Author: roovari

ಮನುಷ್ಯ ಎಷ್ಟೇ ಗಂಭೀರವಾಗಿ, ಗಾಂಭೀರ್ಯ ತೋರ್ಪಡಿಸುತ್ತಿದ್ದರೂ ಒಮ್ಮೊಮ್ಮೆ ಆತ್ಮೀಯರೊಂದಿಗೆ, ಮನೆಯವರೊಂದಿಗೆ, ಏಕಾಂತದಲ್ಲಿ ತನ್ನ ವ್ಯಂಗ್ಯ ಮುಖಭಾವವನ್ನು ಪ್ರದರ್ಶನ ಪಡಿಸುತ್ತಿರುತ್ತಾನೆ, ಒಮ್ಮೊಮ್ಮೆ ಕ್ಯಾಂಡಿಡ್ ಛಾಯಾಗ್ರಹಣದಲ್ಲಿ ನಮ್ಮ ವಿಶೇಷ ಹಾವ ಭಾವ ನೋಡಿ ನಾವೇ ಖುಷಿ ಪಡ್ತಾ ಇರ್ತೇವೆ. ವಿಕಟ ಕಲಾವಿದ ಶ್ರೀ ನಂಜುಂಡಸ್ವಾಮಿಯವರು ಭಾವಚಿತ್ರವನ್ನು ವ್ಯಂಗ್ಯಚಿತ್ರವನ್ನಾಗಿ ರಚಿಸುವುದರಲ್ಲಿ ಸಿದ್ಧಹಸ್ತರು. ನಂಜುಂಡಸ್ವಾಮಿಯವರು ನೃತ್ಯ ಗುರು ಅಲ್ಲದೆ ಇರಬಹುದು ಆದರೆ ಮುಖದ ಎಲ್ಲ ಹಾವಭಾವಗಳು ಇವರಿಗೆ ಕರಗತವಾಗಿದೆ. ದಾಳಿಂಬೆಯ ದಂತಪಂಕ್ತಿಯಲ್ಲೂ ಎಲ್ಲೋ ಗೊಗ್ಗಲ್ಲುಗಳು ಇವರಿಗೆ ಕಾಣುತ್ತವೆ. ಕಮಲದ ಕಣ್ಣು ಕೂಡ ಎಲ್ಲೋ ಮೆಳ್ಳೆಗಣ್ಣಿದ್ದ ಹಾಗೆ, ಸಂಪಿಗೆ ನಾಸಿಕ ಕೂಡ ಸ್ವಲ್ಪ ಓರೆಯಾಗಿ, ಲ್ಯಾಕ್ಮಿ ಲೇಪಿತ ಗಾಂಭೀರ್ಯದ ತುಟಿ ಕೂಡ ಬಾಯ್ತೆರೆದು ಎನೋ ಹೇಳುವಂತೆ ಚಿತ್ರಿಸುತ್ತಾರೆ. ಮುಖ, ಜಡೆ, ಕೇಶರಾಶಿ, ಹಸ್ತಾದಿ ವಿನ್ಯಾಸಗಳಿಂದಾಗಿ ನಂಜುಂಡಸ್ವಾಮಿ ಶೈಲಿ ಅನ್ನುವಂತೆ ಗುರುತಿಸಲ್ಪಡುತ್ತದೆ. ರಾಜಕೀಯ, ಸಾಮಾಜಿಕ ಸಮಸ್ಯೆಗಳಿಗಷ್ಟೇ ಸೀಮಿತವಾಗಿದ್ದ ವ್ಯಂಗ್ಯಚಿತ್ರಗಳು ಇತ್ತೀಚಿನ ದಿನಗಳಲ್ಲಿ ಹಾಸ್ಯದ ದೃಷ್ಟಿಕೋನದಿಂದಾಗಿ ವ್ಯಕ್ತಿಯ ವಿಕಟಚಿತ್ರಗಳಿಗೂ ಬೇಡಿಕೆ ಜಾಸ್ತಿಯಾಗಿದೆ. ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರಿನಲ್ಲಿ ಸಾಹಿತಿಗಳ…

Read More

ಮಂಗಳೂರು : ಅಶೋಕನಗರದಲ್ಲಿರುವ ಶ್ರೀ ಕೃಷ್ಣ ಮಂದಿರದಲ್ಲಿ ‘ಬೆಳ್ಳಿಹಬ್ಬದ ಸಂಭ್ರಮ 2023-24’ದ ಪ್ರಯುಕ್ತ ನಡೆಯುವ ಸರಣಿ ಕಾರ್ಯಕ್ರಮವು ದಿನಾಂಕ 05-11-2023ರಂದು ನಡೆಯಿತು. ಕಾರ್ಯಕ್ರಮದಲ್ಲಿ ಮನಿಯಾಲು ಆಯುರ್ವೇದ ಕಾಲೇಜು ಮಣಿಪಾಲ ಇದರ ಪ್ರಾಧ್ಯಾಪಕ ಮತ್ತು ವಿಭಾಗದ ಮುಖ್ಯಸ್ಥರಾದ ಡಾ. ಡಿ. ಗುರುರಾಜ ತಂತ್ರಿ ಅವರು ‘ಆರೋಗ್ಯದಲ್ಲಿ ಆಯುರ್ವೇದದ ಮಹತ್ವ’ದ ಕುರಿತು ತಿಳಿಸಿದರು. ಸುರತ್ಕಲ್ ಹಿಂದೂ ವಿದ್ಯಾದಾಯಿನಿ ಸಂಘದ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಸುಧಾಕರ ರಾವ್ ಪೇಜಾವರ ಮಾತನಾಡಿ, “ಸಮಾಜದಲ್ಲಿ ನಾವು ಹೇಗಿರಬೇಕು ಎಂದರೆ ಇತರರು ನಮ್ಮನ್ನು ಅನುಸರಿಸಿಕೊಂಡು ಇರುವಂತೆ ಇತರರಿಗೆ ಮಾರ್ಗದರ್ಶಕರಾಗಿರಬೇಕು” ಎಂದರು. ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಮಾತನಾಡಿ, “ಸಂಘ ಸಂಸ್ಥೆಗಳ ಚಟುವಟಿಕೆಗಳಿಂದ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ. ನಾವು ಒಂದು ವ್ಯವಸ್ಥೆಯಲ್ಲಿ ಸೇರಿಕೊಂಡಾಗ ವ್ಯವಸ್ಥೆಯ ಭಾಗವಾಗಿ ಹೋದಾಗ ಸಾಧನೆ ಮಾಡುವುದು ಸಾಧ್ಯ” ಎಂದರು. ಕುಡುಪು ಕ್ಷೇತ್ರದ ಅನುವಂಶಿಕ ಮೊಕ್ತೇಸರ ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿ ಉಪಸ್ಥಿತರಿದ್ದರು. ಶ್ರೀ ಕೃಷ್ಣ ಸೇವಾ ಟ್ರಸ್ಟಿನ ಅಧ್ಯಕ್ಷ ಸುರೇಶ್ ರಾವ್ ಸ್ವಾಗತಿಸಿ, ಟ್ರಸ್ಟಿನ ಕಾರ್ಯದರ್ಶಿ ಕೃಷ್ಣ…

Read More

ಕಾಸರಗೋಡು : ಪೆರಿಯ ಆಲಕ್ಕೋಡು ಪರಂಪರ ವಿದ್ಯಾ ಪೀಠದ ಗೋಕುಲಂ ಗೋಶಾಲೆಯಲ್ಲಿ ಮೂರನೆಯ ದೀಪಾವಳಿ ಸಂಗೀತೋತ್ಸವವನ್ನು ದಿನಾಂಕ 10-11-2023ರಂದು ಎಡನೀರು ಮಠಾಧಿಪತಿಗಳಾದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮಿಯವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಬಳಿಕ ಆಶೀರ್ವಚನ ನೀಡಿದ ಅವರು “ಮಾನವನ ಏಳಿಗೆಗೆ ಕಲೆಯು ಅತ್ಯಂತ ಪ್ರಧಾನವಾದ ಪಾತ್ರವನ್ನು ವಹಿಸುತ್ತದೆ. ಭಾರತೀಯ ಕಲೆಗಳನ್ನೂ ಕಲಾವಿದರನ್ನೂ ಪ್ರೋತ್ಸಾಹಿಸುವ ಗೋಕುಲಂ ಗೋಶಾಲೆ ಪರಂಪರ ವಿದ್ಯಾ ಪೀಠದ ಪ್ರವೃತ್ತಿಗಳು ಅತ್ಯಂತ ಶ್ಲಾಘನೀಯ” ಎಂದು ಮಠಾಧಿಪತಿಗಳು ಅಭಿಪ್ರಾಯಪಟ್ಟರು. ಈ ಸಮಾರಂಭದ ಮುಖ್ಯ ಅತಿಥಿಗಳಾದ ಉದುಮ ಇಲ್ಲಿನ ಎಂ.ಎಲ್.ಎ.ಯಾದ ಸಿ.ಎಚ್.ಕುಂಜ್ಞಂಬು “ಸಂಗೀತವೆನ್ನುವುದನ್ನು ಪ್ರಕೃತಿಯ ಎಲ್ಲಾ ಚರಾಚರಗಳೂ ಆಸ್ವಾದಿಸುವವು ಎನ್ನುವುದರ ಒಂದು ಉದಾಹರಣೆ ಈ ಗೋಕುಲಂ ಗೋಶಾಲೆ” ಎಂದು ಹೇಳಿದರು. ಪರಂಪರ ವಿದ್ಯಾ ಪೀಠದ ಗುರುಗಳಾದ ಶ್ರೀ ವಿಷ್ಣು ಪ್ರಸಾದ್ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದ ಈ ಸಮಾರಂಭದಲ್ಲಿ ಮಾಜಿ ಎಂ.ಎಲ್.ಎ ಮತ್ತು ಪರಂಪರ ವಿದ್ಯಾ ಪೀಠದ ರಕ್ಷಾಧಿಕಾರಿಗಳೂ ಆದ ಕೆ. ಕುಂಞ ರಾಮನ್, ಕೇಂದ್ರ ಸರ್ವ ಕಲಾ ಶಾಲೆಯ ಪರೀಕ್ಷಾ ಕಂಟ್ರೋಲರ್ ಆದ…

Read More

ಮಂಗಳೂರು : ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಹಿಂದಿ ಸಂಘದ ವಾರ್ಷಿಕ ಚಟುವಟಿಕೆ ಕಾರ್ಯಕ್ರಮವು ದಿನಾಂಕ 03-11-2023ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂತ ಅಗ್ನೆಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಉದಯ್ ಕುಮಾರ್ ಬಿ ಮಾತನಾಡುತ್ತಾ “ಹಿಂದಿ ಭಾಷೆಯು ಸರಳವಾಗಿದ್ದು ಎಲ್ಲಾ ಕ್ಷೇತ್ರಗಳಲ್ಲಿಯೂ ಅವಕಾಶವನ್ನು ಕಲ್ಪಿಸುತ್ತದೆ. ಭಾಷೆಯ ಮಹತ್ವವನ್ನು ತಿಳಿಸುವ ಜೊತೆಗೆ ಮನುಷ್ಯನ ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಭಾಷೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ” ಎಂದು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಆಶಾಲತಾ ಎಸ್. ಸುವರ್ಣ ಇವರು ಅಧ್ಯಕ್ಷತೆಯನ್ನು ವಹಿಸಿದ್ದರು. ಐಕ್ಯೂಎಸಿ ಸಂಯೋಜಕರಾದ ಶ್ರೀ ಯತಿನ್ ಉಪಸ್ಥಿತರಿದ್ದರು. ಹಿಂದಿ ವಿಭಾಗ ಮುಖ್ಯಸ್ಥರು ಶ್ರೀ ಉಮೇಶ್ ಹೆಗಡೆ ಸ್ವಾಗತಿಸಿ, ಪ್ರಣಮ್ ಎ. ರೈ ವಂದಿಸಿ, ಸುಮಲಕ್ಷ್ಮೀ ನಿರೂಪಿಸಿದರು.

Read More

ಪುತ್ತೂರು: ನಾಟ್ಯರಂಗ ಪುತ್ತೂರು ಕಲಾವಿದೆಯರು ಅರ್ಪಿಸುವ ‘ನೃತ್ಯ ಹರ್ಷ’ ಕಾರ್ಯಕ್ರಮ ದಿನಾಂಕ 19-11-2023ರಂದು ಭಾನುವಾರ ಸಂಜೆ ಗಂಟೆ 6.15ಕ್ಕೆ ತೆಂಕಿಲದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಶಾಲೆಯ ಆಡಳಿತ ಮಂಡಳಿ ಸದಸ್ಯೆ ಡಾ. ಆಶಾ ಇವರ ಗೌರವ ಉಪಸ್ಥಿತಿಯಲ್ಲಿ ಮಂಗಳೂರಿನ ಸನಾತನ ನಾಟ್ಯಾಲಯದ ನೃತ್ಯ ಗುರುಗಳಾದ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾ ಮಣಿಶೇಖರ್ ಅವರು ದೀಪ ಪ್ರಜ್ವಲನೆಯೊಂದಿಗೆ ಉದ್ಘಾಟನೆ ಮಾಡಲಿರುವರು. ಹಿಮ್ಮೇಳದಲ್ಲಿ ನಟುವಾಂಗ ಮತ್ತು ನಿರ್ದೇಶನವನ್ನು ವಿದುಷಿ ಮಂಜುಳಾ ಸುಬ್ರಹ್ಮಣ್ಯ ನಿರ್ವಹಿಸಲಿದ್ದು, ಹಾಡುಗಾರಿಕೆಯಲ್ಲಿ ಪವಿತ್ರಾ ವಿನಯ್‌ ಮಯ್ಯ, ಮೃದಂಗದಲ್ಲಿ ಚಂದ್ರಶೇಖರ ಗುರುವಾಯನಕೆರೆ ಹಾಗೂ ಕೊಳಲು ವಾದನದಲ್ಲಿ ಕೃಷ್ಣ ಗೋಪಾಲ ಪುಂಜಾಲಕಟ್ಟೆ ಸಹಕರಿಸಲಿದ್ದಾರೆ. ಪ್ರಸಾಧನ – ಶಿವರಾಮ ಕಲ್ಮಡ್ಕ, ಬೆಳಕಿನ ನಿರ್ವಹಣೆ – ಪೃಥ್ವಿನ್ ಉಡುಪಿ, ಧ್ವನಿ ಮತ್ತು ಬೆಳಕು – ಅಶ್ವತ್ಥ್ ಸೌಂಡ್ಸ್ ಮತ್ತು ಲೈಟ್ಸ್ ಪುತ್ತೂರು ಇವರು ನಿರ್ವಹಿಸಲಿದ್ದಾರೆ. ನಾಟ್ಯರಂಗದ ಕಲಾವಿದೆಯರಾದ ಅವನಿ ಬೆಳ್ಳಾರೆ, ಕೀರ್ತನಾ ವರ್ಮ, ಮೇಧಾ ಭಟ್, ಶರ್ವಿನಾ ಶೆಟ್ಟಿ, ಪ್ರಜ್ಞಶ್ರೀ ‘ನೃತ್ಯ-ಹರ್ಷ’ವನ್ನು…

Read More

ಮಡಿಕೇರಿ : ವಿರಾಜಪೇಟೆ ಕಾವೇರಿ ಪದವಿ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವಿಶೇಷ ಉಪನ್ಯಾಸ ಹಾಗೂ ಎನ್.ಎಸ್.ಎಸ್. ಘಟಕದ ಉದ್ಘಾಟನೆಯು ದಿನಾಂಕ 07-11-2023ರಂದು ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಕೊಡಗು ವಿಶ್ವವಿದ್ಯಾಲಯದ ಕನ್ನಡ ಉಪನ್ಯಾಸಕರಾದ ಡಾ. ಜ್ಹಮೀರ್ ಅಹಮದ್ ಮಾತನಾಡುತ್ತಾ “ಕನ್ನಡ ಭಾಷೆಯು ಶ್ರೀಮಂತ ಭಾಷೆಯಾಗಿದ್ದು, ವಿಶ್ವ ಭಾಷೆಗಳ ರಾಣಿಯಾಗಿದೆ. ನಮ್ಮ ಮಾತೃ ಭಾಷೆ ಅನೇಕ ಇದ್ದರೂ ಕನ್ನಡ ಭಾಷೆ ನಮ್ಮನ್ನು ಸಾಮಾಜಿಕವಾಗಿ ಒಗ್ಗೂಡಿಸುತ್ತದೆ. ಬಿ.ಎಂ.ರೈಸ್, ಕಿಟೆಲ್, ಮೊಗ್ಲಿಂಗ್ ರಂತಹ ವಿದೇಶಿಗರು ಕನ್ನಡ ಭಾಷೆಗೆ ಕೊಡುಗೆ ನೀಡಿದ್ದಾರೆ. ಕನ್ನಡ ಭಾಷಾ ಅಭಿಮಾನವನ್ನು ಪ್ರತಿಯೊಬ್ಬ ಕನ್ನಡಿಗನೂ ಬೆಳೆಸಿಕೊಳ್ಳಬೇಕು” ಎಂದು ಅಭಿಪ್ರಾಯಪಟ್ಟರು. ಕಾಲೇಜಿನ ಪ್ರಾಂಶುಪಾಲ ಡಾ. ಕೆ. ಆನಂದ್‌ ಮಾತನಾಡಿ, “ಕನ್ನಡ ಭಾಷೆಯ ಸೊಗಡು ನಮ್ಮೆಲ್ಲರ ಹೆಮ್ಮೆಯಾಗಿದ್ದು, ಭಾಷೆಯ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ” ಎಂದರು. ಕಾಲೇಜಿನ ಎನ್‌.ಎಸ್‌.ಎಸ್‌ ಘಟಕವನ್ನು ಉದ್ಘಾಟಿಸಲಾಯಿತು. ವೇದಿಕೆಯಲ್ಲಿ ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಡಾ.ವೀಣಾ, ಕನ್ನಡ ವಿಭಾಗದ ಮುಖ್ಯಸ್ಥ ಬಿ.ಬಿ.ಸುನಿಲ್ ಕುಮಾರ್, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಅಂಬಿಕಾ, ಎನ್‌.ಎಸ್‌.ಎಸ್‌. ಅಧಿಕಾರಿ ಸೋಮಣ್ಣ…

Read More

ಕಟೀಲು : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು, ಪುತ್ತೂರು ಇವರ ವತಿಯಿಂದ ದಿನಾಂಕ 08-11-2023ರಂದು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕಟೀಲು ಇಲ್ಲಿ ಸೇವಾ ರೂಪವಾಗಿ “ಜಾಂಬವತಿ ಕಲ್ಯಾಣ” ಎಂಬ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಪದ್ಯಾಣ ಗೋವಿಂದ ಭಟ್ ಚೆಂಡೆ ಮದ್ದಳೆಗಳಲ್ಲಿ ರಾಮ್ ಪ್ರಕಾಶ್ ಕಲ್ಲೂರಾಯ, ದುರ್ಗೇಶ್ ಕಟೀಲು ಮುರಳಿ ಕಟೀಲು ಸಹಕರಿಸಿದರು.ಹಿಮ್ಮೇಳದಲ್ಲಿ ಶುಭಾ ಅಡಿಗ (ಶ್ರೀ ಕೃಷ್ಣ), ಪ್ರೇಮಲತಾ ರಾವ್ (ನಾರದ), ಕಿಶೋರಿ ದುಗ್ಗಪ್ಪ ನಡುಗಲ್ಲು (ಜಾಂಬವಂತ) ಹರಿಣಾಕ್ಷಿ.ಜೆ.ಶೆಟ್ಟಿ(ಬಲರಾಮ) ಸಹಕರಿಸಿದರು ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ ವಂದಿಸಿದರು.ದೇವಳದ ಅನುವಂಶೀಯ ಅರ್ಚಕರಾದ ವೇದಮೂರ್ತಿ ಶ್ರೀ ಹರಿನಾರಾಯಣ ಅಸ್ರಣ್ಣ ಕಲಾವಿದರಿಗೆ ಶ್ರೀ ದೇವಿಯ ಪ್ರಸಾದವನ್ನಿತ್ತು ಹರಸಿದರು.ಕಾರ್ಯಕ್ರಮದ ಬಳಿಕ 2023ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಶ್ರೀಮತಿ ಲೀಲಾವತಿ ಹರಿನಾರಾಯಣ ಬೈಪಡಿತ್ತಾಯರ ಬಜಪೆ ಸಮೀಪದ ತಳಕಳದಲ್ಲಿರುವ ನಿವಾಸಕ್ಕೆ ತೆರಳಿ, ಅಲ್ಲಿ ಅವರನ್ನು ದಂಪತಿ ಸಮೇತರಾಗಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.

Read More

‘ಹಚ್ಚೇವು ಕನ್ನಡದ ದೀಪ’ ಗೀತೆಯನ್ನು ಕೇಳದ ಕನ್ನಡಿಗರೇ ಇಲ್ಲ ಮತ್ತು ಆ ಗೀತೆಯಲ್ಲಿ ಅಡಗಿರುವ ಕನ್ನಡತ್ವವನ್ನು ಅನುಭವಿಸದವರೇ ಇಲ್ಲ. ಇಂದಿಗೂ ಆ ಹಾಡನ್ನು ಕೇಳಿದರೆ ಮೈಮನಗಳಲ್ಲಿ ಇರುವ ನರವನ್ನು ಹೊಸೆದು ಬತ್ತಿ ಮಾಡಿ ದೀಪ ಬೆಳಗಿದ ಅನುಭವ. ಅಷ್ಟೊಂದು ಉತ್ಕಟ ಭಾಷಾ ಅಭಿಮಾನವನ್ನು ಮತ್ತು ಪ್ರೀತಿಯನ್ನು ತಮ್ಮ ಸಾಹಿತ್ಯದ ಮೂಲಕ ಪ್ರತಿಬಿಂಬಿಸಿದವರು ಕರ್ಕಿಯವರು. ಡಿ.ಎಸ್. ಕರ್ಕಿಯವರು ಬೆಳಗಾವಿ ಜಿಲ್ಲೆಯ ಹಿರೆಕೊಪ್ಪ ಗ್ರಾಮದಲ್ಲಿ 1907 ನವೆಂಬರ್ 15ರಂದು ಜನಿಸಿದರು. ಇವರ ತಾಯಿ ದುಂಡವ್ವ,  ತಂದೆ ಸಿದ್ದಪ್ಪ. ದುಂಡಪ್ಪ ಸಿದ್ದಪ್ಪ ಕರ್ಕಿ ಎಂಬುದು ಇವರ ಪೂರ್ಣನಾಮ. ಚಿಕ್ಕಂದಿನಲ್ಲಿಯೇ ತಾಯಿಯನ್ನು ಕಳೆದುಕೊಂಡ ಇವರ ಪ್ರಾಥಮಿಕ ಶಿಕ್ಷಣ ತಾಯಿಯ ತವರೂರಾದ ಬೆಲ್ಲದ ಬಾಗೇವಾಡಿಯಲ್ಲಿ ಆಯಿತು. ಬೆಳಗಾವಿಯ ಗಿಲಗಂಜಿ ಅರಟಾಳ ಹೈಸ್ಕೂಲಿನಲ್ಲಿ ಮಾಧ್ಯಮಿಕ ಶಿಕ್ಷಣ ಪೂರೈಸಿದ ಕರ್ಕಿಯವರು ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪದವಿ ಅಭ್ಯಾಸದ ನಂತರ 1935ರಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಬೆಲ್ಲದ ಬಾಗೇವಾಡಿಯಲ್ಲಿ ಪ್ರಾಥಮಿಕ ಶಿಕ್ಷಣ, ಬೆಳಗಾವಿಯ ಜಿ.ಎ. ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಪಡೆದರು. ಕೊಲ್ಲಾಪುರದ ರಾಜಾರಾಮ ಕಾಲೇಜು,…

Read More

ಉಡುಪಿ : ಭರತನಾಟ್ಯ, ಸಂಗೀತ, ಸಂಸ್ಕೃತಿ, ನಾಟಕ ಮತ್ತು ಶಿಕ್ಷಣಗಳ ವಿಶಿಷ್ಟ ಸಮ್ಮಿಲನವಾಗಿ ಹೆಸರು ಮಾಡಿರುವ ‘ನಾಟ್ಯಾಯನ’ ಯುಗಳ ನೃತ್ಯ ಕಾರ್ಯಕ್ರಮ ಉಡುಪಿಯ ಅಮೃತ್ ಗಾರ್ಡನಿನಲ್ಲಿ ದಿನಾಂಕ 04-11-2023 ರಂದು ಪ್ರದರ್ಶನಗೊಂಡಿತು. ಗೌಡ ಸಾರಸ್ವತ ಸಾಮಾಜದ ಪುರೋಹಿತ ಪ್ರಮುಖರಲ್ಲಿ ಒಬ್ಬರಾದ ವೇ.ಮೂ. ಚೇಂಪಿ ರಾಮಚಂದ್ರ ಅನಂತ ಭಟ್ ಅವರ ಷಷ್ಠಿ ಪೂರ್ತಿ ಸಂಭ್ರಮದ ಪ್ರಯುಕ್ತ ಆಯೋಜನೆಗೊಂಡ ಈ ಕಾರ್ಯಕ್ರಮ ವಿದ್ವಜ್ಜನ ಸಹಿತ ಸರ್ವರ ಮನಸೂರೆಗೊಂಡು ಎಲ್ಲರ ಪ್ರಸಂಶೆಗೆ ಪಾತ್ರವಾಯಿತು. ವಿದುಷಿ ಅಯನಾ.ವಿ. ರಮಣ್ ಪ್ರಸ್ತುತ ಪಡಿಸಿದ ಸನ್ಯಾಸ ಸೂಕ್ತ, ಅದ್ಭುತ ಸ್ಮರಣಶಕ್ತಿಯ ಕವಿನಾಮಾವಳಿ, ವಿದ್ವಾನ್ ಮಂಜುನಾಥ್. ಎನ್. ಪುತ್ತೂರು ಅವರೊಂದಿಗೆ ಅಭಿನಯಿಸಿದ ಅವರದೇ ರಚನೆಯ ಮೇಳಪ್ರಾಪ್ತಿ, ವಿಭಿನ್ನವಾಗಿ ಯುಗಳ ನೃತ್ಯಕ್ಕೆ ಅಳವಟ್ಟ ಪುರಂದರ ದಾಸರ ‘ಭಾಗ್ಯದ ಲಕ್ಷ್ಮೀ ಬಾರಮ್ಮ’ ಮುಂತಾದವು ವಿಶೇಷ ಮೆಚ್ಚುಗೆ ಗಳಿಸಿದವು. ಕಾರ್ಯಕ್ರಮದ ಬಳಿಕ ನಾಟ್ಯಾಯನದ ನಿರ್ದೇಶಕ ಕೆ.ವಿ. ರಮಣ್ ಮಂಗಳೂರು – ಡಾ. ಮೂಕಾಂಬಿಕ ಜಿ.ಎಸ್. ದಂಪತಿ ಸಹಿತ ಕಲಾವಿದರನ್ನು ಗೌರವಿಸಲಾಯಿತು. ಉಪನ್ಯಾಸಕ ರಾಮಚಂದ್ರ ನಿರೂಪಿಸಿ ಚೇಂಪಿ…

Read More

ಮಂಗಳೂರು : ಮಧುರತರಂಗ (ರಿ.), ದ.ಕ. ಮಂಗಳೂರು ಅರ್ಪಿಸುವ ಶ್ರೀ ಲಕ್ಷ್ಮೀ ವೆಂಕಟರಮಣ ಮಠ ಪೋಳ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು ಇವರ ಸಹಕಾರದೊಂದಿಗೆ ‘ಭಾವ-ಗಾನಾಮೃತ ಸಮೂಹ ಗಾಯನ’ 2023ನೇ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜ್ಯೂ. ರಾಜ್‌ಕುಮಾರ್ ಖ್ಯಾತಿಯ, ಕರ್ನಾಟಕ ಸ್ವರಕಂಠೀರವ, ಸ್ವರತಪಸ್ವಿ ಜಗದೀಶ ಶಿವಪುರ ಮತ್ತು ಬಳಗದವರಿಂದ ದಿನಾಂಕ 22-11-2023ನೇ ಬುಧವಾರ ಸಂಜೆ ಗಂಟೆ 4.30ರಿಂದ ಪೋಳ್ಯ ಶ್ರೀವಾರಿ ವೇದಿಕೆ, ಶ್ರೀನಿವಾಸ ಸಭಾಭವನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಶ್ರೀ ಲಕ್ಷ್ಮೀವೆಂಕಟರಮಣ ಪೋಳ್ಯ ಮಠದ ಅಧ್ಯಕ್ಷರಾದ ಶ್ರೀ ಉಮಾಶಂಕರ ಎದುರ್ಕಳ ಇವರು ಜ್ಯೋತಿ ಬೆಳಗಿ ಉದ್ಘಾಟಿಸಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ ಇವರು ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಹಿರಿಯ ಗಾಯಕ ಕಲಾವಿದರಾದ ಶ್ರೀ ಪ್ರಭಾಕರ ಆಚಾರ್ಯ ಎನ್. ವಿಟ್ಲ ಮತ್ತು ಕಲ್ಲಚ್ಚು ಪ್ರಕಾಶನದ ‘ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ’ ಪುರಸ್ಕೃತ ಶ್ರೀ ಮಹೇಶ್ ಆರ್ ನಾಯಕ್ ಇವರುಗಳನ್ನು ಸನ್ಮಾನಿಸಲಾಗುವುದು. ಮಧುರತರಂಗದ ಅಧ್ಯಕ್ಷರು,…

Read More