕರಾದ ಕೀರ್ತಿಶೇಷ ಪ್ರೊ. ಉದ್ಯಾವರ ಮಾಧವ ಆಚಾರ್ಯ ಇವರ ‘ಗುರುಸಂಸ್ಮರಣೆ’, ಹಿರಿಯ ಕಲಾ ವಿಮರ್ಶಕಿ ಗುರು ವಿದುಷಿ ಪ್ರತಿಭಾ ಎಂ.ಎಲ್. ಸಾಮಗ ಇವರಿಗೆ ‘ಗುರು ನಮನ’ ಮತ್ತು ಉಳ್ಳಾಲದ ನೃತ್ಯ ಸೌರಭ ನಾಟ್ಯಾಲಯ ಇದರ ನೃತ್ಯ ಗುರುಗಳಾದ ವಿದ್ವಾನ್ ಪ್ರಮೋದ್ ಉಳ್ಳಾಲ್ ಇವರಿಗೆ ‘ಗುರುಪ್ರೇರಣ’ ಗೌರವ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಸನಾತನ ನಾಟ್ಯಾಲಯದ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ ಮತ್ತು ವಿದುಷಿ ಶೀಲತಾ ನಾಗರಾಜ್ ಇವರ ಹಿರಿಯ ಶಿಷ್ಯೆಯರಾದ ನಾಟ್ಯ ವಿದುಷಿಯರಾದ ಶ್ರೀಮತಿ ಸಂಜನಾ ಭರತ್, ಶ್ರೀಮತಿ ವೈಶ್ಮ ಶೆಟ್ಟಿ ಮತ್ತು ಕುಮಾರಿಯರಾದ…
ತೆಕ್ಕಟ್ಟೆ: ಯಶಸ್ವೀ ಕಲಾವೃಂದ (ರಿ.) ಕೊಮೆ, ತೆಕ್ಕಟ್ಟೆ ‘ಸಿನ್ಸ್ 1999 ಶ್ವೇತಯಾನ-43’ ಕಾರ್ಯಕ್ರಮದಡಿಯಲ್ಲಿ ದಿಮ್ಸಾಲ್ ಫಿಲ್ಮ್ಸ್ ಹಾಗೂ ಧಮನಿ ಟ್ರಸ್ಟ್ ಸಹಕಾರದೊಂದಿಗೆ ರಸರಂಗ (ರಿ.) ಕೋಟ ಸಾದರ ಪಡಿಸಿದ ‘ಕಲೆ ಮತ್ತು ಶಿಕ್ಷಣ’ಕ್ಕೆ ಸಂಬಂಧಿಸಿದ ‘ಆಷಾಡದಲ್ಲೊಂದು ಚಿಂತನ – ಮಂಥನ’ ಸಂವಾದ ಕಾರ್ಯಕ್ರಮವು ದಿನಾಂಕ 17-07-2024ರಂದು ತೆಕ್ಕಟ್ಟೆ ಹಯಗ್ರೀವದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ರಂಗಭೂಮಿಯ ವಿವಿಧ ವಾದ್ಯ ಪರಿಕರವನ್ನು ನುಡಿಸುವ ಮೂಲಕ ಸಂವಾದಕ ಗಣ್ಯರು ಚಾಲನೆ ನೀಡಿದರು. ಸಂವಾದಕ ಗಣ್ಯರ ಪರವಾಗಿ ಶ್ರೀಮತಿ ಅಭಿಲಾಷಾ ಎಸ್. ಮಾತನಾಡಿ “ಶಾಲಾ ಪಠ್ಯ ಪುಸ್ತಕಗಳನ್ನು ರಂಗಭೂಮಿಯಲ್ಲಿ ಅಳವಡಿಸಿದರೆ ಅನುಭವಜನ್ಯ ಚಟುವಟಿಕೆಗಳಾಗುತ್ತದೆ. ಕಲಾ ಮಾಧ್ಯಮವನ್ನು ಶಾಲೆಯಲ್ಲಿ ಚುರುಕುಗೊಳಿಸಿದರೆ ಪಂಚೇಂದ್ರಿಯಗಳಿಗೆ ಕೆಲಸ ಸಿಗುತ್ತದೆ. ಬರೇ ಓದು ಜೀವನವನ್ನು ಕಟ್ಟಿ ಕೊಡದು. ಲಡಾಕ್, ಉತ್ತರಕಾಂಡ ಹಾಗೂ ಕರ್ನಾಟಕಗಳ ಬಗ್ಗೆ ಒಂದಿಷ್ಟು ತಿಳಿಯುವುದಕ್ಕೆ ರಂಗ ಪಠ್ಯಗಳು ಪೂರಕವಾಗುತ್ತದೆ. ಶಿಕ್ಷಣದಲ್ಲಿ ಪ್ರತಿಯೊಂದು ಮಗುವಿಗೂ ಒಂದು ಕಲಾ ಪ್ರಕಾರದಲ್ಲಿ ಆಸಕ್ತಿಯನ್ನು ಹುಟ್ಟಿಸುವ ಕೆಲಸ ಶಿಕ್ಷಕರಿಂದ ಆಗಬೇಕು. ಜೀವನದಲ್ಲಿ ಏಳ್ಗೆಯನ್ನು ಕಂಡುಕೊಳ್ಳಬೇಕಾದರೆ ಮಕ್ಕಳು ಕಲಾ ಪ್ರಕಾರದಲ್ಲಿ…
ಕಾಸರಗೋಡು : ಚಂದ್ರಗಿರಿಯ ‘ಮೇಘರಂಜನಾ’ ತಂಡವು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಮತ್ತು ‘ರಂಗ ಚಿನ್ನಾರಿ’ ಕಾಸರಗೋಡು ಇದರ ಸಹಕಾರದೊಂದಿಗೆ ಆಯೋಜಿಸಿದ ‘ಭಾವ ಶಿಬಿರ’ವು ದಿನಾಂಕ 13-07-2024 ರಂದು ಕಾಸರಗೋಡಿನ ಕೂಡ್ಲು ಗೋಪಾಲಕೃಷ್ಣ ಪ್ರೌಢ ಶಾಲೆಯ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ವ್ಯವಸ್ಥಾಪಕ ಹಾಗೂ ಗಾಯಕರಾದ ಕೆ. ಜಿ. ಶ್ಯಾನುಭೋಗ್ ಮಾತನಾಡಿ “ಸಂಗೀತವನ್ನು ಅಭ್ಯಾಸ ಮಾಡುವ ಮೂಲಕ ಸಂಸ್ಕಾರಯುತ ಜೀವನ ಸಾಗಿಸಲು ಸಾಧ್ಯ. ಶ್ರುತಿ, ತಾಳ, ಲಯಬದ್ಧವಾಗಿ ಸಂಗೀತವನ್ನು ಅಭ್ಯಾಸ ಮಾಡಬೇಕಾಗುತ್ತದೆ. ಅದನ್ನೇ ನಮ್ಮ ಜೀವನದಲ್ಲಿ ಅಳವಡಿಸಿದಾಗ ನಾವು ಸಭ್ಯರಾಗಿ ಬದುಕಬಹುದು. ಭಾವಗೀತೆಯ ಮೂಲಕ ಭಾವನೆಗಳನ್ನು ಅರ್ಥಮಾಡಿಕೊಳ್ಳಬಹುದು ಮತ್ತು ಅದರಿಂದ ಮಾನವೀಯತೆ ಮೌಲ್ಯಗಳನ್ನು ಹೆಚ್ಚಿಸಬಹುದು.” ಎಂದು ಹೇಳಿದರು. ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಂಗಚಿನ್ನಾರಿ ನಿರ್ದೇಶಕ ಕಾಸರಗೋಡು ಚಿನ್ನಾ ಮಾತನಾಡಿ “ಕಲಾ ಗ್ರಾಮವಾದ ಕೂಡ್ಲಿನಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಆಗಬೇಕು ಮತ್ತು ಉದಯೋನ್ಮಖ ಕಲಾವಿದರ ಸೃಷ್ಟಿ ಆಗಬೇಕು.” ಎಂದು ಹೇಳಿದರು. ಅಧ್ಯಕ್ಷತೆ…