Subscribe to Updates
Get the latest creative news from FooBar about art, design and business.
Author: roovari
ಸ್ವಿಟ್ಜರ್ಲ್ಯಾಂಡ್ : ಭಾರತೀಯ ಶಾಸ್ತ್ರೀಯ ಸಂಗೀತ ಕಛೇರಿ ವಯೋಲಿನ್ ಟ್ರಿಯೋ ಕಾರ್ಯಕ್ರಮವು ದಿನಾಂಕ 22 ಜೂನ್ 2025ರಂದು ಸಂಜೆ 4-00 ಗಂಟೆಗೆ ಸ್ವಿಟ್ಜರ್ಲ್ಯಾಂಡ್ ನಲ್ಲಿ ನಡೆಯಲಿದೆ. ಡಾ. ಮೈಸೂರು ಮಂಜುನಾಥ್, ಸುಮಂತ್ ಮಂಜುನಾಥ್ ಮತ್ತು ಮಾಳವಿ ಇವರ ವಯೋಲಿನ್ ವಾದನಕ್ಕೆ ಶ್ರೀರಂಗ ಮಿರಾಜ್ಕರ್ ಇವರು ತಬಲಾ ಹಾಗೂ ಚಿದು ನಾರಾಯಣನ್ ಇವರು ಮೃದಂಗದಲ್ಲಿ ಸಾಥ್ ನೀಡಲಿದ್ದಾರೆ.
ಮೈಸೂರು : ಬೆಂಗಳೂರಿನ ರಂಗಸಂಪದ ರಂಗ ತಂಡದ ವತಿಯಿಂದ ಸುವರ್ಣ ಸಂಭ್ರಮದ ಪ್ರಯುಕ್ತ ದಿನಾಂಕ 22 ಜೂನ್ 2025ರಂದು ಸಂಜೆ 4-00 ಹಾಗೂ 6-30 ಗಂಟೆಗೆ ಹಿರಿಯ ರಂಗ ಕಲಾವಿದೆ ಉಮಾಶ್ರೀ ಅಭಿನಯಿಸುವ ‘ಶರ್ಮಿಷ್ಠೆ’ ಏಕವ್ಯಕ್ತಿ ನಾಟಕ ಪ್ರದರ್ಶನವನ್ನು ಮೈಸೂರಿನ ನಟನ ರಂಗಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಡಾ. ಬೇಲೂರು ರಘುನಂದನ್ ನಾಟಕ ರಚಿಸಿದ್ದು, ಚಿದಂಬರ ರಾವ್ ಜಂಬೆ ವಿನ್ಯಾಸ ನಿರ್ದೇಶನ ಮಾಡಿದ್ದು, ಟಿಕೆಟ್ ದರ ರೂ.150/- ನಿಗದಿ ಮಾಡಲಾಗಿದೆ.
ನಮ್ಮ ಕುಟುಂಬದಲ್ಲಿ ಒಬ್ಬರಾಗಿ ಬೆರೆತುಹೋಗಿರುವ ಸಂಪಿಗೆ ಲಕ್ಷ್ಮಮ್ಮನವರು ನನ್ನ ಬಾಲ್ಯದ ದಿನಗಳಲ್ಲಿ ಪುನರಾವರ್ತಿತವಾಗಿ ಹೇಳುತ್ತಿದ್ದ ವಿಧಿಯಮ್ಮನ ಜನಪದ ಕಥೆಯು ಸೋಫೋಕ್ಲಿಸ್ಸಿನ ‘ಈಡಿಪಸ್ ರೆಕ್ಸ್’ ನಾಟಕಕ್ಕೆ ಹೋಲುತ್ತಿದ್ದುದನ್ನು ಸಾಹಿತ್ಯಾಸಕ್ತಿ ಬೆಳೆದ ನಂತರದ ದಿನಗಳಲ್ಲಿ ಕಂಡುಕೊಂಡೆ. ಸಿಗ್ಮಂಡ್ ಫ್ರಾಯ್ಡ್ ಈ ಕಥೆಯ ಹಿನ್ನೆಲೆಯಲ್ಲಿ ‘ಈಡಿಪಸ್ ಕಾಂಪ್ಲೆಕ್ಸ್’ ಎಂಬ ಮಾನಸಿಕ ಪರಿಕಲ್ಪನೆಯೊಂದನ್ನು ಹೆಸರಿಸಿದ್ದಾನೆ. ವಿಧಿಯಮ್ಮನ ಕಥೆಯನ್ನು ಕಾದಂಬರಿಯಾಗಿಸುವ ಕನಸು ಬಹಳ ದಿನಗಳಿಂದ ಇತ್ತು. ಆದರೆ ಕಾದಂಬರಿಯ ವಿಸ್ತಾರವಾದ ವ್ಯಾಪ್ತಿಗೆ ಕಥಾ ಎಳೆಯು ಸಾಲದು ಎನ್ನಿಸಿತು. ಹೀಗಾಗಿ ವಿಧಿಗೆ ಸಂಬಂಧಿಸಿದ ಜನಪದ ಕಥೆಗಳನ್ನೆಲ್ಲಾ ಒಟ್ಟು ಹಾಕತೊಡಗಿದೆ. ಕನ್ನಡ ಮಾತ್ರವಲ್ಲದೆ ಮರಾಠಿ, ಸಂತಾಲಿ, ಗೊಂಡಿ, ತಮಿಳು ಮೊದಲಾದ ಇತರ ಭಾಷೆಗಳಲ್ಲಿಯೂ ಇರುವ ಹಲವು ಜನಪದ ಕಥೆಗಳನ್ನು ಆಧರಿಸಿ ನನ್ನ ಕಲ್ಪನೆಯ ಸಂಯೋಗದೊಂದಿಗೆ ಒಂದು ಬಂಧದಲ್ಲಿ ಕಾದಂಬರಿಯ ರೂಪಕ್ಕೆ ತರುವ ಯತ್ನವನ್ನು ಮಾಡಿದ್ದೇನೆ. ಈ ಕಥೆಗಳಲ್ಲಿ ಕೆಲವು ‘ಬದುಕು ವಿಧಿಯ ಅನುಸಾರವೇ ನಡೆಯುತ್ತದೆ’ ಎಂಬ ಸಿದ್ಧಾಂತವನ್ನು ಸಾರಿದರೆ, ‘ಮನುಷ್ಯ ಪ್ರಯತ್ನದಿಂದ ಅಥವಾ ಯುಕ್ತಿಯಿಂದ ವಿಧಿಗೇ ತಿರುಗೇಟು ನೀಡಬಹುದು’ ಎಂಬ ವಾದವನ್ನು…
ದುಬೈ : ಯಕ್ಷಗಾನ ಅಭ್ಯಾಸ ಕೇಂದ್ರ ಯು.ಎ.ಇ. ಇದರ ‘ದಶಮಾನೋತ್ಸವ ಸಂಭ್ರಮ’ವನ್ನು ಯಕ್ಷಧ್ರುವ ಪಟ್ಲ ಫೌಂಡೇಷನ್ ಯು.ಎ.ಇ. ಘಟಕದ ಸಹಯೋಗದೊಂದಿಗೆ ದಿನಾಂಕ 29 ಜೂನ್ 2025ರಂದು ಬೆಳಿಗ್ಗೆ 9-00 ಗಂಟೆಗೆ ದುಬೈ ಯು.ಎ.ಇ. ಕರಾಮದ ಇಂಡಿಯನ್ ಹೈಸ್ಕೂಲಿನ ಶೇಖ್ ರಷೀದ್ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದೆ. ದಶಮ ಸಂಭ್ರಮದ ಪ್ರಯುಕ್ತ ಯು.ಎ.ಇ.ಯ ಏಳು ಮಂದಿ ಸಾಧಕರನ್ನು ಮತ್ತು ಮೂರು ಸಾಧಕ ಸಂಸ್ಥೆಗಳನ್ನು ಸನ್ಮಾನಿಸಲಾಗುವುದು. ಸರ್ವೋತ್ತಮ ಶೆಟ್ಟಿ (ಸಂಘಟನೆ), ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ (ಕಲಾ ಪೋಷಕ), ಪುತ್ತಿಗೆ ವಾಸುದೇವ ಭಟ್ (ಉದ್ಯಮ), ಬಾಲಕೃಷ್ಣ ಸಾಲಿಯಾನ್ (ಸಮಾಜ ಸೇವೆ), ಬಿ.ಕೆ. ಗಣೇಶ ರೈ (ಮಾಧ್ಯಮ), ಡೋನಿ ಕೊರೆಯಾ (ನಾಟಕ), ರೂಪಾ ಕಿರಣ್ (ಭರತನಾಟ್ಯ), ಶ್ರೀ ರಾಜರಾಜೇಶ್ವರಿ ಭಜನಾ ತಂಡ (ಭಜನೆ), ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿ (ಸಂಸ್ಕೃತಿ) ಕನ್ನಡ ಪಾಠಶಾಲೆ ದುಬೈ (ಕನ್ನಡ ನಾಡು-ನುಡಿ-ಭಾಷೆ) ಸನ್ಮಾನ ಆಯ್ಕೆಯಾದ ಸಾಧಕರು ಹಾಗೂ ಸಂಸ್ಥೆಗಳು. ಬೆಳಗ್ಗೆ 9-00 ಗಂಟೆಗೆ ಆರಂಭವಾಗುವ ಕಾರ್ಯಕ್ರಮಕ್ಕೆ ಒಟ್ಟು ಹದಿನೆಂಟು ಮಂದಿಯ ಅಬ್ಬರ…
ಬೆಂಗಳೂರು : ಎಸ್.ವಿ.ಎನ್. ಮ್ಯೂಜಿಕ್ ಅಕಾಡೆಮಿ, ಎಂ.ಡಿ.ಎನ್.ಡಿ. ಮತ್ತು ದೊಸಾ ಸ್ಟುಡಿಯೋ ಇವರ ಆಶ್ರಯದಲ್ಲಿ ವಿಶ್ವ ಸಂಗೀತ ದಿನಾಚರಣೆಯನ್ನು ದಿನಾಂಕ 21 ಮತ್ತು 22 ಜೂನ್ 2025ರಂದು ಸಂಜೆ 6-00 ಗಂಟೆಗೆ ಬೆಂಗಳೂರಿನ ರಮಣ ಮಹರ್ಷಿ ಹೆರಿಟೇಜ್ ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 21 ಜೂನ್ 2025ರಂದು ಜಯಂತಿ ಕುಮಾರೇಶ್ ಇವರ ವೀಣಾ ವಾದನಕ್ಕೆ ಅಂಬಿ ಸುಬ್ರಮಣ್ಯಂ ಇವರು ವಯೋಲಿನ್, ಕೆ.ಯು. ಜಯಚಂದ್ರ ರಾವ್ ಇವರು ಮೃದಂಗ ಮತ್ತು ಗಿರಿಧರ್ ಉಡುಪ ಇವರು ಘಟಂನಲ್ಲಿ ಸಾಥ್ ನೀಡಲಿದ್ದಾರೆ. ದಿನಾಂಕ 22 ಜೂನ್ 2025ರಂದು ತ್ರಿಚೂರ್ ಬ್ರದರ್ಸ್ ಇವರ ಹಾಡುಗಾರಿಕೆ ಎಸ್. ಜನಾರ್ದನ್ ಇವರು ವಯೋಲಿನ್, ತ್ರಿಚೂರ್ ಆರ್. ಮೋಹನ್ ಇವರು ಮೃದಂಗ ಮತ್ತು ಓಂಕಾರ್ ರಾವ್ ಜಿ. ಇವರು ಘಟಂನಲ್ಲಿ ಸಾಥ್ ನೀಡಲಿದ್ದಾರೆ.
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ವಿವಿಧ ಪ್ರಕಾರಗಳಲ್ಲಿ ಪುರಸ್ಕಾರಗಳನ್ನು ನೀಡಲು ಒಟ್ಟು 54 ದತ್ತಿ ಪುರಸ್ಕಾರಗಳಿದ್ದು, ಇವುಗಳಿಗೆ 2024ರ ಜನವರಿ 1ರಿಂದ ಡಿಸಂಬರ್ 31ರೊಳಗೆ ಪ್ರಕಟವಾದ ಪುಸ್ತಕಗಳನ್ನು ಆಹ್ವಾನಿಸಲಾಗಿದೆ. ಕಾದಂಬರಿ, ಕಥಾ ಸಂಕಲನ, ಅನುವಾದ, ಸಂಶೋಧನೆ, ಮಕ್ಕಳ ಸಾಹಿತ್ಯ, ವೈಚಾರಿಕ ಬರಹಗಳು, ವೈದ್ಯಕೀಯ ಸಾಹಿತ್ಯ, ಇತಿಹಾಸ, ಜಾನಪದ, ಮನೋವಿಜ್ಞಾನ, ಸಿನಿಮಾ ಸಾಹಿತ್ಯ, ಕೃಷಿಗೆ ಸಂಬಂಧಿಸಿದ ಕೃತಿಗಳು, ಪ್ರವಾಸ ಸಾಹಿತ್ಯ, ಮಹಿಳೆಯರಿಗೆ ಸಂಬಂಧಿಸಿದ ಮಹಿಳೆಯರು ರಚಿಸಿದ ಕೃತಿಗಳು, ನಾಟಕ, ಪ್ರಬಂಧ, ಸಂಪಾದನೆ, ಜೈನ ಸಾಹಿತ್ಯದ ಕುರಿತ ಸಂಶೋಧನೆ ಮೊದಲಾದ ಕ್ಷೇತ್ರಗಳಿಗೆ ರಚಿತವಾದ ಕೃತಿಗಳಿಗೆ ದತ್ತಿ ಪುರಸ್ಕಾರಗಳು ಇರುತ್ತವೆ. ಪುಸ್ತಕ ದತ್ತಿ ಪ್ರಶಸ್ತಿಗೆ ಪುಸ್ತಕ ಕಳುಹಿಸುವವರು ಸಮಗ್ರ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿರಬೇಕು, ಪುಸ್ತಕ ಕಳುಹಿಸುವಾಗ ತಮ್ಮ ಸದಸ್ಯತ್ವದ ಸಂಖ್ಯೆಯನ್ನು ನಮೂದಿಸಿರಬೇಕು, ಒಂದೊಮ್ಮೆ ಸದಸ್ಯರಾಗದಿದ್ದಲ್ಲಿ ಕೂಡಲೇ ಸದಸ್ಯತ್ವವನ್ನು ಪಡೆದು ಅರ್ಜಿಯನ್ನು ಸಲ್ಲಿಸ ಬಹುದು. ಪುರಸ್ಕಾರದ ಕುರಿತು ಕನ್ನಡ ಸಾಹಿತ್ಯ ಪರಿಷತ್ತು ತೀರ್ಪುಗಾರರ ಮಂಡಳಿಯನ್ನು ರಚಿಸಿ ಆಯ್ಕೆಯನ್ನು ಮಾಡುತ್ತದೆ. ಈ ಮಂಡಳಿಯ…
ಮಡಿಕೇರಿ : ಕೊಡಗಿನ ಕವಿ, ಬರಹಗಾರ, ಕೊಡಗು ಜಿಲ್ಲಾ ದಸಾಪ ಅಧ್ಯಕ್ಷ ಅರ್ಜುನ್ ಮೌರ್ಯ ಇವರಿಗೆ 2025ರ ರಾಷ್ಟ್ರಮಟ್ಟದ “ಇಂಡಿಯನ್ ಐಕಾನಿಕ್ ಆಧರ್ -2025” ಅವಾರ್ಡ್ ಲಭಿಸಿದೆ. ಅರ್ಜುನ್ ಮೌರ್ಯ ಅವರ ಸಾಹಿತ್ಯ ಸೇವೆ ಗುರುತಿಸಿ “ವೈಡ್ ಇಂಡಿಯಾ ಅವಾರ್ಡ್” ನಂಸ್ಥೆಯ ವತಿಯಿಂದ ಹೈದರಾಬಾದ್ ನ ‘ದಿ ಪಾರ್ಕ್ ಹೊಟೇಲ್ ನಲ್ಲಿ ನಡೆದ ಸಮಾರಂಭದಲ್ಲಿ ಬಾಲಿವುಡ್ ತಾರೆ ಕಾವ್ಯ ತಾಪರ್ ಹಾಗೂ ವೈಡ್ ಇಂಡಿಯಾ ಅವಾರ್ಡ್ ಸಂಸ್ಥೆಯ ಸಿ. ಇ. ಓ. ವಿನಯ್ ಕುಮಾರ್ ಪ್ರಶಸ್ತಿ ನೀಡಿ ಗೌರವಿಸಿದರು. ಇತ್ತೀಚೆಗಷ್ಟೇ ಅರ್ಜುನ್ ಮೌರ್ಯ ಅವರ “ಬೆಂದೊಡಲ ಕುಣಿತ” ಕಾವ್ಯ ಸಂಕಲನವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮುಕುಂದರಾಜ್ ಕೊಡಗು ವಿಶ್ವವಿದ್ಯಾಲಯದಲ್ಲಿ ನಡೆದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಲೋಕಾರ್ಪಣೆ ಮಾಡಿದ್ದರು. ಅರ್ಜುನ್ ಮೌರ್ಯ ಅವರು ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ವಿರಾಜಪೇಟೆ ಸೈಂಟ್ ಆನ್ಸ್ ಪದವಿ ಕಾಲೇಜಿನ ಕನ್ನಡ ಭಾಷಾ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬೆಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ವತಿಯಿಂದ ‘ಮೂಡಲಪಾಯ ಯಕ್ಷೋತ್ಸವ’ ಕಾರ್ಯಕ್ರಮವನ್ನು ದಿನಾಂಕ 24 ಮತ್ತು 25 ಜೂನ್ 2025ರಂದು ಬೆಳಿಗ್ಗೆ 10-00 ಗಂಟೆಗೆ ಬೆಂಗಳೂರಿನ ನಯನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 24 ಜೂನ್ 2025ರಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಾಲ್ಲೂರು ಶಿವರಾಮ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾನ್ಯ ನಿರ್ದೇಶಕರಾದ ಶ್ರೀಮತಿ ಕೆ.ಎಂ. ಗಾಯತ್ರಿ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಮೈಸೂರಿನ ಶ್ರೀ ಹೇಮಾಂಭಿಕಾ ಯಕ್ಷಗಾನ ಕಲಾ ಸಂಘ (ರಿ.) ಇವರಿಂದ ‘ಅಂಗಧ ಸಂಧಾನ’ ಮೂಡಲಪಾಯ ತಾಳಮೇಳ ಪ್ರಸ್ತುತಗೊಳ್ಳಲಿದೆ. ಮಧ್ಯಾಹ್ನ 12-00 ಗಂಟೆಗೆ ‘ಮೂಡಲಪಾಯ ಕೇಳಿಕೆ, ಘಟ್ಟದಕೋಣೆ, ಬೊಂಬೆಯಾಟದ ಪಾತ್ರಗಳ ವೈಶಿಷ್ಟ್ಯ’ ಕುರಿತು ವಿಚಾರ ಸಂಕಿರಣ ನಡೆಯಲಿದೆ. ಬಳಿಕ ಬೆಂಗಳೂರಿನ ಡಾ. ದತ್ತಾತ್ರೇಯ ಅರಳಿಕಟ್ಟೆ ಇವರಿಂದ ‘ಕುಮಾರ ಸಂಭವ’ ಮೂಡಲಪಾಯ ಬೊಂಬೆಯಾಟ ಪ್ರದರ್ಶನಗೊಳ್ಳಲಿದೆ. ದಿನಾಂಕ 25 ಜೂನ್ 2025ರಂದು ‘ಮೂಡಲಪಾಯ ಯಕ್ಷಗಾನದ…
ಬೈಂದೂರು: ಸುರಭಿ ರಿ. ಬೈಂದೂರು, ರಂಗಸ್ಥಳ ಉಪ್ಪಂದ ಹಾಗೂ ಕಂಬದ ಕೋಣೆ ರೈತರ ಸೇವಾ ಸಹಕಾರಿ ಸಂಘ ಉಪ್ಪುಂದ ಇವರ ಸಹಯೋಗದಲ್ಲಿ ಭಾವ ಕವಿ ಪ್ರಸಿದ್ಧ ಸಾಹಿತಿ ಡಾ. ಎಚ್.ಎಸ್.ವೆಂಕಟೇಶ್ ಮೂರ್ತಿ ಇವರಿಗೆ “ಭಾವ ನಮನ” ಕಾರ್ಯಕ್ರಮ ದಿನಾಂಕ 14 ಜೂನ್ 2025ರಂದು ಉಪ್ಪುಂದದ ಕಂಬದ ಕೋಣೆ ರೈತರ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು “ರಂಗಸ್ಥಳ” ಉಪ್ಪಂದ ಇದರ ಅಧ್ಯಕ್ಷರಾದ ಯು. ಎಚ್. ರಾಜಾರಾಮ ಭಟ್ ವಹಿಸಿದ್ದು, ಕಂಬದ ಕೋಣೆ ರೈತರ ಸೇವಾ ಸಹಕಾರಿ ಸಂಘ ಉಪ್ಪುಂದ ಇದರ ಅಧ್ಯಕ್ಷರಾದ ಶ್ರೀ ಪ್ರಕಾಶ್ ಚಂದ್ರ ಶೆಟ್ಟಿ ಶುಭಶಂಸನೆಗೈದು, ಡಾ. ವೆಂಕಟೇಶ್ ಮೂರ್ತಿ ಇವರ ಸಾಹಿತ್ಯ ಸಾಧನೆಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಎಚ್. ಎಸ್. ವಿ. ಯವರ ಕುರಿತು “ನುಡಿ ನಮನ” ಸಲ್ಲಿಸಿದ ಅಧ್ಯಾಪಕ ಸಂದೀಪ ದೇವಾಡಿಗ ಎಚ್.ಎಸ್.ವಿ ಅವರ ಬಗ್ಗೆ ನುಡಿ ನಮನದಲ್ಲಿ ಮಾತನಾಡುತ್ತಾ ಎಚ್.ಎಸ್.ವಿ ಯವರು “ಅಜರಾಮರ” ಎನ್ನುವ ಮಾತನ್ನು ಹೇಳಿದರು. ಆಶಯ ನುಡಿಗಳನ್ನಾಡಿದ…
ನವದೆಹಲಿ: ಕೇಂದ್ರ ಸಾಹಿತ್ಯ ಅಕಾಡೆಮಿಯ 2025ನೇ ಸಾಲಿನ ‘ಯುವ ಪುರಸ್ಕಾರ’ಕ್ಕೆ ಯುವ ಲೇಖಕ ಆರ್. ಅವರ ‘ಪಚ್ಚೆಯ ಜಗುಲಿ’ ವಿಮರ್ಶಾ ಸಂಕಲನ ಹಾಗೂ ‘ಬಾಲ ಸಾಹಿತ್ಯ ಪುರಸ್ಕಾರ’ಕ್ಕೆ ಲೇಖಕ ಕೆ. ಶಿವಲಿಂಗಪ್ಪ ಹಂದಿಹಾಳು ಅವರ ‘ನೋಟ್ ಬುಕ್’ ಮಕ್ಕಳ ಕಥಾಸಂಕಲನ ಆಯ್ಕೆಯಾಗಿದೆ. ಈ ಪ್ರಶಸ್ತಿಗಳು ತಲಾ ರೂಪಾಯಿ 50 ಸಾವಿರ ನಗದು ಹಾಗೂ ಫಲಕಗಳನ್ನು ಪಡೆಯಲಿದ್ದಾರೆ. ಶಿವಲಿಂಗಪ್ಪ ಹಂದಿಹಾಳು ಇವರು ಬಳ್ಳಾರಿ ಜಿಲ್ಲೆಯ ಹಂದಿ ಹಾಳು ಗ್ರಾಮದವರು. ಹಂದಿ ಹಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ‘ನಾನು ಮತ್ತು ಕನ್ನಡಕ’ (ಕವನ ಸಂಕಲನ), ‘ಎಳೆಬಿಸಿಲು’ (ಮಕ್ಕಳ ಸಾಹಿತ್ಯ ಸಂಪದ), ‘ಶಾವೋಲಿನ್’ (ಇಂಗ್ಲಿಷ್ ಮೂಲ ಮಕ್ಕಳ ಕತೆಗಳು), ‘ಆನಂದಾವಲೋಕನ’ (ಭಾರತೀಯ ಮಕ್ಕಳ ಸಾಹಿತ್ಯ ಕುರಿತು), ‘ಬಳ್ಳಾರಿಯ ಬೆಡಗು’ (ಕಥಾ ಸಂಕಲನ), ‘ದಿ ಯಂಗ್ ಸೈಂಟಿಸ್ಟ್’ (ಮಕ್ಕಳ ಕಾದಂಬರಿ) ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕನ್ನಡ ವಿಭಾಗದಲ್ಲಿ ಬಾಲ ಸಾಹಿತ್ಯ ಪುರಸ್ಕಾರಕ್ಕೆ ಲೇಖಕರಾದ…