Subscribe to Updates
Get the latest creative news from FooBar about art, design and business.
Author: roovari
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ದಿವಂಗತ ಸಣ್ಣಯ್ಯ ಮತ್ತು ಗಿರಿಜಾ ದಂಪತಿಗಳಿಗೆ ದಿನಾಂಕ 07-07-1977ರಂದು ಜನಿಸಿದ ಸುಪುತ್ರಿ ಪ್ರೇಮ ಕಿಶೋರ್. ದಿವಾಣ ಶಿವಶಂಕರ್ ಭಟ್ ತೆಂಕಿನ ಗುರುಗಳು ಹಾಗೂ ಗುರುನಂದನ್ ಹೊಸೂರು ಬಡಗಿನ ಗುರುಗಳು. ಬಾಲ್ಯದಲ್ಲಿ ಯಕ್ಷಗಾನದ ಮೇಲೆ ತುಂಬಾ ಆಸಕ್ತಿ ಇತ್ತು. ಆದ್ರೆ ಅದಕ್ಕೆ ಅವಕಾಶ ಇರಲಿಲ್ಲ. ಮದುವೆ ಆದ ನಂತರ ನನ್ನ ಅತ್ತೆ ಯಕ್ಷಗಾನ ಮಾಡ್ತಾ ಇದ್ರು. ಅವರು ಬಡಗಿನ ವೇಷ ಮಾಡುತ್ತಿದ್ದರು. ಅವರೇ ನನಗೆ ಪ್ರೇರಣೆ ಎಂದು ಹೇಳುತ್ತಾರೆ ಪ್ರೇಮ ಕಿಶೋರ್. ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಪದ್ಯಗಳನ್ನು ಓದುತ್ತೇನೆ. ನನ್ನ ಜೊತೆ ಪಾತ್ರದ ಬಗ್ಗೆ ತಿಳಿದುಕೊಳ್ಳುತ್ತೇನೆ. ಸಂವಾದ ಹೇಗೆ ಸೃಷ್ಟಿ ಆಗ್ತದೆ ಅಂತ ನೋಡಿಕೊಳ್ಳುತ್ತೇನೆ. ಹಿರಿಯ ಕಲಾವಿದರ ಅರ್ಥಗಾರಿಕೆಯನ್ನು ಕೇಳುತ್ತೇನೆ. ನನಗೆ ಕೊಟ್ಟ ಪಾತ್ರವನ್ನು ಅಚ್ಚುಕಟ್ಟಾಗಿ ಚೊಕ್ಕವಾಗಿ ತಪ್ಪಾಗದ ರೀತಿಯಲ್ಲಿ ನಿಭಾಯಿಸಬೇಕು ಎನ್ನುವ ಬದ್ಧತೆ ನಿಲ್ಲಿಸಿಕೊಳ್ಳುತ್ತೇನೆ. ಪಾತ್ರದ ಮೂಲ ಆಶಯಕ್ಕೆ ಯಾವುದೇ ರೀತಿಯ ತೊಂದರೆಯಾಗದ ರೀತಿಯಲ್ಲಿ ಎಚ್ಚರವಹಿಸುತ್ತೇನೆ. ಮೇಳದ ಆಟಗಳನ್ನು ನೋಡುವುದಕ್ಕೆ ಹೋಗುತ್ತೇನೆ. ಯಾವೆಲ್ಲಾ ಪಾತ್ರಗಳನ್ನು…
ಸಾಗರ : ಗೀರ್ವಾಣಭಾರತೀ ಟ್ರಸ್ಟ್ (ರಿ.) ಸಾಗರ ಮತ್ತು ಪಾಂಚಜನ್ಯ ಕಲಾವೇದಿಕೆ ಅಂಬಾರಗೋಡ್ಲು ಇವರ ಸಂಯುಕ್ತಾಶ್ರಯದಲ್ಲಿ ಶ್ರೀಧರ ಡಿ.ಎಸ್. ವಿರಚಿತ ‘ಸತ್ವಶೈಥಿಲ್ಯ’ ಎಂಬ ಪ್ರಸಂಗದ ಯಕ್ಷಗಾನ ತಾಳಮದ್ದಲೆಯು ದಿನಾಂಕ 21 ಸೆಪ್ಟೆಂಬರ್ 2024ರಂದು ಸಾಗರದ ಸಸರವಳ್ಳಿ, ಗಾಡಿಗೆರೆ, ವೆಂಕಟರಮಣ ದೇವಸ್ಥಾನದಲ್ಲಿ ನಡೆಯಲಿದೆ. ಹಿಮ್ಮೇಳದಲ್ಲಿ ಯಜ್ಞೇಶ್ವರ ಹೆಗಡೆ ಅಂಬಾರಗೋಡ್ಲು, ಚಿನ್ಮಯ ಹೆಗಡೆ ಅಂಬಾರಗೋಡ್ಲು, ಭಾರ್ಗವ ಕೆ.ಎನ್. ಮತ್ತು ಮಿತ್ರ ಮಧ್ಯಸ್ಥ ಗೊರಮನೆ. ಅರ್ಥಧಾರಿಗಳಾಗಿ ದ್ರೋಣ – ಅರುಣ ಬಿ.ಟಿ., ಅಶ್ವತ್ಥಾಮ – ರವಿಶಂಕರ ಕೆ.ಆರ್. ಸಾಗರ, ಕೃಷ್ಣ – ಪ್ರಶಾಂತ ಮಧ್ಯಸ್ಥ ಗೊರಮನೆ ಮತ್ತು ಬಲರಾಮ – ಮಿತ್ರ ಮಧ್ಯಸ್ಥ ಗೊರಮನೆ ಇವರುಗಳು ಸಹಕರಿಸಲಿದ್ದಾರೆ.
ಕುಂದಾಪುರ : ಸಮುದಾಯ ಸಾಂಸ್ಕೃತಿಕ ಸಂಘಟನೆ (ರಿ.) ಕುಂದಾಪುರ ಇವರ ವತಿಯಿಂದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕುಂದಾಪುರ ಘಟಕ ಇವರ ಸಹಕಾರದೊಂದಿಗೆ ನಿರಂಜನ 100 ನೆನಪಿನಲ್ಲಿ ‘ತಿಂಗಳ ಓದು’ ಕಾರ್ಯಕ್ರಮವನ್ನು ದಿನಾಂಕ 22 ಸೆಪ್ಟೆಂಬರ್ 2024ರಂದು ಬೆಳಿಗ್ಗೆ 10-00 ಗಂಟೆಗೆ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜು ರಸ್ತೆಯಲ್ಲಿರುವ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ನಿರಂಜನರ ‘ಧ್ವನಿ’ ಎಂಬ ಕಥೆಯನ್ನು ವಾಸುದೇವ ಗಂಗೇರ ಇವರ ರಂಗ ಓದು ಮತ್ತು ನಿರ್ದೇಶನದಲ್ಲಿ ಸಮುದಾಯ ಕುಂದಾಪುರ ಇವರು ಪ್ರಸ್ತುತ ಪಡಿಸಲಿರುವರು.
ಬೇಳೂರು : ಯಶಸ್ವೀ ಕಲಾವೃಂದ (ರಿ.) ಕೊಮೆ, ತೆಕ್ಕಟ್ಟೆ ‘ಸಿನ್ಸ್ 1999 ಶ್ವೇತಯಾನ-61’ರ ಕಾರ್ಯಕ್ರಮದಡಿಯಲ್ಲಿ ರೋಟರಿ ಕ್ಲಬ್ ತೆಕ್ಕಟ್ಟೆ ಸಹಕಾರದೊಂದಿಗೆ ‘ಶಾಲೆಗಳಲ್ಲಿ ಒಡ್ಡೋಲಗ’ ಎಂಬ ಕಾರ್ಯಕ್ರಮವು ದಿನಾಂಕ 18 ಸೆಪ್ಟೆಂಬರ್ 2024ರಂದು ಬೇಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಡಾ. ಪ್ರದೀಪ ವಿ. ಸಾಮಗ ಇವರು ಮಾತನಾಡಿ “ಯಕ್ಷಗಾನದಲ್ಲಿ ಬೆಳಕಿಗೆ ಬಹಳ ಮಹತ್ವ ಇದೆ. ರಾತ್ರಿ ಕೋಡಂಗಿ ತಂದ ಬೆಳಕು ರಂಗದಲ್ಲಿ ಪ್ರತಿಷ್ಟಾಪಿಸಿದರೆ, ಬೆಳಿಗ್ಗೆ ಮಂಗಳ ಆಗುವವರೆಗೆ ಆರುವ ಹಾಗಿರಲಿಲ್ಲ. ಯಕ್ಷಗಾನಕ್ಕೂ ಬೆಳಕಿಗೂ ಅನ್ಯೋನ್ಯ ಸಂಬಂಧವಿದೆ. ಹಾಗಾಗಿ ಯಕ್ಷಗಾನಕ್ಕೆ ಬೆಳಕಿನ ಸೇವೆ ಅಂತಲೇ ಹೆಸರು. ಬೆಳಕು ಅಂದರೆ ಜ್ಞಾನ. ಈ ಜ್ಞಾನ ಪ್ರಸಾರದಲ್ಲಿ ತನ್ನದ್ದಾದಂತಹ ಯೋಗದಾನವನ್ನು ಕೊಡುತ್ತಾ ಬಂದದ್ದು ಯಕ್ಷಗಾನ. ಹಾಡು, ನೃತ್ಯ, ಅಭಿನಯ, ಮಾತು, ಪೌರಾಣಿಕ ಪ್ರಜ್ಞೆ, ಸಾಹಿತ್ಯ ಜ್ಞಾನ, ಭಾಷಾ ಸ್ವಾತಂತ್ರ್ಯ ಎಲ್ಲವನ್ನೂ ಒಳಗೊಂಡ ಸಮೃದ್ಧ ಕಲೆ ಯಕ್ಷಗಾನ. ಯಕ್ಷಗಾನಕ್ಕೆ ಬರುವ ಯುವ ಕಲಾವಿದರಿಗೆ ಆಸಕ್ತಿ ಬಹಳ ಇದೆ. ಆದರೆ ಅದರ ಬಗೆಗಿನ…
ಬೆಂಗಳೂರು : ಯಕ್ಷಗಾನದ ಕಂಚಿನ ಕಂಠದ ಭಾಗವತರೆಂದೇ ಪ್ರಸಿದ್ಧರಾದ ಶ್ರೀಯುತ ಕಾಳಿಂಗ ನಾವಡರ ನೆನಪಿನಲ್ಲಿ ಬೆಂಗಳೂರಿನ ಪ್ರತಿಷ್ಟಿತ ಸಾಂಸ್ಕೃತಿಕ ಸಂಸ್ಥೆಯಾದ ಕಲಾ ಕದಂಬ ಆರ್ಟ್ ಸೆಂಟರ್ ಪ್ರತೀ ವರ್ಷ ಯಕ್ಷಗಾನದ ಸಾಧಕರೊಬ್ಬರಿಗೆ ‘ಕಾಳಿಂಗ ನಾವಡ ಪ್ರಶಸ್ತಿ’ ನೀಡುತ್ತಿದೆ. ಹತ್ತು ಸಾವಿರ ನಗದು, ಬೆಳ್ಳಿ ತಟ್ಟೆ, ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆಯನ್ನು ‘ಕಾಳಿಂಗ ನಾವಡ ಪ್ರಶಸ್ತಿ’ಯು ಒಳಗೊಂಡಿರುತ್ತದೆ. ಗುಂಡ್ಮಿ ಸದಾನಂದ ಐತಾಳ್, ಸುಬ್ರಹ್ಮಣ್ಯ ಧಾರೇಶ್ವರ್, ಕೆಪ್ಪೆಕೆರೆ ಸುಬ್ರಾಯ ಹೆಗಡೆ, ಎಳ್ಳಾರೆ ವೆಂಕಟ್ರಾಯ ನಾಯಕ್, ನೆಬ್ಬೂರು ನಾರಾಯಣ ಹೆಗಡೆ, ಕರ್ಕಿ ಪ್ರಭಾಕರ ಭಂಡಾರಿ, ಕೆ.ಪಿ. ಹೆಗ್ಡೆ, ಟಿ. ಜಯಂತ್ ಕುಮಾರ್, ಮಂದಾರ್ತಿ ರಾಮಕೃಷ್ಣ, ಶ್ರೀಧರ ಹೆಬ್ಬಾರ್, ಗೋವಿಂದ ಉರಾಳ, ಶಂಕರ ಭಾಗವತ ಯಲ್ಲಾಪುರ, ಬಿದ್ಕಲ್‌ಕಟ್ಟೆ ಕೃಷ್ಣಯ್ಯ ಆಚಾರ್ಯ ಹಾಗೂ ಸುರೇಶ್ ರಾವ್ ಬಾರ್ಕೂರ್ ಅವರು ಈಗಾಗಲೇ ‘ಕಾಳಿಂಗ ನಾವಡ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. ಈ ಸಾಲಿನ ‘ಕಾಳಿಂಗ ನಾವಡ ಪ್ರಶಸ್ತಿ’ಯನ್ನು ಸುಮಾರು 46 ವರ್ಷಗಳಿಂದ ಯಕ್ಷಗಾನದ ವೀರ ವಾದ್ಯವೆನಿಸಿದ ಚಂಡೆಯ ನುಡಿಸಾಣಿಕೆಯಲ್ಲಿ ನೈಪುಣ್ಯತೆಯನ್ನು ಸಾಧಿಸಿ ಚಂಡೆಯ…
2024-25ನೆಯ ಸಾಲಿನ ಕನ್ನಡ ಪ್ರವೇಶ, ಕಾವ, ಜಾಣ ಹಾಗೂ ರತ್ನ ಪರೀಕ್ಷೆಗಳಿಗೆ ಅರ್ಹರಿಂದ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು 2024-25ನೆಯ ಸಾಲಿನ ಕನ್ನಡ ಪ್ರವೇಶ, ಕಾವ, ಜಾಣ ಹಾಗೂ ರತ್ನ ಪರೀಕ್ಷೆಗಳಿಗೆ ಅರ್ಹರಿಂದ ಅರ್ಜಿಯನ್ನು 15 ಸೆಪ್ಟೆಂಬರ್ 2024ರವರೆಗೆ ದಂಡದ ಶುಲ್ಕ ರೂ.50/- ಅನ್ನು ಹೆಚ್ಚುವರಿಯಾಗಿ ನೀಡಿ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗಿತ್ತು. ಸಾರ್ವಜನಿಕರ ಹಿತಾಸಕ್ತಿ ಮೇರೆಗೆ ಅರ್ಜಿಯನ್ನು ಸಲ್ಲಿಸಲು ದಿನಾಂಕ 30-09-20224ರ ಅವಧಿಯನ್ನು ವಿಸ್ತರಿಸಲಾಗಿದೆ. ಪರೀಕ್ಷಾರ್ಥಿಗಳು ಇದರ ಸದುಪಯೋಗವನ್ನು ಪಡೆಯಬಹುದು. ಪರೀಕ್ಷಾ ನಿಯಮಾವಳಿ ಹಾಗೂ ಅರ್ಜಿಯನ್ನು ರೂ.25/- ಶುಲ್ಕ ಪಾವತಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ಪುಸ್ತಕ ಮಾರಾಟ ಮಳಿಗೆಯಲ್ಲಿ (ಬೆಂಗಳೂರು) ಪಡೆಯಬಹುದು. ಪರೀಕ್ಷಾ ಅರ್ಜಿಗಳನ್ನು ಅಂತರ್ಜಾಲ ತಾಣ www.kasapa.in ಮೂಲಕ ಸಹ ಪಡೆದುಕೊಳ್ಳಬಹುದು. ಇವರು ನಿಗದಿತ ಪರೀಕ್ಷಾ ಶುಲ್ಕದೊಂದಿಗೆ ಅರ್ಜಿ ಶುಲ್ಕ ರೂ.25/-ಗಳನ್ನು ಪ್ರತ್ಯೇಕವಾಗಿ ಪಾವತಿಸಬೇಕು. ಹೆಚ್ಚಿನ ವಿವರಗಳಿಗೆ ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು – 560018 ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಂತರ್ಜಾಲ ತಾಣಗಳಾದ ಫೇಸ್ ಬುಕ್ : https://www.facebook.com/kasapaofficial, https://www.facebook.com/KannadaSahityaParishattu ಟ್ವಿಟರ್ : https://twitter.com/kannadaparishat ಕೂ…
ಹಾಸನ : ನೆಲದನಿ ಸಾಂಸ್ಕೃತಿಕ ಸಂಘ (ರಿ.) ದಿಂಡಗೂರು ಮತ್ತು ಮಾಯ್ಕ ಟ್ರಸ್ಟ್ ಹಾಸನ ಹಾಗೂ ಹಾಸನ ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಎರಡು ದಿನದ ‘ನಾಟಕೋತ್ಸವ’ವನ್ನು ದಿನಾಂಕ 20 ಸೆಪ್ಟೆಂಬರ್ 2024 ಮತ್ತು 21 ಸೆಪ್ಟೆಂಬರ್ 2024ರಂದು ಸಂಜೆ 6-00 ಗಂಟೆಗೆ ಹಾಸನದ ನೆಲದನಿ ಸಾಂಸ್ಕೃತಿಕ ಸಂಘದಲ್ಲಿ ಹಮ್ಮಿಕೊಳ್ಳಲಾಗಿದೆ. ಜಂಗಮ ಕಲೆಕ್ಟಿವ್ಸ್ ತಂಡದವರಿಂದ ದಿನಾಂಕ 20 ಸೆಪ್ಟೆಂಬರ್ 2024ರಂದು ಚಂದ್ರಶೇಖರ್ ಕೆ. ಇವರ ನಿರ್ದೇಶನದಲ್ಲಿ ‘ಪಂಚಮಪದ’ ಮತ್ತು ದಿನಾಂಕ 21 ಸೆಪ್ಟೆಂಬರ್ 2024ರಂದು ಲಕ್ಷ್ಮಣ ಕೆ.ಪಿ. ಇವರ ನಿರ್ದೇಶನದಲ್ಲಿ ‘ಬಾಬ್ ಮಾರ್ಲಿ ಫ್ರಂ ಕೋಡಿಹಳ್ಳಿ’ ಎಂಬ ನಾಟಕ ಪ್ರದರ್ಶನ ನಡೆಯಲಿದೆ.
ಉಡುಪಿ: ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣ ಇವರಿಗೆ ಅಭಿನಂದನಾ ಸಮಾರಂಭವು ದಿನಾಂಕ 12 ಸೆಪ್ಟೆಂಬರ್ 2024ರ ಗುರುವಾರದಂದು ಬುಡ್ಡಾರು ಯಕ್ಷಸಂಜೀವ ಯಕ್ಷಗಾನ ಕಲಾಕೇಂದ್ರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಶಾಸಕರಾದ ಯಶ್ ಪಾಲ್ ಸುವರ್ಣ ಮಾತನಾಡಿ “ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲಿಸಿಕೊಡುವಂತೆ ಅನೇಕ ಅನೇಕ ಶಾಲೆಗಳಿಂದ ಯಕ್ಷ ಶಿಕ್ಷಣ ಟ್ರಸ್ಟ್‌ಗೆ ಬೇಡಿಕೆ ಬರುತ್ತಿದ್ದು, ಇದರಿಂದ ಯಕ್ಷಗಾನದ ಮಹತ್ವ ಅರಿವಾಗುತ್ತದೆ. ಯಕ್ಷಗಾನದ ಮೂಲಕ ಉಡುಪಿಯ ಕೀರ್ತಿ ಹೆಚ್ಚಿಸುವ ಕೆಲಸವನ್ನು ಬನ್ನಂಜೆ ಸಂಜೀವ ಸುವರ್ಣ ಮಾಡುತ್ತಿದ್ದಾರೆ.” ಎಂದು ಹೇಳಿದರು. ಸಂವಾದ ಕಾರ್ಯಕ್ರಮದಲ್ಲಿ ಸಭಿಕರ ಪ್ರಶ್ನೆಗಳಿಗೆ ಉತ್ತರಿಸಿದ ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣ ತಮ್ಮ 70 ವರ್ಷಗಳ ಬದುಕಿನ ಹಿನ್ನೋಟವನ್ನು ತೆರೆದಿಟ್ಟರು. ಈ ಸಂದರ್ಭದಲ್ಲಿ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ, ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಹಿರಿಯ ಕಲಾವಿದ ಡಾ. ಭಾಸ್ಕರಾನಂದ ಕುಮಾರ್ ಉಪಸ್ಥಿತರಿದ್ದರು. ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಸ್ವಾಗತಿಸಿ, ಡಾ. ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು.
ಬೆಂಗಳೂರು : ಸಂಸ ಥಿಯೇಟರ್ ಬೆಂಗಳೂರು ಇವರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಇವರ ಸಹಕಾರದೊಂದಿಗೆ ‘ಸಂಸ ನಾಟಕೋತ್ಸವ’ವನ್ನು ಬೆಂಗಳೂರಿನ ಮಲ್ಲತಹಳ್ಳಿಯ ಕಲಾಗ್ರಾಮದಲ್ಲಿ ದಿನಾಂಕ 23 ಸೆಪ್ಟೆಂಬರ್ 2024ರಿಂದ 26 ಸೆಪ್ಟೆಂಬರ್ 2024ರವರೆಗೆ ಆಯೋಜಿಸಲಾಗಿದೆ. ದಿನಾಂಕ 23 ಸೆಪ್ಟೆಂಬರ್ 2024ರಂದು ಸಂಜೆ 6-45ಕ್ಕೆ ಬೆಂಗಳೂರಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎಲ್.ಎನ್. ಮುಕುಂದರಾಜ್ ಇವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ಡಾ. ಎಚ್.ಎಲ್. ಪುಷ್ಪ ಇವರು ಉದ್ಘಾಟನೆ ಮಾಡಲಿರುವರು. ಸಭಾ ಕಾರ್ಯಕ್ರಮದ ಬಳಿಕ ಹಾಸನದ ಕಲಾಸಿರಿ ನಾಟಕ ಶಾಲೆಯವರಿಂದ ರಾಜೇಂದ್ರ ಕಾರಂತ ರಚಿಸಿರುವ ಜಯಶಂಕರ್ ಬೆಳಗುಂಬ ಇವರ ನಿರ್ದೇಶನದಲ್ಲಿ ‘ಸಂಜೆ ಹಾಡು’ ನಾಟಕ ಪ್ರದರ್ಶನ ನಡೆಯಲಿದೆ. ರಾಜೇಂದ್ರ ಕಾರಂತ ರಚಿಸಿದ ನಾಟಕ ‘ಸಂಜೆ ಹಾಡು’ ಈ ದಿನಮಾನಗಳಲ್ಲಿ ಹಣದ ಹಿಂದೆ ಬಿದ್ದ ಮನುಷ್ಯ, ಸಂಬಂಧಗಳಿಗೆ ಬೆಲೆ ಕೊಡುವುದು ಕಡಿಮೆಯಾಗಿದೆ. ಇವನಲ್ಲ ಇದ್ದರೂ ಮನುಷ್ಯನ ಸಂಜೆಕಾಲದಲ್ಲಿ ಆಸರೆ ಆಗಬೇಕಾದ ಮಕ್ಕಳು, ಎಲ್ಲೋ ಒಂದು ಕಡೆ ಸೆಟ್ಲಾಗುವ ಭರದಲ್ಲಿ ಅನಾಥಾಶ್ರಮಗಳು ಹೆಚ್ಚು…
ಉಡುಪಿ : ಉಡುಪಿ ಜಿಲ್ಲಾಡಳಿತವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಆಯೋಜಿಸಲಾಗುತ್ತಿರುವ ಸುವರ್ಣ ಸಂಭ್ರಮ ಕಾರ್ಯಕ್ರಮದ ಅಂಗವಾಗಿ ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠ ಆಶ್ರಯದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಆರ್ಟಿಸ್ಟ್ ಫೋರಂ ಸಹಯೋಗದೊಂದಿಗೆ ಮಕ್ಕಳಿಗಾಗಿ ಏರ್ಪಡಿಸಿದ ಚಿತ್ರಕಲಾ ಸ್ಪರ್ಧೆಯು ದಿನಾಂಕ 13 ಸೆಪ್ಟೆಂಬರ್ 2024ರ ಶುಕ್ರವಾರದಂದು ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಪರ್ಯಾಯ ಪುತ್ತಿಗೆ ಮಠಾಧಿಶರಾದ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿ “ಕರ್ನಾಟಕ ನಾಮಕರಣಗೊಂಡು 50 ಸಂವತ್ಸರಗಳು ಪೂರೈಸುತ್ತಿರುವ ಈ ಸಂದರ್ಭದಲ್ಲಿ ಕನ್ನಡ ಭಾಷೆ ನಾಡಿನ ಕನ್ನಡಿಗರ ಉಸಿರಾಗಲಿ. ಬಹುಮಾನಗಳಿಕೆಗಿಂತ ಸ್ಪರ್ಧೆಗಳಲ್ಲಿ ಭಾಗವಹಿಸುವಿಕೆ ಮುಖ್ಯ. ಸ್ಪರ್ಧಾ ಮನೋಭಾವ ಮಕ್ಕಳಲ್ಲಿರಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಮಾತನಾಡಿ “ಬಹು ಭಾಷೆ, ಬಹು ಕಲೆ ಸಂಸ್ಕೃತಿಯ ಈ ಕರಾವಳಿ ಭಾಗದಲ್ಲಿ ಮುಂದಿನ ತಿಂಗಳು ಮಂಗಳೂರಿನಲ್ಲಿ ನಡೆಯುವ ಬಹು ಸಂಸ್ಕೃತಿ ಉತ್ಸವಕ್ಕೆ ಪೂರಕವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಬೇರೆ ಬೇರೆ ಸ್ಪರ್ಧೆಗಳನ್ನು…