Subscribe to Updates
Get the latest creative news from FooBar about art, design and business.
Author: roovari
ಧಾರವಾಡ : ಧಾರವಾಡದ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಹಾಗೂ ಹುಬ್ಬಳ್ಳಿಯ ಕ್ಷಮತಾ ಸಂಸ್ಥೆಗಳು ಜಂಟಿಯಾಗಿ ಆಯೋಜಿಸಿದ್ದ ಮೂರು ದಿನಗಳ ‘ಅನಂತ ಸ್ವರ ನಮನ’ ಸಂಗೀತೋತ್ಸವದ ಸಮಾರೋಪ ಸಮಾರಂಭವು ಧಾರವಾಡದ ಆಲೂರು ವೆಂಕಟರಾವ್ ಸಭಾಭವನದಲ್ಲಿ ದಿನಾಂಕ 25 ಆಗಸ್ಟ್ 2024ರಂದು ಸಂಪನ್ನಗೊಂಡಿತು. ಈ ಕಾರ್ಯಕ್ರಮದಲ್ಲಿ ವಿಧಾನಸಭೆಯ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಇವರು ಮಾತನಾಡಿ “ಅನಂತ ಹರಿಹರರು ಯುವ ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದರು. ಹೀಗಾಗಿ ಧಾರವಾಡ ಸಂಗೀತ ಕ್ಷೇತ್ರದ ಬೆಳೆವಣಿಗೆಗೆ ಅನಂತ ಹರಿಹರ ಅವರ ಕೊಡುಗೆ ಅಪಾರ. ಅನಂತ ಹರಿಹರ ಅವರನ್ನು ಕಳೆದುಕೊಂಡಿದ್ದು ಸಂಗೀತದ ರತ್ನ ಕಳಿಚಿದಂತಾಗಿದೆ. ಅನಾಮಿಕ ಸಂಗೀತ ಸೇವಕರಾಗಿದ್ದ ಅವರು ಪ್ರತಿ ಸಂಗೀತ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಆಯೋಜಿಸುವಲ್ಲಿ ಪ್ರಸಿದ್ಧರಾಗಿದ್ದರು. ಈ ಮೂಲಕ ಆರು ದಶಕಗಳ ಕಾಲ ಸಂಗೀತ-ನೃತ್ಯ-ಸಾಂಸ್ಕೃತಿಕ ಲೋಕದಲ್ಲಿ ಕಲಾವಿದರು ಹಾಗೂ ಶ್ರೋತೃವರ್ಗದ ಕೊಂಡಿಯಾಗಿದ್ದರು ಎಂದು ಹೇಳಿದರು. ಪಂಡಿತ್ ಬಿ.ಎಸ್. ಮಠ ಮಾತನಾಡಿ “ಅನಂತ ಹರಿಹರರು ಎಲ್ಲಾ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದ್ದರು. ಅವರ ಸಹಕಾರವನ್ನು ಮರೆಯುವಂತಿಲ್ಲ. ಆದ್ದರಿಂದ ಕಲಾವಿದರ ಸ್ಮರಣೆಯಲ್ಲಿ…
ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.) ಮತ್ತು ಸುರತ್ಕಲ್ ನಾಗರಿಕ ಸಲಹಾ ಸಮಿತಿ (ರಿ.) ಈ ಸಂಸ್ಥೆಗಳು ಜಂಟಿಯಾಗಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಪ್ರಸ್ತುತ ಪಡಿಸುವ ‘ಉದಯರಾಗ – 55’ನೇ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯು ಸುರತ್ಕಲ್ಲಿನ ಫ್ಲೈ ಓವರಿನ ತಳಭಾಗದಲ್ಲಿ ದಿನಾಂಕ 01-09-2024 ಭಾನುವಾರ ಪೂರ್ವಾಹ್ನ ಗಂಟೆ 6-00ಕ್ಕೆ ನಡೆಯಲಿದೆ. ಕಾರ್ತಿಕ್ ರಾವ್ ಇಡ್ಯಾ ಇವರ ನಿರ್ದೇಶನದಲ್ಲಿ ಗಾಯನ ಮಿತ್ರರು ಸುರತ್ಕಲ್ ಇವರು ಅರ್ಪಿಸುವ ‘ನಾಮ ಸಂಕೀರ್ತನ’ ಕಾರ್ಯಕ್ರಮ ನಡೆಯಲಿದ್ದು, ಕಾರ್ತಿಕ್ ರಾವ್ ಇಡ್ಯಾ, ಸಂಪತ್ ಎಸ್.ಬಿ., ಶ್ರೀನಿಧಿ ರಾವ್ ಮತ್ತು ತಂಡದ ಸದಸ್ಯರ ಹಾಡುಗಾರಿಕೆಗೆ ಕುಳಾಯಿಯ ವಿಜಯ್ ಆಚಾರ್ಯ ಹಾರ್ಮೋನಿಯಂ ಹಾಗೂ ಪ್ರಥಮ್ ಚೇಳ್ಯಾರು ತಬಲಾ ಸಾಥ್ ನೀಡಲಿದ್ದಾರೆ. ಸಾಮಾಜಿಕ ಸೇವೆ ಮತ್ತು ರೋಟರಿ ಕ್ಲಬ್ ಸುರತ್ಕಲ್ ಇದರ ನಿರ್ದೇಶಕರಾದ ಶ್ರೀ ರಾಮಚಂದ್ರ ಬಿ. ಕುಂದರ್ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು. ಮಣಿ ಕೃಷ್ಣಸ್ವಾಮಿ ಆಕಾಡಮಿಯ ಕಾರ್ಯದರ್ಶಿಯಾದ ಪಿ. ನಿತ್ಯಾನಂದ ರಾವ್…
ಕುತ್ತಾರು : ಬಾಲ ಸಂರಕ್ಷಣಾ ಕೇಂದ್ರ ಕುತ್ತಾರು ಮತ್ತು ಮಂಗಳಾ ಸೇವಾ ಸಮಿತಿ ಟ್ರಸ್ಟ್ ಇದರ ವತಿಯಿಂದ ಉಮೇಶ ಕರ್ಕೇರ ಮತ್ತು ಬಳಗದವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಿತ ಗುರುದಕ್ಷಿಣೆ ಎಂಬ ಪ್ರಸಂಗದ ಯಕ್ಷಗಾನ ಬಯಲಾಟದ ಸಭಾ ಕಾರ್ಯಕ್ರಮವು ದಿನಾಂಕ 14 ಆಗಸ್ಟ್ 2024ರಂದು ಕುತ್ತಾರಿನ ಬಾಲ ಸಂರಕ್ಷಣಾ ಕೇಂದ್ರದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂವಿಧಾನ ತಜ್ಞ, ಮಂಗಳ ಸೇವಾ ಟ್ರಸ್ಟಿನ ಸಂಚಾಲಕ ಡಾ. ಪಿ. ಅನಂತಕೃಷ್ಣ ಭಟ್ ಇವರು ‘ಸಂವಿಧಾನ – ಯಕ್ಷಗಾನ’ದ ಬಗ್ಗೆ ಪ್ರವಚನ ನೀಡುತ್ತಾ “ಈ ದೇಶದ ಸಂವಿದಾನಕ್ಕೆ ಈಗ ಎಪ್ಪತ್ತೈದರ ಸಂಭ್ರಮ. ನಿಯಮಗಳು ಕಾನೂನು ರೀತ್ಯಾ ಜಾರಿಯಾಗಿ ದೇಶ ಸನ್ನಡತೆಯಲ್ಲಿ ಮುನ್ನಡೆಯುವಂತೆ ನಡೆಯುತ್ತಿದೆ. ಆದರೆ ಯಕ್ಷಗಾನವೂ ಅಲಿಖಿತ ಸಂವಿಧಾನವನ್ನು ಒಗ್ಗೂಡಿಸಿಕೊಂಡು ಸಂಸ್ಕೃತಿ-ಸಂಸ್ಕಾರಗಳನ್ನು ಪ್ರಚುರ ಪಡಿಸುತ್ತಾ ಧರ್ಮ ಜಾಗೃತಿ ಮೂಡಿಸುತ್ತಾ ಬರುತ್ತಿದೆ. ಇದು ಈ ದೇಶದ ಹೆಗ್ಗಳಿಕೆಯೂ ಹೌದು. ಇದನ್ನು ಮಕ್ಕಳ ಮನಸ್ಸಿನಲ್ಲಿ ಅಚ್ಚಳಿಯುವಂತೆ ಮೂಡಿಸುವುದು ನಮ್ಮ ಕರ್ತವ್ಯ. ಇದಕ್ಕೆ ಸರಕಾರ, ಸಂಘ ಸಂಸ್ಥೆಗಳು ಸಹಕಾರಿಯಾಗಿ…
ತುಮಕೂರು : ಶೈನಾ ಅಧ್ಯಯನ ಸಂಸ್ಥೆ ವಚನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ತುಮಕೂರು ಇದರ ವತಿಯಿಂದ ಬಿ. ಚನ್ನಪ್ಪ ಗೌರಮ್ಮ ‘ವಚನ ಸಾಹಿತ್ಯ ಪ್ರಶಸ್ತಿ’ ಪ್ರದಾನ ಸಮಾರಂಭ ಮತ್ತು ನುಡಿನಮನ ಕಾರ್ಯಕ್ರಮವನ್ನು ದಿನಾಂಕ 28 ಆಗಸ್ಟ್ 2024ರಂದು ಬೆಳಗ್ಗೆ 10-30 ಗಂಟೆಗೆ ತುಮಕೂರಿನ ಮರಳೂರು, ಪ್ರಗತಿ ಬಡಾವಣೆ ಡಾ. ಬಿ.ಸಿ. ಶೈಲಾ ನಾಗರಾಜ್ ಸಾಹಿತ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರಜಾಪ್ರಗತಿ ದಿನ ಪತ್ರಿಕೆಯ ಸಂಪಾದಕರಾದ ಶ್ರೀ ಎಸ್. ನಾಗಣ್ಣ ಇವರು ಶರಣ ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷರಾದ ವಿದ್ವಾನ್ ಶ್ರೀ ಎಂ.ಜಿ. ಸಿದ್ಧರಾಮಯ್ಯ ಇವರಿಗೆ ‘ವಚನ ಸಾಹಿತ್ಯ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಡಾ. ಬಿ.ಸಿ. ಶೈಲಾ ನಾಗರಾಜ್ ಇವರು ನುಡಿ ನಮನ ಸಲ್ಲಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವಚನಗಾಯನ ಕಾರ್ಯಕ್ರಮ ನಡೆಯಲಿದೆ.
ಮಂಗಳೂರು : ಮಂಗಳೂರಿನ ಧ್ಯಾನ ಸಂಗೀತ ಅಕಾಡೆಮಿಯ ವಾರ್ಷಿಕೋತ್ಸವದ ಅಂಗವಾಗಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತೋತ್ಸವ ಕಾರ್ಯಕ್ರಮವು 25 ಆಗಸ್ಟ್ 2024ರಂದು ಮಂಗಳೂರಿನ ಉರ್ವಸ್ಟೋರ್ ಇಲ್ಲಿನ ತುಳುಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಖ್ಯಾತ ಕಲಾವಿದರಾದ ಮುಂಬೈ ಇಲ್ಲಿನ ಪಂಡಿತ್ ರಾಮ್ ದೇಶಪಾಂಡೆ “ಶಾಸ್ತ್ರೀಯ ಸಂಗೀತದಂತಹ ದೈವಿಕ ವಿದ್ಯೆಗಳು ಕೇವಲ ಗುರುಗಳ ಆಶೀರ್ವಾದದಿಂದ ಸಿದ್ಧಿಸುತ್ತವೆ. ಕೇವಲ ಸ್ವಪ್ರಯತ್ನ ಸಾಲದು, ಸಂಗೀತ ಗುರುಗಳು ಹಾಕಿಕೊಟ್ಟ ಹಾದಿಯೇ ಸಾಧನೆಗೆ ಮತ್ತು ಶ್ರೇಯಸ್ಸಿಗೆ ಮಾರ್ಗ.” ಎಂದರು. ಶ್ರೀಮತಿ ಲೋಲಾಕ್ಷಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಎಂ. ಆರ್. ಪಿ. ಎಲ್. ಹಾಗೂ ಒ. ಎನ್. ಜಿ. ಸಿ. ಇದರ ಜನರಲ್ ಮ್ಯಾನೇಜರ್ ಆಗಿರುವ ಮಂಜುನಾಥ ಎಚ್. ವಿ. ಹಾಗೂ ಸಂಗೀತ ಪೋಷಕರಾದ ಶ್ರೀಮತಿ ಶ್ರೇಯಾ ಕಿರಣ್ ಶೆಣೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಸಭಾಕಾರ್ಯಕ್ರಮದ ಬಳಿಕ ಪಂಡಿತ್ ರಾಮ್ ದೇಶಪಾಂಡೆ, ಮೈಸೂರಿನ ವಿದುಷಿ ಶ್ರೀಮತಿ ದೇವೀ ಹಾಗೂ ಧ್ಯಾನ ಸಂಗೀತ ಕಲಾ ಅಕಾಡೆಮಿಯ ವಿದ್ಯಾರ್ಥಿಗಳಿಂದ ಹಿಂದೂಸ್ಥಾನಿ ಗಾಯನ, ಲಘು…
ಮುಂಬಯಿ: ಕವಿ-ಲೇಖಕ ಮತ್ತು ಯಕ್ಷಗಾನ ವಿದ್ವಾಂಸ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರ ಎರಡು ಕವನ ಸಂಕಲನಗಳ ಬಿಡುಗಡೆ ಸಮಾರಂಭವು 24 ಆಗಸ್ಟ್ 2024ರಂದು ಮುಂಬಯಿಯ ವಿದ್ಯಾ ವಿಹಾರ್ ಪೂರ್ವದ ಶ್ರೀ ಅಂಬಿಕಾ ಆದಿನಾಥೇಶ್ವರ ಗಣಪತಿ ಮಂದಿರದಲ್ಲಿ ನಡೆಯಿತು. ಯಕ್ಷಗುರು ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ನೇತೃತ್ವದ ಅಜೆಕಾರು ಕಲಾಭಿಮಾನಿ ಬಳಗದ 2024ನೇ ಸಾಲಿನ ಯಕ್ಷಗಾನ ತಾಳಮದ್ದಳೆ ಸರಣಿ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಮುಂಬೈಯ ಹಿರಿಯ ಸಾಹಿತಿ ಡಾ. ಸುನೀತಾ ಎಂ. ಶೆಟ್ಟಿ ಮಾತನಾಡಿ “ತುಳುನಾಡು ಸಂಸ್ಕೃತಿ ಸಂಸ್ಕಾರಗಳಿಗೆ ಹೆಸರಾಗಿದೆ. ಇಲ್ಲಿನ ಜನರಲ್ಲಿ ಜಾತಿ ಸಂಕಟವಿಲ್ಲ. ಮತ- ಧರ್ಮಗಳ ಸಂಘರ್ಷವಿಲ್ಲ. ಆದ್ದರಿಂದ ತುಳುವರ ಸಾಹಿತ್ಯ ಕೃತಿಗಳಲ್ಲಿ ಸಮಕಾಲೀನ ಸಂಗತಿಗಳೊಂದಿಗೆ ಸಹಬಾಳ್ವೆ ಮತ್ತು ಸಮಭಾವಗಳ ಸಂದೇಶವಿರುತ್ತದೆ. ಭಾಸ್ಕರ ರೈಯವರ ಗದ್ಯ ಮತ್ತು ಕಾವ್ಯ ಕೃತಿಗಳಲ್ಲಿ ಇದು ಹಾಸು ಹೊಕ್ಕಾಗಿರುವುದರಿಂದ ನಾಡು – ಹೊರನಾಡುಗಳಲ್ಲಿ ಅವರದೇ ಆದ ಅಭಿಮಾನಿ ವರ್ಗ ಸೃಷ್ಟಿಯಾಗಿದೆ.” ಎಂದರು. ಕಾರ್ಯಕ್ರಮವನ್ನು ಅಂಬಿಕಾ ಮಂದಿರದ ಧರ್ಮದರ್ಶಿಗಳಾದ ವೇದಮೂರ್ತಿ ಪೆರಣಂಕಿಲ ಹರಿದಾಸ ಭಟ್…
ಕಾಸರಗೋಡು : ಗಮಕ ಕಲಾ ಪರಿಷತ್ತು ಗಡಿನಾಡ ಘಟಕ ಕಾಸರಗೋಡು, ಸಿರಿಗನ್ನಡ ಸಾಂಸ್ಕೃತಿಕ ವೇದಿಕೆ ಗಡನಾಡ ಘಟಕ ಕಾಸರಗೋಡು, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ , ತರಂಗಿಣಿ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಕೈರಲಿ, ಕುಟುಂಬಶ್ರೀ ಘಟಕ ಸುಬ್ಬಯ್ಯ ಕಟ್ಟೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಗಮಕ ಶ್ರಾವಣ ಕಾರ್ಯಕ್ರಮವು 21 ಆಗಸ್ಟ್ 2024ರಂದು ಸುಬ್ಬಯ್ಯಕಟ್ಟೆ ಬಿ. ಎ. ಮಹಮ್ಮದ್ ಸ್ಮಾರಕ ಮಂದಿರದಲ್ಲಿ ನಡೆಯಿತು. ಗಮಕ ಕಲಾ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಟಿ. ಶಂಕರನಾರಾಯಣ ಭಟ್ಟ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಖ್ಯಾತ ವಿದ್ವಾಂಸ ಹಾಗೂ ನಾಡೋಜ ಕವಿ ಕಯ್ಯಾರರ ಸುಪುತ್ರ ಡಾ. ಪ್ರಸನ್ನ ರೈ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕುಡಾಲು ವಾರ್ಡಿನ ಜನ ಪ್ರತಿನಿಧಿ ಹಾಗೂ ತರಂಗಿಣಿಯ ಗೌರವಾಧ್ಯಕ್ಷರಾದ ಶ್ರೀ ಅಶೋಕ ಭಂಡಾರಿ ಹಾಗೂ ಖ್ಯಾತ ಲೇಖಕ ಮತ್ತು ಕಾಸರಗೋಡು ಜಿಲ್ಲಾ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಶ್ರೀ ರವಿ ನಾಯ್ಕಾಪು ಭಾಗವಹಿಸಿದರು. ಇದೇ ಸಂದರ್ಭದಲ್ಲಿ ಹಿರಿಯ ಕೃಷಿಕ, ಸಮಾಜಿಕ…
ಮಂಗಳೂರು : ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಕುದ್ಮುಲ್ ರಂಗರಾವ್ ಪುರಭವನದಲ್ಲಿ ದಿನಾಂಕ 17 ಆಗಸ್ಟ್ 2024ರಂದು ಸನಾತನ ನಾಟ್ಯಾಲಯದ ನೃತ್ಯ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ಭರತನಾಟ್ಯ ವೈವಿಧ್ಯ ‘ಸನಾತನ ನೃತ್ಯೋತ್ಸವ’ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಾರ್ಕಳದ ಅಕ್ಷಯ ಗೋಖಲೆ ಇವರು ‘ಲಕ್ಷ್ಮೀಯೂ ಅವಳೇ ದುರ್ಗೆಯೂ ಅವಳೇ’ ಎಂಬ ವಿಷಯದ ಬಗ್ಗೆ ಮಾತನಾಡಿ “ಹೆಣ್ಣು ಎಂದರೆ ಹೆಂಡತಿ ಎಂದು ಜಗತ್ತಿನಲ್ಲಿ ಎಲ್ಲರೂ ಸ್ವೀಕರಿಸಿದರೆ, ಭಾರತದಲ್ಲಿ ಆಕೆಯನ್ನು ಗೃಹ್ಯಾಗ್ನಿ ಎನ್ನುವ ಧರ್ಮಾಗ್ನಿಯನ್ನು ತರುತ್ತಾಳೆ. ಮನೆಯ ಯಜಮಾನನನ್ನು ಗೃಹಸ್ಥನನ್ನಾಗಿ ಮಾಡುತ್ತಾಳೆ ಎಂದು ಭಾವಿಸಿರುವುದು ಭಾರತೀಯ ಸಮಾಜ. ದುರ್ಗೆಯನ್ನು ಜಗಜ್ಜನನಿ ಎಂದು ಕರೆಯುತ್ತೇವೆ. ಕಲಿಯುಗದಲ್ಲಿ ಭಾರತದ ಪ್ರತಿಯೊಂದು ಹೆಣ್ಣಿನಲ್ಲಿಯೂ ದುರ್ಗೆಯ ಅಂಶವಿದೆ. ಜ್ಞಾನ, ಕರುಣೆ, ಪ್ರೀತಿ, ವಿಶ್ವಾಸ ಜೊತೆಗೆ ಯಾವಾಗೆಲ್ಲ ರಾಕ್ಷಸರ ಸಂಹಾರದ ಸಮಯದಲ್ಲಿ ವಧಿಸುವ ದೇವಿಯ ರೂಪವನ್ನೂ ತಾಳುತ್ತಾಳೆ ಎಂಬುದನ್ನು ಮರೆಯಬಾರದು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಸಂದರ್ಭದಲ್ಲಿ ಸಂಭ್ರಮಿಸುವ, ಸ್ವಾತಂತ್ರ್ಯ ತಂದುಕೊಡಲು ಶ್ರಮಿಸಿದವರನ್ನು ಗೌರವಿಸಲು ಸಿಕ್ಕಿದ ಅವಕಾಶವನ್ನು ತಿರಸ್ಕರಿಸಬಾರದು. ಜೊತೆಗೆ ಸಾಮಾಜಿಕವಾಗಿ ಹೆಣ್ಣು ಸಶಕ್ತವಾಗಿ…
ಮಂಗಳೂರು : ಆಕೃತಿ ಆಶಯ ಪಬ್ಲಿಕೇಶನ್ಸ್ ಮಂಗಳೂರು ಹಾಗೂ ಸಂತ ಅಲೋಶಿಯಸ್ ಪರಿಗಣಿತ ವಿ. ವಿ. ಕನ್ನಡ ವಿಭಾಗ ಇವುಗಳ ಸಹಯೋಗದೊಂದಿಗೆ ಸುಲೋಚನಾ ಪಚ್ಚಿನಡ್ಕ ಇವರ ಕೃತಿಗಳ ಲೋಕಾರ್ಪಣಾ ಸಮಾರಂಭವು 24 ಆಗಸ್ಟ್ 2024ರ ಶನಿವಾರದಂದು ಸಂತ ಅಲೋಶಿಯಸ್ ಪರಿಗಣಿತ ವಿ. ವಿ. ಇದರ ಸಾನ್ನಿಧ್ಯ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಹಿರಿಯ ವಿದ್ವಾಂಸ ಹಾಗೂ ವಿಶ್ರಾಂತ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ ಪ್ರಾದೇಶಿಕ ವಿವರಗಳನ್ನು ಬಳಸಿಕೊಂಡು ಸಾರ್ವತ್ರಿಕಗೊಳಿಸುವುದು ಕೃತಿಕಾರರ ಮುಂದಿರುವ ಸವಾಲಾಗಿದೆ. ಡಾ. ಶಿವರಾಮ ಕಾರಂತರ ಕೃತಿಗಳಲ್ಲಿ ಸಾಕಷ್ಟು ಪ್ರಾದೇಶಿಕ ವಿವರಗಳು ದೊರೆತರೂ ಅವರ ಕೃತಿಗಳು ಪ್ರಾದೇಶಿಕವಾಗಿ ಸೀಮಿತಗೊಳ್ಳದೆ ಸಾರ್ವತ್ರಿಕ ವಿಚಾರಗಳನ್ನು ತಿಳಿಸುತ್ತದೆ. ಯುವ ಬರಹಗಾರರ ವಿಸ್ತ್ರತವಾದ ಓದು ಬರವಣಿಗೆಯನ್ನು ಇನ್ನಷ್ಟು ಶಕ್ತಗೊಳಿಸುತ್ತದೆ. ಸುಲೋಚನ ಪಚ್ಚಿನಡ್ಕ ಇವರ ಕೃತಿ ಪ್ರಾದೇಶಿಕ ವಿವರ ಒಳಗೊಂಡಿದೆ.” ಎಂದರು. ಕೃತಿ ಪರಿಚಯಿಸಿದ ರಘು ಇಡ್ಕಿದು ಮಾತನಾಡಿ “ಸುಲೋಚನಾ ಪಚ್ಚಿನಡ್ಕ ಇವರ ಚುಟುಕುಗಳು ಕಾವ್ಯ ಬಿಂದುವಾಗಿದೆ. ಅವರ ಕೃತಿಯಲ್ಲಿ ಹೆಣ್ಣಿನ ಬಗೆಗಿನ…
ಉಡುಪಿ : ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿ ಆಯೋಜನೆಯಲ್ಲಿ ಸಂಸ್ಕೃತಿ ಭಾರತಿ ಕರ್ನಾಟಕ ಪ್ರತಿಷ್ಠಾನ ಬೆನಗಲ್ ಪ್ರಾಯೋಜಕತ್ವದಲ್ಲಿ ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಳದ ಆಶ್ರಯದಲ್ಲಿ ಕವಿ ದಿ. ಕುರಾಡಿ ಸೀತಾರಾಮ ಅಡಿಗ ಕಾವ್ಯ ಪ್ರಶಸ್ತಿ ಪ್ರದಾನ 2024, ಮಹಿಳಾ ಕಾವ್ಯ ಸಂವಾದ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮವು ದಿನಾಂಕ 24-08-2024ರಂದು ಅಂಬಲಪಾಡಿಯ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಭವಾನಿ ಮಂಟಪದಲ್ಲಿ ನಡೆಯಿತು. ಕವಿಗಳಾದ ವಿಜಯಪುರದ ಸುಮಿತ್ ಮೇತ್ರಿ ಹಾಗೂ ಮಂಗಳೂರಿನ ಜಯಶ್ರೀ ಬಿ. ಕದ್ರಿ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಾರಂಭದಲ್ಲಿ ಮಹಿಳಾ ಕಾವ್ಯ ಸಂವಾದದಲ್ಲಿ ಉಡುಪಿ ಜಿಲ್ಲೆಯ ಮಹಿಳಾ ಕವಯತ್ರಿಯರಾದ ಡಾ. ಮಾಧವಿ ಭಂಡಾರಿ, ಡಾ. ನಿಕೇತನ, ಸುಕನ್ಯಾ ಕಳಸ, ಸುಧಾ ಅಡುಕಳ, ಪೂರ್ಣಿಮಾ ಸುರೇಶ್ ಭಾಗವಹಿಸಿ ಇಂದಿನ ಮಹಿಳಾ ಬರಹಗಾರರಿಗೆ ಇರುವ ಸಮಸ್ಯೆಗಳನ್ನು ಸಂವಾದದಲ್ಲಿ ಚರ್ಚಿಸಲಾಯಿತು. ಸಂವಾದ ಕಾರ್ಯಕ್ರಮವನ್ನು ಉಪಾಧ್ಯಕ್ಷೆ ಸಂಧ್ಯಾ ಶೆಣೈ ನಿರ್ವಹಿಸಿದರು. ಕಾವ್ಯ ಗಾಯನವನ್ನು ವಿದುಷಿ ಉಮಾಶಂಕರಿ ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ…