Author: roovari

ಕಾಸರಗೋಡು : ಹೈದರಾಬಾದ್ ಮೂಲದ ಇಂಡಿಯಾ ಪಿ.ಎಸ್.ಸಿ. ಆಫ್ ಸೈಟ್ ಕಾನ್ಫರೆನ್ಸ್ – 2023 ಬೇಕಲದ ತಾಜ್ ರೆಸಾರ್ಟ್ ನಲ್ಲಿ ದಿನಾಂಕ 23-05-2023ರಂದು ಜರಗಿತು. ಈ ಸಂದರ್ಭದಲ್ಲಿ ಮಂಗಳೂರಿನ ತೋನ್ಸೆ ಯಕ್ಷ ಬಳಗದಿಂದ ಇಂಗ್ಲಿಷ್ ಭಾಷೆಯಲ್ಲಿ ‘ದಿ ವಿಕ್ಟರಿ ಆಫ್ ಸುದರ್ಶನ’ (ಸುದರ್ಶನ ವಿಜಯ) ತೆಂಕುತಿಟ್ಟು ಯಕ್ಷಗಾನವನ್ನು ಪ್ರದರ್ಶಿಸಲಾಯಿತು. ಶ್ಯಾಡ್ಸ್ ಈವೆಂಟ್ಸ್ ಅವರ ಸಂಯೋಜನೆಯಲ್ಲಿ ಜಿಲ್ಲೆಯ ಪ್ರಸಿದ್ಧ ಕಲಾವಿದರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾಗವತರಾಗಿ ತೋನ್ಸೆ ಪುಷ್ಕಳ ಕುಮಾರ್, ಹಿಮ್ಮೇಳದಲ್ಲಿ ಶರತ್ ಕುಮಾರ್ ಕದ್ರಿ, ಸುದಾಸ್ ಕಾವೂರು ಮತ್ತು ಹರಿಶ್ಚಂದ್ರ ನಾಯಗ ಮಾಡೂರು ಪಾಲ್ಗೊಂಡರು. ಮುಮ್ಮೇಳದಲ್ಲಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ (ದೇವೇಂದ್ರ), ಡಾ. ದಿನಕರ ಎಸ್.ಪಚ್ಚನಾಡಿ (ಸುದರ್ಶನ) ಮತ್ತು ಶರತ್ ಪಣಂಬೂರು (ಶತ್ರು ಪ್ರಸೂದನ) ಪಾತ್ರ ವಹಿಸಿದರು. ತಂಡದ ಬಗ್ಗೆ ಪರಿಚಯ ನೀಡಿದ ಕಲಾವಿದ ಭಾಸ್ಕರ ರೈ ಕುಕ್ಕುವಳ್ಳಿ ಕರಾವಳಿಯ ಸಾಂಪ್ರದಾಯಿಕ ಯಕ್ಷಗಾನ ಕಲೆಯ ಮಹತ್ವವನ್ನು ತಿಳಿಸಿ ಆಯ್ದುಕೊಂಡ ಪ್ರಸಂಗದ ಕಥಾಸಾರವನ್ನು ಆಂಗ್ಲ ಭಾಷೆಯಲ್ಲಿ ವಿವರಿಸಿದರು. ಪಿ.ಎಸ್.ಸಿ. ಮುಖ್ಯಸ್ಥರು ಮತ್ತು ಕಂಪೆನಿಯ…

Read More

ತೆಕ್ಕಟ್ಟೆ : ಕಳೆದ ಕೆಲವು ವರ್ಷಗಳಿಂದ ಹೊಸ ಹೊಸ ಆವಿಷ್ಕಾರದೊಂದಿಗೆ ತೆಕ್ಕಟ್ಟೆಯ ಉಭಯ ಸಂಸ್ಥೆಗಳು ಚಿಣ್ಣರ ಶಾಲಾ ರಜಾದಿನಗಳನ್ನು ಸುದುಪಯೋಗಪಡಿಸಿಕೊಳ್ಳಬೇಕೆಂಬ ಉದ್ಧೇಶದಿಂದ ‘ರಜಾರಂಗು-ರಂಗ ಮಂಚ’ ಶಿಬಿರವನ್ನು ಆಯೋಜಿಸುತ್ತಾ ಬಂದಿದೆ. ಹಲವಾರು ಪ್ರಸಿದ್ಧ ಗಣ್ಯರು ಸಂಪನ್ಮೂಲ ವ್ಯಕ್ತಿಯಾಗಿ ಭಾರತದ ಹಲವಾರು ಚಟುವಟಿಕೆಗಳನ್ನು ಮಕ್ಕಳಿಗೆ ಉಣಬಡಿಸುತ್ತಾ ಶಿಬಿರ ಉನ್ನತ ಮಟ್ಟವನ್ನು ತಲುಪಿದೆ. ಕರಾವಳಿ ಭಾಗದಲ್ಲಿ ಹೊಸ ಹೊಸ ವಿಭಿನ್ನ ಚಟುವಟಿಕೆಗಳನ್ನು ವರ್ಷಪೂರ್ತಿ ಕಲಾಸಕ್ತರಿಗಾಗಿ ನಡೆಸುತ್ತ ಸಾಗಿ ಬಂದ ಸಂಸ್ಥೆ ಕಳೆದ ವರ್ಷ 150 ಮಕ್ಕಳ ಶಿಬಿರವನ್ನು 30 ದಿನಗಳೂ ಅದ್ಧೂರಿಯಾಗಿ ನಡೆಸಿದ್ದು ಈ ಭಾರಿ ಹದಿನೈದು ದಿನಗಳ ಬೇಸಿಗೆ ಶಿಬಿರವನ್ನು ಬಹಳ ಚೊಕ್ಕದಾಗಿ ಪೂರೈಸಿ ಇದೀಗ ಸಮಾರೋಪದತ್ತ ಸಾಗಿ ಬಂದಿದೆ. ಉಭಯ ಸಂಸ್ಥೆಗಳು ಬೇರೆ ಬೇರೆಯಾಗಿ ಮೇ 27 ಮತ್ತು 28ರಂದು ಸಮಾರೋಪಕ್ಕೆ ಸಜ್ಜಾಗಿದ್ದು, ಮೊದಲ ದಿನವಾಗಿ ಯಶಸ್ವೀ ಕಲಾವೃಂದ (ರಿ.) ಕೊಮೆ, ತೆಕ್ಕಟ್ಟೆ ಸಂಸ್ಥೆಯ ಆಶ್ರಯದಲ್ಲಿ ದಿ. ಕಾಳಿಂಗ ನಾವುಡ ಸಂಸ್ಮರಣಾ ಕಾರ್ಯಕ್ರಮವಾಗಿ ಶಿಬಿರಾರ್ಥಿಗಳಿಂದ ಸೀತಾರಾಮ ಶೆಟ್ಟಿ ಕೊಯಿಕೂರು ನಿರ್ದೇಶನದಲ್ಲಿ ‘ದ್ರೌಪದಿ ಪ್ರತಾಪ’…

Read More

ಉಡುಪಿ : ಉಡುಪಿಯ ಚಿತ್ರಕಲಾಮಂದಿರ ಕಲಾ ವಿದ್ಯಾಲಯವು ಕನ್ನಡ ವಿಶ್ವವಿದ್ಯಾಲಯ, ಹಂಪಿ ಸಂಯೋಜನೆಯೊಂದಿಗೆ ‘ಚಿತ್ರಕಲೆಯಲ್ಲಿ ಪದವಿ’ ಪಡೆಯುವ ಅವಕಾಶ ಒದಗಿಸಿದೆ. ಇದಕ್ಕೆ ಅಗತ್ಯವಿರುವ ವಿದ್ಯಾರ್ಹತೆ : ‘ಬ್ಯಾಚುಲರ್ ಇನ್ ವಿಜುವಲ್ ಆರ್ಟ್’ (BVA) ಪದವಿಗೆ ದ್ವಿತೀಯ ಪಿಯುಸಿ ತೇರ್ಗಡೆ ಹೊಂದಿರಬೇಕು ಹಾಗೂ ‘ಕಲಾಮೂಲ’ (PUC ತತ್ಸಮಾನ)ಕ್ಕೆ ಎಸ್.ಎಸ್.ಎಲ್.ಸಿ. ತೇರ್ಗಡೆ ಹೊಂದಿರಬೇಕು. ಕಿವುಡ ಮತ್ತು ಮೂಗರಿಗೂ ಪ್ರವೇಶಕ್ಕೆ ಅವಕಾಶವಿದೆ. ಹಾಸ್ಟೆಲ್‌, ವಿದ್ಯಾರ್ಥಿ ವೇತನ, ಮಧ್ಯಾಹ್ನದ ಊಟ, 1000 ಪುಸ್ತಕಗಳ ಗ್ರಂಥಾಲಯಗಳ ಸೌಲಭ್ಯವಿದೆ. ಬೋಧನಾ ವಿಷಯಗಳು – ನಿಸರ್ಗ, ಭಾವಚಿತ್ರ, ಶಿಲ್ಪ, ಮ್ಯೂರಲ್, ಕರಕುಶಲ ಕಲೆ, ಫೋಟೋಗ್ರಾಫಿ, ಸ್ಕ್ರೀನ್ ಪ್ರಿಂಟ್ ಇತ್ಯಾದಿ. ಉದ್ಯೋಗ ಅವಕಾಶಗಳು – ಸಿನೇಮಾ, ಎನಿಮೇಶನ್, ಜಾಹೀರಾತು, ಡ್ರಾಯಿಂಗ್/ಕಾಫ್ಟ್ ಟೀಚರ್, ಗ್ರಾಫಿಕ್‌ ಡಿಸೈನ್, ಇಂಟಿರಿಯರ್ ಡೆಕೊರೇಶನ್. ಸಂಪರ್ಕ ವಿಳಾಸ : ಚಿತ್ರಕಲಾ ಮಂದಿರ ಕಲಾ ವಿದ್ಯಾಲಯ, ರಾಜ್ ಟವರ್ಸ್ ಬಲಕ್ಕೆ, ಸಿಟಿ ಬಸ್‌ ಸ್ಟಾಂಡ್, ಉಡುಪಿ -576 101. ದೂರವಾಣಿ ಸಂಖ್ಯೆ : 97392 49951, 7204144673, 8202522342 ಇಮೈಲ್ :…

Read More

ಮಂಗಳೂರು: ಪ್ರಸಂಗ ಕರ್ತ ವರ್ಕಾಡಿ ರವಿ ಅಲೆವೂರಾಯರ ನೂತನ ಪ್ರಸಂಗ ಕೃತಿ ‘ಇಳಾ ರಜತ’ ಶ್ರೀ ಕ್ಷೇತ್ರ ಕೊಲ್ಲಂಗಾನದಲ್ಲಿ ದಿನಾಂಕ 21-05-2023ರಂದು ಬಿಡುಗಡೆಗೊಂಡಿತು . ಈ ಕೃತಿಯನ್ನು ಅನಂತಪದ್ಮನಾಭ ಟ್ರಸ್ಟ್ ವತಿಯಿಂದ ಕ್ಷೇತ್ರದ ತಂತ್ರಿಗಳು, ಕೊಲ್ಲಂಗಾನಮೇಳದ ಸಂಚಾಲಕ ಗಣಾಧಿರಾಜತಂತ್ರಿ ಉಪಾಧ್ಯಾಯರು ಕೃತಿ ಬಿಡುಗಡೆ ಮಾಡಿದರು. ಆಡ್ವಳ ಗಂಗಾಧರ ಬಲ್ಲಾಲ್ , ವೆಂಕಟರಮಣ ಹೊಳ್ಳ, ನಾಗರಾಜ ನೇಜಿಕಾರ್, ಮಂಜುನಾಥ ಮಾನ್ಯ, ಸುಮನ್ ರಾಜ್ ನೀಲಂಗಳ, ಪ್ರೊ.ಎ.ಶ್ರೀನಾಥ್ ಉಪಸ್ಥಿತರಿದ್ದರು. ಸಭಕಾರ್ಯಕ್ರಮದ ನಂತರ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಇಳಾ ರಜತ ಪ್ರದರ್ಶನ ಗೊಂಡಿತು.

Read More

ಮಂಗಳಾದೇವಿ : ಶ್ರೀ ಮಂಗಳಾದೇವಿ ದೇವಸ್ಥಾನದ ಸಭಾಂಗಣದಲ್ಲಿ ದಿನಾಂಕ 19-05-2023ರಂದು ಜರಗಿದ ತುಳು ಕೂಟ ಕುಡ್ಲ ಇದರ ಸುವರ್ಣ ವರ್ಷದ ಮೂರನೇ ಸರಣಿ ಕಾರ್ಯಕ್ರಮ ‘ತುಳುವೆರೆ ಪರ್ಬದ ಸಂಭ್ರಮ’ ವಿಚಾರ ಸಂಕಿರಣದಲ್ಲಿ ಮುಂಗಳೂರು ಆಕಾಶವಾಣಿಯ ವಿಶ್ರಾಂತ ನಿರ್ದೇಶಕ ಡಾ. ವಸಂತಕುಮಾರ್ ಪೆರ್ಲ “ತುಳುನಾಡಿನ ಯಾವುದೇ ಹಬ್ಬಹರಿದಿನಗಳ ಆಚರಣೆ ಮತ್ತು ಆರಾಧನಾ ಪದ್ಧತಿಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಸಮಾನ ಸಂಪ್ರದಾಯಗಳಿಂದ ಕೂಡಿವೆ. ಆಷಾಢ ಮಾಸದಲ್ಲಿನ ಆಚಾರ-ವಿಚಾರಗಳಲ್ಲಿ ಹಿಂದೆ ಮತ್ತು ಈಗಿನ ವ್ಯತ್ಯಾಸಗಳನ್ನು ತಿಳಿಸಿ, ನಮ್ಮ ಹಿರಿಯರು ಅನುಸರಿಸಿಕೊಂಡು ಬಂದ ನಂಬಿಕೆ ಹಾಗೂ ಉದ್ದೇಶಗಳನ್ನು ಗೌರವದಿಂದ ಕಾಪಾಡಿಕೊಂಡು ಬರುವ ಕರ್ತವ್ಯ ನಮಲ್ಲಿ ಇರಬೇಕು” ಎಂದು ಅಭಿಪ್ರಾಯಪಟ್ಟರು. ಶ್ರೀ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ರಮಾನಾಥ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿದರು. ತುಳುಕೂಟದ ಅಧ್ಯಕ್ಷ ದಾಮೋದರ ನಿಸರ್ಗ ಅಧ್ಯಕ್ಷತೆ ವಹಿಸಿ ಮಾತನಾಡಿ, “ತುಳುನಾಡಿನಲ್ಲಿ ವರ್ಷದ ಪ್ರತಿ ತಿಂಗಳು ಹೊಂದಿರುವ ಮಹತ್ವಗಳಲ್ಲಿ ಪ್ರಕೃತಿ ಪೂಜೆ, ಆಹಾರ, ಆಯುರ್ವೇದ, ಆರೋಗ್ಯ ವಿಚಾರಗಳು ಅಡಗಿದ್ದು, ಮುಂದಿನ ಪೀಳಿಗೆಗೆ ಇದರ ತಿಳಿವಳಿಕೆಗಾಗಿ…

Read More

ಮೈಸೂರು : ಪರಿವರ್ತನ ರಂಗ ಸಮಾಜ ಪ್ರಸ್ತುತ ಪಡಿಸುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತೆ ಅಮೃತ ಪ್ರೀತಂ ಅವರ ಜೀವನ, ಪ್ರೀತಿ, ಕಾವ್ಯದ ಬಗ್ಗೆ ರಂಗ ಪ್ರಸ್ತುತಿ ‘ನನ್ನ ಪ್ರೀತಿಯ ಅಮೃತ’ ಮೇ 28ನೇ ಭಾನುವಾರ ಸಂಜೆ ಮೈಸೂರಿನ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ. ಪ್ರೊ. ಎಸ್.ಆರ್.ರಮೇಶ್ ರವರ ಪರಿಕಲ್ಪನೆ, ವಿನ್ಯಾಸ ಹಾಗೂ ನಿರ್ದೇಶನದಲ್ಲಿ ಮೂಡಿ ಬರಲಿರುವ ಈ ನಾಟಕದಲ್ಲಿ ಸಾಹಿರ್ ನ ಪಾತ್ರದಲ್ಲಿ ಎಂ.ದ್ವಾರಕಾನಾಥ್, ಇಮ್ರೋಜ್ಹನಾಗಿ ಸತೀಷ್.ಬಿ.ಎಸ್. ಹಾಗೂ ಅಮೃತಾ ಪಾತ್ರವನ್ನು ತೇಜಸ್ವಿಜಿ ಜೊಯಿಸ್ ನಿರ್ವಹಿಸಲಿದ್ದಾರೆ. ನಾಟಕದ ಬಗ್ಗೆ : ಸಾಹಿರ್ ಮತ್ತು ಅಮೃತಾ ಪ್ರೀತಮ್ ಅವರ ಪ್ರೀತಿ ಭಾರತದ ಪ್ರೇಮ ಕಾವ್ಯದ ಅಪೂರ್ವವಾದ ಅಘಟಿತ ಘಟನೆಯಾಗಿದೆ. ಆತ 24ರ ವಯಸ್ಸಿನಲ್ಲಿ ತನ್ನ ಮೊದಲ ಕವನ ಸಂಕಲನದಿಂದ ಆಧುನಿಕ ಉರ್ದು ಕಾವ್ಯವನ್ನು ಗುಡಿಸಲು ಗಲ್ಲಿಗಳಿಗೆ ಕರೆದೊಯ್ದು, ತಾಜ್ ಮಹಲ್ ಕಟ್ಟಿ ಬಾದಷಹನೊಬ್ಬನು ತಮ್ಮ ಪ್ರೀತಿಗಳ ಗೋರಿಗಳ ಮೇಲೆ ಅಮೃತಶಿಲೆಯ ನೆನಪಿನ ಸೌಧಗಳನ್ನು ಕಟ್ಟಲಾಗದ ನಮ್ಮೆಲ್ಲರನ್ನು ಮೂದಲಿಸಿದ ಎಂದು ಹೇಳಿದ ಕ್ರಾಂತಿಕಾರಿ ಕವಿ.…

Read More

ಮಂಗಳೂರು : ಶ್ರೀ ಕ್ಷೇತ್ರ ಗೆಜ್ಜೆಗಿರಿ ಮಂಗಳೂರು ನಗರ ವಲಯ ಸಮಿತಿ ನೇತೃತ್ವದಲ್ಲಿ ಯುವವಾಹಿನಿ ಮಂಗಳೂರು ಘಟಕ ಹಾಗೂ ಕಂಕನಾಡಿ ಘಟಕ ಸಹಕಾರದಲ್ಲಿ ಗೆಜ್ಜೆಗಿರಿ ಮೇಳದವರಿಂದ ಮಂಗಳೂರಿನ ಪುರಭವನದಲ್ಲಿ 150ನೇ ಪ್ರದರ್ಶನ ಮತ್ತು ಸನ್ಮಾನ ಸಮಾರಂಭವು ದಿನಾಂಕ 20-05-2023ರಂದು ಜರಗಿತು. ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಪ್ರಸಂಗವು ಪ್ರಾರಂಭಗೊಂಡ ಈ ವರ್ಷದಲ್ಲಿಯೇ ದಾಖಲೆಯ 150ನೇ ಪ್ರದರ್ಶನಗೊಂಡ ಬಗ್ಗೆ ಸಂಭ್ರಮವನ್ನು ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರಾದ ಪೀತಾ೦ಬರ ಹೆರಾಜೆ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮೇಳದ ಸಂಚಾಲಕರಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸಿದ ನವೀನ್ ಸುವರ್ಣ ಸಜಿಪ, ನವೀನ್ ಅಮೀನ್ ಶಂಕರಪುರ, ಯಕ್ಷ ಪ್ರಸಂಗ ಕರ್ತ ನಿತಿನ್ ಪೂಜಾರಿ ತೆಂಕಕಾರಂದೂರು, ಮೇಳದ ಹಿಮ್ಮೇಳ, ಮುಮ್ಮೇಳದ ಎಲ್ಲಾ ಕಲಾವಿದರನ್ನು ಸನ್ಮಾನಿಸಲಾಯಿತು. ಎಂ.ಪಿ. ದಿನೇಶ್, ಕ್ಷೇತ್ರಾಡಳಿತ ಸಮಿತಿ ಉಪಾಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಮಂಗಳೂರು ನಗರ ಸಮಿತಿ ಪ್ರಧಾನ ಸಂಚಾಲಕ ಹರೀಶ್‌ ಕೆ. ಪೂಜಾರಿ, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ರಾಜೇಶ್, ಮಂಗಳೂರು…

Read More

ಸುರತ್ಕಲ್ : ಮಣಿಕೃಷ್ಣ ಸ್ವಾಮಿ ಅಕಾಡೆಮಿ ಮತ್ತು ನಾಗರಿಕ ಸಲಹಾ ಸಮಿತಿ ಸುರತ್ಕಲ್ ಸಹಭಾಗಿತ್ವದಲ್ಲಿ ದಿನಾಂಕ 21-05-2023 ಭಾನುವಾರ ಅನುಪಲ್ಲವಿಯಲ್ಲಿ ನಡೆಯುತ್ತಿರುವ ಶಾಸ್ತ್ರೀಯ ಸಂಗೀತ ಸರಣಿಯ ‘ಉದಯರಾಗ’ ಕಾರ್ಯಕ್ರಮದಲ್ಲಿ ಎಂಆರ್‌ಪಿಎಲ್ ಸಂಸ್ಥೆಯ ಅಧಿಕಾರಿ ಮುರಳೀಧರ ಅಡಕೋಳಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. “ಸಹೃದಯರ ಮನ ತಣಿಸುವ ಸಂಗೀತದ ಉಪಾಸನೆ ನಿರಂತರವಾಗಬೇಕು. ಯುವ ಶಾಸ್ತ್ರೀಯ ಸಂಗೀತದ ಕಲಾವಿದರಿಗೆ ಅವಕಾಶಗಳು ಲಭ್ಯವಾಗುತ್ತಿರುವುದು ಸ್ವಾಗತಾರ್ಹ” ಎಂದು ನುಡಿದರು. ಅನ್ವಿತಾ, ತಲ್ಪಣಾಜೆ ಅವರಿಂದ ಹಾಡುಗಾರಿಕೆ ನಡೆಯಿತು. ಸುನಾದ ಪಿ.ಎಸ್. ಮಾವೆ ವಯಲಿನ್ ನಲ್ಲಿ ಹಾಗೂ ಶಾಶ್ವತ್ ಕಂಬಾರ ಮೃದಂಗದಲ್ಲಿ ಸಹಕರಿಸಿದರು. ಸುರತ್ಕಲ್ ನಾಗರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ. ಕೆ. ರಾಜಮೋಹನ್‌ ರಾವ್, ಸಂಗೀತ ಗುರುಗಳಾದ ಗೀತಾ ಸಾರಡ್ಕ ಉಡುಪಿ ರಾಗಧನ ಸಂಸ್ಥೆಯ ಕಾರ್ಯದರ್ಶಿ ಉಮಾಶಂಕರಿ, ಶ್ರೀ ನಾಟ್ಯಾಂಜಲಿ ಅಕಾಡೆಮಿ, ನಿರ್ದೇಶಕ ವಿದ್ವಾನ್ ಕೆ. ಚಂದ್ರಶೇಖರ ನಾವಡ, ಕೃಷ್ಣಕುಮಾರಿ ಉಪಸ್ಥಿತರಿದ್ದರು. ಮಣಿ ಕೃಷ್ಣ ಸ್ವಾಮಿ ಅಕಾಡೆಮಿಯ ಕಾರ್ಯದರ್ಶಿ ಪಿ. ನಿತ್ಯಾನಂದ ರಾವ್ ಕಾರ್ಯಕ್ರಮ ನಿರೂಪಿಸಿದರು.

Read More

ಬೆಂಗಳೂರು : ಚಿಗುರು ಕಲ್ಚರಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ‘ಹೆಜ್ಜೆ ಗೆಜ್ಜೆ’ ಶೀರ್ಷಿಕೆಯಡಿ ರಾಷ್ಟ್ರೀಯ ಮಟ್ಟದ ಭರತನಾಟ್ಯ ಸ್ಪರ್ಧೆಯನ್ನು ಆಯೋಜಿಸಿದ್ದು, ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಮಕ್ಕಳಿಂದ ಹಿರಿಯರವರೆಗೆ ನಾಲ್ಕು ಪ್ರತ್ಯೇಕ ತಂಡಗಳಲ್ಲಿ ಸ್ಪರ್ಧೆ ನಡೆಯಲಿದೆ. 3ರಿಂದ 8 ವರ್ಷದೊಳಗಿನ ಮಕ್ಕಳಿಗೆ ಸಬ್ ಜೂನಿಯರ್, 9ರಿಂದ 14 ವರ್ಷದೊಳಗಿನ ಮಕ್ಕಳಿಗೆ ಜೂನಿಯರ್, 15ರಿಂದ 20 ವರ್ಷದೊಳಗಿನವರಿಗೆ ಸೀನಿಯರ್ ವಿಭಾಗದಲ್ಲಿ ಹಾಗೂ 20 ವರ್ಷ ಮೇಲ್ಪಟ್ಟವರಿಗೆ ಸೂಪರ್ ಸೀನಿಯರ್ಸ್ ವಿಭಾಗದಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸೋಲೊ ಮತ್ತು ಸಮೂಹ ಸ್ಪರ್ಧೆ ಕೂಡ ಇದೆ. ಸ್ಪರ್ಧೆಯು ಜೂ.25ರಂದು ನಡೆಯಲಿದೆ. ಪ್ರತಿ ವಿಭಾಗದಲ್ಲೂ ಮೂವರು ವಿಜೇತರಿಗೆ ವಿಶೇಷ ಪ್ರಶಸ್ತಿಗಳನ್ನು ನೀಡಲಾಗುವುದು. ಜತೆಗೆ ಭಾಗವಹಿಸುವ ಎಲ್ಲಾ ಸ್ಪರ್ಧಿಗಳಿಗೂ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಗುವುದು. ಆಸಕ್ತರು ಜೂನ್ 3ರೊಳಗೆ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು. ನೋಂದಣಿ ಹಾಗೂ ಮಾಹಿತಿಗೆ ಸಂಪರ್ಕಕ್ಕೆ ಮೊಬೈಲ್ ಸಂಖ್ಯೆ : 98866 13199.

Read More

ಕುಂದಾಪುರ : ಸಮುದಾಯ ಸಾಂಸ್ಕೃತಿಕ ಸಂಘಟನೆ (ರಿ.) ಕುಂದಾಪುರ ಇವರು ಜೆ.ಸಿ.ಐ. ಚಾರಿಟೇಬಲ್ ಟ್ರಸ್ಟ್ ಸಹಕಾರದೊಂದಿಗೆ ಪ್ರಸ್ತುತ ಪಡಿಸುವ ‘ಮೇ ತಿಂಗಳ ಓದು’ ಅವಿಭಜಿತ ಕುಂದಾಪುರ ತಾಲೂಕು ಮಟ್ಟದ ಕವಿಗೋಷ್ಠಿಯು ದಿನಾಂಕ 28-05-2023ರಂದು ಕುಂದಾಪುರದ ಜೆ.ಎಲ್.ಬಿ. ರಸ್ತೆಯಲ್ಲಿರುವ ಜೆ.ಸಿ.ಐ. ಭವನದಲ್ಲಿ ನಡೆಯಲಿದೆ. ವಿಲ್ಸನ್ ಕಟೀಲ್ ಇವರ ಅಧ್ಯಕ್ಷತೆಯಲ್ಲಿ ಹಾಗೂ ರೇಖಾ ಬನ್ನಾಡಿ, ರಾಮಕೃಷ್ಣ ಹೇರ್ಳೆ, ಸುಧಾ ಅಡುಕಳ, ಅಭಿಲಾಷಾ ಹಂದೆ, ಅಬ್ದುಲ್ ರವೂಫ್ ಇವರುಗಳ ವಿಶೇಷ ಉಪಸ್ಥಿತಿಯಲ್ಲಿ ಈ ಕವಿಗೋಷ್ಠಿಯು ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಶಂಕರ ಕೆಂಚನೂರು, ಶಶಿಧರ ಹೆಮ್ಮಾಡಿ, ಉದಯ ಗಾಂವಕರ, ಸಂತೋಷ ಗುಡ್ಡಿಯಂಗಡಿ, ವಿಜಯಶ್ರೀ ಹಾಲಾಡಿ, ಸಂಪೂರ್ಣಾನಂದ ಬಳ್ಳೂರು, ಜಯಲಕ್ಷ್ಮಿ ಸತೀಶ್, ಶರತ್ ಶೆಟ್ಟಿ ವಂಡ್ಸೆ, ಸಚಿನ್ ಅಂಕೋಲ, ವಿಜಯಕುಮಾರ ಕುಂಭಾಶಿ, ಮಂಜುನಾಥ್ ಚಾಂದ್, ರಾಮು ಯು. ಸಿರಿಗೆರೆ, ಉಪ್ಪಿನಕುದ್ರು, ಸುಜಿತ್ ಕಾರ್ಕಳ, ರೇವತಿ ರಾಮ್, ಶ್ರೀಕಲಾ ಅಮರೇಶ ಶೆಟ್ಟಿಗಾರ, ವಿನಯಾ ಕೌಂಜೂರು, ಮಂಜುನಾಥ ಮಧ್ಯಸ್ಥ, ಲೋಲಾಕ್ಷಿ ಮರವಂತೆ, ಗಣೇಶ ಭಟ್, ರಾಘವೇಂದ್ರ ಡಿ. ಆಲೂರು, ದಿಶಾ ಗುಲ್ವಾಡಿ,…

Read More